Tag: Assembly Session

  • ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ: ಅಧಿವೇಶನದಲ್ಲಿ ಗುಡುಗಿದ ಸುನೀಲ್‌ ಕುಮಾರ್‌

    ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ: ಅಧಿವೇಶನದಲ್ಲಿ ಗುಡುಗಿದ ಸುನೀಲ್‌ ಕುಮಾರ್‌

    ಬೆಂಗಳೂರು: ವಿಧಾನಸಭೆಯ ಅಧಿವೇಶನದಲ್ಲೂ (Assembly Session) ದೈವಾರಾಧನೆ (Daivaradhane) ವಿಚಾರ ಸದ್ದು ಮಾಡಿದೆ. ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದ ಶಿಕ್ಷಣ ಇಲಾಖೆ ವಿರುದ್ಧ ಶಾಸಕ ಸುನೀಲ್‌ ಕುಮಾರ್‌ (Sunil Kumar) ಗರಂ ಆದರು.

    ಅಧಿವೇಶನದ ಶೂನ್ಯ ವೇಳೆಯಲ್ಲಿ ದೈವಾರಾಧನೆ ಬಗ್ಗೆ ಪ್ರಸ್ತಾಪಿಸಿದ ಸುನೀಲ್‌ ಕುಮಾರ್‌, ದಕ್ಷಿಣ ಕನ್ನಡ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ದೈವಾರಾಧನೆ ಪದ್ಧತಿ ಇದೆ. ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜನಪದ ನೃತ್ಯಗಳ ಜೊತೆಗೆ ದೈವಾರಾಧನೆ ಕೂಡ ಸೇರಿಸಲಾಗಿದೆ. ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ ಎಂದು ಗುಡುಗಿದರು. ಇದನ್ನೂ ಓದಿ: ನನ್ನ ಕನ್ನಡ ಹೆಚ್ಚು ಕಡಿಮೆ ಇರ್ಬೋದು, ಆದ್ರೆ ಪ್ರೀತಿಯ ಭಾಷೆ: ಖಾದರ್

    ಶಿಕ್ಷಣ ಇಲಾಖೆ ಕೂಡಲೇ ಈ ಆದೇಶದಲ್ಲಿ ದೈವಾರಾಧನೆ, ಕೋಲ ಕೈಬಿಡಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ಆದೇಶದಲ್ಲಿ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.

    ದೈವಾರಾಧನೆಯು ತುಳುನಾಡಿನ ಆರಾಧನೆಯಲ್ಲಿ ಪ್ರಮುಖವಾದದ್ದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದೈವಾರಾಧನೆ ಸಂಪ್ರದಾಯ ಆಚರಣೆಯಲ್ಲಿದೆ. ರಿಷಬ್‌ ಶೆಟ್ಟಿಯ ‘ಕಾಂತಾರ’ ಸಿನಿಮಾ ಬಂದ ನಂತರ ದೈವಾರಾಧನೆ ಸಂಸ್ಕೃತಿ ದೇಶ-ವಿದೇಶಗಳಲ್ಲಿ ಹೆಚ್ಚು ಚಿರಪರಿಚಿತವಾಯಿತು. ಇದನ್ನೂ ಓದಿ: ಕುಮಾರಸ್ವಾಮಿ ಯಾವತ್ತೂ ಹಿಟ್‌ & ರನ್ ಕೇಸ್‌ – ಸಿಎಂ ತಿರುಗೇಟು

    ಸಿನಿಮಾದಿಂದ ಪ್ರೇರೇಪಿತರಾದ ಅನೇಕರು ದೈವಾರಾಧನೆಯನ್ನು ಅನುಕರಿಸಲು ಶುರು ಮಾಡಿದ್ದರು. ಕೆಲವರು ಇದನ್ನೇ ಧಂದೆ ಮಾಡಿಕೊಂಡಿದ್ದರು. ದೈವಾರಾಧನೆ ಮಹತ್ವದ ಬಗ್ಗೆ ತಿಳಿಸಿದ ಬಳಿಕ ಅನುಕರಣೆ, ಧಂದೆ ನಿಯಂತ್ರಣಕ್ಕೆ ಬಂತು. ಆದರೂ ಒಂದಲ್ಲಾ ಒಂದು ವಿಚಾರವಾಗಿ ದೈವಾರಾಧನೆ ಸುದ್ದಿಯಾಗುತ್ತಲೇ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಪಕ್ಷ ನಾಯಕನಿಲ್ಲದೆ ಕಲಾಪ ನಡೆದಿದ್ದು ದುರ್ದೈವ: ಹೆಚ್.ಕೆ ಪಾಟೀಲ್

    ವಿಪಕ್ಷ ನಾಯಕನಿಲ್ಲದೆ ಕಲಾಪ ನಡೆದಿದ್ದು ದುರ್ದೈವ: ಹೆಚ್.ಕೆ ಪಾಟೀಲ್

    ಬೆಂಗಳೂರು: ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ (Assembly Session) ನಡೆಸುವುದು ಸರಿಯಲ್ಲ. ಸಂಸದೀಯ ಬದ್ಧತೆ ವಿಚಾರಗಳಿಗೆ ಇದು ವ್ಯತಿರಿಕ್ತವಾದುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ (H.K Patil) ಹೇಳಿದ್ದಾರೆ.

