Tag: Assembly Elections 2023

  • 12 ರಾಜ್ಯಗಳಲ್ಲಿ ಬಿಜೆಪಿ ಆಡಳಿತ – 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರ

    12 ರಾಜ್ಯಗಳಲ್ಲಿ ಬಿಜೆಪಿ ಆಡಳಿತ – 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರ

    ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೂ 6 ತಿಂಗಳು ಕೂಡ ಉಳಿದಿಲ್ಲ. ಈ ಹೊತ್ತಲ್ಲಿ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ಲೋಕಸಭೆ ಚುನಾವಣಾ ರಾಜಕೀಯ ಸಮೀಕರಣಗಳು ಬದಲಾಗುವ ಎಲ್ಲಾ ಸಾಧ್ಯತೆಗಳು ಇವೆ. ಭಾರತದ ರಾಜಕೀಯ ಭೂಪಟದಲ್ಲಿ ಹಿಂದಿ ಹಾರ್ಟ್‌ಲ್ಯಾಂಡ್‌ ಎಂದು ಗುರುತಿಸಲಾದ ಎಲ್ಲಾ ಬಹುತೇಕ ರಾಜ್ಯಗಳು, ಈಶಾನ್ಯ ಭಾರತದ ಬಹುತೇಕ ರಾಜ್ಯಗಳು ಕೇಸರಿಮಯವಾಗಿವೆ.

    ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆದ್ದಿರೋದು ಕೇಸರಿ ಪಕ್ಷದ ವ್ಯಾಪ್ತಿಯನ್ನು ಹಿಗ್ಗಿಸಿದೆ. ಉತ್ತರ ಭಾರತದಲ್ಲಿ ಹಿಮಾಚಲ ಪ್ರದೇಶ ಹೊರತುಪಡಿಸಿದರೆ ಉಳಿದೆಲ್ಲೂ ಕಾಂಗ್ರೆಸ್ ಸ್ವಂತವಾಗಿ ಅಧಿಕಾರಲ್ಲಿಲ್ಲ. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ, ಅಲ್ಲಿ ಕಾಂಗ್ರೆಸ್ ಪ್ರಥಮ ಪಕ್ಷವಾಗಿಲ್ಲ. ಸದ್ಯ ಕರ್ನಾಟಕ, ಹಿಮಾಚಲ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಇದೆ. ವಿಶೇಷ ಎಂದರೆ, ದಕ್ಷಿಣ ಭಾರತದಲ್ಲೆಲ್ಲೂ ಬಿಜೆಪಿ ಅಧಿಕಾರದಲ್ಲಿಲ್ಲ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಇದು ನಿಜಕ್ಕೂ ಕಾಂಗ್ರೆಸ್‌ಗೆ ಮತ್ತು ಬಿಜೆಪಿಗೆ ಸವಾಲೇ ಸರಿ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್

    ಭಾರತದ ರಾಜಕೀಯ ಭೂಪಟ
    * 12 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ
    * ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ
    * ಪಂಜಾಬ್, ದೆಹಲಿಯಲ್ಲಿ ಎಎಪಿ ಸರ್ಕಾರ
    * 10 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಧಿಕಾರ
    * ಜಮ್ಮು ಕಾಶ್ಮೀರ, ಲಡಾಖ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ

  • ಮಾಜಿ ಸಿಎಂ ಕುಮಾರಸ್ವಾಮಿ ಕನಸು ಕಂಡಿದ್ದು 123 ಸೀಟು, ಮತದಾರ ನೀಡಿದ್ದು ಕೇವಲ 19

    ಮಾಜಿ ಸಿಎಂ ಕುಮಾರಸ್ವಾಮಿ ಕನಸು ಕಂಡಿದ್ದು 123 ಸೀಟು, ಮತದಾರ ನೀಡಿದ್ದು ಕೇವಲ 19

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ (Assembly Elections 2023) ಈ ಬಾರಿ ಜೆಡಿಎಸ್ (JDS) 123 ಕ್ಷೇತ್ರದಲ್ಲಿ ಗೆಲುವು (Victory) ಸಾಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಅವರು ಪದೇ ಪದೇ ಹೇಳುತ್ತಿದ್ದರು. ಅಲ್ಲದೇ, ಈ ಬಾರಿ ನಮ್ಮ ಪಕ್ಷವೇ ನಿರ್ಣಾಯಕ ಎಂದೂ ಅವರು ಹೇಳಿಕೊಂಡಿದ್ದರು. ಆದರೆ, ಮತದಾರ ಹೇಳಿಕೊಳ್ಳುವಂತಹ ಗೆಲುವನ್ನು ಜೆಡಿಎಸ್ ಪಕ್ಷಕ್ಕೆ ನೀಡಲಿಲ್ಲ. ಕೇವಲ 19 ಸೀಟುಗಳನ್ನು ನೀಡುವ ಮೂಲಕ ಆಶೀರ್ವದಿಸಿದ್ದಾನೆ.

    ಜೆಡಿಎಸ್ ಗೆಲುವಿನ ಅಭ್ಯರ್ಥಿಗಳು

    1.ಚನ್ನಪಟ್ಟಣ- H.D.ಕುಮಾರಸ್ವಾಮಿ

    2.ಹೊಳೆನರಸೀಪುರ- H.Dರೇವಣ್ಣ

    3.ಹಾಸನ ಸಿಟಿ- ಸ್ವರೂಪ್

    4.ಚಾಮುಂಡೇಶ್ವರಿ- ಜಿಟಿ ದೇವೇಗೌಡ

    5.ಹುಣಸೂರು – ಹರೀಶ್ ಗೌಡ

    6.ಶ್ರವಣಬೆಳಗೊಳ- ಬಾಲಕೃಷ್ಣ

    7.ಗುರುಮಿಠ್ಕಲ್ – ಶರಣಗೌಡ ಕಂದಕೂರ್

    8.ದೇವದುರ್ಗ- ಕರೆಮ್ಮ ನಾಯಕ್

    9.ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು

    10.ತುರುವೇಕೆರೆ- MT ಕೃಷ್ಣಪ್ಪ

    11.ಮುಳಬಾಗಿಲು- ಸಂವೃದ್ದಿ ಮಂಜುನಾಥ್

    12.ಕೆ.ಆರ್.ಪೇಟೆ- HT ಮಂಜುನಾಥ್

    13.ಅರಕಲಗೂಡು- ಎ.ಮಂಜು

    14.ಶಿಡ್ಲಘಟ್ಟ- ರವಿಕುಮಾರ್

    15.ಶಿವಮೊಗ್ಗ ಗ್ರಾ. – ಶಾರದಾ ಪೂರ್ಯ ನಾಯಕ್

    16.ಹಗರಿ ಬೊಮ್ಮನಹಳ್ಳಿ – ನೇಮರಾಜನಾಯ್ಕ್

    17.ದೇವರ ಹಿಪ್ಪರಗಿ – ರಾಜುಗೌಡ ಪಾಟೀಲ್

    18. ಹನೂರು- MR ಮಂಜುನಾಥ್

    19. ಶ್ರೀನಿವಾಸಪುರ- ವೆಂಕಟಶಿವರೆಡ್ಡಿ