ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಎಸ್‍ಐಟಿ ತನಿಖೆ ವಿಳಂಬವಾಗುತ್ತಿರುವ ಕುರಿತು ಸಹೋದರಿ ಕವಿತಾ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಮುಂದಿನ ಚಿತ್ರದ ಸಮ್ಮರ್ ಹಾಲಿಡೇಸ್ ಟ್ರೇಲರ್ ಲಾಂಚ್ ವೇಳೆ ಮಾತನಾಡಿದ ಅವರು, ಸಹೋದರಿ ಗೌರಿ ಲಂಕೇಶ್ ಅವರನ್ನು ನೆನೆದು ಭಾವುಕರಾದರು. ಗೃಹ ಸಚಿವ ರಾಮಲಿಂಗ ರೆಡ್ಡಿ ಅವರು ಕಳೆದ ಎರಡು ತಿಂಗಳಿನಿಂದ ಎರಡು ವಾರದಲ್ಲಿ ತನಿಖೆ ಮುಕ್ತಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ಬಗ್ಗೆ ಯಾವುದೇ ಸ್ಪಷ್ಟನೇ ಸಿಕ್ಕಿಲ್ಲ ಎಂದರು.

ಗೃಹ ಸಚಿವರ ಮೇಲೆ ನಂಬಿಕೆ ಇಡ್ಬೇಕಾ ಬೇಡ್ವಾ ಅನ್ನುವ ಅನುಮಾನ ಕಾಡ್ತಿದೆ. ಎಸ್‍ಐಟಿ ತನಿಖಾಧಿಕಾರಿ ಬಿಕೆ ಸಿಂಗ್ ಅವರು ಇನ್ನು 2 ವಾರಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಅವರ ಹೇಳಿಕೆ ಹಿನ್ನೆಲೆ ನಂಬಿಕೆ ಬಂದಿದೆ ಎಂದು ಹೇಳಿದರು.
ತಮ್ಮ ಸಮ್ಮರ್ ಹಾಲಿಡೇಸ್ ಸಿನಿಮಾದಲ್ಲಿ ಗೌರಿ ಲಂಕೇಶ್ ಸಾಮಾಜಿಕ ಹೋರಾಟಗಾರ್ತಿಯ ಸಣ್ಣ ಪಾತ್ರವನ್ನು ಮಾಡಿದ್ದಾರೆ. ನಿಜ ಜೀವನದಲ್ಲೂ ಅವರು ಹಾಗೆಯೇ ಇದ್ದರು. ಅವರ ಸಾಮಾಜಿಕ ಹೋರಾಟವೇ ಅವರ ಪ್ರಾಣಕ್ಕೆ ಕಂಟಕವಾಗುತ್ತದೆ ಎಂದು ತಿಳಿದಿಲಿಲ್ಲ. ನಮ್ಮ ತಂದೆ ಲಂಕೇಶ್ ಅವರು ಸರ್ಕಾರ ವಿರುದ್ಧ ಹಲವು ಬರಹಗಳನ್ನು ಪ್ರಕಟಿಸಿದ್ದರು ಎಂದು ನೆನಪಿಸಿಕೊಂಡರು.
ನಿಮ್ಮ ಹಾಗೂ ಸಹೋದರ ಇಂದ್ರಜಿತ್ ಲಂಕೇಶ್ ಅವರಿಗೆ ಯಾವುದಾರರು ಜೀವ ಬೆದರಿಕೆ ಕುರಿತ ಪ್ರಶ್ನೆಗೆ ಉತ್ತರಿಸದ ಅವರು ನಮಗೇ ಇಂತಹ ಯಾವುದೇ ಜೀವ ಬೆದರಿಕೆ ಇಲ್ಲ, ಆದರೆ ಗೌರಿ ಹತ್ಯೆ ನಂತರ ಅತಂಕಕ್ಕೆ ಒಳಗಾಗಿದ್ದೇವು ಎಂದು ತಿಳಿಸಿದರು.













































































