Tag: Aster Hospital

  • ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

    ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

    ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಪ್ರವಾಸಿಗ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್ ಮೂಲಕ ಏರ್ ಫೋರ್ಸ್ ಅಧಿಕಾರಿಗಳು ಆತನನ್ನು ರಕ್ಷಣೆ ಮಾಡಿದ್ದಾರೆ.

    ದೆಹಲಿ ಮೂಲದ 19 ವರ್ಷದ ನಿಶಾಂತ್ ಗುಲ್ ಅವರನ್ನು ಏರ್ ಫೋರ್ಸ್ ಅಧಿಕಾರಿಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಬೆಟ್ಟದಿಂದ ಅಪಾಯಕಾರಿ ಜಾಗಕ್ಕೆ ಬಿದ್ದ ಹಿನ್ನೆಲೆ ನಿಶಾಂತ್ ಬೆನ್ನಿಗೆ ಗಂಭೀರ ಗಾಯವಾಗಿದೆ. ಪರಿಣಾಮ ಹೆಲಿಕಾಪ್ಟರ್ ಮೂಲಕವೇ ಯಲಹಂಕ ಏರ್ ಬೇಸ್‍ಗೆ ನಿಶಾಂತ್‍ನನ್ನು ರವಾನೆ ಮಾಡಲಾಗಿತ್ತು. ಅಲ್ಲಿಂದ ಅಸ್ಟರ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕಳುಹಿಸಲಾಗಿದೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಬಂದು ಅಪಾಯಕ್ಕೆ ಸಿಲುಕಿದ ಪ್ರವಾಸಿಗ!

    ಹೆಲಿಕಾಪ್ಟರ್ ಮೂಲಕ ನಿಶಾಂತ್ ರಕ್ಷಣೆಗಾಗಿ ವಿಂಗ್ ಕಮಾಂಡರ್ ಹರಸಾಹಸ ಪಡುತ್ತಿದ್ರು. ಅಲ್ಲದೆ ಈ ವೇಳೆ ನಿಶಾಂತ್ ಫೋನ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಹುಡುಕಲು ಇನ್ನೂ ಕಷ್ಟವಾಗುತ್ತೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯಲ್ಲಿ NDRF ತಂಡ ಸಹ ನಿಶಾಂತ್ ಸಹಾಯಕ್ಕೆ ಆಗಮಿಸಿತು. ಈ ಎಲ್ಲದರ ಪರಿಣಾಮವಾಗಿ ಆತ ಇಂದು ಬದುಕುಳಿದಿದ್ದಾನೆ.

    ಏನಿದು ಘಟನೆ?
    ದೆಹಲಿ ಮೂಲದ ನಿಶಾಂತ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ವೀಕೆಂಡ್ ಎಂದು ಸ್ನೇಹಿತರ ಜೊತೆ ನಂದಿಬೆಟ್ಟಕ್ಕೆ ಬಂದಿದ್ದಾನೆ. ಈ ವೇಳೆ ಅವರು ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಟ್ರೆಕ್ಕಿಂಗ್ ಮಾಡುವ ವೇಳೆ ನಿಶಾಂತ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆತನೇ ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾನೆ. ಪರಿಣಾಮ ನಿಶಾಂತ್ ಉಳಿಸಲು ಆಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ. ಅವರಿಗೆ ಈ ಯುವಕ ಕಡಿದಾದ ಪ್ರದೇಶ ದುರ್ಗಮ ಹಾದಿಯಲ್ಲಿ ಪತ್ತೆಯಾಗಿದ್ದನು. ಇದನ್ನೂ ಓದಿ: ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

  • ಹೆಬ್ಬಾಳ ಆಸ್ಟರ್ ಸಿಎಂಸಿ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಜೀವಂತ ಹೃದಯ ರವಾನೆ

    ಹೆಬ್ಬಾಳ ಆಸ್ಟರ್ ಸಿಎಂಸಿ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಜೀವಂತ ಹೃದಯ ರವಾನೆ

    ಬೆಂಗಳೂರು: ಹೆಬ್ಬಾಳದ ಆಸ್ಟರ್ ಸಿಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಬಿಜಿಎಸ್ ಹೃದಯ ಕೇಂದ್ರಕ್ಕೆ ಜೀವಂತ ಹೃದಯ ಯಶಸ್ವಿಯಾಗಿ ರವಾನೆಯಾಗಿದೆ. ಹೃದಯ ಸಾಗಿಸಲು ಗ್ರೀನ್ ಕಾರಿಡರ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಇದರಿಂದ ಸುಮಾರು 36 ಕಿ.ಮೀ ದೂರವನ್ನು 26 ನಿಮಿಷದಲ್ಲಿ ಅಂಬುಲೆನ್ಸ್ ಕ್ರಮಿಸಿದೆ.

    ಬೆಳಗ್ಗೆ 9:56ಕ್ಕೆ ಹೆಬ್ಬಾಳದ ಸಿಎಂಸಿ ಆಸ್ಪತ್ರೆಯಿಂದ ಹೊರಟ ಅಂಬುಲೆನ್ಸ್ ಮೇಖ್ರಿ ಸರ್ಕಲ್, ಸುಮ್ಮನಹಳ್ಳಿ, ಕೆಂಗೇರಿ ಮಾರ್ಗದ ಮೂಲಕ 10:28ಕ್ಕೆ ಸರಿಯಾಗಿ ಹೃದಯ ಕೇಂದ್ರ ತಲುಪಿತು ಎಂದು ಬಿಜಿಎಸ್ ಹೃದಯ ಕೇಂದ್ರದ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಮೈಸೂರು ಮೂಲದ ರೋಗಿಗೆ ಲಘು ಹೃದಯಾಘಾತವಾಗಿತ್ತು. ಹೃದಯ ಕಸಿ ಮಾಡಲು ಬಿಜಿಎಸ್ ಹೃದಯ ಕೇಂದ್ರದ ವೈದ್ಯರು ನಿರ್ಧರಿಸಿದ್ದರು. ಹೀಗಾಗಿ ರೋಗಿಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಿಜಿಎಸ್ ಹೃದಯ ಕೇಂದ್ರದ ವೈದ್ಯರಾದ ಭಾಸ್ಕರ್ ನೇತೃತ್ವದ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ.