Tag: assassination

  • ನಾಲ್ವರು ಮಹಿಳಾ ಹೋರಾಟಗಾರ್ತಿಯರ ಹತ್ಯೆಯಾಗಿದೆ ಎಂದ ತಾಲಿಬಾನ್

    ನಾಲ್ವರು ಮಹಿಳಾ ಹೋರಾಟಗಾರ್ತಿಯರ ಹತ್ಯೆಯಾಗಿದೆ ಎಂದ ತಾಲಿಬಾನ್

    ಕಾಬೂಲ್: ಉತ್ತರ ನಗರವಾದ ಮಜಾರ್-ಇ-ಷರೀಫ್‍ನಲ್ಲಿ ನಾಲ್ವರು ಮಹಿಳೆಯರ ಹತ್ಯೆಯಾಗಿದ್ದು, ಅದರಲ್ಲಿ ಮಹಿಳಾ ಹೋರಾಟಗಾರ್ತಿಯರು ಇದ್ದರು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತಿಳಿಸಿದೆ.

    ನಾಲ್ಕು ಮಹಿಳೆಯರನ್ನು ಹತ್ಯೆ ಮಾಡಲಾಗಿದ್ದು, ಅವರ ಶವವು ನಗರದ ಮನೆಯೊಂದರಲ್ಲಿ ಪತ್ತೆಯಾಗಿದೆ. ಈಗಾಗಲೇ ಮಹಿಳೆಯರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸೈಯದ್ ಖೋಸ್ತಿ ತಿಳಿಸಿದರು.

    ಬಂಧಿತ ಆರೋಪಿಗಳು ಪೊಲೀಸರು ಪ್ರಾಥಮಿಕ ವಿಚಾರಣೆ ಮಾಡಿದಾಗ ಮಹಿಳೆಯರನ್ನು ಮನೆಗೆ ಕರೆಸಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಪ್ರಕರಣವನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಲಾಗಿದೆ ಎಂದರು.

    ಮಜಾರ್-ಇ-ಶರೀಫ್‍ನ ಮೂಲಗಳ ಪ್ರಕಾರ, ಸತ್ತವರಲ್ಲಿ ಒಬ್ಬರು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ವಿಶ್ವವಿದ್ಯಾನಿಲಯದ ಉಪನ್ಯಾಸಕ ಫ್ರೋಜನ್ ಸಫಿ ಎಂದು ಹೇಳಲಾಗುತ್ತಿದೆ. ಇವರು ನಗರದಲ್ಲಿ ಹೆಸರುವಾಸಿಯಾಗಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಎಲ್ಲಿ ಹೋಗಿದ್ದಾರೆ ಕಾಣಿಸ್ತಿಲ್ಲ: ಸುಧಾಕರ್ ಪ್ರಶ್ನೆ

    ಅಂತರರಾಷ್ಟ್ರೀಯ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ಈ ಕುರಿತು ಮಾತನಾಡಿದ್ದು, ನನಗೆ ಮೂರು ವಾರಗಳ ಹಿಂದೆ ವಿದೇಶದಲ್ಲಿ ಸುರಕ್ಷಿತವಾಗಿರಲು ನನ್ನ ಪ್ರಯತ್ನಗಳಲ್ಲಿ ನೆರವು ನೀಡುವಂತೆ ಯಾರೋ ಒಬ್ಬರಿಂದ ಕರೆ ಬಂದಿತ್ತು. ನನ್ನ ಬಗ್ಗೆ ಅವರು ಎಲ್ಲ ಮಾಹಿತಿಯನ್ನು ತಿಳಿದುಕೊಂಡಿದ್ದರು. ನನ್ನ ದಾಖಲೆಗಳನ್ನು ಕಳುಹಿಸಲು ಕೇಳಿದರು. ಆದರೆ ನಾನು ಅವರನ್ನು ಪ್ರಶ್ನಿಸಿದೆ, ಅದಕ್ಕೆ ಅವರು, ನನಗೆ ಯುಎಸ್ ಗೆ ಮಾಹಿತಿಯನ್ನು ನೀಡುವ ಉಸ್ತುವಾರಿ ವಹಿಸಿರುವ ರೀತಿ ನಮ್ಮ ಕಚೇರಿಯ ಅಧಿಕಾರಿಯಂತೆ ನಟಿಸಿದರು ಎಂದು ಹೇಳಿದರು.

    ಅನುಮಾನ ಬಂದ ನಂತರ ನಾನು ಆ ಕರೆಯನ್ನು ಬ್ಲಾಕ್ ಮಾಡಿದ್ದು, ಈಗ ಭಯದಲ್ಲಿ ಬದುಕುತ್ತಿದ್ದೇನೆ. ಈ ಹತ್ಯೆಯ ಬಗ್ಗೆ ಕೇಳಿದಾಗ ನನಗೆ ಇನ್ನೂ ಆಘಾತಕ್ಕೆ ಬಳಗಾಗಿದ್ದೇನೆ. ನಾನು ಈಗಾಗಲೇ ಹೆದರುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಮಾನಸಿಕ ಆರೋಗ್ಯ ಸರಿಯಿಲ್ಲ. ಯಾರಾದರೂ ನನ್ನ ಮನೆ ಬಾಗಿಲಿಗೆ ಬಂದು ನನ್ನನ್ನು ಎಲ್ಲೋ ಕರೆದೊಯ್ದು ಗುಂಡು ಹಾರಿಸಬಹುದು ಎಂದು ನಾನು ಯಾವಾಗಲೂ ಹೆದರುತ್ತೇನೆ ಎಂದು ಹೇಳಿದರು.

