Tag: Assembly polls

  • ದೇವಭೂಮಿಯನ್ನು ದಾರುಲ್ ಭೂಮಿ ಮಾಡುವ ಕನಸು ಕಾಣುವವರಿಗೆ ಜನತೆ ಉತ್ತರ ನೀಡಲಿದ್ದಾರೆ: ಕೈಲಾಶ್ ವಿಜಯವರ್ಗಿಯ

    ದೇವಭೂಮಿಯನ್ನು ದಾರುಲ್ ಭೂಮಿ ಮಾಡುವ ಕನಸು ಕಾಣುವವರಿಗೆ ಜನತೆ ಉತ್ತರ ನೀಡಲಿದ್ದಾರೆ: ಕೈಲಾಶ್ ವಿಜಯವರ್ಗಿಯ

    ನವದೆಹಲಿ: ಉತ್ತರಾಖಂಡದಲ್ಲಿ ಮತದಾನದ ನಡುವೆಯೇ ಕಾಂಗ್ರೆಸ್ ಮಸೀದಿ ಹೆಸರಿನಲ್ಲಿ ಮತ ಯಾಚನೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

    ದೇವಭೂಮಿಯನ್ನು ದಾರುಲ್ ಭೂಮಿಯನ್ನಾಗಿ ಮಾಡಲು ಆಲೋಚಿಸುವವರಿಗೆ ಜನತೆಯೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ತಿರುಗೇಟು ನೀಡಿದ್ದಾರೆ.

    ಉತ್ತರಾಖಂಡ ಕಾಂಗ್ರೆಸ್ ಭಾನುವಾರ ಸಂಜೆ ಪಿರಾನ್ ಕಲಿಯಾರ್ ಮಸೀದಿಯ ಚಿತ್ರವನ್ನು ಬಳಸಿ ಟ್ವೀಟ್ ಮಾಡಿದ ನಂತರ ಹೊಸ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಪಿರಾನ್ ಕಲಿಯಾರ್ಗೆ ಬರುತ್ತಿದೆ ಉತ್ತರಾಖಂಡ ಕಾಂಗ್ರೆಸ್ ಟ್ವೀಟ್ ಮಾಡಿದೆ.

    ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಮುಸ್ಲಿಂ ಓಲೈಕೆ, ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಶುಕ್ರವಾರದ ನಮಾಜ್‍ಗಾಗಿ ರಜೆ ನೀಡುವುದಲ್ಲದೇ ಈಗ ಅದು ಮುಸ್ಲಿಂ ಹೆಸರಿನಲ್ಲಿ ಮತ ಕೇಳುತ್ತಿದೆ. ಉತ್ತರಾಖಂಡದ ಮಸೀದಿಯ ಜನರು ಮಾತ್ರವಲ್ಲದೆ ಐದು ರಾಜ್ಯಗಳ ಜನರು ದೇವಭೂಮಿಯನ್ನು ದಾರುಲ್ ಭೂಮಿಯನ್ನಾಗಿ ಮಾಡಲು ಯೋಚಿಸುತ್ತಿವೆ ಅಂತಹವರಿಗೆಲ್ಲಾ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಟ್ವೀಟ್ ಮಾಡಿದರು.

    ಉತ್ತರಾಖಂಡ ಕಾಂಗ್ರೆಸ್‍ನ ಟ್ವೀಟ್‍ನ ಸ್ಕ್ರೀನ್‍ಶಾಟ್ ಅನ್ನು ಹಂಚಿಕೊಂಡ ಲೋಕಸಭಾ ಸದಸ್ಯ ಮತ್ತು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಚುನಾವಣೆ ಸಮೀಪಿಸುತ್ತಿರುವಾಗ, ಕಾಂಗ್ರೆಸ್‍ಗೆ ಅಂತಿಮವಾಗಿ ಒಂದೇ ಒಂದು ಆಯ್ಕೆ ಉಳಿದಿದೆ ಅದು ಕೋಮು ಧ್ರುವೀಕರಣ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ, ಉತ್ತರಾಖಂಡದಲ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್‍ನ ಜಾತ್ಯತೀತತೆಯ ಮುಖವಾಡವನ್ನು ಕಳಚಿದೆ. ಇದಕ್ಕೆ ದೇವಭೂಮಿಯ ಜನರು ತಮ್ಮ ಮತದ ಮೂಲಕ ಉತ್ತರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷೆ ನೇಹಾ ಜೋಶಿ ಟ್ವೀಟ್ ಮಾಡಿ, ಅವರಿಗೆ ಧ್ರುವೀಕರಣವನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ, ಈ ದೇಶದಲ್ಲಿ ಯಾವುದೇ ಪಕ್ಷ ಕೋಮುವಾದಿಯಾಗಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಉತ್ತರಾಖಂಡದ ಪಕ್ಷದ ಯುವ ಘಟಕದ ಉಸ್ತುವಾರಿ ತಜಿಂದರ್ ಪಾಲ್ ಸಿಂಗ್, ಮತದಾನ ಮಾಡುವ ಮೊದಲು ಕಾಂಗ್ರೆಸ್‍ನ ಮುಖದಿಂದ ಹಿಜಬ್ ಹೊರಬಂದಿದೆ ಎಂದಿದ್ದಾರೆ.

    ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಉತ್ತರಾಖಂಡದಲ್ಲಿ (ಯುಸಿಸಿ) ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ:  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

    70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಮತದಾನ ನಡೆಯುತ್ತಿದೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ 81 ಲಕ್ಷಕ್ಕೂ ಹೆಚ್ಚು ಮತದಾರಿದ್ದು, 150 ಕ್ಕೂ ಹೆಚ್ಚು ಪಕ್ಷೇತರ ಅಭ್ಯರ್ಥಿಗಳನ್ನು ಒಳಗೊಂಡಂತೆ 632 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

    2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 11 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರಗಳಿಂದ ಗೆದ್ದಿದ್ದರು.

  • ಡ್ರಗ್ ಮುಕ್ತ ಪಂಜಾಬ್‍ಗೆ ಭರವಸೆ ನೀಡಿದ ಅಮಿತ್ ಶಾ

    ಡ್ರಗ್ ಮುಕ್ತ ಪಂಜಾಬ್‍ಗೆ ಭರವಸೆ ನೀಡಿದ ಅಮಿತ್ ಶಾ

    ಚಂಡೀಗಢ: ಪಂಜಾಬ್‍ನಿಂದ ಡ್ರಗ್ಸ್ ನಿರ್ಮೂಲನೆ ಮಾಡುತ್ತೇವೆ. ಡ್ರಗ್ಸ್ ಮುಕ್ತ ಪಂಜಾಬ್ ಮಾಡುವುದೇ ನಮ್ಮ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

    ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಅವಕಾಶ ನೀಡುವಂತೆ ಜನತೆಯನ್ನು ಒತ್ತಾಯಿಸಿದ ಅಮಿತ್ ಶಾ ಪಂಜಾಬ್ ಅನ್ನು ಡ್ರಗ್ಸ್ ಮುಕ್ತ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರೇಡಿಯೋ ಜನರನ್ನು ಸಂಪರ್ಕಿಸುವ ಅದ್ಭುತ ಮಾಧ್ಯಮ: ನರೇಂದ್ರ ಮೋದಿ

    ಪಂಜಾಬ್‍ನಲ್ಲಿ ಸರ್ಕಾರ ರಚನೆಯಾದ ಮೇಲೆ ರಾಜ್ಯದ 4 ನಗರಗಳಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾಖೆಗಳನ್ನು ಸ್ಥಾಪಿಸುತ್ತೇವೆ. ಮಾದಕ ದ್ರವ್ಯ ತಡೆಗಟ್ಟುವಿಕೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಯಪಡೆಯನ್ನು ರಚಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

    ಫೆಬ್ರವರಿ 20ರಂದು ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್‍ನಲ್ಲಿ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದು, ಬಹುಮತ ಗಳಿಸಿ ಅಧಿಕಾರ ಪಡೆದುಕೊಂಡಿತ್ತು.

  • ರಾಹುಲ್ ಗಾಂಧಿ ಜೇಬಿಗೆ ಕತ್ತರಿ ಹಾಕಿದ್ದು ಯಾರು?: ಹರ್ಸಿಮ್ರತ್ ಕೌರ್ ಬಾದಲ್

    ರಾಹುಲ್ ಗಾಂಧಿ ಜೇಬಿಗೆ ಕತ್ತರಿ ಹಾಕಿದ್ದು ಯಾರು?: ಹರ್ಸಿಮ್ರತ್ ಕೌರ್ ಬಾದಲ್

    ಚಂಡೀಗಢ: ಶ್ರೀ ಹರ್ಮಂದಿರ್ ಸಾಹಿಬ್‍ನಲ್ಲಿ ರಾಹುಲ್ ಗಾಂಧಿ ಅವರ ಜೇಬಿಗೆ ಕತ್ತರಿ ಹಾಕಿದ್ದು ಯಾರು? ಕಾಂಗ್ರೆಸ್ ಅವರು ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮಾಜಿ ಕೇಂದ್ರ ಸಚಿವೆ ಮತ್ತು ಎಸ್‍ಎಡಿ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.

    ಫೆಬ್ರವರಿ 20ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಲವಾರು ಪಕ್ಷದ ಅಭ್ಯರ್ಥಿಗಳು ಹಾಗೂ ರಾಹುಲ್ ಗಾಂಧಿ ಅವರು ಬುಧವಾರ ಅಮೃತಸರದ ಗೋಲ್ಡನ್ ಟೆಂಪಲ್‍ಗೆ ಭೇಟಿ ನೀಡಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ, ಉಪ ಮುಖ್ಯಮಂತ್ರಿಗಳಾದ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಒಪಿ ಸೋನಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಈ ಕುರಿತಂತೆ ಟ್ವೀಟ್ ಮಾಡಿರುವ ಹರ್ಸಿಮ್ರತ್ ಕೌರ್ ಬಾದಲ್ ಅವರು, ಶ್ರೀ ಹರ್ಮಂದಿರ್ ಸಾಹಿಬ್‍ನಲ್ಲಿ ರಾಹುಲ್ ಗಾಂಧಿ ಅವರ ಜೇಬಿಗೆ ಕೈ ಹಾಕಿದವರು ಯಾರು? ಚರಣ್‍ಜಿತ್ ಸಿಂಗ್ ಚನ್ನಿ ಅವರಾ? ಅಥವಾ ಸುಖಜಿಂದರ್ ಸಿಂಗ್ ರಾಂಧವಾ ಅವರಾ? ಇವರ ಹತ್ತಿರ ಬರಲು ಸೆಕ್ಯೂರಿಟಿ ಗಾರ್ಡ್‍ಗಳು ಅನುಮತಿ ನೀಡಿದ್ದು, ಕೇವಲ ಮೂವರಿಗೆ ಮಾತ್ರ. ಈ ರೀತಿ ಸುಳ್ಳು ಹೇಳುವ ಮೂಲಕ ನಮ್ಮ ಪವಿತ್ರ ದೇಗುಲಕ್ಕೆ ಕೆಟ್ಟ ಹೆಸರು ತರುವ ಒಂದು ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‍ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಅಂತಹ ಸುಳ್ಳು ಸುದ್ದಿಗಳನ್ನು ಹರಡುವುದು ಅಪಹಾಸ್ಯ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ ಜವಾಬ್ದಾರಿ ಮತ್ತು ಪ್ರಬುದ್ಧತೆಯನ್ನು ತೋರಿಸಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಆಕಾಶ ಬೆಳಗಿದವು 1,000 ಮೇಡ್ ಇನ್ ಇಂಡಿಯಾ ಡ್ರೋನ್‍ಗಳು

  • ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    – ಪಂಜಾಬ್‍ನ 177 ಕ್ಷೇತ್ರದಲ್ಲೂ ಸ್ಫರ್ಧೆ
    – 32ರ ಪೈಕಿ 22 ಸಂಘಟನೆಗಳಿಂದ ರಂಗ ಘೋಷಣೆ

    ಚಂಡೀಗಢ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಕ್ಕೂ ಅಧಿಕ ಅವಧಿ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದ ರೈತ ಸಂಘಟನೆಗಳು ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕಲು ನಿರ್ಧರಿಸಿವೆ.

    ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್‍ನ 32 ರೈತ ಸಂಘಟನೆಗಳ ಪೈಕಿ 22 ಸಂಘಟನೆಗಳು ಒಗ್ಗೂಡಿ ಸಂಯುಕ್ತ ಸಮಾಜ್ ಮೋರ್ಜಾ (SSM) ಹೆಸರಿನಲ್ಲಿ 177 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ನಿನ್ನೆ ಘೋಷಿಸಿದೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ರೈತ ನಾಯಕ ಬಲಬೀರ್ ಸಿಂಗ್ ರಾಜೇವಾಲ್ ಅವರು ಎಸ್‍ಎಸ್‍ಎಂ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

    ನಿನ್ನೆ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸ್ಪರ್ಧೆ ಘೋಷಣೆ ಮಾಡಿದ ರೈತ ನಾಯಕ ಬಲದೇವ ಸಿಂಗ್, ಪಂಜಾಬ್‍ಗೆ ನಮ್ಮ ರಂಗ ಹೊಸ ದಿಕ್ಕು ತೋರಿಸಲಿದೆ. ಆದರೆ ನಮ್ಮದು ರಾಜಕೀಯ ಪಕ್ಷವಲ್ಲ. ರಂಗ ( ಮೋರ್ಚಾ) ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಜೇವಾಲ್ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಬದಲಾವಣೆ ತರಲು ಈ ನಿರ್ಧಾರ ಕೈಗೊಂಡಿದ್ದೇವೆ. 177 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ. ಮೈತ್ರಿ ಮಾಡಿಕೊಳ್ಳುವುದರ ಕುರಿತಾಗಿ ಯಾವುದೇ ತೀರ್ಮಾನಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಟನೆ

  • ಲೋಕಸಭಾ ಆಯ್ತು, ವಿಧಾನಸಭಾ ಚುನಾವಣೆಯತ್ತ ಅಮಿತ್ ಶಾ ಕಣ್ಣು

    ಲೋಕಸಭಾ ಆಯ್ತು, ವಿಧಾನಸಭಾ ಚುನಾವಣೆಯತ್ತ ಅಮಿತ್ ಶಾ ಕಣ್ಣು

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಈಗ ಮಹಾರಾಷ್ಟ್ರ, ಹರ್ಯಾಣ ಹಾಗೂ ಜಾರ್ಖಂಡ್ ಮೇಲೆ ಗಮನ ಕೇಂದ್ರಿಕರಿಸುತ್ತಿದೆ.

    ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ದೆಹಲಿ ಬಿಜೆಪಿ ಕಚೇರಿಯಲ್ಲಿ ಮೂರೂ ರಾಜ್ಯಗಳ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಈ ಸಭೆಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‍ಲಾಲ್ ಸೇರಿದಂತೆ ಅನೇಕ ನಾಯಕರು ಹಾಜರಾಗಿದ್ದಾರೆ.

    ಹರ್ಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿದೆ. ಈ ರಾಜ್ಯಗಳ ಚುನಾವಣೆ ಇದೇ ವರ್ಷ ನಡೆಯಲಿದೆ. ಹೀಗಾಗಿ ಅಮಿತ್ ಶಾ ಅವರು ಸ್ಥಳೀಯ ನಾಯಕರ ಜೊತೆಗೆ ವಿಶೇಷ ಸಭೆ ನಡೆಸಿದ್ದಾರೆ.

    ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆ 2014ರಲ್ಲಿ ನಡೆದಿತ್ತು. ಆಗ ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ 125, ಶಿವಸೇನೆ 60 ಸ್ಥಾನ ಪಡೆದಿದ್ದವು. ಆದರೆ ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ ಹಾಗೂ ಶಿವಸೇನೆ ಮತ್ತೆ ಒಂದಾಗಿ ಮೈತ್ರಿ ಸರ್ಕಾರ ರಚಿಸಿದ್ದವು. ಈ ಬಾರಿಯೂ ಮೈತ್ರಿ ಮುಂದವರಿಯಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

    2014ರಲ್ಲಿ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳ ಪೈಕಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ವೇಳೆ ಎಜೆಎಸ್‍ಯು ಬೆಂಬಲ ಪಡೆದು ಸರ್ಕಾರ ರಚಿಸಿತ್ತು.

    ಜಾರ್ಖಂಡ್ ವಿಧಾನಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 48 ಸಂಖ್ಯಾಬಲ ಪಡೆದು ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ಮೂರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.