Tag: Assam Chief Minister

  • ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    ಗಾಂಧಿನಗರ: ದೇಶದಲ್ಲಿ ಪ್ರಬಲ ನಾಯಕ ಇಲ್ಲದಿದ್ದರೇ ಅಫ್ತಾಬ್ ಅಮೀನ್ ಪೂನಾವಾಲನಂತಹ (Aftab Ameen Poonawala) ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ (Himanta Biswa Sarma) ಎಚ್ಚರಿಸಿದ್ದಾರೆ.

    ಗುಜರಾತ್ ಚುನಾವಣಾ (Gujarat Election) ಪ್ರಚಾರ ಸಭೆಯ ಭಾಗವಾಗಿ ಕಚ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು, ದೆಹಲಿಯ ಶ್ರದ್ಧಾ ಹತ್ಯೆ (Shraddha Murder Case) ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ದೇಶದಲ್ಲಿ ಪ್ರಬಲ ನಾಯಕನಿಲ್ಲದಿದ್ದರೆ, ಅಫ್ತಾಬ್‌ನಂತಹ ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ. ಆಗ ನಮ್ಮ ಸಮಾಜ ರಕ್ಷಿಸಲು ಸಾಧ್ಯವಾಗುವುದಿಲ್ಲ ಹೇಳಿದ್ದಾರೆ. ಇದನ್ನೂ ಓದಿ: ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ

    ಕೊಲೆ ಪ್ರಕರಣದ ಭೀಕರತೆಗಳನ್ನು ವಿಚಾರಸಿದಾಗ ಇದನ್ನು ಲವ್ ಜಿಹಾದ್ (Love Jihad) ಪ್ರಕರಣ ಎನ್ನಲಾಗಿದೆ. ಅಲ್ಲದೆ ಹಿಂದೂ ಮಹಿಳೆಯರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.  

    ಮೋದಿ ಪರ ಬ್ಯಾಟಿಂಗ್:
    ಮುಂಬೈನಿಂದ ಶ್ರದ್ಧಾಳನ್ನು ಕರೆದುಕೊಂಡು ಬಂದಿದ್ದ ಅಫ್ತಾಬ್ 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಇದೇ ಸಮಯದಲ್ಲಿ ಮತ್ತೊಬ್ಬ ಮಹಿಳೆಯನ್ನು ಕರೆತಂದು ಲೈಂಗಿಕ ಸಂಪರ್ಕ ಮಾಡಿದ್ದಾನೆ. ಇಂತಹ ಕೃತ್ಯಗಳಿಂದ ದೇಶವನ್ನು ರಕ್ಷಿಸಬೇಕಾದರೆ ನಮ್ಮ ದೇಶಕ್ಕೆ ಶಕ್ತಿಯುತ ನಾಯಕನನ್ನು ಹೊಂದಿರಬೇಕು, ರಾಷ್ಟ್ರವನ್ನು ತಮ್ಮ ತಾಯಿ ಎಂದು ಪರಿಗಣಿಸುವವರಾಗಿರಬೇಕು. ಹಾಗಾಗಿ 2024ರಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ (Narendra Modi) ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಬಹಳ ಮುಖ್ಯ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ಏನಿದು ಘಟನೆ?
    ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್ನಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಹೊರಬಿದ್ದಿವೆ. ಆರೋಪಿ ಅಫ್ತಾಬ್ ಹಾಗೂ ಶ್ರದ್ಧಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಮೇ 18ರಂದು ಜಗಳವಾದಾಗ ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.

    ಬಳಿಕ ದೇಹವನ್ನು ಕತ್ತರಿಸೋದು ಹೇಗೆ? ಅದನ್ನು ಡಿಎನ್‌ಎಗಳ ಸಾಕ್ಷ್ಯಾಧಾರವೂ ಸಿಗದಂತೆ ದೇಹವನ್ನ ವಿಲೇವಾರಿ ಮಾಡೋದು ಹೇಗೆ ಎಂಬ ಮಾಹಿತಿಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ನಂತರ ದೇಹವನ್ನು 35 ಪೀಸ್‌ಗಳಾಗಿ ತಂಡು ಮಾಡಿದ್ದು, ಅದನ್ನು ಸಂಗ್ರಹಿಸಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದಾನೆ. ದೇಹದ ಮಾಂಸದ ವಾಸನೆ ಹರಡಬಾರದೆಂದು ದಿನವೂ ಅಗರಬತ್ತಿ ಹಚ್ಚಿಡುತ್ತಿದ್ದ. ಈ ನಡುವೆ ಶ್ರದ್ಧಾಳನ್ನು ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್‌ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಗುವಹಾಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ (Kaziranga National Park) ಜೀಪ್ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

    ಸದ್ಗುರು ಜಗ್ಗಿ ವಾಸುದೇವ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ರಾತ್ರಿ ವಾಹನ ಚಲಾಯಿಸಿದರು ಎಂಬ ಕಾರಣಕ್ಕೆ ಅವರಿಬ್ಬರ ವಿರುದ್ಧ ಉದ್ಯಾನವನದ ಹತ್ತಿರದ ಎರಡು ಗ್ರಾಮಗಳ ಇಬ್ಬರು ನಿವಾಸಿಗಳು ದೂರು ದಾಖಲಿಸಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಪ್ರವಾಸಿಗರಿಗಾಗಿ ಶನಿವಾರ ತೆರೆಯಲಾಗಿತ್ತು. ಅಂದು ರಾತ್ರಿ ಸದ್ಗುರು ಜಗ್ಗಿ ವಾಸುದೇವ್ ಉದ್ಯಾನದ ಒಳಗೆ ಜೀಪ್ ಚಾಲನೆ ಮಾಡಿದ್ದಾರೆ. ಅವರ ಪಕ್ಕ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಳಿತಿದ್ದರು. ಅಸ್ಸಾಂ ಸಂಪುಟ ಸಚಿವ ಜಯಂತ ಮಲ್ಲ ಮತ್ತಿತರರು ಕೂಡಾ ಜೀಪ್‍ನಲ್ಲಿ ರಾತ್ರಿ ಉದ್ಯಾನದಲ್ಲಿ ಸಂಚರಿಸಿದ್ದರು. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಇದೀಗ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ (Wildlife Protection Act) ಸ್ಥಳೀಯರಾದ ಸೋನೇಶ್ವರ್ ನಾರಾ ಮತ್ತು ಪ್ರವೀಣ್ ಪೆಗು ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬೊಕಾಕಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಫಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ಎಫ್‍ಐಆರ್‌ನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳೊಂದಿಗೆ ಕೇರಳದ ಬೀದಿಗಳಲ್ಲಿ ಫುಟ್‍ಬಾಲ್ ಆಡಿದ ರಾಹುಲ್

    ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಉದ್ಯಾನದೊಳಗೆ ಜೀಪ್ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಸದ್ಗುರು ಮತ್ತು ಹಿಮಂತ ಬಿಸ್ವಾ ಶರ್ಮಾ ಜೀಪ್ ಚಾಲನೆ ಮಾಡಿದ್ದಾರೆ. ಇಂತಹ ಘಟನೆಗಳಿಂದ ಕಾಜಿರಂಗ ಮತ್ತು ಅಲ್ಲಿಯ ಪ್ರಾಣಿಗಳ ಸಂರಕ್ಷಣೆಗೆ ಅಪಾಯ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಅವರಿಬ್ಬರೂ ಸಾರ್ವಜನಿಕರರೊಂದಿಗೆ ಕ್ಷಮೆ ಕೇಳಬೇಕು. ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಆರೋಪದ ಬೆನ್ನಲ್ಲೇ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ಜೀಪ್ ಚಾಲನೆ ಮಾಡಿಲ್ಲ. ರಾತ್ರಿ ವೇಳೆ ಉದ್ಯಾನವನಕ್ಕೆ ಭೇಟಿ ಕೊಡಬಾರದೆಂದು ಕಾನೂನಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಆರೋಪವನ್ನು ಅಲ್ಲಗಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಮಾಂತ ಬಿಸ್ವಾ ಶರ್ಮಾ ರ‍್ಯಾಲಿಯಲ್ಲಿ ಮೈಕ್ ಕಿತ್ತುಕೊಂಡ ಅಪರಿಚಿತ ವ್ಯಕ್ತಿ – ವೀಡಿಯೋ ವೈರಲ್

    ಹಿಮಾಂತ ಬಿಸ್ವಾ ಶರ್ಮಾ ರ‍್ಯಾಲಿಯಲ್ಲಿ ಮೈಕ್ ಕಿತ್ತುಕೊಂಡ ಅಪರಿಚಿತ ವ್ಯಕ್ತಿ – ವೀಡಿಯೋ ವೈರಲ್

    ಹೈದರಾಬಾದ್: ಅಸ್ಸಾಂ ಮುಖ್ಯಮಂತ್ರಿ (Assam Chief Minister) ಹಿಮಾಂತ ಬಿಸ್ವಾ ಶರ್ಮಾ (Himanta Biswa Sarma) ಅವರ ರ‍್ಯಾಲಿ ವೇಳೆ ವ್ಯಕ್ತಿಯೊಬ್ಬ, ಏಕಾಏಕಿ ವೇದಿಕೆ ಮೇಲೇರಿ ಮೈಕ್‍ನ್ನು ಸ್ಟ್ಯಾಂಡ್ ನಿಂದ ಎಳೆದಾಡಿದ ಘಟನೆ ನಗರದಲ್ಲಿ ನಡೆದಿದೆ.

    ಹಿಮಾಂತ ಬಿಸ್ವಾ ಶರ್ಮಾ ಗಣೇಶ ಹಬ್ಬ ಮತ್ತು ಇತರ ಕಾರ್ಯಕ್ರಮಗಳಿಗೆ ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಅತಿಥಿಯಾಗಿ ಹೈದರಾಬಾದ್‍ನಲ್ಲಿದ್ದಾರೆ (Hyderabad). ಮುಂಜಾನೆ ನಗರದ ಪ್ರಮುಖ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಹಿಮಾಂತ ಬಿಸ್ವಾ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ (KCR) ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ರ‍್ಯಾಲಿ ವೇಳೆ ವೇದಿಕೆ ಮೇಲೆ ಬಂದ ಕೆಸಿಆರ್ ಪಕ್ಷದ ಬಣ್ಣ ಹೊಂದಿರುವ ಶಾಲು ಧರಿಸಿದ್ದ ವ್ಯಕ್ತಿ ಏಕಾಏಕಿ ಮೈಕ್ ಎಳೆದಾಡಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಹಿಮಾಂತ ಬಿಸ್ವಾ ಶರ್ಮಾ ಗಾಬರಿಗೊಂಡಂತೆ ಕಂಡು ಬಂತು. ಬಳಿಕ ಕೂಡಲೇ ವೇದಿಕೆ ಮೇಲಿದ್ದವರು ಅಪರಿಚಿತ ವ್ಯಕ್ತಿಯನ್ನು ವೇದಿಕೆಯಿಂದ ಕೆಳಗಿಳಿಸಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ಬಳಿಕ ರ‍್ಯಾಲಿಯಲ್ಲಿ ಮಾತನಾಡಿದ ಹಿಮಾಂತ ಬಿಸ್ವಾ, ಮುಖ್ಯಮಂತ್ರಿ ಕೆಸಿಆರ್ ಅವರು ಬಿಜೆಪಿ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ರಾಜವಂಶ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತೇವೆ. ಹೈದರಾಬಾದ್‍ನಲ್ಲಿ ಅವರ ಮಗ ಮತ್ತು ಮಗಳ ಚಿತ್ರಗಳನ್ನು ನೋಡುತ್ತೇವೆ. ದೇಶದ ರಾಜಕೀಯವು ರಾಜವಂಶದ ರಾಜಕೀಯದಿಂದ ಮುಕ್ತವಾಗಿರಬೇಕು. ಸರ್ಕಾರವು ದೇಶಕ್ಕಾಗಿ, ಜನರಿಗಾಗಿ ಇರಬೇಕು. ಇದನ್ನು ಹೊರತು ಪಡಿಸಿ ಒಂದು ಕುಟುಂಬಕ್ಕಾಗಿ ಇರಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬ್ರಿಟನ್ ರಾಣಿ ನಿಧನ – ಸೆ.11ಕ್ಕೆ ಭಾರತದಾದ್ಯಂತ ಶೋಕಾಚರಣೆ

    Live Tv
    [brid partner=56869869 player=32851 video=960834 autoplay=true]