Tag: atm

  • ಎಟಿಎಂ ಕಳ್ಳತನ ಮಾಡುವಾಗಲೇ ಎಎಸ್ಐಯಿಂದ ಕಳ್ಳ ಅರೆಸ್ಟ್‌ – ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

    ಎಟಿಎಂ ಕಳ್ಳತನ ಮಾಡುವಾಗಲೇ ಎಎಸ್ಐಯಿಂದ ಕಳ್ಳ ಅರೆಸ್ಟ್‌ – ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

    ಬಳ್ಳಾರಿ: ಮಧ್ಯರಾತ್ರಿ ಎಟಿಎಂ (ATM) ದರೋಡೆ ಮಾಡುತ್ತಿದ್ದ ಖದೀಮನನ್ನ ಬಳ್ಳಾರಿಯ (Balalri) ಗಸ್ತು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಹೆಡೆಮುರಿ ಕಟ್ಟಿದ್ದಾರೆ.

    ಕಳ್ಳನನ್ನು ಹಿಡಿದ ಪೊಲೀಸ್ ಅಧಿಕಾರಿಯ ಸಾಹಸದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನಿಸುತ್ತದೆ. ಎಎಸ್ಐ ಮಲ್ಲಿಕಾರ್ಜುನ ಖದೀಮನನ್ನ ಬಂಧಿಸಿದ್ದಾರೆ. ಆಂಧ್ರದ ಅನಂತಪುರದ ವೆಂಕಟೇಶ್ ಬಂಧಿತ ಆರೋಪಿ.

    ಕಳ್ಳನನ್ನ ಹಿಡಿಯುವಾಗ ಸ್ವಲ್ಪ ಯಾಮಾರಿದರೂ ಎಎಸ್ಐ ಮೇಲೆ ದರೋಡೆಕೋರ ಭಯಾನಕ ದಾಳಿ ಮಾಡುತ್ತಿದ್ದ. ಹೀಗಾಗಿ ಸರ್ಕಸ್ ಮಾಡಿ ಖದೀಮನನ್ನು ಹೆಡೆಮುರಿ ಕಟ್ಟುವಲ್ಲಿ ಎಎಸ್ಐ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಪತ್ರ

    ಖದೀಮ ಎಟಿಎಂ ಬಾಕ್ಸ್ ಹೊತ್ತೊಯ್ಯುಗಾಲೇ, ಖಚಿತ ಮಾಹಿತಿ ಮೇರೆಗೆ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ. ಬೀಟ್ ನಲ್ಲಿದ್ದಾಗ ಎಎಸ್ಐ ಮಲ್ಲಿಕಾರ್ಜುನ ದರೋಡೆಕೋರನನ್ನ ಹಿಡಿದಿದ್ದರು.

    ಆರೋಪಿ ಎಎಸ್ಐ ಮಲ್ಲಿಕಾರ್ಜುನ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಕೂಡಲೇ ಮತ್ತಷ್ಟು ಬೀಟ್ ಸಿಬ್ಬಂದಿ ಕರೆಯಿಸಿಕೊಂಡಿದ್ದಾರೆ. ಆಗ ಮತ್ತೋರ್ವ ಕಾನ್ಸ್‌ಟೇಬಲ್ ನಿಂಗಪ್ಪ ಸಹಾಯಕ್ಕೆ ಧಾವಿಸಿದರು.

    ಬಳ್ಳಾರಿಯ ಕಾಳಮ್ಮ ಸರ್ಕಲ್ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನ ಸೆರೆಹಿಡಿದ ಪೊಲೀಸರ ಕಾರ್ಯಕ್ಕೆ ಮೆಚ್ಚಿ ಎಸ್ಪಿ ಡಾ ಶೋಭಾರಣಿ ಸನ್ಮಾನಿಸಿ, ಅಭಿನಂದಿಸಿದ್ದಾರೆ.

  • ಕೋಲಾರದಲ್ಲಿ ಎಟಿಎಂ ದರೋಡೆ – 27 ಲಕ್ಷ ದೋಚಿದ ಕಳ್ಳರು

    ಕೋಲಾರದಲ್ಲಿ ಎಟಿಎಂ ದರೋಡೆ – 27 ಲಕ್ಷ ದೋಚಿದ ಕಳ್ಳರು

    ಕೋಲಾರ: ಇಲ್ಲಿನ (Kolar) ಸಹಕಾರ ನಗರದ ಎಸ್‍ಬಿಐ (SBI) ಬ್ಯಾಂಕ್‍ನ ಎಟಿಎಂನಲ್ಲಿದ್ದ (ATM) ಸುಮಾರು 27 ಲಕ್ಷ ರೂ. ಹಣವನ್ನು (Money) ಕಳ್ಳರು ದೋಚಿದ್ದಾರೆ.

    ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಯ ಸಮೀಪ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಸುಮಾರು 27 ಲಕ್ಷ ರೂ. ಹಣ ಇತ್ತು. ಕಳ್ಳರು ಎಲ್ಲಾ ಹಣವನ್ನು ದೋಚಿದ್ದಾರೆ. ಇದನ್ನೂ ಓದಿ: ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

    ಸ್ಥಳಕ್ಕೆ ಕೋಲಾರ ಎಸ್‍ಪಿ ನಿಖಿಲ್ ಸೇರಿದಂತೆ ಬೆರಳಚ್ವು ತಜ್ಞರು, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಇಂದ್ರಯಾಣಿ ನದಿ ಸೇತುವೆ ಕುಸಿತ – ಕರ್ನಾಟಕದ ಟೆಕ್ಕಿ ಸಾವು

  • 13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

    13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

    ಬಳ್ಳಾರಿ: ಎರಡು ಕೊಲೆ ಹಾಗೂ 13 ಎಟಿಎಂ (ATM) ಕಳ್ಳತನ ಸೇರಿದಂತೆ ಸುಮಾರು 30 ಪ್ರಕರಣಗಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನಿಗೆ ಸಿರುಗುಪ್ಪ ಪೊಲೀಸರು (Police) ಗುಂಡೇಟು ನೀಡಿದ್ದಾರೆ.

