ಚಾಮರಾಜನಗರ: ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ ಎಂದು ಚಾಮರಾಜನಗರದಲ್ಲಿ ಅಜಾದ್ ಹಿಂದ್ ಸೇನಾ ಕಾರ್ಯಕರ್ತರು ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಪ್ರತಿಭಟನೆ ನಡೆಸಿದ್ದಾರೆ.
ನಗರದ ಸಿಂಹ ಮೂವಿ ಪ್ಯಾರಡೈಸ್ ನಲ್ಲಿ ಶುಕ್ರವಾರ ತೆರೆ ಕಂಡ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ನಟ ಚೇತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇತನ್ ಶಿವಕುಮಾರಸ್ವಾಮೀಜಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ. ಇದಲ್ಲದೇ ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಇವರು ಸಮಾಜದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಇವರ ನಟನೆಯ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಅಜಾದ್ ಹಿಂದ್ ಸೇನೆಯ ಕಾರ್ಯಕರ್ತರು ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು: ಸ್ಯಾಂಡಲ್ ವುಡ್‍ನಲ್ಲಿ ಇಂದು ಎರಡು ಚಿತ್ರಗಳು ಸ್ಪರ್ಧೆಗಿಳಿಯಲಿವೆ. ಮಾಲಾಶ್ರೀ-ಅನುಶ್ರೀ ಅಭಿನಯದ `ಉಪ್ಪು ಹುಳಿ ಖಾರ’ ಒಂದಾಂದ್ರೆ, ಇನ್ನೊಂದು ಚೇತನ್, ಲತಾ ಹೆಗಡೆ ನಟನೆಯ `ಅತಿರಥ’
ಆರಂಭದಿಂದಲೂ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಉಪ್ಪು ಹುಳಿ ಖಾರ. ಆಕರ್ಷಕ ಟೈಟಲ್‍ನ ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ನಿರ್ದೇಶಕರು. ಬಹುತಾರಾಗಣದ ಈ ಚಿತ್ರದಲ್ಲಿ ಅನುಶ್ರೀ, ಜಯಶ್ರೀ, ಶಶಿ, ಶರತ್ ಮುಂತಾದವರು ಅಭಿನಯಿಸಿದ್ದಾರೆ. ನಟಿ ಮಾಲಾಶ್ರೀ ಇವ್ರನ್ನೆಲ್ಲಾ ದಾರಿಗೆ ತರುವ ದೇವಿ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಖಡಕ್ ಡೈಲಾಗ್ ಹೊಡೆದು ಮಾಲಾಶ್ರೀ ಅಭಿಮಾನಿಗಳನ್ನ ರಂಜಿಸಲಿದ್ದಾರೆ.
ರಾಜ್ಯದ 200 ಚಿತ್ರಮಂದಿರಗಳಲ್ಲಿ `ಉಪ್ಪು ಹುಳಿ ಖಾರ’ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿನ ರೋ ರೋ ರೋಮಿಯೋ ಹಾಡು ಈಗಾಗ್ಲೇ ಫೇಮಸ್ ಆಗಿದೆ. ಎಂ ರಮೇಶ್ ನಿರ್ದೇಶನ ಈ ಚಿತ್ರಕ್ಕಿದೆ. `ಉಪ್ಪು ಹುಳಿ ಖಾರ’ದ ರುಚಿಗಳಂತೆ ಮನುಷ್ಯನ ಜೀವನದಲ್ಲಿ ಬರುವ ಅನುಭವವನ್ನ ಅಚ್ಚುಕಟ್ಟಾಗಿ ಹೇಳಲಾಗಿದೆ. ಒಂದು ವಿಭಿನ್ನ ಶೈಲಿಯ ನಿರೂಪಣೆಯ ಈ ಚಿತ್ರ ಭರಪೂರ ಎಂಟರ್ ಟೈನ್ಮೆಂಟ್ ಕೊಡೋಕೆ ಇಂದು ಥಿಯೇಟರ್‍ಗೆ ಬರಲಿದೆ.
`ಉಪ್ಪು ಹುಳಿ ಖಾರ’ ಚಿತ್ರದ ಜೊತೆ ತೆರೆಕಾಣೋಕೆ ಸಿದ್ಧವಾಗಿರೋ ಇನ್ನೊಂದು ಚಿತ್ರವೇ `ಅತಿರಥ’. ಮಹೇಶ್ ಬಾಬು ನಿರ್ದೇಶನದ ಅತಿರಥ ರಾಜ್ಯದಲ್ಲಿ 150ಕ್ಕೂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ಆ ದಿನಗಳು ಚೇತನ್, ಲತಾ ಹೆಗಡೆ ಜೋಡಿಯಾಗಿ ಅಭಿನಯಿಸಿದ್ದಾರೆ.
ಸಾಧು ಕೋಕಿಲಾ ಮಗ ಸುರಾಗ್ ಸಂಗೀತ ನಿರ್ದೇಶನ ಈ ಅತಿರಥ ಚಿತ್ರಕ್ಕಿದೆ. ಚಿತ್ರದಲ್ಲಿ ಚೇತನ್ ಟಿವಿ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸ್ಕೊಂಡಿದ್ದಾರೆ. ತನಿಖೆ-ಅಪರಾಧ ಅಲ್ಲೊಂದು ಲವ್ ಸ್ಟೋರಿಯನ್ನೊಳಗೊಂಡ ಒಂದು ಅಪರೂಪದ ಕಥೆ ಚಿತ್ರದಲ್ಲಿದೆ. ಒಟ್ಟಿನಲ್ಲಿ `ಅತಿರಥ’ ಕೂಡ ಸಿನಿಪ್ರಿಯರಿಗೆ ಭಾರೀ ಭೋಜನ ಕೊಡೋಕೆ ರೆಡಿಯಾಗಿದೆ.