Tag: ASP

  • ಎಎಸ್ಪಿ ಕಾರಿಗೆ ಡಿಕ್ಕಿ – ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್

    ಎಎಸ್ಪಿ ಕಾರಿಗೆ ಡಿಕ್ಕಿ – ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್

    ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarody) ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಎಎಸ್ಪಿ (ASP) ಕಾರಿಗೆ ಹಿಂದಿನಿಂದ ಗುದ್ದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ತಿಮರೋಡಿಯ ಮೂವರು ಬೆಂಬಲಿಗರನ್ನು ಬಂಧಿಸಲಾಗಿದೆ.

    ಕಾರಿನಲ್ಲಿದ್ದ ಸೃಜನ್, ಹಿತೇಶ್ ಹಾಗೂ ಸಹನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ (Udupi) ಜಿಲ್ಲೆ ಕಾರ್ಕಾಳ (Karkala) ತಾಲೂಕಿನ ಹೊಸಮಾರು ಬಳಿ ಘಟನೆ ನಡೆದಿದೆ. ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎಎಸ್ಪಿ ಕಾರು ಕೂಡ ಪೊಲೀಸರೊಂದಿಗೆ ತೆರಳುತ್ತಿತ್ತು. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿಯ ಬೆಂಬಲಿಗರು ಹಿಂದಿನಿಂದ ಎಎಸ್ಪಿ ಕಾರಿಗೆ ಗುದ್ದಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ

    ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್‌ಎಸ್ ಸೆಕ್ಷನ್ 132 (ಸರಕಾರಿ ನೌಕರರ ಕರ್ತವ್ಯ ಅಡ್ಡಿ), 121 (ಪೊಲೀಸರನ್ನು ಗಾಯಗೊಳಿಸಿದ್ದು), 281 (ಅಪಘಾತ) ಹಾಗೂ 3(5) (ಅಕ್ರಮ ಕೂಟ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಸು ಫ್ರಂ ಸೋ ರೀತಿ ಈ ಸರ್ಕಾರ ಬಿ ಫ್ರಂ ಸಿ – ಕಾಂಗ್ರೆಸ್ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ

  • ಪೊಲೀಸ್ ಕಾಲೋನಿಯಲ್ಲೇ ಗುಂಡಿನ ದಾಳಿ: ಹೆಂಡತಿ, ಮಗಳನ್ನು ಕೊಂದು ತಾನೂ ಆತ್ಮಹತ್ಯೆ

    ಪೊಲೀಸ್ ಕಾಲೋನಿಯಲ್ಲೇ ಗುಂಡಿನ ದಾಳಿ: ಹೆಂಡತಿ, ಮಗಳನ್ನು ಕೊಂದು ತಾನೂ ಆತ್ಮಹತ್ಯೆ

    ಪಾಟ್ನಾ: ಇಲ್ಲಿನ ಗಾರ್ಡನಿಬಾಗ್ ಪ್ರದೇಶದ ಪೊಲೀಸ್ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ತನ್ನ ಪತ್ನಿ ಮತ್ತು ಮಗಳನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

    CRIME 2

    ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ರಾಜೀವ್‌ಕುಮಾರ್ ಎಂದು ಗುರುತಿಸಲಾಗಿದೆ. ಈತ ನಿರುದ್ಯೋಗಿಯಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

    ಈ ಕುರಿತು ಮಾಹಿತಿ ನೀಡಿರುವ ಪಾಟ್ನಾ ಎಸ್‌ಎಸ್‌ಪಿ ಮಾನವಜೀತ್ ಸಿಂಗ್ ಧಿಲ್ಲೋನ್, ಇಂದು ಮಧ್ಯಾಹ್ನ 12:40ರ ವೇಳೆಗೆ ನಿಸಾಬಾದ್‌ನ ಪೊಲೀಸ್ ಕಾಲೋನಿಯಲ್ಲಿ ಹೋಗುತ್ತಿದ್ದ ವೇಳೆ ರಾಜೀವ್ ಗುಂಡಿನ ದಾಳಿ ನಡೆಸಿದ್ದಾನೆ. ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಧಾವಿಸಿದ ನಮ್ಮ ಪೊಲೀಸರ ತಂಡ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ; ವಿವಾಹ ಸಮಾರಂಭದಲ್ಲಿ ಹಾವಿನೊಂದಿಗೇ ನೃತ್ಯ – ಮುಂದೇನಾಯ್ತು ಗೊತ್ತಾ?

    crime

    ಪ್ರಾಥಮಿಕ ತನಿಖೆಗಳ ಪ್ರಕಾರ, ರಾಜೀವ್ ಮೊದಲ ಪತ್ನಿ ಕೆಲವು ವರ್ಷಗಳ ಹಿಂದೆ ಸಹಜ ಕಾರಣಗಳಿಂದ ನಿಧನರಾದರು. ನಂತರ ಈತ ತನ್ನ ಅತ್ತಿಗೆ ಪ್ರಿಯಾಂಕಾಳನ್ನೇ ವಿವಾಹವಾದರು. ಕೊಲೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರಿಂದ ತನಿಖೆ ಮುಂದುವರಿದಿದೆ.

  • ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

    ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

    ಇಂಪಾಲ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಮೀರಾಬಾಯಿ ಚಾನು ಅವರು ಈಗ ಮಣಿಪುರ ಪೊಲೀಸ್‌ ಇಲಾಖೆಯಲ್ಲಿ ಅಡಿಷನಲ್‌ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಎಎಸ್‌ಪಿ) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಜಯಿಸಿದ್ದರು. ಈ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಅವರದ್ದೇ ಮೊದಲ ಪದಕವಾಗಿತ್ತು. ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ

    ಮೀರಾ ಭಾರತಕ್ಕೆ ಪದಕ ತಂದುಕೊಟ್ಟ ಸಾಧನೆಗಾಗಿ ಅವರಿಗೆ ಎಎಸ್‌ಪಿ ಹುದ್ದೆ ನೀಡುವುದಾಗಿ ಮಣಿಪುರ ಸರ್ಕಾರ ಘೋಷಿಸಿತ್ತು. ಆಗಾಗಲೇ ಮೀರಾಬಾಯಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ವೃತ್ತಿಯನ್ನು ತೊರೆದು ಪೊಲೀಸ್‌ ಇಲಾಖೆಗೆ ಸೇರುವಂತೆ ಸಿಎಂ ಬಿರೇನ್‌ ಸಿಂಗ್‌ ಸಲಹೆ ನೀಡಿದ್ದರು.

    ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 21 ವರ್ಷಗಳ ಬಳಿಕ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟು ಮೀರಾಬಾಯಿ ಸಾಧನೆ ಮಾಡಿದರು. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ

  • ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ: ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲು ಪೂರೈಕೆ ಹಗರಣಕ್ಕೆ ಸಂಬಂಧಿಸಿದಂತೆ 10 ದಿನಗಳಾದ್ರು ಇನ್ನೂ ಏಕೆ ಯಾರನ್ನು ಬಂಧಿಸಿಲ್ಲ? ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮನ್‍ಮುಲ್‍ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣ ಸಂಬಂಧ ಇಂದು ಮನ್‍ಮುಲ್ ಡೈರಿಗೆ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಪ್ರಕರಣದ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿ ನಿಂತಿದ್ದ ಟ್ಯಾಂಕರನ್ನು ವೀಕ್ಷಣೆ ಮಾಡಲು ತೆರಳಿದ್ದರು. ಈ ವೇಳೆ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಸೋಮಶೇಖರ್ ಅವರು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊರೊನಾ ತೊಲಗಲು ಮಾರಮ್ಮ ದೇವಿಗೆ ಕುರಿ, ಕೋಳಿ ಬಲಿ

    ಪ್ರಕರಣ ಬೆಳಕಿಗೆ ಬಂದು 10 ದಿನ ಕಳೆದದೂ ಸಹ ಇನ್ನೂ ಯಾಕೆ ಒಬ್ಬರನ್ನೂ ನೀವು ಬಂಧಿಸಿಲ್ಲ? ಇಷ್ಟೊತ್ತಿಗೆ ಎಲ್ಲರನ್ನೂ ಬಂಧಿಸಬೇಕಿತ್ತು ಎಂದು ಸಚಿವರು ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಎಎಸ್‍ಪಿ ಇಲ್ಲ ಸರ್ ಒಬ್ಬ ಡ್ರೈವರನ್ನು ಬಂಧಿಸಿದ್ದೇವೆ ಎಂದರು. ಡ್ರೈವರನ್ನು ಅರೆಸ್ಟ್ ಮಾಡೋಕೆ ನೀವೋಬ್ಬರೆ ಆಗಬೇಕಾ? ಬೇರೆಯವರನ್ನು ಬಂಧನ ಮಾಡಲು ನಿಮ್ಮಿಂದ ಆಗಿಲ್ವಾ ಎಂದು ಸೋಮಶೇಖರ್ ಗರಂ ಆದರು. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಹಾಲಿನ ಟ್ಯಾಂಕರ್ ವಿನ್ಯಾಸವನ್ನು ಎಲ್ಲಿ ಮಾಡಿದ್ದಾರೆ? ಹೇಗೆ ಮಾಡಿದ್ದಾರೆ ಅನ್ನೋದಾದರೂ ತಿಳಿದುಕೊಂಡಿದ್ದೀರಾ ಎಂದು ಮತ್ತೆ ಸಚಿವರು, ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇಲ್ಲ ಸರ್ ಇನ್ನೂ ಸಹ ಅದು ಎಲ್ಲಿ ಮಾಡಿಸಿದ್ದಾರೆ ಎನ್ನೋದೆ ಪತ್ತೆಯಾಗಿಲ್ಲ ಎಂದು ಧನಂಜಯ್ ಹೇಳಿದರು. ಈ ವೇಳೆ ಸೋಮಶೇಖರ್ ಈ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ಚುರುಕುಗೊಳ್ಳಿಸಬೇಕೆಂದು ಎಚ್ಚರಿಕೆ ನೀಡಿದರು.

  • ಸಮಾಜದ ಸ್ವಾಸ್ಥ್ಯ ಕಾಪಾಡಲು ಪತ್ರಕರ್ತರ, ಪೊಲೀಸರ ಪಾತ್ರ ಅಗತ್ಯ: ಎಎಸ್‍ಪಿ ಕುಮಾರಚಂದ್ರ

    ಸಮಾಜದ ಸ್ವಾಸ್ಥ್ಯ ಕಾಪಾಡಲು ಪತ್ರಕರ್ತರ, ಪೊಲೀಸರ ಪಾತ್ರ ಅಗತ್ಯ: ಎಎಸ್‍ಪಿ ಕುಮಾರಚಂದ್ರ

    ಉಡುಪಿ: ಪತ್ರಕರ್ತರು ಪೊಲೀಸರ ಮಾದರಿಯಲ್ಲೇ ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಪೊಲೀಸರಂತೆ ಮಾಧ್ಯಮದ ಸದಸ್ಯರು ಕುಟುಂಬದಿಂದ, ಖಾಸಗಿ ಜೀವನದ ಸಂಭ್ರಮದಿಂದ ದೂರ ಉಳಿದು ಬಿಟ್ಟಿದ್ದಾರೆ. ನಿಜಕ್ಕೂ ಈ ಎರಡು ಕ್ಷೇತ್ರ ಬಹಳ ಚಾಲೆಂಜಿಂಗ್ ಮತ್ತು ತ್ಯಾಗದ್ದು ಎಂದು ಉಡುಪಿ ಅಡಿಷನಲ್ ಎಸ್‍ಪಿ ಕುಮಾರಚಂದ್ರ ಹೇಳಿದರು.

    ಉಡುಪಿಯ ಕಟಪಾಡಿಯಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡೋತ್ಸವದ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕುಮಾರಚಂದ್ರ ಮಾತನಾಡಿದರು. ಸಾರ್ವಜನಿಕರು ಮತ್ತು ಸರ್ಕಾರಿ ವ್ಯವಸ್ಥೆ ಜೊತೆ ಪತ್ರಕರ್ತರ ಕಾರ್ಯ ಬಹಳ ಮಹತ್ವದ್ದು ಎಂದು ಹೇಳಿದರು.

    ಕಾಪು ತಾಲೂಕು ಅಧ್ಯಕ್ಷ ಪ್ರಮೋದ್ ಸುವರ್ಣ ಕಟಪಾಡಿ ಮಾತನಾಡಿ, ಪತ್ರಕರ್ತರು ಸಮಾಜದ ಎಲ್ಲರೊಂದಿಗೆ ಸ್ನೇಹ ಮತ್ತು ನಿಷ್ಠುರದ ವ್ಯಕ್ತಿತ್ವ ಇಟ್ಟುಕೊಳ್ಳಬೇಕಾದವರು. ಪಕ್ಷಾತೀತ, ಜಾತ್ಯಾತೀತವಾಗಿ ಸಮಾಜದ ನೊಂದವರ ಪರವಾಗಿ ಪತ್ರಕರ್ತರು ಮುಂದೆಯೂ ಕೆಲಸ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

    ನಿವೃತ್ತ ಪೊಲೀಸ್ ಉಪನಿರೀಕ್ಷಕ ರಾಜಗೋಪಾಲ್, ಗೃಹ ರಕ್ಷಕದಳದ ಲಕ್ಷ್ಮೀನಾರಾಯಣ ರಾವ್, ಅಗ್ನಿಶಾಮಕ ದಳದ ಅಶ್ವಿನ್ ಸನಿಲ್, ಯೋಗ ಸಾಧಕಿ ತನುಶ್ರೀ, ಕರಾಟೆ ಸಾಧಕಿ ಚೈತ್ರ ಸಾಲಿಯಾನ್, ರುದ್ರಭೂಮಿ ನಿರ್ವಾಹಕ ಕಿಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

    ಕಾಪು ವಲಯ ಪ್ರೆಸ್ ಕ್ಲಬ್‍ನ ಪತ್ರಕರ್ತರಿಗೆ ಹಲವಾರು ಕ್ರೀಡಾ ಚಟುವಟಿಕೆ ನಡೆದಿದ್ದು, ಅದರ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ರಾಜಕೀಯ, ಸಮಾಜ ಸೇವಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಟುಂಬ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಿದ್ದು ಕುಟುಂಬದವರು ಪಾಲ್ಗೊಂಡರು. ಸ್ಥಳೀಯ ಸಂಘ ಸಂಸ್ಥೆಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.