Tag: Assembly bypolls

  • ನಾಲ್ಕು ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಿಗೆ ಜೂ.19ಕ್ಕೆ ಉಪಚುನಾವಣೆ

    ನಾಲ್ಕು ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಿಗೆ ಜೂ.19ಕ್ಕೆ ಉಪಚುನಾವಣೆ

    ನವದೆಹಲಿ: ಗುಜರಾತ್ (Gujarat), ಕೇರಳ (Kerala), ಪಶ್ಚಿಮ ಬಂಗಾಳ (West Bengal) ಮತ್ತು ಪಂಜಾಬ್‌ (Punjab) ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೂನ್ 19 ರಂದು ಉಪಚುನಾವಣೆ (Assembly Bypolls) ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಗುಜರಾತ್‌ನ ಎರಡು ವಿಧಾನಸಭಾ ಕ್ಷೇತ್ರಗಳಿಗೆ, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಜೂನ್ 23 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಗುಜರಾತ್‌ನಲ್ಲಿ ಹಾಲಿ ಶಾಸಕ ಕರ್ಸನ್‌ಭಾಯ್ ಪಂಜಾಬಿ ಸೋಲಂಕಿ ನಿಧನದ ಬಳಿಕ ಕಾಡಿ ಕ್ಷೇತ್ರದ ಸ್ಥಾನ ತೆರವಾಗಿತ್ತು. ಅಲ್ಲದೇ ವಿಶಾವದರ್ ಕ್ಷೇತ್ರದಲ್ಲಿ ಭಯಾನಿ ಭೂಪೇಂದ್ರಭಾಯ್ ಗಂಡುಭಾಯ್ ಅವರ ರಾಜೀನಾಮೆಯಿಂದಾಗಿ ಆ ಕ್ಷೇತ್ರದ ಸ್ಥಾನ ತೆರವಾಗಿತ್ತು.

    ಕೇರಳದ ನಿಲಂಬೂರ್ ಕ್ಷೇತ್ರದಲ್ಲಿ ಪಿ.ವಿ ಅನ್ವರ್ ರಾಜೀನಾಮೆಯಿಂದ ಉಪಚುನಾವಣೆ ನಡೆಯಲಿದೆ. ಪಂಜಾಬ್‌ನ ಲುಧಿಯಾನ ಕ್ಷೇತ್ರದಲ್ಲಿ ಗುರುಪ್ರೀತ್ ಬಸ್ಸಿ ಗೋಗಿ ಅವರ ನಿಧನದಿಂದಾಗಿ ಸ್ಥಾನ ತೆರವಾಗಿತ್ತು.

    ಪಶ್ಚಿಮ ಬಂಗಾಳದ ಕಾಳಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ನಾಸಿರುದ್ದೀನ್ ಅಹಮದ್ ಅವರ ನಿಧನದಿಂದ ಉಪಚುನಾವಣೆ ಅನಿವಾರ್ಯವಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಜೂ.19ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ

    Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ

    – ಜಲಂಧರ್ ಪಶ್ಚಿಮ ಕ್ಷೇತ್ರ ಗೆದ್ದು ಬೀಗಿದ ಎಎಪಿ

    ನವದೆಹಲಿ: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ (Assembly Pypolls) ಮತ ಎಣಿಕೆ ಇಂದು ಪ್ರಕಟವಾಗಲಿದ್ದು, ಈಗಾಗಲೇ ಇಂಡಿಯಾ ಒಕ್ಕೂಟ (INDIA Bloc) 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಏಳು ರಾಜ್ಯಗಳ 13 ಅಸೆಂಬ್ಲಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. 13ರ ಪೈಕಿ ಕಾಂಗ್ರೆಸ್ 5, ಟಿಎಂಸಿ 4 ಹಾಗೂ ಬಿಜೆಪಿ, ಡಿಎಂಕೆ, ಎಎಪಿ ಮತ್ತು ಜೆಡಿಯು ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದನ್ನೂ ಓದಿ: ಕಾನೂನು ವಿದ್ಯಾರ್ಥಿಗಳ ಪಠ್ಯದಲ್ಲಿ ಮನಸ್ಮೃತಿ ಇಲ್ಲ: ಕೇಂದ್ರ ಶಿಕ್ಷಣ ಸಚಿವ ಸ್ಪಷ್ಟನೆ

    ಹಿಮಾಚಲ ಪ್ರದೇಶದ ಡೆಹ್ರಾ ಮತ್ತು ನಲಗಢ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್ ಹಾಗೂ ಮಧ್ಯಪ್ರದೇಶದ ಅವರ್ವಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇತ್ತ ಪಶ್ಚಿಮ ಬಂಗಾಳದ ರಾಯಗಂಜ್, ರಾಣಾಘಾಟ್ ದಕ್ಷಿಣ, ಬಾಗ್ಡಾ ಮತ್ತು ಮಾಣಿಕ್ತಾಲಾ ಸ್ಥಾನಗಳಲ್ಲಿ ಟಿಎಂಸಿ ಮುಂದಿದೆ.

    ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಎಎಪಿ ಗೆಲುವು ದಾಖಲಿಸಿದೆ. ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಜೆಡಿಯು, ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಲ್ಲಿ ಬಿಜೆಪಿ, ತಮಿಳುನಾಡಿನ ವಿಕ್ರವಾಂಡಿ ಕ್ಷೇತ್ರದಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್

  • ಕುಂದಗೋಳದಲ್ಲಿ ‘ಕೈ’ಗೆ ಬಂಡಾಯದ ಬಿಸಿ

    ಕುಂದಗೋಳದಲ್ಲಿ ‘ಕೈ’ಗೆ ಬಂಡಾಯದ ಬಿಸಿ

    – ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ವಿರೋಧ
    – ನಡು ರಸ್ತೆಯಲ್ಲಿಯೇ ಸಚಿವರ ಕಾರು ನಿಲ್ಲಿಸಿ ಆಕ್ರೋಶ

    ಹುಬ್ಬಳ್ಳಿ: ಸಿ.ಎಸ್.ಶಿವಳ್ಳಿ ಅವರ ಪತ್ನಿಗೆ ಕುಂದಗೋಳ ಉಪಚುನಾವಣೆಯ ಟಿಕೆಟ್ ನೀಡಿದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಎದುರಲ್ಲೆ ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಕುಂದಗೋಳದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಂಡಾಯ ಎದ್ದಿದ್ದರು. ಹೀಗಾಗಿ ಬಂಡಾಯ ಶಮನ ಮಾಡಲು ಸಚಿವ ಸತೀಶ್ ಜಾರಕಿಹೊಳಿ ಅವರು ಕುಂದಗೋಳಕ್ಕೆ ಭೇಟಿ ನೀಡಿ, ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಸಿದರು. ಈ ವೇಳೆ ಸಚಿವರ ಎದುರೇ ಟಿಕೆಟ್ ಆಕಾಂಕ್ಷಿ ಶಿವಾನಂದ್ ಬೆಂತೂರು ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

    ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಾನಂದ್ ಬೆಂತೂರ್ ಅವರು, ಕಾಂಗ್ರೆಸ್ ಹೈಕಮಾಂಡ್ ಏಕಪಕ್ಷಿಯ ನಿರ್ಧಾರ ತೆಗದುಕೊಂಡಿದೆ. ಈ ಆಯ್ಕೆಯು ನಮಗೆ ನೋವು ತಂದಿದೆ. ಕುಂದಗೋಳದಲ್ಲಿ ಕಾಂಗ್ರೆಸ್ ಶಿವಳ್ಳಿ ಅವರದ್ದೇ ಎಂಬಂತಾಗಿದೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಇಲ್ಲವೇ ನಾಲ್ಕೈದು ಜನ ಆಕಾಂಕ್ಷಿಗಳ ಜೊತೆ ಚರ್ಚಿಸಿ ಒಬ್ಬರು ಬಂಡಾಯ ಅಭ್ಯರ್ಥಿಯಾಗುತ್ತೇವೆ ಎಂದು ಹೇಳಿದರು.

    ಅತೃಪ್ತರ ಸಭೆಯ ಬಳಿಕ ಮಾತನಾಡಿ ಸಚಿವರು, ಬಹಳ ಜನ ಆಕಾಂಕ್ಷಿಗಳಿದ್ದಾಗ ಈ ರೀತಿ ಆಗುವುದು ಸಹಜ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದ ವರಿಷ್ಠರು ನಾಳೆ ನಾಮಪತ್ರ ಸಲ್ಲಿಸಲು ಬರುತ್ತಾರೆ. ಅವರ ಗಮನಕ್ಕೆ ತರುತ್ತೇನೆ. ಪಕ್ಷದಲ್ಲಿ ಬಂಡಾಯವಿಲ್ಲ. ಈ ರೀತಿ ಅಸಮಾಧಾನ ಸಹಜ ಎಂದು ಹೇಳಿದರು.

    ಕುಂದಗೋಳದಿಂದ ಹುಬ್ಬಳ್ಳಿಗೆ ಸಚಿವ ಸತೀಶ್ ಜಾರಕಿಹೊಳಿ ಮರಳುತ್ತಿದ್ದಾಗ, ನಡು ರಸ್ತೆ ಅವರ ಕಾರು ನಿಲ್ಲಿಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಮನವೊಲಿಕೆಗೆ ಮುಂದಾದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಶಿವಾನಂದ ಬೆಂತೂರು, ಬೆಂಬಲಿಗರೂ ಕ್ಯಾರೆ ಎನ್ನಲಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳದೇ ಟಿಕೆಟ್ ನೀಡಿದ್ದು ಖಂಡನೀಯ ಎಂದು ಗುಡುಗಿದರು.