Tag: Assistant Commissioner

  • ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ

    ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ

    ಬೆಂಗಳೂರು: ಇಲ್ಲಿನ ಎಸಿಗಳು ಅಂದರೆ ಬರೀ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? ಎಂದು ಬೆಂಗಳೂರು ದಕ್ಷಿಣ ಎಸಿಗೆ ಕಂದಾಯ ಸಚಿವ (Revenue Minister) ಕೃಷ್ಣಭೈರೇಗೌಡ (Krishna Byre Gowda) ಚಳಿ ಬಿಡಿಸಿದರು.

    ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಎಸಿ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸದೆ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಚರ್ಚಿಸಿದರು. ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳ ಉಪ-ವಿಭಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಕಾನ್ಫರೆನ್ಸ್ನಲ್ಲಿ ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ವಿರುದ್ಧ ಮಾತನಾಡಿ, ನಿಮ್ಮ ವ್ಯಾಪ್ತಿಯಲ್ಲಿ ಬರುವ ಕೇಸ್ ಬಿಟ್ಟು ಬೇರೆ ವ್ಯಾಪ್ತಿಯ ಕೇಸ್ ಯಾಕೆ ತೆಗೆದುಕೊಂಡಿದ್ದೀರಾ? 66% ವ್ಯಾಪ್ತಿ ಮೀರಿ ಕೇಸ್ ತೆಗೆದುಕೊಳ್ಳುವ ಹಾಗಿಲ್ಲ. ಈ ಕೇಸ್ ತೆಗೆದುಕೊಳ್ಳಲು ಅವರ ಬಳಿ ಎಷ್ಟು ಹಣ ತೆಗೆದುಕೊಂಡಿದ್ದೀರಾ? ಒಳ ಒಪ್ಪಂದ ಎನಿದೆ? ಹಣ ಮಾಡೋಕೆ ಎಸಿ ಆಗಿದ್ದೀರಾ ಎಂದು ಕೆಂಡಾಮಂಡಲರಾಗಿ ಹಿಗ್ಗಾಮುಗ್ಗ ಜಾಡಿಸಿದರು.

    ಬೆಂಗಳೂರು ಎಸಿಗಳು ಅಂದರೆ ಬರೀ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? ನಿಮ್ಮ ಕೆಲಸ ಬಗ್ಗೆ ಇಡೀ ದೇಶ ಮಾತಾಡುತ್ತಿದೆ. ನೀವೇನು ಕಾನೂನು ಒಳಗೆ ಇರೋರಾ? ಕಾನೂನುಗಿಂತ ಮೇಲೆ ಇರೋರಾ? ಎಂದು ಅಧಿಕಾರಿಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

    ಮಧುಗಿರಿ ಎಸಿ ವಿರುದ್ಧವೂ ಸಚಿವರು ಗರಂ ಆಗಿ ಕಿವಿ ಮೇಲೆ ದಾಸವಾಳ ಹೂ ಕಾಣುತ್ತಿದೆಯಾ? ಮರ್ಯಾದೆ ಕೊಟ್ಟರೆ ಮರ್ಯಾದೆ ತಗೊಳ್ಳೋಕೆ ನಿಮಗೆ ಯೋಗ್ಯತೆಯಿಲ್ಲ ಅಂತಹ ಅಯೋಗ್ಯರು ನೀವು. ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದ್ರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ? ಎಂದು ಕಿಡಿ ಕಾರಿದರು.

    ಕೋರ್ಟ್ ಕೇಸ್ ವಿಲೇವಾರಿ ಮಾಡದ ತುಮಕೂರು ಮಧುಗಿರಿ ಎಸಿ ಶಿವಪ್ಪ ಹಾಗೂ ಎಸಿ ಗೌರವ್ ಶೆಟ್ಟಿ ವಿರುದ್ಧವೂ ಕೆಂಡಾಮಂಡಲರಾದರು.

  • ಬೆಳಗಾವಿ ಎಸಿ ಕಚೇರಿಯನ್ನೇ ಜಪ್ತಿ ಮಾಡಿ ವಸ್ತುಗಳನ್ನು ಹೊತ್ತೊಯ್ದ ರೈತರು!

    ಬೆಳಗಾವಿ ಎಸಿ ಕಚೇರಿಯನ್ನೇ ಜಪ್ತಿ ಮಾಡಿ ವಸ್ತುಗಳನ್ನು ಹೊತ್ತೊಯ್ದ ರೈತರು!

    ಬೆಳಗಾವಿ: ಪರಿಹಾರ ನೀಡಲು ವಿಳಂಬ ಮಾಡಿರುವ ಹಿನ್ನೆಲೆ ರೈತರು ಎಸಿ (Assistant Commisioner) ಕಚೇರಿ ವಸ್ತುಗಳನ್ನು ಜಪ್ತಿ ಮಾಡಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ.

    ಡಿಸಿ ಕಚೇರಿ ಆವರಣದಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಕಂಪ್ಯೂಟರ್, ಕುರ್ಚಿಗಳು, ಪ್ರಿಂಟರ್ ಸೇರಿದಂತೆ ವಿವಿಧ ವಸ್ತುಗಳನ್ನು ರೈತರು ಹೊತ್ತೊಯ್ದಿದ್ದಾರೆ.ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1’ರಲ್ಲಿ ಕಳರಿಪಯಟ್ಟು ವೀರನ ಪಾತ್ರದಲ್ಲಿ ರಿಷಬ್ ಶೆಟ್ಟಿ

    2008ರಲ್ಲಿ ಬೆಳಗಾವಿ (Belagavi) ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ (Belagavi Airport) ವಿಸ್ತರಣೆ ಕಾಮಗಾರಿಗಾಗಿ ರೈತರು ತಮ್ಮ 270 ಎಕರೆ ಜಮೀನುಗಳನ್ನು ಕೊಟ್ಟಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಜಮೀನುಗಳನ್ನು ಕೊಟ್ಟಿದ್ದ ರೈತರಿಗೆ ಪ್ರತಿ ಎಕರೆಗೆ ಕೇವಲ 2 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿತ್ತು.

    2011ರಲ್ಲಿ ರೈತರು ಹೆಚ್ಚಿನ ಪರಿಹಾರ ಕೋರಿ ಕೋರ್ಟ್ ಮೊರೆಹೋಗಿದ್ದರು. ಬೆಳಗಾವಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರ ವಿಚಾರಣೆ ನಡೆಸಿ 2018 ರಲ್ಲಿಯೇ ಪ್ರತಿ ಗುಂಟೆಗೆ 40 ಸಾವಿರ ರೂ. ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಇದಾದ ಬಳಿಕ 2021ರಲ್ಲಿ ಸಕಾಲಕ್ಕೆ ಪರಿಹಾರ ಕೊಡದೇ ಇದ್ದಿದ್ದರಿಂದ ರೈತರು ಮತ್ತೆ ನ್ಯಾಯಾಲಯದ ಮೊರೆಹೋಗಿದ್ದಾರೆ. ಆಗ ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ ಮತ್ತೊಮ್ಮೆ ಕೋರ್ಟ್ ಆದೇಶಿಸಿದೆ. ಆಗಲೂ ಪರಿಹಾರ ನೀಡದಿದ್ದರಿಂದ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು.ಇದನ್ನೂ ಓದಿ: MUDA Scam| ಪತ್ನಿ ಪತ್ರ ಬರೆದಿದ್ರೂ ಬರೆದಿಲ್ಲ ಎಂದು ಸಿಎಂ ಸುಳ್ಳು ಹೇಳಿದ್ರಾ?

    ಜಮೀನು ಕೊಟ್ಟಿದ್ದ 20 ರೈತರ 8 ಕೋಟಿ ರೂ. ಪರಿಹಾರ ಇನ್ನೂ ಬಾಕಿಯಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಎಸಿ ಕಚೇರಿ ಪೀಠೋಪಕರಣಗಳನ್ನು ರೈತರು ಜಪ್ತಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.

  • ತಡವಾಗಿ ಬಂದ ಸಹಾಯಕ ಆಯುಕ್ತ – ಸಭೆಯಿಂದಲೇ ಹೊರಕಳುಹಿಸಿದ ರಾಯಚೂರು ಡಿಸಿ

    ತಡವಾಗಿ ಬಂದ ಸಹಾಯಕ ಆಯುಕ್ತ – ಸಭೆಯಿಂದಲೇ ಹೊರಕಳುಹಿಸಿದ ರಾಯಚೂರು ಡಿಸಿ

    ರಾಯಚೂರು: ಸಭೆಗೆ ತಡವಾಗಿ ಬಂದ ಸಹಾಯಕ ಆಯುಕ್ತನನ್ನು ರಾಯಚೂರು ಜಿಲ್ಲಾಧಿಕಾರಿ (Raichuru DC) ತರಾಟೆಗೆ ತೆಗೆದುಕೊಂಡು ಹೊರಗಡೆ ಕಳುಹಿಸಿದ ಪ್ರಸಂಗ ನಡೆದಿದೆ.

    ಮುಂಗಾರು ಆರಂಭವಾಗುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳ ಕುರಿತು ಮುಂದಾಗಬಹುದಾದ ಮಳೆ ಹಾನಿ ಪರಸ್ಥಿತಿ ಎದುರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ನೇತೃತ್ವದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಇದನ್ನೂ ಓದಿ: ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್‌ ಕಟ್ಟಿ ಎನ್ನುತ್ತಿದೆ ಬೆಸ್ಕಾಂ

     

    ಸಭೆಗೆ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ (Assistant Commissioner) ರಜನೀಕಾಂತ್ ಚವ್ಹಾಣ್‌ ತಡವಾಗಿ ಬಂದಿದ್ದಾರೆ. ಸಭೆಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರೂ ಸಹಾಯಕ ಆಯುಕ್ತರು ತಡವಾಗಿ ಬಂದಿದ್ದಕ್ಕೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಗೆಟ್ ಔಟ್ ಎಂದು ಗದರಿದ್ದಾರೆ. ಅಧಿಕಾರಿಗಳ ಮುಂದೆ ಹೆಚ್ಚು ಮಾತು ಬೇಡ ಮೊದಲು ಸಭೆಯಲ್ಲಿ ಹೊರನಡೆಯಿರಿ ಎಂದು ಗದರಿಸಿ ಹೊರಗಡೆ ಕಳುಹಿಸಿದ್ದಾರೆ.

  • ಸರ್ಕಾರಿ ನೌಕರನಿಗೆ ಕಪಾಳಮೋಕ್ಷ ಮಾಡಿದ ಹಾಸನ ಎಸಿ

    ಸರ್ಕಾರಿ ನೌಕರನಿಗೆ ಕಪಾಳಮೋಕ್ಷ ಮಾಡಿದ ಹಾಸನ ಎಸಿ

    ಹಾಸನ: ಸರ್ಕಾರಿ ನೌಕರನಿಗೆ ಎಸಿ (Assistant Commissioner) ಬಿ.ಎ. ಜಗದೀಶ್ ಕಪಾಳ ಮೋಕ್ಷ ಮಾಡಿ ದರ್ಪ ತೋರಿದ ಘಟನೆ ಹಾಸನಾಂಬೆ ದೇಗುಲದಲ್ಲಿ (Hasanamba Temple) ನಡೆದಿದೆ.

    ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಘಟನೆ ನಡೆದಿದ್ದು, ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡರಿಗೆ ಹಾಸನದ ಉವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ. ನೂರಾರು ಜನರು ಒಳ ಬರುತ್ತಿದ್ದಾಗ ಅವರ ಜೊತೆಯಲ್ಲಿಯೇ ಜಿಲ್ಲಾ ಪಂಚಾಯಿತಿ ನೌಕರ ಶಿವೇಗೌಡರು ಬಂದಿದ್ದರು. ಆ ವೇಳೆ ಎಸಿ ಜಗದೀಶ್ ಆತನನ್ನು ತಡೆದು, ಯಾಕೋ ಓಡಿ ಬರುತ್ತಿದ್ದಿಯಾ, ನಿನಗೆ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದನೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ಹಲ್ಲೆ

    ತಾನು ಜಿ.ಪಂ. ನೌಕರ ಎಂದು ಶಿವೇಗೌಡ ಗುರುತಿನ ಚೀಟಿ ತೋರಿಸಿದ್ದಾರೆ. ಆದರೆ ಎಸಿ ಜಗದೀಶ್ ಕೊರಳಲ್ಲಿ ಧರಿಸಿದ್ದ ಕಾರ್ಡ್ ಕಿತ್ತು ಎಸೆದಿದ್ದು, ಶಿವೇಗೌಡ ಕುಟುಂಬದವರ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾರೆ. ಸಣ್ಣ ಕಾರಣಕ್ಕೆ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದ ಎಸಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ತಾಯಿ ಸನ್‍ಸ್ಕ್ರೀನ್ ಕಳಿಸಿದ್ರು, ನಾನು ಬಳಸಲ್ಲ: ರಾಹುಲ್ ಗಾಂಧಿ

    Live Tv
    [brid partner=56869869 player=32851 video=960834 autoplay=true]

  • ಅಧಿಕಾರಿ ವರ್ಗದ ಶ್ರಮಕ್ಕೆ ಯಾದಗಿರಿ ಜನತೆಯ ಮೆಚ್ಚುಗೆ

    ಅಧಿಕಾರಿ ವರ್ಗದ ಶ್ರಮಕ್ಕೆ ಯಾದಗಿರಿ ಜನತೆಯ ಮೆಚ್ಚುಗೆ

    ಯಾದಗಿರಿ: ಇಡೀ ದೇಶದಲ್ಲಿಯೆ ಪಾಪಿ ಕೊರೊನಾ ತನ್ನ ರೌದ್ರ ನರ್ತನ ಮಾಡುತ್ತಿದ್ದೆ. ಆದರೆ ಯಾದಗಿರಿಯಲ್ಲಿ ಮಾತ್ರ ಕೊರೊನಾ ಇನ್ನೂ ಎಂಟ್ರಿಯಾಗಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳ ಪರಿಶ್ರಮ, ಹೌದು ಕೊರೊನಾ ವೈರಸ್ ಹರಡದಂತೆ ಅಧಿಕಾರಿಗಳ ವರ್ಗ ಜಿಲ್ಲೆಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದೆ.

    ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪುತ್ ಅವರು ಹೆಂಡತಿ ಕಳೆದ 6 ತಿಂಗಳ ಹಿಂದೆ ಹೆರಿಗೆ ಸಮಯದಲ್ಲಿ ಮಗುವಿಗೆ ಜನ್ಮ ನೀಡಿ ಪ್ರಾಣ ಬಿಟ್ಟಿದ್ದರು. ಪ್ರಕಾಶ್ ಗೆ ತಮ್ಮ ಹೆಂಡತಿ ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಹಸುಗೂಸನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಗಲಿಗಿಲಿದೆ. ಹೀಗಿದ್ದರೂ ಪ್ರಕಾಶ್ ಜಿಲ್ಲೆಯ ಜನರ ಹಿತಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

    ಸದ್ಯ ಪ್ರಕಾಶ್ ಅವರಿಗೆ ಮೂವರು ಮಕ್ಕಳಿದ್ದಾರೆ. ಕೊರೊನಾ ಮುಂಜಾಗ್ರತೆಯ ಕ್ರಮವಾಗಿ ಮಕ್ಕಳಿಂದ ದೂರ ಇರುವ ಅವರು ಮನೆಯಲ್ಲಿ ಪ್ರತ್ಯೇಕವಾದ ಕೊಣೆಯಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿ ಮಕ್ಕಳಿದ್ದರು ಮಕ್ಕಳೊಂದಿಗೆ ಖುಷಿಪಡಲು ಆಗುತ್ತಿಲ್ಲ. ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ಜನರ ಒಳಿತಿಗಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

    ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರು ಕೂಡ ಕೊರೊನಾ ವಿರುದ್ಧ ಹಗಲಿರುಳು ಹೋರಾಟ ಮಾಡುತ್ತಿದ್ದಾರೆ. ಶಂಕರಗೌಡ ಅವರ ಪ್ರೀತಿಯ ಅಜ್ಜ ಮೃತಪಟ್ಟಿದ್ದರು ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೆ ಯಾದಗಿರಿಯಲ್ಲಿದ್ದುಕೊಂಡು ಕೊರೊನಾ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅಜ್ಜನ ಸಾವಿನ ನೋವಿಗಿಂತ ಜನರ ನೋವು ನನಗೆ ಮುಖ್ಯ ಎನ್ನುವ ಶಂಕರಗೌಡ ಅವರು, ತಮಗೆ ವೈಯಕ್ತಿಕವಾಗಿ ಆರೋಗ್ಯ ಸಮಸ್ಯೆಯಿದ್ದರೂ ಅದನ್ನು ಲೆಕ್ಕಿಸದೇ ಕೂಲಿ ಕಾರ್ಮಿಕರು, ರೈತರು, ಜನಸಾಮಾನ್ಯರ ಬಳಿಗೆ ತೆರಳಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ. ಈ ಇಬ್ಬರ ಕರ್ತವ್ಯ ನಿಷ್ಠೆಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.