    ಹಿಂದಿನ ಯುಎಸ್ ಬೆಂಬಲಿತ ಸರ್ಕಾರದ ವಿರುದ್ಧ 20 ವರ್ಷಗಳ ಯುದ್ಧದ ನಂತರ ಆಗಸ್ಟ್‍ನಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ಆಳವಾದ ಸಂಪ್ರದಾಯವಾದಿ ಇಸ್ಲಾಮಿಸ್ಟ್ ಚಳುವಳಿಯಾಗಿದೆ. ಅವರ ಕಳೆದ ಆಳ್ವಿಕೆಯ ಅವಧಿಯಲ್ಲಿ, ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ನಿಷೇಧಿಸಲಾಗಿತು. ಮತ್ತೆ ಸರ್ಕಾರಕ್ಕೆ ಮರಳಿದ ನಂತರ ಅನೇಕ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಇದನ್ನೂ ಓದಿ: ಸೂಟ್ಕೇಸ್ ತೆಗೆದು ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ!

    ಉಳಿದಿರುವ ಕೆಲವು ಮಹಿಳೆಯರು ಕಾಬೂಲ್‍ನಲ್ಲಿ ತಮ್ಮ ಹಕ್ಕುಗಳನ್ನು ಗೌರವಿಸಬೇಕು. ಹುಡುಗಿಯರು ಸಾರ್ವಜನಿಕ ಪ್ರೌಢಶಾಲೆಗಳಿಗೆ ಹೋಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದರೆ ಇದನ್ನು ತಾಲಿಬಾನ್‍ಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದು ಅಲ್ಲದೇ ಈ ಕುರಿತು ಮಾಧ್ಯಮಗಳು ವರದಿ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬಂಧಿಸುವುದಾಗಿ ಬೆದರಿಕೆ ಹಾಕಿದೆ.

  • ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು

    ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು

    ಬಿಹಾರ: ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವಾಗಲೇ ಪಕ್ಷೇತರ ಅಭ್ಯರ್ಥಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

    ಶಿಯೋಹರ್ ನ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದ ಜನತಾದಳ ರಾಷ್ಟ್ರವಾದಿ ಪಕ್ಷದ ಅಭ್ಯರ್ಥಿ ನಾರಾಯಣ್ ಸಿಂಗ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

    ನಾರಾಯಣ್ ಅವರು ಅಕ್ಟೋಬರ್ 28 ರಂದು ನಿಗದಿಯಾಗಿದ್ದ ಮತದಾನದ ಮೊದಲ ಹಂತದ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಆಗಮಿಸಿದ್ದ ಇಬ್ಬರು ಹಂತಕರು ನಾರಾಯಣ್ ಸಿಂಗ್ ಅವರ ಮೇಲೆ ಗುಂಡುಹಾರಿಸಿ ಹತ್ಯೆಗೈದಿದ್ದಾರೆ.

    ಶನಿವಾರ ಪೂರ್ಣಿಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹತ್ಸರ್ ಗ್ರಾಮದಲ್ಲಿ ಮತ ಚಲಾಯಿಸಲು ನಾರಾಯಣ್ ಬಂದಿದ್ದರು. ಈ ವೇಳೆ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

    ಎದೆಗೆ ಗುಂಡು ಬಡಿದ ಕಾರಣ ಬೆಂಬಲಿಗರು ನಾರಾಯಣ್ ಸಿಂಗ್ ಅವರನ್ನು ಶಿಯೋಹರ್ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾರಾಯಣ್ ಅವರ ಸ್ಥಿತಿ ಗಂಭಿರವಾದ ಕಾರಣ ನಂತರ ಅವರನ್ನು ಸೀತಾಮರ್ಹಿಯಲ್ಲಿರುವ ನಂದಿತ್ ಮೆಮೋರಿಯಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು ಆದರೆ ದಾರಿಯ ಮಧ್ಯದಲ್ಲೆ ನಾರಾಯಣ್ ಕೊನೆ ಉಸಿರು ಎಳೆದಿದ್ದಾರೆ. ವೈದ್ಯರು ನಾರಾಯಣ್ ಸಾವನ್ನು ಖಚಿತ ಪಡಿಸಿದ್ದಾರೆ.

    ಈ ವೇಳೆ ನಾರಾಯಣ್ ಸಿಂಗ್‍ನ ಇಬ್ಬರು ಸಹಚರರಿಗೆ ಬುಲೆಟ್ ಬಿದ್ದು ಗಾಯಗಳಾಗಿವೆ. ಇವರನ್ನು ಶಿಯೋಹರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ನಾರಾಯಣ್ ಸಿಂಗ್ ಮೆಲೆ ಗುಂಡಿನ ಸುರಿಮಳೆ ಗೈದಿರುವ ದುಷ್ಕರ್ಮಿಗಳಲ್ಲಿ ಓರ್ವನನ್ನು ಬೆಂಬಲಿಗರು ಹೊಡೆದು ಕೊಂದಿದ್ದಾರೆ. ಕೊಲೆಯಾದ ನಾರಾಯಣ್ ಸಿಂಗ್ ಮೇಲೆ 24 ಕ್ರಿಮಿನಲ್ ಕೇಸ್ ದಾಖಲಾಗಿತ್ತು.

  • ಗುಂಡಿನ ಚಕಮಕಿ – 7 ಮಾವೋವಾದಿಗಳ ಹತ್ಯೆ

    ಗುಂಡಿನ ಚಕಮಕಿ – 7 ಮಾವೋವಾದಿಗಳ ಹತ್ಯೆ

    ರಾಯ್ಪುರ್: ಛತ್ತೀಸ್‍ಗಢ ರಾಜ್ಯದ ರಜ್ನಂದ್‍ಗಾಂವ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಏಳು ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ.

    ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಸಿತ್ಗೋಟ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ಚಕಮಕಿ 7 ಮಾವೋವಾದಿಗಳನ್ನು ಹೊಡೆದುರುಳಿಸುವಲ್ಲಿ ಭದ್ರತಾ ಸಿಬ್ಬಂದಿ ಯಶಶ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಂದು ಬೆಳಗ್ಗೆ ಸಿತ್ಗೋಟಾ ಗ್ರಾಮದ ಬಘ್ನದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಿಲ್ಲಾ ಭದ್ರತಾ ಮೀಸಲು ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 7 ಜನ ಮವೋವಾದಿಗಳು ಸಾವನ್ನಪ್ಪಿದ್ದಾರೆ. ಮಾವೋವಾದಿಗಳು ಅಡಗಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ಡೆಪ್ಯೂಟಿ ಇನ್ಸ್‍ಪೆಕ್ಟರ್ ಜನರಲ್ ಪಿ.ಸುಂದರ್‍ರಾಜ್ ತಿಳಿಸಿದ್ದಾರೆ.

