Tag: Assembly Election Result 2022

  • ಕಾಂಗ್ರೆಸ್ ಪಕ್ಷದ ಬಿಕಿನಿ ಗರ್ಲ್‍ಗೆ ಸೋಲು

    ಕಾಂಗ್ರೆಸ್ ಪಕ್ಷದ ಬಿಕಿನಿ ಗರ್ಲ್‍ಗೆ ಸೋಲು

    ಲಕ್ನೋ: ನಟಿ, ಮಾಡೆಲ್ ಅರ್ಚನಾ ಗೌತಮ್ (Archana Gautam) ಸೋಲನ್ನು ಅನುಭವಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೀರತ್‍ನ ಹಸ್ತಿನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

    ಮಾಡೆಲ್ ಕಮ್ ರಾಜಕಾರಣಿ ಅರ್ಚನಾ ಗೌತಮ್ 1133 ಮತಗಳನ್ನು ಪಡೆದುಕೊಂಡು ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಭಾರತೀಯ ಜನತಾ ಪಕ್ಷದ ದಿನೇಶ್ ಖಟಿಕ್ 81959 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.

     

    ಚುನಾವಣಾ ಅಭ್ಯರ್ಥಿ ಎಂದು ಸುದ್ದಿಯಾದಾಗಿನಿಂದಲೂ ಮಿಸ್ ಬಿಕಿನಿ ಇಂಡಿಯಾ ವಿಜೇತೆಯಾಗಿದ್ದ ಅರ್ಚನಾ ಗೌತಮ್ ಅವರ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಮಾತನಾಡಿದ ಅರ್ಚನಾ ಗೌತಮ್, ನಾನು ಮಿಸ್ ಬಿಕಿನಿ ಸ್ಪರ್ಧೆಯಲ್ಲಿ 2018ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ನಾನು 2014ರಲ್ಲಿ ಮಿಸ್ ಉತ್ತರ ಪ್ರದೇಶ ಮತ್ತು 2018ರಲ್ಲಿ ಮಿಸ್ ಕಾಸ್ಮೊ ವಲ್ರ್ಡ್ ಆಗಿದ್ದೆ. ನನ್ನ ರಾಜಕೀಯ ವೃತ್ತಿಜೀವನದೊಂದಿಗೆ ನನ್ನ ವೃತ್ತಿಯನ್ನು ಒಂದೇ ಎಂದು ನೋಡಬೇಡಿ ಎಂದು ನಾನು ಜನರನ್ನು ವಿನಂತಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್‍ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ

     

    View this post on Instagram

     

    A post shared by Archana Gautam (@archanagautamm)

    ಉತ್ತರ ಪ್ರದೇಶ ಚುನಾವಣೆಯ 125 ಅಭ್ಯರ್ಥಿಗಳಲ್ಲಿ ಅರ್ಚನಾ ಅವರ ಹೆಸರನ್ನು ಘೋಷಿಸಿದ ಕೂಡಲೇ, ಬಿಕಿನಿ ಧರಿಸಿರುವ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು. ಈ ಹಿನ್ನೆಲೆಯಲ್ಲಿ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅರ್ಚನಾ, ಜನರು ನನ್ನ ರಾಜಕೀಯ ವೃತ್ತಿಜೀವನದೊಂದಿಗೆ ಮಾಡೆಲಿಂಗ್ ವೃತ್ತಿಯನ್ನು ಬೆರೆಸಬಾರದು ಎಂದು ಜನರಲ್ಲಿ ಮನವಿ ಮಾಡಿದ್ದರು. ಇದನ್ನೂ ಓದಿ: ಹುಟ್ಟೂರಿನಿಂದ ಸ್ಪರ್ಧೆ ಮಾಡಿದ್ದ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಸೋಲು

    2018ರಲ್ಲಿ ಮಿಸ್ ಉತ್ತರ ಪ್ರದೇಶ ಪ್ರಶಸ್ತಿ ವಿಜೇತೆಯಾಗಿರುವ ಅರ್ಚನಾ 2015ರಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಅರ್ಚನಾ ಗೌತಮ್ ಮಿಸ್ ಬಿಕಿನಿ ಇಂಡಿಯಾ 2018 ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಮಿಸ್ ಕಾಸ್ಮೋಸ್ ವಲ್ರ್ಡ್ 2018ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮೋಸ್ಟ್ ಟ್ಯಾಲೆಂಟ್ 2018 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ.