Tag: assaulting

  • ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆಗೈದ ಮಹಿಳೆ ಅರೆಸ್ಟ್

    ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆಗೈದ ಮಹಿಳೆ ಅರೆಸ್ಟ್

    ಅಮರಾವತಿ: ರಾಜ್ಯ ಸಾರಿಗೆ ನಿಗಮದ ಬಸ್ ಚಾಲಕನಿಗೆ ಥಳಿಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ನಂದಿನಿ ಬಂಧಿತ ಆರೋಪಿ. ಫೆಬ್ರವರಿ ೯ರಂದು ವಿಜಯವಾಡದಲ್ಲಿ ಘಟನೆ ನಡೆದಿದ್ದು, ಮಹಿಳೆ ಸ್ಕೂಟರ್ ಚಲಾಯಿಸುತ್ತಿದ್ದಾಗ ಏಕಾಏಕಿ ಬಸ್ಸಿನೊಳಗೆ ನುಗ್ಗಿ ಚಾಲಕ ಮುಸಲಯ್ಯ ಅವರಿಗೆ ಥಳಿಸಲು ಪ್ರಾರಂಭಿಸಿದ್ದಾಳೆ. ಸ್ಥಳದಲ್ಲಿ ನೆರೆದಿದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಇಡೀ ಘಟನೆಯನ್ನು ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಗುಪ್ತಚರ ವಿಭಾಗ ನನ್ನ ಫೋನ್ ಕದ್ದಾಲಿಕೆ ಮಾಡಿದೆ: ಅಣ್ಣಾಮಲೈ ಆರೋಪ

    POLICE JEEP

    ಪೊಲೀಸರ ಪ್ರಕಾರ ನಂದಿನಿ ರಸ್ತೆಯ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸುತ್ತಿದ್ದಳು. ಚಾಲಕ ಬಸ್ಸು ಮುಂದೆ ಚಲಿಸಲು ಸ್ವಲ್ಪ ಸಮಯ ಕಾಯುವಂತೆ ಮಹಿಳೆ ಬಳಿ ಹೇಳಿದ್ದ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿ, ಮಹಿಳೆ ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಳೆ. ಇದನ್ನೂ ಓದಿ: ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

    ಬಸ್ ಚಾಲಕ ನೀಡಿದ ದೂರಿನ ಮೇರೆಗೆ ವಿಜಯವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಮಹಿಳೆಯನ್ನು ಬಂಧಿಸಲಾಗಿದೆ.

  • ವಿಮಾನದಲ್ಲಿ ಮಾಸ್ಕ್ ಇಲ್ಲದೇ ಊಟ ಮಾಡಿದ್ದಕ್ಕೆ ವೃದ್ಧನ ಮೇಲೆ ಮಹಿಳೆ ಹಲ್ಲೆ!

    ಟಿಬಿಲಿಸಿ: ಜಾರ್ಜಿಯಾದ ಅಟ್ಲಾಂಟಾ ಕಡೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು, ವೃದ್ಧನ ಜೊತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದು, ವಿಮಾನ ಲ್ಯಾಂಡ್ ಆದಾಗ ಆಕೆಯನ್ನು ಬಂಧಿಸಲಾಗಿದೆ.

    ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆ, ಮಾಸ್ಕ್ ಧರಿಸದೇ ಊಟ ಮಾಡುತ್ತಿದ್ದ ವೃದ್ಧರೊಬ್ಬರ ಜೊತೆ ವಾಗ್ವಾದ ನಡೆಸಿದ್ದಾಳೆ. ಅಲ್ಲದೆ ಹಲ್ಲೆ ಕೂಡ ಮಾಡಿದ್ದಾಳೆ. ಆದರೆ ಹಲ್ಲೆ ನಡೆಸಿದ ಮಹಿಳೆ ಕೂಡಾ ಸರಿಯಾಗಿ ಮಾಸ್ಕ್ ಧರಿಸಿಲ್ಲ ಎಂಬುದು ಹಾಸ್ಯಕರ ಸಂಗತಿ.

    ಊಟ ಮಾಡುತ್ತಿದ್ದ ವೃದ್ಧನಿಗೆ ಮಹಿಳೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಾಳೆ. ಆಗ ವೃದ್ಧ ತಾನು ಊಟ ಮಾಡುತ್ತಿರುವುದನ್ನು ಆಕೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಮಹಿಳೆ ಆತನ ಮೆಲೆ ಎಗರಾಡಿ ಹಲ್ಲೆ ಮಾಡಿದ್ದಾಳೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!

    ಇಬ್ಬರೂ ಅವಹೇಳನಕಾರಿ ಪದಗಳಿಂದ ವಾಗ್ವಾದ ನಡೆಸುತ್ತಿದ್ದಾಗ ವಿಮಾನದ ವ್ಯವಸ್ಥಾಪಕಿ ಹಾಗೂ ಫ್ಲೈಟ್‌ನ ಅಟೆಂಡರ್ ಅವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಅದನ್ನು ನಿರ್ಲಕ್ಷಿಸಿ ವೃದ್ಧನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ.

     

    View this post on Instagram

     

    A post shared by TRILLBILLY ????️ (@whiskeytattoo)

    ಫ್ಲೈಟ್‌ನ ಅಟೆಂಡರ್ ಮಹಿಳೆಯನ್ನು ಅಲ್ಲಿಂದ ಬಿಡಿಸಿ, ಆಕೆಯ ಆಸನದಲ್ಲಿ ಕೂರಿಸುವಲ್ಲಿ ಕೊನೆಗೂ ಸಫಲನಾಗುತ್ತಾನೆ. ವಿಮಾನ ಲ್ಯಾಂಡ್ ಆದಾಗ ಆಕೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: 4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

  • ಮಡಿಕೇರಿಯಲ್ಲಿ ನೈತಿಕ ಪೊಲೀಸ್ ಗಿರಿ-ಅನ್ಯಕೋಮಿನ ಯುವಕನೊಂದಿಗೆ ಬಂದಿದ್ದಕ್ಕೆ ಥಳಿತ

    ಮಡಿಕೇರಿಯಲ್ಲಿ ನೈತಿಕ ಪೊಲೀಸ್ ಗಿರಿ-ಅನ್ಯಕೋಮಿನ ಯುವಕನೊಂದಿಗೆ ಬಂದಿದ್ದಕ್ಕೆ ಥಳಿತ

    -ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

    ಮಡಿಕೇರಿ: ಹಿಂದೂ ಯುವತಿ ಜೊತೆಗೆ ಅನ್ಯಕೋಮಿನ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಅಂತಾ ಆರೋಪಿಸಿ ಸ್ಥಳೀಯರು ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೋರಂಗಾಲ ಗ್ರಾಮದಲ್ಲಿ ನಡೆದಿದೆ.

    ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಘಟನೆ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾಗಮಂಡಲ ಬಳಿಯ ಕಾವೇರಿ ನದಿ ತೀರದಲ್ಲಿ ಇಬ್ಬರು ಯುವಕರು, ಇಬ್ಬರು ವಿದ್ಯಾರ್ಥಿನಿಯರು ಅಸಭ್ಯವಾಗಿ ವರ್ತಿಸುತ್ತಿದ್ರು ಅಂತಾ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕರು ಎಮ್ಮೆಮಾಡು ಗ್ರಾಮದವರಾಗಿದ್ದು, ವಿಧ್ಯಾರ್ಥಿನಿಯರು ಭಾಗಮಂಡಲ ಗ್ರಾಮದವರು ಅಂತ ಹೇಳಲಾಗ್ತಿದೆ.

    ಅನ್ಯಕೋಮಿಗೆ ಸೇರಿದ ಇಬ್ಬರು ಯುವಕರಲ್ಲಿ ಒಬ್ಬ ಅದೇ ಕೋಮಿಗೆ ಸೇರಿದ ಯುವತಿಯನ್ನ ಪ್ರೀತಿಸುತ್ತಿದ್ದ ಅಂತಾ ಹೇಳಲಾಗಿದ್ದು, ಆಕೆಯನ್ನ ನೋಡಲು ಸ್ನೇಹಿತನ ಜೊತೆ ಬಂದಿದ್ದ ವೇಳೆ ಅಸಭ್ಯ ವರ್ತನೆ ಮಾಡಿದ್ದಾರೆ ಅಂತಾ ಆರೋಪಿಸಿ ಹಲ್ಲೆ ಮಾಡಲಾಗಿದೆ. ಇಬ್ಬರು ಯುವಕರನ್ನು ಅರೆನಗ್ನಗೊಳಿಸಿ ಹಲ್ಲೆ ಮಾಡಲಾಗಿದೆ. ನಂತರ ಎಲ್ಲರನ್ನು ಭಾಗಮಂಡಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪರಸ್ಪರ ರಾಜಿ ಸಂಧಾನ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಅಂತಾ ತಿಳಿದುಬಂದಿದೆ.