Tag: Assam

  • ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು: ಅಮಿತ್‌ ಶಾ

    ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು: ಅಮಿತ್‌ ಶಾ

    ದಿಸ್ಪುರ: ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ನೆನಪಿಸಿಕೊಂಡಿದ್ದಾರೆ.

    ಡೆರ್ಗಾಂವ್‌ನಲ್ಲಿ ಲಚಿತ್ ಬರ್ಫುಕನ್ ಪೊಲೀಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿತೇಶ್ವರ ಸೈಕಿಯಾ ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನನ್ನು ಬಂಧಿಸಿ ಜೈಲಿಗಟ್ಟಿದ್ದರು. 7 ದಿನ ಜೈಲೂಟ ಮಾಡುವಂತಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಸೂಚನೆ ಮೇರೆಗೆ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ: ರವಿಶಂಕರ್ ಪ್ರಸಾದ್ ಕಿಡಿ

    ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ನನ್ನನ್ನು ಥಳಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ‘ಅಸ್ಸಾಂ ಕಿ ಗಾಳಿಯಾ ಸುನಿ ಹೈ, ಇಂದಿರಾ ಗಾಂಧಿ ಖೂನಿ ಹೈ’ ಎಂದು ಘೋಷಣೆಗಳನ್ನು ಕೂಗುತ್ತಿದ್ದೆವು. ಇಂದಿರಾ ಅವರ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು ಬಂಧಿಸಿದ್ದರೆಂದು ತಿಳಿಸಿದ್ದಾರೆ.

    ನಾನು ಕೂಡ ಅಸ್ಸಾಂನಲ್ಲಿ ಏಳು ದಿನಗಳ ಕಾಲ ಜೈಲೂಟ ತಿಂದಿದ್ದೇನೆ. ಆಗ ದೇಶಾದ್ಯಂತ ಅಸ್ಸಾಂ ಉಳಿಸಲು ಹೋರಾಟ ನಡೆದಿತ್ತು. ಇಂದು ಅಸ್ಸಾಂ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಹರ್ಯಾಣ| ಭೂ ವಿವಾದ; ಬಿಜೆಪಿ ಮಂಡಲ ಅಧ್ಯಕ್ಷನ ಭೀಕರ ಹತ್ಯೆ

    ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಲಚಿತ್ ಬರ್ಫುಕನ್ ಅವರ ಹೆಸರಿನ ನವೀಕರಿಸಿದ ಪೊಲೀಸ್ ಅಕಾಡೆಮಿಯನ್ನು ಅಮಿತ್ ಶಾ ಉದ್ಘಾಟಿಸಿದ್ದಾರೆ. ಗೃಹ ಸಚಿವರೊಂದಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಇತರರು ಇದ್ದರು.

  • ವಿದೇಶಿಯರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ

    ವಿದೇಶಿಯರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನವದೆಹಲಿ: ವಿದೇಶಿಯರು (Foreigners) ಎಂದು ಘೋಷಿತರಾದ ವ್ಯಕ್ತಿಗಳನ್ನು ಗಡಿಪಾರು ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಸ್ಸಾಂ (Assam) ಸರ್ಕಾರವನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ತರಾಟೆಗೆ ತೆಗೆದುಕೊಂಡಿತು.

    ವಿಚಾರಣೆಗೆ ವರ್ಚುವಲ್ ವಿಧಾನದ ಮೂಲಕ ಹಾಜರಿದ್ದ ಅಸ್ಸಾಂನ ಮುಖ್ಯ ಕಾರ್ಯದರ್ಶಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ, ವಿಳಾಸವಿಲ್ಲದಿದ್ದರೂ ಅವರನ್ನು ಗಡೀಪಾರು ಮಾಡಬಹುದು, ಅನಿರ್ದಿಷ್ಟವಾಗಿ ಅವರನ್ನು ಬಂಧಿಸಿಟ್ಟುಕೊಂಡಿರುವಂತಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ – ವೆಂಕಟೇಶ್ ಮೌರ್ಯ

    ಒಮ್ಮೆ ಅವರನ್ನು ವಿದೇಶಿಯರೆಂದು ಪರಿಗಣಿಸಿದ ನಂತರ, ಅವರನ್ನು ತಕ್ಷಣವೇ ಗಡಿಪಾರು ಮಾಡಬೇಕು. ಅವರ ಪೌರತ್ವದ ಸ್ಥಿತಿ ನಿಮಗೆ ತಿಳಿದಿದೆ. ಹಾಗಾದರೆ ಅವರ ವಿಳಾಸ ಸಿಗುವವರೆಗೆ ನೀವೇಕೆ ಕಾಯುತ್ತೀರಿ? ಅವರು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸುವುದು ಉಳಿದ ದೇಶಕ್ಕೆ ಬಿಟ್ಟದ್ದು ಎಂದಿತು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಹೆಸರಲ್ಲಿ ಕಿರುಕುಳ ಕೊಡುವವರಿಗೆ ಬಿಸಿ ಮುಟ್ಟಿಸಲು ಶಿಕ್ಷೆ ಪ್ರಮಾಣ ಹೆಚ್ಚಳ – ಪರಮೇಶ್ವರ್

    ವಿಳಾಸವಿಲ್ಲದೇ ಹೋದಲ್ಲಿ ಆ ಜನರನ್ನು ಎಲ್ಲಿಗೆ ಗಡೀಪಾರು ಮಾಡಬೇಕೆಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯವನ್ನು ಕೇಳಿದರು. ಆಗ ನ್ಯಾಯಮೂರ್ತಿ ಓಕಾ, ನೀವು ಅವರನ್ನು ಸಂಬಂಧಪಟ್ಟ ದೇಶದ ರಾಜಧಾನಿಗೆ ಗಡಿಪಾರು ಮಾಡಿ. ಆ ವ್ಯಕ್ತಿ ಪಾಕಿಸ್ತಾನದವನಾಗಿದ್ದರೆ ನಿಮಗೆ ಪಾಕಿಸ್ತಾನದ ರಾಜಧಾನಿ ತಿಳಿದಿದೆಯೇ? ಅವರ ವಿದೇಶಿ ವಿಳಾಸ ತಿಳಿಯದೇ ಇದ್ದರೆ ಅವರನ್ನು ಇಲ್ಲಿ ಬಂಧಿಸಿದ್ದಾದರೂ ಹೇಗೆ? ಪರಿಶೀಲನಾ ವರದಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿದ ದಿನಾಂಕವನ್ನು ಏಕೆ ಉಲ್ಲೇಖಿಸಿಲ್ಲ? ಎಂದು ಕಿಡಿಕಾರಿದರು. ಇದನ್ನೂ ಓದಿ: ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ಈ ಕುರಿತು ಸೂಕ್ತ ಅಫಿಡವಿಟ್ ಸಲ್ಲಿಸಲು ಸಮಯಾವಕಾಶ ಅಗತ್ಯವಿದೆ ಎಂದು ವಕೀಲರು ಮನವಿ ಮಾಡಿದರು. ಆದರೆ ನ್ಯಾಯಾಲಯ ನಾವು ಅಸ್ಸಾಂ ಸರ್ಕಾರ ಸುಳ್ಳು ಸಾಕ್ಷ್ಯದ ನೋಟಿಸ್ ಜಾರಿ ಮಾಡುತ್ತೇವೆ. ಒಂದು ರಾಜ್ಯ ಸರ್ಕಾರವಾಗಿ, ನೀವು ಆರೋಪ ಮುಕ್ತರಾಗಬೇಕು ಎಂದು ಎಚ್ಚರಿಕೆ ನೀಡಿತು. ವಿಚಾರಣೆಯ ಒಂದು ಹಂತದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣ ರಾಜ್ಯಪಟ್ಟಿಗೆ ಬಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು. ಇದನ್ನೂ ಓದಿ: ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

    ವಿದೇಶಿ ವಿಳಾಸಗಳಿಲ್ಲದಿದ್ದರೂ ಸಹ, ಗಡಿಪಾರು ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ನ್ಯಾಯಾಲಯ ಅಸ್ಸಾಂ ಸರ್ಕಾರಕ್ಕೆ ನಿರ್ದೇಶನ ನೀಡಿತು. ರಾಷ್ಟ್ರೀಯತೆ ಪರಿಶೀಲನಾ ಪ್ರಕ್ರಿಯೆಯ ಕುರಿತು ಎರಡು ವಾರಗಳಲ್ಲಿ ದಿನಾಂಕವನ್ನೂ ಒಳಗೊಂಡಂತೆ ತೆಗೆದುಕೊಂಡ ಕ್ರಮಗಳ ವಿವರವಾದ ಅಫಿಡವಿಟ್ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸೂಚಿಸಿತು. ದೇಶಗಳೇ ಇಲ್ಲದ ವ್ಯಕ್ತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಯಿತು. ಇದನ್ನೂ ಓದಿ: ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!

  • ಅಕ್ರಮವಾಗಿ ಸೆಕ್ಸ್‌ ಮೂವಿ ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

    ಅಕ್ರಮವಾಗಿ ಸೆಕ್ಸ್‌ ಮೂವಿ ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

    ದಿಸ್ಪುರ್‌: ಅಸ್ಸಾಂನ (Assam) ಗುವಾಹಟಿಯ ಹೋಟೆಲ್‌ ಒಂದರಲ್ಲಿ ಸೆಕ್ಸ್‌ ಮೂವಿ ಶೂಟಿಂಗ್‌ ಮಾಡುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶಿ (Bangladesh) ಮಹಿಳೆ ಸೇರಿದಂತೆ ಮೂವರನ್ನು ದಿಸ್ಪುರ್ (Dispur) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಅಸ್ಸಾಂ ಮೂಲದ ಶಫಿಕುಲ್, ಜಹಾಂಗೀರ್ ಮತ್ತು ಬಾಂಗ್ಲಾದೇಶದ ನಿವಾಸಿ ಮೀನ್ ಅಖ್ತರ್ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಗುವಾಹಟಿಯ ಸೂಪರ್ ಮಾರ್ಕೆಟ್ ಪ್ರದೇಶದ ಹೋಟೆಲ್‌ ಒಂದರಲ್ಲಿ ಕೊಠಡಿಗಳನ್ನು ಬುಕ್ ಮಾಡಿದ್ದರು. ಅಲ್ಲಿ ಅವರು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿ ದಾಳಿ ನಡೆಸಿದ್ದರು.

    ಮೀನ್ ಅಖ್ತರ್ ಬಾಂಗ್ಲಾದೇಶ ಗಡಿಗೆ ಏಕಾಂಗಿಯಾಗಿ ಪ್ರಯಾಣಿಸಿ ಉದ್ಯೋಗದ ಸುಳ್ಳು ನೆಪದಲ್ಲಿ ಭಾರತವನ್ನು ಪ್ರವೇಶಿಸಿದ್ದಾಳೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆಕೆ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೇ ಅಸ್ಸಾಂಗೆ ಪ್ರವೇಶಿಸಿದ್ದಾಳೆ ಎಂದು ಆರೋಪಿಸಲಾಗಿದೆ.

    ಇದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜಾಲಗಳ ಸಂಪರ್ಕದ ಬಗ್ಗೆ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸಾರ್ವಜನಿಕವಾಗಿ ಹಸು ಕೊಂದು ಅಡುಗೆ ಮಾಡಿದ ವೀಡಿಯೋ ಹರಿಬಿಟ್ರು – ಅಸ್ಸಾಂನಲ್ಲಿ 6 ಮಂದಿ ಬಂಧನ

    ಸಾರ್ವಜನಿಕವಾಗಿ ಹಸು ಕೊಂದು ಅಡುಗೆ ಮಾಡಿದ ವೀಡಿಯೋ ಹರಿಬಿಟ್ರು – ಅಸ್ಸಾಂನಲ್ಲಿ 6 ಮಂದಿ ಬಂಧನ

    ಗುವಾಹಟಿ: ಅಸ್ಸಾಂನಲ್ಲಿ ಸಾರ್ವಜನಿಕವಾಗಿ ಹಸುವನ್ನು ಕೊಂದು ನಂತರ ಅದರ ಮಾಂಸವನ್ನು ತಿಂದ ಪ್ರಕರಣದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬ 19 ವಯಸ್ಸಿನ ಹುಡುಗ ಕೂಡ ಇದ್ದಾನೆ.

    ಸಾರ್ವಜನಿಕ ಸ್ಥಳದಲ್ಲೇ ಹಸು ಕೊಂದ ಕೃತ್ಯದ ವೀಡಿಯೋ ವೈರಲ್ ಆಗಿತ್ತು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ತಿಳಿಸಿದ್ದಾರೆ.

    ಆರೋಪಿಗಳನ್ನು ಸಾಹಿಲ್ ಖಾನ್ (20), ಹಫೀಜುರ್ ಇಸ್ಲಾಂ (19), ರೋಕಿಬುಲ್ ಹುಸೇನ್ (20), ಸಾಹಿದುಲ್ ಇಸ್ಲಾಂ (30), ಇಜಾಜ್ ಖಾನ್ (26), ಜಹಿದುಲ್ ಇಸ್ಲಾಂ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಜ್ಯದ ಕಾಮರೂಪ ಜಿಲ್ಲೆಯ ಅಸಲ್ಪಾರ ಗ್ರಾಮದ ನಿವಾಸಿಗಳು.

    ವೀಡಿಯೋದಲ್ಲಿ, ಆರೋಪಿಗಳು ದೊಡ್ಡ ಚಾಕುಗಳನ್ನು ಹರಿತಗೊಳಿಸುವುದು, ಅಡುಗೆ ಪಾತ್ರೆಗಳನ್ನು ಹೊತ್ತುಕೊಂಡು ದೋಣಿಗೆ ಹಸುವನ್ನು ಹತ್ತಿಸಿಕೊಳ್ಳುವುದನ್ನು ಕಾಣಬಹುದು. ಆ ವೀಡಿಯೋದ ಇನ್ನೊಂದು ಭಾಗದಲ್ಲಿ, ಅವರು ಪ್ರಾಣಿಯನ್ನು ಕತ್ತರಿಸಿ ನಂತರ ಅಡುಗೆ ಮಾಡುವುದನ್ನು ತೋರಿಸಲಾಗಿದೆ.

    ಈ ವೀಡಿಯೋ, ಗೋವುಗಳನ್ನು ಪವಿತ್ರವೆಂದು ಪರಿಗಣಿಸುವ ಹಿಂದೂ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. 2021 ರ ಅಸ್ಸಾಂ ಗೋ ಸಂರಕ್ಷಣಾ ಕಾಯ್ದೆಯಡಿ, ರಾಜ್ಯದಲ್ಲಿ ಅಕ್ರಮ ವಧೆ ಮತ್ತು ಜಾನುವಾರು ವ್ಯಾಪಾರವನ್ನು ನಿಷೇಧಿಸಲಾಗಿದೆ.

  • ಅಸ್ಸಾಂನ ಕಲ್ಲಿದ್ದಲು ಗಣಿ ದುರಂತ – ನಾಲ್ವರು ಕಾರ್ಮಿಕರ ಶವ ಪತ್ತೆ

    ಅಸ್ಸಾಂನ ಕಲ್ಲಿದ್ದಲು ಗಣಿ ದುರಂತ – ನಾಲ್ವರು ಕಾರ್ಮಿಕರ ಶವ ಪತ್ತೆ

    ದಿಸ್ಪುರ್‌: ಅಸ್ಸಾಂನ (Assam) ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ (Coal Mine) ಸಿಲುಕಿದ್ದ ಕನಿಷ್ಠ ಒಂಬತ್ತು ಗಣಿ ಕಾರ್ಮಿಕರಲ್ಲಿ ನಾಲ್ವರ ಶವಗಳನ್ನು ಹೊರತೆಗೆಯಲಾಗಿದೆ. ಕನಿಷ್ಠ ಐದು ಜನರು ಗಣಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಜೀವಂತವಾಗಿ ರಕ್ಷಿಸುವ ಭರವಸೆ ಇಲ್ಲ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಸೇನೆ ಮತ್ತು ರಾಷ್ಟ್ರೀಯ ವಿಪತ್ತು ಪಡೆ ಶನಿವಾರ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಒಬ್ಬರ ಶವವನ್ನು ಹೊರತೆಗೆದಿದೆ. ಮೃತನನ್ನು ಉಮ್ರಾಂಗ್ಸೊ ನಿವಾಸಿ 27 ವರ್ಷದ ಲಿಜೆನ್ ಮಗರ್ ಎಂದು ಗುರುತಿಸಲಾಗಿದೆ. ನಂತರ ಹೊರತೆಗೆಯಲಾದ ಎರಡನೇ ಶವವನ್ನು ಇನ್ನೂ ಗುರುತಿಸಲಾಗಿಲ್ಲ. ಇದಕ್ಕೂ ಮೊದಲು, ಗಂಗಾ ಬಹದ್ದೂರ್ ಶ್ರೆಷ್ಟೊ ಅವರ ಶವವನ್ನು ಮಂಗಳವಾರ ಬೆಳಗ್ಗೆ ಹೊರತೆಗೆಯಲಾಗಿತ್ತು. ಅದರ ನಂತರ, ನಿರಂತರ ನೀರು ತೆಗೆಯುವ ಪ್ರಯತ್ನಗಳು ನಡೆದಿತ್ತು.

    ಘಟನೆ ನಡೆದ ಸ್ಥಳ ಅಸ್ಸಾಂ ಮತ್ತು ಮೇಘಾಲಯದ ಗಡಿಗೆ ಹತ್ತಿರದಲ್ಲಿದೆ. 2018 ರಲ್ಲಿ ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟಗಳಲ್ಲಿ ಪ್ರವಾಹಕ್ಕೆ ಸಿಲುಕಿ 15 ಕಾರ್ಮಿಕರು ಸಾವನ್ನಪ್ಪಿದಾಗ ಈ ಪ್ರದೇಶದ ಗಣಿಗಾರಿಕೆಯಲ್ಲಿ ಅತ್ಯಂತ ಭೀಕರ ದುರಂತಗಳು ಸಂಭವಿಸಿದ್ದವು.

    ದಿಮಾ ಹಸಾವೊ ವ್ಯಾಪಕವಾದ ಕಲ್ಲಿದ್ದಲು, ಸುಣ್ಣದ ಕಲ್ಲು ಮತ್ತು ಗ್ರಾನೈಟ್ ಗಣಿಗಾರಿಕೆಗೆ ಹೆಸರುವಾಸಿಯಾಗಿದೆ.

    ಏನಿದು ಘಟನೆ?

    ಅಸ್ಸಾಂನ (Assam) ದಿಮಾ ಹಸಾವೊ ಜಿಲ್ಲೆಯಲ್ಲಿರುವ 300 ಅಡಿ ಆಳದ ರ‍್ಯಾಟ್ ಹೋಲ್ ಮೈನಿಂಗ್‌ (Rat Hole Mine) ಒಂದರಲ್ಲಿ ಜ.5 ರಂದು ನೀರು ತುಂಬಿದ್ದು, ಕಾರ್ಮಿಕರು ಸಿಲುಕಿದ್ದರು.

    ಕ್ವಾರಿಯಲ್ಲಿ ಸುಮಾರು 100 ಅಡಿ ನೀರು ತುಂಬಿದೆ ಎಂದು ಮೂಲಗಳು ತಿಳಿಸಿದ್ದವು. ಬಳಿಕ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು.

  • ಅಸ್ಸಾಂನ ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಉಕ್ಕಿದ ನೀರು – 18 ಕಾರ್ಮಿಕರು ಸಿಲುಕಿರುವ ಶಂಕೆ

    ಅಸ್ಸಾಂನ ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಉಕ್ಕಿದ ನೀರು – 18 ಕಾರ್ಮಿಕರು ಸಿಲುಕಿರುವ ಶಂಕೆ

    ದಿಸ್ಪುರ್‌: ಅಸ್ಸಾಂನ (Assam) ದಿಮಾ ಹಸಾವೊ ಜಿಲ್ಲೆಯಲ್ಲಿರುವ 300 ಅಡಿ ಆಳದ ರ‍್ಯಾಟ್ ಹೋಲ್ ಮೈನಿಂಗ್‌ (Rat Hole Mine) ಒಂದರಲ್ಲಿ ನೀರು ತುಂಬಿದ್ದು, ಸುಮಾರು 18 ಕಾರ್ಮಿಕರು ಸಿಲುಕಿದ್ದಾರೆ.

    ಕ್ವಾರಿಯಲ್ಲಿ ಸುಮಾರು 100 ಅಡಿ ನೀರು ತುಂಬಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು. ಎರಡು ಪಂಪ್‌ಗಳನ್ನು ಬಳಸಿಕೊಂಡು ನೀರನ್ನು ಖಾಲಿ ಮಾಡುತ್ತಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಧಾವಿಸಿವೆ.

    ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯ ನೆರವನ್ನು ಕೋರಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

    ರ‍್ಯಾಟ್ ಹೋಲ್ ಗಣಿಗಾರಿಕೆಯು ಅಪಾಯಕಾರಿ ತಂತ್ರವಾಗಿದ್ದು, ಕಿರಿದಾದ ಸುರಂಗಗಳನ್ನು ಕಾರ್ಮಿಕರು ಕೈಯಾರೆ ಅಗೆಯುತ್ತಾರೆ. ಈ ಸುರಂಗಗಳು ಆಳವಾದ ಹೊಂಡಗಳಿಗೆ ಕಾರಣವಾಗುತ್ತವೆ. ಇದರಿಂದ ಕಲ್ಲಿದ್ದಲು ಗಣಿಗಾರಿಕೆ ಮಾಡಲಾಗುತ್ತದೆ. ಗಣಿಗಳಿಂದ ಹೊರಸೂಸುವ ಆಮ್ಲೀಯ ನೀರು ಮತ್ತು ಭಾರೀ ಲೋಹಗಳು ಕೃಷಿ ಮತ್ತು ಮಾನವ ಬಳಕೆಗೆ ಬಳಸುವ ನೀರಿನ ಮೂಲಗಳಿಗೆ ವಿಷಕಾರಿಯಾಗಿವೆ.

    2018 ರಲ್ಲಿ ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಗೆ ಹತ್ತಿರದ ನದಿಯಿಂದ ನೀರು ನುಗ್ಗಿತ್ತು. ಸುಮಾರು 15 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 2 ಮೃತದೇಹಗಳನ್ನು ಮಾತ್ರ ತೆಗೆಯುವಲ್ಲಿ ಯಶಸ್ವಿಯಾಗಿತ್ತು.

  • ಅಸ್ಸಾಂ ಮೂಲದವರಿಂದ ಕೊಡಗಿನಲ್ಲಿ ಗಾಂಜಾ ದಂಧೆ – ಮಾಲು ಸಹಿತ ನಾಲ್ವರು ಅರೆಸ್ಟ್‌

    ಅಸ್ಸಾಂ ಮೂಲದವರಿಂದ ಕೊಡಗಿನಲ್ಲಿ ಗಾಂಜಾ ದಂಧೆ – ಮಾಲು ಸಹಿತ ನಾಲ್ವರು ಅರೆಸ್ಟ್‌

    ಮಡಿಕೇರಿ: ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಕ್ಕೇರಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಭಾಗದಲ್ಲಿ ಗಾಂಜಾ ಮಾರಾಟ (Ganja Sale) ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಹೊಕ್ಕೇರಿ ಗ್ರಾಮದಲ್ಲಿ ನೆಲೆಸಿರುವ ಅಸ್ಸಾಂ ರಾಜ್ಯ ಮೂಲದ ಸೋಫಿಕುಲ್ ಇಸ್ಲಾಂ (24) ವರ್ಷ, ಇಮ್ಮಿಯಾಜ್ ಆಲಿ (20) ರೋಹಿಥಾನ್ (50) ಹಾಗೂ ಕೋಣನಕಟ್ಟೆ-ಸುಳುಗೋಡು ಗ್ರಾಮದ ನಿವಾಸಿ ಯೂಸೂಫ್ ಆಲಿ (32) ಬಂಧಿತ ಆರೋಪಿಗಳು. ಇವರ ಬಳಯಿಂದ 2 ಕೆಜಿ 481 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಗಾಂಜಾ ಮಾರಾಟದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್‌ ಕುಮಾರ್, ಮಡಿಕೇರಿ ನಗರ ಸಿಪಿಐ ರಾಜು ಪಿ.ಕೆ, ಸಿದ್ದಾಪುರ ಪಿಎಸ್‌ಐ ರಾಘವೇಂದ್ರ ದಾಳಿ ನಡೆಸಿ. ಆರೋಪಿಗಳನ್ನು ಬಂಧಿಸಿದ್ದಾರೆ.

    ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಶ್ಲಾಘಿಸಿದ್ದಾರೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸಾಗಾಟ ಅಥವಾ ಮಾರಾಟದ ಕುರಿತು ಮಾಹಿತಿ ಇದ್ದರೆ ಪೊಲೀಸರ ಗಮನಕ್ಕೆ ತರುವಂತೆ ಎಸ್‌ಪಿ ಮನವಿ ಮಾಡಿದ್ದಾರೆ.

  • ಅಸ್ಸಾಂನಲ್ಲಿ ಅಲ್‌ ಖೈದಾ ಉಗ್ರ ಅರೆಸ್ಟ್‌ – ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

    ಅಸ್ಸಾಂನಲ್ಲಿ ಅಲ್‌ ಖೈದಾ ಉಗ್ರ ಅರೆಸ್ಟ್‌ – ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

    ದಿಸ್ಪುರ್:‌ ಅಲ್ ಖೈದಾ (Al Qaeda) ಉಗ್ರರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ವಿಶೇಷ ಕಾರ್ಯಾಚರಣೆ ಪಡೆ ಅಸ್ಸಾಂನ (Assam) ಕೊಕ್ರಜಾರ್ ಜಿಲ್ಲೆಯಲ್ಲಿ ಬಂಧಿಸಿದೆ.

    ಬಂಧಿತನನ್ನು ಗಾಜಿ ರೆಹಮಾನ್ (35) ಎಂದು ಗುರುತಿಸಲಾಗಿದೆ. ಆರೋಪಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಪ್ರಮುಖ ಸದಸ್ಯ ಎಂದು ತಿಳಿದು ಬಂದಿದೆ. ಆತ ಅಲ್‌ ಖೈದಾ ಉಗ್ರರ ಸಂಪರ್ಕದಲ್ಲಿದ್ದ. ಅಸ್ಸಾಂನ ವಿಶೇಷ ಕಾರ್ಯಪಡೆ ಆಪರೇಷನ್ ಪರ್ಘಾಟ್ ಅಡಿಯಲ್ಲಿ ಭಯೋತ್ಪಾದಕರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದೆ. ಅದರ ಭಾಗವಾಗಿ ರೆಹಮಾನ್ ಬಂಧನವಾಗಿದೆ.

    ಭಯೋತ್ಪಾದನಾ ಘಟಕದ ಕನಿಷ್ಠ 12 ಸಹಚರರನ್ನು ಇದುವರೆಗೆ ಬಂಧಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಅಸ್ಸಾಂ ಪೊಲೀಸರು ‘ಸ್ಲೀಪರ್ ಸೆಲ್’ ನೆಟ್‌ವರ್ಕ್ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಭಯೋತ್ಪಾದನಾ ಘಟಕದ ಸದಸ್ಯರು ಭಾರತದ ವಿವಿಧ ಭಾಗಗಳಲ್ಲಿ ‘ಸ್ಲೀಪರ್ ಸೆಲ್’ಗಳನ್ನು ರಚಿಸಿ ಹಿಂದೂ ಸಮುದಾಯಕ್ಕೆ ಸೇರಿದ ನಾಯಕರನ್ನು ಹತ್ಯೆ ಮಾಡಲು ಯೋಜಿಸಿದ್ದರು ಎಂದು ಪೊಲೀಸರು (Police) ತಿಳಿಸಿದ್ದಾರೆ.‌

    ಡಿ.17 ಮತ್ತು 18ರ ಮಧ್ಯರಾತ್ರಿ, ಭಯೋತ್ಪಾದನಾ ಘಟಕದ 8 ಸದಸ್ಯರನ್ನು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಂಧಿಸಲಾಗಿತ್ತು. ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನಿರ್ವಾಹಕರಾಗಿದ್ದರು ಎಂದು ವರದಿಯಾಗಿದೆ. ಡಿ.24 ರಂದು ಇತರ ಇಬ್ಬರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಮೂರು ದಿನಗಳ ನಂತರ ಮತ್ತೋರ್ವನನ್ನು ಬಂಧಿಸಲಾಗಿತ್ತು. ಅಲ್ಲದೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ಚಾಕು ಇರಿದು ಗೆಳತಿಯ ಹತ್ಯೆ – ಕೊಲೆ ಬಳಿಕ ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್‌ ಪ್ರೇಮಿ

    ಚಾಕು ಇರಿದು ಗೆಳತಿಯ ಹತ್ಯೆ – ಕೊಲೆ ಬಳಿಕ ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್‌ ಪ್ರೇಮಿ

    ದಿಸ್ಪುರ್‌: ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಅಸ್ಸಾಂನ (Assam) ಗುವಾಹಟಿಯಲ್ಲಿ ನಡೆದಿದೆ. ಕೊಲೆಯ ಬಳಿಕ ಆತ ತಾನೇ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಹತ್ಯೆಗೀಡಾದ ಮಹಿಳೆಯನ್ನು ಮೌಸುಮಿ ಗೊಗೊಯ್ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಭೂಪೇನ್ ದಾಸ್ ಎಂದು ಗುರುತಿಸಲಾಗಿದೆ. ಲೇಟ್ ಗೇಟ್ ಪ್ರದೇಶದ ಮಹಿಳೆಯ ನಿವಾಸದ ಹೊರಗೆ ಕೊಲೆ ನಡೆದಿದ್ದು, ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನನ್ನು ಶೀಘ್ರದಲ್ಲೇ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗೊಗೊಯ್ ಆ್ಯಪ್ ಮೂಲಕ ಬುಕ್ ಮಾಡಿದ್ದ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಆರೋಪಿ ಭೂಪೇನ್ ದಾಸ್ ತನ್ನ ಕಾರಿನಲ್ಲಿ ಬಂದು ಆಕೆಗೆ ಇರಿದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೂ ಯಾವುದೇ ಪ್ರಯೋಜನವಾಗಿಲ್ಲ.

    ಗೊಗೊಯ್ ಅವರು ಈ ಹಿಂದೆ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ತನಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಉಗ್ರ ಸಂಘಟನೆಗೆ ನೇಮಕಾತಿ ಕೇಸ್‌ | 5 ರಾಜ್ಯಗಳ 19 ಸ್ಥಳಗಳಲ್ಲಿ ಎನ್‌ಐಎ ಶೋಧ -ಮೂವರು ಅರೆಸ್ಟ್‌

    ಉಗ್ರ ಸಂಘಟನೆಗೆ ನೇಮಕಾತಿ ಕೇಸ್‌ | 5 ರಾಜ್ಯಗಳ 19 ಸ್ಥಳಗಳಲ್ಲಿ ಎನ್‌ಐಎ ಶೋಧ -ಮೂವರು ಅರೆಸ್ಟ್‌

    ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ಗೆ ಯುವಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಐದು ರಾಜ್ಯಗಳ 19 ಸ್ಥಳಗಳಲ್ಲಿ ಶೋಧ ನಡೆಸಿದೆ. ಜಮ್ಮು ಮತ್ತು ಕಾಶ್ಮೀರ (Jammu and Kashmir), ಅಸ್ಸಾಂ, ಮಹಾರಾಷ್ಟ್ರ (Maharashtra), ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಶಂಕಿತರ ಅಡಗುತಾಣಗಳ ಮೇಲೆ ಮುಂಜಾನೆಯೇ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಸ್ಸಾಂನ (Assam) ಗೋಲ್ಪಾರಾ ಜಿಲ್ಲೆಯಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನೊಂದಿಗೆ ಸಂಪರ್ಕ ಹೊಂದಿದ್ದ ಯುವಕನನ್ನು ಎನ್‌ಐಎ ಬಂಧಿಸಿದೆ. ಬಂಧಿತ ಯುವಕನನ್ನು ಸಹನೂರು ಆಲಂ ಎಂದು ಗುರುತಿಸಲಾಗಿದೆ. ಆಲಂನನ್ನು ಗೋಲ್ಪಾರಾದ ತುಕುರಾ ಗ್ರಾಮದಲ್ಲಿ ಬಂಧಿಸಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿದ ದಾಳಿಯ ವೇಳೆ ಅಬು ತಾಲೇಬ್ ಮತ್ತು ಝೈನಾಲ್ ಅವೆದಿನ್ ಎಂಬವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.  ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನೆರವಿನೊಂದಿಗೆ ಎನ್‌ಐಎ ಕಾರ್ಯಾಚರಣೆ ನಡೆಸಿದೆ.

    ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆಯ ವೇಳೆ ಹಲವಾರು ದೋಷಾರೋಪಣೆಯ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳು, ಕರಪತ್ರಗಳು ಮತ್ತು ನಿಯತಕಾಲಿಕೆಗಳನ್ನು ಎನ್ಐಎ ತಂಡಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಂಕಿತ ಉಗ್ರರು, ಭಯೋತ್ಪಾದಕ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದರು. ಈ ಸಂಬಂಧ ಪ್ರಚಾರದಲ್ಲಿ ತೊಡಗಿದ್ದರು. ಅಲ್ಲದೇ ಯುವಕರಿಗೆ ಭಯೋತ್ಪಾದಕ ಕೃತ್ಯಗಳಿಗೆ ತರಬೇತಿ ನೀಡುತ್ತಿದ್ದರು ಎಂದು ಎನ್ಐಎ ಹೇಳಿಕೊಂಡಿದೆ.

    ಅಕ್ಟೋಬರ್‌ 5 ರಂದು ಅಸ್ಸಾಂ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ 26 ಸ್ಥಳಗಳಲ್ಲಿ ಶೋಧ ನಡೆಸಿದ್ದ ಎನ್‌ಐಎ ಶೇಖ್ ಸುಲ್ತಾನ್ ಸಲಾಹ್ ಉದ್ದೀನ್ ಅಯೂಬಿ ಎಂಬಾತನನ್ನು ಬಂಧಿಸಿತ್ತು. ಆತನ ವಿರುದ್ಧ ಭಯೋತ್ಪಾದಕ ಕೃತ್ಯಗಳಿಗೆ ಪಿತೂರಿ ಆರೋಪ ಹೊರಿಸಲಾಗಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದ್ದ ಎನ್‌ಐಎ ತಂಡ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿತ್ತು. ಇದರ ಬೆನ್ನಲ್ಲೇ ಎನ್‌ಐಎ ಶೋಧ ಕಾರ್ಯ ಆರಂಭಿಸಿದೆ.