Tag: atm robbery

  • ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಕೇಸ್ – ಖದೀಮರ ಸುಳಿವು ಪತ್ತೆ

    ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಕೇಸ್ – ಖದೀಮರ ಸುಳಿವು ಪತ್ತೆ

    ಬೀದರ್/ಬೆಂಗಳೂರು: ಹಾಡಹಗಲೇ ಬೀದರ್‌ನಲ್ಲಿ (Bidar) ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮರ ಸುಳಿವು ಕೊನೆಗೂ ಪತ್ತೆಯಾಗಿದೆ.

    ಖದೀಮರನ್ನು ಛತ್ತೀಸ್‌ಗಡ ಮೂಲದ ಮನೀಶ್ ಹಾಗೂ ಮತ್ತೋರ್ವ ಕೃತ್ಯ ಎಸಗಿದ್ದು, ಬಿಹಾರದ ಗ್ಯಾಂಗ್‌ಸ್ಟರ್ ಅಮಿತ್ ಗ್ಯಾಂಗ್‌ನ ಮನೀಶ್ ಹಾಗೂ ಮತ್ತೋರ್ವ ಎಟಿಎಂ ದರೋಡೆ ಮಾಡಿರುವುದು ಎಂದು ಎನ್ನಲಾಗಿದೆ.ಇದನ್ನೂ ಓದಿ: ಮಂಗಳೂರು ಬ್ಯಾಂಕ್‌ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?

    ಬೀದರ್‌ನಲ್ಲಿ ಹಾಡಹಗಲೇ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಹೈವೇಯಲ್ಲಿ ಓಡಾಡಿದರೆ ಸಿಕ್ಕಿಬೀಳುತ್ತೇವೆ ಎನ್ನುವ ಭಯದಲ್ಲಿ ಹಳ್ಳಿಗಳಿಂದ ಹೋಗಿ ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದರು. ಮೊದಲೇ ರೂಟ್‌ಮ್ಯಾಪ್ ಮಾಡಿಕೊಂಡಿದ್ದ ಖದೀಮರು ಬೀದರ್ ನಗರದಿಂದ ತೆಲಂಗಾಣದ ಜಹೀರಾಬಾದ್ ತಾಲೂಕು ಮೂಲಕ ಹೈದರಾಬಾದ್‌ಗೆ ಎಂಟ್ರಿ ಕೊಟ್ಟಿದ್ದರು.

    ಬೀದರ್ ನಗರದಿಂದ ಆಚೆ ಹೋಗುತ್ತಿದ್ದಂತೆ ಹಣವನ್ನು ಟ್ರ್ಯಾಲಿ ಬ್ಯಾಗ್‌ಗೆ ತುಂಬಿಕೊಂಡು ನಂತರ ಅಫ್ಜಲ್‌ಪುರದಲ್ಲಿ ಟ್ರಾವೆಲ್ ಏಜೆನ್ಸಿ ಜೊತೆ ಜಗಳ ಮಾಡಿಕೊಂಡು ಉತ್ತರಭಾರತದ ಕಡೆಗೆ ಹೋಗಲು ಆಟೋ ಹಿಡಿದಿದ್ದಾರೆ. ಈ ಗಲಾಟೆಗೂ ಮುನ್ನ ಅಫ್ಜಲ್‌ಗಂಜ್ ದೋಸೆ ಕಿಂಗ್ ಹೋಟೆಲ್‌ನಲ್ಲಿ ದೋಸೆ ತಿಂದಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬ್ಯಾಗ್ ಜೊತೆಗಿರೋದು ಪತ್ತೆಯಾಗಿದೆ.

    ಈ ಹೋಟೆಲ್‌ನಲ್ಲಿಯೇ ಬಟ್ಟೆ ಬದಲಾಯಿಸಿರುವ ಸಾಧ್ಯತೆಯಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದಾಗ ಜಾಕೆಟ್ ಧರಿಸಿದ್ದವರು ಬಳಿಕ ಬಟ್ಟೆ ಬದಲಿಸಿದ್ದಾರೆ. ಜೊತೆಗೆ ಹೈದ್ರಾಬಾದ್‌ನಲ್ಲಿ ಟ್ರ್ಯಾಲಿ ಬ್ಯಾಗ್ ಎಳೆದೊಯ್ಯುತ್ತಾ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಕಂದರಾಬಾದ್‌ನಿಂದ ಟ್ರೈನ್ ಮೂಲಕ ಉತ್ತರ ಭಾರತಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ.

    ಈ ಕುರಿತು ಅಪರಾಧ ವಿಭಾಗದ ಎಡಿಜಿಪಿ ಹರಿಶೇಖರನ್ ಮಾತನಾಡಿ, ಕರ್ನಾಟಕ, ತೆಲಂಗಾಣ ಸೇರಿದಂತೆ ಮಹಾರಾಷ್ಟ್ರದಲ್ಲೂ ಒಟ್ಟು 8 ತಂಡಗಳು ಶೋಧ ನಡೆಸುತ್ತಿವೆ. ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಬೀದರ್, ಮಂಗಳೂರು ಸರಣಿ ದರೋಡೆ ಕೇಸ್‌ಗಳ ಬಳಿಕ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.ಇದನ್ನೂ ಓದಿ: ಸಿಇಟಿ ಪರೀಕ್ಷೆ ಪಠ್ಯಕ್ರಮ ಪ್ರಕಟಿಸಿದ ಕೆಇಎ

  • ಕರ್ನಾಟಕ ಜಂಗಲ್ ರಾಜ್ಯ ಆಗಿದೆ – ಬೀದರ್ ಗುಂಡಿನ ದಾಳಿಗೆ ಬೊಮ್ಮಾಯಿ ದಿಗ್ಭ್ರಮೆ

    ಕರ್ನಾಟಕ ಜಂಗಲ್ ರಾಜ್ಯ ಆಗಿದೆ – ಬೀದರ್ ಗುಂಡಿನ ದಾಳಿಗೆ ಬೊಮ್ಮಾಯಿ ದಿಗ್ಭ್ರಮೆ

    ಬೆಂಗಳೂರು: ರಾಜ್ಯ ಜಂಗಲ್ ಆಗಿದೆ, ಆಡಳಿತ ನಡೆಸುವವರು ಕುರ್ಚಿಗಾಗಿ ಕಿತ್ತಾಟ ನಡೆಸುವುದರಲ್ಲಿ ನಿರತರಾಗಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೀದರ್ (Bidar) ಘಟನೆಗೆ ಸಂಬಂಧಿಸಿದಂತೆ ಎಕ್ಸ್‌ದಲ್ಲಿ ಪ್ರತಿಕಿಯಿಸಿದ್ದು, ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆಯಾಗುತ್ತಿದೆ. ಪುಟ್ಟ ಮಕ್ಕಳ ಮೇಲೆ ಅತ್ಯಾಚಾರದಂತ ಅಪರಾಧ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದ್ದು, ಅಪರಾಧ ಮಾಡುವವರಿಗೆ ಯಾರದ್ದೂ ಭಯವಿಲ್ಲದಂತಾಗಿದೆ. ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು, ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಬೀದರ್ ದರೋಡೆಯ ಸುತ್ತ ಅನುಮಾನದ ಹುತ್ತ – ಇದು ಇದು ಪ್ರೀ ಪ್ಲಾನ್ ಎಂದ ಮೃತನ ಸಹೋದರಿ

    ಬೊಮ್ಮಾಯಿ ಎಕ್ಸ್‌ದಲ್ಲಿ ಏನಿದೆ?
    ಬೀದರ್‌ನಲ್ಲಿ ಹಾಡ ಹಗಲೇ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಪುಟ್ಟ ಮಕ್ಕಳ ಮೇಲೆ ಅತ್ಯಾಚಾರದಂತ ಅಪರಾಧ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದ್ದು, ಆಡಳಿತ ನಡೆಸುವವರು ಕುರ್ಚಿಗಾಗಿ ಕಿತ್ತಾಟ ನಡೆಸುವುದರಲ್ಲಿ ನಿರತರಾಗಿದ್ದು, ಸರ್ಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಪೊಲಿಸರಿಗೆ ಕ್ರಿಮಿನಲ್ ಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದ್ದು, ಅಪರಾಧ ಮಾಡುವವರಿಗೆ ಯಾರ ಭಯವಿಲ್ಲದಂತಾಗಿದೆ. ಇದರಿಂದ ಕರ್ನಾಟಕ ಜಂಗಲ್ ರಾಜ್ಯ ಆಗಿದೆ.

    ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ.ಇದನ್ನೂ ಓದಿ: ಏ.16, 17ರಂದು ಸಿಇಟಿ ಪರೀಕ್ಷೆ: ಕೆಇಎ

  • ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ – ಬೀದರ್‌ ದರೋಡೆ ಕೇಸ್‌ ಬಗ್ಗೆ ಪರಮೇಶ್ವರ್‌ ಪ್ರತಿಕ್ರಿಯೆ

    ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ – ಬೀದರ್‌ ದರೋಡೆ ಕೇಸ್‌ ಬಗ್ಗೆ ಪರಮೇಶ್ವರ್‌ ಪ್ರತಿಕ್ರಿಯೆ

    – ಎಸ್ಪಿಯಿಂದ ಘಟನಾ ವರದಿ ಕೇಳಿದ ಗೃಹ ಸಚಿವ

    ಬೆಂಗಳೂರು: ಎಟಿಎಂಗೆ ಹಣ ತುಂಬಲು ಹೋಗಬೇಕಾದಾಗ ಕೆಲವು ಮಾರ್ಗಸೂಚಿಗಳನ್ನ ಕೊಟ್ಟಿರುತ್ತೇವೆ. ಆ ಮಾರ್ಗಸೂಚಿಗಳನ್ನ ಪಾಲನೆ ಮಾಡದೇ ಇದ್ದಾಗ ಇಂತಹ ಘಟನೆಗಳು ಆಗುತ್ತವೆ. ಅಲ್ಲದೇ ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ತಿಳಿಸಿದ್ದಾರೆ.

    ಬೀದರ್‌ನಲ್ಲಿ (Bidar) ಹಾಡಹಗಲೇ ರಾಬರಿ & ಮರ್ಡರ್ ಪ್ರಕರಣದ (ATM Robbery And Murder Case) ಕುರಿತು ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಪ್ರಾಥಮಿಕ ವರದಿಗಳ ಪ್ರಕಾರ 90 ಲಕ್ಷ ರೂ. ಹೋಗಿದೆ ಅಂತ ತಿಳಿದುಬಂದಿದೆ. ಎಟಿಎಂಗೆ ಹಣ ಹಾಕಬೇಕಾದಾಗ ಕೆಲವು ಮಾರ್ಗಸೂಚಿ ಕೊಟ್ಟಿರುತ್ತೇವೆ. ಆ ಮಾರ್ಗಸೂಚಿ ಪಾಲನೆ ಆಗದೇ ಇದ್ದಾಗ ಇಂತಹ ಘಟನೆ ಆಗುತ್ತೆ. ಇಂತಹ ಘಟನೆ ಆದಾಗ ಕೆಟ್ಟ ಸಂದೇಶ ಹೋಗುತ್ತದೆ ಎಂದಿದ್ದಾರೆ.

    ಅಲ್ಲದೇ ಏಜೆನ್ಸಿ ಬಗ್ಗೆ ಪರಿಶೀಲನೆ ಮಾಡ್ತೀವಿ. ಕೇವಲ ಹಣಕಾಸು ವಿಚಾರನಾ? ಅಥವಾ ಬೇರೆ ಏನಾದ್ರು ಇದೆಯಾ ಅಂತ ತನಿಖೆ ಮಾಡ್ತೀವಿ. ಎಸ್‌ಪಿಗೆ ತನಿಖೆ ಮಾಡಲು ಸೂಚನೆ ಕೊಟ್ಟಿದ್ದೇನೆ, ಜೊತೆಗೆ ಘಟನಾ ವರದಿ ಕೇಳಿದ್ದೇನೆ. ಆರೋಪಿಗಳ ಪತ್ತೆಗೆ ಇಲಾಖೆ ಕ್ರಮವಹಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಫಿಲ್ಮಿ ಸ್ಟೈಲ್‌ ಎಟಿಎಂ ಹಣ ದರೋಡೆ – ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದ ಸಿಬ್ಬಂದಿ

    ಏನಿದು ಕೇಸ್‌?
    ಹಾಡಗಲೇ ಬೀದರ್‌ನಲ್ಲಿ (Bidar) ಸಿನಿಮೀಯ ದರೋಡೆ ನಡೆದಿದ್ದು ಜನತೆ ಬೆಚ್ಚಿ ಬಿದ್ದಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ ಹಣದೊಂದಿಗೆ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ. ಬೆಳಗ್ಗೆ 10:55 ರಿಂದ 11 ಗಂಟೆಯ ಅವಧಿಯ ಒಳಗಡೆ ಈ ಕೃತ್ಯ ನಡೆದಿದೆ. ಸಿಎಂಎಸ್‌ ಸಂಸ್ಥೆ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಾಗ ದರೋಡೆ ನಡೆದಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆಯೇ ಗುಂಡು – 93 ಲಕ್ಷದೊಂದಿಗೆ ದುಷ್ಕರ್ಮಿಗಳು ಪರಾರಿ

    ಈ ದರೋಡೆ ಹಿಂದೆ ಭಾರೀ ಅನುಮಾನ ವ್ಯಕ್ತವಾಗಿದೆ. ಯಾವುದೇ ಎಟಿಎಂನಲ್ಲಿ (ATM) ಹಣ ತುಂಬುವಾಗ ಗನ್‌ಮ್ಯಾನ್‌ ಕಡ್ಡಾಯವಾಗಿ ಇರಲೇಬೇಕು. ಆದರೆ ಇಲ್ಲಿ ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದಾರೆ. ಪಬ್ಲಿಕ್‌ ಟಿವಿ ಜೊತೆ ಚಾಲಕ ರಾಜಶೇಖರ್‌ ಮಾತನಾಡಿ, ನಾವು ಮೂವರು ಸ್ಥಳಕ್ಕೆ ಬಂದಿದ್ದೆವು. ಬಾಕ್ಸ್‌ ಒಳಗಡೆ ಎಷ್ಟು ಹಣ ಇತ್ತು ಎನ್ನುವುದು ಗೊತ್ತಿಲ್ಲ. ಒಂದೇ ಬಾಕ್ಸ್‌ ಇತ್ತು. ನಾವು ಪ್ರತಿ ದಿನ ಇಲ್ಲಿಯೇ ಎಲ್ಲರೂ ಸೇರಿ ಹಣವನ್ನು ಎಟಿಎಂಗೆ ತುಂಬುತ್ತೇವೆ ಎಂದು ತಿಳಿಸಿದರು.

    ಈ ವೇಳೆ ಗನ್‌ಮ್ಯಾನ್‌ ಎಲ್ಲಿದ್ದರು ಎಂಬ ಪ್ರಶ್ನೆಗೆ, ಈ ಕೃತ್ಯ ನಡೆಯುವ ಗನ್‌ಮ್ಯಾನ್‌ ಇರಲಿಲ್ಲ. ಗನ್‌ಮ್ಯಾನ್‌ 1 ಗಂಟೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದರು. ಖಾರದ ಪುಡಿ ಎರಚಿದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು. ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಗುಂಡಿನ ದಾಳಿಗೆ ಬಲಿಯಾದ ಗಿರಿ ವೆಂಕಟೇಶ ಮೃತದೇಹವನ್ನು ಬ್ರಿಮ್ಸ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಸ್ಥಳಕ್ಕೆ ಎಸ್ಪಿ ಪ್ರದೀಪ್‌ ಗುಂಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ಮಗಳನ್ನು ಒಳ್ಳೆ ಶಾಲೆಗೆ ಸೇರಿಸಬೇಕೆಂದು ಎಟಿಎಂ ದರೋಡೆಗೆ ಯತ್ನಿಸಿದ ಕಾರ್ಮಿಕ

    ಮಗಳನ್ನು ಒಳ್ಳೆ ಶಾಲೆಗೆ ಸೇರಿಸಬೇಕೆಂದು ಎಟಿಎಂ ದರೋಡೆಗೆ ಯತ್ನಿಸಿದ ಕಾರ್ಮಿಕ

    ಚೆನ್ನೈ: ನಗರದ ನೈರ್ಮಲ್ಯ ಕಾರ್ಮಿಕನೊಬ್ಬ ತನ್ನ ಐದು ವರ್ಷದ ಮಗಳನ್ನು ಒಳ್ಳೆಯ ಶಾಲೆಗೆ ಸೇರಿಸುವ ಆಸೆಯಿಂದ ಎಟಿಎಂ ದರೋಡೆಗೆ ಮುಂದಾಗಿದ್ದ ಘಟನೆ ಚೆನ್ನೈನ ಚೆಟ್‍ಪೇಟ್‍ನಲ್ಲಿ ನಡೆದಿದೆ.

    ಆರೋಪಿ ಅಣೈ ಸತ್ಯನಗರದ ನಿವಾಸಿ ಪಿ.ರಂಜಿತ್ ಕುಮಾರ್(33) ಮಗಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಆಸೆ ಹೊಂದಿದ್ದ. ತನ್ನ ಬಳಿ ಹಣವಿಲ್ಲದ ಕಾರಣ ಎಟಿಎಂಗೆ ಕನ್ನ ಹಾಕಲು ಯತ್ನಿಸಿದ್ದ. ಎಟಿಎಂಗೆ ಕನ್ನ ಹಾಕಿರುವ ವಿಚಾರ ತಿಳಿದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು

    POLICE JEEP

    ಆರೋಪಿ ದರೋಡೆ ನಡೆಸಲು ಯತ್ನಿಸಿದ ಕೆಲವೇ ಹೊತ್ತಿನಲ್ಲಿ ಅಧಿಕಾರಿಗಳು ಅವನನ್ನು ಬಂಧಿಸಿದ್ದಾರೆ. ಕಳೆದ 3 ವರ್ಷಗಳಿಂದ ಕಸ ಸಂಗ್ರಹಿಸುವ ವಾಹನ ಚಲಾಯಿಸುತ್ತಿದ್ದ ರಂಜಿತ್‍ಗೆ 5 ವರ್ಷದ ಮಗಳು ಹಾಗೂ 3 ವರ್ಷದ ಮಗನಿದ್ದಾನೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಗಳನ್ನು ಖಾಸಗಿ ಶಾಲೆಗೆ ಕಳುಹಿಸುವ ಮಹದಾಸೆಯಲ್ಲಿ ದರೋಡೆಗೆ ಪ್ರಯತ್ನ ಪಟ್ಟಿರುವುದಾಗಿ ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪ್ರತಾಪ್ ಸಿಂಹ, ರಾಮದಾಸ್ ಕಿತ್ತಾಟ- ಕಣ್ಣೀರಾಕಿದ ಮೇಯರ್

  • ವಿಡಿಯೋ: ಗುಂಡೇಟು ಬಿದ್ದರೂ ಎಟಿಎಂ ದರೋಡೆ ತಡೆದ ಸೂಪರ್ ಹೀರೋ ಸೆಕ್ಯೂರಿಟಿ ಗಾರ್ಡ್

    ವಿಡಿಯೋ: ಗುಂಡೇಟು ಬಿದ್ದರೂ ಎಟಿಎಂ ದರೋಡೆ ತಡೆದ ಸೂಪರ್ ಹೀರೋ ಸೆಕ್ಯೂರಿಟಿ ಗಾರ್ಡ್

    ನವದೆಹಲಿ: ಎಲ್ಲಾ ಹೀರೋಗಳು ಸಿನಿಮಾಗಳಲ್ಲಿ ನಟಿಸಲ್ಲ. ಕೆಲವು ನಿಜಜೀವನದ ಹೀರೋಗಳೂ ಇರ್ತಾರೆ. ಅದಕ್ಕೆ ಉದಾಹರಣೆ ಈ ಘಟನೆ. ದುಷ್ಕರ್ಮಿಗಳು ಶೂಟ್ ಮಾಡಿದ್ರೂ ಕೂಡ ಎಟಿಎಂ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ದರೋಡೆ ಯತ್ನವನ್ನು ವಿಫಲಗೊಳಿಸಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಸುದ್ದಿ ಸಂಸ್ಥೆ ಇದರ ಸಿಸಿಟಿವಿ ದೃಶ್ಯಾವಳಿಯನ್ನ ಹಂಚಿಕೊಂಡಿದೆ.

    ದೆಹಲಿಯ ಮಾಜ್ರಾ ದಾಬಸ್‍ನ ಎಸ್‍ಬಿಐ ಎಟಿಎಂವೊಂದರ ಬಳಿ ಬುಧವಾರದಂದು ಈ ಘಟನೆ ನಡೆದಿದೆ. ನೋಡೋಕೆ ವಯಸ್ಸಾದವರಂತೆ ಕಾಣೋ ಸೆಕ್ಯೂರಿಟಿ ಗಾರ್ಡ್ ಪ್ರಾಣದ ಹಂಗು ತೊರೆದು ದರೋಡೆಕೋರರನ್ನ ತಡೆದಿದ್ದಾರೆ.

    ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಎಟಿಎಂ ದರೋಡೆಗೆ ಯತ್ನಿಸಿದ್ದರು. ಇಬ್ಬರ ಬಳಿಯೂ ಶಸ್ತ್ರಾಸ್ತ್ರಗಳಿದ್ದವು. ಎಟಿಎಂ ಬಳಿ ಬೈಕ್ ನಿಲ್ಲಿಸಿ ಒಬ್ಬ ಕೆಳಗಿಳಿದು ಮೊದಲು ಸೆಕ್ಯೂರಿಟಿ ಗಾರ್ಡ್ ಕಾಲಿಗೆ ಗುಂಡು ಹಾರಿಸೋದನ್ನ ವಿಡಿಯೋದಲ್ಲಿ ಕಾಣಬಹುದು. ಆದ್ರೆ ಸೆಕ್ಯೂರಿಟಿ ಗಾರ್ಡ್ ಆತನನ್ನು ಅಡ್ಡಗಟ್ಟಿದ್ದಾರೆ. ದುಷ್ಕರ್ಮಿ ಎಟಿಎಂ ಒಳಗೆ ನುಗ್ಗದಂತೆ ತಡೆದಿದ್ದಾರೆ.

    ಆಗ ಬೈಕ್ ಬಳಿ ಇದ್ದ ಮತ್ತೊಬ್ಬ ಎಟಿಎಂ ಒಳಗೆ ಹೋಗಲು ಪ್ರಯತ್ನಿಸಿದ್ದಾನೆ. ಆಗ ಎಟಿಎಂ ಒಳಗೆ ಗ್ರಾಹಕರೊಬ್ಬರು ಇದ್ದಿದ್ದನ್ನು ನೋಡಿ ಹಿಂದೆ ಸರಿದಿದ್ದಾನೆ. ಇತ್ತ ಸೆಕ್ಯೂರಿಟಿ ಗಾರ್ಡ್ ಏನೂ ತೊಂದರೆ ಮಾಡದಂತೆ ದುಷ್ಕರ್ಮಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಕೊನೆಗೆ ಆತ ಗಾರ್ಡ್ ಬಳಿ ಇದ್ದ ಗನ್ ಕಸಿದುಕೊಂಡಿದ್ದು, ಇಬ್ಬರೂ ಬೈಕಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಕೊನೆಗೆ ಸೆಕ್ಯೂರಿಟಿ ಗಾರ್ಡ್ ಎಟಿಎಂ ಬಾಗಿಲ ಬಳಿ ಬಂದು ಗುಂಡೇಟಿನ ನೋವಿನಿಂದ ಕುಸಿದು ಬೀಳೋದನ್ನ ಕಾಣಬಹುದು.

    ಸೆಕ್ಯೂರಿಟಿ ಗಾರ್ಡ್ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 394, 397 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25, 27 ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ವಿಶೇಷ ತಂಡ ರಚಿಸಿದ್ದಾರೆ ಎಂದು ವರದಿಯಾಗಿದೆ. ಸೆಕ್ಯೂರಿಟಿ ಗಾರ್ಡ್ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.