Tag: Athani

  • ಹುಕ್ಕೇರಿ ನಂತರ ಅಥಣಿ ಸಹಕಾರ ಕ್ಷೇತ್ರದಲ್ಲೂ ಜಾರಕಿಹೊಳಿ ಸಹೋದರರಿಗೆ ಭಾರೀ ಮುಖಭಂಗ

    ಹುಕ್ಕೇರಿ ನಂತರ ಅಥಣಿ ಸಹಕಾರ ಕ್ಷೇತ್ರದಲ್ಲೂ ಜಾರಕಿಹೊಳಿ ಸಹೋದರರಿಗೆ ಭಾರೀ ಮುಖಭಂಗ

    – ಸವದಿ ಬೆಂಬಲಿಗರ ಸಂಭ್ರಮಾಚರಣೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರಿಗೆ (Jarkiholi Brothers) ಮತ್ತೊಮ್ಮೆ ಹಿನ್ನೆಡೆಯಾಗಿದೆ.‌ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಕತ್ತಿ ಕುಟುಂಬದ ವಿರುದ್ಧ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹಿನ್ನಡೆ ಅನುಭವಿಸಿದರೆ ಈಗ ಅವರ ಸಹೋದರ ರಮೇಶ್‌ ಜಾರಕಿಹೊಳಿ (Ramesh Jarkiholi) ಲಕ್ಷ್ಮಣ ಸವದಿಗೆ ಸೆಡ್ಡು ಹೊಡೆದು ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ.

    ತೀವ್ರ ಕುತುಹಲಕ್ಕೆ ಕಾರಣವಾಗಿದ್ದ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಂಘದ ಚುನಾವಣೆ ಮುಕ್ತಾಯವಾಗಿದೆ. ಶಾಸಕ ಲಕ್ಷ್ಮಣ್‌ ಸವದಿ (Laxman savadi) ವಿರುದ್ಧ ಅಥಣಿ ತಾಲೂಕಿನ ಎಲ್ಲಾ ಪಕ್ಷದ ನಾಯಕರು ಒಂದಾಗಿ ತೊಡೆ ತಟ್ಟಿದ್ದರು. ಅದರಲ್ಲೂ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಮಾಜಿ ಶಾಸಕರಾದ ಮಹೇಶ ಕುಮಟಳ್ಳಿ, ಶಹಜಾನ ಡೊಂಗರಗಾಂವ ಹಾಗೂ ಕೈ ಮುಖಂಡ ಗಜಾನನ ಮಂಗಸೂಳಿ ಜೊತೆಗೂಡಿ ಸವದಿಗೆ ಸೆಡ್ಡು ಹೊಡೆದಿದ್ದರು.

    ಭಾನುವಾರ ಬೆಳಿಗ್ಗೆ ಆರಂಭವಾದ ಚುನಾವಣೆ ಮಧ್ಯಾಹ್ನದವರೆಗೂ ಶಾಂತಿಯುತವಾಗಿ ನಡೆದಿತ್ತು. ಆದರೆ ಮೃತ ಸದಸ್ಯರ ಮತವನ್ನು ಸವದಿ ಬಣದವರು ಮಾಡುತ್ತಿದ್ದಾರೆ ಎಂದು ಆರೋಪಿಸಿ ರಮೇಶ್‌ ಜಾರಕಿಹೊಳಿ ಹಾಗೂ ಸವದಿ ಬಣದ ನಡಿವೆ ವಾಗ್ವಾದ ನಡೆಯುವದರ ಜೊತೆಗೆ ಎರಡು ಬಣಗಳ ನಡುವಿನ ಮಾರಾಮಾರಿ ನಡೆಯಿತು. ಬಳಿಕ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು.‌ ಇದು ದಬ್ಬಾಳಿಕೆಯ ಚುನಾವಣೆ ಪಾರದರ್ಶಕವಾಗಿ ಚುನಾವಣೆ ಆಗಿಲ್ಲ‌ ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಆರೋಪಿಸಿದರು. ಇದನ್ನೂ ಓದಿ: ನೆಲಮಂಗಲದ ಇಸ್ಲಾಂಪುರದಲ್ಲಿ ಪಂಚಾಯತ್‌ ಸದಸ್ಯನ ಮೇಲೆ ಗುಂಡಿನ ದಾಳಿ

     

    ಗಲಾಟೆ ಬಳಿಕ ಚುನಾವಣೆ ಪ್ರಕ್ರಿಯೆ ಮುಗಿದು ಒಟ್ಟು 11,300 ಮತದಾರರಲ್ಲಿ 8,975 ಮತದಾರರಿಂದ ಮತ ಚಲಾವಣೆ ಮಾಡಿದರು. ನ್ಯಾಯಾಲಯದಲ್ಲಿ ವಿಚಾರಣೆ ಹಿನ್ನೆಲೆ ಇಂದು ಮತ ಎಣಿಕೆಗೆ ಮಾತ್ರ ಅವಕಾಶ ಕಲ್ಪಿಸಿ ಅಧಿಕೃತ ಚುನಾವಣೆ ಫಲಿತಾಂಶ ಪ್ರಕಟಿಸಲಿಲ್ಲ.

    ಮತ ಎಣಿಕೆಯಲ್ಲಿ ಅನಧಿಕೃತವಾಗಿ ಸವದಿ ಬಣದ 12 ನಿರ್ದೇಶಕರು ಚುನಾವಣೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದರೆ ಓರ್ವ ನಿರ್ದೇಶಕ ಅವಿರೋಧವಾಗಿ ಆಯ್ಕೆಯಾಗುವದರ ಮೂಲಕ ಪೆನಲ್‌ನ ಎಲ್ಲಾ ಸದಸ್ಯರು ಗೆದ್ದಿರುವ ಹುಮ್ಮಸ್ಸಿ‌ನಲ್ಲಿ ಸವದಿ ಪುತ್ರ ಚಿದಾನಂದ ಸವದಿ ಹಾಗೂ ಅಭಿಮಾನಿಗಳು ಹಲ್ಯಾಳ ಗ್ರಾ‌ಮದ ಸಕ್ಕರೆ ಕಾರ್ಖಾನೆ ಆವರಣ ಹಾಗೂ ಅಥಣಿ ಪಟ್ಟಣದಲ್ಲಿ ಭರ್ಜರಿ ಸಂಭ್ರಮಾಚರಣೆ ಮಾಡಿ ಸಿಹಿ ಹಂಚಿ, ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದರು.

    ಒಟ್ಟಿನಲ್ಲಿ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಸವದಿ ಸೋಲಿಸಲು ಪಕ್ಷಾತೀತವಾಗಿ ವಿರೋಧಿಗಳನ್ನು ಒಂದೂಗೂಡಿಸಿದ ಪ್ಲಾನ್ ವಿಫಲವಾಗಿದೆ. ಹೊರಗಿನವರಿಗೆ ಆಡಳಿತ ಮಾಡಲು ಬಿಡುವದಿಲ್ಲ ಎನ್ನುವ ಸಂದೇಶವನ್ನು ಹುಕ್ಕೇರಿ ತಾಲೂಕಿನ ನಂತರ ಮತ್ತೊಮ್ಮೆ ಅಥಣಿ ತಾಲೂಕಿನ ಜನರು ಜಾರಕಿಹೊಳಿ ಸಹೋದರರಿಗೆ ರವಾನಿಸಿದ್ದಾರೆ.

  • ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ – ಸಚಿವನಾಗುವ ಇಂಗಿತ ವ್ಯಕ್ತಪಡಿಸಿದ ಲಕ್ಷ್ಮಣ ಸವದಿ

    ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ – ಸಚಿವನಾಗುವ ಇಂಗಿತ ವ್ಯಕ್ತಪಡಿಸಿದ ಲಕ್ಷ್ಮಣ ಸವದಿ

    ಚಿಕ್ಕೋಡಿ: ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ ಎನ್ನುವ ಮೂಲಕ ಸಂಪುಟ ಪುನಾರಚನೆಯಲ್ಲಿ ಸಚಿವನಾಗುವ ಇಂಗಿತವನ್ನ ಅಥಣಿ (Athani) ಕೈ ಶಾಸಕ ಲಕ್ಷ್ಮಣ ಸವದಿ (Laxman Savadi) ವ್ಯಕ್ತಪಡಿಸಿದ್ದಾರೆ.

    ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಸಂಪುಟ ಪುನರ್ ರಚನೆ (Cabinet Reshuffle) ಆಗುವುದು ಮೊದಲೇ ಗೊತ್ತಿತ್ತು.ಶನಿವಾರ ಬೆಳಗಾವಿಯಲ್ಲಿ ಸಿಎಂ ಸಹ ಹೇಳಿದ್ದಾರೆ. ನನಗೆ ಸಚಿವನಾಗುವ ಸಂದರ್ಭ ಬರಲಿ. ಆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

    ನಾವು ಯಾವುದೇ ಅಧಿಕಾರವನ್ನ ಕೇಳಿ ಪಡೆದವನಲ್ಲ. ಭಗವಂತನ ಆಶೀರ್ವಾದ ಹಾಗೂ ಹೈಕಮಾಂಡ್ ಇಚ್ಛೆ ಇದ್ರೆ ಸಚಿವ ಸ್ಥಾನ ನನಗೆ ತಾನಾಗಿಯೇ ಬರುತ್ತದೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನ ನಾವು ನಿಭಾಯಿಸಲು ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ: ಟ್ರಂಪ್ ಅದೇ ರಾಗ

  • ಸರ್ಕಾರಿ ಗೌರವದೊಂದಿಗೆ ಯೋಧ ಕಿರಣರಾಜ್ ಅಂತ್ಯಕ್ರಿಯೆ

    ಸರ್ಕಾರಿ ಗೌರವದೊಂದಿಗೆ ಯೋಧ ಕಿರಣರಾಜ್ ಅಂತ್ಯಕ್ರಿಯೆ

    ಚಿಕ್ಕೋಡಿ: ಕಳೆದ ಮಂಗಳವಾರ ಪಂಜಾಬಿನ (Punjab) ಪಟಿಯಾಲಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಕರ್ತವ್ಯ ನಿರತ ಯೋಧ ಕಿರಣರಾಜ್ (Kiranraj) ಕೇದಾರಿ ತೆಲಸಂಗ (23) ಅವರ ಅಂತ್ಯಕ್ರಿಯೆ ಸ್ವಗ್ರಾಮ ಅಥಣಿ ತಾಲೂಕಿನ‌ ಐಗಳಿ ಗ್ರಾಮದಲ್ಲಿ ಜರುಗಿತು.

    15 ತಿಂಗಳ ಹಿಂದೆ ಸೇನೆ ಸೇರಿದ್ದ ಕಿರಣರಾಜ್ ತಮ್ಮ ಕರ್ತವ್ಯದಲ್ಲಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮಂಗಳವಾರ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಕಿರಣರಾಜ್ ಅವರ ಪಾರ್ಥಿವ ಶರೀರಕ್ಕೆ ಅಥಣಿ ಪಟ್ಟಣದ ತಹಸೀಲ್ದಾರ್‌ ಕಚೇರಿ, ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಮುಖ್ಯ ರಸ್ತೆಯ ಮೂಲಕ ಸಾವಿರಾರು ಸಂಖ್ಯೆಯ ಜನರ ಮಧ್ಯೆ ಮೆರವಣಿಗೆ ಮೂಲಕ  ತರಲಾಯಿತು.

    ಕಿರಣರಾಜ್ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಯೋಧನ ಕಳೆದುಕೊಂಡ ಕುಟುಂಬ ಅಲ್ಲದೆ ನೆರೆದ ಸಾವಿರಾರು ಜನ ಕಂಬನಿ ಮಿಡಿದು ಕಿರಣರಾಜ್ ಅಮರ ರಹೇ ಎಂದು ಘೋಷಣೆ ಕೂಗಿ ಅಭಿಮಾನ ತೋರಿದರು.

  • ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತ – ವಿದ್ಯಾರ್ಥಿನಿ ಸಾವು

    ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತ – ವಿದ್ಯಾರ್ಥಿನಿ ಸಾವು

    ಚಿಕ್ಕೋಡಿ: ಶಾಲೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಹೃದಯಾಘಾತಕ್ಕೊಳಗಾಗಿ (Heart Attack) ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ.

    ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ರೇಣುಕಾ ಸಂಜಯ್ ಬಂಡಗಾರ (15) ಮೃತ ವಿದ್ಯಾರ್ಥಿನಿ. ಚಮಕೇರಿ ಗ್ರಾಮದ ಖಾಸಗಿ ಶಾಲೆಯಲ್ಲಿ 9 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೇಣುಕಾ ಆಟವಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾಳೆ. ಹೃದಯಾಘಾತದ ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ (77) ನಿಧನ

    ಆದರೆ ಅಥಣಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Tumakuru | ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕ್ – ಯುವತಿ ನೇಣಿಗೆ ಶರಣು

  • ಅಥಣಿ| ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಕಾಮುಕ ಜೈಲುಪಾಲು

    ಅಥಣಿ| ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಕಾಮುಕ ಜೈಲುಪಾಲು

    ಅಥಣಿ: ಅಪ್ರಾಪ್ತೆಯ ಮೇಲೆ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಸೇರಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕಾಮುಕ ಮಹಾಂತೇಶ ಹಿಪ್ಪರಗಿ ಪೊಲೀಸರ ಅತಿಥಿಯಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೂಡಲೇ ಬಾಲಕಿ ಪೋಷಕರಿಗೆ ಈ ಕುರಿತು ಮಾಹಿತಿ ನೀಡಿದ್ದಾಳೆ. ಬಳಿಕ ಐಗಳಿ ಪೊಲೀಸ್‌ರಿಗೆ ಅಪ್ರಾಪ್ತೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಇದನ್ನೂ ಓದಿ: DRDO ಸ್ಟಿಕ್ಕರ್ ನೋಡಿ ಕೆರಳಿದ ಪುಂಡರು – ಕಾರು ಅಡ್ಡಗಟ್ಟಿ ವಿಂಗ್‌ ಕಮಾಂಡರ್‌ ಮೇಲೆ ಮಾರಣಾಂತಿಕ ಹಲ್ಲೆ

    ಆರೋಪಿಯ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಂಡ ಐಗಳಿ ಪೊಲೀಸರು ಕಾಮುಕ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಘಟನೆ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ಬಗ್ಗೆ ಸಮಗ್ರ ತನಿಖೆ: ಪರಮೇಶ್ವರ್

  • ತಾಯಿ, ಮಗನ ಕೊಲೆ ಕೇಸ್‌ – ಪೊಲೀಸರಿಗೆ ಹೆದರಿ ಆರೋಪಿ ನೇಣಿಗೆ ಶರಣು

    ತಾಯಿ, ಮಗನ ಕೊಲೆ ಕೇಸ್‌ – ಪೊಲೀಸರಿಗೆ ಹೆದರಿ ಆರೋಪಿ ನೇಣಿಗೆ ಶರಣು

    ಬೆಳಗಾವಿ: ಅಥಣಿ (Athani) ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಕಳೆದ ಭಾನುವಾರ ನಡೆದಿದ್ದ ತಾಯಿ, ಮಗನ ಜೋಡಿ ಕೊಲೆ (Double Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ನೇಣಿಗೆ ಶರಣಾಗಿದ್ದಾನೆ.

    ಅಥಣಿ ತಾಲೂಕಿನ ಕೊಡಗಾನೂರ್ ಗ್ರಾಮದಲ್ಲಿ ಏಪ್ರಿಲ್ 13 ರಂದು ಚಂದ್ರವ್ವ ಈಚೇರಿ ಹಾಗೂ ವಿಠ್ಠಲ ಈಚೇರಿ ತಾಯಿ ಮಗನ ಕೊಲೆ ಮಾಡಿ ಆರೋಪಿಗಳು ಕಬ್ಬಿನ ಕದ್ದೆಯಲ್ಲಿ ಶವ ಎಸೆದು ಹೋಗಿದ್ದರು. ಇದನ್ನೂ ಓದಿ: ಮೇ 1 ರಿಂದ ಜಿಪಿಎಸ್ ಆಧಾರಿತ ಟೋಲ್ ಇಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ಪೊಲೀಸರ (Police) ತನಿಖೆಗೆ ಹೆದರಿ ಶೇಗುನಶಿ ಗ್ರಾಮದ ಸುರೇಶ ರಾಮಪ್ಪ ಸವದತ್ತಿ (36) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಶೈಲ್ ಸಂಗಪ್ಪ ಹೊರಟ್ಟಿ (35) ಕೊಲೆ ಆರೋಪಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾನೆ. ಇದನ್ನೂ ಓದಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    ಜೋಡಿ ಕೊಲೆ ಹಿನ್ನೆಲೆ ಶೇಗುಣಶಿ ಮೂಲದ ಇಬ್ಬರು ಆರೋಪಿಗಳ ತನಿಖೆ ಆರಂಭವಾದ ಹಿನ್ನೆಲೆ ಓರ್ವ ಆತ್ಮಹತ್ಯಗೆ ಶರಣಾಗಿದ್ದಾನೆ. ಒಬ್ಬ ಬಚಾವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಲುಷಿತ ನೀರಿನಿಂದ ಕೃಷ್ಣ ನದಿಯಲ್ಲಿ ಮೀನುಗಳ ಮಾರಣಹೋಮ

    ಕಲುಷಿತ ನೀರಿನಿಂದ ಕೃಷ್ಣ ನದಿಯಲ್ಲಿ ಮೀನುಗಳ ಮಾರಣಹೋಮ

    ಚಿಕ್ಕೋಡಿ: ಕಲುಷಿತ ನೀರಿನಿಂದ ಜಿಲ್ಲೆಯ ಅಥಣಿ (Athani) ತಾಲೂಕಿನ ಶಿರಹಟ್ಟಿ ಗ್ರಾಮದ ಹೊರವಲಯದ ಕೃಷ್ಣ ನದಿಯಲ್ಲಿರುವ (Krishna River) ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪಿವೆ.

    ನದಿ ತೀರದಲ್ಲಿ ರಾಶಿಗಟ್ಟಲೇ ಮೀನು ಸತ್ತು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ. ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ನೀರಿನ ಪರಿಣಾಮದಿಂದ ಜಲಚರಗಳು ಸಾವನ್ನಪ್ಪಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬರಿಗೈಯಲ್ಲಿ ಬೆಂಕಿ ಕೆಂಡ ತೂರಿ ಜಾತ್ರೆ

    ನದಿ ಪಾತ್ರಗಳಲ್ಲಿ ಕೊಳೆತ ಸ್ಥಿತಿಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದ ಪರಿಣಾಮ ನದಿ ನೀರು ಹಾಗೂ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ. ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೃಷ್ಣ ನದಿ ಜಲ ಶುದ್ಧೀಕರಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದರು. ಇದನ್ನೂ ಓದಿ: ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

  • ರಾಜ್ಯಾದ್ಯಂತ ಪಂಚಮಸಾಲಿ ಹೋರಾಟದ ಕಿಚ್ಚು – ಅಥಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

    ರಾಜ್ಯಾದ್ಯಂತ ಪಂಚಮಸಾಲಿ ಹೋರಾಟದ ಕಿಚ್ಚು – ಅಥಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

    ಬೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಲಾಠಿ ಚಾರ್ಜ್ ಖಂಡಿಸಿ ಅಥಣಿಯಲ್ಲಿ (Athani) ರಾಷ್ಟ್ರೀಯ ಹೆದ್ದಾರಿ (National Highway) ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಬೆಳಗಾವಿ ಅಧಿವೇಶನದಲ್ಲಿ (Belagavi Session) ಪಂಚಮಸಾಲಿ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಹಿನ್ನೆಲೆ ಇಂದು (ಡಿ.12) ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಯುತ್ತಿದೆ. ಪಂಚಮಸಾಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ ಬೆನ್ನಲ್ಲೇ ಪ್ರತಿಭಟನೆ ನಡೆಯುತ್ತಿದೆ.ಇದನ್ನೂ ಓದಿ: ಅಂತರ್ಜಾತಿ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ – ಜಾತಿನಿಂದನೆ ಕೇಸ್!

    2ಎ ಮೀಸಲಾತಿಗಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಾ ಸರ್ಕಾರದ ಗೂಂಡಾ ವರ್ತನೆಯನ್ನು ಖಂಡಿಸಿ ಹೋರಾಟಗಾರರು ಬೀದಿಗಿಳಿದಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಯಲ್ಲಿ ವಕೀಲರು ಸೇರಿದಂತೆ ಬಿಜೆಪಿ ಸಹ ಕಾರ್ಯಕರ್ತರು ಭಾಗಿಯಾಗಿದ್ದಾರೆ.

