Tag: Atharva

  • ಸತ್ಯ ಪ್ರಕಾಶ್ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರದ ಶೂಟಿಂಗ್ ಶುರು

    ಸತ್ಯ ಪ್ರಕಾಶ್ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರದ ಶೂಟಿಂಗ್ ಶುರು

    ತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇತ್ತೀಚಿಗೆ ಮುಹೂರ್ತ ಕಂಡ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಡಿ.ಸತ್ಯಪ್ರಕಾಶ್ (Satya Prakash) ನಿರ್ದೇಶನದ ‘X&Y’ ಚಿತ್ರದ ಚಿತ್ರೀಕರಣಕ್ಕೆ (Shooting) ಚಾಲನೆ ಸಿಕ್ಕಿದೆ. ಡಿಸೆಂಬರ್ 21 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ,  ಫ್ಯಾಂಟಸಿ ಮತ್ತು ಭಾವನಾತ್ಮಕ ದೃಶ್ಯಗಳಿಂದ ಈ ಸಿನಿಮಾ ಪ್ರೇಕ್ಷಕರನ್ನು ತೇಲಿಸಲಿದೆ ಎನ್ನುತ್ತಾರೆ ನಿರ್ದೇಶಕ ಡಿ.ಸತ್ಯಪ್ರಕಾಶ್.

    ಒಂದು ತಿಂಗಳು ಶೂಟಿಂಗ್ ಮುಗಿಸಿ, ಹೊಸವರ್ಷದ ಫೆಬ್ರವರಿಯಲ್ಲಿ ಮಂಗಳೂರಿಗೆ ಪ್ರಯಾಣ ಬೆಳಸಲಿದೆ. ಹೊಸ ಚಿತ್ರದಲ್ಲಿ ಸತ್ಯಪ್ರಕಾಶ್ ಮತ್ತು ಅಥರ್ವ ಪ್ರಕಾಶ್ (Atharva) ನಾಯಕರಾಗಿ ಅಭಿನಯಿಸುತ್ತಿದ್ದು, ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಬಿ.ಎಸ್ ಕೆಂಪರಾಜ್ ಸಂಕಲನವಿದ್ದು, ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಹಲವು ನಿರ್ದೇಶಕರು ತಮ್ಮ ವಿಭಿನ್ನ ರೀತಿಯ ಕಥೆಯನ್ನು ತೆರೆ ಮೇಲೆ ತರಲು ತಾವೇ ನಟನೆಗಿಳಿಯುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯಪ್ರಕಾಶ್‌ (Satya Prakash). ರಾಮಾ ರಾಮಾ ರೇ (Rama Rama Re) ಮತ್ತು ಒಂದಲ್ಲಾಎರಡಲ್ಲಾ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಮಾಡಿದ್ದ ಇವರು ತಮ್ಮ ಮೊದಲೆರೆಡು ಸಿನಿಮಾಗಳಿಗೆ ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು. ಕೆಲ ದಿನಗಳ ಹಿಂದೆಯಷ್ಟೇ ಇವರ ನಿರ್ದೇಶನಲ್ಲಿ (Director) ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಎಂಬ ಸಿನಿಮಾ ಮೂಡಿ ಬಂದಿತ್ತು. ನಿರ್ದೇಶನದ ಜತೆಗೆ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಾಡುವ ಸತ್ಯ ಸಿನಿಮಾಗಳ ವಿತರಣೆಯನ್ನು ಸಹ ಕಳೆದ ಒಂದೂವರೆ  ವರ್ಷಗಳಿಂದ ಮಾಡುತ್ತಿದ್ದಾರೆ.

