Tag: assembly election 2022

  • ಸಿದ್ದುಗೆ ಡಬಲ್ ಟೆನ್ಷನ್ – ಪರಮಾಪ್ತ ಮಹದೇವಪ್ಪಗೆ ಸಿಗುತ್ತಾ ಟಿಕೆಟ್?

    ಸಿದ್ದುಗೆ ಡಬಲ್ ಟೆನ್ಷನ್ – ಪರಮಾಪ್ತ ಮಹದೇವಪ್ಪಗೆ ಸಿಗುತ್ತಾ ಟಿಕೆಟ್?

    ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಒಂದು ಕಡೆ ತಾವು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬ ಗೊಂದಲದ ಟೆನ್ಷನ್. ಮತ್ತೊಂದು ಕಡೆ ತಮ್ಮ ಪರಮಾಪ್ತನ ಕುಟುಂಬಕ್ಕೆ ಎರಡು ಟಿಕೆಟ್ ಕೊಡಿಸಲೇ ಬೇಕಾದ ಟೆನ್ಷನ್. ಈ ಎರಡು ಟೆನ್ಷನ್‌ಗಳ ನಡುವೆ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ (HC Mahadevappa) ಪರಮಾಪ್ತ ಸ್ನೇಹಿತರು. ಎರಡು ದೇಹ ಒಂದೇ ಮನಸ್ಸು ಎಂಬ ರೀತಿ ಇರುವ ಜೋಡಿ ಇದು. ಈಗ ಡಾ.ಎಚ್.ಸಿ. ಮಹಾದೇವಪ್ಪ ಮತ್ತು ಅವರ ಮಗ ಸುನೀಲ್ ಬೋಸ್ ಇಬ್ಬರು ವಿಧಾನಸಭಾ ಚುನಾವಣೆಯ (Assembly election 2022) ಅಖಾಡಕ್ಕೆ ಇಳಿಯುವ ತಯಾರಿಯಲ್ಲಿದ್ದಾರೆ. ಡಾ.ಮಹದೇವಪ್ಪ ತಾವು ಸ್ಪರ್ಧಿಸುತ್ತಿದ್ದ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮಗನನ್ನು ಕಣಕ್ಕೆ ಇಳಿಸೋದು ತಾವು ಇದೇ ಕ್ಷೇತ್ರದ ಪಕ್ಕದ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಆಯಾ ಕ್ಷೇತ್ರಗಳಲ್ಲಿ ತಂದೆ – ಮಗ ಸಭೆಗಳನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ – ಮೂವರು ಸಾವು, ಇಬ್ಬರಿಗೆ ಗಾಯ

    ಈ ನಡುವೆ ಲೋಕಸಭಾ ಚುನಾವಣೆಯಲ್ಲಿ (MP Election) ಸೋತ ಬಳಿಕ ಕೆಪಿಸಿಸಿ (KPCC)  ಕಾರ್ಯಾಧ್ಯಕ್ಷ ಧ್ರುವ ನಾರಾಯಣ (R Dhruvanarayana) ರಾಜ್ಯ ರಾಜಕೀಯಕ್ಕೆ ಮರು ಪ್ರವೇಶಿಸಲು ನಿರ್ಧರಿಸಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಓಡಾಟ ಶುರು ಮಾಡಿಕೊಂಡಿದ್ದಾರೆ. ಧ್ರುವ ನಾರಾಯಣ ಅವರು ಓಡಾಟ ಶುರು ಮಾಡಿಕೊಂಡ ಮೇಲೆಯೇ ಸಿದ್ದರಾಮಯ್ಯಗೆ ಸ್ನೇಹಿತನ ಟಿಕೆಟ್ ವಿಚಾರದಲ್ಲಿ ಟೆನ್ಷನ್ ಹೆಚ್ಚಾಗಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

    ಧೃವನಾರಾಯಣ್ ಹೇಳಿ ಕೇಳಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಕಾರಣ ಅವರನ್ನು ಟಿಕೆಟ್ ರೇಸ್‌ನಿಂದ ಹಿಂದೆ ಸರಿಸೋದು ಸುಲಭವಲ್ಲ. ನಂಜನಗೂಡು ಟಿಕೆಟ್ ವಿಚಾರದಲ್ಲಿ ಸಿದ್ದರಾಮಯ್ಯಗೆ ತಲೆ ಬೀಸಿ ಶುರು ಮಾಡಿಸಿದೆ. ಸಿದ್ದರಾಮಯ್ಯ ಅವರೇ ಇನ್ನೂ ತಾವು ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕು ಎಂದು ನಿರ್ಧರಿಸಲಾಗದೇ ಗೊಂದಲದಲ್ಲಿ ಮುಳುಗಿರುವಾಗ ಇದರ ಜೊತೆಗೆ ಪರಮಾಪ್ತ ಸ್ನೇಹಿತನ ರಾಜಕೀಯ (Politics) ಭವಿಷ್ಯವೂ ಅವರನ್ನು ಚಿಂತೆಗೆ ಈಡು ಮಾಡಿದೆ. ಪರಮಾಪ್ತ ಸ್ನೇಹಿತನಿಗೂ ಟಿಕೆಟ್ ಕೊಡಿಸದೇ ಹೋದರೆ ಹೇಗೆ? ಎಂಬುದು ಸಿದ್ದರಾಮಯ್ಯರನ್ನ ಕಾಡುತ್ತಿರುವ ಪ್ರಶ್ನೆಯಾಗಿದೆ.

