Tag: Assistance

  • ಪ್ಯಾಲೆಸ್ತೀನಿಯರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲ

    ಪ್ಯಾಲೆಸ್ತೀನಿಯರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲ

    ಟೆಲ್ ಅವಿವ್: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ ಜಾಯ್ (Malala Yousafzai) ಅವರು ಪ್ಯಾಲೆಸ್ತೀನಿಯನ್ನರಿಗೆ (Palestine) ಸಹಾಯ ಮಾಡುವ ಮೂರು ದತ್ತಿಗಳಿಗೆ 3,00,000 ಡಾಲರ್ (ಸುಮಾರು 2.5 ಕೋಟಿ) ನೆರವು (Assistance) ನೀಡುವುದಾಗಿ ಘೋಷಿಸಿದ್ದಾರೆ.

    ಮಂಗಳವಾರ ಗಾಜಾದಲ್ಲಿ (Gaza) ಆಸ್ಪತ್ರೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 500 ಜನರು ಸಾವನ್ನಪ್ಪಿದ ಘಟನೆಯನ್ನು ಕಂಡು ತಾನು ಗಾಬರಿಗೊಂಡಿದ್ದೇನೆ ಎಂದು ಯೂಸುಫ್ ಜಾಯ್ ಹೇಳಿದರು ಮತ್ತು ಸಾಮೂಹಿಕ ಶಿಕ್ಷೆ ಇದಕ್ಕೆ ಉತ್ತರವಲ್ಲ ಎಂದರು. ಇದನ್ನೂ ಓದಿ: ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯನ್ನು ನೋಡಿ ನಾನು ಗಾಬರಿಗೊಂಡಿದ್ದೇನೆ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ ಎಂದು ಯೂಸುಫ್ ಜಾಯ್ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಗಾಜಾಕ್ಕೆ ಮಾನವೀಯ ನೆರವನ್ನು ಅನುಮತಿಸಲು ಮತ್ತು ಕದನ ವಿರಾಮದ ಕರೆಯನ್ನು ಪುನರುಚ್ಚರಿಸಲು ನಾನು ಇಸ್ರೇಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದನ್ನೂ ಓದಿ: ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ದಾಳಿಯಲ್ಲಿರುವ ಪ್ಯಾಲೆಸ್ತೀನಿಯನ್ ಜನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ ನಾನು 3,00,000 ಡಾಲರ್ ಅನ್ನು ನಿರ್ದೇಶಿಸುತ್ತಿದ್ದೇನೆ. ನೊಬೆಲ್ ಪ್ರಶಸ್ತಿ ವಿಜೇತರು ತಕ್ಷಣದ ಕದನ ವಿರಾಮ ಮತ್ತು ಶಾಶ್ವತ ಶಾಂತಿಗಾಗಿ ಶ್ರಮಿಸಬೇಕು ಎಂದು ಸರ್ಕಾರಗಳಿಗೆ ಕರೆ ನೀಡಿದರು. ಇದನ್ನೂ ಓದಿ: ದೇಶ ತೊರೆಯಿರಿ – ಅಫ್ಘಾನ್‌ ಪ್ರಜೆಗಳಿಗೆ ಪಾಕ್‌ ದಿಢೀರ್‌ ಎಚ್ಚರಿಕೆ ನೀಡಿದ್ದು ಯಾಕೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದು ಮಾರಾಟ, ಸಹಾಯ ಅಲ್ಲ – ಪಾಕಿಸ್ತಾನದ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ

    ಇದು ಮಾರಾಟ, ಸಹಾಯ ಅಲ್ಲ – ಪಾಕಿಸ್ತಾನದ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ

    ವಾಷಿಂಗ್ಟನ್: ಪಾಕಿಸ್ತಾನಕ್ಕೆ ಭದ್ರತಾ ನೆರವನ್ನು ಸ್ಥಗಿತಗೊಳಿಸಿದ್ದ ಡೊನಾಲ್ಡ್ ಟ್ರಂಪ್‌ನ ಆದೇಶವನ್ನು ರದ್ದುಗೊಳಿಸಿ ಇದೀಗ ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಫೈಟರ್ ಜೆಟ್‌ನ ಬಿಡಿ ಭಾಗಗಳನ್ನು ನೀಡಲು ಮುಂದಾಗಿದೆ. ಆದರೆ ಇದು ಮಾರಾಟವಾಗಿದೆ, ಸಹಾಯ ಅಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.

    ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ಪಡೆಯ ಸುಸ್ತಿರ ಕಾರ್ಯಕ್ರಮದ ಅಡಿಯಲ್ಲಿ 450 ಮಿಲಿಯನ್ ಡಾಲರ್(3,500 ಕೋಟಿ ರೂ.) ಮೊತ್ತದ ಸೇನಾ ನೆರವು ನೀಡುತ್ತಿರುವುದಾಗಿ ತಿಳಿಸಿತ್ತು. ಇದು ಈಗಾಗಲೇ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿರುವ ಎಫ್-16 ಫೈಟರ್ ಜೆಟ್‌ಗಳ ಬಿಡಿ ಭಾಗಗಳ ಮಾರಾಟವಾಗಿದೆ. ಸರ್ಕಾರ ಯಾವುದೇ ಸಹಾಯ ನೀಡಿಲ್ಲ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರು ತಿಳಿಸಿದ್ದಾರೆ. ಇದ್ನನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು, ನಾವು ಇತರ ದೇಶಗಳಿಗೆ ಒದಗಿಸಿದ ಸಾಧನಗಳಿಗೆ ಯಾವಾಗಲೂ ಬೆಂಬಲ ನೀಡುವುದು ಅಮೆರಿಕ ಸರ್ಕಾರದ ವಿಶ್ವವ್ಯಾಪಿ ನೀತಿಯಾಗಿದೆ. ಪಾಕಿಸ್ತಾನದ ಬಗ್ಗೆ ಹೇಳಬೇಕೆಂದರೆ, ಇದು ಕೇವಲ ಬಿಡಿ ಭಾಗಗಳು ಹಾಗೂ ನಿರ್ವಹಣೆಯ ಪೂರೈಕೆಯಾಗಿದೆ. ಇದು ಮಾರಾಟವಾಗಿದ್ದು, ಯಾವುದೇ ಸಹಾಯವಲ್ಲ. ಈ ವಿಮಾನಗಳು ವಾಯು ಸುರಕ್ಷತೆಯ ಮಾನದಂಡಗಳನ್ನು ಪೂರೈಸಲು ರೆಕ್ಕೆ ಹಾಗೂ ಸಲಕರಣೆಗಳ ಸೇವೆಯನ್ನು ಒದಗಿಸಲು ಪ್ರಸ್ತಾಪಿಸಿದ್ದೇವೆ ಎಂದರು. ಇದ್ನನೂ ಓದಿ: ಬ್ರಿಟನ್ ರಾಣಿ ನಿಧನ – ಸೆ.11ಕ್ಕೆ ಭಾರತದಾದ್ಯಂತ ಶೋಕಾಚರಣೆ

    ಪಾಕಿಸ್ತಾನದೊಂದಿಗಿನ ನಮ್ಮ ವ್ಯವಹಾರದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಇದು ಸುರಕ್ಷತೆ ಮತ್ತು ನಿರ್ವಹಣೆಯ ಕಾರ್ಯಕ್ರಮವಾಗಿದೆ. ಯಾವುದೇ ಹೊಸ ವಿಮಾನವನ್ನು, ಹೊಸ ಸಾಮರ್ಥ್ಯ ಮತ್ತು ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಾವು ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಬೆಂಗಳೂರು: ಹತ್ಯೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಶಾಸಕ ಅರವಿಂದ ಲಿಂಬಾವಳಿ ಒಂದು ಲಕ್ಷ ರೂ ನೆರವು ಘೋಷಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಹಿಂದೂ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆ ಮಾಡಿರುವ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ. ಹರ್ಷರವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ನಿನ್ನೆ ನಡೆದ ಆಘಾತಕಾರಿ ಘಟನೆಯಲ್ಲಿ ತಮ್ಮ ಮಗನನ್ನು ಕಳೆದುಕೊಂಡ ಹರ್ಷ ಕುಟುಂಬಸ್ಥರಿಗೆ ನಾನು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ ಮತ್ತು ಎಲ್ಲಾ ನೋವು ಮತ್ತು ದುಃಖಗಳಲ್ಲಿ ಅವರ ಕುಟುಂಬದ ಜೊತೆಗಿರುತ್ತೇನೆ ಎಂದು ಟ್ವೀಟ್ ಮಾಡಿ ಸಹಾಯ ಹಸ್ತವನ್ನು ಚಾಚುವುದಾಗಿ ತಿಳಿಸಿದ್ದಾರೆ.

    ನಡೆದಿದ್ದೇನು?: ಭಾನುವಾರ ರಾತ್ರಿ ಹರ್ಷ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ದೇಶ, ಧರ್ಮಕ್ಕೋಸ್ಕರ ಕೆಲಸ ಮಾಡಿದ ಯುವಕ ಇವತ್ತಿಲ್ಲ: ಕೆ. ಸುಧಾಕರ್

    ಆ ಬಳಿಕದಿಂದ ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಇಮದು ಹರ್ಷ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕ ತಿರುಗಿತು. ಸದ್ಯ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.  ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!

  • ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ನೀಡಲು ಸಿಎಂಗೆ ಮನವಿ

    ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ನೀಡಲು ಸಿಎಂಗೆ ಮನವಿ

    ಬೆಂಗಳೂರು: ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ತಮಿಳುನಾಡಿನ ಮಾದರಿ ಪರಿಹಾರ ನೀಡಬೇಕೆಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಒತ್ತಾಯಿಸಿದ್ದು, ಸಿಎಂ ಯಡಿಯೂರಪ್ಪ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ.

    ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಕೋವಿಡ್ ಲಾಕ್‍ಡೌನ್ ಕಾರಣದಿಂದಾಗಿ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿದ್ದು, ಇದೇ ವೃತ್ತಿ ಅವಲಂಬಿಸಿರುವ ಹಲವು ಪತ್ರಕರ್ತರ ಬದುಕು ಕೂಡ ಅಯೋಮಯವಾಗಿದೆ. ಗ್ರಾಮೀಣ ಪತ್ರಕರ್ತರ ಪರಿಸ್ಥಿತಿ ಕೂಡ ಬಹಳ ಕಷ್ಟದಲ್ಲಿದೆ. ಇದನ್ನೂ ಓದಿ: ಲಾಕ್‍ಡೌನ್ ಪೂರ್ಣಗೊಂಡ ತಕ್ಷಣ ಶಿಕ್ಷಕರ ಹಾಜರಿಗೆ ಸೂಚನೆ: ಸುರೇಶ್ ಕುಮಾರ್

    ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಪತ್ರಕರ್ತರಿಗೆ (ತಮಿಳುನಾಡಿನಲ್ಲಿ ತಲಾ 5 ಸಾವಿರ ನೀಡಿದ ಮಾದರಿಯಲ್ಲಿ) ಹಲವು ರಾಜ್ಯಗಳಲ್ಲಿ ನೆರವು ನೀಡಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ತಲಾ 10 ಸಾವಿರ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ನಾಗರಾಜ್ ಅವರಿಗೆ ಚಿಕಿತ್ಸೆ ಭಾಗವಾಗಿ ಒಂದು ಲಕ್ಷ ರೂ. ನೆರವನ್ನು ಮುಖ್ಯಮಂತ್ರಿ ಮಂಜೂರು ಮಾಡಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ: ಸಿಎಂ ಘೋಷಣೆ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂಕ ಪ್ರಾಣಿಗಳ ರೋಧನೆಗೆ ತಹಶೀಲ್ದಾರ್ ಸ್ಪಂದನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂಕ ಪ್ರಾಣಿಗಳ ರೋಧನೆಗೆ ತಹಶೀಲ್ದಾರ್ ಸ್ಪಂದನೆ

    – ಹಾಲು ಖರೀದಿಸುವಂತೆ ಒಕ್ಕೂಟಕ್ಕೆ ಮನವಿ

    ನೆಲಮಂಗಲ: ಕೊರೊನಾ ಸೋಂಕಿತೆಯ ಸಾವಿನಿಂದ, ಆಕೆಯ ಸಂಪರ್ಕದಲ್ಲಿ ಇದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಅವರ ಜಾನುವಾರುಗಳು ಆಹಾರವಿಲ್ಲದೇ ಪರಾದಡುವಂತೆ ಆಗಿತ್ತು. ಈಗ ಈ ಜಾನುವಾರುಗಳ ನೆರವಿಗೆ ತಾಲೂಕಾಡಳಿತ ಬಂದಿದೆ.

    ಕೊರೊನಾ ಹಬ್ಬುವ ಭಯದಿಂದ ಯಾರೂ ಕ್ವಾರಂಟೈನ್ ಅದವರ ಮನೆಯ ಬಳಿ ಹೋಗಿಲ್ಲ. ಹೀಗಾಗಿ ಅವರ ದನ-ಕಾರುಗಳು ಹಾಗೂ ಮೇಕೆಗಳು ಆಹಾರವಿಲ್ಲದೇ ಮೂಕ ರೋಧನೆ ಅನುಭವಿಸುತ್ತಿದ್ದವು. ಈ ಬಗ್ಗೆ ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಗೆ ಈಗ ಸ್ಪಂದನೆ ಸಿಕ್ಕಿದ್ದು, ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಅವುಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದಾರೆ.

    ಜಾನುವಾರುಗಳ ನರವಿಗೆ ಬಂದ ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್, ತಮ್ಮ ಅಧಿಕಾರಿಗಳನ್ನು ಗ್ರಾಮಕ್ಕೆ ಕಳಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಬೆಂಗಳೂರು ಹಾಲು ಉತ್ಪಾದಕ ಒಕ್ಕೂಟದ ಜೊತೆಗೆ ಮಾತನಾಡಿ ಈ ಹಸುಗಳ ಹಾಲನ್ನು ಖರೀದಿ ಮಾಡುವಂತೆ ಮನವಿಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.

    ಕ್ವಾರಂಟೈನ್ ಆದ ಮನೆಯ ಜಾನುವಾರುಗಳನ್ನು ನೋಡುವವರಿಲ್ಲದೆ ಕಂಗೆಟ್ಟ ಮೂಕಪ್ರಾಣಿಗಳ ರೋಧನೆ ಮುಗಿಲುಮುಟ್ಟಿತ್ತು. ಪ್ರತಿದಿನ ಸುಮಾರು 60 ಲೀಟರ್ ಹಾಲು ನೀಡುತ್ತಿದ್ದ ಗೋವುಗಳ ಹಾಲು ವ್ಯರ್ಥವಾಗುತ್ತಿತ್ತು. ಕೊರೊನಾ ಬರುತ್ತೆ ಎಂದು ಗ್ರಾಮಸ್ಥರು ಅವರ ಮನೆಯ ಕಡೆ ಹೋಗುತ್ತಿಲ್ಲ. ಸ್ಥಳೀಯ ಹಾಲಿನ ಡೈರಿಯಲ್ಲಿ ಹಾಲನ್ನು ಖರೀದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಜೊತೆಗೆ ಊರಿನ ಗ್ರಾಮಸ್ಥರು ನೆರವಿಗೆ ಬರುವಂತೆ ತಾಲೂಕಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.

  • ಕೊರೊನಾ ಸಂಕಷ್ಟ – ದೆಹಲಿ ಕನ್ನಡಿಗರಿಂದ ನೆರವು

    ಕೊರೊನಾ ಸಂಕಷ್ಟ – ದೆಹಲಿ ಕನ್ನಡಿಗರಿಂದ ನೆರವು

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದೆಹಲಿ ಕನ್ನಡಿಗರು ಒಂದು ತಿಂಗಳ ರೇಷನ್ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

    ದೆಹಲಿಯಲ್ಲಿರುವ ನಾಡಪ್ರಭು ಕೆಂಪೇಗೌಡ ಫೌಂಡೇಷನ್, ಸಾಮಾಜಿಕ ಪ್ರಗತಿ ಶೀಲಾ ಸಂಸ್ಥೆ ನೇತೃತ್ವದಲ್ಲಿ ಹಲವು ಕನ್ನಡಿಗರು ಈ ನೆರವು ನೀಡಿದ್ದಾರೆ. ಆರ್.ಕೆ ಪುರಂನಲ್ಲಿರುವ ಕುಷ್ಠ ರೋಗಿಗಳ ಕಾಲೋನಿ ಮತ್ತು ಲಜಪತ್ ನಗರದಲ್ಲಿರುವ ಸುಮಾರು ನೂರು ನಿರಾಶ್ರಿತ ಕನ್ನಡಿಗ ಕುಟುಂಬಗಳಿಗೆ ನೆರವು ನೀಡಿದ್ದಾರೆ.

    ಹತ್ತು ಕೆಜಿ ಅಕ್ಕಿ, ಹತ್ತು ಕೆಜಿ ಗೋಧಿ, ಎರಡು ಲೀಟರ್ ಎಣ್ಣೆ, ಐದು ಕೆಜಿ ಸಕ್ಕರೆ ಒಳಗೊಂಡಂತೆ ಒಂದು ತಿಂಗಳಿಗಾಗುವ ಪಡಿತರ ಹಾಗೂ ಮಾಸ್ಕ್ ಗಳನ್ನು ವಿತರಿಸಲಾಯಿತು. ಕೆಂಪೇಗೌಡ ಫೌಂಡೇಷನ್ ಅಧ್ಯಕ್ಷ ಬಿ.ಎಲ್ ಸುರೇಶ್, ಕಾರ್ಯದರ್ಶಿ ಸಿಎಂ ನಾಗರಾಜ್, ಪ್ರಗತಿ ಶೀಲಾ ಸಂಸ್ಥೆಯ ಅಧ್ಯಕ್ಷ ವಿ.ವಿ ಬಿರಾದರ್, ಕಾರ್ಯದರ್ಶಿ ಆನಂದ ಮುರಗೋಡ್ ಸೇರಿ ಹಲವು ದೆಹಲಿ ಕನ್ನಡಿಗರು ಭಾಗಿಯಾಗಿದ್ದರು.

  • ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ನೆರವು ಸಂಗ್ರಹಿಸಿದ ವಿಚಿತ್ರ ಜೀವಿ

    ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ನೆರವು ಸಂಗ್ರಹಿಸಿದ ವಿಚಿತ್ರ ಜೀವಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಯುವಕನೊಬ್ಬ ವಿಶೇಷ ವೇಷ ಧರಿಸಿ ಅನಾರೋಗ್ಯ ಪೀಡಿತ 5 ವರ್ಷದ ಪುಟ್ಟ ಮಗುವಿನ ಚಿಕಿತ್ಸೆಗೆ ನೆರವಾಗುತ್ತಿದ್ದಾನೆ.

    5 ವರ್ಷದ ನಿಹಾರಿಕಾ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆ ವೆಚ್ಚಕ್ಕೆ 10 ಲಕ್ಷ ರೂಪಾಯಿ ಬೇಕಾಗುತ್ತದೆ. ಆದರೆ ನಿಹಾರಿಕಾಳ ತಂದೆ ತಾಯಿ ಬಡ ಕುಟುಂಬವರಾಗಿದ್ದು, ದಾನಿಗಳ ಸಹಾಯಕ್ಕೆ ಕೈ ಚಾಚಿದ್ದಾರೆ.

    ಹೀಗಾಗಿ ಕಟೀಲು ಬ್ರಹ್ಮಕಲಶದ ಪುಣ್ಯ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಮೂಡಬಿದಿರೆ ಇಲ್ಲಿನ ತಂಡದ ಸದಸ್ಯರು ಸೇರಿ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ತಂಡದ ಸದಸ್ಯ ವಿಕ್ಕಿ ಶೆಟ್ಟಿ ವಿಶೇಷ ವೇಷ ಹಾಕಿಸಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಬ್ರಹ್ಮಕಲಶೋತ್ಸವಕ್ಕೆ ಬಂದ ಲಕ್ಷಾಂತರ ಭಕ್ತರಲ್ಲಿ ಹೆಚ್ಚಿನವರು ಹಣ ನೀಡಿ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

  • ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

    ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

    ಮಂಡ್ಯ: 2018 ನವೆಂಬರ್ 24ರಂದು ಜಿಲ್ಲೆಯ ಪಾಂಡವಪುರದ ಕನಗನಮರಡಿ ಎಂಬ ಗ್ರಾಮದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 30 ಜನರು ಸಾವನ್ನಪಿದ್ದರು. ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂ. ಹಣ ಬಂದಿದೆ. ಆದರೆ ಈ ವಿಚಾರ ಈಗ ರಾಜಕೀಯ ತಿರುವು ಪಡೆದು ಚರ್ಚೆಗೆ ಕಾರಣವಾಗಿದೆ. ಇದೀಗ ಎಲ್ಲ ಗೊಂದಲಗಳಿಗೆ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

    https://www.facebook.com/permalink.php?story_fbid=2502437746650334&id=100006523990844

    ಮಂಡ್ಯದಲ್ಲಿ ಈ ಹಣ ಕೇಂದ್ರ ಸರ್ಕಾರದಿಂದ ಬರಲು ನೂತನ ಸಂಸದೆ ಸುಮಲತಾ ಕಾರಣ ಎಂದು ಸುಮಲತಾ ಬೆಂಬಲಿಗರು ಮತ್ತು ಈ ನೆರವು ಬರಲು ಕಾರಣ ರಾಜ್ಯ ಸರ್ಕಾರದ ಸಿಎಂ ಕಾರಣ ಎಂದು ಜೆಡಿಎಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು ನನಗೆ ಆ ಕ್ರೆಡಿಟ್ ಬೇಡ ಎಂದು ಹೇಳಿದ್ದಾರೆ.

    ಇಂದು ಜಿಲ್ಲೆಯ ಮಾಚಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರಂತದ ಸಂಗತಿ. ಆ ಕುಟುಂಬಗಳಿಗೆ ಅನುದಾನ ತಲುಪಿರೋದು ಮುಖ್ಯ. ಯಾರು ಕೊಟ್ಟಿದ್ದಾರೆ, ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ. ಆ ರೀತಿ ತಪ್ಪು ಯಾರೂ ಮಾಡಬಾರದು ನಾನಂತೂ ಆ ತಪ್ಪು ಮಾಡೋದಿಲ್ಲ ಎಂದು ಹೇಳಿದ್ದಾರೆ.

    ಬಸ್ ದುರಂತವನ್ನು ಪ್ರಚಾರಕ್ಕೆ ಬಳಸೋದು ನನಗಿಷ್ಟ ಇಲ್ಲ. ಹಿಂದೆಯಿಂದಲೂ ನಾನು ಸಾಕಷ್ಟು ಬಾರಿ ಹೇಳಿದ್ದೀನಿ ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು. ಯಾರೇ ಮಾಡಿರಲಿ ಅದನ್ನು ಹೇಳಿಕೊಳ್ಳಬಾರದು. ಈ ವಿಚಾರದಲ್ಲಿ ಯಾರು ಬೇಕಾದರೂ ಕ್ರೆಡಿಟ್ ತೆಗೆದುಕೊಳ್ಳಲಿ ನನಗೆ ಆ ಬಗ್ಗೆ ಬೇಜಾರ್ ಏನೂ ಇಲ್ಲ. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಸತ್ ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಬಜೆಟ್‍ನಲ್ಲಿ ಸಾಕಷ್ಟು ನಿರೀಕ್ಷೆ ಇದೆ, ಸಾಕಷ್ಟು ಕೊಡುಗೆ ನೀಡೋ ವಿಶ್ವಾಸ ಇದೆ. ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಮಂಡ್ಯದ ಸಮಸ್ಯೆ ಬಗೆಹರಿಸಲು ಮತ್ತು ಮಂಡ್ಯ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ. ಮಂಡ್ಯದ ಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ರೈತರಿಗೆ ಒಳ್ಳೆಯದಾಗುವಂತ ನಿರ್ಧಾರ ತೆಗೆದುಕೊಂಡರೆ ಸಹಕಾರ ನೀಡುತ್ತೇನೆ. ಇದರ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡಿ ಮಾಹಿತಿ ಪಡೆದು ಯಾವುದು ಸೂಕ್ತ ಅನ್ನೋದನ್ನು ನಂತರ ತೀರ್ಮಾನ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

    https://www.youtube.com/watch?v=XpZzL4RaCWk

    ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರದಿಂದ ಮಂಡ್ಯ ನಿರ್ಲಕ್ಷ್ಯ ವಿಚಾರದ ಬಗ್ಗೆ ಕೇಳಿದಾಗ, ಈ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ಈಗಷ್ಟೇ ಚುನಾವಣೆ ಮುಗಿದಿದೆ. ಆ ವೇಳೆ ಸಾಕಷ್ಟು ಭರವಸೆ ಕೂಡ ಕೊಟ್ಟಿದ್ದರು. ಎಲ್ಲಾ ಭರವಸೆ ಈಡೇರಿಸೋ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಏನ್ ಮಾಡುತ್ತಾರೆ ಅನ್ನೋದನ್ನು ಕಾದು ನೋಡೋಣ ಎಂದರು. ಮಣಿಗೆರೆಯಲ್ಲಿ ಮೂವರ ದುರ್ಮರಣ ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಯಾರಿಂದ ಪರಿಹಾರ ಕೊಡಿಸಬೇಕೋ ಅವರಿಂದ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

  • ಅನಾರೋಗ್ಯಕ್ಕೀಡಾಗಿರೋ ಮಗುವಿನ ಚಿಕಿತ್ಸೆಗೆ ಸಿಎಂ ಎಚ್‍ಡಿಕೆ ನೆರವಿನ ಭರವಸೆ

    ಅನಾರೋಗ್ಯಕ್ಕೀಡಾಗಿರೋ ಮಗುವಿನ ಚಿಕಿತ್ಸೆಗೆ ಸಿಎಂ ಎಚ್‍ಡಿಕೆ ನೆರವಿನ ಭರವಸೆ

    ಚಿಕ್ಕಮಗಳೂರು: ಅನಾರೋಗ್ಯಕ್ಕೀಡಾಗಿರುವ ಮಗುವಿನ ಚಿಕಿತ್ಸೆ ಕೊಡಿಸಲು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ಬಡ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

    ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೃಂಗೇರಿಗೆ ಭೇಟಿ ನೀಡಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆಗೆ ಶೃಂಗೇರಿಗೆ ಬಂದಿರುವ ಕುಮಾರಸ್ವಾಮಿ, ರಾತ್ರಿ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಬಡ ಕುಟುಂಬವೊಂದು ಸಿಎಂ ಅವರನ್ನು ಭೇಟಿ ಮಾಡಿದೆ.

    ಬಾಳೆಹೊನ್ನೂರು ಸಮೀಪದ ನೆಲ್ಲಿಮಕ್ಕಿಯ ದೇವರಾಜ, ಸುನಿತಾ ದಂಪತಿಯ ಐದು ವರ್ಷದ ಅಮಂತ ಅನಿಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಅದಕ್ಕಾಗಿ ಪ್ರತಿ ತಿಂಗಳೂ ಚಿಕಿತ್ಸೆಗೆ 25 ಸಾವಿರ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಚಿಕಿತ್ಸೆಗೆ ನೆರವು ನೀಡುವಂತೆ ಬಡ ದಂಪತಿ ಸಿಎಂ ಬಳಿ ಮನವಿ ಮಾಡಿಕೊಂಡಿದೆ.

    ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿಗೆ ಬನ್ನಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತೇನೆ ಎಂದು ಬಡ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಸಂತ್ರಸ್ತರಿಗೆ ರಾಕಿಂಗ್ ಸ್ಟಾರ್ ಯಶ್ ಸಹಾಯಹಸ್ತ

    ಕೊಡಗಿನ ಸಂತ್ರಸ್ತರಿಗೆ ರಾಕಿಂಗ್ ಸ್ಟಾರ್ ಯಶ್ ಸಹಾಯಹಸ್ತ

    ಬೆಂಗಳೂರು: ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿರುವ ಕೊಡಗಿನ ಜನತೆಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗದ ಮೂಲಕ ನೆರವಾಗುತ್ತಿದ್ದಾರೆ.

    ಅಲ್ಲಿನ ಜನರಿಗೆ ಅವಶ್ಯಕವಾದ ಬ್ರೆಡ್, ಬಿಸ್ಕೆಟ್ ಸೊಳ್ಳೆಬತ್ತಿ, ಇನ್ನಿತರ ಪ್ರಮುಖವಾದ ತಿಂಡಿ ತಿನಿಸು ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಮೀರಿದ್ದು, ಬಂದಿರುವಂತಹ ಸರಕುಗಳನ್ನು ಅವರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಜನರೆಲ್ಲರೂ ಕೊಡಗಿನ ಸ್ಥಿತಿಗೆ ಮರುಗಿ ಸಹಾಯವನ್ನು ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾದ ಬಳಿಕ ಜೀವನಕ್ಕೆ ಪರಿಹಾರವನ್ನು ನೀಡಬೇಕಾದ ಕೆಲಸ ಮಾಡಬೇಕು ಎಂದು ಯಶ್ ಹೇಳಿದರು.

    ನಮ್ಮವರು ಕೂಡ ಮಡಿಕೇರಿಗೆ ಸಾಮಾಗ್ರಿಗಳೆಲ್ಲವನ್ನು ತಲುಪಿಸಿ ಬಂದಿದ್ದಾರೆ. ಕೆಲವು ಕಡೆ ನಿನ್ನೆ ಕೂಡ ಹೋಗಿ ಬಂದ ಸ್ಥಳದಲ್ಲೂ ಭೂಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದೆಂದು ಪ್ರಾರ್ಥಿಸೋಣ ಎಂದರು.

    ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಾ ರಾ ಮಹೇಶ್ ಅವರೊಂದಿಗೆ ಮಾತನಾಡಿದಾಗ ಅವರು ಇಲ್ಲಿನ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾಗಲಿ ಬಳಿಕ ನೀವು ಏನಾದರೂ ನೆರವು ನೀಡಬಹುದು ಎಂದಿದ್ದಾರೆ. ಸದ್ಯಕ್ಕೆ ಎಲ್ಲಾ ಸಾಮಾಗ್ರಿಗಳ ಹೋಗಿ ತಲುಪಿವೆ. ಮುಂದಿನ ದಿನಗಳಲ್ಲಿ ದೊಡ್ಡ ಪರೀಕ್ಷೆ ಎದುರಾಗುತ್ತದೆ ಜನರು ಅದಕ್ಕೆ ಸಹಾಯ ಮಾಡಲಿ ಎಂದು ಯಶ್ ಜನರಿಗೆ ಕರೆ ನೀಡಿದರು.

    ಇಂತಹ ದುರಂತ ಸ್ಥಿತಿಯಲ್ಲೂ ಕೂಡ ಕೊಡಗಿನಲ್ಲಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿರುವುದು ಬೇಸರವನ್ನು ವ್ಯಕ್ತಪಡಿಸುತ್ತದೆ. ಅವರು ಇಂತಹ ಸಂದರ್ಭದಲ್ಲಿ ಮಾನವೀಯತೆ ತೋರಿಸಬೇಕು, ಇಲ್ಲದಿದ್ದರೆ ಅವರನ್ನು ಮನುಷ್ಯರು ಅನ್ನುವುದಕ್ಕೆ ಅರ್ಹರಲ್ಲ. ನೆರವು ನೀಡುವ ಮೂಲಕ ಕರ್ನಾಟಕ ಜನತೆ ತನ್ನ ಸಹೃದಯವನ್ನು ತೋರಿಸಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv