Tag: Assam CM

  • ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

    ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

    ಡಿಸ್ಪುರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು (Mamta Banerjee) ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೀಗ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಅವರು ಭಾರತ ಸೋಲಿಗೆ ಇಂದಿರಾ ಗಾಂಧಿಯೇ ಕಾರಣ ಎಂದು ತಿಳಿಸಿದ್ದಾರೆ.

    ನವೆಂಬರ್ 19ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ (IND Vs AUS) ನಡುವೆ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಈ ಸೋಲಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೇ ಕಾರಣ ಎಂದು ಶರ್ಮಾ ಹೇಳಿದ್ದಾರೆ. ಯಾಕೆಂದರೆ ಅಂದು ಇಂದಿರಾ ಗಾಂಧಿಯವರ (Indira Gandhi) ಜನ್ಮ ದಿನವಾಗಿದೆ. ಹೀಗಾಗಿ ಅಂದೇ ಪಂದ್ಯ ನಡೆದಿದ್ದರಿಂದ ಭಾರತ ಸೋಲನುಭವಿಸಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಪಾಪಿಗಳು ಹಾಜರಾದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ: ಮಮತಾ ಕಿಡಿ

    ಪ್ರತಿ ಪಂದ್ಯವನ್ನೂ ಗೆಲ್ಲುತ್ತಿದ್ದೆವು. ಆದರೆ ಫೈನಲ್‍ನಲ್ಲಿ ಮಾತ್ರ ಸೋತೆವು. ಆ ದಿನ ಏನಾಗಿತ್ತು? ನಾವೇಕೆ ಸೋತಿದ್ದೇವೆ? ಎಂದು ಪಂದ್ಯ ಮುಗಿದ ಮೇಲೆ ಬಂದು ನೋಡಿದೆ. ಈ ವೇಳೆ ಅಂದೇ ಇಂದಿರಾ ಗಾಂಧಿಯವರ ಜನ್ಮ ದಿನ ಇರುವುದು ಗೊತ್ತಾಯಿತು. ಆಗ ಸೋಲಿಗೆ ಕಾರಣ ಬಯಲಾಯಿತು ಎಂದು ತಮ್ಮದೇ ಶೈಲಿಯಲ್ಲಿ ನುಡಿದರು. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ

    ಇದೇ ವೇಳೆ ಮೋದಿಯವರನ್ನು ವಿರೋಧಿಸುವ ಪಕ್ಷಗಳೊಂದಿಗೆ ವಿರೋಧ ಪಕ್ಷಗಳು ಕೈಜೋಡಿಸಿವೆ ಎಂದು ಆರೋಪಿಸಿದ ಶರ್ಮಾ, ಮುಂದಿನ ದಿನಗಳಲ್ಲಿ ನೆಹರೂ-ಗಾಂಧಿ ಕುಟುಂಬದ ಸದಸ್ಯರ ಜನ್ಮದಿನದಂದು ಫೈನಲ್ ಪಂದ್ಯವನ್ನು ಆಯೋಜನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಬಿಸಿಸಿಐಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

  • ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಫೋನ್‌ ಕಾಲ್‌

    ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಫೋನ್‌ ಕಾಲ್‌

    ಸ್ಸಾಂ ಗುವಾಹಟಿಯಲ್ಲಿ `ಪಠಾಣ್’ (Pathaan) ಸಿನಿಮಾ ವಿರುದ್ಧ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. `ಪಠಾಣ್’ ಚಿತ್ರಕ್ಕೆ ತೊಂದರೆಯಾಗುತ್ತಿರುವ ಬೆನ್ನಲ್ಲೇ ಅಸ್ಸಾಂ ಸಿಎಂಗೆ (Assam Cm) ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಫೋನ್ ಕಾಲ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಹಿಂದಿ ಸಿನಿಮಾಗಳ ಬಗ್ಗೆ ಟೀಕೆ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ (Naredra Modi) ಅವರು ತಿಳಿಸಿದ್ದರು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಆದೇಶ ನೀಡಿದ್ದರು. ಈ ಬೆನ್ನಲ್ಲೇ ಗುವಾಹಟಿಯಲ್ಲಿ `ಪಠಾಣ್’ ಸಿನಿಮಾಗೆ ತೊಂದರೆಯಾಗಿದೆ. ಶಾರುಖ್‌ ಚಿತ್ರದ ವಿರುದ್ಧ ಹಿಂದೂ ಪರ ಸಂಘಟನೆಗಳು ನಿಂತಿದ್ದಾರೆ. ಚಿತ್ರದ ಪೋಸ್ಟರ್‌ಗಳನ್ನ ಹರಿದು ಹಾಕಿದ್ದಾರೆ. ಗುವಾಹಟಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ ಅಸ್ಸಾಂ ಸಿಎಂ ಬಳಿ ಶಾರುಖ್ ಫೋನ್‌ ಕಾಲ್‌ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಮೂಲಕ ಸಿಎಂ ಹಿಮಂತ್ ಬಿಸ್ವ (Himanta Biswa) ಖಚಿತಪಡಿಸಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    ಬಾಲಿವುಡ್ ನಟ ಶಾರುಖ್ ಖಾನ್ ಬೆಳಿಗ್ಗೆ 2 ಗಂಟೆಗೆ ಕರೆ ಮಾಡಿದ್ದರು. ಪಠಾಣ್ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗುವಾಹಟಿಯಲ್ಲಿ ಘಟನೆ ಬಗ್ಗೆ ನಟ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಹೊಣೆಯಾಗಿದೆ. ಇಂಥ ಅಹಿತಕರ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಸ್ಸಾಮ್ ಸಿಎಂ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಇತ್ತೀಚೆಗೆ ಶಾರುಖ್ ಖಾನ್ ಕರೆ ಮಾಡುವ ಮೊದಲೇ, ಶಾರುಖ್ ಖಾನ್ ಎಂದರೆ ಯಾರು ಎಂದು ಅಸ್ಸಾಂ ಸಿಎಂ ಪ್ರಶ್ನೆ ಮಾಡಿದ್ದರು. ʻಪಠಾಣ್ʼ ಸಿನಿಮಾ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ಕುರಿತು ಸುದ್ದಿಗಾರರ ಪ್ರಶ್ನೆ ಅಚ್ಚರಿಯ ಉತ್ತರ ನೀಡಿದ್ದರು. ಶಾರುಖ್ ಆಗಲಿ, ಅವರ ಸಿನಿಮಾಗಳ ಬಗ್ಗೆಯಾಗಲಿ ನನಗೇನು ಗೊತ್ತಿಲ್ಲ ಎಂದು ಸಿಎಂ ಉತ್ತರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ನವದೆಹಲಿ: ಅಸ್ಸಾಂ ಸಿಎಂ ಯಾರು ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಹಿಮಂತ್ ಬಿಸ್ವಾ ಶರ್ಮಾ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾಯಿತ ಎಲ್ಲ ಕಮಲ ಶಾಸಕರ ಸಹಮತದ ಮೇರೆಗೆ ಹಿಮಂತ್ ಬಿಸ್ವಾ ಶರ್ಮಾ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ. ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲರನ್ನ ಭೇಟಿಯಾಗಲಿರುವ ಹಿಮಂತ್ ಬಿಸ್ವಾ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸೋಮವಾರವೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

    ಚುನಾವಣೆ ಮತದಾನ ಆರಂಭಕ್ಕೂ ಮುನ್ನವೇ ಹಿಮಂತ್ ಬಿಸ್ವಾ ಶರ್ಮಾ ಮುಂದಿನ ಸಿಎಂ ಅನ್ನೋ ಸುದ್ದಿಗಳು ಪ್ರಕಟವಾಗಿದ್ದವು. ಆದ್ರೆ ಹಾಲಿ ಸಿಎಂ ಆಗಿದ್ದ ಸರ್ಬಾನಂದ್ ಸೋನೋವಾಲಾ ವಿರುದ್ಧ ಹೇಳಿಕೆ ನೀಡಲು ಬಿಜೆಪಿ ನಾಯಕರು ಹಿಂದೇಟು ಹಾಕಿದ್ದರು. ಇದೀಗ ಪಕ್ಷದ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಿಮಂತ್ ಬಿಸ್ವಾ ಪರವಾಗಿ ಮತ ಚಲಾಯಿಸಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸ್ಪರ್ಧೆ ಹಿನ್ನೆಲೆ ಬಹುಮತ ಪಡೆದಿದ್ರೂ ಬಿಜೆಪಿಗೆ ಸರ್ಕಾರ ರಚನೆಗೆ ಒಂದು ವಾರ ಸಮಯ ಪಡೆದುಕೊಂಡಿತ್ತು.

    ಶನಿವಾರ ಇಬ್ಬರು ನಾಯಕರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ವಿಶೇಷ ಸಭೆ ನಡೆಸಿತ್ತು. ಇನ್ನು ಸಿಎಂ ಸ್ಥಾನದಿಂದ ವಂಚಿತರಾಗಿರುವ ಸೋನೋವಾಲರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗುತ್ತಿದೆ. ಸರ್ಬಾನಂದ್ ಸೋನೋವಾಲ 2014 ರಿಂದ 2019ರವರೆಗೆ ಮೋದಿ ಅವರ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದರು.

    126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 60ರಲ್ಲಿ ಕಮಲ ಧ್ವಜ ಹಾರಿಸುವ ಮೂಲಕ ಅಸ್ಸಾಂ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿತ್ತು. ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಎಜಿಪಿ 9, ಯುಪಿಪಿಎಲ್ 6ರಲ್ಲಿ ಜಯ ಸಾಧಿಸಿವೆ.