Tag: Athani

  • ಅಥಣಿ ತಾಲೂಕಿನ ರೈತರಿಗೂ ಶಾಕ್ – 7 ಎಕ್ರೆ ಜಾಗ ತನ್ನದು ಎಂದ ವಕ್ಫ್‌ ಬೋರ್ಡ್‌

    ಅಥಣಿ ತಾಲೂಕಿನ ರೈತರಿಗೂ ಶಾಕ್ – 7 ಎಕ್ರೆ ಜಾಗ ತನ್ನದು ಎಂದ ವಕ್ಫ್‌ ಬೋರ್ಡ್‌

    ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅಥಣಿ (Athani) ತಾಲೂಕಿನ ರೈತರಿಗೂ ವಕ್ಪ್ ಬೋರ್ಡ್‌ (Waqf Board) ಶಾಕ್ ನೀಡಿದೆ.

    ಶಿರಹಟ್ಟಿ ಗ್ರಾಮದ ರೈತ (Farmers) ಬಸವರಾಜ ಅಡಿವೆಪ್ಪ ಕೊಹಳ್ಳಿ ಅವರ ಪಹಣಿ ಪತ್ರದಲ್ಲಿ ವಕ್ಪ್ ಆಸ್ತಿ ನಮೂದಾಗಿದೆ‌. ಇದನ್ನೂ ಓದಿ: Waqf Land Row | ವಿಜಯಪುರದ 43 ಪ್ರವಾಸಿ ತಾಣಗಳಿಗೆ ವಕ್ಫ್‌ ನೋಟಿಸ್‌

    7 ಎಕರೆ 31 ಗುಂಟೆ ಜಮೀನು ಹೊಂದಿರುವ ಬಸವರಾಜ ಹಾಗೂ ಅವರ ಅಣ್ಣತಮ್ಮಂದಿರ ಹೆಸರಿನಲ್ಲಿರುವ ಪಹಣಿ ಪತ್ರದಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ.

    ವಕ್ಫ ಆಸ್ತಿ ನಮೂದಾದ ಹಿನ್ನೆಲೆಯಲ್ಲಿ ರೈತನ ಕುಟುಂಬದಲ್ಲಿ ಆತಂಕ ಎದುರಾಗಿದೆ. ತಕ್ಷಣ ಸರ್ಕಾರ ಪಹಣಿಯಲ್ಲಿ ನಮೂದಾಗಿರುವ ವಕ್ಫ ಆಸ್ತಿಯನ್ನು ತೆಗೆದು ಹಾಕುವಂತೆ ರೈತರ ಆಗ್ರಹಿಸಿದ್ದಾರೆ.

  • ಆಸ್ತಿ ವಿವಾದ – ಪರಸ್ಪರ ಹೊಡೆದಾಡಿಕೊಂಡು ಪ್ರಾಣಬಿಟ್ಟ ಸಹೋದರರು

    ಆಸ್ತಿ ವಿವಾದ – ಪರಸ್ಪರ ಹೊಡೆದಾಡಿಕೊಂಡು ಪ್ರಾಣಬಿಟ್ಟ ಸಹೋದರರು

    ಚಿಕ್ಕೋಡಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರು ಪರಸ್ಪರ ಹೊಡೆದುಕೊಂಡು ಸಾವನ್ನಪ್ಪಿದ ಘಟನೆ ಬೆಳಗಾವಿಯ (Belagavi) ಅಥಣಿ (Athani) ತಾಲೂಕಿನ ಖೋತವಾಡಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಹಣಮಂತ ರಾಮಚಂದ್ರ ಖೋತ (35) ಹಾಗೂ ಖಂಡೋಭಾ ತಾನಾಜಿ ಖೋತ (30) ಎಂದು ಗುರುತಿಸಲಾಗಿದೆ. ಭೂ ವಿವಾದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಗಳ ನಡುವೆ ಸೋಮವಾರ ರಾತ್ರಿ ಗಲಾಟೆ ನಡೆದಿತ್ತು. ಈ ವೇಳೆ ಒಬ್ಬರಿಗೊಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು. ಹೊಡೆದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಮಹಾರಾಷ್ಟ್ರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಅಥಣಿ ಪೊಲೀಸ್ (Athani Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳಗಾವಿ ಎಸ್‍ಪಿ ಭೀಮಶಂಕರ್ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಳೆ ವ್ಯಾಪಾರಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ

    ಬಳೆ ವ್ಯಾಪಾರಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ

    ಯಾದಗಿರಿ: ಕುಡಿದ ಮತ್ತಿನಲ್ಲಿ ಇಬ್ಬರು ಬಳೆ ವ್ಯಾಪಾರಿಗಳ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಸುರಪುರದ ತಿಂಥಣಿಯಲ್ಲಿ ನಡೆದಿದೆ.

    ಅಥಣಿಯ (Athani) ಮಲ್ಲಪ್ಪ (38) ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಬಾಗಲಕೋಟೆ (Bagalkote) ಮೂಲದ ಮತ್ತೊಬ್ಬ ಬಳೆ ವ್ಯಾಪಾರಿ ಬುರ್ಯಾನ್ ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ತಿಂಥಣಿಯ ಐತಿಹಾಸಿಕ ಮೌನೇಶ್ವರ ಜಾತ್ರೆಯಲ್ಲಿ ಬಳೆ ವ್ಯಾಪಾರ ಮಾಡಲು ಬಂದಿದ್ದರು. ಅಕ್ಕಪಕ್ಕದಲ್ಲೇ ಬಳೆ ಅಂಗಡಿ ಹಾಕಿಕೊಂಡಿದ್ದು, ಇಬ್ಬರ ನಡುವೆ ತಡರಾತ್ರಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಆರಂಭಗೊಂಡಿದೆ. ಗಲಾಟೆ ವೇಳೆ ಮಾತಿಗೆ ಮಾತು ಬೆಳೆದು ಮಲ್ಲಪ್ಪನ ಮೇಲೆ ಬುರ್ಯಾನ್ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಲೋ ಬಿಪಿಯಿಂದ ಪತ್ನಿ ಸಾವೆಂದ ದರ್ಶನ್-‌ ಪತಿಯಿಂದ್ಲೇ ಕೊಲೆ ಅಂತಾ ಪೋಷಕರ ಆರೋಪ

    ಸ್ಥಳಕ್ಕೆ ಸುರಪುರ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬುರ್ಯಾನ್‍ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ತಡೆಗೋಡೆಗೆ ಕಾರು ಡಿಕ್ಕಿ- BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ

  • ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ

    ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ

    ಬೆಳಗಾವಿ: ಜಗದೀಶ್ ಶೆಟ್ಟರ್ (Jagadish Shettar) ಎಲ್ಲಾ ಹುದ್ದೆಗಳನ್ನು ಅನುಭವಿಸಿದ್ದರೂ ಸಹ ಬಿಜೆಪಿ (BJP) ತೊರೆದಿದ್ದಾರೆ. ಅವರೇನೂ ದೊಡ್ಡ ನಾಯಕರಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ವಾಗ್ದಾಳಿ ನಡೆಸಿದ್ದಾರೆ.

    ನಗರದ ಧರ್ಮನಾಥ್ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್.ಕೆ ಅಡ್ವಾಣಿಯಂತಹ (L.K Advani) ದೊಡ್ಡ ನಾಯಕರೇ ಬಹು ದೊಡ್ಡ ತ್ಯಾಗಗಳನ್ನು ಮಾಡಿದ್ದಾರೆ. ಆದರೆ ಎಲ್ಲಾ ಅಧಿಕಾರವನ್ನು ಅನುಭವಿಸಿ ಕೆಲವರು ಪಕ್ಷವನ್ನು ತೊರೆಯುತ್ತಿದ್ದಾರೆ. ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹೋಗುವವರು ಹೋಗಲಿ ಪಕ್ಷ ಸ್ವಚ್ಛ ಆಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: 2018ರಲ್ಲಿ ಕಾಂಗ್ರೆಸ್ ಸೋಲು ಕಾಣಲು ಜಾತಿ ರಾಜಕಾರಣವೇ ಕಾರಣ: ಸಿದ್ದು ವಿರುದ್ಧ ವಾಸು ಕಿಡಿ

    ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಧನಂಜಯ ಜಾಧವ್ ಇಬ್ಬರೂ ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಮೂರನೇಯವರಿಗೆ ಟಿಕೆಟ್ ಸಿಕ್ಕರೂ ಸಭೆಯಲ್ಲಿ ಮನಪೂರ್ವಕವಾಗಿ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸನ್ನಿವೇಶ ಬಿಜೆಪಿಯಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಹೇಳಿದ್ದಾರೆ.

    ಸಂಜಯ್ ಪಾಟೀಲ್ ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಸಂಜಯ್ ಪಾಟೀಲ್ ಹಾಗೂ ಧನಂಜಯ ಜಾಧವ್ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. ಇಬ್ಬರೂ ಗ್ರಾಮೀಣ ಭಾಗದ ಉಸ್ತುವಾರಿ ವಹಿಸಿಕೊಂಡು ಬಿಜೆಪಿಯನ್ನು ಗೆಲ್ಲಿಸಬೇಕು. ಆಗ ಪಕ್ಷ ನಿಮ್ಮನ್ನು ಗುರುತಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

    ಕಾರ್ಯಕರ್ತರು ಬೆಳಗಾವಿ ಜಿಲ್ಲೆಯ 15ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ದೃಢ ಸಂಕಲ್ಪ ಮಾಡಬೇಕು. ವಿಶೇಷವಾಗಿ ಅಥಣಿಗೆ ಬಹಳ ಒತ್ತು ಕೊಡಬೇಕು. ಅಥಣಿ (Athani) ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಬಾವುಟ ಹಾರಿಸಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದೇನೆ. ಅದನ್ನು ಮಾಡಿಯೇ ತೀರುತ್ತೇನೆ ಎಂದು ಅವರು ಲಕ್ಷ್ಮಣ ಸವದಿ (Laxman Savadi) ಅವರಿಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಶೆಟ್ಟರ್‌ರಂತಹ ದೊಡ್ಡ ನಾಯಕರ ಅವಶ್ಯಕತೆ ನಮಗಿಲ್ಲ: ಹೆಚ್‍ಡಿಕೆ

  • ನಾನೇನಾದ್ರೂ ರೇಪ್ ಮಾಡಿದ್ನಾ: ಏನ್ ತಪ್ಪು ಮಾಡಿದ್ದೆ? – ಟಿಕೆಟ್ ಕೈತಪ್ಪಿದ್ದಕ್ಕೆ ಸವದಿ ಬೇಸರ

    ನಾನೇನಾದ್ರೂ ರೇಪ್ ಮಾಡಿದ್ನಾ: ಏನ್ ತಪ್ಪು ಮಾಡಿದ್ದೆ? – ಟಿಕೆಟ್ ಕೈತಪ್ಪಿದ್ದಕ್ಕೆ ಸವದಿ ಬೇಸರ

    ಚಿಕ್ಕೋಡಿ: ನನ್ನನ್ನು ಯಾಕೆ ಡಿಸಿಎಂ ಸ್ಥಾನದಿಂದ ತೆಗದ್ರಿ? ಏನ್ ತಪ್ಪು ಮಾಡಿದ್ದೆ, ಯಾರನ್ನಾದರೂ ರೇಪ್ ಮಾಡಿದ್ನಾ? ಯಾವ ಅಪರಾಧದ ಮೇಲೆ ತೆಗೆದು ಹಾಕಿದ್ರಿ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ (Laxman Savadi) ಅಸಮಾಧಾನ ವ್ಯಕ್ತಪಡಿಸಿದರು.

    ಸೋತರು ಪಕ್ಷ ಡಿಸಿಎಂ ಮಾಡಿದ್ರು ಪಕ್ಷ ಬಿಡ್ತಿದ್ದಾರೆ ಎಂದು ಬಿಜೆಪಿ (BJP) ನಾಯಕರ ಮಾತಿಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಸ್ಥಾನ ಕೊಡಬೇಕೆಂದು ನಾನು ಕೇಳಿದ್ನಾ? ನನಗೆ ಕೊಟ್ಟ ಮೇಲೆ ಕೆಲಸ ಮಾಡಿದೆ ಎಂದ ಅವರು, ಮೊದಲು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ಬಿಡುವ ನನ್ನ ನಿರ್ಧಾರ ಅಚಲ. ಅದನ್ನು ಪ್ರಕಟ ಮಾಡುವ ಪೂರ್ವದಲ್ಲಿ ಏನು ಹೇಳಲ್ಲ. ಪಕ್ಷದಿಂದ ಹೊರಗೆ ಬಂದು ತೀರ್ಮಾನ ಮಾಡುವೆ. ಅಥಣಿ ಹೈಕಮಾಂಡ್ ತೀರ್ಮಾನ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಎಚ್ಚರಿಕೆ ನೀಡಿದರು.

    ಸಿಎಂ ಬೊಮ್ಮಾಯಿ ಅವರಿಂದ ಟಿಕೆಟ್ ಕೈತಪ್ಪಿತ್ತಾ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರು ಹಳೆ ಸ್ನೇಹಿತರು. ಅವರೊಂದು ಪಕ್ಷ, ನಾನೊಂದು ಪಕ್ಷದಲ್ಲಿ ಇದ್ದೆವು. ಅವರ ವಿಚಾರಧಾರೆ ಬೇರೆ ನನ್ನ ವಿಚಾರಧಾರೆ ಬೇರೆ ಆಗಿತ್ತು. ಆನಂತರ ಒಂದೇ ಪಕ್ಷದಲ್ಲಿ ಒಟ್ಟಾಗಿ, ನಾನು ಅವರು ಸಚಿವರಾಗಿ ಕೂಡಿ ಕೆಲಸ ಮಾಡಿದ್ದೇವೆ. ಅನೇಕ ಮುಖಂಡರು ನನ್ನ ನಿರ್ಲಕ್ಷ್ಯ ಮಾಡಿದ್ದಕ್ಕೆ ಬೇಸರವಾಗಿದೆ ಎಂದು ಹೇಳಿದರು.

    ಟಿಕೆಟ್ ತಪ್ಪಿದ್ದಕ್ಕೆ ಪಕ್ಷ ಬಿಡ್ತಿದ್ದಾರೆ ಅಂತಾ ಮೇಲ್ನೋಟಕ್ಕೆ ಕಾರಣ ಅನಿಸುತ್ತದೆ. ಆದರೆ ನನಗಾಗಿರೋ ನೋವು, ಹಿಂಸೆ ಬಹಳಷ್ಟು ಇದೆ. ಆಂತರಿಕ ಹಿಂಸೆಗಳು ಜಿಲ್ಲೆ, ರಾಜ್ಯದಲ್ಲಿ ಅನುಭವಿಸಿರುವೆ. ನನ್ನ ಪಕ್ಷ ತಾಯಿ ಅಂತಾ ತಿಳಿದು ಸುಮ್ಮನಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳಲು ಆಗಿಲ್ಲ. ನನ್ನ ನೋವು ತಡೆದುಕೊಂಡು ಬಂದಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಜನ ಅಬ್ಬೆಪಾರಿಗಳಾಗಿದ್ದಾರೆ : ಪ್ರತಾಪ್ ಸಿಂಹ

    ಡಿಸಿಎಂ ಸ್ಥಾನದಿಂದ ಯಾವುದೇ ಸೂಚನೆ ಇಲ್ಲದೇ ತೆಗೆದರು. ನಾನು ವಿರೋಧ ಮಾಡಿಲ್ಲ. ನಾನು ಎಂದು ಪಕ್ಷ ವಿರೋಧಿ, ಟೀಕೆ ಟಿಪ್ಪಣಿ ನಾನು ಮಾಡಿಲ್ಲ. ನನಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ. ಇನ್ನೊಬ್ಬರಿಗೆ ನಾನು ಮನಸು ನೋವು ಮಾಡಲ್ಲ. ಅವರಿಗೆ ಕೆಡಕು ಬಯಸುವುದಿಲ್ಲ ಎಂದರು. ಇದನ್ನೂ ಓದಿ: ಚುನಾವಣೆ ವೇಳೆ ಶಾಂತಿ ಕದಡಲು VHP ಅಧ್ಯಕ್ಷನ ಮೇಲೆ ಫೈರಿಂಗ್: ಬೋಪಯ್ಯ

  • ಬಿಜೆಪಿಗೆ ಕಬ್ಬಿಣದ ಕಡಲೆಯಾದ ಅಥಣಿ ಕ್ಷೇತ್ರ

    ಬಿಜೆಪಿಗೆ ಕಬ್ಬಿಣದ ಕಡಲೆಯಾದ ಅಥಣಿ ಕ್ಷೇತ್ರ

    ಚಿಕ್ಕೋಡಿ: ಅಭ್ಯರ್ಥಿಗಳ ಆಯ್ಕೆಗೂ ಮುನ್ನವೇ ಬಿಜೆಪಿಯಲ್ಲಿ (BJP) ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ಆಯ್ಕೆಗೂ ಮುನ್ನವೇ ಅಥಣಿ ಮತಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ವಲಸಿಗ ಶಾಸಕ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ರಾಜಕೀಯ ನಿವೃತ್ತಿ ಎನ್ನುತ್ತಿರುವ ಗೋಕಾಕ್ ಸಾಹುಕಾರ ಮತ್ತೊಂದೆಡೆ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆ ಬನ್ನಿ ಎಂದು ಸವದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿಗೆ ಇದೀಗ ಅಥಣಿ (Athani) ಕ್ಷೇತ್ರ ತಲೆನೋವು ಎನಿಸಿಕೊಂಡಿದೆ.

    ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ ವಲಸಿಗ ಶಾಸಕರು ಹಾಗೂ ಮೂಲ ಬಿಜೆಪಿಗರ ನಡುವಿನ ತಿಕ್ಕಾಟ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಭುಗಿಲೆದ್ದಿದೆ. ಬೆಳಗಾವಿ (Belegavi) ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ವಲಸಿಗ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಟಿಕೆಟ್ ನೀಡಬೇಡಿ ನನಗೆ ನೀಡಬೇಕು ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ಹಠಕ್ಕೆ ಬಿದ್ದಿದ್ದಾರೆ. ಅಥಣಿ ಪಟ್ಟಣದಲ್ಲಿ ಪಂಚಮಸಾಲಿ ಸಮಾವೇಶ ನಡೆಸಿ ಈ ಬಾರಿ ಟಿಕೆಟ್ ನನಗೆ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಜೊತೆಗೆ ಸ್ವ ಪಕ್ಷದ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಸೋಲಿನ ವಾತಾವರಣ ನಿರ್ಮಾಣವಾಗಿದೆ. ಈ ಸೋಲನ್ನು ನನ್ನ ಹಣೆಪಟ್ಟಿಗೆ ಕಟ್ಟುವುದಕ್ಕೆ ನನ್ನ ಜಿಲ್ಲೆಯಲ್ಲಿ ಕೆಲವರು ಇದ್ದಾರೆ. ಪಕ್ಷಕ್ಕೆ ಅಭ್ಯರ್ಥಿಗಳ ಸೋಲು ಬೇಡ. ನನಗೆ ಟಿಕೆಟ್ ಕೊಡಿ, ನಾನು ಗೆಲ್ಲುತ್ತೇನೆ ಎಂದು ಕೋರ್ ಕಮಿಟಿಯಲ್ಲಿ ತಿಳಿಸಿದ್ದೇನೆ ಎಂದು ಕುಮಟಳ್ಳಿ ವಿರುದ್ಧ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ಅಥಣಿ ಕ್ಷೇತ್ರದಲ್ಲಿ ಪ್ರಬಲ ಸಮಾಜವಾಗಿರುವ ಪಂಚಮಸಾಲಿ ಸಮಾಜದ ಓಲೈಕೆಗೆ ಸವದಿ ಮುಂದಾಗಿದ್ದಾರೆ. ಪಂಚಮಸಾಲಿ ಸಮಾಜ ನನ್ನ ವಿರುದ್ಧ ಇದೆ ಎಂದು ಬಿಂಬಿಸಲಾಗುತ್ತಿದೆ. ಯಾವತ್ತೂ ಪಂಚಮಸಾಲಿ ಮೀಸಲಾತಿಗಾಗಿ ಧ್ವನಿ ಎತ್ತಿದವನು ನಾನೇ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹೇಳಿದವನು ನಾನು. ಅಥಣಿ ಶಿವಯೋಗಿಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಪಂಚಮಸಾಲಿ ಮತದಾರರನ್ನು ಸೆಳೆಯಲು ಸವದಿ ಮುಂದಾಗಿದ್ದಾರೆ.

    ಪಂಚಮಸಾಲಿ ಸಮಾಜದ ಮಹೇಶ್ ಕುಮಟಳ್ಳಿ ಅವರ ವೋಟ್ ಬ್ಯಾಂಕ್ ಮೇಲೆ ಸವದಿ ಕಣ್ಣಿಟ್ಟು ಪಂಚಮಸಾಲಿ ಮುಖಂಡರನ್ನು ಸೆಳೆಯಲು ಮುಂದಾಗಿದ್ದಾರೆ. ಒಂದು ಕಡೆ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲನ್ನು ಗೋಕಾಕ್ ಸಾಹುಕಾರ ಕುಮಟಳ್ಳಿ ಪರ ಬ್ಯಾಟ್ ಬೀಸಿದರೆ ಮತ್ತೊಂದೆಡೆ ಬಿಜೆಪಿ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆಗೆ ಬರುವಂತೆ ಕಾರ್ಯಕರ್ತರಿಗೆ ಸವದಿ ಕರೆ ಕೊಡುತ್ತಿದ್ದಾರೆ. ಅಥಣಿ ಕ್ಷೇತ್ರದ ಈ ತಿಕ್ಕಾಟ ರಾಜ್ಯ ರಾಜಕಾರಣದಲ್ಲಿ ಮುಂದೆ ಬಹುದೊಡ್ಡ ಬೆಳವಣಿಗೆಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ. ಇದನ್ನೂ ಓದಿ: ಕಾಂಗ್ರೆಸ್ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಕಾದು ಕುಳಿತಿದೆ: ಬೊಮ್ಮಾಯಿ ವ್ಯಂಗ್ಯ