    ಕೊಂಚ ಫ್ಯಾಂಟಸಿ ಮತ್ತು ಕಮರ್ಷಿಯಲ್‌ ಎಲಿಮೆಂಟ್‌ಗಳಿರುವ ಈ ಹೊಸ ಸಿನಿಮಾದಲ್ಲಿ ಫ್ರೆಶ್‌ ಆಗಿರುವ ನಕ್ಕು ನಗಿಸುವಂತಹ ಕಥೆಯನ್ನು ಸಿನಿಮಾದಲ್ಲಿ ಸತ್ಯಪ್ರಕಾಶ್‌ ಹೇಳಲಿದ್ದಾರೆ. ಈ ಚಿತ್ರದಲ್ಲಿ ಸತ್ಯಪ್ರಕಾಶ್‌ ಜತೆಗೆ ಅಥರ್ವ ಪ್ರಕಾಶ್ ಎಂಬ ಯುವಕ ಕೂಡಾ ನಟಿಸುತ್ತಿದ್ದಾರೆ. ಸತ್ಯಪ್ರಕಾಶ್‌ ಅವರೇ ನಿರ್ದೇಶನ ಮಾಡಿದ್ದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸಿನಿಮಾದಲ್ಲಿ ಅಥರ್ವ ಪ್ರಕಾಶ್   ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು.

     

    ‘ಈಗ ಮಾಡಲು ಹೊರಟಿರುವ ಕಥೆಯನ್ನು ನಾನೇ ಬರೆದಿದ್ದೇನೆ. ಈ ಚಿತ್ರದಲ್ಲಿಎರಡು ಪ್ರಮುಖ ಪಾತ್ರಗಳು ಬರಲಿದ್ದು, ಒಂದನ್ನು ನಾನು ನಿರ್ವಹಿಸುತ್ತಿದ್ದೇನೆ. ಪಾತ್ರಕ್ಕೆ ನಾನು ಸೂಕ್ತವಾಗಿ ಹೊಂದಿಕೆಯಾಗುತ್ತೇನೆ ಎಂದು ಅನಿಸಿ ಮೇಲೆ ನಟನಾಗಲು ನಿರ್ಧರಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರನ್ನು ನಕ್ಕು ನಗಿಸುತ್ತಾ ಒಂದು ಭಾವನಾತ್ಮಕ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಾಗಲಿದೆ.’ಎನ್ನುವುದು ಸತ್ಯಪ್ರಕಾಶ್‌ ಮಾತು.

  • ‘ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾರ್ತಿಕ್ ರಾಜು

    ‘ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾರ್ತಿಕ್ ರಾಜು

    ನೆ ದೇವ್ರು, ಹಾಲುಂಡ ತವರು, ಕರುಳಿನ ಕೂಗು ಮುಂತಾದ ಯಶಸ್ವಿ ಚಿತ್ರಗಳ ನಿರ್ಮಾಪಕ ವೈಜಾಕ್ ರಾಜು ಅವರ ಪುತ್ರ ಕಾರ್ತಿಕ್ ರಾಜು (Karthik Raju) ‘ಅಥರ್ವ’ (Atharva) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಥರ್ವ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

    ನಮ್ಮ ತಂದೆ ವೈಜಾಕ್ ರಾಜು, ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ನಾನು ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕೆಂಬ ನನ್ನ ಬಹುದಿನ ಕನಸು ಈಗ ಈಡೇರಿದೆ. ಇದಕ್ಕೂ ಮೊದಲು ನಾನು ಪುನೀತ್ ರಾಜಕುಮಾರ್ ಅವರ ವೀರ ಕನ್ನಡಿಗ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅಥರ್ವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ.  ಮಹೇಶ್ ರೆಡ್ಡಿ (Mahesh Reddy) ಈ ಚಿತ್ರದ ನಿರ್ದೇಶಕರು. ನುರಿತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರೀಕರಣ ಮುಕ್ತಾಯವಾಗಿದೆ. ನವೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಚಿತ್ರದ ನಾಯಕ ಕಾರ್ತಿಕ್ ರಾಜು ತಿಳಿಸಿದರು.

    ನಾನು ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಚೊಚ್ಚಲ ಚಿತ್ರ. ಕ್ಲೂಸ್ ಡಿಪಾರ್ಟ್ಮೆಂಟ್ ಎಂಬುದು ಪೊಲೀಸ್ ಡಿಪಾರ್ಟ್ಮೆಂಟ್ ವ್ಯಾಪ್ತಿಗೆ ಬರುತ್ತದೆ. ಈ ಕ್ಲೂಸ್ ಡಿಪಾರ್ಟ್ಮೆಂಟ್ ಬಳಸಿಕೊಂಡು ಹೆಚ್ಚಿನ ಸಿನಿಮಾಗಳು ಬಂದಿಲ್ಲ. ನಮ್ಮ ಚಿತ್ರದಲ್ಲಿ ಒಂದು ಕೊಲೆಯ ಸತ್ಯವನ್ನು ತಿಳಿಯಲು ಕ್ಲೂಸ್ ಡಿಪಾರ್ಟ್ಮೆಂಟ್ ಎಷ್ಟು ಮುಖ್ಯ ಎಂಬುದನ್ನು ತೋರಿಸಿದ್ದೇವೆ.‌ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ನೋಡಿ ಹಾರೈಸಿ ಎನ್ನುತ್ತಾರೆ ನಿರ್ದೇಶಕ ಮಹೇಶ್ ರೆಡ್ಡಿ.

    ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸಿರುವುದಾಗಿ ನಾಯಕಿ ಸಿಮ್ರಾನ್ ಹೇಳಿದರು. ನಿರ್ಮಾಪಕ ಸುಭಾಷ್ ನೂತಲಪಾಟಿ , ಹಿರಿಯ ನಿರ್ಮಾಪಕ ವೈಜಾಕ್ ರಾಜು ಹಾಗೂ ವಿತರಕ ಮಾರ್ಸ್ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಪುನರ್ ವಿವಾಹ’ ನಟ ಅಥರ್ವ್‌ ಹೊಸ ಚಿತ್ರಕ್ಕೆ ಸುದೀಪ್ ಸಾಥ್

    ‘ಪುನರ್ ವಿವಾಹ’ ನಟ ಅಥರ್ವ್‌ ಹೊಸ ಚಿತ್ರಕ್ಕೆ ಸುದೀಪ್ ಸಾಥ್

    ಕಿರುತೆರೆಯ ಜನಪ್ರಿಯ ‘ಪುನರ್ ವಿವಾಹ’, ‘ಪತ್ತೇದಾರಿ ಪ್ರತಿಭಾ’ ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿದ್ದ ಅಥರ್ವ್‌ ಈಗ ಸ್ಯಾಂಡಲ್‌ವುಡ್‌ಗೆ (Sandalwood) ಪದಾರ್ಪಣೆ ಮಾಡುತ್ತಿದ್ದಾರೆ. ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾದಲ್ಲಿ ಅಥರ್ವ್‌ ನಟಿಸಿದ್ದು, ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಾಜೀವ್ ಕಿರಣ್ ವೆನಿಯಲ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದು, ಹೊಸ ಪ್ರತಿಭೆ ಅಥರ್ವ್‌ಗೆ ಸುದೀಪ್ ಸಾಥ್ ನೀಡಿದ್ದಾರೆ.

    ಇದೀಗ ಬಿಡುಗಡೆಯಾಗಿರುವ ಟೀಸರ್‌ಗೆ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಕಿಚ್ಚ ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುವ ವಿಚಾರ ಇದೇನು ಮೊದಲಲ್ಲ. ಹೊಸಬರ ಪ್ರಯತ್ನಕ್ಕೆ ಸಾಥ್ ನೀಡುತ್ತಲೇ ಬಂದಿದ್ದಾರೆ. ಈ ಬಾರಿ ‘ಟೇಲ್ಸ್ ಆಫ್ ಮಹಾನಗರ’ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಅಂದಹಾಗೆ, ಈ ಸಿನಿಮಾವು ಸದ್ಯದಲ್ಲೇ ತೆರೆಗೆ ಬರಲಿದೆ. ‘ಟೇಲ್ಸ್ ಆಫ್ ಮಹಾನಗರ’ ಚಿತ್ರಕ್ಕೆ ಅಥರ್ವ್ ಅವರೇ ಕಥೆ ಬರೆದಿದ್ದು, ನಿರ್ದೇಶಕರ ಜೊತೆಗೂಡಿ ಚಿತ್ರಕಥೆಗೆ ಸಾಥ್‌ ನೀಡಿದ್ದಾರೆ. ರಿಲೀಸ್ ಆಗಿರುವ ಟೀಸರ್‌ಗೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ಗೆಜ್ಜೆನಾದ, ನಂದ ಲವ್ಸ್ ನಂದಿತಾ, ಕನ್ನಡದ ಕಂದ, ಆಟ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ವಿಜಯ್ ಕುಮಾರ್ ಅವರ ಪುತ್ರ ಅಥರ್ವ್‌. ಇದೀಗ ‘ಟೇಲ್ಸ್ ಆಫ್ ಮಹಾನಗರ’ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ತಮ್ಮ ಪುತ್ರ ಮೊದಲ ಸಿನಿಮಾವನ್ನು ವಿಜಯ್ ಕುಮಾರ್ ಅವರು ಧರ್ಮೇಂದ್ರ ಎಂ ರಾವ್ ಎಂಬುವವರ ಜೊತೆಗೆ ಸೇರಿ ನಿರ್ಮಾಣವನ್ನು ಮಾಡಿದ್ದಾರೆ. ಇದನ್ನೂ ಓದಿ:Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    ಮಹಾನಗರವೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿದ್ದು, ಹೆಣ್ಣು, ಅಧಿಕಾರ- ಧರ್ಮಕ್ಕೆ ಸಂಬಂಧಿಸಿದ ಹಾಗೆ ಮೂರು ವಿಭಿನ್ನ ಕಥೆಗಳು ಸಿನಿಮಾದಲ್ಲಿ ಇವೆ. ಕನ್ನಡತಿ ಧಾರಾವಾಹಿ ವಿಲನ್ ಸಾನಿಯಾ ಪಾತ್ರದ ಮೂಲಕ ಖ್ಯಾತಿ ಪಡೆದ ರಮೋಲಾ ಅವರು ಈ ಸಿನಿಮಾಗೆ ನಾಯಕಿಯಾಗಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಮಾನದಲ್ಲೂ ಯಶ್-ರಾಧಿಕಾ ಪಂಡಿತ್ ಅವರ ಮಕ್ಕಳ ಆಟ

    ವಿಮಾನದಲ್ಲೂ ಯಶ್-ರಾಧಿಕಾ ಪಂಡಿತ್ ಅವರ ಮಕ್ಕಳ ಆಟ

    ಟ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳೊಂದಿಗೆ ವಿಮಾನ ಯಾನ ಮಾಡಿದ್ದಾರೆ. ವಿಮಾನದಲ್ಲೇ ಇಬ್ಬರೂ ಮಕ್ಕಳು ಒಂದೊಂದು ಪುಸ್ತಕ ಹಿಡಿದುಕೊಂಡು, ಅದರೊಂದಿಗೆ ಆಟವಾಡುತ್ತಿರುವ ಸನ್ನಿವೇಶವನ್ನು ಸೆರೆ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಾಧಿಕಾ ಪಂಡಿತ್. ಇದನ್ನೂ ಓದಿ : ನಟ ಚೇತನ್ ಬಂಧನ ಹಿಂದಿನ ರೋಚಕ ಸ್ಟೋರಿ : ಜೈಲಿನಲ್ಲಿ ಚೇತನ್ 4ನೇ ದಿನ

    ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋ ಹಂಚಿಕೊಂಡಿದ್ದು ಮಾತ್ರವಲ್ಲ, ‘ಇನ್ ಫ್ಲೈಟ್ ಎಂಟರ್ ಟೇನ್ಮೆಂಟ್’ ಎಂದೂ ಅದಕ್ಕೆ ಅಡಿಬರಹ ಕೊಟ್ಟಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಕಲಾವಿದನ ಮಕ್ಕಳು  ಇದೀಗ ಫ್ಲೈಟ್ ನಲ್ಲಿ ಮನರಂಜನೆ ಕೊಡುವಷ್ಟು ಬೆಳೆದಿದ್ದು ಹೆಮ್ಮೆ ಎಂದು ಕೆಲವರು ಈ ಫೋಟೋಗೆ ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ಮುಂಬೈ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಯಶ್ ದಂಪತಿ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಸೆರೆ ಹಿಡಿದಿರುವ ಫೋಟೋ ಇದಾಗಿದ್ದು, ಮಕ್ಕಳ ಮನರಂಜನೆಯ ಕ್ಷಣಗಳನ್ನು ರಾಧಿಕಾ ಸೆರೆ ಹಿಡಿದು, ಅಭಿಮಾನಿಗಳಿಗಾಗಿ ಆ ಫೋಟೋ ಹಂಚಿಕೊಂಡಿದ್ದಾರೆ.

  • ಅಬ್ಬರಿಸಿದ ಅಥರ್ವ: ಪವರ್‌ಫುಲ್ ಹೀರೋ ಪವನ್ ತೇಜ!

    ಅಬ್ಬರಿಸಿದ ಅಥರ್ವ: ಪವರ್‌ಫುಲ್ ಹೀರೋ ಪವನ್ ತೇಜ!

    ಅರುಣ್ ನಿರ್ದೇಶನದ ಅಥರ್ವ ಚಿತ್ರದ ಮೂಲಕ ಚಿರಂಜೀವಿ ಸರ್ಜಾರ ಅಳಿಯ ಪವನ್ ತೇಜಾ ನಾಯಕನಾಗಿರುವ ಅಥರ್ವ ಇಂದು ತೆರೆಗೆ ಬಂದಿದೆ. ಹುಟ್ಟು ಸಾವುಗಳ ನಡುವೆ ಘಟಿಸೋ ಸೂಕ್ಷ್ಮ ಕಥಾ ಹಂದರ ಹೊಂದಿರೋ ಈ ಚಿತ್ರದ ಮೂಲಕ ಪವನ್ ತೇಜಾ ಮಾಸ್ ಲುಕ್ಕಿನಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಪವನ್ ಮತ್ತು ಯುವ ಖಳನಟ ಯಶವಂತ್ ಶೆಟ್ಟಿ ನಡುವೆ ಈ ಚಿತ್ರದಲ್ಲಿ ಭೀಕರ ಕಾಳಗ ಕೂಡಾ ಅನಾವರಣಗೊಂಡಿದೆ! ಅಥರ್ವ ಚಿತ್ರದಲ್ಲಿ ಪವನ್ ತೇಜಾ ಪಕ್ಕಾ ಮಾಸ್ ಲುಕ್ಕಿನಲ್ಲಿ ದಿಗ್ದರ್ಶನ ನೀಡಿದ್ದಾರೆ.

    ಅದಕ್ಕೆ ಸರಿಯಾಗಿ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ನೆಲೆಯೂರುತ್ತಿರುವ ಯಶವಂತ್ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಅಬ್ಬರಿಸಿದ್ದಾರೆ.

    ಅಥರ್ವ ಎಂದರೆ ನರಸಿಂಹಸ್ವಾಮಿಯಂತೆ. ಹೀರೋ ಕೂಡಾ ನರಸಿಂಹದೇವರ ಪರಮಭಕ್ತ. ಆದರೆ ನಾಯಕಿಯ ದೃಷ್ಟಿಯಲ್ಲೇ ಹೀರೋನೇ ವಿಲನ್ನು. ಆಕೆ ಹಾಗೆ ತಿಳಿದುಕೊಳ್ಳಲು ಕಾರಣ ಸಂದರ್ಭ. ತಾಯಿಯಲ್ಲದ ಆಕೆಗೆ ತಂದೆಯೇ ಸರ್ವಸ್ವ. ಆಕೆ ಜೀವಕ್ಕೆ ಜೀವವಾಗಿ ಪ್ರೀತಿಸೋ ತಂದೆಯೇ ಇಲ್ಲವಾಗುತ್ತಾನೆ. ಯಾರೋ ಮಾಡಿದ ತಪ್ಪು ಮತ್ತೊಬ್ಬನ ಹೆಗಲಿಗೆ ನೇತುಬೀಳುತ್ತದೆ. ತನ್ನದಲ್ಲದ ತಪ್ಪನ್ನು ಸಾಬೀತು ಮಾಡಲು ನಾಯಕ ನಟ ನಾಯಕಿಯ ತಂದೆಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಬೇಕಾಗುತ್ತದೆ. ಈ ನಡುವೆ ತನ್ನಪ್ಪನಿಗೆ ಕೊಟ್ಟ ಭಾಷೆಯ ಕಾರಣಕ್ಕೆ ಆಕೆ ಮತ್ತೊಬ್ಬನನ್ನು ಮದುವೆಯಾಗಬೇಕಾದ ಸಂದಿಗ್ಧ ಎದುರಾಗುತ್ತದೆ. ಕಡೆಗೂ ಪ್ರೀತಿಸಿದವನನ್ನೇ ಕೈ ಹಿಡಿಯುತ್ತಾಳಾ ಅಥವಾ ತಂದೆಗೆ ಕೊಟ್ಟ ಮಾತಿಗೆ ಒಪ್ಪಿ ಬೇರೊಬ್ಬನ ಜೊತೆಗಾತಿಯಾಗುತ್ತಾಳಾ ಅನ್ನೋದು ಕುತೂಹಲ ಹುಟ್ಟಿಸುವ ವಿಚಾರ.

    ನಿರ್ದೇಶಕ ಅರುಣ್ ಸಿನಿಮಾವನ್ನು ಸುಂದರವಾಗಿಸುವ ಭರದಲ್ಲಿ ಚಿತ್ರಕತೆಯ ಬಗ್ಗೆ ತಲೆಕೆಡಿಸಿಕೊಳ್ಳೋದನ್ನು ಮರೆತಂತೆ ಕಾಣುತ್ತದೆ. ರಂಗಭೂಮಿಯಲ್ಲಿ ಪಳಗಿರುವ ಪವನ್ ತೇಜ ಸಿನಿಮಾಗೆ ಬೇಕಿರುವ ಗ್ರಾಮರನ್ನು ಒಂಚೂರು ಒಗ್ಗಿಸಿಕೊಂಡರೂ ಕನ್ನಡ ಚಿತ್ರತಂಗದಲ್ಲಿ ಸಮರ್ಥ ನಾಯಕನಟನಾಗಿ ನೆಲೆ ನಿಲ್ಲಬಹುದು. ರಾಘವೇಂದ್ರ ನೀಡಿರುವ ಸಂಗೀತ ಹಿತವಾಗಿದೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಎಂದಿನಂತೆ ಲೀಲಾಜಾಲವಾಗಿ ನಟಿಸಿದ್ದಾರೆ. ಶಿವಸೇನ ಅವರ ಛಾಯಾಗ್ರಹಣ ಸಿನಿಮಾದ ದೊಡ್ಡ ಶಕ್ತಿಯಾಗಿದೆ. ಒಟ್ಟಾರೆ ಅಥರ್ವ ಖಡಕ್ಕಾದ ಕಮರ್ಷಿಲ್ ಚಿತ್ರವಾಗಿದೆ.

  • ಡಬಲ್ ಇಂಜಿನ್, ಅಥರ್ವ ಈ ವಾರ ಬಿಡುಗಡೆ

    ಡಬಲ್ ಇಂಜಿನ್, ಅಥರ್ವ ಈ ವಾರ ಬಿಡುಗಡೆ

    ಬೆಂಗಳೂರು: ಎಸ್ ಆರ್ ಎಸ್ ಲಾಂಛನದಲ್ಲಿ ತಯಾರಾಗಿರುವ ಮನರಂಜನಾತ್ಮಕ ಚಿತ್ರ ‘ಡಬಲ್ ಇಂಜಿನ್’ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ ಬಾಂಬೆ ಮಿಠಾಯಿ ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡ ಚಂದ್ರ ಮೋಹನ್ ಈ ಚಿತ್ರವನ್ನೂ ಸಂಪೂರ್ಣ ಮನರಂಜನೆಯ ಅಂಶಗಳೊಂದಿಗೆ ತಯಾರು ಮಾಡಿದ್ದಾರೆ.

    ಅರುಣ್ ಕುಮಾರ್ ಎನ್, ಶ್ರೀಕಾಂತ್ ಮಠಪತಿ, ಮಂದಾರ ಎ, ಮಧು ಎಸ್ ಆರ್ ಎಸ್ ಶುಂಠಿ ಕಾಫಿ, ಮಂಜುನಾಥ್ ನಂಜಪ್ಪ, ಪದ್ಮ ಕೃಷ್ಣಮೂರ್ತಿ, ರಾಜು ಪಟೇಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಈ ಚಿತ್ರದ ವಿತರಣೆಯನ್ನು ಮಾಡುತ್ತಿದ್ದಾರೆ.

    ಸುಮನ್ ರಂಗನಾಥ್, ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕ ಮಲ್ನಾಡ್, ಸಾಧು ಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ತಾರಾಗಣದ ಈ ಚಿತ್ರದಲ್ಲಿ ಮೂವರು ಯುವಕರು ಹಳ್ಳಿಯಲ್ಲಿ ವ್ಯವಸಾಯವನ್ನು ಬಿಟ್ಟು ಬಹುಬೇಗ ಶ್ರೀಮಂತರಾಗಲು ಹೊರಟು ಅನುಭವಿಸುವ ಸಂದರ್ಭಗಳು ಪ್ರಮುಖವಾದವು. ಸೂರ್ಯ ಕಿರಣ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    ಇದೇ ವಾರ ಅಥರ್ವ ಬರುತ್ತಿದ್ದಾನೆ: ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದಿಂದ ಬರುತ್ತಿರುವ ಮತ್ತೊಬ್ಬ ನಾಯಕ. ಅವರೇ ಪವನ್ ತೇಜ. ಮಹಾ ಸಿಂಹ ಮೂವೀಸ್ ಅಡಿಯಲ್ಲಿ ವಿನಯ್ ಕುಮಾರ್ ಎಚ್ ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶಕರು ಅರುಣ್. ರಕ್ಷಯ್ ಎಸ್ ವಿ ಸಹ ನಿರ್ಮಾಪಕರು. ಇದನ್ನೂ ಓದಿ: ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

    ಹಲವು ತಾಕತ್ತುಗಳ ಸಂಗಮವನ್ನು ಪ್ರಥಮ ಪ್ರಯತ್ನದಲ್ಲೇ ಪವನ್ ತೇಜ ನಿಭಾಯಿಸುತ್ತಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ, ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

    ರಾಘವೇಂದ್ರ ಸಂಗೀತ ನಿರ್ದೇಶನ, ಶಿವ ಸೇನಾ ಛಾಯಾಗ್ರಹಣ, ಮೋಹನ್ ನೃತ್ಯ, ರಾಜು ಕಲಾ ನಿರ್ದೇಶನ, ಸಂತೋಷ್ ಎಂ ಸಂಭಾಷಣೆ, ವಿಜೇತ ಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

    ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

    ಬೆಂಗಳೂರು: ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ಕುಟುಂಬದ ಚಿರಂಜೀವಿ ಸರ್ಜಾ, ಧೃವ ಸರ್ಜಾ ಮುಂತಾದವರು ನೆಲೆ ಕಂಡುಕೊಂಡಿದ್ದಾರೆ. ಇದೀಗ ಬಿಡುಗಡೆಗೆ ತಯಾರಾಗಿರುವ ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಮತ್ತೋರ್ವ ಅಳಿಯ ಪವನ್ ತೇಜಾ ಕೂಡಾ ಹೀರೋ ಆಗಿ ಹೊರ ಹೊಮ್ಮಲಿದ್ದಾರೆ. ಮಾವನ ಬುದ್ಧಿಮಾತುಗಳನ್ನು ಪರಿಪಾಲಿಸುತ್ತಾ ಹೀರೋ ಆಗುವ ಕನಸನ್ನು ನನಸು ಮಾಡಿಕೊಳ್ಳೋ ಹಾದಿಯಲ್ಲಿರೋ ಪವನ್ ತೇಜಾ ಆರಂಭ ಪ್ರಯತ್ನದಲ್ಲಿಯೇ ವಿಶಿಷ್ಟವಾದೊಂದು ಕಥೆಯ ಮೂಲಕ ಅನಾವರಣಗೊಳ್ಳುತ್ತಿದ್ದಾರೆ.

    ಅರುಣ್ ನಿರ್ದೇಶನದ ಅಥರ್ವ ಚಿತ್ರವನ್ನು ರಕ್ಷಯ್ ಎಸ್.ವಿ ನಿರ್ಮಾಣ ಮಾಡಿದ್ದಾರೆ. ಮನುಷ್ಯ ಜೀವನದ ಆರಂಭ ಮತ್ತು ಅಂತ್ಯಗಳ ನಡುವಿನ ಯಾನದ ಕಥಾನಕ ಹೊಂದಿರೋ ಈ ಚಿತ್ರ ಈಗಾಗಲೇ ನಾನಾ ರೀತಿಯಲ್ಲಿ ಜನಮನ ಸೆಳೆದುಕೊಂಡಿದೆ. ಬಹುಶಃ ಪವನ್ ತೇಜಾ ಅರ್ಜೆಂಟು ಮಾಡಿದ್ದರೆ ಅದ್ಯಾವತ್ತೋ ಹೀರೋ ಆಗುತ್ತಿದ್ದರು. ಖುದ್ದು ಪವನ್ ಗೇ ಅಂಥಾದ್ದೊಂದು ಅವಸರ ಇತ್ತಂತೆ. ಆದರೆ ಅದನ್ನೆಲ್ಲ ತಡೆದುಕೊಂಡು ಸಂಪೂರ್ಣ ಕಸರತ್ತು ಮುಗಿಸಿಕೊಂಡೇ ಚಿತ್ರರಂಗಕ್ಕೆ ಬರುವಂತೆ ಮಾಡಿದ್ದು ಅವರ ಮಾವ ಅರ್ಜುನ್ ಸರ್ಜಾ ಅವರ ಬುದ್ಧಿಮಾತು!

    ಸಿನಿಮಾ ವಾತಾವರಣದಲ್ಲಿಯೇ ಬೆಳೆದಿದ್ದ ಪವನ್ ಗೆ ಕಾಲೇಜು ದಿನಗಳಲ್ಲಿಯೇ ಹೀರೋ ಆಗುವ ತುಡಿತ ಇತ್ತಂತೆ. ಇದನ್ನು ತಡೆದುಕೊಳ್ಳಲಾಗದೆ ತನ್ನ ಮಾವ ಅರ್ಜುನ್ ಸರ್ಜಾ ಅವರ ಮುಂದೆ ಅದನ್ನು ಹೇಳಿಕೊಂಡಾಗ ಅವರಿಂದ ‘ಹೀರೋ ಆಗೋ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ಅದಕ್ಕೆ ತಯಾರಿ ಬೇಕಾಗುತ್ತೆ. ಅಂಥಾ ತಯಾರಿ ಮಾಡಿಕೊಂಡು ಬಾ’ ಅಂದಿದ್ದರಂತೆ. ಆ ಕ್ಷಣದಿಂದಲೇ ನಾಟಕಗಳತ್ತ ಮುಖ ಮಾಡಿದ್ದ ಪವನ್ ರಂಗಭೂಮಿಯಲ್ಲಿ ಸಕ್ರಿಯರಾಗಿ ಇಪ್ಪತೈದಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ ನಂತರವಷ್ಟೇ ಮಾವನ ಮಾತಿನಂತೆ ಹೀರೋ ಆಗಲು ಅಣಿಯಾಗಿದ್ದರಂತೆ.

    ಇದೀಗ ಅರುಣ್ ಅವರ ವಿಶಿಷ್ಟ ಕಥೆ ಮತ್ತು ಚಾಲೆಂಜಿಂಗ್ ಆದ ಪಾತ್ರದ ಮೂಲಕ ಪವನ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುವ ಸನ್ನಾಹದಲ್ಲಿದ್ದಾರೆ! ಇದೇ ಜುಲೈ 13ರಂದು ರಾಜ್ಯಾದ್ಯಂತ ಈ ಚಿತ್ರ ತೆರೆಗೆ ಬರುತ್ತಿದೆ.