Tag: ATM Robbery Case

  • ಬೀದರ್ ದರೋಡೆ ಕೇಸ್ – ಗಾಯಗೊಂಡಿದ್ದ ಶಿವಕುಮಾರ್‌ಗೆ ಬಿಜೆಪಿಯಿಂದ 1 ಲಕ್ಷ ಪರಿಹಾರ

    ಬೀದರ್ ದರೋಡೆ ಕೇಸ್ – ಗಾಯಗೊಂಡಿದ್ದ ಶಿವಕುಮಾರ್‌ಗೆ ಬಿಜೆಪಿಯಿಂದ 1 ಲಕ್ಷ ಪರಿಹಾರ

    ಬೀದರ್: ದರೋಡೆಕೋರರ ಗುಂಡೇಟಿನಿಂದ ಗಾಯಗೊಂಡಿದ್ದ ಶಿವಕುಮಾರ್ ಅವರಿಗೆ ಬಿಜೆಪಿ (BJP) ಜಿಲ್ಲಾ ಘಟಕದಿಂದ 1 ಲಕ್ಷ ಪರಿಹಾರ ಹಣ ನೀಡಿದರು.

    ಬಿಜೆಪಿ ಜಿಲ್ಲಾ ಘಟಕ ಶಿವಕುಮಾರ್ ಮನೆಗೆ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ 1 ಲಕ್ಷ ರೂ. ನೆರವು ನೀಡಲಾಯಿತು. ಸರ್ಕಾರದಿಂದ ಇಲ್ಲಿಯವರೆಗೆ 1 ರೂ. ಸಹ ಪರಿಹಾರ ದೊರೆತಿಲ್ಲ, (ಎಟಿಎಂ) ಸಿಎಂಎಸ್ ಕಂಪನಿಯಿಂದ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲಾಗಿದೆ ಎಂದು ಸಂತ್ರಸ್ತ ಕುಟುಂಬದವರು ಅಳಲು ತೋಡಿಕೊಂಡರು.ಇದನ್ನೂ ಓದಿ: ಕುಂಭಮೇಳದಿಂದ ಅಯೋಧ್ಯೆಗೆ ತೆರಳುತ್ತಿದ್ದ ಕೊಪ್ಪಳದ ಯುವಕ ದುರಂತ ಸಾವು

    ಈ ವೇಳೆ ಬಿಜೆಪಿ ಮುಖಂಡರು ಸರ್ಕಾರದಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಸರ್ಕಾರ ಶೀಘ್ರದಲ್ಲಿ ಸಂತ್ರಸ್ತ ಎರಡು ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್, ಮುಖಂಡರಾದ ಬಾಬು ವಾಲಿ, ರಾಜಶೇಖರ ನಾಗಮೂರ್ತಿ, ನಗರ ಅಧ್ಯಕ್ಷ ಶಶಿ ಹೊಸಳ್ಳಿ, ರಾಜಕುಮಾರ ಪಾಟೀಲ್, ವೀರು ದಿಗ್ವಾಲ, ವೀರೇಶ ಸ್ವಾಮಿ ಇದ್ದರು.ಇದನ್ನೂ ಓದಿ: 8 ವರ್ಷದಲ್ಲಿ 46 ಮಂದಿ ಜಲಸಮಾಧಿ: ಸಾವಿನ ಕೂಪವಾದ ವಿಸಿ ನಾಲೆ

  • ಎಟಿಎಂ ಹಣ ದರೋಡೆ ಕೇಸ್ – ಗುಂಡೇಟು ಬಿದ್ದಿದ್ದ ಸಿಬ್ಬಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಎಟಿಎಂ ಹಣ ದರೋಡೆ ಕೇಸ್ – ಗುಂಡೇಟು ಬಿದ್ದಿದ್ದ ಸಿಬ್ಬಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೀದರ್: ನಗರದಲ್ಲಿ (Bidar) ಎಟಿಎಂಗೆ ತಂಬುವ ಹಣವನ್ನು ದೋಚಿದ್ದ (ATM Robbery Case) ದುಷ್ಕರ್ಮಿಗಳ ಗುಂಡೇಟು ತಿಂದಿದ್ದ ಸಿಬ್ಬಂದಿ ಶಿವಕುಮಾರ್ ಗುನ್ನಳ್ಳಿ, ಚಿಕಿತ್ಸೆ ಪಡೆದು ಹೈದ್ರಾಬಾದ್‍ನ ಖಾಸಗಿ ಆಸ್ಪತೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಬೀದರ್ ನಿವಾಸಕ್ಕೆ ಬಂದಿರುವ ಅವರು, ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ವೇಳೆ ನಾನು ಬದುಕಿ ಬಂದಿದ್ದು ಪುನರ್ಜನ್ಮವಾಗಿದೆ. ಅಂದು ದರೋಡೆಕೋರರಿಂದ ಹಣದ ಪೆಟ್ಟಿಗೆ ರಕ್ಷಣೆ ಮಾಡಲು ಹೋಗಿ ನಾನು ಗುಂಡೇಟು ತಿಂದೆ. ನಮ್ಮ ಜೊತೆ ಗನ್ ಮ್ಯಾನ್ ಯಾಕೆ ಬಂದಿರಲಿಲ್ಲ ಎಂಬುದು ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ದರೋಡೆಕೋರರ ವಿರುದ್ಧ ನಾನು ಯಾವುದೇ ಆಯುಧವಿಲ್ಲದೇ ಹೋರಾಡಿದ್ದೆ. ನನ್ನ ಮೇಲೆ ಫೈರಿಂಗ್ ಆದ ತಕ್ಷಣ ಅಲ್ಲೇ ಕುಸಿದು ಬಿದ್ದೆ. ನಮ್ಮ ಕುಟುಂಬಕ್ಕೆ ನಾನೇ ಜೀವನಾಧಾರವಾಗಿದ್ದು, ಸರ್ಕಾರ ಏನಾದರೂ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಸಚಿವ ಖಂಡ್ರೆ ಮನೆಗೆ ಭೇಟಿ ನೀಡಿ ಸರ್ಕಾರಿ ನೌಕರಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಹಣವನ್ನು ನಮ್ಮ ಎಟಿಎಂನ ಸಿಎಂಸಿ ಎಜೆನ್ಸಿ ನೀಡಿದ್ದು, ಸರ್ಕಾರದಿಂದ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.