    ಇನ್ನೂ ಅಥಣಿ ತಾಲೂಕಿನ ಗುಂಡೆವಾಡಿ ಗ್ರಾಮದಲ್ಲಿ ಜತ್ತ -ಜಾಂಬೋಟಿ ರಾಜ್ಯ ಹೆದ್ದಾರಿ ತಡೆದು ಪಂಚಮಸಾಲಿ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ. ಲಾಠಿ ಚಾರ್ಜ್ ನಡೆಸಿದ್ದಕ್ಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಡೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

    ಚಿಕ್ಕೋಡಿಯಲ್ಲಿ ಮಾತ್ರವಲ್ಲ, ಧಾರವಾಡ, ಹಾವೇರಿ, ಬೆಳಗಾವಿ, ಕೊಪ್ಪಳ, ದಾವಣಗೆರೆ, ಬಾಗಲಕೋಟೆ, ಹುಬ್ಬಳ್ಳಿ, ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಪಂಚಮಸಾಲಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಇದಕ್ಕೆ ಕೈಜೋಡಿಸಿದ್ದಾರೆ.

    ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದೇಕೆ?
    ಇದೇ ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಂದ ಹೋರಾಟಗಾರರನ್ನು ಪೊಲೀಸರು ದಾರಿಯಲ್ಲೇ ತಡೆದಿದ್ದರು. ಮುತ್ತಿಗೆ ಹಾಕಲು ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರೂ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಈ ವೇಳೆ ತಳ್ಳಾಟ ನೂಕಾಟ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ಬಿದ್ದಿದೆ. ಇದರಿಂದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಬೀಸಿದ್ದರು. ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾ ನಿರತರು ದಿಕ್ಕಾಪಾಲಾಗಿ ಓಡಿದ್ದರು.ಇದನ್ನೂ ಓದಿ: ವಯನಾಡಿಗೆ 100 ಮನೆ – ರಾಜಕೀಯ ಗುಲಾಮಗಿರಿಯ ಸಂಕೇತ: ಸಿಎಂ ವಿರುದ್ಧ ಸಿ.ಟಿ.ರವಿ ಕಿಡಿ

  • ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    – ನೋಟಿಸ್‌ ರದ್ದು ಪಡಿಸದೇ ಇದ್ದರೆ ಅಹೋರಾತ್ರಿ ಧರಣಿಯ ಎಚ್ಚರಿಕೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಅನಂತಪುರ ಗ್ರಾಮದಲ್ಲಿ ವಕ್ಫ್ ಬೋರ್ಡ್ (Waqf Board) ವಿರುದ್ಧ ಈಗ ಮುಸ್ಲಿಂ ಸಮುದಾಯವೇ (Muslim Community) ತಿರುಗಿಬಿದ್ದಿದೆ.

    ಅನಂತಪುರ ಗ್ರಾಮದ ದರ್ಗಾದಲ್ಲಿ ಸಭೆ ಮಾಡಿದ ರೈತರು, ಕಾಗವಾಡ ಹಾಗೂ ಅಥಣಿ ಶಾಸಕರಿಗೆ ಬರುವ ನವೆಂಬರ್‌ 25ರ ಒಳಗಾಗಿ ಅನಂತಪುರ, ಬಳ್ಳಿಗೇರಿ ಗ್ರಾಮದ 60 ಕ್ಕೂ ಅಧಿಕ ಜನ ರೈತರ ಜಮೀನಿನ (Farmers Land) ಪಹಣಿಯಲ್ಲಿ ನೊಂದಣಿಯಾದ ವಕ್ಫ್‌ ಹೆಸರು ತೆರವುಗೊಳಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿ ಹೋರಾಟ ಮಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬಳ್ಳಾರಿಯಲ್ಲೂ ವಕ್ಫ್ ವಿವಾದ – ರೈತರ ಪಿತ್ರಾರ್ಜಿತ ಆಸ್ತಿಗೆ ನೋಟಿಸ್‌

     

    60ಕ್ಕೂ ಹೆಚ್ಚು ಮುಸ್ಲಿಂ ಹಾಗೂ ಇನ್ನುಳಿದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. 2018 ರಲ್ಲಿ ರೈತರ ಜಾಗದ ಪಹಣಿಯಲ್ಲಿ ಇದ್ದಕ್ಕಿದ್ದಂತೆ ವಕ್ಫ್ ಎಂದು ಸೇರ್ಪಡೆಯಾಗಿದೆ ಎಂದು ದೂರಿದ್ದಾರೆ. ವಕ್ಫ್ ಹೆಸರು ಸೇರ್ಪಡೆಯಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರ ಯೋಜನೆಯಿಂದ ನಾವು ವಂಚಿತರಾಗಿದ್ದೇವೆ. ಆದಷ್ಟು ಬೇಗನೆ ಪಹಣಿಯಲ್ಲಿ ವಕ್ಫ್ ಹೆಸರು ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಇಲ್ಲಿಯವರೆಗೆ ತಹಶೀಲ್ದಾರ್ ಕಚೇರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅವಧಿಯಲ್ಲಿ ನೀಡಲಾದ ನೋಟಿಸ್ ಮರಳಿ ಪಡೆಯಲು ತಿಳಿಸಿದ್ದಾರೆ. ಆದರೆ ಈ ಹಿಂದೆ ನೋಟಿಸ್‌ ಬಂದಿರುವ ನಮ್ಮ ಪಾಡೇನು? ನಾವು ಯಾರನ್ನು ಕೇಳಬೇಕು? ನಮಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು.

    ಸಭೆಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಅನೇಕ ಗ್ರಾಮಗಳ 60 ಕ್ಕೂ ಅಧಿಕ ಜನ ರೈತರು ಸಭೆ ಮಾಡಿ ನ. 25 ರವರೆಗೆ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರಿಗೆ ಗಡುವು ನೀಡಿದ್ದಾರೆ. ಇಬ್ಬರು ಶಾಸಕರು ಸ್ಪಂದಿಸದೇ ಇದ್ದರೆ ಅಹೋರಾತ್ರಿ ಧರಣಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

     

  • ಅಥಣಿ | ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ – ಇದು ಜೋಡಿ ಕೊಲೆ ಎಂದ ಪೊಲೀಸರು

    ಅಥಣಿ | ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ – ಇದು ಜೋಡಿ ಕೊಲೆ ಎಂದ ಪೊಲೀಸರು

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ (Athani) ಪಟ್ಟಣದಲ್ಲಿ ಬುಧವಾರ ಪತ್ತೆಯಾಗಿದ್ದ ದಂಪತಿಯ ಕೊಳೆತ ಶವಗಳ (Couple Death) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ ಜೋಡಿ ಕೊಲೆ (Murder) ಎಂದು ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.

    ಅಥಣಿಯಲ್ಲಿ ನಾನಾಸಾಹೇಬ ಚವ್ಹಾಣ(58) ಜಯಶ್ರೀ ಚವ್ಹಾಣ(50) ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅಥಣಿ ಪೊಲೀಸರು ತನಿಖೆ ನಡೆಸಿದಾಗ ಜೋಡಿ ಕೊಲೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಜೀವಂತ ಹೂತಿದ್ದ ಆರೋಪಿಗಳು ಅರೆಸ್ಟ್

     

    ಈಗಾಗಲೇ ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೇವೆ. ಕೊಲೆ ಮಾಡಿ ಆರು ದಿನಕ್ಕೆ ದುರ್ವಾಸನೆ ಬಂದಿದೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ಆದಷ್ಟು ಬೇಗನೇ ನಾವು ಆರೋಪಿಗಳನ್ನು ಬಂಧನ ಮಾಡುತ್ತೇವೆ ಎಂದು ಭೀಮಾಶಂಕರ ಗುಳೆದ್ ಮಾಹಿತಿ ನೀಡಿದ್ದಾರೆ.

    ಮದಭಾವಿ ರಸ್ತೆ ಚವ್ಹಾಣ ತೋಟದ ಮನೆಯ ಸುತ್ತಲೂ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಇಬ್ಬರ ಮೃತದೇಹ ಪತ್ತೆಯಾಗಿತ್ತು.