  • ದೀರ್ಘದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸ್ಥಳದಲ್ಲೇ ಸಾವು

    ದೀರ್ಘದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸ್ಥಳದಲ್ಲೇ ಸಾವು

    ಚಿಕ್ಕೋಡಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ನಿವಾಸಿ ಐಶ್ವರ್ಯ ನಾಯಿಕ (22) ಸಾವನ್ನಪ್ಪಿದ ಯುವತಿ. ಗ್ರಾಮದ ಜಾತ್ರೆ ಹಿನ್ನೆಲೆ ಕೃಷ್ಣಾ ನದಿಯಿಂದ (Krishna River) ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಸಲ್ಲಿಸುವ ಸಂದರ್ಭ ತಲೆ ಮೇಲೆ ಕಾರಿನ ಚಕ್ರ ಹರಿದು ಸ್ಥಳದಲ್ಲೇ ಯುವತಿ ದುರ್ಮರಣ ಹೊಂದಿದ್ದಾಳೆ. ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಪ್ರಾರ್ಥಿಸಿ ಶ್ರೀಶೈಲ ಮಲ್ಲಿಕಾರ್ಜುನ ಮೊರೆ

    ಈ ಘಟನೆ ಬುಧವಾರ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಯುಗಾದಿಯಂದೇ ಕಳ್ಳತನ – ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

  • ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ: ರಮೇಶ್ ಜಾರಕಿಹೊಳಿ

    ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ: ರಮೇಶ್ ಜಾರಕಿಹೊಳಿ

    ಚಿಕ್ಕೋಡಿ: ಮಹೇಶ್ ಕುಮಠಳ್ಳಿ (Mahesh Kumathalli) ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ತಿಳಿಸಿದರು.

    ಅಥಣಿ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲಕ್ಷ್ಮಣ ಸವದಿ (Laxman Savadi) ಬುದ್ಧಿವಂತ ರಾಜಕಾರಣಿ, ಅವರು ಹಿಂಗ್ಯಾಕೆ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಎಂಎಲ್‌ಸಿ ಆಗಿದ್ದರೂ, ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತೇನೆ ಎಂದು ಹೇಳಿಕೆ ನೀಡಿರುವುದು ನನಗೆ ಅಚ್ಚರಿಯಾಗಿದೆ. ಮಹೇಶ್ ಕುಮಠಳ್ಳಿ ತ್ಯಾಗದಿಂದ ಈ ಸರ್ಕಾರ ರಚನೆಯಾಗಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ (Athani) ಮುಂದಿನ ಬಿಜೆಪಿ (BJP) ಅಭ್ಯರ್ಥಿ ಮಹೇಶ್ ಕುಮಠಳ್ಳಿ. ಒಂದು ವೇಳೆ ಮಹೇಶ್ ಕುಮಠಳ್ಳಿಗೆ ಟಿಕೆಟ್ ಕೊಡದಿದ್ದರೆ, ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬುದು ಗೊತ್ತಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದರೂ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ತಪ್ಪುವಂತ ಯಾವುದೇ ಸಮಸ್ಯೆಯಿಲ್ಲ, ಬಿಜೆಪಿಯಲ್ಲಿ ಆ ರೀತಿ ಯಾವುದೇ ಚರ್ಚೆ ನಡೆದಿಲ್ಲ. ಕೆಲವರು ಸುಮ್ಮನೆ ಗೊಂದಲ ಮೂಡಿಸುತ್ತಿದ್ದಾರೆ. ಅಥಣಿಯಿಂದ ಮಹೇಶ್ ಕುಮಠಳ್ಳಿ, ಗೋಕಾಕದಿಂದ ರಮೇಶ್ ಜಾರಕಿಹೊಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್ ಸ್ಪರ್ಧೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಗೆ ಚಿಂಚನಸೂರ್‌ ರಾಜೀನಾಮೆ ನೀಡಿದ್ಯಾಕೆ?

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೊನ್ನೆ ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಕೆಲವು ವಿಚಾರಗಳನ್ನು ಹೇಳುವುದಕ್ಕೆ ಬರುವುದಿಲ್ಲ. ನಾನು ಅವರ ಮುಖಾಂತರ ಬಿಜೆಪಿಗೆ ಬಂದೆ. ತುಂಬಾ ದಿನದಿಂದ ಭೇಟಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಭೇಟಿ ಆಗಿ ಬಂದಿದ್ದೇನೆ. ಮಾ. 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಥಣಿಗೆ ಭೇಟಿ ನೀಡಿ 1,250 ಕೋಟಿ ರೂ. ವೆಚ್ಚದಲ್ಲಿ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ವಯಸ್ಸಾದ ವೃದ್ಧರಿಗೆ ಸೇರಬೇಕಾದ ಪಿಂಚಣಿ ವಯಸ್ಕರ ಜೇಬಿಗೆ – ಓರ್ವ ಅರೆಸ್ಟ್

  • ಕುಮಟಳ್ಳಿಗೆ ಗೋಕಾಕ್ ಕ್ಷೇತ್ರ ಬಿಟ್ಟುಕೊಡಲಿ- ರಮೇಶ್ ಜಾರಕಿಹೊಳಿಗೆ ಸವದಿ ಪುತ್ರ ಸವಾಲ್

    ಕುಮಟಳ್ಳಿಗೆ ಗೋಕಾಕ್ ಕ್ಷೇತ್ರ ಬಿಟ್ಟುಕೊಡಲಿ- ರಮೇಶ್ ಜಾರಕಿಹೊಳಿಗೆ ಸವದಿ ಪುತ್ರ ಸವಾಲ್

    ಚಿಕ್ಕೋಡಿ (ಬೆಳಗಾವಿ): ರಾಜ್ಯ ಬಿಜೆಪಿ ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷ (Congress Party) ಬಿಟ್ಟು ಬಿಜೆಪಿ ಸೇರಿದ್ದ ವಲಸಿಗ ಶಾಸಕರ ಸ್ಥಿತಿ ಸಧ್ಯ ಅತಂತ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣೆ ಬರುವವರೆಗೂ ಸುಮ್ಮನಿದ್ದ ಮೂಲ ಬಿಜೆಪಿಗರು ಈಗ ಬಹಿರಂಗವಾಗಿಯೇ ವಲಸಿಗ ಶಾಸಕರಿಗೆ ಸವಾಲು ಹಾಕಲು ಆರಂಭಿಸಿದ್ದಾರೆ.

    ಬೆಳಗಾವಿಯಲ್ಲಿ ಗುಂಪುಗಾರಿಕೆ ಬಗೆಹರಿಯುತ್ತಿಲ್ಲ. ಬಿಜೆಪಿ (BJP) ಗೆ ಬೆಳಗಾವಿ ದೊಡ್ಡ ತಲೆನೋವಾಗಿದೆ. ಅಥಣಿ ಬಿಜೆಪಿಯಲ್ಲಿ ಅಸಮಾಧಾನದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಅಥಣಿ ಕ್ಷೇತ್ರದ ಪ್ರಭಾವಿ ನಾಯಕ ಲಕ್ಷ್ಮಣ್ ಸವದಿ (Laxman Savadi) ಟಿಕೆಟ್‍ಗೆ ಪಟ್ಟು ಹಿಡಿದಿದ್ದಾರೆ. ಹಾಲಿ ಶಾಸಕ ಮಹೇಶ್ ಕುಮಟಳ್ಳಿ (Mahesh Kumatalli) ಮತ್ತು ಮಾಜಿ ಶಾಸಕ ಸವದಿ ಮಧ್ಯೆ ಟಿಕೆಟ್ ಸಂಘರ್ಷ ಶುರುವಾಗಿದೆ. ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಅಥಣಿ ಕ್ಷೇತ್ರದಿಂದ ಈ ಬಾರಿ ನಮ್ಮ ತಂದೆ ಸ್ಪರ್ಧೆ ಮಾಡುತ್ತಾರೆ. ಅಥಣಿ ಕ್ಷೇತ್ರ (Athani Constituency)ವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಸ್ವಪಕ್ಷದ ವಿರೋಧಿಗಳಿಗೇ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಭಾಷಣ ಮಧ್ಯೆ ಆಝಾನ್‍- ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು ಅಂದ್ರು ಈಶ್ವರಪ್ಪ  

    ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕ ಮಹೇಶ್ ಕುಮಟಳ್ಳಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಲಕ್ಷ್ಮಣ ಸವದಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಮಹೇಶ್ ಕುಮಟಳ್ಳಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಮಾಡಿದ್ದರು. ಎಲ್ಲೋ ಒಂದು ಕಡೆ ಅವತ್ತಿನಿಂದ ಇವತ್ತಿನವರೆಗೂ ಲಕ್ಷ್ಮಣ್ ಸವದಿ ಹಾಗೂ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಮೊನ್ನೆ ಅಷ್ಟೇ ರಮೇಶ್ ಜಾರಕಿಹೊಳಿ (Ramesh Jarakiholi) ಆಪ್ತಮಿತ್ರನಿಗೆ ಅಥಣಿ ಟಿಕೆಟ್ ಕೊಡಿಸುತ್ತೇನೆ. ಅವನಿಗೂ ಟಿಕೆಟ್ ಇಲ್ಲ ಅಂದ್ರೆ ನಾನು ಗೋಕಾಕ್‍ (Gokak Constituency) ನಿಂದ ಸ್ಪರ್ಧೆ ಮಾಡೋದಿಲ್ಲ ಎಂದು ಬಿಜೆಪಿ ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ರು.

    ಇದು ಸವದಿ ಕುಟುಂಬಕ್ಕೆ ನುಂಗಲಾರದ ತುತ್ತಾಗಿತ್ತು. ಈ ಮಧ್ಯೆ ಸವದಿ ಅವರ ಪುತ್ರ ಚಿದಾನಂದ್ ಸವದಿ (Chidanand Savadi) ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅವರ ಆತ್ಮೀಯ ಮಹೇಶ್ ಕುಮಟಳ್ಳಿಗೆ ಗೋಕಾಕ್ ಮತಕ್ಷೇತ್ರವನ್ನು ಬಿಟ್ಟು ಕೊಡಲಿ ನಾವು ಮಾತ್ರ ಅಥಣಿಯಿಂದ ಸ್ಪರ್ಧೆ ಮಾಡುತ್ತೇವೆ ಎಂದು ಸಮರ ಸಾರಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ವಲಸಿಗ ಶಾಸಕರ ಸ್ಥಿತಿ ಸಧ್ಯ ಅತಂತ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ.

  • ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!

    ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!

    ಚಿಕ್ಕೋಡಿ: ಯುವಕನೊಬ್ಬ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿದ್ದಾನೆ. ಈತನ ಸಾಧನೆ ಕಂಡು ಚಿಕ್ಕೋಡಿ ಜನರು ಹುಬ್ಬೇರಿಸಿದ್ದಾರೆ.

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬರಮಖೋಡಿ ಗ್ರಾಮದ ಅನಿಲ್ ಕಾಬು ಜಾಧವ್ ಸಾಧನೆ ಮಾಡಿದ ಯುವಕ. ಆತನೊಬ್ಬನೇ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಹಿಂದೆ ಇದೇ ಬರಮಖೋಡಿ ಗ್ರಾಮದ ಮತ್ತೊಂದು ಕಬ್ಬಿನ ಗ್ಯಾಂಗಿನ ಯುವಕ ಇಷ್ಟೇ ಕಬ್ಬನ್ನು ಎರಡು ಟ್ರಾಲಿಗೆ ತುಂಬಿಸಲು ಸುಮಾರು 9 ಗಂಟೆ 30 ನಿಮಿಷ ಸಮಯ ತಗೊಂಡಿದ್ದನು. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

    ಇದೀಗ ಜಾಧವ ಗ್ಯಾಂಗಿನ ಅನಿಲ್ ಎರಡು ಡಬ್ಬಿಯಲ್ಲಿ ಸುಮಾರು 28 ಟನ್ ಕಬ್ಬನ್ನು 7 ತಾಸಿನಲ್ಲಿ ಹೇರಿ ದಾಖಲೆ ನಿರ್ಮಿಸಿದ್ದಾನೆ. ಈ ಮೂಲಕ ಹಳೆಯ ದಾಖಲೆಯನ್ನು ಮುರಿದಿದ್ದಾನೆ ಎಂದು ಅಲ್ಲಿದ್ದ ಕಾರ್ಮಿಕರು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

    ಈ ಕುತಿತು ಪ್ರತಿಕ್ರಿಯಿಸಿದ ಅನಿಲ್, ಸಾಧನೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಇನ್ನೂ ಹೆಚ್ಚಿನ ಸಾಧನೆ ಮಾಡುವ ವಿಶ್ವಾಸವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾನೆ.