Tag: assult

  • ಕೆಲಸಕ್ಕೆ ಬರಲ್ಲ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಮನಬಂದಂತೆ ಥಳಿತ

    ಕೆಲಸಕ್ಕೆ ಬರಲ್ಲ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಮನಬಂದಂತೆ ಥಳಿತ

    ವಿಜಯಪುರ: ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾ ಮುಗ್ಗಾ ಥಳಿಸಿದ (Assult) ಘಟನೆ ವಿಜಯಪುರದ (Vijayapura)  ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದಿದೆ.

    ಮಾಲೀಕ ಖೇಮು ರಾಠೋಡ ಹಾಗೂ ಸಂಬಂಧಿಕರು ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಮೇಲೆ ಹಲ್ಲೆ ನಡೆದಿದ್ದು ಕಾರ್ಮಿಕರು ಈಗ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪ್ರತಿದಿನ ಕಾರ್ಮಿಕರಿಗೆ 600 ರೂ. ಕೂಲಿ ನೀಡಲಾಗುತ್ತಿತ್ತು. ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16 ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಂದ ಕಾರ್ಮಿಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು.

    ಈ ವಿಚಾರ ತಿಳಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಹೇಳಿ ತನ್ನ ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದಾನೆ. ಮೂರು ದಿನ ಕೂಡಿ ಹಾಕಿ ಪೈಪ್‌ನಿಂದ ಬೆನ್ನು, ಕಾಲು, ಸೊಂಟದ ಮೇಲೆ  ಮನ ಬಂದಂತೆ ಥಳಿಸಿದ್ದಾರೆ.

      

  • ಜಮೀನು ವಿವಾದ – ಯುವಕನ ಕಾಲು ಮುರಿದ ದಾಯಾದಿಗಳು

    ಜಮೀನು ವಿವಾದ – ಯುವಕನ ಕಾಲು ಮುರಿದ ದಾಯಾದಿಗಳು

    ರಾಯಚೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಾಯಾದಿಗಳು ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಮಾನ್ವಿ ತಾಲೂಕಿನ ಕಟಕನೂರು ಗ್ರಾಮದಲ್ಲಿ ನಡೆದಿದೆ.

    ರಾಜೊಳ್ಳಿಯ ನಿವಾಸಿ ಮಂಜುನಾಥ್ ಹಲ್ಲೆಗೊಳಗಾದ ಯುವಕ. ಸಂಬಂಧಿಯನ್ನುದನ್ನು ನೋಡದೆ ನೋವಿನಿಂದ ನರಳಾಡಿದರೂ ಬಿಡದೆ ಬೆನ್ನತ್ತಿ ಹಲ್ಲೆ ಮಾಡಿದ್ದಾರೆ. ದಾಯಾದಿಗಳಾದ ನರಸಣ್ಣ, ತಿಮ್ಮಪ್ಪ, ವಿರೇಶ್ ಎಂಬುವವರಿಂದ ಈ ಹಲ್ಲೆ ನಡೆದಿದೆ. ಇದನ್ನೂ ಓದಿ: ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

    ಹೊಲದಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲು ಹೋದಾಗ, ಒಬ್ಬನೆ ಇರುವುದು ತಿಳಿದು ಹಲ್ಲೆ ಮಾಡಿದ್ದಾರೆ. ಪಿತ್ರಾರ್ಜಿತವಾಗಿ ಬಂದ ಐದುವರೆ ಎಕರೆ ಜಮೀನಿನ ವಿವಾದ ಹಿನ್ನೆಲೆ ಹೊಡೆದಾಟ ನಡೆದಿದೆ. ಮಂಜುನಾಥ್‍ನಿಗೆ ದೊಣ್ಣೆಯಿಂದ ಹೊಡೆದು ಒಂದು ಕಾಲು ಮುರಿದಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಗಾಯಾಳು ಮಂಜುನಾಥ್‍ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಯರಗೇರಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೈವೇಯಲ್ಲಿ ಹಾಕಿದ್ದ ಅಂಗಡಿ ತೆಗೆಯಿರಿ ಎಂದಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ

    ಹೈವೇಯಲ್ಲಿ ಹಾಕಿದ್ದ ಅಂಗಡಿ ತೆಗೆಯಿರಿ ಎಂದಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ

    ಹಾವೇರಿ: ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯನಿರತ ಇಬ್ಬರು ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ನಡೆದಿದೆ.

    ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ್ ಹರಿಜನ ಮತ್ತು ದುಂಡಪ್ಪ ಸಿಬ್ಬಂದಿ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಲ್ಲೆ ಮಾಡಿದ ಆರೋಪಿಗಳನ್ನು ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.

    ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಅಂಗಡಿ ಮುಂದಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ತಿಂಡಿ-ತಿನ್ನಿಸುಗಳ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು.

    ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮತ್ತಿಬ್ಬರು ಪೊಲೀಸರು ಅಂಗಡಿ ಹತ್ತಿರ ಬರುವುದನ್ನು ನೊಡಿ ಆರೋಪಿಯೊಬ್ಬ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ವ್ಯಕ್ತಿಯ ಮೇಲೆ ಮಂಗಳಮುಖಿಯರಿಂದ ಹಲ್ಲೆಗೆ ಯತ್ನ

    ವ್ಯಕ್ತಿಯ ಮೇಲೆ ಮಂಗಳಮುಖಿಯರಿಂದ ಹಲ್ಲೆಗೆ ಯತ್ನ

    ಮಂಗಳೂರು: ಮಂಗಳಮುಖಿಯರಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಹೊರವಲಯದ ಸುರತ್ಕಲ್ ಎನ್.ಐ.ಟಿ.ಕೆ ಟೋಲ್ ಗೇಟ್ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

    ಟೋಲ್ ಗೇಟ್ ತೆರವಿಗೆ ಪ್ರತಿಭಟಿಸುತ್ತಿರುವ ಆಸಿಫ್ ಎಂಬವರ ಮೇಲೆ ಹಲ್ಲೆಗೆ ಯತ್ನ. ವ್ಯಕ್ತಿಗೆ ಮಂಗಳಮುಖಿಯರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

    ದೂರು ದಾಖಲಿಸಿಕೊಂಡ ಪೊಲೀಸರು ವಾಸವಿ ಗೌಡ, ಲಿಪಿಕಾ, ಹಿಮಾ, ಆದ್ಯ, ಮಾಯಾ, ಮೈತ್ರಿ ಎಂಬ 6 ಮಂದಿ ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದುರ್ವರ್ತನೆ ತೋರಿದ ಆರೋಪದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504(ಬೆದರಿಕೆ), 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಆಸಿಫ್ ಅಕ್ರಮವಾಗಿ ಟೋಲ್ ನಡೆಸುತ್ತಿರುವುದಾಗಿ ಆರೋಪಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು.

  • ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ಲಾಂಗ್ ಬೀಸಿದ ಯುವಕ

    ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ಲಾಂಗ್ ಬೀಸಿದ ಯುವಕ

    ಬೆಂಗಳೂರು: ಯುವಕನೊಬ್ಬ ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಗರದ ಕೆ ಆರ್ ಪುರಂ ಮಸೀದಿ ರಸ್ತೆಯಲ್ಲಿ ನಡೆದಿದೆ.

    ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಗ್ಮಾ ಎಂಬಾಕೆಯ ಮೇಲೆ ಆರೋಪಿ ಶಾರುಖ್ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಯುವಕ, ಯುವತಿ ಮೇಲೆ ಲಾಂಗ್ ಬೀಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯು ಮನೆ ಗೇಟ್ ಲಾಕ್ ಮಾಡಿಕೊಂಡಿದ್ದರು. ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ್ದಾನೆ.

    ಶಾರುಖ್ ಮನಬಂದಂತೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಮೇಲೆಯೂ ಲಾಂಗ್ ಬೀಸಿದ್ದಾನೆ. ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ನಗ್ಮಾರವರು ಕೆ ಆರ್ ಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಶೌಚಾಲಯಕ್ಕೆ ಹೋಗಿ ಬರುತ್ತೇನೆಂದ ವಧು ಪ್ರೀಯಕರನ ಜೊತೆಗೆ ಎಸ್ಕೇಪ್

    ಪ್ರಕರಣ ದಾಖಲಾದ ಬೆನ್ನಲ್ಲೇ ಕೆ ಆರ್ ಪುರಂ ಪೊಲೀಸರು ಆರೋಪಿ ಶಾರುಕ್‍ನನ್ನು ಬಂಧಿಸಿದ್ದಾರೆ.

  • ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಲಂಡನ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಭಾನುವಾರ ಫುಟ್‍ಬಾಲ್ ಆಟಗಾರ ಮೇಸನ್ ಗ್ರೀನ್‍ವುಡ್‍ನನ್ನು ಅಮಾನತುಗೊಳಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್, ಸಾಮಾಜಿಕ ಜಾಲತಾಣದಲ್ಲಿ ಗ್ರೀನ್‍ವುಡ್, ಮಹಿಳೆಯ ಮೇಲೆ ಹಲ್ಲೆ ಎಸೆಗಿದ್ದಾರೆಂಬ ಆರೋಪದ ಫೋಟೋಗಳು ವೈರಲ್ ಆಗಿವೆ. ಆಟಗಾರನ ಮೇಲೆ ಅತ್ಯಾಚಾರ ಆರೋಪವೂ ಕೇಳಿಬಂದಿದೆ. ಆರೋಪ ಸಾಬೀತಾಗುವವರೆಗೆ ಕ್ಲಬ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ಯಾವುದೇ ರೀತಿಯ ಹಿಂಸೆಯನ್ನು ಕ್ಷಮಿಸುವುದಿಲ್ಲ. ಆರೋಪವು ಸಾಬೀತಾಗುವವರೆಗೆ ಮೇಸನ್ ಗ್ರೀನ್‍ವುಡ್ ತರಬೇತಿಗೆ ಹಿಂತಿರುಗುವಂತಿಲ್ಲ. ಪೊಲೀಸ್ ತನಿಖೆಯ ಮುಂದಿನ ಸೂಚನೆ ಬರುವವರೆಗೆ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

    ಹಲ್ಲೆ ಆರೋಪದ ಕುರಿತು ಗ್ರೀನ್‍ವುಡ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀಡಿಯೋ, ಛಾಯಾಚಿತ್ರಗಳು ಮತ್ತು ಆಡಿಯೋ ರಿಕಾರ್ಡಿಂಗ್ ಸೇರಿದಂತೆ ಗ್ರೀನ್‍ವುಡ್ ವಿರುದ್ಧದ ಆರೋಪಗಳನ್ನು ಭಾನುವಾರ ಬೆಳಿಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ನಂತರದಲ್ಲಿ ಅಳಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯು ಘಟನೆಯ ಕೆಲ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ನಂತರ ಅತ್ಯಾಚಾರ ಮತ್ತು ಹಲ್ಲೆ ಆರೋಪದ ಶಂಕೆಯ ಮೇಲೆ ಗ್ರೀನ್‍ವುಡ್‍ನನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಆಟಗಾರನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಗ್ರೀನ್‍ವುಡ್ 24 ಪಂದ್ಯಗಳನ್ನಾಡಿದ್ದು, 6 ಗೋಲು ಮಾಡಿದ್ದಾರೆ. ಯುನೈಟೆಡ್‍ನ ಅಕಾಡೆಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಒಮ್ಮೆ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದರು.

  • ಅನೈತಿಕ ಸಂಬಂಧಕ್ಕೆ ಒಪ್ಪದ ಗೃಹಿಣಿಗೆ ಮಾರಣಾಂತಿಕ ಹಲ್ಲೆ

    ಅನೈತಿಕ ಸಂಬಂಧಕ್ಕೆ ಒಪ್ಪದ ಗೃಹಿಣಿಗೆ ಮಾರಣಾಂತಿಕ ಹಲ್ಲೆ

    ಚಾಮರಾಜನಗರ: ಕಾಮುಕನೊಬ್ಬನು ಅನೈತಿಕ ಸಂಬಂಧಕ್ಕೆ ಒಪ್ಪದ ಕಾರಣ ಗೃಹಿಣಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ನಡೆದಿದೆ.

    ಕಾಮುಕ ನಟರಾಜು ಕೆಲವು ತಿಂಗಳಿಂದ ಮಹಿಳೆಗೆ ಲೈಂಗಿಕ ಕಿರುಕುಳಕ್ಕೆ ಒತ್ತಾಯಿಸುತ್ತಿದ್ದ. ಆರೋಪಿಯು ನನ್ನ ಜೊತೆ ಅನೈತಿಕ ಸಂಬಂಧ ಬೆಳೆಸಿದರೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಗೃಹಿಣಿಗೆ ಆಮಿಷ ಒಡ್ಡುತ್ತಿದ್ದ. ಈ ಹಿನ್ನೆಲೆ ಅದಕ್ಕೆ ಒಪ್ಪದ ಗೃಹಿಣಿ ಮನೆಗೆ ತಡರಾತ್ರಿ ನುಗ್ಗಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ಗೃಹಿಣಿಯ ಮಗಳ ಮೇಲೆಯೂ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    POLICE JEEP

    ಹಲ್ಲೆಗೊಳಗಾದ ಅಮ್ಮ ಮಗಳಿಗೆ ಸಕಾ9ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಪೋಲಿಸರು ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್

     

  • ಮಹಿಳಾ ಪೊಲೀಸ್‌ ಮೇಲೆ ಸೌಮ್ಯ ರೆಡ್ಡಿ ದಬ್ಬಾಳಿಕೆ

    ಮಹಿಳಾ ಪೊಲೀಸ್‌ ಮೇಲೆ ಸೌಮ್ಯ ರೆಡ್ಡಿ ದಬ್ಬಾಳಿಕೆ

    ಬೆಂಗಳೂರು: ಜಯನಗರದ ಕಾಂಗ್ರೆಸ್‌ ಶಾಸಕಿ ಶಾಸಕಿ ಸೌಮ್ಯ] ರೆಡ್ಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.

    ರೈತ ಕಾಯ್ದೆ ರದ್ಧತಿ ಆಗ್ರಹಿಸಿ ಇಂದು ಕಾಂಗ್ರೆಸ್‌ ರಾಜಭವನ ಚಲೋವನ್ನು ಆಯೋಜಿಸಿತ್ತು. ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶದ ಬಳಿಕ ರಾಜಭವನಕ್ಕೆ ತೆರಳಲು ಹೋಗುತ್ತಿದ್ದಾಗ ಪೊಲೀಸರು ಕಾಂಗ್ರೆಸ್‌ ನಾಯಕರನ್ನು ತಡೆದಿದ್ದಾರೆ.

    ಈ ವೇಳೆ ಸೌಮ್ಯಾ ರೆಡ್ಡಿ ಅವರನ್ನು ಮಹಿಳಾ ಪೊಲೀಸರು ತಡೆದಿದ್ದಾರೆ. ಈ ವೇಳೆ ಸೌಮ್ಯ ರೆಡ್ಡಿ “ಹೂ ದಿ ಹೆಲ್‌” ಎಂದು ಹೇಳಿ ಮಹಿಳಾ ಸಿಬ್ಬಂದಿಯ ಮೇಲೆ ಕೈ  ಎತ್ತಿದ್ದಾರೆ.

    ತಳ್ಳಾಟ ನೂಕಾಟದಿಂದ ಕೋಪಗೊಂಡಿದ್ದ ಸೌಮ್ಯ ರೆಡ್ಡಿ ಹಲ್ಲೆ ಮಾಡಿ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಬಳಿ ಮಹಿಳಾ ಪೇದೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

    ನಾಯಕರ ಜೊತೆ ಭಾಗವಹಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು  ಪೊಲೀಸರು ತಡೆದು ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.

  • ವರದಕ್ಷಿಣೆ ತರಲು ಒಪ್ಪದ ಪತ್ನಿಗೆ ಬೆಲ್ಟ್ ನಿಂದ ಬಾಸುಂಡೆ ಬರುವಂತೆ ಹೊಡೆದ ಪತಿ

    ವರದಕ್ಷಿಣೆ ತರಲು ಒಪ್ಪದ ಪತ್ನಿಗೆ ಬೆಲ್ಟ್ ನಿಂದ ಬಾಸುಂಡೆ ಬರುವಂತೆ ಹೊಡೆದ ಪತಿ

    ಚಿಕ್ಕಬಳ್ಳಾಪುರ: ವರದಕ್ಷಿಣೆ ಯಾಕೆ ತರಬೇಕು ಎಂದು ಕೇಳಿದ್ದಕ್ಕೆ ಪತಿಯೊರ್ವ ಪತ್ನಿಗೆ ಬಾಸುಂಡೆ ಬರುವಂತೆ ಬೆಲ್ಟ್ ನಿಂದ ಹೊಡೆದಿರುವ ಪೈಶಾಚಿಕ ಕೃತ್ಯ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ.

    ಪತ್ನಿ ಸಿಮ್ರಾನ್ ಹಲ್ಲೆಗೊಳಗಾದಾಕೆ. ಅಬ್ದುಲ್ ರಜಾಕ್ ಹಲ್ಲೆ ಮಾಡಿರುವ ಪಾಪಿ ಪತಿಮಹಾಶಯ. ಅಂದಹಾಗೆ ವೃತ್ತಿಯಲ್ಲಿ ಚಾಲಕನಾಗಿದ್ದ ಅಬ್ದುಲ್ ರಜಾಕ್ 3 ವರ್ಷಗಳ ಹಿಂದೆ ಸಿಮ್ರಾನ್‍ಳನ್ನು ಮದುವೆಯಾಗಿದ್ದ.

    ಮದುವೆಯಾಗಿ ಇಬ್ಬರು ಮಕ್ಕಳಾದರೂ ಪದೇ ಪದೇ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಮದುವೆ ಸಮಯದಲ್ಲೂ ಸಹ 1 ಲಕ್ಷ ವರದಕ್ಷಿಣೆ ಕೊಟ್ಟು ಸಿಮ್ರಾನ್ ತಂದೆ ತಾಯಿ ವಿವಾಹ ಮಾಡಿಕೊಟ್ಟಿದ್ದರು. ನಂತರವೂ ಎರಡು ಮೂರು ಬಾರಿ ಹಣ ಕೊಟ್ಟಿದ್ದಾರೆ. ಇನ್ನೂ ಪದೇ ಪದೇ ಇದೇ ರೀತಿ ವರದಕ್ಷಿಣೆಗಾಗಿ ಅಬ್ದುಲ್ ರಜಾಕ್ ಪೀಡಿಸುತ್ತಿದ್ದು ಎಷ್ಟು ಸಾರಿ ದುಡ್ಡು ತರೋದು ಎಂದು ಸಿಮ್ರಾನ್ ಪ್ರಶ್ನೆ ಮಾಡಿದ್ದಾಳೆ.

    ಇದರಿಂದ ಕೆರಳಿದ ಗಂಡ ಅಬ್ದುಲ್ ರಜಾಕ್ ನನಗೆ ಎದುರು ಜವಾಬು ಕೊಡುತ್ತೀಯ ಎಂದು ಮನೆಯಲ್ಲಿ ಕೂಡಿ ಹಾಕಿ ಬೆಲ್ಟ್ ನಿಂದ ಮನಸ್ಸೋ ಇಚ್ಚೆ ಬಾಸುಂಡೆ ಬರುವಂತೆ ಬಾರಿಸಿದ್ದಾನೆ. ಇದರಿಂದ ಸಿಮ್ರಾನ್ ಮೈ ಕೈ ಎಲ್ಲಾ ರಕ್ತ ಹೆಪ್ಪುಗಟ್ಟಿ ಕೆಂಪಾಗಿ ಬಾಸುಂಡೆ ಬಂದಿದೆ. ಸದ್ಯ ಅಸ್ವಸ್ಥಗೊಂಡಿರುವ ಸಿಮ್ರಾನ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ಹೈದರಾಬಾದ್: ಅತ್ಯಚಾರವೆಸೆಗಿದ ವಿಡಿಯೋ ತೋರಿಸಿ ಆರೋಪಿಗಳು 16 ವರ್ಷದ ಬಾಲಕಿಯೊಬ್ಬಳ ಮೇಲೆ 4 ವರ್ಷಗಳಿಂದ ನಿರಂತರ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಹೈದರಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    4 ವರ್ಷಗಳ ಹಿಂದೆ ಬಾಲಕಿ ಮೇಲೆ ಆಕೆಯ ಸಂಬಂಧಿಕನೊಬ್ಬ ಅತ್ಯಚಾರವೆಸೆಗಿದ್ದ. ಅಲ್ಲದೆ ಆ ದೃಶ್ಯಗಳನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಬಳಿಕ ಆರೋಪಿ ಹಾಗೂ ಆತನ ಸ್ನೇಹಿತರು ಬಾಲಕಿಗೆ ವಿಡಿಯೋ ತೋರಿಸಿ ಬೆದರಿಸಿದ್ದಾರೆ. ಆದ್ರೆ ಈ ಯಾವ ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿರಲಿಲ್ಲ.

    ಆ ವಿಡಿಯೋವೊಂದನ್ನೇ ಇಟ್ಟುಕೊಂಡು ಪಾಪಿಗಳು ಬಾಲಕಿ ಮೇಲೆ ಸತತ 4 ವರ್ಷಗಳಿಂದ ಅತ್ಯಚಾರ ಎಸಗಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಕಿರುಕುಳ ತಾಳಲಾರದೇ ಕಳೆದ ತಿಂಗಳು ಹೈದರಾಬಾದ್‍ನ ಭರೋಸಾ ಕೇಂದ್ರಕ್ಕೆ ತೆರಳಿ ನಡೆದ ಘಟನೆ ಕುರಿತು ತಿಳಿಸಿದ್ದಾಳೆ. ಬಾಲಕಿಯ ದೂರಿನ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಬಾಲಕಿ, ತನ್ನ ಸಂಬಂಧಿಯೊಬ್ಬ ಅವರ ಮನೆಯ ಮೇಲಿನ ಮಹಡಿಗೆ ಆಕೆಯನ್ನು ಕರೆದೊಯ್ದು ಕುಡಿಯುವ ಜ್ಯೂಸ್‍ನಲ್ಲಿ ಮತ್ತು ಬರುವ ಮಿಶ್ರಣವನ್ನು ಬೆರೆಸಿ ಕೊಟ್ಟನು. ಬಳಿಕ ತನ್ನ ಮೇಲೆ ಅತ್ಯಚಾರ ಮಾಡಿ ಅದನ್ನ ವಿಡಿಯೋ ಮಾಡಿಕೊಂಡಿದ್ದನು. ಅಲ್ಲದೆ ಆ ವಿಡಿಯೋ ಇಟ್ಟುಕೊಂಡು ಆರೋಪಿ ಹಾಗೂ ಆತನ ಸ್ನೇಹಿತರು ತನ್ನ ಮೇಲೆ ನಿರಂತರವಾಗಿ ಅತ್ಯಚಾರ ಮಾಡಿದ್ದಾರೆ ಅಂತ ಹೇಳಿದ್ದಾಳೆ.

    ಈ ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆ ಮನೆಯವರು ಪ್ರತಿಭಟನೆ ಮಾಡಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಕೇವಲ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಶಾಮೀಲಾದ ಉಳಿದ 8 ಮಂದಿಯನ್ನು ಕೂಡ ಬಂಧಿಸಬೇಕು. ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv