Tag: assailant

  • ಮೈಸೂರು ಪಾಲಿಕೆ ಸದಸ್ಯನಿಂದ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ!

    ಮೈಸೂರು ಪಾಲಿಕೆ ಸದಸ್ಯನಿಂದ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ!

    ಮೈಸೂರು: ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಬಳಿ ಸಾಮಾಜಿಕ ಕಾರ್ಯಕರ್ತರೊಬ್ಬರ ಮೇಲೆ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ

    ಮೈಸೂರಿನ ಸುಬ್ಬರಾಯನ ಕೆರೆ ಬಳಿ ಸರ್ಕಾರೇತರ ಸಂಸ್ಥೆಯಿಂದ ‘ನೋ ಜಾಬ್ ನೋ ವೋಟ್’ ಅಭಿಯಾನ ನಡೆಯುತ್ತಿತ್ತು. ಈ ಮೂಲಕ ಸಿಎಂ ಅವರಿಗೆ ಪ್ರತಿಭಟನಾಕಾರರು ವರುಣಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದರು.

    ಈ ಸಂದರ್ಭದಲ್ಲಿ ಚಂದ್ರ ಮಿಶ್ರಾ ಎಂಬವರು ಸಿಎಂ ಭಾವಚಿತ್ರ ಹಾಕಿಕೊಂಡು ಪ್ರತಿಭಟನೆಗೆ ಸಜ್ಜಾಗಿದ್ದರು. ಈ ವೇಳೆ ವಾರ್ಡ್ ನಂಬರ್ 36 ಪಾಲಿಕೆ ಸದಸ್ಯ ಪ್ರಶಾಂತ್‍ಗೌಡ ಈ ಪ್ರತಿಭಟನೆಗೆ ತಕಾರರು ತೆಗೆದು ಹೋರಾಟಗಾರ ಚಂದ್ರ ಮಿಶ್ರಾ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಬಂದಿದೆ.

    ಈ ಬಗ್ಗೆ ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ಚಂದ್ರ ಮಿಶ್ರಾ ಅವರು ಪ್ರಶಾಂತ್ ಗೌಡರ ವಿರುದ್ಧ ದೂರು ದಾಖಲಿಸಿದ್ದಾರೆ. ಹೋರಾಟಗಾರನ ಮೇಲೆ ಹಲ್ಲೆ ಆರೋಪವನ್ನು ನಗರಪಾಲಿಕೆ ಸದಸ್ಯ ಪ್ರಶಾಂತಗೌಡ ನಿರಾಕರಿಸಿದ್ದಾರೆ. ಅನುಮತಿ ಪಡೆಯದೆ ನನ್ನ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿತ್ತು. ಈ ವೇಳೆ ಪಾಲಿಕೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದರು. ಫ್ಲೆಕ್ಸ್ ತೆರವುಗೊಳಿಸಲು ಪ್ರತಿಭಟನಾ ನಿರತರಿಂದ ವಿರೋಧ ವ್ಯಕ್ತವಾಯಿತು. ಈ ವೇಳೆ ನಾನು ವಿಚಾರಿಸಲು ಹೋಗಿದ್ದೆ. ಈ ವೇಳೆ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ ಚಂದ್ರ ಮಿಶ್ರ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಈ ವೇಳೆ ಸಾರ್ವಜನಿಕರೇ ಚಂದ್ರ ಮಿಶ್ರರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ವೇಳೆ ಹಲ್ಲೆ ನಡೆದಿರಬಹುದು ಎಂದು ಹೇಳಿದ್ದಾರೆ.

    https://www.youtube.com/watch?v=7akX9PABrmk

  • ಮಹಿಳೆಯನ್ನ ಬೆತ್ತಲೆಗೊಳಿಸಿ ಥಳಿಸಿದ ಮಹಿಳೆ, ಸಹೋದರ

    ಮಹಿಳೆಯನ್ನ ಬೆತ್ತಲೆಗೊಳಿಸಿ ಥಳಿಸಿದ ಮಹಿಳೆ, ಸಹೋದರ

    ವಿಜಯಪುರ: ಮಹಿಳೆಯೋರ್ವಳನ್ನು ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

    ಸಾವಿತ್ರಿ ದುಂಡಯ್ಯ ಗೋಡ್ಯಾಳ ಹಲ್ಲೆಗೊಳಗಾಗಿರುವ ಮಹಿಳೆ. ಸಾವಿತ್ರಿ ತಮ್ಮದೇ ಗ್ರಾಮದ ಮೌಲಾಲಿ ಎಂಬ ವ್ಯಕ್ತಿಯ ಜೊತೆ ನಿಂತುಕೊಂಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಮೌಲಾಲಿ ಪತ್ನಿ ಸುಗರಾ ಮತ್ತು ಆಕೆಯ ಸಹೋದರ ಸಿಕಂದರ್ ಇಬ್ಬರೂ ಸಾವಿತ್ರಿಯವರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಸಾವಿತ್ರಿ ನನ್ನ ಪತ್ನಿ ಮೌಲಾಲಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸುಗರಾ ಆರೋಪ ಮಾಡಿದ್ದಾರೆ.

    ಆರೋಪವನ್ನು ತಳ್ಳಿ ಹಾಕಿರುವ ಸಾವಿತ್ರಿ, ನನಗೂ ಮೌಲಾಲಿ ನಡುವೆ ಸಂಬಂಧವಿಲ್ಲ. ನಮ್ಮಿಬ್ಬರ ಮಧ್ಯೆ ಕೇವಲ ಹಣಕಾಸಿನ ವ್ಯವಹಾರವಿತ್ತು. ಸುಗರಾ ಹಾಗೂ ಸಿಕಂದರ್ ಚಾಕೂವಿನಿಂದ ನನ್ನ ಬಟ್ಟೆ ಹಾಗೂ ಮೌಲಾಲಿ ಬಟ್ಟೆ ಹರಿದುಹಾಕಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಹಲ್ಲೆಗೊಳಗಾದ ಸಾವಿತ್ರಿಯನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಇದೂವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=OmSaJj_UbpU