    ಈವರೆಗೆ ಏಳು ಜನರ ಶವಗಳು, ಒಂದು ಎಕೆ-47 ಗನ್ ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಸ್ಥಳದಲ್ಲಿ ಪತ್ತೆಯಾಗಿವೆ. ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಕಾರ್ಯಾಚರಣೆ ಪೂರ್ಣಗೊಂಡ ನಂತರ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಸುಂದರ್‍ರಾಜ್ ಹೇಳಿದ್ದಾರೆ.

  • ನಾನೇ ತಲೆಗೆ ಎರಡು ಸುತ್ತು ಗುಂಡು ಹಾರಿಸಿದೆ: ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ತಪ್ಪೊಪ್ಪಿಗೆ

    ನಾನೇ ತಲೆಗೆ ಎರಡು ಸುತ್ತು ಗುಂಡು ಹಾರಿಸಿದೆ: ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ತಪ್ಪೊಪ್ಪಿಗೆ

    ನವದೆಹಲಿ: ವಿಚಾರವಾದಿ ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ಶರದ್ ಕಲಾಸ್ಕರ್ ತಪ್ಪೊಪ್ಪಿಕೊಂಡಿದ್ದು, ದಾಬೋಲ್ಕರ್ ಅವರ ತಲೆಗೆ ನಾನೇ ಎರಡು ಸುತ್ತು ಗುಂಡು ಹಾರಿಸಿದೆ ಎಂದು ಹೇಳಿದ್ದಾನೆ.

    ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ನಡೆದು 6 ವರ್ಷಗಳ ನಂತರ ಇದೀಗ ಆರೋಪಿ ಶರದ್ ಕಲಸ್ಕರ್ ಕರ್ನಾಟಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಎರಡು ಸುತ್ತು ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದೇನೆ. ಒಂದು ಬಾರಿ ಹಿಂದಿನಿಂದ, ಇನ್ನೊಂದು ಬಾರಿ ಬಲ ಭಾಗದಿಂದ ಗುಂಡು ಹಾರಿಸಿದ್ದೇನೆ ಎಂದು ಕಲಸ್ಕರ್ ಹೇಳಿಕೊಂಡಿದ್ದಾನೆ.

    ತಪ್ಪೊಪ್ಪಿಗೆ ಸಂದರ್ಭದಲ್ಲಿ ಆರೋಪಿಯೂ ಇನ್ನೂ ಭಯಾನಕವಾದ ಮಾಹಿತಿ ಬಹಿರಂಗ ಪಡಿಸಿದ್ದು, ನರೇಂದ್ರ ದಾಬೋಲ್ಕರ್ ಮಾತ್ರವಲ್ಲದೆ, ವಿಚಾರವಾದಿ ಗೋವಿಂದ್ ಪನ್ಸಾರೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿಯೂ ಭಾಗಿಯಾಗಿರುವುದಾಗಿ ಶರದ್ ಕಲಾಸ್ಕರ್ ಬಾಯ್ಬಿಟ್ಟಿದ್ದಾನೆ.

    ಶರದ್ ಕಲಾಸ್ಕರ್‍ನನ್ನು ಕಳೆದ ವರ್ಷ ಕೊಲೆ ಹಾಗೂ ಪಿತೂರಿಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ವಿಚಾರವಾದಿ ಹತ್ಯೆಯಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಮೊದಲ ಮೂವರು ವಿಚಾರವಾದಿಗಳು 2013 ಮತ್ತು 2015ರಲ್ಲಿ ಕೊಲೆಯಾಗಿದ್ದಾರೆ. ದಾಬೋಲ್ಕರ್ ಅವರನ್ನು ಆಗಸ್ಟ್ 2013ರಲ್ಲಿ ಪುಣೆಯಲ್ಲಿ, ಗೋವಿಂದ್ ಪನ್ಸಾರೆ ಅವರನ್ನು 2015ರ ಫೆಬ್ರವರಿಯಲ್ಲಿ ಮತ್ತು ಎಂ.ಎಂ.ಕಲಬುರ್ಗಿ ಅವರನ್ನು ಅದೇ ವರ್ಷ ಆಗಸ್ಟ್‍ನಲ್ಲಿ ಕೊಲೆ ಮಾಡಲಾಗಿತ್ತು.

    ಮಹಾರಾಷ್ಟ್ರ ಭದ್ರತಾ ನಿಗ್ರಹ ದಳ ಪಾಲ್ಘರ್ ಜಿಲ್ಲೆಯ ನಲ್ಲಸೋಪುರದ ಪಿಸ್ತೂಲು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ವೇಳೆ ಶರದ್ ಕಲಸ್ಕರ್ ನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಎಲ್ಲ ವಿಚಾರವಾದಿಗಳ ಹತ್ಯೆ ಕುರಿತು ವಿವಿಧ ರಾಜ್ಯಗಳ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಂಡು ತನಿಖೆ ನಡೆಸಬೇಕಿತ್ತು. ಆದರೆ, ಅಧಿಕಾರಿಗಳು ಎಡವಿದ್ದರು. ನಂತರ ಕರ್ನಾಟಕ ಪೊಲೀಸರ ಜೊತೆ ಮಾಹಿತಿ ಹಂಚಿಕೊಂಡರು.

    ಕೆಲ ಬಲಪಂಥೀಯ ಸದಸ್ಯರನ್ನು ಸಂಪರ್ಕಿಸಿ, ಕ್ರ್ಯಾಶ್ ಕೋರ್ಸ್, ಬಂದೂಕುಗಳ ಬಳಕೆ ಹಾಗೂ ಬಾಂಬ್ ತಯಾರಿಸುವ ಪ್ರಕ್ರಿಯೆ ಕುರಿತು ಕಲಿತುಕೊಂಡೆ ಎಂದು ತಪ್ಪೊಪ್ಪಿಗೆ ಪತ್ರದಲ್ಲಿ ಕೊಲೆಗೆ ಕಾರಣಗಳನ್ನು ವಿವರಿಸುವಾಗ ಶರದ್ ಕಲಾಸ್ಕರ್ ತಿಳಿಸಿದ್ದಾನೆ ಎಂದು ವರದಿಯಾಗಿದೆ.

    ಏನು ಹೇಳಿದ್ದಾನೆ?
    ಎಲ್ಲ ವಿಚಾರವಾದಿಗಳ ಕೊಲೆಗೆ ವಿರೇಂದ್ರ ತಾವ್ಡೆ ಸೂತ್ರಧಾರಿ. ತಾವ್ಡೆ ಕೊಲೆ ಮಾಡುವಂತೆ ಯುವಕರನ್ನು ಪ್ರೇರೆಪಿಸುತ್ತಿದ್ದರು. ನಾವು ಕೆಲವು ದುಷ್ಟರನ್ನು ಮುಗಿಸಬೇಕಿದೆ ಎಂದು ವಿರೇಂದ್ರ ತಾವ್ಡೆ ಹೇಳಿದ್ದಾರು. ಅವರೇ ಎಲ್ಲ ರೀತಿಯ ಪಿತೂರಿ ಹೆಣೆದಿದ್ದು, ಯುವಕರನ್ನು ಕೊಲೆಗೆ ಪ್ರೇರೆಪಿಸಿದ್ದಾರೆ.

    ದಾಬೋಲ್ಕರ್ ತಲೆಗೆ ಗುಂಡು ಹಾರಿಸುವಂತೆ ತಾವ್ಡೆ ಅವರೇ ಹೇಳಿದ್ದರು. ಅದರಂತೆ ತಲೆಗೆ ಗುಂಡು ಹಾರಿಸಿದೆವು. ಹೀಗಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ದಾಬೋಲ್ಕರ್ ಬೆಳಗ್ಗೆ ವಾಕಿಂಗ್ ಹೋದಾಗ ತಡೆದು ತಲೆಗೆ ಗುಂಡು ಹಾರಿಸಿದೆವು

    ದಾಬೋಲ್ಕರ್ ಹತ್ಯೆಗೆ ದೇಸಿ ಬಂದೂಕು ಬಳಸಿದ್ದು, ತಲೆಗೆ ಹಿಂದಿನಿಂದ ಒಂದು ಬಾರಿ ಗುಂಡು ಹಾರಿಸಿದ ತಕ್ಷಣ ದಾಬೋಲ್ಕರ್ ಸೇತುವೆ ಮೇಲೆ ಬಿದ್ದರು. ಇನ್ನೊಂದು ಗುಂಡನ್ನು ಬಲದಿಂದ ಹೊಡೆಯಲೆತ್ನಿಸಿದೆ ಆದರೆ, ಅದು ಸಿಲುಕಿಕೊಂಡಿತು. ನಂತರ ಗುಂಡು ತೆಗೆದು ರಕ್ತದ ಮಡುವಿನಲ್ಲಿದ್ದ ದಾಬೋಲ್ಕರ್ ಮುಖದ ಬಲಗಣ್ಣಿನ ಭಾಗಕ್ಕೆ ಹೊಡೆದೆನು. ನಂತರ ಬಂದ ಎರಡನೇ ಶೂಟರ್ ಸಚಿನ್ ಅಂಡುರೆ ಕೂಡ ಗುಂಡು ಹಾರಿಸಿದ.

    ತಪ್ಪೊಪ್ಪಿಗೆ ಪ್ರಕಾರ ವೀರೇಂದ್ರ ತಾವ್ಡೆ ಅವರು ಕಲಾಸ್ಕರ್‍ನನ್ನು ಅಮೋಲ್ ಕಾಳೆಗೆ ಪರಿಚಯಿಸಿದ್ದಾನೆ. ಅಮೋಲ್ ಕಾಳೆಯನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಲ್ಲದೆ, ಗೌರಿ ಲಂಕೇಶ್ ಹತ್ಯೆ ಯೋಜನೆ ರೂಪಿಸಲು ನಡೆದ ಸಭೆಯಲ್ಲಿ ಭಾಗವಹಿಸಿದ್ದೆ.

    2016ರ ಆಗಸ್ಟ್‍ನಲ್ಲಿ ಬೆಳಗಾವಿಯಲ್ಲಿ ಹಿಂದೂ ಧರ್ಮದ ವಿರುದ್ಧ ಕೆಲಸ ಮಾಡುವ ಜನರನ್ನು ಹೆಸರಿಸಲಾಗಿತ್ತು. ಈ ಸಭೆಯಲ್ಲಿ ಗೌರಿ ಲಂಕೇಶ್ ಹೆಸರೂ ಸಹ ಕೇಳಿಬಂದಿತ್ತು. ಅಲ್ಲಿಯೇ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ನಂತರ 2017ರ ಆಗಸ್ಟ್‍ನಲ್ಲಿ ನಡೆದ ಸಭೆಯಲ್ಲಿ ಯೋಜನೆಗಳನ್ನು ಅಂತಿಮಗೊಳಿಸಿ, ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು. ಸಭೆ ನಡೆದು ಒಂದು ತಿಂಗಳ ನಂತರ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ.

    ವಿಚಾರಣೆ ವೇಳೆ ಇನ್ನೊಂದು ಭಯಾನಕ ಅಂಶವನ್ನು ಕಲಾಸ್ಕರ್ ಬಹಿರಂಗಪಡಿಸಿದ್ದು, ಬಾಂಬೆ ಹೈ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ನ್ಯಾ.ಬಿ.ಜಿ.ಭೋಸ್ಲೆ ಪಾಟೀಲ್ ಅವರನ್ನು ಗುರಿಯಾಗಿಸುವ ಯೋಜನೆ ಇದೆ ಎಂದು ತಿಳಿಸಿದ್ದಾನೆ.

  • ಗೋಣಿ ಚೀಲದಲ್ಲಿ ರುಂಡ – ಕೊಲೆಯಾದ ಮಂಗ್ಳೂರು ಮಹಿಳೆಯ ಗುರುತು ಪತ್ತೆ

    ಗೋಣಿ ಚೀಲದಲ್ಲಿ ರುಂಡ – ಕೊಲೆಯಾದ ಮಂಗ್ಳೂರು ಮಹಿಳೆಯ ಗುರುತು ಪತ್ತೆ

    ಮಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಅಪರಿಚಿತ ಮಹಿಳೆಯ ಕೊಲೆಗೈದು ದೇಹವನ್ನು ತುಂಡರಿಸಿ ನಗರದ ಎರಡು ಕಡೆ ಎಸೆದು ಹೋಗಲಾಗಿತ್ತು.

    ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕದ್ರಿ ಪಾರ್ಕ್ ಬಳಿ ಎಸೆದು ಹೋಗಿದ್ದ ಗೋಣಿಚೀಲದಲ್ಲಿ ಮಹಿಳೆಯ ರುಂಡ ಪತ್ತೆಯಾಗಿದ್ದರೆ, ಮಂಗಳಾದೇವಿಯ ನಂದಿಗುಡ್ಡದ ಬಳಿ ಸಿಕ್ಕಿದ ಗೋಣಿಚೀಲದಲ್ಲಿ ಶವದ ನಗ್ನ ದೇಹದ ಭಾಗಗಳಿದ್ದವು.

    ಕೂಡಲೇ ತನಿಖೆ ನಡೆಸಿದ ಮಂಗಳೂರಿನ ಪೊಲೀಸರು ಶವವಾಗಿ ಪತ್ತೆಯಾದ ವ್ಯಕ್ತಿ ಮಂಗಳಾದೇವಿ ಬಳಿಯ ಮಂಕಿಸ್ಟಾಂಡ್ ನಿವಾಸಿ ಶ್ರೀಮತಿ ಶೆಟ್ಟಿಯ ಶವ ಎಂದು ಗುರುತಿಸಿದ್ದಾರೆ. 37 ವರ್ಷದ ಶ್ರೀಮತಿ ಶೆಟ್ಟಿ ಗಂಡನಿಂದ ವಿಚ್ಛೇದನ ಪಡೆದಿದ್ದು ಮನೆಯಲ್ಲಿ ತಂದೆಯ ತಂಗಿಯ ಜೊತೆ ವಾಸವಿದ್ದರು.

    ನಗರದ ಅತ್ತಾವರದಲ್ಲಿ ಸ್ವಂತ ಇಲೆಕ್ಟ್ರಿಕಲ್ ಶಾಪ್ ಹೊಂದಿದ್ದ ಶ್ರೀಮತಿಯ ಶೆಟ್ಟಿಯ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಮಾಜಿ ಪತಿ ಸುದೀಪ್ ಕಳ್ಳತನ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಮಂಗಳೂರಿನ ಜೈಲಿನಲ್ಲಿದ್ದಾನೆ. ಇದೀಗ ಪ್ರಕರಣದ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆಯ ನೇತೃತ್ವ ವಹಿಸಿದ್ದಾರೆ.

    ಈ ಕೊಲೆಗೆ ವೈಯಕ್ತಿಕ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿ ದೇಹವನ್ನು ಬಿಸಾಡಿದ್ದಾರೆ ಎಂದರೆ ಏನೋ ಗಂಭೀರ ವಿಚಾರ ಇರುವ ಸಾಧ್ಯತೆಯಿದೆ.

  • ಹಾಡಹಗಲೇ ನಡು ರಸ್ತೆಯಲ್ಲಿ ಮಾವ, ಪತ್ನಿ ಮೇಲೆ ಮಚ್ಚು ಬೀಸಿದ ಅಳಿಯ

    ಹಾಡಹಗಲೇ ನಡು ರಸ್ತೆಯಲ್ಲಿ ಮಾವ, ಪತ್ನಿ ಮೇಲೆ ಮಚ್ಚು ಬೀಸಿದ ಅಳಿಯ

    – ಘಟನೆ ಕಂಡು ಬೆಚ್ಚಿಬಿದ್ದ ಚನ್ನರಾಯಪಟ್ಟಣದ ಜನ

    ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಾವ ಹಾಗೂ ಪತ್ನಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ವಿಜಯ ಬ್ಯಾಂಕ್ ಬಳಿ ನಡೆದಿದೆ.

    ಪ್ರಕಾಶ್ (55) ಮೃತಪಟ್ಟ ದುರ್ದೈವಿಯಾಗಿದ್ದು, ಮಗಳು ದಿವ್ಯಾ (35) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿದ್ದಾರೆ. ಆರೋಪಿ ಅಳಿಯ ನಾಗೇಂದ್ರ ಕೃತ್ಯ ಎಸಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ.

    ಏನಿದು ಘಟನೆ?
    ದಿವ್ಯಾರನ್ನು ಕಳೆದ 6 ವರ್ಷಗಳ ಹಿಂದೆ ನಾಗೇಂದ್ರ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಿವ್ಯಾ ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು. ಪತಿಯಿಂದ ವಿಚ್ಛೇದನ ಪಡೆಯಲು ಬಯಸಿದ್ದ ಕಾರಣ ಇಂದು ವಕೀಲರ ಬಳಿ ತೆರಳಿ ಸಹಿ ಹಾಕಲು ಅಪ್ಪ, ಮಗಳು ನಗರಕ್ಕೆ ಬಂದಿದ್ದರು. ಈ ವೇಳೆ ಬೈಕಿನಲ್ಲಿ ಹಿಂಬದಿಯಿಂದ ಬಂದ ಆರೋಪಿ ನಾಗೇಂದ್ರ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.

    ಘಟನೆ ನಡೆದ ವೇಳೆ ಸಾಕಷ್ಟು ಜನರು ಸ್ಥಳದಲ್ಲೇ ಇದ್ದರೂ ಕೂಡ ಕ್ಷಣಾರ್ಧದಲ್ಲಿ ನಡೆದ ಘಟನೆಯಿಂದ ಭಯಭೀತರಾಗಿದ್ದರು. ಪತ್ನಿಯಿಂದ ವಿಚ್ಛೇದನ ಪಡೆಯಲು ಇಷ್ಟವಿಲ್ಲದ ಕಾರಣ ಆರೋಪಿ ನಾಗೇಂದ್ರ ಕೃತ್ಯ ನಡೆಸಿದ್ದಾನೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಅಲ್ಲದೇ ಕೃತ್ಯಕ್ಕೆ ಹೊಸ ಮಚ್ಚು ಕೂಡ ಖರೀದಿ ಮಾಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ಪ್ರಕಾಶ್ ಅವರ ಕತ್ತಿನ ಭಾಗಕ್ಕೆ ಗಂಭೀರವಾದ ಗಾಯವಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಇಬ್ಬರ ಮೇಲೆ ಹಲ್ಲೆ ನಡೆಸಿದ ನಾಗೇಂದ್ರ ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

    https://www.youtube.com/watch?v=NCdmjBRRt60

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • RSS, ನಿತಿನ್ ಗಡ್ಕರಿ ಸೇರಿ ಮೋದಿ ಹತ್ಯೆಗೆ ಪ್ಲಾನ್ – ಜೆಎನ್‍ಯು ವಿದ್ಯಾರ್ಥಿನಿ ಆರೋಪ

    RSS, ನಿತಿನ್ ಗಡ್ಕರಿ ಸೇರಿ ಮೋದಿ ಹತ್ಯೆಗೆ ಪ್ಲಾನ್ – ಜೆಎನ್‍ಯು ವಿದ್ಯಾರ್ಥಿನಿ ಆರೋಪ

    ನವದೆಹಲಿ: ಪ್ರಧಾನಿ ಮೋದಿ ಅವರನ್ನು ಆರ್ ಎಸ್‍ಎಸ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ ಹತ್ಯೆ ಮಾಡಲು ಪ್ಲಾನ್ ರೂಪಿಸಿದಂತೆ ಕಾಣುತ್ತಿದೆ ಎಂದು ಜೆಎನ್‍ಯು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶೀಲಾ ರಶೀದ್ ಟ್ವೀಟ್ ಮಾಡಿದ್ದಾರೆ.

    ವಿವಿಯ ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆಯಾಗಿರುವ ಶೀಲಾ ಶನಿವಾರ ವಿವಾದತ್ಮಾಕ ಟ್ವೀಟ್ ಮಾಡಿದ್ದು, ಆರ್ ಎಸ್‍ಎಸ್ ಮತ್ತು ನಿತೀನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕೊಲೆಯನ್ನು ಮಾಡಲು ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಆದರೆ ಇದನ್ನು ಮುಸ್ಲಿಂ ಹಾಗೂ ಇತರೇ ಸಮುದಾಯಗಳ ಮೇಲೆ ಆರೋಪ ಮಾಡಲಾಗ್ತಿದೆ ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    https://twitter.com/Shehla_Rashid/status/1005373847636303872

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಸಮಾಜ ವಿರೋಧಿ ಅಂಶಗಳನ್ನು ಪ್ರಚಾರ ನಡೆಸುತ್ತಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    https://twitter.com/Shehla_Rashid/status/1005502570779967489

    ವಿವಾದತ್ಮಾಕ ಟ್ವೀಟ್ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಶೀಲಾ ರಶೀದ್, ತಮ್ಮ ಕಟು ಟ್ವೀಟ್ ಬಳಿಕ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷದ ನಾಯಕರು ಸಹ ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಗೆಯೇ ಉಮರ್ ಖಲೀದ್ ಎಂಬ ಜೆಎನ್‍ಯು ವಿದ್ಯಾರ್ಥಿ ಮೇಲೆ ಇಂತಹದ್ದೇ ಆರೋಪ ಮಾಧ್ಯಮಗಳಿಂದ ಕೇಳಿ ಬಂದಾಗ ಅವರ ಸ್ಥಿತಿ ಹೇಗಾಗಿರುತ್ತದೆ ಎಂದು ಊಹೆ ಮಾಡಿ. ಸದ್ಯ ಕೇಂದ್ರ ಸಚಿವ ಗಡ್ಕರಿ ಅವರು ಈ ಕುರಿತು ಕ್ರಮಕೈಗೊಳ್ಳುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾವೋವಾದಿಗಳು ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿರುವ ರೀತಿಯಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಪುಣೆ ಪೊಲೀಸರು ಮಾಹಿತಿ ಬಹಿರಂಗ ಪಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

  • ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ನಕ್ಸಲರ ಸಂಚು!

    ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ನಕ್ಸಲರ ಸಂಚು!

    ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವ ಸಂಚನ್ನು ನಕ್ಸಲರು ರೂಪಿಸಿದ್ದರು ಎಂಬ ಆತಂಕಕಾರಿ ಮಾಹಿತಿ ಈಗ ಬೆಳಕಿಗೆ ಬಂದಿದೆ.

    ಡಿಸೆಂಬರ್ ನಲ್ಲಿ ನಡೆದ ಭೀಮ-ಕೋರೆಗಾನ್ ಹಿಂಸಾಚಾರ ಹಾಗೂ ನಕ್ಸಲರ ಜೊತೆ ಸಂಬಂಧ ಹೊಂದಿರುವ ಹಿನ್ನಲೆಯಲ್ಲಿ ಪೊಲೀಸರು ಒಟ್ಟು ಐದು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದರು. ಇದರಲ್ಲಿ ದಲಿತ ಮುಖಂಡನಾದ ಸುಧೀರ್ ಧಾವಲೆ, ವಕೀಲ ಸುರೇಂದ್ರ ಗಾದ್ಲಿಂಗ್, ಮಹೇಶ್ ಶಾವತ್, ಸೋಮಸೇನ ಮತ್ತು ರೋನ ವಿಲ್ಸನ್ ಇವರನ್ನು ಮುಂಬೈ, ನಾಗ್ಪುರ ದೆಹಲಿಯ ನಿವಾಸದಲ್ಲಿ ಬಂಧಿಸಿದ್ದರು.

    ದೆಹಲಿಯಲ್ಲಿ ಬಂಧನಕ್ಕೆ ಒಳಗಾದ ರೋನ್ ವಿಲ್ಸನ್ ನ ಮನೆಯನ್ನು ಪರಿಶೀಲಿಸಿದಾಗ ನಕ್ಸಲರಿಗೆ ಸೇರಿದ ಪತ್ರವೊಂದು ಸಿಕ್ಕಿತ್ತು. ಈ ಪತ್ರದಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿ ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವ ಕುರಿತು ಬರೆಯಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪತ್ರದಲ್ಲಿ ಏನಿತ್ತು?
    ಪ್ರಧಾನಿ ಮೋದಿಯವರು ಭಾರತದಲ್ಲಿ ಹಿಂದುತ್ವದ ಮುಂದಾಳತ್ವವನ್ನು ವಹಿಸಿದ್ದಾರೆ. ಇದು ಅನೇಕ ಆದಿವಾಸಿಗಳ ಜೀವಕ್ಕೆ ಕುತ್ತಾಗಿದೆ. ಬಿಹಾರ ಹಾಗೂ ಪಶ್ಚಿಮ ಬಂಗಾಳ ಹೊರತು ಪಡಿಸಿ ಮೋದಿಯವರು ದೇಶಾದ್ಯಂತ ಅಧಿಕಾರ ವಿಸ್ತರಿಸುತ್ತಿದ್ದು ಪ್ರಸ್ತುತ 15 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಮುಂದಿನ ದಿನಗಳಲ್ಲಿ ಇದರಿಂದ ನಮಗೆ ಹೆಚ್ಚಿನ ಹಾನಿಯುಂಟಾಗುತ್ತದೆ. ಆದರಿಂದ ಮೋದಿಯವರ ರೋಡ್ ಶೋ ಹಾಗೂ ಸಮಾರಂಭಗಳಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲೇ ಅವರ ಮೇಲೆ ದಾಳಿ ಮಾಡಿ ಹೊಡೆದು ಹಾಕಬೇಕು ಹಾಗೂ ಈ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲಗೊಳ್ಳಬಾರದು ಎಂದು ಬರೆಯಲಾಗಿದೆ.

    ಈ ರೀತಿಯ ದಾಳಿ ನಡೆಸಲು ಸುಮಾರು 8 ಕೋಟಿ ರೂಪಾಯಿಯ ಅಗತ್ಯವಿದ್ದು ಇದರಲ್ಲಿ ಎಂ-4 ಮಾದರಿಯ ಅತ್ಯಾಧುನಿಕ ರೈಫಲ್ಸ್ ಅವಶ್ಯಕತೆಯಿದೆ ಇದೆ ಎಂದು ಉಲ್ಲೇಖಿಸಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‍ನ ಸಂಜಯ್ ನಿರುಪಮ್ “ಈ ಪತ್ರವು ನಕ್ಸಲರದ್ದೇ ಎಂದು ಅಧಿಕೃತ ಮಾಹಿತಿ ಸಿಕ್ಕಿಲ್ಲ ಇದನ್ನು ಸುಳ್ಳು ಎಂದು ನಾನು ಹೇಳುತ್ತಿಲ್ಲ. ಕೇವಲ ಇದು ಮೋದಿಯವರ ತಂತ್ರವಾಗಿದ್ದು, ಮುಖ್ಯಮಂತ್ರಿಯಾಗಿದ್ದಾಗಿಂದಲೂ ತಮ್ಮ ಜನಪ್ರಿಯೆ ಕಡಿಮೆಯಾದಾಗ ಈ ರೀತಿ ಸುದ್ದಿಗಳನ್ನು ಹುಟ್ಟಿಸಿ ಪ್ರಚಾರಗಿಟ್ಟಿಸಿಕೊಳ್ಳುತ್ತಾರೆ. ಈ ಕುರಿತು ಸಮಗ್ರ ತನಿಖೆ ನಡೆದ ಬಳಿಕ ನಿಜಾಂಶ ತಿಳಿಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

    ರಾಜೀವ್ ಹತ್ಯೆ ಹೇಗೆ ನಡೆದಿತ್ತು?
    ಪ್ರಧಾನಿ ರಾಜೀವ್ ಗಾಂಧಿಯವರನ್ನು 1991ರ ಮೇ 21ರಂದು ತಮಿಳುನಾಡಿನ ಚೆನ್ನೈನ ಪೆರಂಬದೂರಿನಲ್ಲಿ ನಡೆದ ಸಮಾರಂಭದಲ್ಲಿ ಎಲ್‍ಟಿಟಿಇ ಸಂಘಟನೆಗೆ ಸೇರಿದ ಮಹಿಳೆಯು ಪ್ರಧಾನಿಯವರಿಗೆ ಹಾರಹಾಕುವ ವೇಳೆ ತನ್ನನ್ನು ತಾನೇ ಸ್ಫೋಟಿಸಿಕೊಳ್ಳುವ ಮೂಲಕ ಹತ್ಯೆ ಮಾಡಿದ್ದಳು.

  • ಮೋದಿ ಕೊಂದು ಭಾರತದ ವಿಭಜನೆ: ಉಗ್ರರಿಗೆ ಹಫೀಜ್ ಸಯೀದ್ ಕರೆ

    ಮೋದಿ ಕೊಂದು ಭಾರತದ ವಿಭಜನೆ: ಉಗ್ರರಿಗೆ ಹಫೀಜ್ ಸಯೀದ್ ಕರೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು ಜಮಾತ್-ಉದ್-ದವ(ಜೆಯುಡಿ) ನಿಷೇಧಿತ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹೇಳಿದ್ದಾನೆ.

    ರಂಜಾನ್ ಪ್ರಯುಕ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪೂಂಚ್ ಜಿಲ್ಲೆಯ ರಾವಲ್ಕೋಟ್‍ನ ಸಾರ್ವಜನಿಕ ಸಮಾರಂಭದಲ್ಲಿ ಹಫಿಜ್ ಸಯೀದ್ ಈ ಹೇಳಿಕೆಯನ್ನು ನೀಡಿದ್ದಾನೆ.

    ಸಂಘಟನೆಯ ಹಿರಿಯ ಮುಖಂಡನಾದ ಮೌಲಾನ ಬಶೀರ್ ಅಹ್ಮದ್ ಖಾಖಿ, ಇಸ್ಲಾಂನ ಬಾವುಟವನ್ನು ಶೀಘ್ರವೇ ಭಾರತ ಮತ್ತು ಅಮೆರಿಕಾ ದೇಶದಲ್ಲಿ ಹಾರಿಸಿತ್ತೇವೆ. ಭಾರತದ ಪ್ರಧಾನಿ ಮೋದಿಯವರನ್ನು ಕೊಂದು ಹಾಕಿ, ಭಾರತ ಮತ್ತು ಇಸ್ರೇಲ್ ವಿಭಜನೆಯಲ್ಲಿ ಹೆಚ್ಚು ಮಂದಿ ಹುತಾತ್ಮರಾಗುತ್ತೇವೆ ಎಂದು ಎಂದು ಖಾಸಗಿ ಸುದ್ದಿ ವಾಹಿನಿಗೆ ಹೇಳಿಕೆ ನೀಡಿದ್ದಾನೆ.

    ರಂಜಾನ್ ತಿಂಗಳು ನಮಗೆ ಪವಿತ್ರ ದಿನವಾಗಿದ್ದು, ಈ ಸಮಯದಲ್ಲಿ ಜಿಹಾದ್(ಯುದ್ಧ) ನಡೆಸಿದರೆ ಗೆಲುವು ನಮ್ಮದೆ. ಒಂದು ವೇಳೆ ಜಿಹಾದ್‍ನಲ್ಲಿ ಹುತಾತ್ಮರಾದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ. ಸಂಘಟನೆಯು ಈಗಾಗಲೇ ಭಾರತ ಸೇನೆಯೊಂದಿಗೆ ಕಾಶ್ಮೀರ ವಿಭಜನೆಗೋಸ್ಕರ ಹೋರಾಟ ನಡೆಯುತ್ತಿದೆ. ಕಾಶ್ಮೀರ ಸ್ವಾತಂತ್ರ್ಯ ಮತ್ತು ಭಾರತದ ನಾಶಕ್ಕೆ ಮತ್ತು ಇಸ್ಲಾಂ ಧ್ವಜ ಹಾರಿಸಲು ಸಂಘಟನೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಜನರಲ್ಲಿ ಸಯೀದ್ ಮನವಿ ಮಾಡಿದ್ದಾನೆ.

    ರಂಜಾನ್ ತಿಂಗಳಲ್ಲಿ ದವಸ-ಧಾನ್ಯ ಹಾಗೂ ಹಣ ನೀಡಬೇಕು. ಕಾಶ್ಮೀರದ ಸ್ವಾತಂತ್ರ್ಯಕ್ಕೆ ತಮ್ಮ ಮಕ್ಕಳನ್ನು ಸಂಘಟನೆಗೆ ಸೇರಿಸುವಂತೆ ಮಹಿಳೆಯರಿಗೆ ಕರೆ ನೀಡಿದ್ದಾನೆ. ಇದನ್ನೂ ಓದಿ : ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

  • ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಐಇಡಿ ಸ್ಫೋಟಿಸಿ ನಾಲ್ವರು ಪೊಲೀಸರ ಹತ್ಯೆ

    ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಐಇಡಿ ಸ್ಫೋಟಿಸಿ ನಾಲ್ವರು ಪೊಲೀಸರ ಹತ್ಯೆ

    ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪೊಲೀಸರನ್ನು ಗುರಿಯಾಗಿಕೊಂಡು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸಿ 4 ಪೊಲೀಸರನ್ನು ಹತ್ಯೆ ಮಾಡಲಾಗಿದೆ.

    ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನ ಚೋಟಾ ಬಜಾರ್ ಹಾಗೂ ಬಡ ಬಜಾರ್ ಪ್ರದೇಶದ ಅಂಗಡಿಯೊಂದರ ಬಳಿ ಉಗ್ರರು ರಿಮೋಟ್ ಕಾಂಟ್ರೋಲ್ ಉಳ್ಳ ಐಇಡಿ ಯನ್ನು ಅಳವಡಿಸಿದ್ದರು. ಪೊಲೀಸರು ಗಸ್ತಿನಲ್ಲಿದ್ದ ವೇಳೆ ಈ ಸ್ಥಳಕ್ಕೆ ಬಂದಾಗ ಐಇಡಿ ಯನ್ನು ಸ್ಫೋಟಿಸಲಾಗಿದೆ. ಸ್ಫೋಟದಿಂದ 3 ಅಂಗಡಿಗಳಿಗೂ ಕೂಡ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈವರೆಗೆ ಯಾವುದೇ ಉಗ್ರಗಾಮಿ ಸಂಘಟನೆಗಳು ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ವಿಚಾರ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    1993 ರಲ್ಲಿ ಭದ್ರತಾಪಡೆಯ ಗುಂಡಿನ ದಾಳಿಯಿಂದ 57 ಮಂದಿ ಸಾವನ್ನಪ್ಪಿದ್ದ ಸಾಮೂಹಿಕ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಶನಿವಾರ ಕಾಶ್ಮೀರದ ಪ್ರತ್ಯೇಕತಾವಾದಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಹೀಗಾಗಿ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಮಾರ್ಕೆಟ್‍ನಲ್ಲಿನ ಅಂಗಡಿಗಳು ಬಂದ್ ಆಗಿದ್ದವು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಇರಲಿಲ್ಲ.

    ಘಟನೆ ಕುರಿತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದು, ಐಇಡಿ ಸ್ಫೋಟದಿಂದ ನಾಲ್ವರು ಪೊಲೀಸರು ಸಾವನ್ನಪ್ಪಿರುವ ವಿಷಯ ಕೇಳಿ ನೋವಾಗಿದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.