    ವಿಧಾನಸೌಧದಲ್ಲಿ (Vidhana Soudha) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕರ ಆಯ್ಕೆ ವಿಚಾರ ಅವರ ಪಕ್ಷದ ವಿಚಾರವಾದರೂ ಸದನದ ದೃಷ್ಟಿಯಿಂದ ಇದು ದುರ್ದೈವದ ಸಂಗತಿಯಾಗಿದೆ. ನಮ್ಮ ಸದನದಲ್ಲಿ ಯಾವಾಗಲೂ ವಿರೋಧ ಪಕ್ಷದ ನಾಯಕರು ಇದ್ದೇ ಇರುತ್ತಿದ್ದರು. ಈಗ ವಿರೋಧ ಪಕ್ಷದ ನಾಯಕರಿಲ್ಲದೆ ನಮ್ಮ ರಾಜ್ಯಪಾಲರ ಭಾಷಣ ಮಾತ್ರ ನಡೆದಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಆದರೆ ಸದನದ ಘನತೆ ಮತ್ತು ಸಂಸ್ಕೃತಿ ಪರಂಪರೆಗೆ ಧಕ್ಕೆಯಾಗಿದೆ. ವಿಧಾನಸಭೆಯ ಇತಿಹಾಸದಲ್ಲೇ ಇಂತಹ ಪ್ರಕರಣ ಇದೇ ಮೊದಲು ಎಂದಿದ್ದಾರೆ. ಇದನ್ನೂ ಓದಿ: ಜೆಪಿ ನಗರದಲ್ಲಿ ಸಾಯಿ ಟ್ರಸ್ಟ್‌ನಿಂದ ಗುರುಪೂರ್ಣಿಮೆ – 20 ಸಾವಿರ ತೆಂಗಿನಕಾಯಿಯಿಂದ ವಿಶೇಷ ಅಲಂಕಾರ

    ಇದೇ ವೇಳೆ, ಬಿಜೆಪಿಯ ಜನ ವಿರೋಧಿ ಕಾನೂನುಗಳನ್ನ ವಾಪಸ್ ಪಡೆಯುವಂತಹ ಚಿಂತನೆ ಇದೆ. ಕೆಲ ಕಾನೂನುಗಳನ್ನ ವಾಪಸ್ ಪಡೆಯುವಂತಹ ಪ್ರಕ್ರಿಯೆಯನ್ನು ಬಹಳ ಬೇಗನೆ ಪ್ರಾರಂಭಿಸುತ್ತೇವೆ. ಕಲಾಪ ಸಲಹಾ ಸಮಿತಿ ಸಭೆ ಬಳಿಕ ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮರುತನಿಖೆಗೆ ಎಸ್‍ಐಟಿ ರಚನೆ – ನಾಳೆಯಿಂದಲೇ ತನಿಖೆಗೆ ಮರುಜೀವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂದು ಸಚಿವರಾಗಿ ಕಲಾಪಕ್ಕೆ ಬರುವುದಾಗಿ ಶಪಥ – ಇಂದು ಮಾಜಿ ಸಚಿವರಾಗಿ ಬಂದ ರಮೇಶ್ ಜಾರಕಿಹೊಳಿ

    ಅಂದು ಸಚಿವರಾಗಿ ಕಲಾಪಕ್ಕೆ ಬರುವುದಾಗಿ ಶಪಥ – ಇಂದು ಮಾಜಿ ಸಚಿವರಾಗಿ ಬಂದ ರಮೇಶ್ ಜಾರಕಿಹೊಳಿ

    ಬೆಳಗಾವಿ: ಅಂದು ಸವಾಲು ಹಾಕಿದ್ದೇ ಹಾಕಿದ್ದು. ಮತ್ತೆ ಸಚಿವನಾಗಿಯೇ ವಿಧಾನಸಭೆಗೆ ಕಾಲಿಡುವ ಶಪಥ ಮಾಡಿದ್ರು. ಆದ್ರೆ ಸಚಿವ ಆಗಲೇ ಇಲ್ಲ. ಮಾಜಿ ಸಚಿವನಾಗಿ ವಿಧಾನಸಭೆಗೆ ರಮೇಶ್ ಜಾರಕಿಹೊಳಿ (Ramesh Jarkholi) ಕಾಲಿಟ್ಟಿದ್ದಾರೆ. ಇನ್ನೊಂದೆಡೆ ಕೆ.ಎಸ್‌ ಈಶ್ವರಪ್ಪ (KS Eshwarappa) ಹಠ ಕೂಡ ಹಠಾತ್ತನೇ ಬಿಟ್ಟು ಹೋಯ್ತು. ಹಾಗಾದ್ರೆ ಇಬ್ಬರು ಹಠ ಬಿಟ್ಟಿದ್ದು ಹೇಗೆ ಎಂಬುದಕ್ಕೆ ಇದೀಗ ಕಾರಣ ರಿವೀಲ್ ಆಗಿದೆ.

    ಕ್ಲೀನ್ ಚಿಟ್ ಸಿಕ್ಕ ಬಳಿಕ ನಾವು ಸಚಿವರಾಗಬೇಕು. ಸಚಿವ ಸ್ಥಾನ ಇಲ್ಲದೆ ಅಧಿವೇಶಕ್ಕೆ (Assembly Session) ಕಾಲಿಡುವುದುಂಟೇ. ಈ ಹಠದ ರಾಜಕಾರಣ ಮಾಡಿದವರು ರಮೇಶ್ ಜಾರಕಿಹೊಳಿ, ಈಶ್ವರಪ್ಪ. ಅಷ್ಟೇ ಅಲ್ಲದೆ ಬೆಳಗಾವಿ (Belagavi) ಚಳಿಗಾಲದ ಅಧಿವೇಶನದ ವೇಳೆಯೇ ಬೆಂಗಳೂರಿಗೆ ತೆರಳಿ ಪೊಲಿಟಿಕಲ್ ಬಾಂಬ್ ಸಿಡಿಸುವ ಪ್ಲ್ಯಾನ್ ವಿಫಲವಾಗಿದೆ. ನಿನ್ನೆ ರಾತ್ರಿ ಸಿಎಂ ಜೊತೆ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಮಾತುಕತೆ ನಡೆಸಿದ ಬಳಿಕ ತಾತ್ಕಾಲಿಕ ಶಮನವಾಗಿದೆ. ಇವತ್ತು ಇಬ್ಬರು ಒಟ್ಟಿಗೆ ಸುವರ್ಣಸೌಧಕ್ಕೆ ಆಗಮಿಸಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ್ರು. ಅಲ್ಲದೆ ಒಂದೂವರೆ ವರ್ಷದ ಬಳಿಕ ರಮೇಶ್ ಜಾರಕಿಹೊಳಿ, 7 ತಿಂಗಳ ಬಳಿಕ ಈಶ್ವರಪ್ಪ ವಿಧಾನಸಭೆಗೆ ಹಾಜರಾದ್ರು. ಈಶ್ವರಪ್ಪ ಕಲಾಪಕ್ಕೆ ಬರುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಮಾತನಾಡಿಸಿ ನಾಲ್ಕನೇಯ ಸಾಲಿನಲ್ಲಿ ಕುಳಿತ್ರೆ, ರಮೇಶ್ ಜಾರಕಿಹೊಳಿ, ಸಿ.ಟಿ.ರವಿಯನ್ನು ಮಾತನಾಡಿಸಿ ನಾಲ್ಕನೇ ಸಾಲಿನಲ್ಲಿ ಕುಳಿತ್ರು. ಇದನ್ನೂ ಓದಿ: ಮಂಗಳೂರು ವಿವಿ ಫಲಿತಾಂಶ 10 ದಿನದೊಳಗೆ ಪ್ರಕಟ – ಅಶ್ವಥ್ ನಾರಾಯಣ

    ಅಂದು 2021ರ ಮಾರ್ಚ್ 3 ರಂದು ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದರು. ಸಿಡಿ ಪ್ರಕರಣ ಹೊರಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆಗ ಶಪಥ ಮಾಡಿದ್ದ ರಮೇಶ್ ಜಾರಕಿಹೊಳಿ, ಮತ್ತೆ ಸಚಿವನಾಗಿಯೇ ವಿಧಾನಸಭೆಗೆ ಬರ್ತೀನಿ ಅಂತೇಳಿದ್ರು. ಅಲ್ಲಿಂದ ಇಲ್ಲಿ ತನಕ ನಡೆದಿರುವ ಅಧಿವೇಶನದ ಕಲಾಪದಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಕಳೆದ ಬಾರಿ ನಡೆದ ಬೆಳಗಾವಿ ಅಧಿವೇಶನದಲ್ಲೂ ಭಾಗವಹಿಸದೇ ಹಠಕ್ಕೆ ಬಿದ್ದಿದ್ದರು. ಆದ್ರೀಗ ಚುನಾವಣೆ ವೇಳೆ ಹೈಕಮಾಂಡ್ ಬುದ್ಧಿಮಾತು ಕೇಳಿ ಕಲಾಪಕ್ಕೆ ಬಂದಿದ್ದಾರೆ. ಇದನ್ನೂ ಓದಿ: `ಮಹಾ’ ಕ್ಯಾತೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ

    ಒಟ್ನಲ್ಲಿ ಎಂತಹ ಪ್ರಭಾವಿಯಾದ್ರೂ ಕಾಲ ಚಕ್ರದೊಳಗೆ ಸಿಲುಕಿದ್ರೆ ಹಠ, ಶಪಥ ಎಲ್ಲವೂ ಶೂನ್ಯ ಅನ್ನೋದು ರಮೇಶ್ ಜಾರಕಿಹೊಳಿ, ಈಶ್ವರಪ್ಪ ನಡೆಯ ಉದಾಹರಣೆಯಿಂದ ಸ್ಪಷ್ಟವಾದಂತಿದೆ.

    Live Tv
    [brid partner=56869869 player=32851 video=960834 autoplay=true]

  • ನನಗೆ ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ – ಸಿಂಧೂರಿ ವಿರುದ್ಧ ಸಾರಾ ಮಹೇಶ್ ಪರೋಕ್ಷ ವಾಗ್ದಾಳಿ

    ನನಗೆ ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ – ಸಿಂಧೂರಿ ವಿರುದ್ಧ ಸಾರಾ ಮಹೇಶ್ ಪರೋಕ್ಷ ವಾಗ್ದಾಳಿ

    – ವಿಧಾನಭೆಯಲ್ಲಿ ಸ್ವಿಮ್ಮಿಂಗ್ ಪೂಲ್ ವಿಚಾರ ಪ್ರಸ್ತಾಪ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಶಾಸಕ ಸಾ.ರಾ.ಮಹೇಶ್ ಅವರು ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿ, ನನಗೆ ಅವರ ಹೆಸರು ಹೇಳಲು ಬೇಸರವಾಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

    ವಿಧಾನಸಭಾ ಕಲಾಪದ ವೇಳೆ ಬ್ಯಾಗ್ ಖರೀದಿ ವಿಚಾರ ಪ್ರಸ್ತಾಪ ಮಾಡಿದಾಗ ಹೆಸರು ಹೇಳದೆ ಹಿಂದಿನ ಮೈಸೂರು ಜಿಲ್ಲಾಧಿಕಾರಿ ಎಂದು ಸಾ.ರಾ.ಮಹೇಶ್ ಹೇಳಿದಾಗ, ಹೆಸರು ಹೇಳಿ ಎಂದು ಜೆಡಿಎಸ್ ಶಾಸಕರು ಒತ್ತಾಯಿಸಿದ್ದಾರೆ. ಆಗ ಸಾ.ರಾ.ಮಹೇಶ್ ಅವರು ನನಗೆ ಅವರ ಹೆಸರು ಹೇಳೋದಕ್ಕೆ ಬೇಜಾರ್ ಆಗುತ್ತದೆ ಎಂದು ಪರೋಕ್ಷವಾಗಿ ರೋಹಿಣಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದನ್ನೂ ಓದಿ:  ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್

    ಹಿಂದಿನ ಮೈಸೂರು ಜಿಲ್ಲಾಧಿಕಾರಿ ಸ್ವಿಮ್ಮಿಂಗ್ ಪೂಲ್ ವಿಚಾರ ಸದನಲ್ಲಿ ಪ್ರಸಾಪವಾಗಿದೆ. ಸ್ವಿಮ್ಮಿಂಗ್ ಪೂಲ್ ಕಟ್ಟಲು 30 ಲಕ್ಷ ರೂಪಾಯಿ ಏಕೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸ್ವಿಮ್ಮಿಂಗ್ ಪೂಲ್ ಫೋಟೋ ಪ್ರದರ್ಶನ ಮಾಡಿ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ:  ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

    ಕ್ರೀಯಾ ಯೋಜನೆಯಲ್ಲಿ ಬ್ಯಾಗ್ ಖರೀದಿ ಮಾಡಿದ್ದಾರೆ. ಮೈಸೂರು ಪುರಸಭೆ, ತಾಲೂಕು ಪಂಚಾಯ್ತಿ ಜಿಲ್ಲಾ ಪಂಚಾಯ್ತಿ ಹಕ್ಕು ಮೊಟಕುಗೊಳಿಸಿ ಜಿಲ್ಲಾಧಿಕಾರಿ ನೇರವಾಗಿ ಖರೀದಿ ಮಾಡಿದ್ದಾರೆ. ಸಾ.ರಾ.ಮಹೇಶ್ ಒತ್ತಡ ತಂದು ವರ್ಗಾವಣೆ ಮಾಡಿದ್ದಾರೆ ಅಂತಾ ಯಾರದೋ ಕಾಲು ಕಟ್ಟಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ರು, ಬಂದು ಮಾಡಿದ್ದೆಲ್ಲ ಅನಾಚಾರದ ಕೆಲಸವಾಗಿದೆ. ಮೂವತ್ತು ಲಕ್ಷಕ್ಕೆ ಸ್ವಿಮ್ಮಿಂಗ್ ಪೂಲ್ ಮಾಡಿಸಿಕೊಂಡ್ರು, ಹದಿನೈದು ಲಕ್ಷಕ್ಕೆ ಕಚೇರಿ ನವೀಕರಣ ಮಾಡಿಸಿಕೊಂಡರು ಎಂದು ಹೇಳುವ ಮೂಲಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜೂಜಾಟದ ಬಿಗಿ ಕ್ರಮಕ್ಕೆ, ಪೊಲೀಸ್ ಕಾಯ್ದೆ ತಿದ್ದುಪಡಿ ತರುತ್ತಿದ್ದೇವೆ: ಬೊಮ್ಮಾಯಿ

    ಆರೋಪದ ವೇಳೆ ನ್ಯೂಸ್ ಪೇಪರ್ ಕಟ್ಟಿಂಗ್ಸ್ ತೋರಿಸಿ ರೋಹಿಣಿ ಸಿಂಧೂರಿ ಎಂದ ಸಾ.ರಾ.ಮಹೇಶ್, ನಾನು ಹೆಸರು ಹೇಳಲಿಲ್ಲ, ಆದರೆ ಪೇಪರ್‌ನಲ್ಲಿ  ಇರೋದನ್ನ ಹೇಳಿದ್ದೇನೆ ಅನ್ನೋ ಮೂಲಕ ಹೆಸರೇಳದೆ ಜಾರಿಕೊಂಡರು.

  • ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ಮುಸ್ಲಿಮ್ ಶಾಸಕ

    ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ಮುಸ್ಲಿಮ್ ಶಾಸಕ

    ಪಾಟ್ನಾ: ಬಿಹಾರದ ಕಾಂಗ್ರೆಸ್‍ನ ಮುಸ್ಲಿಂ ಶಾಸಕ ಶಕೀಲ್ ಅಹ್ಮದ್ ಖಾನ್ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ರಾಜಕೀಯ ನಾಯಕರಿಗೆ ಅಚ್ಚರಿ ಮೂಡಿಸಿದ್ದಾರೆ.

    ಚುನಾವಣೆಯಲ್ಲಿ ಗೆದ್ದ ನಾಯಕರು ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. 5 ದಿನಗಳ ಕಾಲ ಈ ಅಧಿವೇಶ ನಡೆಯಲಿದ್ದು ಮೊದಲ ದಿನ ವಿವಿಧತೆಯಲ್ಲಿ ಏಕತೆಗೆ ಸಾಕ್ಷಿಯಾಯಿತು. ಸದಸ್ಯರು ಪಕ್ಷದ ವ್ಯಾಪ್ತಿಯನ್ನು ಮಿರಿ ಮೈಥಿಲಿ, ಉರ್ದು, ಹಿಂದಿ ಸೇರಿದಂತೆ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    ಇದೇ ವೇಳೆ ಬಿಹಾರದ ಕಡ್ವಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‍ನ ಮುಸ್ಲಿಂ ಶಾಸಕ ಶಕೀಲ್ ಅಹ್ಮದ್ ಖಾನ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜೆಎನ್‍ಯು ಹಳೆಯ ವಿದ್ಯಾರ್ಥಿಯಾಗಿರುವ ಖಾನ್, ಬಿಜೆಪಿ ಹಾಗೂ ಎಐಎಂಐಎಂ ಪಕ್ಷಗಳಿಗೆ ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ಸೀತಾಮಾರಿ ಕ್ಷೇತ್ರದ ಬಿಜೆಪಿ ಶಾಸಕ ಮಿಥಿಲೇಶ್ ಕುಮಾರ್ ಸಹ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    ಹಲವು ಸದಸ್ಯರು ಉರ್ದುನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಶಿಯೋಹರ್ ಕ್ಷೇತ್ರದ ಆರ್‍ಜೆಡಿ ಶಾಸಕ, ಆನಂದ್ ಮೋಹನ್ ಸಿಂಗ್ ಪುತ್ರ ಚೇತನ್ ಆನಂದ್ ಅವರು ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • ಜೋರಾಗಿ ಮಾತನಾಡುತ್ತೀರಿ, ಮಾಸ್ಕ್ ಹಾಕಿಕೊಳ್ಳಿ- ಸದನದಲ್ಲಿ ಡಿಕೆಶಿಗೆ ಮಾಸ್ಕ್ ಹಾಕಿಸಿದ ಸ್ಪೀಕರ್

    ಜೋರಾಗಿ ಮಾತನಾಡುತ್ತೀರಿ, ಮಾಸ್ಕ್ ಹಾಕಿಕೊಳ್ಳಿ- ಸದನದಲ್ಲಿ ಡಿಕೆಶಿಗೆ ಮಾಸ್ಕ್ ಹಾಕಿಸಿದ ಸ್ಪೀಕರ್

    ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ನಡುವೆಯೇ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಈ ವೇಳೆ ಸದನದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಭಾಷಣ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ತಡೆದ ಸ್ಪೀಕರ್ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರು.

    ಲಾಕ್‍ಡೌನ್ ವೇಳೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದರು. ಈ ಕುರಿತು ಭಾಷಣ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆದರೆ ಈ ವೇಳೆ ಮಾಸ್ಕ್ ಧರಿಸದಿರುವುದನ್ನು ಗಮನಿಸಿದ ಸ್ಪೀಕರ್ ಅವರು, ಮಾರ್ಷಲ್‍ಗಳಿಂದ ಮಾಸ್ಕ್ ತರಿಸಿ ಡಿಕೆ ಶಿವಕುಮಾರ್ ಅವರಿಗೆ ನೀಡಿದರು. ಆ ಬಳಿಕ ನಂತರ ಮಾಸ್ಕ್ ಧರಿಸಿ ಡಿಕೆಶಿ ಮಾತು ಮುಂದುವರೆಸಿದರು.

    ಶಿವಕುಮಾರ್ ಅವರೇ ನೀವು ಜೋರಾಗಿ ಮಾತಾಡುತ್ತಿದ್ದೀರಿ. ಅದರಿಂದ ಬೇರೆಯವರಿಗೆ ಸಮಸ್ಯೆ ಆಗಬಾರದು ಎಂದು ಮಾಸ್ಕ್ ಧರಿಸಲು ಸೂಚಿಸಿದೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

    ಫುಡ್‍ಕಿಟ್ ವಿತರಣೆಯಲ್ಲಿ ಕಿಟ್ ಮೇಲೆ ಬಿಜೆಪಿ ನಾಯಕರ ಫೋಟೋ ಹಾಕಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಅವರು ಪ್ರಧಾನಿಗಳು, ಸಿಎಂ ಹಾಗೂ ತನ್ನ ಫೋಟೋ ಹಾಕಿ ಹಂಚಿದ್ದಾರೆ. ಬಡವರು, ಬಾಣಂತಿಯರಿಗೆ ಕೊಡುವ ಆಹಾರದ ಕಿಟ್ ಅದು. ಅಲ್ಲದೇ ಫುಡ್ ಕಿಟ್ ಅವ್ಯವಹಾರದ ಬಗ್ಗೆಯೂ ಸರ್ಕಾರಕ್ಕೆ ಗಮನಕ್ಕೆ ತಂದ್ದಿದ್ದೇವೆ. ಆದರೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಅದರ ಬಗ್ಗೆ ಒಂದು ತನಿಖೆ ಮಾಡಿಸಿಲ್ಲ ಎಂದು ಡಿಕೆಶಿ ಆರೋಪಿಸಿದರು.

    ರಾಜಕಾರಣ ಮಾಡೋಣ, ಚುನಾವಣೆ ಬರುತ್ತೆ ಹೋಗುತ್ತೆ. ಆದರೆ ಬಡವರ ವಿಷಯದಲ್ಲಿ ಫೋಟೋ ಹಾಕಿಕೊಂಡು ರಾಜಕಾರಣ ಮಾಡಿದರೆ, ಇದಕ್ಕಿಂದ ಅವಮಾನ ಸಂಗತಿ ಮತ್ತೊಂದು ಇಲ್ಲ. ಲಾಕ್‍ಡೌನ್ ನಿಂದ 6 ರಿಂದ 8 ತಿಂಗಳಿನಿಂದ ಜನರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಕೇವಲ 4 ಗಂಟೆಯಲ್ಲಿ ಪ್ರಧಾನಿಗಳು ಲಾಕ್‍ಡೌನ್ ಮಾಡಿ, ಗಂಟೆ ಬಾರಿಸಲು, ದೀಪ ಹಚ್ಚಲು 4 ದಿನಗಳ ಸಮಯಕೊಟ್ಟರು. ಅದನ್ನು ಸಂತೋಷದಿಂದ ಸ್ವೀಕರ ಮಾಡಿದ್ದೇವು. ಆದರೆ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ನೆರವು ಸರ್ಕಾರ ಕೊಟ್ಟಿಲ್ಲ. ರೈತರಿಗೆ ಪರಿಹಾರ ಘೋಷಣೆ ಮಾಡಿದ್ರಿ, ಎಷ್ಟು ಜನರಿಗೆ ಎಷ್ಟು ರೂಪಾಯಿ ಪರಿಹಾರ ಕೊಟ್ಟಿದ್ದೀರಿ ಎಂಬ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.

  • ಕೊರೊನಾ ಹೆಚ್ಚಾಗಿದ್ದು ನಿಮ್ಮಿಂದಲೇ- ಅಧಿವೇಶನ ಮೊಟಕುಗೊಳಿಸಲು ಸಿದ್ದು ವಿರೋಧ

    ಕೊರೊನಾ ಹೆಚ್ಚಾಗಿದ್ದು ನಿಮ್ಮಿಂದಲೇ- ಅಧಿವೇಶನ ಮೊಟಕುಗೊಳಿಸಲು ಸಿದ್ದು ವಿರೋಧ

    ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಇವತ್ತಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಸದನವನ್ನು ಮೊಟುಕುಗೊಳಿಸಲು ಸಿಎಂ ಬಿಎಸ್‍ವೈ ಚಿಂತನೆ ನಡೆಸಿದ್ದು, ಆದರೆ ಇದಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಬೆಳಿಗ್ಗೆ ಸದನ ಮೊಟಕುಗೊಳಿಸುವ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಕೊರೊನಾ ಜಾಸ್ತಿ ಆಗುತ್ತಿದೆ ನಿಜ, ಆದರೆ ಅದು ನಿಮ್ಮಿಂದ ಜಾಸ್ತಿ ಆಗುತ್ತಿದೆ ಎಂದು ಹೇಳಿದೆ. ನಾವು ಅಧಿವೇಶನ ಮೊಟಕುಗೊಳಿಸಲು ಒಪ್ಪುವುದಿಲ್ಲ. ಇನ್ನೂ ಮೂರು ವಾರಗಳ ಕಾಲ ಅಧಿವೇಶನ ವಿಸ್ತರಿಸಲು ನಮ್ಮ ಪ್ರಸ್ತಾಪವಿದೆ ಎಂದರು.

    ಸುಮಾರು 30 ರಿಂದ 40 ಬಿಲ್ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ತಂದಿದ್ದಾರೆ. ಸದನ ಮೊಟಕುಗೊಳಿಸುವುದಾದರೇ ಬಿಲ್ ಗಳನ್ನು ವಾಪಸ್ ಪಡೆಯಲಿ ನೋಡೋಣ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಹೇಳುತ್ತೇನೆ ಎಂದರು.

    ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಅಧಿವೇಶನ ಕಲಾಪವನ್ನು ಕಡಿತಗೊಳಿಸಬೇಕು ಎಂಬ ಅನಿಸಿಕೆ ಇದೆ. ಈ ಬಗ್ಗೆ ಕಲಾಪ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಇದಕ್ಕೆ ವಿಪಕ್ಷಗಳ ಸಹಕಾರ ಬೇಕಿದೆ ಎಂದರು.

  • ಡಿಸಿಎಂ ಅಶ್ವಥ್ ನಾರಾಯಣ್‍ಗೆ ಕೊರೊನಾ ಸೋಂಕು ದೃಢ

    ಡಿಸಿಎಂ ಅಶ್ವಥ್ ನಾರಾಯಣ್‍ಗೆ ಕೊರೊನಾ ಸೋಂಕು ದೃಢ

    ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಸಿ.ಅಶ್ವಥ್ ನಾರಾಯಣ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಸ್ವತಃ ಅವರೇ ಸ್ಪಷ್ಟಪಡಿಸಿದ್ದು, ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ನಾನು ಶನಿವಾರ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದ ವೇಳೆ ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ನಾನು ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ. ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

    ಸೆಪ್ಟೆಂಬರ್ 21ರಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಧಿವೇಶನದಲ್ಲಿ ಭಾಗವಹಿಸುವ ಎಲ್ಲ ಶಾಸಕರು ಹಾಗೂ ಅಧಿಕಾರಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆ ಹಲವರು ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಅದರಂತೆ ಡಿಸಿಎಂ ಅಶ್ವಥ್ ನಾರಾಯಣ್ ಸಹ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಈ ವೇಳೆ ಪಾಸಿಟಿವ್ ಇರುವುದು ಪತ್ತೆಯಾಗಿದೆ.

  • ಸೆ.21 ರಿಂದ ಅಧಿವೇಶನ ಆರಂಭ- ಸಾಮಾಜಿಕ ಅಂತರದಲ್ಲಿ ಆಸನದ ವ್ಯವಸ್ಥೆ: ಕಾಗೇರಿ

    ಸೆ.21 ರಿಂದ ಅಧಿವೇಶನ ಆರಂಭ- ಸಾಮಾಜಿಕ ಅಂತರದಲ್ಲಿ ಆಸನದ ವ್ಯವಸ್ಥೆ: ಕಾಗೇರಿ

    – ಪ್ರತಿ ಸೀಟಿನ ನಡುವೆ ಗ್ಲಾಸ್ ಶೀಟ್ ವ್ಯವಸ್ಥೆ

    ಬೆಂಗಳೂರು: ಸೆಪ್ಟೆಂಬರ್ 21 ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಕಾಗೇರಿ ಅವರು, ಸೆ. 21ರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಗುತ್ತೆ. ಕೊರೊನಾ ಹಿನ್ನೆಲೆ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳಿಗೂ ಕೊರೊನಾ ಸೋಂಕು ಬಂದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

    ಅಧಿವೇಶನ ನಡೆಸುವ ಕುರಿತು ಅನೇಕ ಮಾರ್ಗಸೂಚಿಗಳನ್ನು ಮಾಡಲಾಗಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಸಾಮಾಜಿಕ ಅಂತರದಲ್ಲಿ ಸೀಟುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಸನಗಳಿಗೆ ಗ್ಲಾಸ್ ಶೀಟ್ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು, ಮಾಧ್ಯಮದವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಏನು ಕ್ರಮ ಆಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

    ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಶಾಸಕರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ನೀಡುವುದು ಸೇರಿದಂತೆ ಎಲ್ಲಾ ಕ್ರಮ ತೆಗೆದುಕೊಳ್ತಿದ್ದೇವೆ. ಅಲ್ಲದೇ ಎಲ್ಲರೂ ಮಾಸ್ಕ್, ಫೇಸ್ ಶೀಲ್ಡ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಎಲ್ಲರಿಗೂ ನಾವು ಮಾಸ್ಕ್, ಫೇಸ್ ಶೀಲ್ಡ್ ನೀಡುತ್ತೇವೆ. ಎಲ್ಲರೂ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದರು.

    ಕಲಾಪ ಎಂದಿನಂತೆ ನಡೆಯಲಿದ್ದು, ಪ್ರಶ್ನೋತ್ತರ, ಶೂನ್ಯ ವೇಳೆ, ಗಮನ ಸೆಳೆಯುವ ಪ್ರಶ್ನೆ ಸೇರಿದಂತೆ ಎಲ್ಲಾ ವಿಧಾನಗಳು ಇರುತ್ತೆ. ಈ ಅಧಿವೇಶನದಲ್ಲಿ ಮಂಡಿಸಲು 10 ಹೊಸ ಬಿಲ್‍ಗಳು ನಮ್ಮ ಬಳಿ ಇದ್ದು, ಸುಗ್ರೀವಾಜ್ಞೆ ಹೊರಡಿಸಿರುವ 19 ಬಿಲ್‍ಗಳಿದೆ. ಅಲ್ಲದೇ ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ಎರಡು ವಿಧೇಯಕ ಸೇರಿದಂತೆ ಒಟ್ಟು 31 ಬಿಲ್ ಈ ಅಧಿವೇಶನದಲ್ಲಿ ಅಂಗೀಕಾರ ಆಗಬೇಕು ಎಂದರು ವಿವರಿಸಿದರು.

    ಸಚಿವರು ಗನ್ ಮ್ಯಾನ್ ಹಾಗೂ ಅವರ ಪಿಎಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವಿಧಾನಸೌಧದ ಹೊಟೇಲ್ ಹೊರಗೆ ಶಿಫ್ಟ್ ಮಾಡಲಾಗಿದೆ. ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಸೇರಿದಂತೆ ಪತ್ರಕರ್ತರ ಗ್ಯಾಲರಿಗೆ ಸಿಮೀತ ಜನರಿಗೆ ಅವಕಾಶ ನೀಡಲು ವಾರ್ತಾ ಇಲಾಖೆ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದರು.

    ಗ್ಯಾಲರಿಯಲ್ಲಿ ಮೀಡಿಯಾ ಶಿಫ್ಟ್ ಮಾಡೋ ಚಿಂತನೆ ಇದ್ದು, ಯಾವುದೇ ನಿರ್ಣಯ ಮಾಡಿದರೂ ಮಾಧ್ಯಮಗಳ ಸಹಕಾರ ಕೊಡಬೇಕು ಎಂದು ಕಾಗೇರಿ ಅವರು ಮನವಿ ಮಾಡಿದರು. ಅಲ್ಲದೇ ಎಲ್ಲರೂ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವವರು ಕೂಡ ಟೆಸ್ಟ್ ಮಾಡಿಸುವುದು ಕಡ್ಡಾಯ. ಇಂತಹ ಟೆಸ್ಟ್ ಗಳ ವರದಿ ಶೀಘ್ರವೇ ವರದಿ ಬರುವಂತೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದರು.

    ಸಚಿವರನ್ನು ಭೇಟಿ ಮಾಡುವ ನಿಯೋಗಗಳಿಗೆ ಅಧಿವೇಶನ ಜಾಗದಲ್ಲಿ ಈ ಬಾರಿ ಅವಕಾಶ ನೀಡಲಾಗುವುದಿಲ್ಲ. ಸಚಿವರನ್ನು ಶಾಸಕರ ಭವನದಲ್ಲಿ ನಿಯೋಗಗಳು ಭೇಟಿ ಮಾಡಬೇಕು ಅಥವಾ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಭೇಟಿ ಮಾಡಬೇಕು ಎಂದು ಸೂಚಿಸಿದರು.

    ವಿಧಾನಸೌಧದಲ್ಲಿ ಧರಣಿ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಕೊರೊನಾ ಇದೆ ಗೊತ್ತಿಲ್ಲ. ಹೇಗೆ ಪ್ರತಿಭಟನೆ ಮಾಡಬೇಕು ಅಂತಾ ಅವರೇ ನಿರ್ಧಾರ ಮಾಡಬೇಕು. ನಾವು ಹೀಗೆ ಮಾಡಿ ಎಂದು ಹೇಳಲು ಆಗೋದಿಲ್ಲ ಎಂದರು. ಅಲ್ಲದೇ 70 ವರ್ಷ ಮೇಲ್ಪಟ್ಟವರಿಗೆ ಅಧಿವೇಶನಕ್ಕೆ ಅವಕಾಶ ವಿಚಾರವಾಗಿ, ವಯಸ್ಸು ಹೆಚ್ಚಳ ಇರುವವರ ಪಟ್ಟಿ ಮಾಡಲಾಗಿದೆ. ಅವರಿಗೆ ವಿಶೇಷ ಕಾಳಜಿಯನ್ನು ಮಾಡುತ್ತೇವೆ. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

  • ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ: ವಿಶ್ವನಾಥ್

    ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ: ವಿಶ್ವನಾಥ್

    -ಇಂದ್ರಜಿತ್ ಲಂಕೇಶ್‍ರನ್ನು ಗೇಲಿ ಮಾಡುತ್ತಿದ್ದೇವೆ

    ಬೆಂಗಳೂರು: ವಿಧಾನಸಭಾ ಅಧಿವೇಶನ ಆರಂಭಕ್ಕೆ ಮುನ್ನವೇ ಸಂಪುಟ ಪುನಾರಚನೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವೇಳೆ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ನಾನು ಪರಿಷತ್ ಸದಸ್ಯ, ಆದ್ದರಿಂದ ನಾನು ಕೂಡ ಸಚಿವ ಸ್ಥಾನದ ಆಂಕಾಕ್ಷಿ ಎಂದು ತಿಳಿಸಿದರು.

    ಇದೇ ವೇಳೆ ಡ್ರಗ್ಸ್ ಮಾಫಿಯಾ ಕೊರೊನಾದಂತೆ ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಪಾಕಿಸ್ತಾನ ಭಾರತವನ್ನು ಹಾಳು ಮಾಡಲು ಅಮೃತಸರಕ್ಕೆ ಡ್ರಗ್ಸ್ ಸಪ್ಲೈ ಮಾಡಿ ಹೇಗೆ ಯುವಕರನ್ನು ಹಾಳುಮಾಡುತ್ತಿದೆ ಎಂಬುವುದು ಗೊತ್ತಿದೆ. ಪಂಜಾಬ್ ರಾಜ್ಯ ಡ್ರಗ್ಸ್ ನಿಂದ ಏನಾಗುತ್ತಿದೆ ಎಂಬುವುದು ಗೊತ್ತಿದೆ. ನಮ್ಮಲ್ಲಿ ಡ್ರಗ್ಸ್ ಎಲ್ಲಿಂದ ಬರುತ್ತದೆ, ಯಾರು ಇದನ್ನು ಉಪಯೋಗಿಸುತ್ತಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಿದೆ. ಆದರೆ ಸೆಲೆಬ್ರಿಟಿಗಳು ಇದನ್ನು ಬಳಕೆ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಈ ಬಗ್ಗೆ ಸೆಲೆಬ್ರಿಟಿ ಅವರೇ ರಿವೀಲ್ ಮಾಡಿದ್ದರು. ಆದರೆ ನಾವು ಅವರನ್ನು ಗೇಲಿ ಮಾಡುತ್ತಿದ್ದೇವೆ. ಯಾರೋ ಒಬ್ಬರನ್ನು ಬಂಧನ ಮಾಡುವುದರಿಂದ ಏನು ಆಗಲ್ಲ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿದರೇ ಮಾತ್ರ ಇದಕ್ಕೆ ಬ್ರೇಕ್ ಹಾಕಲು ಸಾಧ್ಯ ಎಂದರು.

    ಇತ್ತ ಸಂಪುಟ ಪುನರ್ ರಚನೆ ಸಂಬಂಧ ಚಟುವಟಿಕೆಗಳು ಚುರುಕು ಪಡೆದಿದೆ. ಸಿಎಂ ಯಡಿಯೂರಪ್ಪ ಅವರು ನಿನ್ನೆಯೇ ಹಿರಿಯ ಸಚಿವರೊಂದಿಗೆ ಸಭೆ ಕೂಡ ನಡೆಸಿದ್ದರೆ. ಸಭೆಯಲ್ಲಿ ಯಾರನ್ನು ಕೈಬಿಡಬೇಕು, ಅವರನ್ನು ಹೇಗೆ ಒಪ್ಪಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.