Tag: Assistant Professor

  • ‌ಆಕ್ಸಿಡೆಂಟ್ ಕೇಸ್‌ – ಅಸಿಸ್ಟೆಂಟ್ ಪ್ರೊಫೆಸರ್ ಬಂಧನ, ಬಿಡುಗಡೆ

    ‌ಆಕ್ಸಿಡೆಂಟ್ ಕೇಸ್‌ – ಅಸಿಸ್ಟೆಂಟ್ ಪ್ರೊಫೆಸರ್ ಬಂಧನ, ಬಿಡುಗಡೆ

    ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿ ಇತ್ತೀಚೆಗೆ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತವಾದ (Accident) ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ಕಾರಣವಾದ ಅಸಿಸ್ಟೆಂಟ್ ಪ್ರೊಫೆಸರ್ (Assistant Professor) ತ್ರಿನಿಧಿಯನ್ನು ಬಂಧಿಸಿ, ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ.

    ನ.6ರಂದು ಆಳಂದ ತಾಲೂಕಿನ ತಡಕಲ್ ಗ್ರಾಮದ ನಿವಾಸಿ ರಂಜಾನ್ ಎಂಬ ವ್ಯಕ್ತಿಯ ಬೈಕ್ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ತ್ರಿನಿಧಿ ಕಾರಿನ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದನು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕನಿಂಧ ಆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನರೋಣಾ ಪೋಲಿಸ್ ಠಾಣೆ ಪೋಲಿಸರು ಬಂಧಿಸಿ ಕರೆದೊಯ್ದಿದ್ದಾರೆ. ಪಘಾತಕ್ಕೆ ಕಾರಣವಾದ ತ್ರಿನಿಧಿಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದಲೇ ಪೋಲಿಸರು ಬಂಧಿಸಿ ಕರೆದುಕೊಂಡು ಹೋಗಿದ್ದು, ಇದೀಗ ಸ್ಟೇಷನ್ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ.

    ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಇದನ್ನೂ ಓದಿ: Mysuru | ಬೈಕ್ ಓಡಿಸುತ್ತಿರುವಾಗಲೇ ಹೃದಯಾಘಾತ – ತಡೆಗೋಡೆಗೆ ಗುದ್ದಿ ವ್ಯಕ್ತಿ ಸಾವು!

  • ಕೆ-ಸೆಟ್ ಪರೀಕ್ಷೆ ಮಂದೂಡಿಕೆ, ಜ.13ಕ್ಕೆ ನಿಗದಿ

    ಕೆ-ಸೆಟ್ ಪರೀಕ್ಷೆ ಮಂದೂಡಿಕೆ, ಜ.13ಕ್ಕೆ ನಿಗದಿ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಹಾಯಕ ಪ್ರಾಧ್ಯಾಪಕರ (Assistant Professor) ನೇಮಕಾತಿ ಸಲುವಾಗಿ ನಡೆಸುವ ಅರ್ಹತಾ ಪರೀಕ್ಷೆಯನ್ನು ಡಿ.31ರ ಬದಲಿಗೆ ಜನವರಿ‌ 13ರಂದು ನಡೆಸಲಿದೆ.

    ಈ ವಿಷಯವನ್ನು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯತ್ನಾಳ್ ಆರೋಪದ ಬಗ್ಗೆ ಟೀಕೆ ಮಾಡಲ್ಲ, ಎಲ್ಲಾ ಸರಿಯಾಗತ್ತೆ: ಬಿಎಸ್‍ವೈ

     

    ಇದಲ್ಲದೆ, ಕಲ್ಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳನ್ನು ತಮ್ಮ ಪರೀಕ್ಷಾ ಕೇಂದ್ರಗಳಾಗಿ ಆಯ್ಕೆ‌ ಮಾಡಿಕೊಂಡಿದ್ದ ಅಭ್ಯರ್ಥಿಗಳು ಕ್ರಮವಾಗಿ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.

    ಧಾರವಾಡ ಜಿಲ್ಲಾ‌ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚುವರಿಯಾಗಿ ಹಾವೇರಿ ಮತ್ತು ಮೈಸೂರು ಜಿಲ್ಲಾ ಕೇಂದ್ರಗಳಿಗೆ ಮಂಡ್ಯ ಪರೀಕ್ಷಾ ಕೇಂದ್ರಗಳನ್ನು ಸೇರಿಸಲಾಗಿದೆ. ಇವು ಬಿಟ್ಟು ಉಳಿದ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

     

  • ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

    ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

    ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸೌಮ್ಯಾರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

    ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದ್ದು, ಸೌಮ್ಯಾರನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ನ್ಯಾಯಾಧೀಶರಾದ ಮಧು ಅವರು ಈ ಆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಬಂಧನ ಯಾವಾಗ? – ಪ್ರಭಾವಿಗಳ ಶ್ರೀರಕ್ಷೆಯಲ್ಲಿದ್ದಾರಾ ದಿವ್ಯಾ

    ಪರೀಕ್ಷೆ ದಿನ ಎಲ್ಲರ ಹಾಜರಾತಿಗೂ ಮೊದಲು ಪರೀಕ್ಷಾ ಕೇಂದ್ರ ಉಸ್ತುವಾರಿಗಳು ಹಾಜರಿರುತ್ತಾರೆ. ಅಂದರೆ 40 ನಿಮಿಷ ಮೊದಲು ವಿದ್ಯಾರ್ಥಿಗಳಿಗಿಂತ ಮುಂಚೆ ಪ್ರಶ್ನೆಪತ್ರಿಕೆ ಕೊಠಡಿ ಇನ್ವಿಜಿಲೇಟರ್‌ಗೆ ಸಿಕ್ಕಿರುತ್ತದೆ. ಈ ಅವಧಿಯಲ್ಲಿ ಸೌಮ್ಯಾರಿಗೆ ಪ್ರಶ್ನೆಪತ್ರಿಕೆ ಸಿಕ್ಕಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

    ಕೆಲ ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಸೌಮ್ಯಾ ಕಳುಹಿಸಿರಬಹುದು. 18 ಪ್ರಶ್ನೆಗಳು ಮೊಬೈಲ್ ಸ್ಕ್ರೀನ್‌ಶಾಟ್‌ನಲ್ಲಿದ್ದು 11 ಪ್ರಶ್ನೆಗಳು ಒಂದೇ ಥರ ಇದ್ದವು. ಸದ್ಯ ಇದೇ ಆಂಗಲ್‌ನಲ್ಲಿ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಗರಣದಲ್ಲಿ ಪ್ರಾಧ್ಯಾಪಕರೊಬ್ಬರ ಪಾತ್ರ ಇದೆ ಎನ್ನಲಾಗುತ್ತಿದ್ದು, ಪ್ರಕರಣವನ್ನು ಮುಚ್ಚಿಡುವ ಯತ್ನ ಕೂಡ ನಡೆಯುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಸಮನ್ಸ್ ಕಳುಹಿಸಿದರೆ ಅಲ್ಲಿಗೆ ಬಂದು ಉತ್ತರಿಸಬೇಕಿತ್ತು: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಿಡಿ

  • ರೈತನಾಗಿದ್ದವನು ಪೊಲೀಸ್, ಈಗ ಪ್ರೊಫೆಸರ್- ಯುವ ಪಿಳಿಗೆಗೆ ಸ್ಫೂರ್ತಿಯಾದ ಕಥೆ

    ರೈತನಾಗಿದ್ದವನು ಪೊಲೀಸ್, ಈಗ ಪ್ರೊಫೆಸರ್- ಯುವ ಪಿಳಿಗೆಗೆ ಸ್ಫೂರ್ತಿಯಾದ ಕಥೆ

    ಚೆನ್ನೈ: ಗುರಿ ಸರಿಯಾಗಿದ್ದರೆ ಸಾಧನೆಯ ಹಾದಿ ಸರಳವಾಗುತ್ತದೆ ಎನ್ನುತ್ತಾರೆ. ಹೀಗೆ ಇಲ್ಲೊಬ್ಬ ವ್ಯಕ್ತಿ ರೈತನಾಗಿ ವೃತ್ತಿ ಜೀವನವನ್ನು ಆರಂಭಿಸಿ ಒಂದೊಂದೆ ಮೆಟ್ಟಿಲೇರಿದ್ದಾರೆ. ಇವರ ಸಾಧನೆಯ ಹಿಂದಿನ ಕಥೆ ಯುವ ಪಿಳಿಗೆಗೆ ಸ್ಫೂರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    34 ವರ್ಷದ ಅರವಿಂದ್ ಪೆರುಮಾಳ್ ತನ್ನ ಗುರಿಯನ್ನು ಸಾಧಿಸಲು ತಿರುವುಗಳನ್ನು ದಾಟಿ ಬಂದಿದ್ದಾರೆ. ರೈತನಾಗಿ ಕೆಲಸವನ್ನು ಪ್ರಾರಂಭಿಸಿದರು. ಪೊಲೀಸ್‍ಗೆ ಕಾನ್ಸ್‌ಟೇಬಲ್‌, ಪಿಚ್‍ಡಿ ಪಡೆದರು ನಂತರ ಈಗ ಕಾಲೇಜ್‍ವೊಂದರಲ್ಲಿ ಸಹಾಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಖಾಸಗಿ ವಾಹಿನಿ ಜೊತೆಗೆ ಮಾತನಾಡಿ, ನಾನೊಬ್ಬ ರೈತನ ಮಗ, ನಾವು ಜೀವನವನ್ನು ನಡೆದಲು ಹೆಣಗಾಡುತ್ತಿದ್ದೆವು. ನನ್ನ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸಮಯದಲ್ಲಿ, ನನ್ನ ಮತ್ತು ನನ್ನ ಕುಟುಂಬಕ್ಕೆ ಸಹಾಯವನ್ನು ಮಾಡಲು ನಾನು ತೋಟಗಳಲ್ಲಿ ಕೆಲಸ ಮಾಡಿದೆ. ನಾನು ಪಿಎಚ್‍ಡಿ ಮಾಡಬೇಕೆಂದು ಬಯಸಿದ್ದೆ ಆದರೆ ಆ ಸಮಯದಲ್ಲಿ ಹಣಕಾಸಿನ ಅಡಚಣೆಗಳಿಂದ ಅದು ಸಾಧ್ಯವಾಗಲಿಲ್ಲ. 23ನೇ ವಯಸ್ಸಿನಲ್ಲಿ ಪೊಲೀಸ್ ಪಡೆಗೆ ಸೇರಿ 11 ವರ್ಷಗಳ ಕಾಲ ಅಲ್ಲೇ ಮುಂದುವರಿದಿದ್ದೇನೆ ಎಂದರು. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

    ಪೊಲೀಸ್ ಪಡೆಗೆ ಸೇರಿದ ನಂತರ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ (ಎಂಎಸ್‍ಯು) ಪಿಎಚ್‍ಡಿ ಕೋರ್ಸ್‍ಗೆ ಪ್ರವೇಶ ಬರೆದು ಅದರಲ್ಲಿ ಪ್ರವೇಶ ಪಡೆದಿದ್ದೇನೆ. ನಾನು ಅರೆಕಾಲಿಕ ಪಿಎಚ್‍ಡಿ ಕೋರ್ಸ್‍ನ್ನು ಮುಂದುವರಿಸಲು ಅನುಮತಿಯನ್ನು ಕೋರಿದೆ, ಪ್ರಸ್ತುತ ತಮಿಳುನಾಡು ಕರಾವಳಿ ಪೊಲೀಸ್‍ನ ಡಿಐಜಿ ಆಗಿರುವ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಆರ್. ಚಿನ್ನಸ್ವಾಮಿ ಅವರ ಮನವಿಗೆ ತಕ್ಷಣ ಒಪ್ಪಿದರು. ಇದನ್ನೂ ಓದಿ: PhonePe ಮೂಲಕ ಹಣವನ್ನು ಸ್ವೀಕರಿಸುವ ಡಿಜಿಟಲ್ ಭಿಕ್ಷುಕ

    2019ರಲ್ಲಿ ತಮ್ಮ ಪಿಎಚ್‍ಡಿ ಪೂರ್ಣಗೊಳಿಸಿದೆ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅವರಿಗೆ ಡಿಸೆಂಬರ್ 2021ರಲ್ಲಿ ನೀಡಲಾಯಿತು. ಕಳೆದ 11 ವರ್ಷಗಳಿಂದ ಸುತಮಲ್ಲಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೆರುಮಾಳ್ ಕಳೆದ ವಾರ ಗುರುವಾರ ಸೇವೆಯಿಂದ ಬಿಡುಗಡೆ ಹೊಂದಿದ್ದು, ಈಗ ನಾಗರಕೋಯಿಲ್‍ನ ಎಸ್‍ಟಿ ಹಿಂದೂ ಕಾಲೇಜಿಗೆ ಸೇರಿದ್ದಾರೆ.

  • ಕರಿದ ಅನುಪಯುಕ್ತ ಎಣ್ಣೆಯಿಂದ ಡೀಸೆಲ್ ತಯಾರಿ – ನೈಕುಳಿ, ಹೊನ್ನೆಯಲ್ಲಿ ಸಿಗುತ್ತೆ ಡೀಸೆಲ್

    ಕರಿದ ಅನುಪಯುಕ್ತ ಎಣ್ಣೆಯಿಂದ ಡೀಸೆಲ್ ತಯಾರಿ – ನೈಕುಳಿ, ಹೊನ್ನೆಯಲ್ಲಿ ಸಿಗುತ್ತೆ ಡೀಸೆಲ್

    – ಉಡುಪಿಯ ಡಾ. ಸಂತೋಷ್ ಪೂಜಾರಿ ನಮ್ಮ ಪಬ್ಲಿಕ್ ಹೀರೋ

    ಉಡುಪಿ: ಇಂದಲ್ಲ ನಾಳೆ ಪೆಟ್ರೋಲ್ ನಿಕ್ಷೇಪಗಳು ಬರಿದಾಗೋದ್ರಲ್ಲಿ ಡೌಟೇ ಇಲ್ಲ. ಕಚ್ಚಾತೈಲ, ಅನಿಲಗಳ ಬೆಲೆ ದಿನೇ ದಿನೇ ಗಗನಕ್ಕೆ ಚಿಮ್ಮುತ್ತಿದೆ. ನಮ್ಮ ದಾರಿಯನ್ನು ನಾವು ನೋಡಿಕೊಳ್ಳದಿದ್ದರೆ ಕಾಲ ಕಷ್ಟ ಇದೆ. ಈ ನಡುವೆ ಉಡುಪಿಯ ಯುವ ವಿಜ್ಞಾನಿ ಕರಿದ ಎಣ್ಣೆಯಲ್ಲಿ, ಕಾಡಿನಲ್ಲಿ ಸಿಗೋ ಬೀಜಗಳಲ್ಲಿ ಡೀಸೆಲ್ ತಯಾರು ಮಾಡಿದ್ದಾರೆ. ಜೈವಿಕ ಇಂಧನ ಕಂಡು ಹುಡುಕುವ ಮೂಲಕ ದೇಶಕ್ಕೆ ಆಶಾಕಿರಣರಾಗಿದ್ದಾರೆ.

    ಡಾ. ಸಂತೋಷ್ ಪೂಜಾರಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯವರಾಗಿದ್ದು, ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಕರಿದ ಅನುಪಯುಕ್ತ ಎಣ್ಣೆಯನ್ನು ಸಂಗ್ರಹ ಮಾಡಿ ಅದರಿಂದ ಡೀಸೆಲ್ ತಯಾರು ಮಾಡಿದ್ದಾರೆ. ಅಲ್ಲದೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷದಿಂದ ಜೈವಿಕ ಇಂಧನಗಳ ಕುರಿತಂತೆ ಸಂಶೋಧನೆ ಮಾಡುತ್ತಿರುವ ಡಾ. ಸಂತೋಷ್ ಪೂಜಾರಿ ಕರಿದ ಎಣ್ಣೆ, ನೈಕುಳಿ ಬೀಜ, ಹೊನ್ನೆ ಬೀಜ ಮತ್ತು ರಬ್ಬರ್ ಬೀಜಗಳ ಎಣ್ಣೆ ಹಿಂಡಿ ತೆಗೆದು ಡೀಸೆಲ್ ಕಂಡು ಹಿಡಿದಿದ್ದಾರೆ.

    ಕಡು ಬಡತನದಿಂದ ಬಂದಿರುವ ಸಂತೋಷ್‍ಗೆ ನಿಟ್ಟೆ ಎಜುಕೇಶನ್ ಟ್ರಸ್ಟ್ ಸಂಪೂರ್ಣ ಶಿಕ್ಷಣ ಕೊಟ್ಟಿದೆ. ಜೀವಶಾಸ್ತ್ರ ವಿಷಯದ ಮೇಲೆ ಅಧ್ಯಯನ ಮಾಡಿರುವ ಸಂತೋಷ್ ಪೂಜಾರಿ ಬಯೋಲಜಿ ಫಾರ್ ಎಂಜಿನಿಯರ್ಸ್ ಭೋದನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಜೈವಿಕ ಇಂಧನ ಅಭಿವೃದ್ಧಿ ಕೇಂದ್ರವನ್ನು ಮುನ್ನಡೆಸುತ್ತಿರುವ ಸಂತೋಷ್ ಈಗಾಗಲೇ 15 ಸಾವಿರ ಲೀಟರ್ ಜೈವಿಕ ಡೀಸೆಲ್ ತಯಾರು ಮಾಡಿದ್ದಾರೆ. ಕಾಲೇಜಿನ ವಾಹನಗಳು, ಬಸ್ಸುಗಳಿಗೆ ಬಳಸುತ್ತಿದ್ದಾರೆ. ಪಂಪ್‍ನಲ್ಲಿ ಸಿಗುವ ಡೀಸೆಲ್ ರೇಟ್‍ಗಿಂತ 10 ರೂ. ಕಡಿಮೆ ದರದಲ್ಲಿ ಜೈವಿಕ ಡೀಸೆಲ್ ಸೇಲ್ ಮಾಡುತ್ತಿದ್ದಾರೆ.

    ಕಂಪ್ರೆಷನ್ ಇಗ್ನೀಷಿಯನ್ ಇಂಜಿನ್ ಪರ್ಫಾಮೆನ್ಸ್ ಸ್ಟಡೀಸ್ ವಿದ್ ಡಿಫರೆಂಟ್ ಬ್ಲೆಂಡ್ಸ್ ಆಫ್ ಬಯೋ ಡೀಸೆಲ್ ಪ್ರೊಡ್ಯೂಸ್ಡ್ ಫ್ರಂ ನೋವೆಲ್ ಸೋರ್ಸಸ್ ವಿಷಯ ಮಂಡನೆಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಂತೋಷ್‍ಗೆ ಡಾಕ್ಟರೇಟ್ ಪದವಿ ನೀಡಿದೆ. ಅಮೆರಿಕದ ಜೈವಿಕ ಇಂಧನ ಮಂಡಳಿಯ ಕಾರ್ಯಾಗಾರದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಸಂತೋಷ್ ಪಾಲ್ಗೊಂಡಿದ್ದು ಮತ್ತೊಂದು ಹೆಮ್ಮೆ. ಅಮೆರಿಕ ನೆಕ್ಸ್ಟ್ ಜನರೇಶನ್ ಸೈಂಟಿಸ್ಟ್ ಫಾರ್ ಬಯೋ ಡೀಸೆಲ್ ಎಂಬ ಬಿರುದು ಇವರಿಗೆ ನೀಡಿದೆ.

    ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಡಾ. ಸಂತೋಷ್ ಪೂಜಾರಿ ಪ್ರಾಜೆಕ್ಟ್ ಕೊಟ್ಟಿದ್ದಾರೆ. ವಿವಿಧ ಮರಗಳ ಸೊಪ್ಪು, ತೊಗಟೆ, ಬೇರುಗಳಿಂದ ಸೌಂದರ್ಯವರ್ಧಕ ಮತ್ತು ಔಷಧಿ ತಯಾರಿ ಸಂಶೋಧನೆ ನಡೆಸುತ್ತಿದ್ದಾರೆ. ದಿನಪೂರ್ತಿ ಇಂಜಿನಿಯರಿಂಗ್ ಟೀಚಿಂಗ್ ಮಾಡುವ ಸಂತೋಷ್ ಸಂಜೆ- ಬೆಳಗ್ಗೆ ಡೀಸೆಲ್ ಸಂಶೋಧನೆಯ ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ.