Tag: Assam

  • ದೇಶದ ಉದ್ದದ ರೈಲು, ರಸ್ತೆ ಸೇತುವೆ ಉದ್ಘಾಟಿಸಿ ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟ ಮೋದಿ

    ದೇಶದ ಉದ್ದದ ರೈಲು, ರಸ್ತೆ ಸೇತುವೆ ಉದ್ಘಾಟಿಸಿ ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟ ಮೋದಿ

    – 32 ಮೀಟರ್ ಎತ್ತರದಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ನಿರ್ಮಾಣ
    – 37 ಗಂಟೆಯ ದೂರ ಇನ್ನು 3 ಗಂಟೆಯಲ್ಲಿ ಕ್ರಮಿಸಬಹುದು
    – ಏಷ್ಯಾದ 2ನೇ ಉದ್ದದ ಸೇತುವೆ

    ನವದೆಹಲಿ: ಭಾರತದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.

    ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಇದು ಉಳಿದ ಸೇತುವೆಗಳಂತಲ್ಲ. ಬೋಗಿಬೀಲ್ ಸೇತುವೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. 16 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಲ್ಲಿಗೆ ಬಂದಿದ್ದರು. ಒಟ್ಟಾರೆ ಈ ಯೋಜನೆಯ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. 2004ರಲ್ಲಿ ಅಟಲ್ ಜೀ ಆಡಳಿತಾವಧಿ ಮುಗಿದ ಬಳಿಕ ಮೂಲಭೂತ ಸೌಕರ್ಯದಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ ಎಂದು ಹೇಳಿದರು. ಇದನ್ನು ಓದಿ: ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ಆಹ್ವಾನವಿಲ್ಲ – ಎಚ್‍ಡಿಡಿ ಅಸಮಾಧಾನ

    ಬ್ರಹ್ಮಪುತ್ರ ನದಿಗೆ ಕಳೆದ ಆರು ದಶಕಗಳಲ್ಲಿ ಕೇವಲ ಮೂರು ಸೇತುವೆ ನಿರ್ಮಾಣಗೊಂಡಿದ್ದು, ಎನ್‍ಡಿಎ ಸರ್ಕಾರ ಬಂದ ಮೇಲೆ ಮೂರು ಸೇತುವೆ ಕೆಲಸವನ್ನು ಪೂರ್ಣಗೊಳಿಸಿದೆ. ಇದೇ ವರ್ಷ ಮೇ ತಿಂಗಳಿನಲ್ಲಿ ಅಸ್ಸಾಂನಲ್ಲಿ ಧೋಲಾ ಸಾಡಿಯಾ ಸೇತುವೆಯನ್ನು ಉದ್ಘಾಟಿಸಿ, ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು ಎಂದು ತಿಳಿಸಿದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ಕೇಂದ್ರ ಸರ್ಕಾರವು ಉತ್ತಮ ಆಡಳಿತ ದಿನವೆಂದು ಘೋಷಿಸಿದೆ. ಹೀಗಾಗಿ ಅಟಲ್ ಜೀ ಚಾಲನೆ ನೀಡಿದ್ದ ಬೋಗಿಬೀಲ್ ಸೇತುವೆಯನ್ನು ಅವರ ಜನ್ಮದಿಂದೇ ಉದ್ಘಾಟನೆ ಮಾಡಲಾಗಿದೆ.

    ವಾಜಪೇಯಿ ಅವರು 2002ರಲ್ಲಿಯೇ ಅಸ್ಸಾಂ-ಅರುಣಾಚಲ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು 4.9 ಕಿ.ಮೀ. ಉದ್ದ ಸೇತುವೆಗೆ ಚಾಲನೆ ನೀಡಿದ್ದರು. ಈ ಯೋಜನೆ 16 ವರ್ಷದ ಬಳಿಕ ಪೂರ್ಣಗೊಂಡಿದೆ.

    ಅಸ್ಸಾಂನ ದಿಬ್ರೂಗಡದ ಬಳಿ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಭಾರತೀಯ ರೈಲ್ವೇ ಇಲಾಖೆ ನಿರ್ಮಿಸಿದ್ದು, ಏಷ್ಯಾದ 2ನೇ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಅಸ್ಸಾಂನ ದಿಬ್ರೂಗಡದಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಒಟ್ಟು 4.94 ಕಿಮೀ ಉದ್ದವಿದೆ. ಈ ಸೇತುವೆ ನಿರ್ಮಾಣದಿಂದ ಚೀನಾ ಗಡಿಯಲ್ಲಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲ ಪಡಿಸಲು ಸಾಧ್ಯವಾಗಲಿದೆ. ಅಲ್ಲದೇ ರೈಲ್ವೇ ಹಾಗೂ ರಸ್ತೆ ಸೇತುವೆ ಎರಡು ಹೊಂದಿರುವುದರಿಂದ ಪ್ರಯಾಣಿಕರ ಸಮಯವೂ ಉಳಿತಾಯವಾಗಲಿದೆ.

    ಬ್ರಹ್ಮಪುತ್ರಾ ನದಿಯ ನೀರಿನ ಮಟ್ಟದಿಂದ 32 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸೇತುವೆಯ ಮೇಲ್ಭಾಗದಲ್ಲಿ ಮೂರು ಪಥಗಳ ರಸ್ತೆ ಹಾಗೂ ಕೆಳಭಾಗದಲ್ಲಿ ಎರಡು ಹಳಿಗಳ ರೈಲು ಮಾರ್ಗ ನಿರ್ಮಿಸಲಾಗಿದೆ.

    ಯೋಜನೆ ಹಿನ್ನೆಲೆ:
    1997 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಎಚ್.ಡಿ ದೇವೇಗೌಡ ಅವರು ಸೇತುವೆ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮಾಡಿದ್ದರು. 2002 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ 7 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಸದ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿದೆ.

    ಯೋಜನೆಯ ನಿರ್ಮಾಣದ ವೇಗವನ್ನು ಹೆಚ್ಚಿಸಲು 2007 ರಲ್ಲಿ ಅಂದಿನ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿತ್ತು. ಆದರೂ ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಅಂದು 2018 ಮಾರ್ಚ್ ಪೂರ್ಣಗೊಳಿಸುವ ಗಡುವು ಹಾಕಿಕೊಳ್ಳಲಾಗಿತ್ತು.

    ಅನುಕೂಲ ಹೇಗೆ?
    ಸೇತುವೆ ನಿರ್ಮಾಣದಿಂದ ಪ್ರಯಾಣದ ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಸಮಯ ಉಳಿತಾಯ ಆಗಲಿದೆ. ಈ ಮೊದಲು ದಿಬ್ರೂಗಡದಿಂದ ಅರುಣಾಚಲ ಪ್ರದೇಶಕ್ಕೆ ಹೋಗಲು ಗುವಾಹಟಿ ಮೂಲಕ ಸಾಗಬೇಕಿತ್ತು. ಈ ಮಾರ್ಗದ 500 ಕಿಮೀ ಆಗಿತ್ತು. ಆದರೆ ಸೇತುವೆ ನಿರ್ಮಾಣದಿಂದ ಎರಡು ನಗರಗಳ ಪ್ರಯಾಣ ದೂರ 100 ಕಿಮೀ ಗಿಂತ ಕಡಿಮೆ ಆಗಲಿದೆ. ಅಲ್ಲದೇ ದಿಬ್ರೂಗಡದಿಂದ ದೆಹಲಿಗೆ ಪ್ರಯಾಣದ ಸಮಯ (ಗುವಾಹಟಿ ಮೂಲಕ) 37 ಗಂಟೆ. ಆದರೆ ಸೇತುವೆ ಮೂಲಕ ಕೇವಲ 3 ಗಂಟೆಯಲ್ಲಿ ಸಾಗಬಹುದಾಗಿದೆ.

    ಪ್ರಮುಖವಾಗಿ ಈ ಸೇತುವೆ ಈಶಾನ್ಯ ರಾಜ್ಯಗಳಲ್ಲಿ ದೇಶದ ಸೈನ್ಯಕ್ಕೆ ಹೆಚ್ಚಿನ ಬಲ ತುಂಬಲಿದೆ. ಈ ಮೊದಲು ನದಿಯನ್ನು ಬೋಟ್ ಮೂಲಕ ದಾಟಲು 1 ಗಂಟೆ ಸಮಯ ಬೇಕಾಗಿತ್ತು. ಆದರೆ ಈಗ ರಸ್ತೆ ಮಾರ್ಗದ ಮೂಲಕ ಕೇವಲ 5 ನಿಮಿಷದಲ್ಲಿ ದಾಟಬಹುದಾಗಿದೆ. ಉಳಿದಂತೆ ಆರಂಭದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಆರಂಭದಲ್ಲಿ 1,767 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಆದರೆ ಸದ್ಯ ಸೇತುವೆ ಅಂತಿಮ ಗೊಳ್ಳುವ ವೇಳೆಗೆ ಯೋಜನೆ ವೆಚ್ಚ ಸುಮಾರು 6 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. 2012ಕ್ಕೆ ಕಾಮಗಾರಿ ಆರಂಭಗೊಂಡು 2014ರ ವೇಳೆಗೆ ಶೇ.58 ರಷ್ಟು ಕೆಲಸ ಮುಗಿದಿದ್ದರೆ ಈ ಸರ್ಕಾರ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ಆಹ್ವಾನವಿಲ್ಲ – ಎಚ್‍ಡಿಡಿ ಅಸಮಾಧಾನ

    ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ಆಹ್ವಾನವಿಲ್ಲ – ಎಚ್‍ಡಿಡಿ ಅಸಮಾಧಾನ

    ಬೆಂಗಳೂರು: ನಾನು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಸಮಾಧಾನ ಹೊರ ಹಾಕಿದ್ದಾರೆ.

    ಜೆಪಿ ಭವನದಲ್ಲಿ ಮಾತನಾಡಿದ ಅವರು ಬೋಗಿಬೀಲ್ ಸೇತುವೆ ಉದ್ಘಾಟನೆ ಕುರಿತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಯಾರೊಬ್ಬರೂ ಅಸ್ಸಾಂನಲ್ಲಿ ನಡೆಯುತ್ತಿರುವ ಬೋಗಿಬೀಲ್ ಸೇತುವೆ ಉದ್ಘಾಟನೆಗೆ ಆಹ್ವಾನಿಸಿಲ್ಲ. ನಾವು ಮಾಡಿದ ಕೆಲಸವನ್ನು ಯಾರು ನೆನಪು ಇಟ್ಟುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ಅವರು ಅದು ದೊಡ್ಡ ವಿಷಯವಲ್ಲ ಬಿಡಿ ಎಂದು ಕಿಡಿಕಾರಿದರು. ಇದನ್ನು ಓದಿ: ಬೋಗಿಬೀಲ್ ಸೇತುವೆ ವಿಶೇಷತೆ ಏನು?

    ಕಾಶ್ಮೀರ ರೈಲ್ವೇ, ದೆಹಲಿ ಮೆಟ್ರೋ ಯೋಜನೆಗಳನ್ನು ನಾನೇ ಮಂಜೂರು ಮಾಡಿದ್ದೆ. ನನ್ನ ಕಾಲದಲ್ಲಿಯೇ ಅದಕ್ಕೆ ಹಣ ಬಿಡುಗಡೆ ಮಾಡಿ, ಅಡಿಗಲ್ಲು ಹಾಕಿಸಿದ್ದೆ. ಈಗ ಅದೆಲ್ಲವನ್ನೂ ಮರೆತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    1997ರಲ್ಲಿ ಶಂಕುಸ್ಥಾಪನೆ ಮಾಡಿ ಸೇತುವೆ ನಿರ್ಮಾಣ ತಡವಾಗಿದ್ದು ಏಕೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಅದೆಲ್ಲ ಡಿಫರೆಂಟ್ ವಿಷಯ ಎಂದು ಉತ್ತರಿಸಿ, ನಾನು ಹಾಸನ-ಮೈಸೂರು ಯೋಜನೆಯನ್ನು 13 ತಿಂಗಳು ಮುಗಿಸಿದೆ. ನಿಗದಿತ ಸಮಯದಲ್ಲಿ ಅನೇಕ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ಅವುಗಳಲ್ಲಿ ಅನಗವಾಡಿ ಸೇತುವೆ ಕೂಡ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಹೋಗಿ ಅನಗವಾಡಿ ಸೇತುವೆ ನೋಡಿಕೊಂಡು ಬರಲಿ ಎಂದು ವ್ಯಂಗ್ಯವಾಡಿದರು.

    ದೇವೇಗೌಡ ಮುಂಬೈ ಕರ್ನಾಟಕಕ್ಕೆ ಏನು ಮಾಡಿಲ್ಲ ಅಂತ ಅನೇಕರು ಮಾತನಾಡುತ್ತಾರೆ. ಅಂತವರು ಕೂಡ ಅನಗವಾಡಿ ಸೇತುವೆ ನೋಡಿಕೊಂಡು ಬರಲಿ. ಆಗ ನಾನು ಏನು ಮಾಡಿದ್ದೇನೆ ಅಂತ ಅವರಿಗೆ ಅರ್ಥವಾಗುತ್ತದೆ. ಅನಗವಾಡಿ ಸೇತುವೆ ಅಷ್ಟೇ ಅಲ್ಲದೆ ನನ್ನ ಆಡಳಿತದ ಅವಧಿಯಲ್ಲಿ ಮುಂಬೈ ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದೇನೆ. ಆದರೂ ನಾನು ಕೆಲಸ ಮಾಡಿಲ್ಲ, ಮಾಡಿಲ್ಲ ಅಂತ ಆರೋಪಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಡಿ ಶಂಕುಸ್ಥಾಪನೆಗೈದಿದ್ದ ದೇಶದ ಉದ್ದದ ರೈಲು, ಸೇತುವೆ ಮುಂದಿನ ವಾರ ಲೋಕಾರ್ಪಣೆ!

    ಎಚ್‍ಡಿಡಿ ಶಂಕುಸ್ಥಾಪನೆಗೈದಿದ್ದ ದೇಶದ ಉದ್ದದ ರೈಲು, ಸೇತುವೆ ಮುಂದಿನ ವಾರ ಲೋಕಾರ್ಪಣೆ!

    – 32 ಮೀಟರ್ ಎತ್ತರದಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ನಿರ್ಮಾಣ
    – 37 ಗಂಟೆಯ ದೂರ ಇನ್ನು 3 ಗಂಟೆಯಲ್ಲಿ ಕ್ರಮಿಸಬಹುದು
    – ಏಷ್ಯಾದ 2ನೇ ಉದ್ದದ ಸೇತುವೆ

    ದಿಸ್ಪುರ: ಭಾರತದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 25 ರಂದು ಉದ್ಘಾಟಿಸಲಿದ್ದಾರೆ.

    ಅಸ್ಸಾಂನ ದಿಬ್ರೂಗಡದ ಬಳಿ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಭಾರತೀಯ ರೈಲ್ವೇ ಇಲಾಖೆ ನಿರ್ಮಿಸಿದ್ದು, ಏಷ್ಯಾದ 2ನೇ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

    ಅಸ್ಸಾಂನ ದಿಬ್ರೂಗಡದಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಒಟ್ಟು 4.94 ಕಿಮೀ ಉದ್ದವಿದೆ. ಈ ಸೇತುವೆ ನಿರ್ಮಾಣದಿಂದ ಚೀನಾ ಗಡಿಯಲ್ಲಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲ ಪಡಿಸಲು ಸಹಾಯಕವಾಗಲಿದೆ. ಅಲ್ಲದೇ ರೈಲ್ವೇ ಹಾಗೂ ರಸ್ತೆ ಸೇತುವೆ ಎರಡು ಹೊಂದಿರುವುದರಿಂದ ಪ್ರಯಾಣಿಕರ ಸಮಯವೂ ಉಳಿತಾಯವಾಗಲಿದೆ.

    ಬ್ರಹ್ಮಪುತ್ರಾ ನದಿಯ ನೀರಿನ ಮಟ್ಟದಿಂದ 32 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸೇತುವೆಯ ಮೇಲ್ಭಾಗದಲ್ಲಿ ಮೂರು ಪಥಗಳ ರಸ್ತೆ ಹಾಗೂ ಕೆಳಭಾಗದಲ್ಲಿ ಎರಡು ಹಳಿಗಳ ರೈಲು ಮಾರ್ಗ ನಿರ್ಮಿಸಲಾಗಿದೆ.

    ಯೋಜನೆ ಹಿನ್ನೆಲೆ:
    1997 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಎಚ್.ಡಿ ದೇವೇಗೌಡ ಅವರು ಸೇತುವೆ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮಾಡಿದ್ದರು. 2002 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ 7 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಸದ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿದೆ.

    ಯೋಜನೆಯ ನಿರ್ಮಾಣದ ವೇಗವನ್ನು ಹೆಚ್ಚಿಸಲು 2007 ರಲ್ಲಿ ಅಂದಿನ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿತ್ತು. ಆದರೂ ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಅಂದು 2018 ಮಾರ್ಚ್ ಪೂರ್ಣಗೊಳಿಸುವ ಗಡುವು ಹಾಕಿಕೊಳ್ಳಲಾಗಿತ್ತು.

    ಅನುಕೂಲ ಹೇಗೆ?
    ಸೇತುವೆ ನಿರ್ಮಾಣದಿಂದ ಪ್ರಯಾಣದ ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಸಮಯ ಉಳಿತಾಯ ಆಗಲಿದೆ. ಈ ಮೊದಲು ದಿಬ್ರೂಗಡದಿಂದ ಅರುಣಾಚಲ ಪ್ರದೇಶಕ್ಕೆ ಹೋಗಲು ಗುವಾಹಟಿ ಮೂಲಕ ಸಾಗಬೇಕಿತ್ತು. ಈ ಮಾರ್ಗದ 500 ಕಿಮೀ ಆಗಿತ್ತು. ಆದರೆ ಸೇತುವೆ ನಿರ್ಮಾಣದಿಂದ ಎರಡು ನಗರಗಳ ಪ್ರಯಾಣ ದೂರ 100 ಕಿಮೀ ಗಿಂತ ಕಡಿಮೆ ಆಗಲಿದೆ. ಅಲ್ಲದೇ ದಿಬ್ರೂಗಡದಿಂದ ದೆಹಲಿಗೆ ಪ್ರಯಾಣದ ಸಮಯ (ಗುವಾಹಟಿ ಮೂಲಕ) 37 ಗಂಟೆ. ಆದರೆ ಸೇತುವೆ ಮೂಲಕ ಕೇವಲ 3 ಗಂಟೆಯಲ್ಲಿ ಸಾಗಬಹುದಾಗಿದೆ.

    ರೈಲ್ವೇ ಇಲಾಖೆ ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಿದ ಬಳಿಕ ಯೋಜನೆಗೆ ಅನುಮೋದನೆ ನೀಡಲಿದೆ. ಪ್ರಮುಖವಾಗಿ ಈ ಸೇತುವೆ ಈಶಾನ್ಯ ರಾಜ್ಯಗಳಲ್ಲಿ ದೇಶದ ಸೈನ್ಯಕ್ಕೆ ಹೆಚ್ಚಿನ ಬಲ ತುಂಬಲಿದೆ. ಈ ಮೊದಲು ನದಿಯನ್ನು ಬೋಟ್ ಮೂಲಕ ದಾಟಲು 1 ಗಂಟೆ ಸಮಯ ಬೇಕಾಗಿತ್ತು. ಆದರೆ ಆಗ ರಸ್ತೆ ಮಾರ್ಗದ ಮೂಲಕ ಕೇವಲ 5 ನಿಮಿಷದಲ್ಲಿ ದಾಟಬಹುದಾಗಿದೆ. ಉಳಿದಂತೆ ಆರಂಭದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಆರಂಭದಲ್ಲಿ 1,767 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಆದರೆ ಸದ್ಯ ಸೇತುವೆ ಅಂತಿಮ ಗೊಳ್ಳುವ ವೇಳೆಗೆ ಯೋಜನೆ ವೆಚ್ಚ ಸುಮಾರು 6 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಟರ್ ಸಿಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸ್ಫೋಟ – 11 ಜನ ಪ್ರಯಾಣಿಕರಿಗೆ ಗಾಯ

    ಇಂಟರ್ ಸಿಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸ್ಫೋಟ – 11 ಜನ ಪ್ರಯಾಣಿಕರಿಗೆ ಗಾಯ

    ಗುವಾಹಟಿ: ಅಸ್ಸಾಂನ ಕಾಮಾಖ್ಯ-ದೇಕರ್ ಗಾಂವ್ ಇಂಟರ್ ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ಸ್ಫೋಟ ಸಂಭವಿಸಿ 11 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

    ಗುವಾಹಟಿಯಿಂದ ಸುಮಾರು 95 ಕಿ.ಮೀ. ದೂರದ ಉದಲಗುರಿ ಜಿಲ್ಲೆಯಲ್ಲಿ ಶನಿವಾರ ಸಂಜೆ 7 ಗಂಟೆಗೆ ಘಟನೆ ನಡೆದಿದೆ. ಈ ಕುರಿತು ಮಾಹಿತಿ ಬರುತ್ತಿದ್ದಂತೆ ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಹಾಗೂ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಈಶಾನ್ಯ ರೈಲ್ವೇ ವಕ್ತಾರರು ತಿಳಿಸಿದ್ದಾರೆ.

    ಸ್ಫೋಟವು ಬಾಂಬ್ ಅಥವಾ ಶಾರ್ಟ್ ಸಕ್ರ್ಯೂಟ್‍ನಿಂದ ಸಂಭವಿಸಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡಿರುವ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಅವರಲ್ಲಿ ಓರ್ವ ಪ್ರಯಾಣಿಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಈಶಾನ್ಯ ರೈಲ್ವೇ ಪಿಆರ್‍ಒ ನೃಪೇನ್ ಭಟ್ಟಾಚಾರ್ಯ ತಿಳಿಸಿದ್ದಾರೆ.

    ಅಸ್ಸಾಂನಲ್ಲಿ ಕಳೆದ 15 ದಿನಗಳಲ್ಲಿ ಎರಡು ರೈಲ್ವೇ ಅಪಘಾತಗಳು ಸಂಭವಿಸಿವೆ. ನವೆಂಬರ್ 21ರಂದು ಗುವಾಹಟಿ-ಲೆಡೋ ಇಂಟರ್ ಸಿಟಿ ಎಕ್ಸ್‌ಪ್ರೆಸ್‌ ರೈಲು ಆನೆಗೆ ಡಿಕ್ಕಿ ಹೊಡೆದು ಹಳಿತಪ್ಪಿತ್ತು. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ರೈಲು ಡಿಕ್ಕಿ ಹೊಡೆದ ಪರಿಣಾಮ ಆನೆ ಸ್ಥಳದಲ್ಲಿಯೇ ಮೃತಪಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕರ್ತವ್ಯದ ವೇಳೆ ಹೃದಯಾಘಾತದಿಂದ ಗದಗ ಯೋಧ ವಿಧಿವಶ

    ಕರ್ತವ್ಯದ ವೇಳೆ ಹೃದಯಾಘಾತದಿಂದ ಗದಗ ಯೋಧ ವಿಧಿವಶ

    ಗದಗ: ಕರ್ತವ್ಯ ನಿರತ ವೇಳೆಯೇ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಯೋಧರೊಬ್ಬರು ಅಸ್ಸಾಂನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಬಸನಗೌಡ ಪಾಟೀಲ್ (39) ಮೃತ ಯೋಧ. ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾಗಿದ್ದು, ಕಳೆದ 19 ವರ್ಷದಿಂದ ಸಿಆರ್‍ಪಿಎಫ್ ನಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಅವರ ನಿವೃತ್ತಿಗೆ ಕೇವಲ ಒಂದೇ ವರ್ಷ ಬಾಕಿ ಇರುವಾಗಲೇ ನಿಧನರಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳುತ್ತಲೇ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಇಂದು ಅಸ್ಸಾಂನಲ್ಲಿ ಕರ್ತವ್ಯದಲ್ಲಿರುವಾಗಲೇ ಬಸನಗೌಡ ಪಾಟೀಲ್‍ಗೆ ಹೃದಯಾಘಾತವಾಗಿದ್ದು, ಕೂಡಲೇ ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಯೋಧ ಮೃತಪಟ್ಟ ಸುದ್ದಿಯನ್ನು ಸಿಆರ್‍ಪಿಎಫ್ ಅಧಿಕಾರಿಗಳು ಜಿಲ್ಲಾಡಳಿತ ಕಚೇರಿಗೆ ಮಾಹಿತಿ ನೀಡಿದ್ದು, ಸೋಮವಾರ ಸಾಯಂಕಾಲ ಸ್ವಗ್ರಾಮಕ್ಕೆ ಬಸನಗೌಡ ಪಾಟೀಲ್‍ರ ಪಾರ್ಥಿವ ಶರೀರ ಬರಲಿದೆ. ಜಿಲ್ಲಾಡಳಿತ ಯೋಧನ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಠಾಣೆಯ ಸಮೀಪದಲ್ಲೇ ಸಾಲಾಗಿ ಐವರನ್ನು ನಿಲ್ಲಿಸಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ಠಾಣೆಯ ಸಮೀಪದಲ್ಲೇ ಸಾಲಾಗಿ ಐವರನ್ನು ನಿಲ್ಲಿಸಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    – ಬದುಕುಳಿದ ವ್ಯಕ್ತಿಯಿಂದ ಬೆಳಕಿಗೆ ಬಂದ ಪ್ರಕರಣ

    ಗುವಾಹಟಿ: ಮೊಬೈಲ್, ನಗದು ನಾಣ್ಯ ನೇತುವೆ ಮೇಲೆ ನಿಲ್ಲಿಸಿ ಗುಂಡಿಕ್ಕಿ ಒಂದೇ ಕುಟುಂಬದ ಮೂವರನ್ನು ಸೇರಿ 5 ಜನರನ್ನು ಹತ್ಯೆ ಮಾಡಿದ ಘಟನೆ ಅಸ್ಸಾಂ ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ಹಂತಕರಿಂದ ತಪ್ಪಿಸಿಕೊಂಡ ವ್ಯಕ್ತಿಯೊಬ್ಬನಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಆಗಿದ್ದೇನು?:
    ಅಸ್ಸಾಂ ತಿನ್‍ಸುಕಿಯಾ ಜಿಲ್ಲೆಯ ಖೆರೋನಿಬರಿ ಗ್ರಾಮದ ಸದಿಯಾ ಸೇತುವೆ ಸಮೀಪ ಅಂಗಡಿಗೆ ಇದೆ. ಅಲ್ಲಿಗೆ ಕೆಲ ಮುಸುಕುಧಾರಿಗಳು ಗುರುವಾರ ರಾತ್ರಿ 7.30ರಿಂದ 8 ಗಂಟೆ ಸುಮಾರಿಗೆ ಬಂದಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಕುಳಿತಿದ್ದ ಆರು ಜನರನ್ನು ಸೇತುವೆಗೆ ಕರೆದುಕೊಂಡು ಹೋಗಿ, ಅವರ ಬಳಿಯಿದ್ದ ಮೊಬೈಲ್, ನಗದು ನಾಣ್ಯವನ್ನು ಕಿತ್ತುಕೊಂಡಿದ್ದಾರೆ.

    ಆರು ಜನರನ್ನು ಸಾಲಾಗಿ ಸೇತುವೆ ಮೇಲೆ ನಿಲ್ಲಿಸಿ, ಗುಂಡಿನ ದಾಳಿ ನಡೆಸಿದ್ದಾರೆ. ಅವರಲ್ಲಿ ನಾಮಸುದ್ರಾ ಎಂಬ ವ್ಯಕ್ತಿ ಸೇತುವೆಯಿಂದ ಹಾರಿ, ಪ್ರಾಣ ಉಳಿಸಿಕೊಂಡಿದ್ದಾನೆ. ಘಟನೆಯಿಂದ ಭಯಗೊಂಡಿದ್ದ ನಾಮಸುದ್ರಾ ಶುಕ್ರವಾರ ಬೆಳಗ್ಗೆ ಎಚ್ಚರಗೊಂಡು ಮನೆಗೆ ತೆರಳಿದ್ದಾನೆ. ಭಯಗೊಂಡಿದ್ದ ಆತನನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ಘಟನೆ ನಡೆದಿದ್ದು ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ. ಅಷ್ಟೇ ಅಲ್ಲದೆ ಕೊಲೆಯಾದ ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡಿದ್ದರು. ಈ ವೇಳೆ ಪೊಲೀಸರ ಮೊಬೈಲ್ ಸ್ವೀಚ್ ಆಫ್ ಅಂತಾ ಬಂದಿತ್ತು. ಹೀಗಾಗಿ ಪೊಲೀಸರ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆರವಣಿಗೆ ವೇಳೆ ಆನೆ ಮೇಲಿಂದ ನೆಲಕ್ಕುರುಳಿದ ಡೆಪ್ಯೂಟಿ ಸ್ಪೀಕರ್ – ವಿಡಿಯೋ ನೋಡಿ

    ಮೆರವಣಿಗೆ ವೇಳೆ ಆನೆ ಮೇಲಿಂದ ನೆಲಕ್ಕುರುಳಿದ ಡೆಪ್ಯೂಟಿ ಸ್ಪೀಕರ್ – ವಿಡಿಯೋ ನೋಡಿ

    ದಿಸ್ಪುರ್: ಕೆಲ ದಿನಗಳ ಹಿಂದೆ ಅಸ್ಸಾಂ ವಿಧಾನಸಭಾ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೃಪಾನಾಥ ಮಲ್ಲಾ ಆನೆ ಮೇಲಿಂದ ನೆಲಕ್ಕುರುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿರುವ ಸ್ವಕ್ಷೇತ್ರ ರತಬರಿಯಲ್ಲಿನ ಅಭಿಮಾನಿಗಳು ಭಾನುವಾರ ನೂತನವಾಗಿ ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಕೃಪಾನಾಥರನ್ನು ಆನೆ ಮೇಲೆ ಕುಳ್ಳಿರಿಸಿ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

    ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಪಾನಾಥ್ ಕೈಯಲ್ಲಿ ಬಿಜೆಪಿಯ ಬಾವುಟ ಹಿಡಿದು ಮಾವುತನ ಜೊತೆ ಆನೆ ಮೇಲೆ ಕುಳಿತಿದ್ದರು. ಈ ವೇಳೆ ಆನೆಗೆ ಅದೇನಾಯಿತೊ ಗೊತ್ತಿಲ್ಲ. ಏಕಾಏಕಿ ಮೈ ಕೊಡವಿ, ಓಡಿದ್ದರಿಂದ ಕೃಪಾನಾಥ್ ಸೇರಿದಂತೆ ಇಬ್ಬರೂ ಆನೆ ಮೇಲಿಂದ ಬಿದ್ದಿದ್ದಾರೆ. ರಸ್ತೆ ಬದಿಯ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಯಾರಿಗೂ ಯಾವುದೇ ಅನಾಹುತಗಳು ಆಗಿಲ್ಲ. ಕೂಡಲೇ ಕಾರ್ಯಕರ್ತರು ಕೃಪಾನಾತ್‍ರನ್ನು ರಕ್ಷಿಸಿದ್ದಾರೆ.

    ಬಿಜೆಪಿ ಶಾಸಕ ಆನೆ ಮೇಲಿಂದ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=quJLbdM-ihk

  • ಅಪ್ರಾಪ್ತ ಮಗನ ಮದ್ವೆ ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ!

    ಅಪ್ರಾಪ್ತ ಮಗನ ಮದ್ವೆ ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ!

    ದಿಸ್ಪುರ್: ಎಳೆ ವಯಸ್ಸಿನ ಬಾಲಕಿಯೊಂದಿಗೆ ಅಪ್ರಾಪ್ತ ಮಗನ ಬಲವಂತ ಮದುವೆಯನ್ನು ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಅಸ್ಸಾಂನ ಧುಬ್ರಿ ಎಂಬಲ್ಲಿ ನಡೆದಿದೆ.

    ಅಕ್ಟೋಬರ್ 2 ರಂದು ಬೊಟೆರ್‍ಹಟ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಶಿಮಾ ಬಿಬಿ(39) ಹಲ್ಲೆಗೊಳಗಾದ ತಾಯಿ. ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಾಲ್ಕು ದಿನಗಳ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ರಾಶಿಯಾ ಬಿಬಿ ಅವರ ಎರಡನೇ ಗಂಡನ ಮಗನಿಗೆ 19 ವರ್ಷವಾಗಿರುತ್ತದೆ. ಆತನಿಗೆ ಹದಿಹರೆಯದ ಬಾಲಕಿಯೊಂದಿಗೆ ಕೆಲವು ತಿಂಗಳುಗಳ ಹಿಂದೆ ರಾಶಿಯಾ ಎರಡನೆಯ ಗಂಡ ಮಂಟುಶೇಕ್ ಬಲವಂತವಾಗಿ ಮದುವೆ ಮಾಡಲು ಮುಂದಾಗಿದ್ದ. ಭಾರತದ ಕಾನೂನು ಪ್ರಕಾರ ಹುಡುಗ ಮದವೆಯಾಗಬೇಕಾದರೆ 21 ವರ್ಷ ಪೂರ್ಣಗೊಳ್ಳಬೇಕು. ಹೀಗಾಗಿ ರಾಶಿಯಾ ಮದುವೆಯನ್ನು ನಿಲ್ಲಿಸಲು ಹೋದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

    ಆಗಸ್ಟ್‌ನಲ್ಲಿ ನಡೆದ ಮದುವೆಯ ವಿರುದ್ಧ ರಾಶಿಯಾ ಬೀಬಿ ಪೊಲೀಸರಿಗೆ ದೂರು ನೀಡಿದ್ದರಿಂದ ಆಕೆಯ ವಿರುದ್ಧ ಎರಡನೇ ಗಂಡ ಮಂಟುಶೇಕ್ ಹಾಗೂ ಬಾಲಕಿಯ ಕುಟುಂಬದವರು ಆಕ್ರೋಶಗೊಂಡಿದ್ದರು. ಹೀಗಾಗಿ ಆಕೆಯ ಬಟ್ಟೆಯನ್ನು ಹರಿದು ಬಿಸಿ ನೀರನ್ನು ಎರಚಿ ಹಲ್ಲೆ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮಹಿಳೆಯರು ಬಿಬಿ ಅವರ ಮೇಲೆ ಹಲ್ಲೆ ಮಾಡಿ ಆಕೆಯ ಉಡುಪುಗಳನ್ನು ಹರಿಯುತ್ತಾರೆ. ಅಷ್ಟೇ ಅಲ್ಲದೇ ಆಕೆಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಯಾರೊಬ್ಬರು ಆಕೆಯನ್ನು ರಕ್ಷಿಸಲು ಬಾರದೇ ಮೂಕ ಪ್ರೇಕ್ಷಕರ ಹಾಗೆ ನೋಡುತ್ತಿರುತ್ತಾರೆ. ಹೀಗಾಗಿ ಹಲ್ಲೆಗೊಳಗಾದ ಬಿಬಿಯಾ ಮೂರನೇ ಪತಿ ಮೊಯಿಯುಲ್ ಹಕ್ ಹಲ್ಲೆ ಮಾಡಿದ್ದವರ ವಿರುದ್ಧ ದೂರು ದಾಖಲಿಸಿದ್ದು, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಗಾಯಗೊಂಡಿರುವ ರಾಶಿಯಾಳಿಗೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ್ದ 19 ಜನರ ಬಂಧನ

    ಮಹಿಳೆಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ್ದ 19 ಜನರ ಬಂಧನ

    ಗುವಾಹಟಿ: ತಪ್ಪಿತಸ್ಥ ಮಹಿಳೆಯೊಬ್ಬಳಿಗೆ ಶಿಕ್ಷೆ ನೀಡಲು ಆಕೆಯ ಗುಪ್ತಾಂಗಕ್ಕೆ ಮಹಿಳೆಯರೇ ಖಾರದಪುಡಿ ಹಾಕಿದ ಅಮಾನವೀಯ ಘಟನೆ ಅಸ್ಸಾಂನ ಕರಿಂಗಂಜ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 10ರಂದು ಘಟನೆ ನಡೆದಿದ್ದು, ಶುಕ್ರವಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಾಗಿ ಮಹಿಳೆಯರೇ ಇದ್ದಾರೆ.

    ಆಗಿದ್ದೇನು?:
    ಅಸ್ಸಾಂ-ಮಿಜೋರಾಂ ಗಡಿಭಾಗದಲ್ಲಿ ಮಹಿಳೆಯೊಬ್ಬಳು ಅಕ್ರವಾಗಿ ಮದ್ಯ ಮಾರಾಟ ಮಾಡುತ್ತಿದ್ದಳು. ಜೊತೆಗೆ ಆಕೆಯು ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಹೀಗಾಗಿ ಕೆಲ ಸ್ಥಳೀಯ ಮಹಿಳೆಯರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ 10ರಂದು ಬೆಳಗ್ಗೆ ಆರಂಭದಲ್ಲಿ, ಕೆಲವರು ಮನೆಗೆ ನುಗ್ಗಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ. ಕರಿಮ್ಗಂಜ್ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಪ್ರಕರಣ ದಾಖಲಿಸಿಕೊಂಡಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 19 ಮಹಿಳೆಯರನ್ನು ಬಂಧಿಸಲಾಗಿದೆ. ತನಿಖೆ ಚುರುಕುಗೊಂಡಿದ್ದು, ಮುಖ್ಯ ಆರೋಪಿಗಳು ಯಾರು ಎನ್ನುವುದನ್ನು ಸದ್ಯದಲ್ಲಿಯೇ ಪತ್ತೆ ಹಚ್ಚಲಾಗುವುದು. ಪ್ರಕರಣ ಪ್ರಮುಖ ಕಾರಣ ಏನು ಎನ್ನುವುದು ಖಚಿತವಾಗಿಲ್ಲ ಎಂದು ಪೊಲೀಸ್ ಅಧೀಕ್ಷಕ ಗೌರವ್ ಉಪಾಧ್ಯಾಯ್ ತಿಳಿಸಿದ್ದಾರೆ.

    ಹಲ್ಲೆ ಮಾಡಿದ ಮಹಿಳೆಯರನ್ನು ಹೊರತುಪಡಿಸಿ, ಕೃತ್ಯವನ್ನು ಸೆರೆ ಹಿಡಿದವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಭರ್ಜರಿ ಸ್ವಾಗತ ಪಡೆದ ಹಿಮಾದಾಸ್

    ಭರ್ಜರಿ ಸ್ವಾಗತ ಪಡೆದ ಹಿಮಾದಾಸ್

    -ಅಭಿಮಾನಿಗಳು ನೀಡಿದ್ರು ಬಿರುದು

    ಗುವಾಹತಿ: ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದು ಹೆಮ್ಮೆ ತಂದಿದ್ದ ಹಿಮಾದಾಸ್ ತವರಿಗೆ ಆಗಮಿಸಿದ್ದು, ಅಸ್ಸಾಂ ಸರ್ಕಾರ ಹಾಗೂ ಅಭಿಮಾನಿಗಳು ಹಿಮಾದಾಸ್‍ಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

    18 ವರ್ಷದ ಹಿಮಾದಾಸ್ ಏಷ್ಯನ್ ಗೇಮ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹಾರಾಡುವಂತೆ ಮಾಡಿದ್ದರು. ಏಷ್ಯನ್ ಗೇಮ್ಸ್ ಬಳಿಕ ಮೊದಲ ಬಾರಿಗೆ ಅಸ್ಸಾಂಗೆ ಭೇಟಿ ನೀಡಿದ ಹಿಮಾದಾಸ್‍ಗೆ ಸಿಎಂ ಸರಬಾನಂದ ಸೊನೋವಾಲ್ ಸ್ವಾಗತ ಕೋರಿದರು. ಈ ವೇಳೆ ಹಿಮಾದಾಸ್‍ಗೆ ‘ಧಿಂಗ್ ಎಕ್ಸ್ ಪ್ರೆಸ್’ ಎಂಬ ಬಿರುದು ನೀಡಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಹಲವು ರಾಜಕೀಯ ಮುಖಂಡರು ಹಾಜರಿದ್ದರು.

    ವಿಮಾನ ನಿಲ್ದಾಣದಲ್ಲಿ ಹಿಮಾದಾಸ್ ಆಗಮನಕ್ಕಾಗಿಯೇ ವಿಶೇಷ ರೆಡ್ ಕಾರ್ಪೆಟ್ ವ್ಯವಸ್ಥೆ ಮಾಡಲಾಗಿತ್ತು. ಅದರ ಮೇಲೆ 1.2.3.4.5 ಎಂದು ಸಂಖ್ಯೆ ನೀಡಿ, ರನ್ನಿಂಗ್ ಪಥದಂತೆ ಮಾಡಲಾಗಿತ್ತು. ಈ ವೇಳೆ 25 ಮಂದಿಯ ಅಸ್ಸಾಂ ವಿಶೇಷ ಮಹಿಳಾ ಪೊಲೀಸ್ ಪಡೆ ಹಿಮಾದಾಸ್‍ಗೆ ಸ್ವಾಗತ ಕೋರಿದರು. ಸಿಎಂ ಸರ್ಬಾನಂದ ಅವರು ಸಾಂಪ್ರದಾಯಿಕ ಶಾಲು ನೀಡಿ ಹಿಮಾದಾಸ್‍ಗೆ ಗೌರವ ನೀಡಿದರು.

    ಈ ವೇಳೆ ಐಷಾರಾಮಿ ಕಾರಿನಲ್ಲಿ ಮೆರವಣಿಗೆ ಮೂಲಕ ಹಿಮಾದಾಸ್‍ರನ್ನು ಕರೆದುಕೊಂಡು ಹೋಗಲಾಯಿತು. ರಸ್ತೆ ಎರಡು ಬದಿ ನೆರೆದಿದ್ದ ಅಭಿಮಾನಿಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ರಾಜಕೀಯ ನಾಯಕರು, ಸಾರ್ವಜನಿಕರು ಹಿಮಾದಾಸ್ ಹೆಸರು ಕರೆದು ಘೋಷಣೆ ಕೂಗಿದರು.

    ಹಿಮಾದಾಸ್ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀ ಓಟವನ್ನು 51.46 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಬೆಳ್ಳಿ ಪದಕ ಪಡೆದಿದ್ದರು. ಅಲ್ಲದೇ 4*400 ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಿಮಾದಾಸ್ ರನ್ನು ಅಸ್ಸಾಂ ಸರ್ಕಾರ ಕ್ರೀಡಾ ರಾಯಭಾರಿಯಾಗಿ ಆಯ್ಕೆ ಮಾಡಿ ಈ ಹಿಂದೆಯೇ ಗೌರವಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv