Tag: Assembly ElectionResult 2022

  • ಜಾತಿ ಓಲೈಕೆ ಮಾಡುವ ಕಾಂಗ್ರೆಸ್‍ಗೆ ಜನರು ಪಾಠ ಕಲಿಸಿದ್ದಾರೆ: ಕೆ. ಸುಧಾಕರ್

    ಜಾತಿ ಓಲೈಕೆ ಮಾಡುವ ಕಾಂಗ್ರೆಸ್‍ಗೆ ಜನರು ಪಾಠ ಕಲಿಸಿದ್ದಾರೆ: ಕೆ. ಸುಧಾಕರ್

    ಬೆಂಗಳೂರು: ಜಾತಿ ಓಲೈಕೆ ಮಾಡುವ ಕಾಂಗ್ರೆಸ್‍ಗೆ ಜನರು ಪಾಠ ಕಲಿಸಿದ್ದಾರೆ. ನಾಲ್ಕು ರಾಜ್ಯಗಳ ಉಳಿಸಿಕೊಂಡಿದ್ದೇವೆ. ಅಮೃತ ಕಾಲ ಶುರುವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಪಂಚ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿದೆ. ಮಣಿಪುರ, ಉತ್ತರಪ್ರದೇಶ ಮತ್ತು ಉತ್ತರಖಂಡ ಪ್ರದೇಶದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಈ ಹಿನ್ನೆಲೆ ಬಿಜೆಪಿ ನಾಯಕರು ಕಾಂಗ್ರೆಸ್‍ಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ನಿಲ್ಲಿಸಿ ತೀರ್ಥಯಾತ್ರೆ ಮಾಡಿ – ಕಾಂಗ್ರೆಸ್‍ಗೆ ಆರ್.ಅಶೋಕ್ ಸಲಹೆ

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ಕು ರಾಜ್ಯಗಳ ಉಳಿಸಿಕೊಂಡಿದ್ದೇವೆ. ಅಮೃತ ಕಾಲ ಶುರುವಾಗಿದ್ದು, ಅಮೃತ ಕಾಲ ಪುನರಾವರ್ತನೆ ಆಗಿದೆ. ನಾಲ್ಕು ರಾಜ್ಯಗಳ ಜನತೆ ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ತೀರ್ಮಾನಿಸಿದ್ದಾರೆ. ಪಂಜಾಬ್‍ನಲ್ಲಿ ನಿರೀಕ್ಷೆ ಮಾಡಿರಲಿಲ್ಲ. ಜಾತಿ ಒಲೈಕೆ ಮಾಡುವ ಕಾಂಗ್ರೆಸ್‍ಗೆ ಜನರು ಪಾಠ ಕಲಿಸಿದ್ದಾರೆ. ನಮ್ಮ ರಾಜ್ಯಕ್ಕೂ ಒಳ್ಳೆಯ ಸುದ್ದಿ ಇದಾಗುದೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಗೋವಾ ಚುನಾವಣಾ ಫಲಿತಾಂಶ: ಬಿಜೆಪಿ, ಕಾಂಗ್ರೆಸ್‌ ಮಧ್ಯೆ ಹಾವು ಏಣಿ ಆಟ

    2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಸಿಎಂ ಬದಲಾವಣೆ ಅನ್ನೋದೆಲ್ಲಾ ಆಗಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುವ ಮೂಲಕವಾಗಿ ಕರ್ನಾಟಕದಲ್ಲೂ ಮತ್ತೆ ಸರ್ಕಾರ ರಚನೆ ಮಾಡುತ್ತೇವೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆಯಲ್ಲಿ ನಾವು ಫೋರ್ ಹೊಡೆಯುತ್ತೇವೆ: ಅಶ್ವಥ್ ನಾರಾಯಣ