Tag: Atharv

  • ಖ್ಯಾತ ನಟ ಧನುಷ್ ಸೇರಿದಂತೆ 4 ಜನ ಸ್ಟಾರ್ ನಟರಿಗೆ ಬ್ಯಾನ್ ಬಿಸಿ

    ಖ್ಯಾತ ನಟ ಧನುಷ್ ಸೇರಿದಂತೆ 4 ಜನ ಸ್ಟಾರ್ ನಟರಿಗೆ ಬ್ಯಾನ್ ಬಿಸಿ

    ಮಿಳು ಚಿತ್ರೋದ್ಯಮದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಹೆಸರಾಂತ ನಟ ಧನುಷ್ ಸೇರಿದಂತೆ ನಾಲ್ವರು ಸ್ಟಾರ್ ನಟರಿಗೆ ಅಲ್ಲಿನ ನಿರ್ಮಾಪಕರ ಸಂಘವು ರೆಡ್ ಕಾರ್ಡ್ ನೀಡಿದ್ದು, ನಿರ್ಮಾಪಕರಿಗೆ ಇವರು ಅಪಾರ ಹಾನಿಯನ್ನಿಂಟು ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಿಷೇಧದ ಕಠಿಣ ಕ್ರಮಕ್ಕೆ ಮುಂದಾಗಿದೆ.

    ಎರಡು ದಿನಗಳ ಹಿಂದೆ ನಡೆದ ನಿರ್ಮಾಪಕರ ಸಂಘದ ಸಭೆಯಲ್ಲಿ ವಿಶಾಲ್ (Vishal), ಧನುಷ್ (Dhanush), ಅಥರ್ವ್ (Atharv) ಮತ್ತು ಸಿಂಬುಗೆ (Simbu) ರೆಡ್ ಕಾರ್ಡ್ ನೀಡಿದ್ದು, ಕಠಿಣ ಕ್ರಮದ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:ವರ್ಷಾ ಕಾವೇರಿಗೆ ಮೋಸ? ವರುಣ್‌ ಸ್ಪಷ್ಟನೆ

    ಕಳೆ ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ (Film Chamber) ಹಾಗೂ ಕಲಾವಿದರ  ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು (Producer) ಕಲಾವಿದರ ಮೇಲೆ ಆರೋಪ ಮಾಡಿದ್ದರು.  ಅದರಲ್ಲೂ ಪ್ರಮುಖವಾಗಿ ಧನುಷ್, ರಾಯ್ ಲಕ್ಷ್ಮಿ(Roy Lakshmi) , ಅಮಲಾ ಪೌಲ್ (Amala Paul) ವಿರುದ್ಧವೂ ದೂರು ದಾಖಲಾಗಿತ್ತು.

    ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್ ಗಾಗಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್ ಗೆ ನೀಡಿದೆಯಂತೆ.

     

    ಕಾಲ್ ಶೀಟ್ ನೀಡದೇ ಇರುವುದು ಒಂದು ಸಮಸ್ಯೆಯಾದರೆ, ಕೆಲ ನಟಿಯರು ಚಿತ್ರೀಕರಣಕ್ಕೆ ಬಂದರೆ, ಅವರಿಗೆ ಹತ್ತು ಜನ ಸೆಕ್ಯೂರಿಟಿ ಗಾರ್ಡ್ ಗಳು ಬೇಕೆಂದು ಹೇಳುತ್ತಾರಂತೆ. ಇದರಿಂದಾಗಿ ಭಾರೀ ಮೊತ್ತದ ಹಣವನ್ನೇ ಸಂಸ್ಥೆಯು ನೀಡಬೇಕಾಗಿದೆ. ಇದನ್ನು ತಪ್ಪಿಸುವಂತೆ ಫಿಲ್ಮ್ ಚೇಂಬರ್ ಗೆ ಕೆಲವು ನಿರ್ಮಾಪಕರು ಪತ್ರ ಬರೆದಿದ್ದಾರೆ. ಸೆಕ್ಯೂರಿಟಿ ಬೇಕಾದ ನಟಿಯರು ತಾವೇ ದುಡ್ಡು ಕೊಟ್ಟ ನೇಮಿಸಿಕೊಳ್ಳಲಿ ಎನ್ನುವುದು ನಿರ್ಮಾಪಕರ ವಾದವಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿತೆರೆಗೆ ಕಾಲಿಟ್ಟ ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಯ ಅರ್ಥವ್

    ಹಿರಿತೆರೆಗೆ ಕಾಲಿಟ್ಟ ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಯ ಅರ್ಥವ್

    ಗೆಜ್ಜೆನಾದ, ನಂದ ಲವ್ಸ್ ನಂದಿತಾ, ಕನ್ನಡದ ಕಂದ, ಆಟ ಮುಂತಾದ ಸೂಪರ್ ಹಿಟ್ ಚಿತ್ರಗಳ ಹಾಗೂ ಕಿರುತೆರೆಯ ಸಾಕಷ್ಟು ಯಶಸ್ವಿ ಧಾರಾವಾಹಿಗಳ ನಿರ್ದೇಶಕ ಬಿ.ಎನ್ ವಿಜಯ್ ಕುಮಾರ್(ಗೆಜ್ಜೆನಾದ) (Vijay Kumar) ಈಗ ನಿರ್ಮಾಪಕರಾಗಿದ್ದಾರೆ. ಅಥರ್ವ್ ಪಿಕ್ಚರ್ಸ್ ಅಡಿಯಲ್ಲಿ ಧರ್ಮೇಂದ್ರ ಎಂ ರಾವ್ ಅವರ ಜೊತೆಯಾಗಿ ನೂತನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಏಪ್ರಿಲ್ 13 ರಂದು ಬಿಡುಗಡೆಯಾಗಲಿದೆ.

    ಇದು ಮಹಾನಗರವೊಂದರಲ್ಲಿ ನಡೆಯುವ ಕಥೆಯಾಗಿದೆ. ಮೂರು ವಿಭಿನ್ನ ಕಥೆಗಳು ಚಿತ್ರದಲ್ಲಿದೆ.  ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ: ರಾಕಿಭಾಯ್ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಧಮ್ಕಿ

    ಬಿ.ಎನ್.ವಿಜಯ್ ಕುಮಾರ್ ಅವರ ಪುತ್ರ ಅಥರ್ವ್ (Atharv) ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ ‘ಪುನರ್ ವಿವಾಹ’ ಹಾಗೂ ‘ಪತ್ತೆದಾರಿ ಪ್ರತಿಭಾ’ ದಲ್ಲಿ ಅಥರ್ವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಅಥರ್ವ್ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆಯನ್ನು ಅಥರ್ವ್ ಅವರೆ ಬರೆದಿದ್ದಾರೆ. ಚಿತ್ರಕಥೆ ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಅವರದು.  ‘ಕನ್ನಡತಿ’ ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ.ಸುರೇಶ್ (B. Suresh), ರೂಪಾ ರಾಯಪ್ಪ, ಆಶೀಶ್, ಬಿ.ಎಂ.ವೆಂಕಟೇಶ್, ಮೋಹನ್, ಆರ್ ಜೆ ಅನೂಪ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಸಾಕಷ್ಟು ಡಾಕ್ಯುಮೆಂಟರಿ, ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕಿರಣ್ ವೆನಿಯಲ್ (Rajeev Kiran Venial) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೌಶನ್ ಜಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನ ಹಾಗೂ ಸಿದ್ಧಾರ್ಥ್ ಪರಾಶರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.