Tag: ATC

  • ಬೆಂಗಳೂರು – ವಾರಣಾಸಿ ವಿಮಾನದಲ್ಲಿ ಟಾಯ್ಲೆಟ್ ಹುಡುಕುತ್ತಾ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕ!

    ಬೆಂಗಳೂರು – ವಾರಣಾಸಿ ವಿಮಾನದಲ್ಲಿ ಟಾಯ್ಲೆಟ್ ಹುಡುಕುತ್ತಾ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕ!

    ಬೆಂಗಳೂರು/ಲಕ್ನೋ: ನಗರದಿಂದ (Bengaluru) ವಾರಣಾಸಿಗೆ (Varanasi) ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) IX-1086 ವಿಮಾನದಲ್ಲಿ ಪ್ರಯಾಣಿಕನೊಬ್ಬ ಆಕಸ್ಮಿಕವಾಗಿ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಈ ಬಗ್ಗೆ ವಿಮಾನದ ಪೈಲಟ್ ಸಿದ್ಧಾರ್ಥ್ ಶರ್ಮಾ ಅವರು ‌ಎಟಿಸಿಗೆ (ATC) ಸಂದೇಶ ನೀಡಿದ್ದು, ತನಿಖೆ ನಡೆಯುತ್ತಿದೆ.

    9 ಪ್ರಯಾಣಿಕರ ಗುಂಪಿನಲ್ಲಿ ಮಣಿ ಎಂಬ ಪ್ರಯಾಣಿಕ ಕಾಕ್‌ಪಿಟ್ ಬಾಗಿಲಿನ ಬಳಿ ಬಟನ್ ಒತ್ತಿ, ವಿಮಾನದಲ್ಲಿದ್ದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದ. ಈ ಬಗ್ಗೆ ಆತನಿಗೆ ವಿಚಾರಿಸಿದಾಗ ತಾನು ಮೊದಲನೇ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಈ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದಾನೆ. CISF ಸಿಬ್ಬಂದಿ ವಿಚಾರಣೆಗಾಗಿ ಎಲ್ಲಾ 9 ಪ್ರಯಾಣಿಕರನ್ನು ವಶಕ್ಕೆ ಪಡೆದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು, ಶೌಚಾಲಯವನ್ನು ಹುಡುಕುತ್ತಾ ಪ್ರಯಾಣಿಕ ಆಕಸ್ಮಿಕವಾಗಿ ಕಾಕ್‌ಪಿಟ್ ಬಳಿ ಬಂದು ಬಟನ್‌ ಒತ್ತಿರುವ ಬಗ್ಗೆ ವರದಿಯಾಗಿದೆ. ಈ ವರದಿ ನಮ್ಮ ಗಮನಕ್ಕೆ ಬಂದಿದೆ. ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ನಾವು ಮಾಹಿತಿ ನೀಡಿದ್ದೇವೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

  • ತಾಂತ್ರಿಕ ಸಮಸ್ಯೆ –  ದೆಹಲಿಗೆ ಬರುತ್ತಿದ್ದ ಏರ್‌ಇಂಡಿಯಾ ಹಾಂಕಾಂಗ್‌ಗೆ ವಾಪಸ್‌

    ತಾಂತ್ರಿಕ ಸಮಸ್ಯೆ – ದೆಹಲಿಗೆ ಬರುತ್ತಿದ್ದ ಏರ್‌ಇಂಡಿಯಾ ಹಾಂಕಾಂಗ್‌ಗೆ ವಾಪಸ್‌

    – ವಿ ಡೋಂಡ್ ವಾಂಟ್ ಟು ಕಂಟಿನ್ಯೂ – ಎಟಿಸಿಗೆ ಪೈಲಟ್ ಸಂದೇಶ

    ನವದೆಹಲಿ: ಹಾಂಗ್ ಕಾಂಗ್‍ನಿಂದ (Hong Kong) ನವದೆಹಲಿಗೆ (New Delhi) ಬರುತ್ತಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ತಾತ್ರಿಂಕ ದೋಷ ಕಾಣಿಸಿಕೊಂಡಿದ್ದು, ವಿಮಾನವನ್ನು ಪೈಲಟ್ ಹಾಂಕಾಂಗ್‌ಗೆ ವಾಪಸ್‌ ಕೊಂಡೊಯ್ದಿದ್ದಾರೆ.

    ಬೋಯಿಂಗ್ 787-8 (Boeing Aircraft) ಡ್ರೀಮ್‌ಲೈನರ್ ವಿಮಾನ ಟೇಕಾಫ್‌ ಆದ ಸ್ವಲ್ಪ ಸಮಯದಲ್ಲೇ ಅದರ ಫ್ಯುಯೆಲ್ ಫಿಲ್ಟರ್‌ನಲ್ಲಿ ಸಮಸ್ಯೆ ಕಂಡು ಬಂದಿದೆ. ಕೂಡಲೇ ಎಚ್ಚೆತ್ತ ಪೈಲಟ್‌ ʻವಿ ಡೋಂಡ್ ವಾಂಟ್ ಟು ಕಂಟಿನ್ಯೂʼ ಎಂಬ ಸಂದೇಶವನ್ನು ಎಟಿಸಿಗೆ ಕಳುಹಿಸಿ, ವಿಮಾನವನ್ನು ಹಾಂಕಾಂಗ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ತಪಾಸಣೆಗೆ ಮಾಡಲಾಗುತ್ತಿದೆ. ಇದನ್ನೂ ಓದಿ: ಸೌದಿ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ – ಟೈಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ, ಲಕ್ನೋದಲ್ಲಿ ತಪ್ಪಿದ ದುರಂತ

    ವಿಮಾನ ಟೇಕ್ ಆಫ್ ಆದ ಸುಮಾರು 15 ನಿಮಿಷಗಳ ನಂತರ ಪೈಲಟ್‌, ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ʻತಾಂತ್ರಿಕ ಸಮಸ್ಯೆಯಿಂದ ನಾವು ಹಾಂಕಾಂಗ್ ಸಮೀಪದಲ್ಲಿ ಇರಲು ಬಯಸುತ್ತೇವೆ. ನಾವು ಪ್ರಯಾಣ ಮುಂದುವರಿಸಲು ಬಯಸುವುದಿಲ್ಲʼ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

    ಕಳೆದ ವಾರ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿ, ಓರ್ವ ವ್ಯಕ್ತಿ ಮಾತ್ರ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದರು. ಇದನ್ನೂ ಓದಿ: ಲುಫ್ತಾನ್ಸಾ ಏರ್‌ಲೈನ್ಸ್‌ನ ಡ್ರೀಮ್‌ಲೈನರ್‌ ವಿಮಾನಕ್ಕೆ ಬಾಂಬ್‌ ಬೆದರಿಕೆ – ಅರ್ಧದಲ್ಲೇ ಫ್ರಾಂಕ್‌ಫರ್ಟ್‌ಗೆ ವಾಪಸ್‌

  • 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    ಸಿಯೋಲ್: ದೇಶದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಎಲ್ಲಾ ಬೋಯಿಂಗ್ 737-800 ವಿಮಾನಗಳ (Boeing 737-800 aircraft) ಸುರಕ್ಷತಾ ತಪಾಸಣೆ ನಡೆಸುವುದಾಗಿ ದಕ್ಷಿಣ ಕೊರಿಯಾದ (South Korea) ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ (Muan International Airport) ಲ್ಯಾಂಡಿಂಗ್‌ ವೇಳೆ ಸಂಭವಿಸಿದ ದುರಂತದಲ್ಲಿ 179 ಮಂದಿ ಸಾವಿಗೀಡಾದ ಬೆನ್ನಲ್ಲೇ ದೇಶದ ವಿಮಾನಯಾನ ಸಂಸ್ಥೆಗಳು ಈ ಕ್ರಮಕ್ಕೆ ಮುಂದಾಗಿದೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚುವ ತನಿಖೆಯ ಭಾಗವಾಗಿ ತಪಾಸಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್‌ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ

    ದಕ್ಷಿಣ ಕೊರಿಯಾದ ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೊಕ್ ಅವರಿಂದು ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ದೇಶದ ವಿಮಾನ ಕಾರ್ಯಾಚರಣೆ ವ್ಯವಸ್ಥೆಗಳ ತುರ್ತು ಪರಿಶೀಲನೆ ನಡೆಸಿದರು. ಅಲ್ಲದೇ ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು. ಅದಕ್ಕಾಗಿ ಬೋಯಿಂಗ್ 737-800 ವಿಮಾನಗಳ ಸುರಕ್ಷತಾ ತಪಾಸಣೆ ನಡೆಸಿ, ದೇಶದ ಒಟ್ಟಾರೆ ವಾಯುಯಾನ ಸುರಕ್ಷತಾ ವ್ಯವಸ್ಥೆಯನ್ನ ನವೀಕರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

    ಬೋಯಿಂಗ್‌ 737-800 ವಿಮಾನವು ಬೋಯಿಂಗ್‌-737 ಮ್ಯಾಕ್ಸ್‌ ಸರಣಿಗಿಂತಲೂ ವಿಭಿನ್ನವಾಗಿದೆ. ಆದ್ದರಿಂದ ಜೆಟ್‌ ಏರ್‌ಲೈನ್‌ಗಳ ಲೆಕ್ಕಪರಿಶೋಧನೆ ಮತ್ತು ಸುರಕ್ಷತಾ ಮಾನದಂಡಗಳ ಕುರಿತು ವಿಮರ್ಷೆ ನಡೆಸುವುದಾಗಿ ಡೆಲ್ಟಾ ಏರ್ ಲೈನ್ಸ್‌ನ ಮಾಜಿ ಮುಖ್ಯ ಪೈಲಟ್ ಮತ್ತು ಈಗ ಸಲಹೆಗಾರರಾಗಿರುವ ಅಲನ್ ಪ್ರೈಸ್ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಎಚ್ಚರಿಕೆ

    ಒಂದು ದಿನದ ಹಿಂದೆಯಷ್ಟೇ ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಪತನಗೊಂಡ ವಿಮಾನ ಕಂಪನಿಯು 39 ಬೋಯಿಂಗ್ 737-800 ಸರಣಿಯ ವಿಮಾನಗಳನ್ನು ನಿರ್ವಹಿಸುತ್ತದೆ. ಒಟ್ಟು 181 ಮಂದಿ ಪ್ರಯಾಣಿಕ ಪೈಕಿ ಇಬ್ಬರು ಮಾತ್ರ ಬದುಕುಳಿದು ಪವಾಡ ಸೃಷ್ಟಿಸಿದ್ದಾರೆ, ಆದ್ರೆ ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಏನ್ನಲಾಗಿದೆ. ಇದನ್ನೂ ಓದಿ: ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ಗೆ ಕಣ್ಣೇಕೆ? ಲಾಭವೇನು?

  • ʻಬ್ಯಾಗ್‌ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ

    ʻಬ್ಯಾಗ್‌ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ

    ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಹೆಲಿಕಾಪ್ಟರ್‌ (Helicopter) ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

    ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಗದ್ದಲದ ನಡುವೆ ರಾಹುಲ್‌ ಗಾಂಧಿ ಅವರ ಬ್ಯಾಗ್‌ ಪರಿಶೀಲಿಸಿದ್ದಾರೆ. ಈ ಕುರಿತ ವೀಡಿಯೋವೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ತಪಾಸಣೆ ನಡೆಸಿದ ವೀಡಿಯೋನಲ್ಲಿ ಚುನಾವಣಾ ಅಧಿಕಾರಿಗಳ ಗುಂಪೊಂದು ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ತಪಾಸಣೆ ನಡೆಸುತ್ತಿರುವುದನ್ನು ತೋರಿಸುತ್ತದೆ. ಇದನ್ನೂ ಓದಿ: ಸಂವಿಧಾನ ಭಾರತದ ಡಿ‌ಎನ್‌ಎ; ಸಂವಿಧಾನದ ಖಾಲಿ ಪ್ರತಿ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ

    ಒಂದು ದಿನದ ಹಿಂದೆಯಷ್ಟೇ ಜಾರ್ಖಂಡ್‌ನ ಗೊಡ್ಡಾದಲ್ಲಿ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಏರ್ ಟ್ರಾಫಿಕ್ ಕಂಟ್ರೋಲ್ (Air Traffic Control) ತಡವಾಗಿ ಅನುಮತಿ ನೀಡಿದ ಪರಿಣಾಮ ರಾಹುಲ್ ಗಾಂಧಿ ಅವರ ಪ್ರಯಾಣ 45 ನಿಮಿಷಗಳ ಕಾಲ ವಿಳಂಬವಾಗಿತ್ತು. ರಾಜ್ಯದ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರಕ್ಕೆ ಅವರು ತೆರಳುತ್ತಿದ್ದ ವೇಳೆ ಅವರ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ತಡವಾಗಿ ಅನುಮತಿ ನೀಡಲಾಗಿತ್ತು. ಇದರಿಂದ ಸುಮಾರು 45 ನಿಮಿಷಗಳ ಕಾಲ ರಾಹುಲ್‌ ಹೆಲಿಕಾಪ್ಟರ್‌ನಲ್ಲೇ ಕಾದು ಕುಳಿತಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ (Congress), ರಾಹುಲ್‌ ಗಾಂಧಿ ಪ್ರಚಾರಕ್ಕೆ ಸಮಸ್ಯೆ ಉಂಟು ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಗೊಡ್ಡಾದಿಂದ ಸುಮಾರು 150 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರ‍್ಯಾಲಿ ಇತ್ತು. ಅವರ ಕಾರ್ಯಕ್ರಮಕ್ಕೆ ಎಟಿಸಿ ಆದ್ಯತೆ ನೀಡಿದೆ ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ತಪಾಸಣೆ ನಡೆದಿದೆ. ಇದನ್ನೂ ಓದಿ: ಮಣಿಪುರ-ಅಸ್ಸಾಂ ಗಡಿಯ ನದಿಯಲ್ಲಿ ಮಹಿಳೆ ಸೇರಿ 3 ಮೃತದೇಹಗಳು ಪತ್ತೆ

    ಕಳೆದ 6 ದಿನಗಳ ಹಿಂದೆಯಷ್ಟೇ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಮೊದಲ ಬಾರಿಗೆ ವೀಡಿಯೊವನ್ನು ಹಂಚಿಕೊಂಡಿದ್ದರು. ಉದ್ಧವ್‌ ಠಾಕ್ರೆ ಅವರ ಬ್ಯಾಗ್‌ ಪರಿಶೀಲಿಸಿದ ಬಳಿಕ ವಿಡಿಯೋ ಹಂಚಿಕೊಂಡು ಮೋದಿ ಮತ್ತು ಬಿಜೆಪಿ ನಾಯಕರಿಗೆ ಇದೇ ರೀತಿಯ ತಪಾಸಣೆಗಳನ್ನು ನಡೆಸಲಾಗುತ್ತದೆಯೇ? ಪ್ರಶ್ನೆ ಮಾಡಿದ್ದರು. ಇದಾದ ನಂತರ ಬ್ಯಾಗ್‌ ತಪಾಸಣೆಯ ಸರಣಿ ಪರಿಶೀಲನೆ ನಡೆದಿದೆ. ಶುಕ್ರವಾರವಷ್ಟೇ ಅಮಿತ್‌ ಶಾ ಅವರ ಹೆಲಿಕಾಪ್ಟರ್‌ ಅನ್ನು ತಪಾಸಣೆ ನಡೆಸಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆಸಿದ ಖ್ಯಾತ ಗಾಯಕ ಸಂಜಯ್ ಚಕ್ರವರ್ತಿ ಅರೆಸ್ಟ್

  • 14 ನಿಮಿಷ ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

    14 ನಿಮಿಷ ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ 14 ನಿಮಿಷ ರಾಡಾರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

    ಶನಿವಾರ ಮಧ್ಯಾಹ್ನ 2.08ಕ್ಕೆ ಸುಷ್ಮಾ ಸ್ವರಾಜ್ ಭಾರತೀಯ ವಾಯುಪಡೆಯ ಎಂಬ್ರೆಯರ್ 135 ವಿಮಾನದಲ್ಲಿ ಪ್ರಯಾಣ ಆರಂಭಿಸಿದ್ದರು. ತಿರುವನಂತಪುರದಿಂದ ಪ್ರಯಾಣ ಆರಂಭಿಸಿದ ಸುಷ್ಮಾ ಅವರು ಮಾರಿಷಸ್‍ಗೆ ತರಳುತ್ತಿತ್ತು. ವಿಮಾನ ಸಂಜೆ 4.44ಕ್ಕೆ ಮಾಲೆಯ ಎಟಿಸಿ(ವಿಮಾನ ಸಂಚಾರ ನಿಯಂತ್ರಣ)ಯೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ನಂತರ ಮಾಲೆ ಎಟಿಸಿಯನ್ನು ಮಾರಿಷಸ್‍ಗೆ ವರ್ಗಾಯಿಸಿತ್ತು.

    ಮಾಲೆಯಿಂದ ಮಾರಿಷಸ್‍ಗೆ ಎಟಿಸಿ ವರ್ಗಾಯಿಸುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಒಂದು ವೇಳೆ ಎಟಿಸಿ ಸಂಪರ್ಕ ಕಳೆದುಕೊಂಡಾಗ ಅಧಿಕಾರಿಗಳು 30 ನಿಮಿಷಗಳವರೆಗೆ ಕಾಯುತ್ತಾರೆ. ಆದ್ರೆ ವಿಮಾನದಲ್ಲಿ ಗಣ್ಯ ವ್ಯಕ್ತಿ ಪ್ರಯಾಣಿಸುತ್ತಿದ್ದ ಕಾರಣದಿಂದ ಭಯಗೊಂಡ ಮಾರಿಷಸ್‍ನ ಸಿಬ್ಬಂದಿ ಅಲಾರಂ ಒತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

    ಸಂಪರ್ಕ ಕಳೆದುಕೊಂಡ ಬರೋಬ್ಬರಿ 14 ನಿಮಿಷಗಳ ಬಳಿಕ ವಿಮಾನ ಮಾರಿಷಸ್ ಎಟಿಸಿಯೊಂದಿಗೆ ಸಂಪರ್ಕ ಸಾಧಿಸಿದೆ ಎಂದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.