Tag: atlee

  • ಜವಾನ್ ಚಿತ್ರದ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟ

    ಜವಾನ್ ಚಿತ್ರದ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟ

    ಶಾರುಖ್ ಖಾನ್ ಅಭಿನಯದ ‘ಜವಾನ್’ (Jawaan) ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರವನ್ನು ಶಾರುಖ್ ಖಾನ್ (Shah Rukh Khan) ಅವರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು,  ಜನಪ್ರಿಯ ನಿರ್ದೇಶಕರಾದ ಅಟ್ಲಿ (Atlee) ನಿರ್ದೇಶನ ಮಾಡುತ್ತಿದ್ದಾರೆ.

    ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬ್ಲಾಕ್‌ಬಸ್ಟರ್ ಎಂದೆನಿಸಿಕೊಂಡಿತ್ತು. ಈಗ ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು (Rights) ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ. ಇದನ್ನೂ ಓದಿ:ತನ್ನದೇ ಸಿನಿಮಾ ನಟಿಗೆ ತೈಲ ಕೊಡಿ ಸರಿ ಹೋಗ್ತಾಳೆ ಎಂದ ನಿರ್ದೇಶಕ

    ‘ಜವಾನ್’ ಚಿತ್ರದ ಓಟಿಟಿ, ಸ್ಯಾಟಿಲೈಟ್ ಮತ್ತು ಸಂಗೀತ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿದ್ದು, ಭಾರೀ ಮೊತ್ತಕ್ಕೆ ಹಕ್ಕುಗಳನ್ನು ಕೊಂಡಿರುವ ಸುದ್ದಿ ಇದೆ. ಆದರೆ, ಚಿತ್ರತಂಡದವರು ಮಾತ್ರ ಇನ್ನೂ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿವೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

     

    ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ (Nayantara) , ವಿಜಯ್ ಸೇತುಪತಿ (Vijay Sethupathi), ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್, ಈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

  • ಪತ್ನಿ ಜೊತೆ ಕಾನ್ಸ್ ನಲ್ಲಿ ಕಾಣಿಸಿಕೊಂಡ ನಿರ್ದೇಶಕ ಅಟ್ಲಿ

    ಪತ್ನಿ ಜೊತೆ ಕಾನ್ಸ್ ನಲ್ಲಿ ಕಾಣಿಸಿಕೊಂಡ ನಿರ್ದೇಶಕ ಅಟ್ಲಿ

    ಫ್ರಾನ್ಸ್ ದೇಶದ ಕಾನ್ಸ್ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವದ (Cannes Festival) ರೆಡ್ ಕಾರ್ಪೆಟ್ ವಿಭಾಗದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ (Atlee) ತಮ್ಮ ಪತ್ನಿ ಪ್ರಿಯಾ ಅಟ್ಲಿ (Priya Atlee) ಜೊತೆಗೆ ಭಾಗವಹಿಸಿದ್ದರು. ಕಪ್ಪು ಬಣ್ಣದ ಉಡುಗಿಯಲ್ಲಿ ಕಾಣಿಸಿಕೊಂಡ ದಂಪತಿ ನಗು ನಗುತ್ತಲೇ ಎಲ್ಲರತ್ತ ಕೈ ಬೀಸಿ ಹೆಜ್ಜೆ ಹಾಕಿದರು.

    ಒಂದು ಕಡೆ ಕಾನ್ಸ್ ನ ರೆಡ್ ಕಾರ್ಪೆಟ್ (Red Carpet) ಸಾಕಷ್ಟು ಸುದ್ದಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ಕುರಿತು ಟೀಕೆಗಳು ಕೇಳಿ ಬಂದಿವೆ. ಪ್ರತಿಷ್ಠಿತ ಕಾನ್ಸ್ (Cannes Festival) ಚಿತ್ರೋತ್ಸವದ ವಿರುದ್ಧ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಗರಂ ಆಗಿದ್ದಾರೆ. ಕಾನ್ಸ್ ಅದೊಂದು ಹೆಮ್ಮೆಯ ಚಿತ್ರೋತ್ಸವ, ಅದರ ಬದಲು ಅದನ್ನು ಫ್ಯಾಶನ್ ಶೋ ಆಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ. ಕಾನ್ಸ್ ಚಿತ್ರೋತ್ಸವದ ಪ್ರತಿಷ್ಠೆಯನ್ನು ಉಳಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ನಟಿಯರ ವಿವಿಧ ರೀತಿಯ ಕಾಸ್ಟ್ಯೂಮ್ ಗಳಿಂದಾಗಿ ಕಾನ್ಸ್ ಸಾಕಷ್ಟು ಸುದ್ದಿ ಆಗುತ್ತದೆ. ಅದರ ಹೊರತಾಗಿ ಚಿತ್ರೋತ್ಸವದಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದು ಜಗತ್ತಿಗೆ ಗೊತ್ತೇ ಆಗುವುದಿಲ್ಲ. ರೆಡ್ ಕಾರ್ಪೆಟ್ ನಲ್ಲಿ ನಡೆಯುವ ಫ್ಯಾಷನ್ ಶೋ ಮಾತ್ರ ಹೆಚ್ಚು ಸದ್ದು ಮಾಡುತ್ತದೆ. ಇದೇ ವಿವೇಕ್ ಅಗ್ನಿಹೋತ್ರಿ ಕೋಪಕ್ಕೆ ಕಾರಣವಾಗಿದೆ. ಒಳ್ಳೊಳ್ಳೆ ಚಿತ್ರಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದಿದ್ದಾರೆ.

    ಈ ಬಾರಿಯ ಕಾನ್ಸ್ ನಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai) ಅವರ ವಿಚಿತ್ರ ಕಾಸ್ಟ್ಯೂಮ್. ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ನಾನಾ ದೇಶಗಳು ಕೂಡ ಅದಕ್ಕೆ ಮಹತ್ವ ನೀಡಿದ್ದವು. ಹೀಗಾಗಿ ಪರೋಕ್ಷವಾಗಿ ಐಶ್ವರ್ಯ ವಿರುದ್ಧವೂ ವಿವೇಕ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ದಕ್ಷಿಣದ ತಾರೆಯರನ್ನು ಹಾಡಿಹೊಗಳಿದ ಶಾರುಖ್ ಖಾನ್

    ದಕ್ಷಿಣದ ತಾರೆಯರನ್ನು ಹಾಡಿಹೊಗಳಿದ ಶಾರುಖ್ ಖಾನ್

    ಠಾಣ್ ಚಿತ್ರದ ದೊಡ್ಡ ಯಶಸ್ಸಿನ ನಂತರ ಶಾರುಖ್ ಖಾನ್, ‘ಜವಾನ್’ (Jawaan) ಎಂಬ ಇನ್ನೊಂದು ಆಕ್ಷನ್ ಪ್ಯಾಕ್ಡ್ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಜವಾನ್ ಚಿತ್ರವನ್ನು ತಮಿಳಿನಲ್ಲಿ ಮಾಸ್ ಚಿತ್ರಗಳಿಗೆ ಹೆಸರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು, ಬಹಳ ಕುತೂಹಲದಿಂದ ಕಾಯುತ್ತಿರುವ ಈ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ, ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯ ಪೋಸ್ಟರ್ ಬಿಡುಗಡೆಯಾಗಿದೆ.

    ಜವಾನ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ಶಾರುಖ್ ಖಾನ್ (Shah Rukh Khan) ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಆಸ್ಕ್ ಎಸ್ಆರ್ಕೆ ಎಂಬ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಜವಾನ್ ಚಿತ್ರದ ಬಿಡುಗಡೆ ತಡವಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಒಂದೊಳ್ಳೆಯ ಚಿತ್ರ ಕೊಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಪ್ರತಿಯೊಬ್ಬರೂ ಬ್ರೇಕ್ ತೆಗೆದುಕೊಳ್ಳದೆ ಕಷ್ಟಪಟ್ಟು ಮತ್ತು ತಮ್ಮ ಶಕ್ತಿಮೀರಿ ದುಡಿದಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ಚಿತ್ರ ಬಹಳ ಚೆನ್ನಾಗಿ ಬಂದಿದೆ. ಚಿತ್ರ ಸ್ವಲ್ಪ ನಿಧಾನವಾದರೂ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಶಾರುಖ್.

    ತಮ್ಮ ಮಟ್ಟಿಗೆ ಇದೊಂದು ಹೊಸ ಜಾನರ್ ನ ಚಿತ್ರ ಎಂದಿರುವ ಶಾರುಖ್, ‘ಈ ಚಿತ್ರ ನಾನು ಒಪ್ಪಿಕೊಳ್ಳಲು ಕಾರಣವೇನು ಎಂದು ಬಹಳಷ್ಟು ಜನ ಕೇಳಿದ್ದಾರೆ. ಪ್ರಮುಖವಾಗಿ, ಈ ಮಾದರಿಯ ಚಿತ್ರ ನನಗೆ ಬಹಳ ಹೊಸದು. ಇನ್ನು, ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಅಟ್ಲಿ (Atlee) ಮತ್ತು ಅವರ ತಂಡ ಸಹ ಪ್ರಮುಖ ಕಾರಣ. ಕ್ಲಾಸ್ ಮತ್ತು ಮಾಸ್ ಅಂಶಗಳನ್ನು ಬೆರೆಸಿ ಕಥೆ ಹೇಳುವ ಅಟ್ಲಿ ಅವರ ಶೈಲಿ ನನಗೆ ಬಹಳ ಇಷ್ಟವಾಯ್ತು. ಈ ಎಲ್ಲ ಕಾರಣಗಳಿಂದ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಎಂದು ಉತ್ತರಿಸಿದ್ದಾರೆ ಶಾರುಖ್.

    ಇತ್ತೀಚೆಗೆ ಬಿಡುಗಡೆಯಾದ ಹೊಸ ಪೋಸ್ಟರ್ನಲ್ಲಿ ಶಾರುಖ್ ಮುಖ ಕಾಣುವುದೇ ಇಲ್ಲ. ಪೋಸ್ಟರ್ ನಿಂದ ಶಾರುಖ್ ಅವರನ್ನು ಚಿತ್ರತಂಡ ದೂರ ಇಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಚಿತ್ರಮಂದಿರಕ್ಕೆ ಜನರನ್ನು ಸೆಳೆಯಲು ನನ್ನ ಮುಖಕ್ಕಿಂತ ಹೆಸರೇ ಸಾಕು ಎಂದು ನಿರ್ಮಾಪಕರಿಗೆ ಅನಿಸಿರಬಹುದು. ಹಾಗಾಗಿ, ಪೋಸ್ಟರ್ ನಲ್ಲಿ ನನ್ನ ಮುಖ ತೋರಿಸಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: The Kerala Story ಬಂದ್ಮೇಲೆ ಇಸ್ಲಾಂಗೆ 32 ಸಾವಿರ ಮಹಿಳೆಯರ ಮತಾಂತರ – ಗಂಭೀರ ಆರೋಪ

    ತಮ್ಮ ಸಹನಟರಾದ ನಯನತಾರಾ ಮತ್ತು ವಿಜಯ್ ಸೇತುಪತಿ ಅವರನ್ನು ಹಾಡಿಹೊಗಳಿರುವ ಕಿಂಗ್ ಖಾನ್, ‘ನಯನತಾರಾ (Nayanthara) ಒಬ್ಬ ಅದ್ಭುತ ನಟಿ. ಅವರೊಂದಿಗೆ ಕೆಲಸ ಮಾಡಿದ್ದು ಬಹಳ ಖುಷಿ ನೀಡಿತು. ಇನ್ನು, ವಿಜಯ್ ಸೇತುಪತಿ (Vijay Sethupathi) ಬಹಳ ಒಳ್ಳೆಯ ಮನುಷ್ಯ. ಒಬ್ಬ ಪ್ರತಿಭಾವಂತ ನಟ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎಂದು ಹೇಳಿದ್ದಾರೆ.

    ತಮಿಳು ನಿರ್ದೇಶಕರು ಮತ್ತು ತಮಿಳು ತಂತ್ರಜ್ಞರ ಜೊತೆಗೆ ಕೆಲಸ ಮಾಡಿದ್ದರಿಂದ ತಮಿಳು ಕಲಿಯುವ ಅವಕಾಶವೇನಾದರೂ ಸಿಕ್ಕಿತಾ ಎಂದರೆ, ‘ಅಟ್ಲಿ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್, ಹಾಡಿನ ಕೆಲವು ತಮಿಳು ಸಾಲುಗಳಿಗೆ ಲಿಪ್ ಸಿಂಕ್ ಮಾಡಿಸಿದರು. ಅದು ಸರಿಯಾಗಿ ಬಂದಿದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ. ಜವಾನ್ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಶಾರುಖ್ ಪತ್ನಿ ಗೌರಿ ಖಾನ್ ನಿರ್ಮಿಸಿದ್ದಾರೆ.

  • ಶಾರುಖ್ ಖಾನ್ ನಟನೆ ‘ಜವಾನ್’ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಶಾರುಖ್ ಖಾನ್ ನಟನೆ ‘ಜವಾನ್’ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ನಟನೆ ‘ಜವಾನ್’ (Jawaan) ಸಿನಿಮಾ ಮೇಲೆ ಚಿತ್ರರಸಿಕರ ಚಿತ್ತ ನೆಟ್ಟಿದೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲೀ (Atlee) ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಈ ಚಿತ್ರ ಸೆಪ್ಟಂಬರ್ 7ಕ್ಕೆ ವಿಶ್ವಾದ್ಯಂತ ದರ್ಶನ ಕೊಡಲಿದೆ.

    ಜವಾನ್ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ (Release) ಎನ್ನಲಾಗುತ್ತಿತ್ತು. ಇದೀಗ ಚಿತ್ರತಂಡ ಅಂತಿಮ ದಿನಾಂಕ ಘೋಷಿಸಿದ್ದು, ಎಸ್ ಆರ್ ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಪಕ್ಕ ಆಕ್ಷನ್ ಪ್ಯಾಕ್ಡ್ ಸಿನಿಮಾವಾಗಿರುವ ಜವಾನ್ ನಲ್ಲಿ ದಕ್ಷಿಣ ಭಾರತದ ಸಿನಿತಾರೆಯರ ದಂಡೇ ಇದೆ. ಇದನ್ನೂ ಓದಿ:ನಾನೇಕೆ ಡಿವೋರ್ಸ್ ಫೋಟೋಶೂಟ್ ಮಾಡಿಸಿದೆ?: ನಟಿ ಶಾಲಿನಿ ಬಿಚ್ಚಿಟ್ಟ ರಹಸ್ಯ

    ಶಾರುಖ್ ಗೆ ಮೊದಲ ಬಾರಿಗೆ ಜೋಡಿಯಾಗಿ ಲೇಡಿ ಸೂಪರ್ ಸ್ಟಾರ್ ನಯನ ತಾರಾ (Nayanthara) ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ (Vijay Sethupathi), ಯೋಗಿಬಾಬು ಸೇರಿದಂತೆ ಹಲವರು ಬಣ್ಣ ಹಚ್ಚಿರುವ ಈ ಸಿನಿಮಾವನ್ನು ಗೌರಿ ಖಾನ್ ನಿರ್ಮಾಣ ಮಾಡಿದ್ದಾರೆ.

    ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್  ಎಂಟರ್ ಟೈನ್ಮೆಂಟ್ ನಡಿ ಬರ್ತಿರುವ ಜವಾನ್ ಸಿನಿಮಾ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮಾತ್ರ ರಿಲೀಸ್ ಆಗ್ತಿದೆ.  ಕಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಅಟ್ಲಿ ಮೊದಲ ಬಾರಿಗೆ ಬಾಲಿವುಡ್ ಬಾದ್ ಷಾ ಶಾರುಖ್ ಗೆ ಆಕ್ಷನ್ ಕಟ್ ಹೇಳಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ವಿವಿಧ ದೇಶದಲ್ಲಿ ಚಿತ್ರೀಕರಣ ನಡೆಸುತ್ತಿರುವ ಜವಾನ್ ಸಿನಿಬಳಗ ಶೀಘ್ರದಲ್ಲಿಯೇ ಟೀಸರ್ ಬಿಡುಗಡೆಗೆ ಪ್ಲ್ಯಾನ್ ನಡೆಸುತ್ತಿದೆ.

  • ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಬಿಟೌನ್ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan) ನಟಿಸಿರುವ ಸಿನಿಮಾಗಳು ಮಕಾಡೆ ಮಲಗಿದ್ದ ಬೆನ್ನಲ್ಲೇ ಸಿನಿಮಾದಿಂದ ಸರಿದಿದ್ದರು. ಇದೀಗ ಲಾಂಗ್ ಗ್ಯಾಪ್‌ನ ನಂತರ ಮತ್ತೆ `ಜವಾನ್’ (Jawan) ಚಿತ್ರದ ಮೂಲಕ ಶಾರುಖ್ ಖಾನ್ ಕಂಬ್ಯಾಕ್ ಆಗುತ್ತಿದ್ದಾರೆ. ಜೊತೆಗೆ ಈ ಚಿತ್ರದ ಒಟಿಟಿ ಹಕ್ಕು 100 ಕೋಟಿ ರೂಪಾಯಿಗೆ ಸೋಲ್ಡ್ ಔಟ್ ಆಗಿದೆ.

    ಅಟ್ಲೀ ನಿರ್ದೇಶನದ ಸಿನಿಮಾ `ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಈ ಚಿತ್ರದ ಕೊನೆಯ ಹಂತದ ಶೂಟಿಂಗ್‌ನಲ್ಲಿರುವ ಬೆನ್ನಲ್ಲೇ 100 ಕೋಟಿ(100 Crore) ರೂಪಾಯಿಗೆ ಒಟಿಟಿಗೆ ಸೇಲ್ ಆಗಿದೆ. ಚಿತ್ರಮಂದಿರಲ್ಲಿ ಬಂದ ನಂತರ ಒಟಿಟಿಗೆ ಲಗ್ಗೆ ಇಡಲಿದೆ. ಇದನ್ನೂ ಓದಿ:ಕೇಂದ್ರ ಸಚಿವ ಠಾಕೂರ್ ಭೇಟಿ ಮಾಡಿದ ‘ಕಾಂತಾರ’ ನಿರ್ಮಾಪಕ ವಿಜಯ್ ಕಿರಗಂದೂರ

    ಬಾಲಿವುಡ್‌ನಲ್ಲಿ (Bollywood) ಇದೀಗ ಸೌತ್ ಸಿನಿಮಾಗಳೇ ಸೂಪರ್ ಡೂಪರ್ ಹಿಟ್ ಆಗುತ್ತಿದೆ. ಹಿಂದಿ ಚಿತ್ರಗಳು ಗಟ್ಟಿ ನೆಲೆ ಕಾಣದೇ ಮಕಾಡೆ ಮಲಗುತ್ತಿದೆ. ಆದರೆ ಈಗ ಜವಾನ್ ಚಿತ್ರ ಬಹುಕೋಟಿ ವೆಚ್ಚಕ್ಕೆ ಒಟಿಟಿಗೆ ಸೇಲ್ ಆಗಿರುವುದು ಬಾಲಿವುಡ್‌ಗೆ ಮರುಜೀವ ಕೋಟಿ ಕೊಟ್ಟಿದೆ. 100 ಕೋಟಿ ರೂಪಾಯಿಗೆ ಸೇಲ್ ಆಗುವ ಮೂಲಕ ಜವಾನ್ ಹಿಸ್ಟರಿ ಕ್ರಿಯೇಟ್ ಮಾಡಿದೆ.

    `ಜವಾನ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಸೋಲಿನ ರುಚಿ ಕಂಡಿರುವ ಶಾರುಖ್‌ಗೆ ಈ ಸಿನಿಮಾ ಗೆಲುವಿನ ಸಿಹಿ ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಶಾರುಖ್ ಖಾನ್ `ಜೀರೋ’ ಚಿತ್ರದ ಸೋಲಿನ ನಂತರ ಜವಾನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಜವಾನ್ ಆರ್ಭಟಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಶಾರುಖ್ ಎಂಟ್ರಿ ಕೊಡ್ತಿದ್ದಾರೆ.

    2018ರ `ಜೀರೋ’ ಸಿನಿಮಾ ನೆಲಕಚ್ಚಿದ ಮೇಲೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ ಶಾರುಖ್ ನಟನೆಯ ಚಿತ್ರಗಳು ರಿಲೀಸ್ ಆಗಿಲ್ಲ. ಈಗ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡಿಕೊಂಡು, ಬಾಲಿವುಡ್ ಬಾದಷಾ ಶಾರುಖ್ ಖಾನ್ ಜವಾನ್ ಆಗಿ ಅವತಾರವೆತ್ತಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರಕ್ಕೆ ಶಾರುಖ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ

    ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಶಾರುಖ್‌ಗೆ ನಯನತಾರಾ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ. ಟೀಸರ್ ಮೂಲಕಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಿದ್ದು, 2023ಕ್ಕೆ ಬೆಳ್ಳಿಪರದೆಯಲ್ಲಿ ರಾರಾಜಿಸೋದು ಗ್ಯಾರೆಂಟಿ.

    ಇದೊಂದು ಪಕ್ಕಾ ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಶಾರುಖ್ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗೆಲುವಿಗಾಗಿ ಕಾಯ್ತಿರೋ ಬಾದಷಾ ಶಾರುಖ್‌ಗೆ ಜವಾನ್ ಸಿನಿಮಾ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.

  • ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಕಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ನಿರ್ದೇಶಕ ಅಟ್ಲೀ ಸಂಚಲನ ಮೂಡಿಸಿದ್ದಾರೆ. ರಾಜಾ ರಾಣಿ, ಮರ್ಸೆಲ್, ಬಿಗಿಲ್‌ನಂತರ ಸಾಲು ಸಾಲು ಹಿಟ್ ಚಿತ್ರಗಳನ್ನೇ ನೀಡುತ್ತಾ ಬಂದಿದ್ದಾರೆ. ಇದೀಗ ಶಾರುಖ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳಿದ ನಂತರ ಅಲ್ಲು ಅರ್ಜುನ್‌ಗೆ ಡೈರೆಕ್ಷನ್ ಮಾಡುವುದಕ್ಕೆ ಅಟ್ಲೀ ರೆಡಿಯಾಗಿದ್ದಾರೆ. ಈಗ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಫುಲ್ ಶಾಕ್ ಆಗಿದ್ದಾರೆ.

    ಅಟ್ಲೀ ಟ್ಯಾಲೆಂಟ್ ನೋಡಿ ಬಾಲಿವುಡ್ ಸ್ಟಾರ್‌ಗಳು ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ಅಟ್ಲೀ ಪ್ರತಿಭೆ ನೋಡಿ ಶಾರುಖ್ ಖಾನ್ ತಮಗೆ ಸಿನಿಮಾ ಮಾಡಿಕೊಂಡುವಂತೆ ಕೇಳಿದ್ರು. ಅದರಂತೆ ಶೂಟಿಂಗ್ ಭರದಿಂದ ಸಾಗುತ್ತಿದೆ. ಹಾಗಾಗಿ ನಿರ್ದೇಶಕ ಅಟ್ಲೀಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆಯಿದೆ. ಇನ್ನು ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜತೆ ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

    `ಪುಷ್ಪ’ ಗ್ರ್ಯಾಂಡ್ ಸಕ್ಸಸ್ ನಂತರ ಅಲ್ಲು ಅರ್ಜುನ್ ಅಟ್ಲೀ ಜತೆಗೆ ಸಿನಿಮಾ ವಿಷ್ಯವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಟ್ಲೀ 35 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದರಂತೆ. `ಬಿಗಿಲ್’ ನಿರ್ದೇಶಕನ ಸಂಭಾವನೆ ಕೇಳಿನೇ ಅಲ್ಲು ಅರ್ಜುನ್ ಬೆರಗಾಗಿದ್ದಾರಂತೆ. ಇದೀಗ ಸಂಭಾವನೆ ಕೇಳಿ ಸಿನಿಮಾ ಮಾಡುವುದನ್ನೇ ಅಲ್ಲು ಅರ್ಜನ್ ಕೈಬಿಟ್ಟಿದ್ದಾರಂತೆ. ಈ ಸುದ್ದಿ ಇದೀಗ ಸೌತ್ ಗಲ್ಲಿಯಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ಅಲ್ಲು ಅರ್ಜುನ್ ಅವರು ಅಟ್ಲೀ ಅವರೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದರು. ಲೈಕಾ ಬ್ಯಾನರ್‌  ನಿರ್ಮಾಣಕ್ಕೆ ಮುಂದಾಗಿತ್ತು. ಇದೀಗ ಅಟ್ಲೀ ಸಂಭಾವನೆ ಕೇಳಿ ಶಾಕ್ ಆಗಿರುವ ಅಲ್ಲು ಅರ್ಜುನ್ ಆ್ಯಂಡ್ ಟೀಮ್ ಸಿನಿಮಾ ಯೋಜನೆ ಮುಂದುವರೆಯುತ್ತಾ ಅಥವಾ ಕೈಬೀಡುತ್ತಾರಾ ಅಂತಾ ಕಾದುನೋಡಬೇಕಿದೆ.