Tag: Assistant

  • ಕತ್ತೆ ಕಾಯೋಕ್ಕಿದ್ದೀರಾ? ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಧುಸ್ವಾಮಿ ಕ್ಲಾಸ್

    ಕತ್ತೆ ಕಾಯೋಕ್ಕಿದ್ದೀರಾ? ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಧುಸ್ವಾಮಿ ಕ್ಲಾಸ್

    ತುಮಕೂರು: ಇಂದು ನಡೆದ ತುಮಕೂರು ಜಿ.ಪಂ. ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆಗಿದ್ದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಗೆ ಗೈರಾಗಿ, ಸಹಾಯಕ ಅಧಿಕಾರಿಗಳನ್ನು ಕಳುಹಿಸಿದಕ್ಕೆ ಸಿಡಿಮಿಡಿಗೊಂಡಿದ್ದಾರೆ.

    ಸಭೆಗೆ ಹಾಜರಾಗಿದ್ದ ಸಹಾಯಕ ಅಧಿಕಾರಿಗಳನ್ನು, ಸಭೆಯಿಂದ ಜಾಗ ಖಾಲಿ ಮಾಡಿ ಎಂದು ವಾರ್ನ್ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಬಂದಿದ್ದಕ್ಕೆ ಕೋಪಗೊಂಡ ಮಾಧುಸ್ವಾಮಿ, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ್ದಾರೆ.

    ಸಚಿವರ ಪ್ರಶ್ನೆಗೆ ನಾನು ಅವರ ಅಸಿಸ್ಟೆಂಟ್ ಎಂದಾಗ ಯಾತಕ್ಕೆ ಇದ್ದೀರ ಇಲ್ಲಿ? ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಟ್‍ಗಳನ್ನು ಕಳುಹಿಸಬಾರದು ಎಂದು ನಾನು ಈ ಮುಂಚೆಯೇ ಕ್ಲಿಯರ್ ಆಗಿ ಡಿಸಿ ಅವರ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಆಫೀಸರ್ಸ್ ಮಾಹಿತಿ ನೀಡಬೇಕು. ನೀಡಿ ಇಲ್ಲಾ ಅಂದರೆ ಆಚೆ ಹೋಗಿ. ಕತ್ತೆ ಕಾಯೋಕಿದ್ದೀರ ಜಿಲ್ಲಾಮಟ್ಟದ ಅಧಿಕಾರಿಗಳು ಎಂದು ಚಳಿ ಬಿಡಿಸಿದ್ದಾರೆ.

    ಇದೇ ವೇಳೆ ಮನವಿ ಸಲ್ಲಿಸಲು ಬಂದಿದ್ದ ಮಾಜಿ ಜೆಡಿಎಸ್ ಶಾಸಕ ನಿಂಗಪ್ಪ ಅವರನ್ನು ಲೇವಡಿ ಮಾಡಿದ ಮಾಧುಸ್ವಾಮಿ, ನಿಂಗಪ್ಪ ತಮ್ಮ ನಾಲ್ಕು ಮನವಿ ಇದೆ ಎಂದಾಗ ಒಂದು ದೆಹಲಿ ಬೇಕು, ಇನ್ನೂಂದು ಏರುಪೋರ್ಟ್ ಬೇಕು, ಇನ್ನೂಂದು ವಿಧಾನ ಸೌಧ ನಿಮಗೆ ಬಿಟ್ಟುಕೊಡ ಬೇಕಾ ಎಂದು ಹೇಳಿದರು. ಇದಕ್ಕೆ ಕೋಪಗೊಂಡ ಜೆಡಿಎಸ್ ಕಾರ್ಯಕರ್ತರು ವಿಧಾನಸೌಧ ಕೇಳಲು ನಾವು ಇಲ್ಲಿಗೆ ಬಂದಿಲ್ಲ, ನೀರು ಕೊಡಿ ಸಾಕು ಎಂದು ತಿರುಗೇಟು ಕೊಟ್ಟರು.

    ಜೆಡಿಎಸ್ ಕಾರ್ಯಕರ್ತರು ಮಾತಿಗೆ ಉತ್ತರಿಸಿದ ಮಾಧುಸ್ವಾಮಿ, ನಾನು ನಿಂಗಪ್ಪ ಬಹಳ ಕಾಲದ ಸ್ನೇಹಿತರು ಆ ಸಲುಗೆಯಿಂದ ಹಾಗೇ ಅಂದೆ ಎಂದು ಹೇಳಿದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ನಮಗೆ ಯಾವುದು ಬೇಡ ನೀರು ಬೇಕು ಎಂದು ಪ್ರತಿಭಟನೆ ಮಾಡಿದರು. ಗ್ರಾಮಾಂತರ ಪ್ರದೇಶಕ್ಕೆ ಹೇಮಾವತಿ ನೀರು ಹರಿಸುಂತೆ ಮನವಿ ಸಲ್ಲಿಸಿದರು.

  • ಮಗು ಮೂತ್ರ ಮಾಡಿದ್ದಕ್ಕೆ ಕಾಲಿಗೆ ಬರೆ ಎಳೆದ ಅಂಗನವಾಡಿ ಸಹಾಯಕಿ!

    ಮಗು ಮೂತ್ರ ಮಾಡಿದ್ದಕ್ಕೆ ಕಾಲಿಗೆ ಬರೆ ಎಳೆದ ಅಂಗನವಾಡಿ ಸಹಾಯಕಿ!

    ಮೈಸೂರು: ಅಂಗನವಾಡಿಯಲ್ಲಿ ಮಗು ಮೂತ್ರ ಮಾಡಿದ್ದರಿಂದ ಸಿಟ್ಟುಗೊಂಡ ಸಹಾಯಕಿಯೊಬ್ಬರು ಬರೆ ಹಾಕಿರುವ ಅಮಾನವೀಯ ಘಟನೆ ನಗರದ ದೇವಯ್ಯನ ಹುಂಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ನಗರದ ದೇವಯ್ಯನ ಹುಂಡಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಅಂಗನವಾಡಿಯಲ್ಲಿ ಪುಟ್ಟ ಮಗುವೊಂದು ಮೂತ್ರ ಮಾಡಿತ್ತು. ಕೋಪಗೊಂಡ ಆಯಾ ನೀಲಮ್ಮ ಗ್ಯಾಸ್ ಸ್ಟೌವ್‍ನಲ್ಲಿ ಚಾಕು ಕಾಯಿಸಿ ಮಗುವಿನ ಕಾಲಿಗೆ ಬರೆ ಹಾಕಿದ್ದಾಳೆ. ಇದನ್ನೂ ಓದಿ: ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ವಿಷಯ ತಿಳಿಯುತ್ತಿದ್ದಂತೆಯೇ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಪೋಷಕರು ಆಯಾ ನೀಲಮ್ಮರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆಯಾ ಮಕ್ಕಳ ಮೇಲೆ ಯಾವಾಗಲೂ ಇದೇ ರೀತಿ ದೌರ್ಜನ್ಯ ನಡೆಸುತ್ತಾಳೆ ಎಂದು ಆರೋಪಿಸಿರುವ ಗ್ರಾಮಸ್ಥರು, ಕೂಡಲೇ ಆಯಾರನ್ನು ಅಮಾನತು ಮಾಡುವಂತೆ ಅಂಗನವಾಡಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೈಸ್ಕೂಲ್ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡ ಶಾಲಾ ಸಹಾಯಕ

    ಹೈಸ್ಕೂಲ್ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡ ಶಾಲಾ ಸಹಾಯಕ

    ಬಾಗಲಕೋಟೆ: ಪ್ರೌಢಶಾಲೆ ವಿದ್ಯಾರ್ಥಿನಿಯನ್ನು ಶಾಲೆಯ ಸಹಾಯಕಯೊಬ್ಬ ಲೈಂಗಿಕವಾಗಿ ಬಳಸಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅನ್ನದಾನೇಶ್ವರ ಪ್ರೌಢಶಾಲೆಯ ಪಿಯುನ್ ಖಾದ್ರಿ ಭಾಷಾ, ತಾನು ಕಾರ್ಯನಿರ್ವಹಿಸುತ್ತಿದ್ದ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದಕ್ಕೆ ಆತ ಮತ್ತು ವಿದ್ಯಾರ್ಥಿನಿ ಇಬ್ಬರು ನಡೆಸಿದ ಮೊಬೈಲ್ ಮಾತುಕತೆಯ ಸಂಭಾಷಣೆ ಆಡಿಯೋ ಸಾಕ್ಷಿಯಾಗಿದೆ.

    ಭಾಷಾ ಹಾಗೂ ವಿದ್ಯಾರ್ಥಿನಿ ನಡೆಸಿದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಪಿಯುನ್ ಖಾದ್ರಿ ಭಾಷಾನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಅಲ್ಲದೇ ಶಾಲಾ ಆಡಳಿತ ಮಂಡಳಿ ಸಭೆ ಸೇರಿ ಆತನನ್ನು ಕೆಲಸದಿಂದ ವಜಾ ಮಾಡುವ ನಿರ್ಧಾರ ಮಾಡಿದ್ದಾರೆ. ಈ ನಡುವೆ ಖಾದ್ರಿ ಭಾಷಾ ತಪ್ಪೊಪ್ಪಿಗೆ ಪತ್ರ ಬರೆದಿದ್ದು, ನಾನು ತಪ್ಪು ಮಾಡಿದ್ದೇನೆ ಇನ್ನು ಮುಂದೆ ಹೀಗಾಗೋದಿಲ್ಲ ಎಂದು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪರಾರಿಯಾಗಿದ್ದಾನೆ.

    ಈ ಕುರಿತು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಸಭೆ ನಡೆಸಿ ಶಾಲೆ ಮತ್ತು ಗ್ರಾಮದ ಮರ್ಯಾದೆ ಹೋಗುತ್ತದೆ ಎಂದು ಪ್ರಕರಣವನ್ನು ಹೊರಬಾರದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೂ ಈ ಆಡಿಯೋ ಫೋನ್‍ಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಮುಗ್ಧ ಮನಸ್ಸಿನ ಬಾಲಕಿಯನ್ನು ಸಹಾಯಕ ಪುಸಲಾಯಿಸಿ ಮಾತಿನಲ್ಲಿ ಮರಳು ಮಾಡಿ ಲೈಂಗಿಕವಾಗಿ ಬಳಸಿಕೊಂಡು ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದು ಬಹಿರಂಗವಾಗಿದೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಈ ವಿಷಯವನ್ನು ಮುಕ್ತಾಯ ಮಾಡಲು ಗ್ರಾಮಸ್ಥರು ಮತ್ತು ಶಾಲಾ ಆಡಳಿತ ಮಂಡಳಿ ತೀರ್ಮಾನಿಸಿದೆ.