    ಮೈಸೂರು (Mysuru) ಜಿಲ್ಲೆಯ 11 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪಾಲಿಗೆ ಟಿಕೆಟ್ ಹಂಚುವ ವಿಚಾರದಲ್ಲಿ ಹೆಚ್ಚು ಒತ್ತಡ ಇರೋದು ನಂಜನಗೂಡು ಕ್ಷೇತ್ರದ್ದು ಮಾತ್ರ. ಉಳಿದ ಕ್ಷೇತ್ರಗಳ ಟಿಕೆಟ್ ಹಂಚಿಕೆ ಸಿದ್ದರಾಮಯ್ಯರಂತಹ ರಾಜಕಾರಣಿಗೆ ನೀರು ಕುಡಿದಷ್ಟೆ ಸುಲಭ. ಆದರೆ ನಂಜನಗೂಡು ಕ್ಷೇತ್ರದ ಟಿಕೆಟ್ ವಿಚಾರ ಮಾತ್ರ ಸಲೀಸಾಗಿ ಇಲ್ಲ.

    ಡಾ.ಎಚ್.ಸಿ. ಮಹದೇವಪ್ಪ ತಮಗೆ ನಂಜನಗೂಡು ಟಿಕೆಟ್ ನಿಶ್ಚಿತ ಎಂಬಂತೆ ಬಹಳ ಆತ್ಮವಿಶ್ವಾಸದಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಿ ಚುನಾವಣಾ ತಯಾರಿಯಲ್ಲಿ ಮುಳುಗಿದ್ದಾರೆ. ಧೃವನಾರಾಯಣ ಕೂಡ ಪಕ್ಷದ ದೊಡ್ಡ ಜವಾಬ್ದಾರಿ ಹೊತ್ತಿರೋ ಕಾರಣ ತಮಗೇ ಟಿಕೆಟ್ ಸಿಗಬಹುದು ಎಂದು ನಂಜನಗೂಡಿನ ಸಂಘಟನೆ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಹೀಗಾಗಿ ನಂಜನಗೂಡು ಕಾಂಗ್ರೆಸ್ ಕಾರ್ಯಕರ್ತರಿಗೆ ತಾವು ಯಾರ ಬೆನ್ನಿಗೆ ನಿಲ್ಲಬೇಕು ಎಂಬ ಗೊಂದಲವೂ ಕಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • BJPಯ ಬಡವರ ಪರ, ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಅನ್ನೋದು ಫಲಿತಾಂಶದಿಂದ ಸಾಬೀತು: ಮೋದಿ

    BJPಯ ಬಡವರ ಪರ, ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಅನ್ನೋದು ಫಲಿತಾಂಶದಿಂದ ಸಾಬೀತು: ಮೋದಿ

    ನವದೆಹಲಿ: ಬಿಜೆಪಿಯ ಬಡವರ ಪರ ಮತ್ತು ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಎಂಬುದನ್ನು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

    ನಗರದ ಬಿಜೆಪಿ ಹೆಡ್‌ ಕ್ವಾಟ್ರಸ್‌ನಲ್ಲಿ ಮಾತನಾಡಿದ ಅವರು, ಮಾ.10ರಿಂದ ಹೋಳಿ ಆರಂಭವಾಗಲಿದೆ ಎಂದು ನಾವು ಮೊದಲೇ ಹೇಳಿದ್ದೆವು. ಇದು ನಮ್ಮ ಎನ್‌ಡಿಎ ಕಾರ್ಯಕರ್ತರ ʼವಿಜಯ 4′. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ, ಬಿಜೆಪಿಗೆ ವಿಜಯವನ್ನು ಖಚಿತಪಡಿಸಿದ್ದಕ್ಕಾಗಿ ನಾನು ಎಲ್ಲಾ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೇ ಮೊದಲ ಬಾರಿಗೆ ಎರಡನೇ ಅವಧಿಗೆ ಸಿಎಂ ಆಯ್ಕೆಯಾಗಿದ್ದಾರೆ (ಯೋಗಿ ಆದಿತ್ಯನಾಥ್‌) ಎಂದು ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ

    ಈ ಚುನಾವಣೆಗಳಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ನಮಗೆ ಆಶೀರ್ವಾದ ಮಾಡಿದ್ದಾರೆ. ಮಹಿಳಾ ಮತದಾರರು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ನಾವು ಅದ್ಭುತವಾಗಿ ಗೆದ್ದಿದ್ದೇವೆ. ಈ ವಿಜಯದಲ್ಲಿ ನಮ್ಮ ನಾರಿ ಶಕ್ತಿ ನಮ್ಮ ಪಾಲುದಾರರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.

    ಗೋವಾದಲ್ಲಿ ಎಲ್ಲಾ ಎಕ್ಸಿಟ್‌ ಪೋಲ್‌ಗಳು ತಪ್ಪು ಎಂಬುದು ಸಾಬೀತಾಗಿದೆ. ಉತ್ತರಾಖಂಡದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪಕ್ಷವೊಂದು ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ ಎಂದು ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಪ್ರಧಾಣಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ

    ನಾವು 2019ರಲ್ಲಿ (ಕೇಂದ್ರ) ಸರ್ಕಾರವನ್ನು ರಚಿಸಿದಾಗ, 2017ರ (ಯುಪಿ ಗೆಲುವು) ಗೆಲುವಿನಿಂದಾಗಿ ಎಂದು ತಜ್ಞರು ಹೇಳಿದ್ದರು. 2022ರ ಯುಪಿ ಚುನಾವಣಾ ಫಲಿತಾಂಶವೂ 2024ರ ಸಾರ್ವತ್ರಿಕ ಚುನಾವಣೆ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅದೇ ತಜ್ಞರು ಹೇಳುತ್ತಾರೆಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.

    ಇಂದು ನಾನು ನನ್ನ ಕೆಲವು ಕಾಳಜಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸಾಮಾನ್ಯ ಜನರು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವರು ರಾಜಕೀಯದ ಗುಣಮಟ್ಟವನ್ನು ಕುಂಠಿತಗೊಳಿಸುತ್ತಿದ್ದಾರೆ. ನಮ್ಮ ಲಸಿಕಾ ಕಾರ್ಯಕ್ರಮವನ್ನು ಜಗತ್ತು ಹೊಗಳಿತು. ಆದರೆ ಕೆಲವರು ನಮ್ಮ ಲಸಿಕೆಗಳನ್ನೇ ಪ್ರಶ್ನಿಸಿದರು ಎಂದು ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್

    ಪಂಜಾಬ್‌ನಲ್ಲಿ ಬಿಜೆಪಿ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ನಾನು ಈಗಾಗಲೇ ನೋಡುತ್ತಿದ್ದೇನೆ. ನಮ್ಮ ಪಂಜಾಬ್‌ ಕಾರ್ಯಕರ್ತರು ಕಷ್ಟದ ಸಂದರ್ಭಗಳ ನಡುವೆಯೂ ಪಂಜಾಬ್‌ನಲ್ಲಿ ತಮ್ಮ ಕೆಲಸದಿಂದ ಪಕ್ಷ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ಸಾವಿರಾರು ಭಾರತೀಯ ವಿದ್ಯಾರ್ಥಿಗಳು, ಭಾರತೀಯ ಪ್ರಜೆಗಳು ಉಕ್ರೇನ್‌ನಲ್ಲಿ ಸಿಲುಕಿರುವಾಗಲೂ ದೇಶದ ನೈತಿಕ ಸ್ಥೈರ್ಯವನ್ನು ಮುರಿಯುವ ಮಾತುಗಳು ನಡೆದಿರುವುದು ದುರದೃಷ್ಟಕರ. ಈ ಜನರು ಸಹ ʼಆಪರೇಷನ್‌ ಗಂಗಾʼ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು. ಇದು ಭಾರತದ ಭವಿಷ್ಯಕ್ಕೆ ದೊಡ್ಡ ಆತಂಕವಾಗಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ

    ಯುದ್ಧದಲ್ಲಿ ಹೋರಾಡುತ್ತಿರುವ ರಾಷ್ಟ್ರಗಳೊಂದಿಗೆ (ರಷ್ಯಾ-ಉಕ್ರೇನ್)‌ ಭಾರತವು ಆರ್ಥಿಕ, ರಕ್ಷಣೆ, ಭದ್ರತೆ, ರಾಜಕೀಯ ಸಂಬಂಧಗಳನ್ನು ಹೊಂದಿದೆ. ನಾವು ಸೂರ್ಯಕಾಂತಿ ಎಣ್ಣೆಯಂತಹದ್ದನ್ನೇ ಆಮದು ಮಾಡಿಕೊಳ್ಳುತ್ತೇವೆ. ಕಲ್ಲಿದ್ದಲು, ಅನಿಲ, ಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆಗಳು ಪ್ರಪಂಚದಾದ್ಯಂತ ವೇಗವಾಗಿ ಏರುತ್ತಿವೆ ಎಂದು ತಿಳಿಸಿದ್ದಾರೆ.

    ಇದೇ ಮೊದಲ ಬಾರಿಗೆ ಮತದಾರರು ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವನ್ನು ಖಚಿತಪಡಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

  • EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ

    EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ

    ಲಕ್ನೋ: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಚುನಾವಣೆ ಕುರಿತು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀದ್‌ ಓವೈಸಿ ಪ್ರತಿಕ್ರಿಯಿಸಿದ್ದಾರೆ.

    ಎಲ್ಲಾ ರಾಜಕೀಯ ಪಕ್ಷಗಳು ಇವಿಎಂ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ತಮ್ಮ ಸೋಲನ್ನು ಮರೆಮಾಚಲು ಪ್ರಯತ್ನಿಸುತ್ತಿವೆ. ಆದರೆ ಇದು ಇವಿಎಂ ಸಮಸ್ಯೆಯಲ್ಲ, ಜನರ ತಲೆಯಲ್ಲಿರುವ ಚಿಪ್ಪಿನ ಸಮಸ್ಯೆ. ಬಿಜೆಪಿ ಯಶಸ್ವಿಯಾಗಿರುವುದು 80-20. ನಾವು ನಾಳೆಯಿಂದಲೇ ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ಮುಂದಿನ ಬಾರಿ ಉತ್ತಮ ಸಾಧನೆ ಮಾಡುತ್ತೇವೆ ಎಂಬ ನಂಬಿಕೆ ಇದೆ ಎಂದು ಓವೈಸಿ ತಿಳಿಸಿದ್ದಾರೆ. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ

    ಉತ್ತರ ಪ್ರದೇಶದ ಅಲ್ಪಸಂಖ್ಯಾತರನ್ನು ಕೇವಲ ವೋಟ್‌ ಬ್ಯಾಂಕ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಲಖಿಂಪುರ್‌ ಖೇರಿಯಲ್ಲೂ ಬಿಜೆಪಿ ಗೆದ್ದಿದೆ. ಅದಕ್ಕಾಗಿಯೇ 80-20 ಗೆಲುವು ಎಂದು ಹೇಳುತ್ತಿದ್ದೇನೆ. ಈ 80-20 ಪರಿಸ್ಥಿತಿಯು ವರ್ಷಗಳವರೆಗೆ ಇರುತ್ತದೆ. ಅದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಉತ್ಸಾಹ ಇನ್ನೂ ಹೆಚ್ಚಿದೆ ಎಂದು ಹೇಳಿದ್ದಾರೆ.

    ಬಿಜೆಪಿಗೆ ಅಧಿಕಾರ ನೀಡಲು ಯುಪಿ ಜನತೆ ನಿರ್ಧರಿಸಿದ್ದಾರೆ. ಜನತೆಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಎಐಎಂಐಎಂನ ರಾಜ್ಯಾಧ್ಯಕ್ಷರು, ಕಾರ್ಯಕರ್ತರು, ಸದಸ್ಯರು ಮತ್ತು ನಮಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಪ್ರಯತ್ನಗಳು ಸಾಕಷ್ಟಿತ್ತು. ಆದರೆ ಫಲಿತಾಂಶಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬರಲಿಲ್ಲ. ನಾವು ಮತ್ತೆ ಕಷ್ಟಪಟ್ಟು ಕೆಲಸ ಮಾಡುತ್ತೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್

    ಕಾಂಗ್ರೆಸ್‌ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ ಬಗ್ಗೆ ಮಾತನಾಡುವ ಮೂಲಕ ನಾನು ಯಾಕೆ ಅವರನ್ನು ಗೌರವಿಸಬೇಕು ಎಂದು ಪ್ರಶ್ನಿಸಿದ್ದಾರೆ.

    ಬಹುಜನ ಸಮಾಜ ಪಕ್ಷವನ್ನು ವಿಸರ್ಜಿಸಿದರೆ ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಲಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಬಿಎಸ್‌ಪಿ ದೊಡ್ಡ ಪಾತ್ರ ವಹಿಸಿದೆ. ಪಕ್ಷ ಗಟ್ಟಿಯಾಗಲಿ ಎಂದು ಹಾರೈಸುತ್ತೇವೆ. ಇಂದಿನ ಫಲಿತಾಂಶವು ಖಂಡಿತವಾಗಿಯೂ ದೌರ್ಬಲ್ಯವನ್ನು ತೋರಿಸುತ್ತದೆ. ಆದರೆ ಬಿಎಸ್‌ಪಿ ಅಗತ್ಯವಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