    ಆರೋಪಿ ಅಮರೇಶ್ ಗುಂಡೇಟು ತಿಂದ ಆರೋಪಿಯಾಗಿದ್ದಾನೆ. ಆರೋಪಿಯನ್ನು ಪ್ರಕರಣವೊಂದರ ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಸಿರುಗುಪ್ಪ ಸಿಪಿಐ ಹನುಮಂತಪ್ಪ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆರೋಪಿ ಇದನ್ನು ಲೆಕ್ಕಿಸದೇ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಇದನ್ನೂ ಓದಿ: ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ಆರೋಪಿ ಅಮರೇಶ್ ಕರ್ನಾಟಕ ಹಾಗೂ ಆಂದ್ರದ ಎರಡೂ ರಾಜ್ಯಗಳಲ್ಲಿ ಕಳ್ಳತನ ಮಾಡುವಾಗ ಕೊಲೆ ಮಾಡಿದ್ದ. ಈತನ ಮೇಲೆ ಎರಡು ಕೊಲೆ, 6 ಡಕಾಯಿತಿ, 13 ಎಟಿಎಂ ಕಳ್ಳತನದಲ್ಲಿ ಭಾಗಿಯಾದ ಆರೋಪಗಳಿವೆ.

    ಘಟನೆಯಲ್ಲಿ ಪೇದೆ ವಿರೂಪಾಕ್ಷ ಗೌಡ ಹಾಗೂ ಮಾರುತಿಯವರಿಗೆ ಗಾಯಗಳಾಗಿದ್ದು, ಅವರಿಗೆ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸ್ಲೀಪರ್‌ ಬಸ್‌ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ – ಐವರು ಸಜೀವ ದಹನ

  • PublicTV Explainer: ರೈಲಿಗೂ ಬಂತು ATM; ಇನ್ಮುಂದೆ ರೈಲಲ್ಲೇ ಹಣ ಡ್ರಾ ಸಾಧ್ಯ – ಕರ್ನಾಟಕಕ್ಕೂ ಬರುತ್ತಾ?

    PublicTV Explainer: ರೈಲಿಗೂ ಬಂತು ATM; ಇನ್ಮುಂದೆ ರೈಲಲ್ಲೇ ಹಣ ಡ್ರಾ ಸಾಧ್ಯ – ಕರ್ನಾಟಕಕ್ಕೂ ಬರುತ್ತಾ?

    ಗತ್ತಿನಲ್ಲೇ ಅತಿ ದೊಡ್ಡ ರೈಲು ಸಂಪರ್ಕ ಜಾಲವನ್ನು ಹೊಂದಿರುವ ವ್ಯವಸ್ಥೆಯೆಂದರೆ ಅದು ಭಾರತೀಯ ರೈಲ್ವೆ (Indian Railway). ಈ ವಲಯ ಹಲವು ಸುಧಾರಿತ ಕ್ರಮಗಳೊಂದಿಗೆ ಪ್ರಯಾಣಿಕ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಮನುಷ್ಯ ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕುಂತಲ್ಲಿ ಎಲ್ಲಾ ಸೌಕರ್ಯಗಳು ಕೈಗೆ ಸಿಗುವಂತಿದ್ದರೆ ಆ ಕಡೆ ಹೆಚ್ಚು ಒಲವು ತೋರುವುದುಂಟು. ಇದನ್ನರಿತು ರೈಲ್ವೆಯು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ರೈಲಿನಲ್ಲೇ ಎಟಿಎಂ (ATM on Train) ಸ್ಥಾಪಿಸಿ ಜನರ ಕೈಗೆ ಸುಲಭವಾಗಿ ಹಣ ಸಿಗುವಂತೆ ಮಾಡಿದೆ. ರೈಲ್ವೆಯ ಹೊಸ ಕ್ರಮದಿಂದ ಪ್ರಯಾಣಿಕರು ಖುಷಿಪಟ್ಟಿದ್ದಾರೆ.

    ಭಾರತಕ್ಕೆ ರೈಲು ಬಂದಿದ್ಯಾವಾಗ?
    1853 ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ರೈಲು ವ್ಯವಸ್ಥೆ ಬಂದಿತು. ಮುಂಬೈ (ಆಗ ಬಾಂಬೆ) ಮತ್ತು ಥಾಣೆ ನಡುವೆ ಮೊದಲ ಪ್ರಯಾಣಿಕ ರೈಲು ಓಡಾಟ ಆರಂಭಿಸಿತು. ಆರಂಭದಲ್ಲಿ, ಪ್ರಮುಖ ಬಂದರು ನಗರಗಳನ್ನು ಸಂಪರ್ಕಿಸುವುದು, ಸರಕುಗಳ ವ್ಯಾಪಾರ ಮತ್ತು ಸಾಗಣೆಯನ್ನು ಸುಗಮಗೊಳಿಸುವತ್ತ ಗಮನ ಹರಿಸಲಾಯಿತು. ವರ್ಷಗಳು ಕಳೆದಂತೆ ಈ ಜಾಲವು ವಿಸ್ತರಿಸಿತು. ವಿವಿಧ ಪ್ರದೇಶಗಳನ್ನು ಸಂಪರ್ಕಿಸಲು ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!

    ದೇಶದಲ್ಲಿ ಎಷ್ಟು ರೈಲುಗಳಿವೆ?
    ಭಾರತದಲ್ಲಿ 7,349 ನಿಲ್ದಾಣಗಳು, 13,169 ಪ್ಯಾಸೆಂಜರ್ ರೈಲುಗಳು, 8,479 ಸರಕು ರೈಲುಗಳಿವೆ. 2.3 ಕೋಟಿ ಪ್ರಯಾಣಿಕರಿಗೆ ಮತ್ತು 7,349 ನಿಲ್ದಾಣಗಳಿಂದ ಪ್ರತಿದಿನ 30 ಲಕ್ಷ ಟನ್ ಸರಕು ಸಾಗಣೆಗೆ ಸೇವೆ ಸಲ್ಲಿಸುತ್ತಿವೆ. ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ರಾಜ್ಯದಲ್ಲಿ ಪಟ್ಟಿಯಲ್ಲಿ ಸೇರಿಸದ ಕೆಲವು ನಿಲ್ದಾಣಗಳಿವೆ. ಇದರಲ್ಲಿ ಸಣ್ಣ ನಿಲ್ದಾಣಗಳು ಮತ್ತು ನಿರ್ದಿಷ್ಟ ರೈಲು ಮಾರ್ಗಗಳಲ್ಲಿರುವ ನಿಲ್ದಾಣಗಳು ಸೇರಿರಬಹುದು. ಸಾಮಾನ್ಯ ನಿಲ್ದಾಣಗಳು ಮತ್ತು ಸಣ್ಣ ನಿಲ್ದಾಣಗಳು ಸೇರಿದಂತೆ ಒಟ್ಟು ನಿಲ್ದಾಣಗಳ ಸಂಖ್ಯೆ ಸುಮಾರು 262 ಎಂದು ಅಂದಾಜಿಸಲಾಗಿದೆ.

    ದೇಶದಲ್ಲೇ ಮೊದಲು
    ದೇಶದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು ರೈಲಿನೊಳಗೆ ಎಟಿಎಂ ಯಂತ್ರವನ್ನು ಸ್ಥಾಪಿಸಿದೆ. ಇನ್ಮುಂದೆ ರೈಲಿನಲ್ಲೂ ಎಟಿಎಂ ಮೂಲಕ ಹಣ ಪಡೆಯಬಹುದು. ಹೌದು, ಮುಂಬೈ-ಮನಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಅಳವಡಿಸಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ತನ್ನ 172ನೇ ವರ್ಷಾಚರಣೆಯ ಪ್ರಯುಕ್ತ ಈ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಗಮಗೊಳಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಕೇಂದ್ರ ರೈಲ್ವೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೃಜನಶೀಲ ಕಾರ್ಯಕ್ಕೆ ಕೈಜೋಡಿಸಿವೆ. ಸಾರಿಗೆಯೊಂದಿಗೆ ಆರ್ಥಿಕ ಪ್ರವೇಶವನ್ನು ಬೆಸೆಯುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್‌ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು
    ಪಂಚವಟಿ ಎಕ್ಸ್‌ಪ್ರೆಸ್‌ ಮಹಾರಾಷ್ಟ್ರದ ಮನಮಾಡ್-ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸಂಚರಿಸುವ ದೈನಂದಿನ ಅಂತರನಗರ ಸೂಪರ್ ಫಾಸ್ಟ್ ರೈಲಾಗಿದೆ. ಬಹಳಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು ಎಂದು ಹೆಸರುವಾಸಿಯಾಗಿದೆ. ಹೀಗಾಗಿ, ಪ್ರಾಯೋಗಿಕವಾಗಿ ಈ ರೈಲಿನ ಒಂದು ಬೋಗಿಯಲ್ಲಿ ಎಟಿಎಂ ಅಳವಡಿಸಲಾಗಿದೆ. ರೈಲಿನಲ್ಲೂ ಪ್ರಯಾಣಿರಿಗೆ ಸುಲಭವಾಗಿ ಹಣಕಾಸು ಸೇವೆ ಒದಗಿಸಲು ಇದು ಸಹಕಾರಿಯಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    ರೈಲಿನ ಎಸಿ ಕೋಚ್‌ನಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ನಿಲ್ದಾಣಗಳು, ನಗರಗಳಲ್ಲಿನ ಇತರೆ ಎಟಿಎಂಗಳಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಹಣ ಡ್ರಾ, ಚೆಕ್ ಬುಕ್ ಆರ್ಡರ್, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಬಹುದು. ನಗದು ಹಿಂಪಡೆಯಲು ಪ್ರಯಾಣಿಕರು ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಬಹುದು. ಈ ಎಟಿಎಂ ಅನ್ನು ಬೋಗಿಯ ಹಿಂಭಾಗದಲ್ಲಿರುವ ಒಂದು ಕ್ಯೂಬಿಕಲ್‌ನಲ್ಲಿ ಇರಿಸಲಾಗಿದೆ. ಈ ಪ್ರದೇಶದಲ್ಲಿ ಹಿಂದೆ ತಾತ್ಕಾಲಿಕ ಪ್ಯಾಂಟ್ರಿಯಾಗಿ ಕಾರ್ಯನಿರ್ವಹಿಸಲಾಗುತ್ತಿತ್ತು. ಭದ್ರತೆ ಕಾಪಾಡಲು ಮತ್ತು ಯಾವುದೇ ಅವಘಡಗಳನ್ನು ತಪ್ಪಿಸಲು ಆ ಜಾಗವನ್ನು ಶಟರ್‌ನಿಂದ ಲಾಕ್ ಮಾಡಲಾಗಿದೆ. 24*7 ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಎಕ್ಸ್‌ಪ್ರೆಸ್‌ನ ಎಲ್ಲಾ 22 ಕೋಚ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ, ಎಲ್ಲಾ ಪ್ರಯಾಣಿಕರು ಇದನ್ನು ಬಳಸಬಹುದು.

    ಪ್ರಾಯೋಗಿಕ ಅವಧಿಯಲ್ಲಿ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಾಂತ್ರಿಕ ತೊಂದರೆಗಳ ಸಂದರ್ಭದಲ್ಲಿ ನೆರವು ನೀಡಲು ಎಸ್‌ಬಿಐ ಪ್ರತಿನಿಧಿ ಸಹ ಮಂಡಳಿಯಲ್ಲಿರುತ್ತಾರೆ. ರೈಲಿನ ವಿದ್ಯುತ್ ವ್ಯವಸ್ಥೆಗಳನ್ನು ಯಂತ್ರಕ್ಕೆ ವಿದ್ಯುತ್ ಪೂರೈಸಲು ಹೊಂದಿಸಲಾಗಿದೆ. ಯಾವುದೇ ಅಲಭ್ಯತೆಯನ್ನು ತಡೆಗಟ್ಟಲು ಬ್ಯಾಕ್‌ಅಪ್ ಸ್ಥಳದಲ್ಲಿದೆ. ಇದನ್ನೂ ಓದಿ: PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ
    ಈ ಉಪಕ್ರಮವು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ವಿಶಾಲ ಗುರಿಗಳಿಗೆ ಅನುಗುಣವಾಗಿದೆ. ಇದು ವಿಶ್ವಾದ್ಯಂತ ಡಿಜಿಟಲ್ ಬ್ಯಾಂಕಿಂಗ್ ಪ್ರವೇಶ ಮತ್ತು ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ಎಟಿಎಂಗಳಿಲ್ಲದ ಸ್ಥಳಗಳಿಗೆ ಮತ್ತು ಸೀಮಿತ ಹಣಕಾಸು ಸೇವೆಗಳಿರುವ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಸಹಕಾರಿಯಾಗಿದೆ.

    ಆನ್‌ಬೋರ್ಡ್ ಎಟಿಎಂ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವಾಗ, ನಗದು ಅಗತ್ಯವಿರುವಾಗ, ಆಗಾಗ್ಗೆ ಪ್ರಯಾಣಿಕರಿಗೆ ಅನುಕೂಲಕರವಾಗಿ ಸಹಾಯ ಮಾಡುತ್ತದೆ. ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳ ಪರಿಚಯವಿಲ್ಲದ ಹಿರಿಯ ವ್ಯಕ್ತಿಗಳು ಮತ್ತು ಪ್ರಯಾಣಿಕರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    ಮುಂದೇನು?
    ಈ ಪ್ರಯೋಗವು ಯಶಸ್ವಿಯಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಯಂತ್ರವನ್ನು ಸ್ಥಾಪಿಸಲಾಗುವುದು. ಮುಂದೆ ರಾಜಧಾನಿ, ದುರಂತೋ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ದೀರ್ಘ ಪ್ರಯಾಣ ಮತ್ತು ಪ್ರೀಮಿಯಂ ರೈಲುಗಳಲ್ಲಿ ಹಣಕಾಸು ಸೇವೆಗಳನ್ನು ಸಂಯೋಜಿಸುವ ಬಗ್ಗೆ ಭಾರತೀಯ ರೈಲ್ವೇ ಯೋಚಿಸಿದೆ. ರೈಲು ಪ್ರಯಾಣವನ್ನು ಪ್ರಯಾಣಿಕರ ಸ್ನೇಹಿಯಾಗಿ ಮಾಡಲು ಕ್ರಮ ವಹಿಸಲಿದೆ. ಇಂತಹ ಯೋಜನೆಗಳು ಡಿಜಿಟಲ್ ಬ್ಯಾಂಕಿಂಗ್ ಸಲಹೆ ಸೇವೆಗಳು ಮತ್ತು ಸ್ಮಾರ್ಟ್ ಟಿಕೆಟಿಂಗ್ ಕಿಯೋಸ್ಕ್‌ಗಳನ್ನು ಸಹ ಅಳವಡಿಸಿಕೊಳ್ಳಬಹುದು.

  • ಇನ್ಮುಂದೆ ಕೇವಲ 3 ದಿನಗಳಲ್ಲಿ ಪಿಎಫ್‌ ಹಣ ನಿಮ್ಮ ಖಾತೆಗೆ – ಎಟಿಎಂ ಮೂಲಕ ಪಿಎಫ್‌ ವಿತ್‌ಡ್ರಾ ಹೇಗೆ?

    ಇನ್ಮುಂದೆ ಕೇವಲ 3 ದಿನಗಳಲ್ಲಿ ಪಿಎಫ್‌ ಹಣ ನಿಮ್ಮ ಖಾತೆಗೆ – ಎಟಿಎಂ ಮೂಲಕ ಪಿಎಫ್‌ ವಿತ್‌ಡ್ರಾ ಹೇಗೆ?

    ರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿನ ಉದ್ಯೋಗಿಗಳಿಗೆ ಮಹತ್ವದ ಉಳಿತಾಯ ಯೋಜನೆಯಲ್ಲೊಂದಾದ ನೌಕರರ ಭವಿಷ್ಯ ನಿಧಿ ಯೋಜನೆಯಲ್ಲಿ, ಇಲಾಖೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೊದಲು ಪಿಎಫ್ ಹಣ ಡ್ರಾ ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಇನ್ಮುಂದೆ ಆ ರೀತಿಯ ಯಾವುದೇ ಪ್ರಮೇಯ ಬರಲ್ಲ. ATM ಮೂಲಕ ಸುಲಭವಾಗಿ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಕೇವಲ 3 ದಿನಗಳಲ್ಲಿ ನಿಮ್ಮ ಪಿಎಫ್‌ ಹಣ ನಿಮ್ಮ ಖಾತೆ ಸೇರಲಿದೆ. ಹಾಗಿದ್ರೆ ಎಟಿಎಂ ಮೂಲಕ ಪಿಎಫ್‌ ಹಣ ವಿತ್‌ಡ್ರಾ ಮಾಡುವುದು ಹೇಗೆ? ವಿತ್‌ಡ್ರಾ ಲಿಮಿಟ್‌ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಈ ಮೊದಲು ಪಿಎಫ್ ಹಣ ಪಡೆಯಲು ಉದ್ಯೋಗಿಗಳು, ನಿವೃತ್ತ ಉದ್ಯೋಗಿಗಳು ಆಫೀಸಿಗೆ ಅಲೆದಾಡಬೇಕಿತ್ತು. ಇಲ್ಲದಿದ್ದರೆ ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಿಬೇಕಾಗಿತ್ತು. ಇದನ್ನು ತಪ್ಪಿಸಲು ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್‌ ಹಣವಿತ್ ಡ್ರಾ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಕಾರ್ಮಿಕ ಸಚಿವಾಲಯ ಅದಕ್ಕೆ ಅನುಮೋದನೆ ನೀಡಿದೆ. ಜೂನ್‌ ವೇಳೆಗೆ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

    ಕೇಂದ್ರ ಸರ್ಕಾರವು EPFO ಮೂಲಕ ಪಿಎಫ್‌ ಹಣ ಪಡೆಯುವ ನಿಯಮಗಳನ್ನು ಸಡಿಲಗೊಳಿಸಿದೆ. ಈ ಮೂಲಕ ಮುಂಗಡ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಿದೆ. ಈ ಹಿಂದೆ ಇದ್ದ 1 ಲಕ್ಷದ ಮಿತಿಯನ್ನು ಈಗ 5 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಈ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಈ ನಿಯಮ ಯಾವಾಗಿನಿಂದ ಜಾರಿಗೊಳ್ಳುತ್ತದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

    ಏಪ್ರಿಲ್ 2020 ರಲ್ಲಿ EPFO ಆಟೋ ಕ್ಲೈಮ್ ಸೆಟಲ್ಮೆಂಟ್ ಅನ್ನು ಪರಿಚಯಿಸಿತು. ಆಗ ಕೇವಲ 50,000 ರೂ. ವರೆಗಿನ ಹಣವನ್ನು ಪಡೆಯಲು ಅವಕಾಶವಿತ್ತು. ಮೇ 2024 ರಲ್ಲಿ ಈ ಮಿತಿಯನ್ನು 1 ಲಕ್ಷಕ್ಕೆ ಹೆಚ್ಚಿಸಲಾಯಿತು. ಮೊದಲು ಕೇವಲ ಅನಾರೋಗ್ಯ ಅಥವಾ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಾತ್ರ ಪಿಎಫ್ ಹಣವನ್ನು ಪಡೆಯಲು ಸಾಧ್ಯವಿತ್ತು. ಆದರೆ ಈಗ ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗೂ ಮುಂಗಡ ಹಣ ಪಡೆಯುವ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನೀವು ಈಗಾಗಲೇ ಪಿಎಫ್‌ ಹಣಕ್ಕೆ ಅಪ್ಲೈ ಮಾಡಿದ್ದರೆ ಕೇವಲ ಮೂರೇ ದಿನದಲ್ಲಿ ಪ್ರಕ್ರಿಯೆ ಮುಗಿದು ಅದು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಇಂಥದ್ದೊಂದು ಹೊಸ ಸೌಲಭ್ಯ ಏ.1ರಿಂದ ಜಾರಿಗೊಂಡಿದೆ.

    ಸುಲಭ ರೀತಿಯಲ್ಲಿ ಹಣ ವಿತ್ ಡ್ರಾ ಹೇಗೆ?
    ಪಿಎಫ್ ನಲ್ಲಿ ಹಣ ಹಿಂಪಡೆಯುವ ವಿಧಾನವನ್ನು ಮತ್ತಷ್ಟು ಸರಳಗೊಳಿಸಲಾಗುತ್ತಿದೆ. ಶೇ. 60ರಷ್ಟು ಹಣ ವಿಲೇವಾರಿಯನ್ನು ತ್ವರಿತಗೊಳಿಸಲಾಗುತ್ತಿದೆ. 1 ಲಕ್ಷ ರೂ.ವರೆಗಿನ ಹಣ ಹಿಂಪಡೆಯುವ ಅರ್ಜಿಗಳನ್ನು ಮೂರೇ ದಿನದಲ್ಲಿ ಇತ್ಯರ್ಥಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಆಸ್ಪತ್ರೆಯ ಖರ್ಚು ವೆಚ್ಚಗಳಿಗಾಗಿ, ಮನೆ ಖರೀದಿಗಾಗಿ, ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳಿಗಾಗಿ, ಮಕ್ಕಳ ಮದುವೆಗಳಿಗಾಗಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡುವುದಿದ್ದರೆ ಆ ಹಣ ಬೇಗನೇ ಸಿಗಲಿದೆ.

    ಹಣವನ್ನು ಕ್ಲೈಮ್ ಮಾಡುವಾಗ ನಿಮ್ಮ ಚೆಕ್ ಬುಕ್ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ಪಿಎಫ್‌ನಲ್ಲಿ ಸಲ್ಲಿಸಿರಬೇಕು. ಇನ್ನು ಕೆವೈಸಿ ಅಪ್ಡೇಟ್ ಮಾಡಿದ್ದವರು ಕ್ಲೈಮ್ ಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಂಥ ಅರ್ಜಿಗಳು ಬೇಗನೇ ವಿಲೇವಾರಿ ಆಗುತ್ತವೆ. ಕ್ಲೈಮ್ ಸಲ್ಲಿಸುವ ಮೊದಲು ತಾವು ಎಷ್ಟು ಮೊತ್ತಕ್ಕೆ ಕ್ಲೈಮ್ ಸಲ್ಲಿಸಲು ಅರ್ಹರು ಎಂಬುದನ್ನು ಖಾತೆದಾರರು ತಿಳಿದುಕೊಳ್ಳಬೇಕಾಗುತ್ತದೆ.

    ಆನ್ ಲೈನ್‌ನಲ್ಲೇ ಸ್ವಯಂ ತಿದ್ದುಪಡಿಗೆ ಅವಕಾಶ:
    ನಿಮ್ಮ ಪಿಎಫ್ ಖಾತೆಗೆ ಯುಎಎನ್ ನಂಬರ್ ಇದ್ದರೆ, ಆ ನಂಬರ್ ಆಧಾರ್ ನಂಬರ್‌ಗೆ ಲಿಂಕ್ ಆಗಿದ್ದರೆ, ಅಂಥ ಖಾತೆಗಳನ್ನು ಓಪನ್ ಮಾಡಿ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತಿದ್ದುಪಡಿ ಮಾಡುವುದು ಹಾಗೂ ಕಾಲಕ್ಕೆ ತಕ್ಕಂತೆ ಹೊಸ ಮಾಹಿತಿಗಳನ್ನು ನೀವೇ ಮಾಡಿಕೊಳ್ಳಬಹುದು. ಅದಕ್ಕಾಗಿ ಪಿಎಫ್ ಕಚೇರಿಗೆ ಹೋಗುವ ಅಗತ್ಯವಿಲ್ಲ.

    ಸದ್ಯದಲ್ಲೇ ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ಪಾವತಿ:
    ಸದ್ಯದಲ್ಲೇ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಇನ್ನಿತರ ಯುಪಿಐ ಪೇಮೆಂಟ್ ಆ್ಯಪ್‌ಗಳ ಮೂಲಕ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವಂಥ ಸೌಲಭ್ಯ ಬರಲಿದೆ. ಯುಪಿಎ ಪೇಮೆಂಟ್ ಸಂಸ್ಥೆಗಳೊಂದಿಗೆ ಈಗಾಗಲೇ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಇದು ಯಶಸ್ವಿಯಾದರೆ ಸದ್ಯದಲ್ಲೇ ಅಂಥ ಯೋಜನೆಯೊಂದು ಜಾರಿಗೊಳ್ಳಲಿದೆ.

    ಪಿಎಫ್‌ ಹಿಂಪಡೆಯುವುದು ಹೇಗೆ?
    ಯುಪಿಐ ಮುಖಾಂತರ:
    *EPFO ಪೋರ್ಟಲ್ ಅಥವಾ ಮೊಬೈಲ್ ಆಪ್‌ಗೆ ಲಾಗಿನ್ ಆಗಿ.
    *ʼWithdraw PFʼ ಆಯ್ಕೆ ಮಾಡಿ.
    *ಮೊತ್ತವನ್ನು ನಮೂದಿಸಿ ಮತ್ತು ನಿಮ್ಮ ಯುಪಿಐ ಐಡಿ ಎಂಟರ್ ಮಾಡಿ.
    *ಒಟಿಪಿ ದೃಢೀಕರಣದ ನಂತರ, ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

    ಎಟಿಎಂ ಮುಖಾಂತರ:
    *EPFO ಪೋರ್ಟಲ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ.
    *ನಿಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಬಳಸಿ.
    *ʼPF Withdrawalʼ ಆಯ್ಕೆ ಮಾಡಿ
    *ಹಿಂತೆಗೆದುಕೊಳ್ಳಲು ಅಗತ್ಯವಿರುವ ಮೊತ್ತವನ್ನು ನಮೂದಿಸಿ
    *OTP ದೃಢೀಕರಿಸಿ, ಹಣ ವಿತರಣೆಯಾಗಲಿದೆ.

    ಲಾಭಗಳೇನು?
    *ತ್ವರಿತ ಹಣಕಾಸು ಲಭ್ಯತೆ – ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಹಿಂತೆಗೆದುಕೊಳ್ಳುವ ಕಾಲಾವಧಿ ಕಡಿಮೆಯಾಗಲಿದೆ.
    *ಡಿಜಿಟಲ್ ಪಾರದರ್ಶಕತೆ – ಎಲ್ಲಾ ವಹಿವಾಟುಗಳು EPFO ಪೋರ್ಟಲ್ ಮತ್ತು ಯುಪಿಐ ಮೂಲಕ ನೇರವಾಗಿ ಪರೀಕ್ಷಿಸಬಹುದಾಗಿದೆ.
    *ಮನೆ ಖರೀದಿ ಮತ್ತು ಮರುಪಾವತಿಗೆ ಸೌಲಭ್ಯ – ಹೊಸ ವ್ಯವಸ್ಥೆಯೊಂದಿಗೆ, ಸದಸ್ಯರು ಪಿಎಫ್ ಬಳಸಿ ಸುಲಭವಾಗಿ ಮನೆ ಸಾಲ ಮರುಪಾವತಿ ಮಾಡಬಹುದು.
    *ಬ್ಯಾಂಕಿಂಗ್ ಸೇವೆಗಳ ಬೇಡಿಕೆಯಿಲ್ಲ – ಬ್ಯಾಂಕ್ ಪ್ರಕ್ರಿಯೆಗಳಿಲ್ಲದೆ, ಯಾವುದೇ ಸ್ಥಳದಿಂದಲೂ ಹಣ ಹಿಂಪಡೆಯಬಹುದು.

  • ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ 30 ಲಕ್ಷ ದೋಚಿದ ಖದೀಮರು!

    ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ 30 ಲಕ್ಷ ದೋಚಿದ ಖದೀಮರು!

    ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ (ATM) ಹಣ (Money) ಕದ್ದೋಯ್ದ ಘಟನೆ ಸೂಲಿಬೆಲೆಯ (Sulibele) ದೇವನಹಳ್ಳಿ ಕ್ರಾಸ್‍ನಲ್ಲಿ ನಡೆದಿದೆ.

    ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಕಳ್ಳತನ ನಡೆದಿದೆ. ಎಟಿಎಂನಲ್ಲಿ 30 ಲಕ್ಷ ರೂ.ಗೂ ಹೆಚ್ಚು ಹಣ ಕಳ್ಳತನ ಮಾಡಲಾಗಿದೆ. ಎಟಿಎಂನ ಶೆಟರ್‌ನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ, ದುಷ್ಕರ್ಮಿಗಳು ಒಳಗೆ ನುಗ್ಗಿದ್ದಾರೆ.

    ಎಟಿಎಂ ಒಳಗೆ ತಮ್ಮ ಮುಖ ಕಾಣದಂತೆ ಸಿಸಿಟಿವಿಗೆ ಸ್ಪ್ರೇ ಬಳಸಿ ಬಣ್ಣ ಹಾಕಿದ್ದಾರೆ. ಬಳಿಕ ಕಾರಿನಿಂದಲೇ ಗ್ಯಾಸ್ ಕಟರ್ ಬಳಸಿ ಶೆಟರ್ ಕತ್ತರಿಸಲಾಗಿದೆ. ಆಂಧ್ರ ಪ್ರದೇಶದ ನೋಂದಣಿ ಸಂಖ್ಯೆಯ ಕಾರಿನಲ್ಲಿ ದುಷ್ಕರ್ಮಿಗಳು ಬಂದಿರುವುದು ತಿಳಿದು ಬಂದಿದೆ. ಎಟಿಎಂ ದರೋಡೆ ನಂತರ ಹೊಸಕೋಟೆ ಮಾರ್ಗದಲ್ಲಿ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ.

    ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಸಿ.ಕೆ ಬಾಬಾ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾರ್ಟ್‌ ಸರ್ಕ್ಯೂಟ್‌ನಿಂದ ಎಟಿಎಂಗೆ ಬೆಂಕಿ – 16 ಲಕ್ಷ ರೂ. ನಗದು ಭಸ್ಮ

    ಶಾರ್ಟ್‌ ಸರ್ಕ್ಯೂಟ್‌ನಿಂದ ಎಟಿಎಂಗೆ ಬೆಂಕಿ – 16 ಲಕ್ಷ ರೂ. ನಗದು ಭಸ್ಮ

    ಬಳ್ಳಾರಿ: ಶಾರ್ಟ್‌ ಸರ್ಕ್ಯೂಟ್‌ನಿಂದ ಎಸ್‍ಬಿಐ ಬ್ಯಾಂಕ್‍ನ ಎಟಿಎಂ ಹೊತ್ತಿ ಉರಿದ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯಲ್ಲಿ (Hosapete) ನಡೆದಿದೆ.

    ನಗರದ ಸರ್ಕಾರಿ ಕಾಲೇಜು ರಸ್ತೆಯ ಫರ್ವಾಜ್ ಪ್ಲಾಜಾದ ಬಳಿಯ ಎಟಿಎಂನಲ್ಲಿ  (ATM) ಇಂದು (ಫೆ.28) ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಎರಡು ಅಗ್ನಿಶಾಮಕ ವಾಹನದಲ್ಲಿ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಬೆಂಕಿ ನಿಯಂತ್ರಣಕ್ಕೆ ಬಂದಿದೆ.

    ಎಟಿಎಂ ಒಳಗೆ ಅಂದಾಜು 16 ಲಕ್ಷ ರೂ. ಹಣ (Money) ಇತ್ತು ಎನ್ನಲಾಗಿದೆ. ಜೊತೆಗೆ ಮಳಿಗೆಯ ಮೌಲ್ಯ 40 ರಿಂದ 50 ಲಕ್ಷ ರೂ. ಇರಬಹುದೆಂದು ಅಂದಾಜಿಸಲಾಗಿದೆ.

    ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

  • ಉಡುಪಿ| ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನ ಕೇಸ್ – ಇಬ್ಬರ ಬಂಧನ

    ಉಡುಪಿ| ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನ ಕೇಸ್ – ಇಬ್ಬರ ಬಂಧನ

    ಉಡುಪಿ: ಕೆನರಾ ಬ್ಯಾಂಕ್ ಎಟಿಎಂ ಬಾಕ್ಸ್ ಕಳ್ಳತನಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಫೆ.12 ರಂದು ಉಡುಪಿಯಲ್ಲಿ ಕೃತ್ಯ ನಡೆದಿತ್ತು. ಮಂಗಳೂರಿನ ಅಸೈಗೋಳಿ ಮತ್ತು ಪಡೀಲ್‌ನ ನಿವಾಸಿಗಳಾದ ಅಬೂಬಕ್ಕರ್ ಸಿದ್ದಿಕ್ (24), ಮೊಹಮ್ಮದ್ ಯಾಸೀನ್ (21) ಅರೆಸ್ಟ್ ಆಗಿದ್ದಾರೆ.

    ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಕೂಟಿ, ಕತ್ತಿ, ಸುತ್ತಿಗೆ ಮೊದಲಾದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

    ಉಡುಪಿ ಜಿಲ್ಲೆ ಕಾಪು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

  • ಬ್ಯಾಂಕ್‌-ATMಗಳು ಸರ್ಕಾರ ಕೊಟ್ಟ ಮಾರ್ಗಸೂಚಿ ಪಾಲನೆ ಮಾಡಬೇಕು – ಪರಮೇಶ್ವರ್

    ಬ್ಯಾಂಕ್‌-ATMಗಳು ಸರ್ಕಾರ ಕೊಟ್ಟ ಮಾರ್ಗಸೂಚಿ ಪಾಲನೆ ಮಾಡಬೇಕು – ಪರಮೇಶ್ವರ್

    ಬೆಂಗಳೂರು: ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ (Bank Robbery Case) ಮತ್ತು ಬೀದರ್ ATM ದರೋಡೆ ಪ್ರಕರಣದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ್ದು, ಶೀಘ್ರವೇ ಆರೋಪಿಗಳ ಬಂಧನ ಮಾಡೋದಾಗಿ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಮಂಗಳೂರು ಮತ್ತು ಬೀದರ್ ಎರಡೂ ‌ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನ ಬಂಧನ ಮಾಡ್ತೀವಿ. ಮಂಗಳೂರು ಕೇಸ್‌ನಲ್ಲಿ ಎರಡು ಕಾರು ಬಂದಿರೋ ಮಾಹಿತಿ ಇದೆ. ಎರಡು ಕೇಸ್ ನಲ್ಲಿ ನಿಖರ ಮಾಹಿತಿಗಳನ್ನ ಪೊಲೀಸರು ಕಲೆ ಹಾಕಿದ್ದಾರೆ. ಈಗಾಗಲೇ 4-5 ಟೀಂಗಳನ್ನ ವಿವಿಧ ರಾಜ್ಯಗಳಿಗೆ ಕಳಿಸಲಾಗಿದೆ. ಎರಡು ಪ್ರಕರಣದಲ್ಲಿ ಬೇರೆ ರಾಜ್ಯದವರು ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಯಾರು ಏನು? ಎಲ್ಲಿಯವರು ಅಂತ ತನಿಖೆಯಿಂದ ಗೊತ್ತಾಗಲಿದೆ ಎಂದರು.

    ಈಗಾಗಲೇ ಗೃಹ ಇಲಾಖೆಯಿಂದ ಬ್ಯಾಂಕ್ ಮತ್ತು ATM ಗಳಿಗೆ ಯಾವ ರೀತಿ ಭದ್ರತೆ ಇರಬೇಕು ಅಂತ ರೂಲ್ಸ್ ಕೊಟ್ಡಿದ್ದೇವೆ. ಎಲ್ಲಾ ATM, ಬ್ಯಾಂಕ್ ಗಳಿಗೆ ಸೂಚನೆ ಹೋಗುತ್ತದೆ. ATMಗೆ ಹಣ ಹಾಕೋಕೆ ಬ್ಯಾಂಕ್ ನವರು ಕಾಂಟ್ರಾಕ್ಟ್ ಅವರಿಗೆ ಕೊಟ್ಟಿರುತ್ತಾರೆ. ATMಗೆ ಹಣ ತುಂಬುವಾಗ ಕಡ್ಡಾಯವಾಗಿ ಆರ್ಮ್ ಕಾರ್ಡ್ ಇರಬೇಕು ಅಂತ ನಿಯಮ ಈಗಾಗಲೇ ಇದೆ. ಬೀದರ್ ಘಟನೆ ಆದಾಗ ಆರ್ಮ್‌ ಗಾರ್ಡ್ ಇರಲಿಲ್ಲ. ಹೀಗಾಗಿ ಘಟನೆ ಆಗಿದೆ. ಮಂಗಳೂರು ಬ್ಯಾಂಕ್ ದರೋಡೆಯಾದಾಗಲು ಕೂಡಾ ಗಾರ್ಡ್ ಇರಲಿಲ್ಲ ಅಂತ ಮಾಹಿತಿ ಇದೆ. ಹೀಗಾಗಿ ಇಲಾಖೆ ಕೊಟ್ಟ ರೂಲ್ಸ್‌ಗಳು ಲ್ಯಾಪ್ಸ್ ಆಗಬಾರದು. ಇಂತಹ ಅವಕಾಶಗಳಿಗೆ ಅಕ್ರಮ ಮಾಡೋರು ಕಾಯ್ತಾ ಇರುತ್ತಾರೆ. ಹೀಗಾಗಿ ಬ್ಯಾಂಕ್‌ನವರು ನಮ್ಮ ಜೊತೆ ಸಹಕಾರ ಕೊಡಬೇಕು ಅಂತ ತಿಳಿಸಿದರು.

    ಬಿಜೆಪಿಯೊಳಗೆ ಎಷ್ಟು ಬಾಗಿಲು ನಾಯಕರು ಹೇಳಲಿ:
    ಬಿಜೆಪಿಯೊಳಗಿನ ಅಂತರಿಕ ಕಿತ್ತಾಟಕ್ಕೆ ಗೃಹ ಸಚಿವ ಪರಮೇಶ್ವರ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಬಗ್ಗೆ ಮಾತಾಡ್ತಿದ್ದ ಬಿಜೆಪಿ ನಾಯಕರು ಈಗ ತಮ್ಮ ಪಕ್ಷಕ್ಕೆ ಎಷ್ಟು ಬಾಗಿಲು ಅಂತ ಹೇಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

    ಬಿಜೆಪಿ ಆಂತರಿಕ ಕಿತ್ತಾಟದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಮಾತಾಡಿದ್ರು. ಕಾಂಗ್ರೆಸ್ ಒಡೆದ ಮನೆ ಅಂತ ಹೇಳಿದ್ರು. ಕಾಂಗ್ರೆಸ್‌ದು ಮೂರು ಬಾಗಿಲು, ನಾಲ್ಕು ಬಾಗಿಲು ಅಂತ ಹೇಳ್ತಿದ್ರು. ಈಗ ಬಿಜೆಪಿ ಅವರದ್ದು ಎಷ್ಟು ಬಾಗಿಲು ಅಂತ ಹೇಳಬೇಕು. ಬಿಜೆಪಿಯವರು ಬಹಿರಂಗವಾಗಿ ಕಿತ್ತಾಟ ಮಾಡ್ತಿದ್ದಾರೆ. ಈಗ ಅವರೇ ಎಷ್ಟು ಬಾಗಿಲು ಅಂತ ಹೇಳಲಿ ಅಂತ ಲೇವಡಿ ಮಾಡಿದ್ರು.

    ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಬೇಕು ಎಂಬ ಬಿಜೆಪಿಯಲ್ಲಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನನಗೇನು ಗೊತ್ತಿಲ್ಲ. ಅವರ ಪಕ್ಷದ ಬಗ್ಗೆ ನಾನು ಚರ್ಚೆ ಮಾಡಲ್ಲ. ಅದು ಅವರ ಪಕ್ಷದ ವಿಚಾರ. ಇಷ್ಟು ದಿನ ನಮಗೆ ಹೇಳ್ತಿದ್ದರು ಗಲಾಟೆ, ಕಿತ್ತಾಟ ಅಂತ ಈಗ ಬಿಜೆಪಿ ಅವರು ಏನ್ ಹೇಳ್ತಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದ್ರು.

  • ಎಟಿಎಂ ದರೋಡೆ ಕೇಸ್‌ | ಸ್ವಕ್ಷೇತ್ರದಲ್ಲಿ ಕೃತ್ಯ ನಡೆದರೂ ಇಬ್ಬರ ಸಾವು ಎಂದ ಸಚಿವ ರಹೀಂ ಖಾನ್‌

    ಎಟಿಎಂ ದರೋಡೆ ಕೇಸ್‌ | ಸ್ವಕ್ಷೇತ್ರದಲ್ಲಿ ಕೃತ್ಯ ನಡೆದರೂ ಇಬ್ಬರ ಸಾವು ಎಂದ ಸಚಿವ ರಹೀಂ ಖಾನ್‌

    ಬೀದರ್: ಎಟಿಎಂ ದರೋಡೆ,‌ ಸಿಬ್ಬಂದಿ ಸಾವು ಪ್ರಕರಣದ (Bidar Atm Robbery Case)ಬಗ್ಗೆ ಸರಿಯಾಗಿ ಮಾಹಿತಿ ಪಡೆಯದೇ ಗುಂಡೇಟಿಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿ ಸಚಿವ ರಹೀಂ ಖಾನ್ (Rahim Khan)ಎಡವಟ್ಟು ಮಾಡಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡುವಾಗ ಗುಂಡೇಟಿಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸ್ಥಳೀಯರು ಒಂದು ಸಾವು ಎಂದ ಕೂಡಲೇ ಸರಿಪಡಿಸಿಕೊಂಡ ಸಚಿವರು ಒಬ್ಬರು ಮೃತಪಟ್ಟು ಒಬ್ಬರು ಗಂಭೀರ ಎಂದು ಹೇಳುವ ಮೂಲಕ ತೇಪೆ ಹಚ್ಚಿದ್ದಾರೆ.

     

    ಮೊನ್ನೆಯಷ್ಟೇ ಸಚಿವ ರಹೀಂ ಖಾನ್ ವಿರುದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ವಾಗ್ದಾಳಿ ನಡೆಸಿ ಸ್ವಕ್ಷೇತ್ರದ ಬಗ್ಗೆ ಸಚಿವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಗೇಲಿ‌ ಮಾಡಿದ್ದರು. ಈಗ ಸಚಿವರ ಎಡವಟ್ಟಿನ ಹೇಳಿಕ ಜಿಲ್ಲೆಯಲ್ಲಿ ವೈರಲ್‌ ಆಗಿದೆ.