Tag: assults

  • ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಹಲ್ಲೆ

    ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಹಲ್ಲೆ

    ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಡೀಸೆಲ್ ಹಾಕಿಸಿಕೊಳ್ಳಲು ಬಂದಿದ್ದ ಇನ್ನೋವಾ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿದ ಘಟನೆ ನಿನ್ನೆ ರಾತ್ರಿ ಆನೇಕಲ್ ತಾಲೂಕಿನ ಗುಡ್ಡನಹಳ್ಳಿಯಲ್ಲಿ ನಡೆದಿದೆ.

    ಕಾರಿನಲ್ಲಿದ್ದವರು ಕೆಳಗಿಳಿದು ಡೀಸೆಲ್ ಹಾಕಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಪುಂಡರು ಪೆಟ್ರೋಲ್ ಹಾಕಿಸಿಕೊಂಡಿದ್ದರು. ಪೆಟ್ರೋಲ್ ಹಾಕಿಸಿಕೊಂಡ ಬಳಿಕ ನನ್ನ ಹಣವನ್ನು ನೀನೇ ಕೊಡು ಅಂತ ಇನ್ನೋವಾ ಕಾರಿನನವನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹಣ ಕೊಡದೆ ಇದ್ದಾಗ ಕಾರಿನಲ್ಲಿ ಕುಳಿತಿದ್ದ ಇಬ್ಬರ ಮೇಲೆ ಪೆಟ್ರೋಲ್ ಬಂಕ್ ನಲ್ಲಿ ಇದ್ದ ಚಾಕು ತೆಗೆದುಕೊಂಡು ಹಲ್ಲೆ ಎಸಗಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ

    ಇತ್ತೀಚೆಗೆ ರಾಜ್ಯದ ಗಡಿಭಾಗದಲ್ಲಿನ ಯುವಕರ ಪುಂಡಾಟ ಹೆಚ್ಚಾಗಿದೆ. ಹೊರರಾಜ್ಯದಿಂದ ಬಂದವರೇ ಇವರ ಗುರಿಯಾಗಿದ್ದಾರೆ. ಇಂತಹ ಪುಂಡ ಪೋಕರಿಗಳು ಹಣಮಾಡಲು ಅಡ್ಡದಾರಿ ಹಿಡಿದಿದ್ದಾರೆ. ತಮಿಳುನಾಡು ಗಡಿ ಮೂಲಕ ಆನೇಕಲ್ಲಿನ ಮೂಲಕ ಬರುವವರನ್ನು ಅಡ್ಡಗಟ್ಟಿ ಹಲ್ಲೆ ನಡೆಸುತ್ತಾರೆ. ನಿರ್ಜನ ಪ್ರದೇಶದ ರಸ್ತೆ ಆಗಿರುವುದರಿಂದ ಇವರ ಕಳ್ಳಾಟ ಹೆಚ್ಚಾಗಿದ್ದು, ಇಂತಹ ಪುಂಡರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

  • ಬೆಳೆ ಸಾಲ ನೀಡದ್ದಕ್ಕೆ ಬ್ಯಾಂಕ್ ಮ್ಯಾನೇಜರ್‍ಗೆ ರೈತನಿಂದ ಕಪಾಳಮೋಕ್ಷ

    ಬೆಳೆ ಸಾಲ ನೀಡದ್ದಕ್ಕೆ ಬ್ಯಾಂಕ್ ಮ್ಯಾನೇಜರ್‍ಗೆ ರೈತನಿಂದ ಕಪಾಳಮೋಕ್ಷ

    ವಿಜಯಪುರ: ಸಾಲ ನೀಡಲು ನಿರಾಕರಿಸಿದ್ದಕ್ಕೆ ರೈತರೊಬ್ಬರು ಬ್ಯಾಂಕ್ ಮ್ಯಾನೇಜನರ್ ಮೇಲೆ ಹಲ್ಲೆ ನಡೆಸಿದ ಘಟನೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ನಿವಾಸಿ ಗುರುಲಿಂಗಪ್ಪ ಮೂಡಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಮ್ಯಾನೇಜರ್ ಅಶೋಕ್ ವಾಲಿ ಮೇಲೆ ಹಲ್ಲೆ ನಡೆಸಿದ್ದಾನೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಗುರುಲಿಂಗಪ್ಪ ಪರಾರಿಯಾಗಿದ್ದಾನೆ.

    ಏನಿದು ಪ್ರಕರಣ?
    ಲಿಂಗಪ್ಪ ಹಲವು ದಿನಗಳಿಂದ ಬೆಳೆ ಸಾಲಕ್ಕಾಗಿ ಕೆವಿಜಿ ಬ್ಯಾಂಕ್‍ಗೆ ಅಲೆದಾಡುತ್ತಿದ್ದ. ಆದರೆ ಇವನ ಮತ್ತು ಸಹೋದರ ಗುರುಸಿದ್ದಪ್ಪ ಮೂಡಲಿಯ ನಡುವೆ 8 ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ವ್ಯಾಜ್ಯವಿತ್ತು. ಅಲ್ಲದೆ 8 ಎಕರೆ ಜಮೀನು ಇಬ್ಬರಿಗೂ ಹಂಚಿಕೆಯಾಗಿರಲಿಲ್ಲ. ಆದ್ದರಿಂದ ಬೆಳೆ ಸಾಲ ನೀಡಬೇಡಿ ಎಂದು ಗುರುಸಿದ್ದಪ್ಪ ಅವರು ಮ್ಯಾನೇಜರ್‍ಗೆ ತಿಳಿಸಿದ್ದರು. ಈ ಕಾರಣಕ್ಕೆ ಮ್ಯಾನೇಜರ್ ಗುರುಲಿಂಗಪ್ಪನಿಗೆ ಸಾಲ ನೀಡಲು ನಿರಾಕರಿಸಿದ್ದರು. ದಿನವೂ ಬ್ಯಾಂಕ್ ಗೆ ಬಂದು ಅಲೆದಾಡಿ ರೋಸಿಹೊಗಿದ್ದ ಗುರುಲಿಂಗಪ್ಪ ಕೋಪಗೊಂಡು ಮ್ಯಾನೇಜರ್‍ಗೆ ಕಪಾಳಮೋಕ್ಷ ಮಾಡಿ ಈಗ ಪರಾರಿಯಾಗಿದ್ದಾನೆ.