Tag: assault case

  • ದಿನ ರಾತ್ರಿ 2-3 ಹುಡುಗರನ್ನ ಕರೆದುಕೊಂಡು ಬರುತ್ತಿದ್ದಳು – ಅಪಾರ್ಟ್ಮೆಂಟ್‌ ಮಾಲೀಕ ಕೆಂಪೇಗೌಡ

    ದಿನ ರಾತ್ರಿ 2-3 ಹುಡುಗರನ್ನ ಕರೆದುಕೊಂಡು ಬರುತ್ತಿದ್ದಳು – ಅಪಾರ್ಟ್ಮೆಂಟ್‌ ಮಾಲೀಕ ಕೆಂಪೇಗೌಡ

    – ಯುವತಿ ಮೇಲಿನ ಹಲ್ಲೆ ಕೇಸ್‌ಗೆ ಟ್ವಿಸ್ಟ್‌

    ಬೆಂಗಳೂರು: ಸಂಜಯನಗರ ಅಪಾರ್ಟ್ಮೆಂಟ್‌ವೊಂದರ (Apartment) ಮಾಲೀಕನ ಮಗ ಕಂಠಪೂರ್ತಿ ಕುಡಿದು ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಅಪಾರ್ಟ್‌ಮೆಂಟ್‌ ಮಾಲೀಕರೂ ಆಗಿರುವ ಕೆಂಪೇಗೌಡ (Kempegowda) ಅವರು ನೀಡಿದ ಹೇಳಿಕೆ‌ಯಲ್ಲಿ ಹಲವು ರಹಸ್ಯಗಳು ಬೆಳಕಿಗೆ ಬಂದಿವೆ.

    ಹಲ್ಲೆ ಆರೋಪಕ್ಕೆ ಒಳಗಾಗಿರುವ ಮಂಜುನಾಥ್ ಗೌಡನ ತಂದೆ ಕೆಂಪೇಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಯುವತಿ ಹಲವು ತಿಂಗಳಿಂದ ಫ್ಲಾಟ್‌ನಲ್ಲಿ ವಾಸವಾಗಿದ್ದಾಳೆ. ಆಕೆ ಮನೆ ಬಾಡಿಗೆ ಕೊಡುವಾಗಲೇ ಬೇರೆ ಗಂಡಸರನ್ನು ಕರೆದುಕೊಂಡು ಬರದಂತೆ ಹೇಳಿದ್ದೆವು. ಆರಂಭದಲ್ಲಿ ಒಂದು ತಿಂಗಳು ಸುಮ್ಮನಿದ್ದಳು. ನಂತರ ಗಂಡಸರನ್ನ ಕರೆದುಕೊಂಡು ಬರೋದಕ್ಕೆ ಶುರು ಮಾಡಿದಳು ಎಂದಿದ್ದಾರೆ.

    ಅಪಾರ್ಟ್‌ಮೆಂಟ್‌ ಮುಂಭಾಗಕ್ಕೆ ಬಂದು, ಸಿಗರೇಟ್‌ ಸೇದುತ್ತಿದ್ದಳು, ಹುಡುಗರೊಂದಿಗೆ ಸೇರಿಕೊಂಡು ಶಬದ್ಧ ಮಾಡುತ್ತಿದ್ದಳು. ಸಾಕು ನಾಯಿಯನ್ನು ಮನೆಯಲ್ಲೇ ಗಲೀಜುಮಾಡಿಸುತ್ತಿದ್ದಳು. ಇದರಿಂದ ಸ್ಥಳೀಯರು ರೋಹಿಹೋಗಿದ್ದರು ಬಂದ 6 ತಿಂಗಳಲ್ಲೇ ಇಷ್ಟೊಂದು ರಂಪಾಟ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದು ಬಂದು ಯುವತಿ ಜೊತೆ ಅಸಭ್ಯ ವರ್ತನೆ – ಅಪಾರ್ಟ್ಮೆಂಟ್ ಮಾಲೀಕನ ಪುತ್ರನ ವಿರುದ್ಧ ದೂರು

    ರಾತ್ರಿ ಆದ್ರೆ ಹುಡುಗರು ಬರ್ತಾ ಇದ್ದರು, ದಿನ ರಾತ್ರಿ ಇಬ್ಬರು, ಮೂವರು ಹುಡುಗರನ್ನ ಕರೆದುಕೊಂಡು ಬರ್ತಿದ್ಲು. ರಾತ್ರಿ ವೇಳೆ ತುಂಬಾ ಲೇಟಾಗಿ ಮನೆಗೆ ಬರ್ತಿದ್ಲು. ಸೆಕ್ಯೂರಿಟಿಗೆ ಬಾಯಿಗೆ ಬಂದ ಹಾಗೆ ಬೈದು ಗೇಟ್ ಓಪನ್ ಮಾಡಿಸ್ತಿದ್ಲು. ಹುಡುಗರ ಜೊತೆ ಮನೆಯಲ್ಲೇ ಕುಡಿದು ಗಲಾಟೆ ಮಾಡ್ತಾ ಇದ್ದಳು. ಅಕ್ಕಪಕ್ಕದ ಫ್ಲ್ಯಾಟ್ ನವರು ನಮಗೆ ಹೇಳಿದ್ರು. ಹಾಗಾಗಿ ಈ ಹಿಂದೆಯೂ ಮನೆ ಕಾಲಿ ಮಾಡುವಂತೆ ತಿಳಿಸಿದ್ವಿ. ಖಾಲಿ ಮಾಡಲ್ಲ ಅಂತ ಗಲಾಟೆ ಮಾಡಿದ್ಲು, ಹಲ್ಲೆ ಮಾಡೋಕೆ ಬರ್ತಿದ್ಲು ಎಂದು ಯುವತಿ ರಂಪಾಟಗಳನ್ನ ಬಿಚ್ಚಿಟ್ಟಿದ್ದಾರೆ.

    ಡಿಸೆಂಬರ್ 3ರ ರಾತ್ರಿ ನನ್ನ ಮಗನ ಮೇಲೆ ಆಕೆಯೇ ಮೊದಲು ಹಲ್ಲೆ ಮಾಡಿದ್ದಾಳೆ. ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಾಳೆ. ನಂತರ ನನ್ನ ಮಗ ಕೈಹಿಡಿದಾಗ ತರಚಿರೋ ಗಾಯ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ನಮ್ಮ ಮನೆಯ ಸಿಸಿಟಿವಿ ಕೊಟ್ಟು ಯುವತಿ ಮೇಲೆ ಕೌಂಟರ್ ಕಂಪ್ಲೆಂಟ್‌ ಕೊಡ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ-ಲಕ್ಷದ್ವೀಪ ವ್ಯಾಪಾರ ಮಾರ್ಗ ಪುನರುಜ್ಜೀವನಗೊಳಿಸಲು ಕೆಎಂಬಿ ಪೂರ್ವ ಭಾವಿಯಾಗಿ ಕೆಲಸ ಮಾಡಲಿದೆ: ಸಚಿವ ವೈದ್ಯ

    ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯೆ ನೀಡಿದ್ದು, ಮನೆ ಮಾಲೀಕ ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆಂದು ದಾಖಲೆ ಸಮೇತ ದೂರು ಕೊಟ್ಟಿದ್ದಾರೆ. ಯುವತಿಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥ ಗೌಡನನ್ನ ಬಂಧನ ಮಾಡಲಾಗಿದೆ. ಆರೋಪಿ ಯುವತಿ ಬೇರೆ ಹುಡುಗರನ್ನ ಕರೆದುಕೊಂಡು ಪಾರ್ಟಿ ಮಾಡ್ತಾ ಇದ್ದರು, ಪಾರ್ಟಿ ಮಾಡಿ ಗಲಾಟೆ ಮಾಡಿದ್ದನ್ನ ಅಕ್ಕಪಕ್ಕದ ಮನೆಯವರು ನಮಗೆ ದೂರು ಹೇಳ್ತಾ ಇದ್ದರು. ಹಾಗಾಗಿ ಹೇಳಲು ಹೋದಾಗ ನನಗೆ ತಳ್ಳಿದ್ದರಿಂದ ನಾನು ಕೇಳಗಡೆ ಬಿದ್ದೆ, ಆದಾದ ಬಳಿಕ ನಾನು ಹಲ್ಲೆ ಮಾಡಿದ್ದಾಗಿ ಪೊಲೀಸರ ತನಿಖೆಯ ವೇಳೆ ಆರೋಪಿ ಹೇಳಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

  • ನಾನು ನಿರಪರಾಧಿ ಅಂತ ಸಾಬೀತುಪಡಿಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತೀನಿ: ನಟ ನಿವಿನ್ ಪೌಲಿ

    ನಾನು ನಿರಪರಾಧಿ ಅಂತ ಸಾಬೀತುಪಡಿಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತೀನಿ: ನಟ ನಿವಿನ್ ಪೌಲಿ

    – `ಬೆಂಗಳೂರು ಡೇಸ್’ ಸಿನಿಮಾ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು

    ಕೊಚ್ಚಿ: ಮಲಯಾಳಂನ ಬೆಂಗಳೂರು ಡೇಸ್, ಪ್ರೇಮಂ ಮೊದಲಾದ ಹಿಟ್ ಸಿನಿಮಾಗಳ ನಾಯಕ ನಟ ನಿವಿನ್ ಪೌಲಿ (Nivin Pauly) ವಿರುದ್ಧ ಲೈಂಗಿಕ ದೌರ್ಜನ್ಯ (Sexual Assault) ದೂರು ದಾಖಲಾಗಿದೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಎರ್ನಾಕುಲಂ ಜಿಲ್ಲೆಯ ನೇರ್ಯಮಂಗಲಂ ನಿವಾಸಿ ಯುವತಿ ಊನ್ನುಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತನ್ನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಟ ನಿವಿನ್ ಪೌಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪ ನಿರಾಧಾರ. ನಕಲಿ ದೂರು ನೀಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ನನ್ನ ವಿರುದ್ಧ ದೂರು ನೀಡಿರುವ ಮಹಿಳೆಯ ಪರಿಚಯವೂ ನನಗಿಲ್ಲ, ಆಕೆಯೊಂದಿಗೆ ಮಾತನ್ನೂ ಆಡಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಯಾವ ಹಂತಕ್ಕೆ ಹೋಗುವುದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಾಹನಗಳ ಮೇಲೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿದ್ರೆ ಕಾನೂನು ಕ್ರಮ – ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ!

    ನನ್ನ ವಿರುದ್ಧ ದೂರು ದಾಖಲಿಸಿರುವ ಮಹಿಳೆಯ ಪರಿಚಯೂ ನನಗಿಲ್ಲ. ಆಕೆಯೊಂದಿಗೆ ನಾನು ಮಾತನಾಡಿಲ್ಲ. ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬರು ನನ್ನ ವಿರುದ್ಧ ಇದೇ ರೀತಿ ದೂರು ನೀಡಿದ್ದರು. ಆಗ ಪೊಲೀಸ್‌ ಅಧಿಕಾರಿಯಿಂದ ಕರೆ ಬಂದಿತು.‌ ಸರ್ಕಲ್‌ ಇನ್ಸ್‌ಪೆಕ್ಟರ್‌ವೊಬ್ಬರು ನನಗೆ ಫೋನ್‌ ಮೂಲಕವೇ ದೂರಿನ ಪ್ರತಿಯನ್ನು ಓದಿ ಹೇಳಿದರು. ಆಕೆ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳಿದೆ. ಅದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದೆ. ಹಾಗಾಗಿ ಅದು ನಕಲಿ ದೂರು ಅಂತ ಪೊಲೀಸರಿಗೆ ಗೊತ್ತಾಗಿತ್ತು. ನಾನು ಪ್ರತಿದೂರು ನೀಡಬೇಕೆ ಎಂದು ಕೇಳಿದಾಗ, ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ ಅಂತಲೇ ಅವರು ಹೇಳಿದ್ದರು. ಇದೀಗ ಮತ್ತೆ ನನ್ನ ವಿರುದ್ಧ ಸಂಚು ನಡೆದಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸತ್ಯ ಹೊರ ಬರುವುದಕ್ಕೆ ಸ್ವಲ್ಪ ಸಮಯವಾಗುತ್ತದೆ. ಆದರೂ ನಾನು ಕಾಯುತ್ತೇನೆ ಎಂದು ಅಂತ ಹೇಳಿದ್ದಾರೆ. ಇದನ್ನೂ ಓದಿ: 1,788 ಕೊಠಡಿ, 257 ಸ್ನಾನಗೃಹ, ಅಮೃತಶಿಲೆಯಿಂದ ಮಾಡಿದ ಮೆಟ್ಟಿಲು – ವಿಶ್ವದ ಅತಿದೊಡ್ಡ ಐಷಾರಾಮಿ ಅರಮನೆಯಲ್ಲಿ ಮೋದಿಗೆ ಆತಿಥ್ಯ

    ದೂರಿನಲ್ಲಿ ಏನಿದೆ?
    2023ರ ನವೆಂಬರ್ ತಿಂಗಳಲ್ಲಿ ದುಬೈನ ಹೋಟೆಲೊಂದರಲ್ಲಿ ಈ ಘಟನೆ ನಡೆದಿದೆ. ದೂರು ನೀಡಿದ ಯುವತಿ ಬೇರೆ ಕೆಲಸದ ನಿಮಿತ್ತ ದುಬೈಗೆ ತೆರಳಿದ್ದರು. ಯುವತಿಯ ಸ್ನೇಹಿತೆ ಮೂಲಕ ಈಕೆ ಚಿತ್ರ ತಂಡದ ಬಳಿಗೆ ತೆರಳಿದ್ದರು ಎನ್ನಲಾಗಿದೆ.

    ಯುವತಿ ತನ್ನನ್ನು ಕರೆದೊಯ್ದ ಮಹಿಳೆಯನ್ನು ಮೊದಲ ಆರೋಪಿ ಎಂದು ದೂರಿನಲ್ಲಿ ಹೇಳಿದ್ದಾರೆ. ಎಕೆ ಸುನಿಲ್, ಬಿನು, ಬಶೀರ್, ಕುಟ್ಟನ್ ಹಾಗೂ 6ನೇ ಆರೋಪಿ ನಿವಿನ್ ಪೌಲಿ ಎಂದು ದೂರು ದಾಖಲಿಸಿದ್ದಾರೆ. ಮಾದಕದ್ರವ್ಯ ನೀಡಿ ದೌರ್ಜನ್ಯ ನಡೆಸಿದ್ದಾರೆ. 6 ದಿನಗಳ ಕಾಲ ಹೋಟೆಲ್‌ನಲ್ಲಿ ಕೂಡಿ ಹಾಕಿ ಈ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಯಚೂರು ಜಿಲ್ಲೆಯ ಹಲವೆಡೆ ಭಾರೀ ಮಳೆ: ಹಳ್ಳ ದಾಟುವಾಗ ಕೊಚ್ಚಿಹೋದ ಬ್ಯಾಂಕ್ ಉದ್ಯೋಗಿ

  • ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದ (Kidnap Case) ಆರೋಪ ಹೊತ್ತಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾನೂನು ಬಿಟ್ಟು ನಾನೇನು ಮಾತನಾಡಲ್ಲ. ಕೈ ಮುಗಿಯುತ್ತೇನೆ ಬಿಟ್ಟು ಬಿಡಿ ಎಂದು ಗರಂ ಆದ ಘಟನೆ ವಿಧಾನಸೌಧದಲ್ಲಿ ನಡೆದಿದೆ‌.

    ವಿಧಾನಸಭೆಯ ಕಾಗದ ಪತ್ರ ಸಮಿತಿ ಅಧ್ಯಕ್ಷರಾಗಿರುವ ಹೆಚ್‌.ಡಿ ರೇವಣ್ಣ ಅವರಿಂದು ಸಮಿತಿಯ ಸಭೆಗೆ ವಿಧಾನಸೌಧಕ್ಕೆ (Vidhana Soudha) ಬಂದಿದ್ದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಮೌನವಾಗಿಯೇ ತೆರಳಿದ ರೇವಣ್ಣ, 15 ನಿಮಿಷಗಳಲ್ಲೇ ಕಾಗದ ಪತ್ರ ಸಮಿತಿ ಸಭೆ ಮುಗಿಸಿ ಹೊರಟರು.

    ಸದ್ಯ ರೇವಣ್ಣ ಅವರನ್ನು ಕಾಗದ ಪತ್ರ ಸಮಿತಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವಂತೆ ಮನವಿ ಸಹ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇಶದ ಬೆಳವಣಿಗೆಗೆ ಸಾಕ್ಷಿಯಾಗಲು ತೃಪ್ತಿಕರವಾಗಿದೆ: ಮೋದಿ ಪ್ರತಿಕ್ರಿಯೆಗೆ ರಶ್ಮಿಕಾ ಸಂತಸ

    ವಿಧಾನಸೌಧದಿಂದ ವಾಪಾಸ್ ಹೋಗುವಾಗ, ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ರೇವಣ್ಣ ಅವರು, ಅಸಮಧಾನ, ಬೇಸರ, ಕೋಪದ ನಡುವೆಯೇ ನಾನು ಏನೂ ಮಾತಾಡಲ್ಲ, ಕಾನೂನು ಬಿಟ್ಟು ಏನೂ ಮಾತಾಡಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಗರಂ ಆಗಿದ್ದಾರೆ. ಬಳಿಕ ಸಿಡುಕುತ್ತಲೇ ವಿಧಾನಸೌಧದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

  • ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆಗೈದ ಆರೋಪಿ ಅರೆಸ್ಟ್

    ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆಗೈದ ಆರೋಪಿ ಅರೆಸ್ಟ್

    ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಹಾಗೂ ಆತನಿಗೆ ಸಾಥ್ ನೀಡಿದ್ದವನನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಬೊಮ್ಮನಹಳ್ಳಿಯ ರೌಡಿಶೀಟರ್ ಮದನ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಆನಂದ್ ಹಲ್ಲೆಗೊಳಗಾದ ಮಾಲೀಕ. ಹಲ್ಲೆ ಮಾಡಿದ ಬಳಿಕ ಮದನ್ ಹಾಗೂ ಕಿರಣ್ ಪಾಂಡಿಚೇರಿಗೆ ಪರಾರಿಯಾಗಿದ್ದರು. ಆರೋಪಿಗಳು ಇರುವ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರು ಅಲ್ಲಿಯೇ ಅವರನ್ನು ಬಂಧಿಸಿ ಕರೆತಂದಿದ್ದಾರೆ.

    ಆಗಿದ್ದೇನು?:
    ಬೇಗೂರಿನ ಗಾರ್ವೆಬಾವಿಪಾಳ್ಯದಲ್ಲಿ ಆನಂದ್ ಕಳೆದ 15 ವರ್ಷಗಳಿಂದ ತಿರುಮಲ ವಾಟರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅವರ ಕೈ ಕೆಳಗೆ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದಾರೆ. ಮದನ್ ತಾನು ರೌಡಿಶೀಟರ್ ಎಂದು ತಿಳಿಸದೆ ಆನಂದ್ ಬಳಿ ಕೆಲಸ ಕೇಳಿಕೊಂಡು ಬಂದಿದ್ದ. ಆತನ ಪರಿಸ್ಥಿತಿ ಅರಿತ ಆನಂದ್ ತನ್ನ ಕಾರು ಚಾಲಕನಾಗಿ ಕೆಲಸ ಮಾಡುವಂತೆ ತಿಳಿಸಿದ್ದ.

    ಮದನ್ ಕೆಲಸಕ್ಕೆ ಸೇರಿದ ಕೆಲವು ದಿನಗಳ ಬಳಿಕ ಹೆಣ್ಣಮಕ್ಕಳನ್ನು ಚುಡಾಯಿಸುವುದು, ಫ್ಯಾಕ್ಟರಿಯಲ್ಲೇ ಗಾಂಜಾ ಸೇದುತ್ತಿದ್ದ. ಈ ವಿಚಾರವಾಗಿ ಮಾಲೀಕ ಆನಂದ್‍ಗೆ ತಿಳಿದಿದ್ದರಿಂದ ವೇತನ ನೀಡಿ ಮದನ್‍ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕೋಪಗೊಂಡ ಮದನ್ ಸಹಚರರೊಂದಿಗೆ ಲಾಂಗ್ ಹಿಡಿದು ಫ್ಯಾಕ್ಟರಿಗೆ ನುಗ್ಗಿ ಆನಂದ್ ಮೇಲೆ ಜನವರಿ 30ರಂದು ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲದೆ ವಾಟರ್ ಫ್ಯಾಕ್ಟರಿಯಲ್ಲಿದ್ದ ವಸ್ತುಗಳನ್ನು ಒಡೆದು, ಆನಂದ್‍ಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮದನ್ ಹಾಗೂ ಆತನ ಸಹಚರರ ಕೃತ್ಯ ಸೆರೆಯಾಗಿತ್ತು.

    ಈ ಕುರಿತು ಆನಂದ್ ಬೇಗೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಬೆಂಗಳೂರು: ಇದು ರೌಡಿ ನಲಪಾಡ್ ರಾಕ್ಷಸತ್ವದ ಘೋರ ಕಥನ. ವಿದ್ವತ್ ಮೇಲೆ ಯಾವ್ಯಾವ ರೀತಿ ದಾಳಿ ನಡೆಯಿತು, ಆಸ್ಪತ್ರೆಯಲ್ಲೂ ನಲಪಾಡ್ ಗ್ಯಾಂಗ್ ಅಬ್ಬರಿಸಿದ್ದು ಹೇಗೆ ಹಾಗೂ ನಲಪಾಡ್ ದಾಳಿಯ ಬಗ್ಗೆ ವಿದ್ವತ್ ಪಬ್ಲಿಕ್ ಟಿವಿಗೆ ತಿಳಿಸಿದ ಎಕ್ಸ್ ಕ್ಲೂಸೀವ್ ಮಾತು ಇಲ್ಲಿದೆ. ಇದನ್ನೂ ಓದಿ: Exclusive ಹ್ಯಾರಿಸ್ ಮಗನ ಮತ್ತೊಂದು ಕರ್ಮಕಾಂಡ ಬಿಚ್ಚಿಟ್ಟ ಮಹಿಳೆ

    ಫರ್ಜಿ ಕೆಫೆಯಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಕ್ಷಮೆ ಕೋರುವಂತೆ ಹೇಳಿದರು. ತಪ್ಪಿಲ್ಲದ ಕಾರಣಕ್ಕೆ ನಾನು ಆರಂಭದಲ್ಲಿ ನಲಪಾಡ್ ಮಾತು ಕೇಳಲಿಲ್ಲ. ಎಂಎಲ್‍ಎ ಹ್ಯಾರಿಸ್ ಮಗನಿಗೇ ಎದುರು ಮಾತನಾಡುತ್ತೀಯಾ ಎನ್ನುತ್ತಾ ಅಬ್ಬರಿಸಿದ್ರು. ಏಕಾಏಕಿ ಹೊಡೆಯಲು ಶುರು ಮಾಡಿದ್ದರಿಂದ sorry.. sorry.. ಎಂದೆ. ಆದರೆ sorry ಎಂದರೂ ಕೂಡ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದರು. ನಲಪಾಡ್ ಜತೆ ಸುಮಾರು 15 ಸ್ನೇಹಿತರು ಇದ್ದರು. ಅವರಲ್ಲಿ ಆರೇಳು ಮಂದಿ ಬೌನ್ಸರ್‍ಗಳು. ಎಲ್ಲರೂ ಸೇರಿಕೊಂಡು ಮನಸೋ ಇಚ್ಛೆ ಹೊಡೆದರು. ಮೈಮೇಲೆ ಕುರ್ಚಿಗಳನ್ನು ಎಸೆದರು, `ಕ್ಷಮೆ ಕೇಳು’ ಎಂದರು. ಕ್ಷಮೆ ಯಾಚಿಸಿದರೂ ಹೊಡೆದರು ಎಂದು ವಿದ್ವತ್ ಹೇಳಿದ್ದಾರೆ. ಇದನ್ನೂ ಓದಿ: ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

    ನಲಪಾಡ್ ಗ್ಯಾಂಗ್ ಫರ್ಜಿ ಕೆಫೆಯಲ್ಲಿ ಮಾತ್ರ ಅಬ್ಬರಿಸಿರಲಿಲ್ಲ. ಚಿಕಿತ್ಸೆಗಾಗಿ ಮಲ್ಯಾ ಆಸ್ಪತ್ರೆಗೆ ದಾಖಲಾದ್ರೂ ಬಿಟ್ಟಿರಲಿಲ್ಲ ಆ ಗ್ಯಾಂಗ್. ವಿದ್ವತ್‍ಗೆ ನರ್ಸ್‍ವೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡುವ ವೇಳೆ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿತ್ತು. ಎರಡು ಕಾರುಗಳಲ್ಲಿ ಆಸ್ಪತ್ರೆಗೆ ನುಗ್ಗಿದ ರೌಡಿ ನಲಪಾಡ್ ಹಾಗೂ ಸಹಚರರು, ಆಸ್ಪತ್ರೆ ಕೊಠಡಿಯ ಬಾಗಿಲು ಒದ್ದುಕೊಂಡೇ ಒಳನುಗ್ಗಿ ಪುನಃ ವಿದ್ವತ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ರು. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    ರಕ್ಷಣೆಗೆ ಹೋದ ವಿದ್ವತ್ ಸೋದರನ ಮೇಲೂ ನಲಪಾಡ್ ಹಲ್ಲೆ ನಡೆಸಿ, ಕೊರಳಪಟ್ಟಿ ಹರಿದಿದ್ದ. ಈ ವೇಳೆ ಗುರು ರಾಜ್‍ಕುಮಾರ್ ಅವರನ್ನ ನೋಡಿ ನಲಪಾಡ್ ಆಸ್ಪತ್ರೆಯಿಂದ ಹೊರಹೋಗಿದ್ದ. ಗುರು ರಾಜ್‍ಕುಮಾರ್ ಮಲ್ಯ ಆಸ್ಪತ್ರೆಗೆ ಬರದಿದ್ದರೆ, ನನ್ನ ತಮ್ಮನನ್ನು ಕೊಂದುಬಿಡುತ್ತಿದ್ರು ಎಂದು ಸಾತ್ವಿಕ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

    ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ 

    https://www.youtube.com/watch?v=dy5Sl50Qi3k

    https://www.youtube.com/watch?v=IHwUP3mtZXQ

    ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

  • ಹ್ಯಾರಿಸ್ ರೌಡಿಪುತ್ರನ ಕಸ್ಟಡಿ ಅಂತ್ಯ – ನಲಪಾಡ್ ಗೆ ಜೈಲಾ, ಬೇಲಾ? ಇಂದು ನಿರ್ಧಾರ

    ಹ್ಯಾರಿಸ್ ರೌಡಿಪುತ್ರನ ಕಸ್ಟಡಿ ಅಂತ್ಯ – ನಲಪಾಡ್ ಗೆ ಜೈಲಾ, ಬೇಲಾ? ಇಂದು ನಿರ್ಧಾರ

    ಬೆಂಗಳೂರು: ಯುಬಿ ಸಿಟಿಯಲ್ಲಿ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿಸ್ ಮಗ ರೌಡಿ ಮೊಹಮ್ಮದ್ ನಲಪಾಡ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇದನ್ನೂ ಓದಿ: Exclusive ಹ್ಯಾರಿಸ್ ಮಗನ ಮತ್ತೊಂದು ಕರ್ಮಕಾಂಡ ಬಿಚ್ಚಿಟ್ಟ ಮಹಿಳೆ

    ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಜಾಮೀನು ಕೋರಿ ನಲಪಾಡ್ ಅರ್ಜಿ ಸಲ್ಲಿಸಿದ್ದಾನೆ. ಘಟನೆ ನಡೆದು ಹಲವು ಗಂಟೆಗಳ ನಂತರ 307 ಸೆಕ್ಷನ್ ಹಾಕಲಾಗಿದೆ. ಆದ್ರೆ ನಲಪಾಡ್ ಹಲ್ಲೆ ಮಾಡಿದ್ದಾನೆಂದು ಎಫ್‍ಐಆರ್‍ನಲ್ಲಿ ಉಲ್ಲೇಖವಿಲ್ಲ. 10 ರಿಂದ 15 ಜನ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ಹಾಗಾಗಿ ಮೇಲಿನ ಅಂಶಗಳನ್ನು ಪರಿಗಣಿಸಿ ಜಾಮೀನು ನೀಡಿ ಅಂತ ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

    ಇನ್ನೊಂದು ಕಡೆ ನಲಪಾಡ್‍ನ ಪೋಲೀಸ್ ಕಸ್ಟಡಿ ಅಂತ್ಯವಾಗಿರೋ ಹಿನ್ನಲೆಯಲ್ಲಿ ಇನ್ನು 4 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡೋ ಸಾಧ್ಯತೆಯೂ ಇದೆ. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    ಮಂಗಳವಾರ ರಾತ್ರಿ 10 ಗಂಟೆವರೆಗೂ ನಲಪಾಡ್ ವಿಚಾರಣೆ ನಡೆದಿದೆ. ವಿಚಾರಣೆ ನಂತರ ಎಂಪೈರ್ ಹೋಟೆಲ್‍ನಿಂದ ನಲಪಾಡ್‍ಗೆ ಬಿರಿಯಾನಿ ಪಾರ್ಸೆಲ್ ತರಿಸಿಕೊಡಲಾಗಿದೆ. ಸಹಚರರು ಮಲಗಿದ್ರೂ ರೌಡಿ ನಲಪಾಡ್‍ಗೆ ಮಾತ್ರ ನಿದ್ದೆ ಬಂದಿರಲಿಲ್ಲ. ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಸದಲ್ಲಿರೋ ರೌಡಿ ನಲಪಾಡ್, ಕಂಬಿ ಎಣಿಸುತ್ತಿದ್ರೂ ಕಿಂಚಿತ್ತು ಪಾಪ ಪ್ರಜ್ಞೆಯಿಲ್ಲದೇ ನಗು ಮುಖದಲ್ಲೇ ಕಾಲ ಕಳೆದಿದ್ದಾನೆ. ರಾತ್ರಿ ಎರಡು ಗಂಟೆವರೆಗೂ ನಲಪಾಡ್ ಎಚ್ಚರವಾಗಿಯೇ ಇದ್ದ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಹ್ಯಾರಿಸ್ ಪುತ್ರ ನಲಪಾಡ್‍ನಿಂದ ಹಲ್ಲೆಗೊಳಗಾಗಿರುವ ವಿದ್ವತ್‍ಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಗರದ ಪ್ರತಿಷ್ಟಿತ ಆಸ್ಪತ್ರೆಯ ವೈದ್ಯರನ್ನು ಕರೆಸಿ ಇಂದು ಚಿಕಿತ್ಸೆ ನಡೆಸುವ ಸಾಧ್ಯತೆಯಿದೆ. ನರರೋಗ ತಜ್ಞರನ್ನು ಕರಸಿ ವಿದ್ವತ್‍ಗೆ ಪರೀಕ್ಷೆ ನಡೆಸಲಾಗುತ್ತದೆ. ವಿದ್ವತ್ ಅವರ ಮುಖದ ಊತ ಸದ್ಯ ಕಡಿಮೆಯಾಗಿದೆ. ಅದ್ರೆ ವಿದ್ವತ್ ದೇಹದ ಒಂಭತ್ತು ಮೂಳೆ ಮುರಿತಕ್ಕೊಳಗಾಗಿದೆ. ವಿದ್ವತ್‍ಗೆ ದ್ರವ ಆಹಾರ ಮಾತ್ರ ನೀಡಲಾಗುತ್ತಿದೆ. ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ 

    ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

    https://www.youtube.com/watch?v=IHwUP3mtZXQ

    https://www.youtube.com/watch?v=dy5Sl50Qi3k