Tag: Assistant Professors Recruitment

  • ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ: ಯುಜಿಸಿ

    ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ: ಯುಜಿಸಿ

    ನವದೆಹಲಿ: ಸಹಾಯಕ ಪ್ರಾಧ್ಯಾಪಕರ (Assistant Professors Recruitment) ನೇಮಕಾತಿಗೆ ಪಿಹೆಚ್‌.ಡಿ (PhD) ಮಾನದಂಡ ಅಲ್ಲ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (UGC) ತಿಳಿಸಿದೆ.

    ಈ ಹುದ್ದೆ ನೇಮಕಾತಿಗೆ ಪಿಹೆಚ್‌.ಡಿ ಕಡ್ಡಾಯಗೊಳಿಸುವ ತನ್ನ ನಿರ್ಧಾರವನ್ನು ಯುಜಿಸಿ ಹಿಂತೆಗೆದುಕೊಂಡಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇರ ನೇಮಕಾತಿಗೆ ನೆಟ್‌, ಸೆಟ್‌, ಸ್ಲೆಟ್‌ನಂತಹ ಪರೀಕ್ಷೆಗಳು ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ಹೊರಗೆ ಮೊದಲ ಐಐಟಿ ಸ್ಥಾಪನೆ: MEA

    ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಇನ್ಮುಂದೆ ಪಿಎಚ್‌ಡಿ ಅರ್ಹತೆ ಐಚ್ಛಿಕವಾಗಿರುತ್ತದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್), ರಾಜ್ಯ ಅರ್ಹತಾ ಪರೀಕ್ಷೆ (ಎಸ್‌ಇಟಿ) ಮತ್ತು ರಾಜ್ಯಮಟ್ಟದ ಅರ್ಹತಾ ಪರೀಕ್ಷೆ (ಎಸ್‌ಎಲ್‌ಇಟಿ)ಯು ಹುದ್ದೆಯ ನೇರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಹೇಳಿದ್ದಾರೆ.

    ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಯುಜಿಸಿ 2018 ರಲ್ಲಿ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿತ್ತು. ಅಭ್ಯರ್ಥಿಗಳು ತಮ್ಮ ಪಿಹೆಚ್‌.ಡಿ ಪೂರ್ಣಗೊಳಿಸಲು 3 ವರ್ಷಗಳ ಕಾಲಾವಕಾಶ ನೀಡಿತ್ತು. 2021-22ರ ಶೈಕ್ಷಣಿಕ ಅವಧಿಯಿಂದ ನೇಮಕಾತಿಗಾಗಿ ಹೊಸ ಮಾನದಂಡಗಳನ್ನು ಅನ್ವಯಿಸುವಂತೆ ಎಲ್ಲಾ ಕಾಲೇಜು ಮತ್ತು ವಿವಿಗಳಿಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣ – ಸಂತ್ರಸ್ತನ ಕಾಲು ತೊಳೆದು ಗೌರವಿಸಿದ ಮಧ್ಯಪ್ರದೇಶ ಸಿಎಂ

    ಪಿಹೆಚ್‌.ಡಿ ಕಡ್ಡಾಯ ಮಾನದಂಡ ಜಾರಿಗೊಳಿಸುವುದನ್ನು ಯುಜಿಸಿ 2021ರ ಜುಲೈನಿಂದ 2023ರ ಜುಲೈವರೆಗೆ ವಿಸ್ತರಿಸಿತು. ಕೋವಿಡ್‌ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪಿಹೆಚ್‌.ಡಿ ಪೂರ್ಣಗೊಳಿಸುವುದು ಕಷ್ಟವಾಗಿದ್ದರಿಂದ 2021ರಲ್ಲಿ ಯುಜಿಸಿ ಈ ನಿರ್ಧಾರ ತೆಗೆದುಕೊಂಡಿತ್ತು.

    ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಹೆಚ್‌.ಡಿ ಕಡ್ಡಾಯಗೊಳಿಸುವುದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅನುಕೂಲಕರವಲ್ಲ ಎಂದು 2021 ರಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]