Tag: Asian Games 2018

  • ಪ್ಲೀಸ್ ನನ್ನ ಕಾಲಿಗೆ ಸರಿ ಹೋಗುವ ಶೂಗಳನ್ನು ತಯಾರಿಸಿ ಕೊಡಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ

    ಪ್ಲೀಸ್ ನನ್ನ ಕಾಲಿಗೆ ಸರಿ ಹೋಗುವ ಶೂಗಳನ್ನು ತಯಾರಿಸಿ ಕೊಡಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ

    ಜಕರ್ತಾ: ನನ್ನ ಕಾಲಿಗೆ ಸರಿ ಹೋಗುವ ಶೂಗಳನ್ನು ತಯಾರಿಸಿ ಕೊಡಿ’ ಎಂದು ಏಷ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್ ಚಿನ್ನದ ಪದಕ ವಿಜೇತ ಸ್ವಪ್ನಾ ಬರ್ಮನ್ ಕೇಳಿಕೊಂಡಿದ್ದಾರೆ.

    ಏಷ್ಯನ್ ಗೇಮ್ಸ್‍ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತ ಮಹಿಳೆ ಐತಿಹಾಸಿಕ ದಾಖಲೆಯನ್ನು ಬರೆದಿರುವ ಸ್ವಪ್ನಾ, ಸಾಮಾನ್ಯ ಶೂ, ಸ್ಪೈಕ್‍ಗಳನ್ನು ಹಾಕಿದರೆ ನನಗೆ ಭಾರೀ ನೋವಾಗುತ್ತದೆ. ನನಗೆ ಯಾರಾದರೂ ಶೂ ತಯಾರಿಸಿ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ.

    ಸ್ವಪ್ನಾ ನರ್ಮನ್ ಯಾರು?
    ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್ ಅವರಿಗೆ ಹುಟ್ಟುತ್ತಲೇ ತಮ್ಮ ಎರಡೂ ಕೈ ಹಾಗೂ ಎರಡೂ ಕಾಲುಗಳಲ್ಲಿ ತಲಾ ಆರು ಬೆರಳುಗಳನ್ನು ಹೊಂದಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಸ್ವಪ್ನಾರ ತಂದೆ ರಿಕ್ಷಾ ಚಾಲಕ. ಆದರೆ ಅವರು ಕೂಡಾ ಅನಾರೋಗ್ಯಕ್ಕೆ ತುತ್ತಾಗಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಇದರಿಂದಾಗಿ ತಮ್ಮ ಬದುಕಿನಲ್ಲಿ ಎರಡನೇ ಬಾರಿ ಏಷ್ಯಾನ್ ಗೇಮ್ಸ್ ನಲ್ಲಿ ಭಾಗವಹಿಸುವುದು ಅನುಮಾನವಿತ್ತು.

    ಸಮಸ್ಯೆಗಳನ್ನು ಎದುರಿಸಿದ ಸ್ವಪ್ನಾ ಏಷ್ಯಾನ್ ಗೇಮ್ಸ್‍ಗೆ ಆಯ್ಕೆಯಾಗಿದ್ದರು. ಆದರೆ ಅವರ ಕಾಲಿಗೆ ಯಾವುದೇ ಕಂಪೆಯ ಶೂಗಳು ಸೂಕ್ತವಾಗುತ್ತಿಲ್ಲ. ಪ್ರತಿ ಟೂರ್ನಿಯಲ್ಲಿ ಸ್ಪರ್ಧಿಸುವ ವೇಳೆ ವಿಶೇಷ ಶೂಗಳನ್ನು ಆಯ್ಕೆ ಮಾಡುವುದೇ ದೊಡ್ಡ ಸಮಸ್ಯೆ ಆಗುತ್ತಿತ್ತು. ಇನ್ನು ಜಂಪ್ ಮಾಡಬೇಕಾದ ಸ್ಪರ್ಧೆಗಳ ವೇಳೆ ಶೂ ಸಮಸ್ಯೆಯಾಗಿ ಕಾಡುತ್ತಿತ್ತು. ಕಾರಣ ಜಿಗಿದು ನೆಲಕ್ಕೆ ಬರುತ್ತಿದ್ದಂತೆ ಶೂ ಕಳಚಿ ಬಿಳುತಿತ್ತು. ಇಲ್ಲವೇ ಬೆರಳು ಹಾಗೂ ಕಾಲು ನೋವು ಕಾಣಿಸಿ ಭಾರೀ ಸಮಸ್ಯೆ ಎದುರಿಸುತ್ತಿದ್ದರು.

    ಹೆಪ್ಟಾಥ್ಲಾನ್ ಒಟ್ಟು 7 ಸ್ಪರ್ಧೆಯಲ್ಲಿ 6,026 ಅಂಕ ಪಡೆದು ಸ್ವಪ್ನಾ ಚಿನ್ನಕ್ಕೆ ಮುತ್ತಿಕ್ಕಿದರು. ನಾಲ್ಕು ವರ್ಷಗಳ ಹಿಂದೆಯೂ ಏಷ್ಯಾನ್ ಗೇಮ್ಸ್ ನಲ್ಲಿ ಸ್ವಪ್ನಾ 5,178 ಅಂಕ ಗಳಿಸಿ 5ನೇ ಸ್ಥಾನ ಪಡೆದಿದ್ದರು.

    ಏನಿದು ಹೆಪ್ಟಾಥ್ಲಾನ್?
    100 ಮೀಟರ್, 200 ಮೀಟರ್, 800 ಮೀಟರ್, ಲಾಂಗ್ ಜಂಪ್, ಹೈ ಜಂಪ್, ಜಾವಲಿನ್ ಎಸೆತ, ಶಾಟ್‍ಪೂಟ್ ಸ್ಪರ್ಧೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಿ ಪದಕ ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಜಕಾರ್ತ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಹಿಮಾ ದಾಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 14 ವರ್ಷಗಳ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆಮಾಡಿದ್ದಾರೆ. ಈ ಮೂಲಕ ಭಾರತದ 14 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ಈ ಮೊದಲು 2004 ರ ಚೆನ್ನೈನಲ್ಲಿ ನಡೆದಿದ್ದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಕೌರ್ ಈ ದಾಖಲೆಯನ್ನು ಮಾಡಿದ್ದರು. ಅರ್ಹತಾ ಸುತ್ತಿನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ರವರು ಅಂತಿಮ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    ಅರ್ಹತಾ ಸುತ್ತಿನ ಓಟದಲ್ಲಿ ಬಹರೇನ್‍ನ ಸಲ್ವಾ ನಸರ್ ಜೊತೆ ಹಿಮಾ ದಾಸ್ ಓಡಿದ್ದು, ಸಲ್ವಾ ನಸರ್ ಸಹ ಸ್ಪರ್ಧೆ ಗೆಲ್ಲುವ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಇದನ್ನೂ ಓದಿ: ಹಿಮಾ ದಾಸ್ ಸಾಧನೆಗಿಂತ, ಜಾತಿಯನ್ನೇ ಹೆಚ್ಚಾಗಿ ಹುಡುಕಿದ ಜಾಲತಾಣಿಗರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿಗೆ ಚಿನ್ನದ ಪದಕ ಅರ್ಪಿಸಿದ ಭಜರಂಗ್ ಪೂನಿಯಾ

    ವಾಜಪೇಯಿಗೆ ಚಿನ್ನದ ಪದಕ ಅರ್ಪಿಸಿದ ಭಜರಂಗ್ ಪೂನಿಯಾ

    ಜಕಾರ್ತ: ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದು ಕೊಟ್ಟ ಕುಸ್ತಿಪಟು ಬಜರಂಗ್ ಪೂನಿಯಾ ತಮ್ಮ ಪದಕವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅರ್ಪಿಸಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿರುವ ಬಜರಂಗ್ ಪೂನಿಯಾ, ನನ್ನ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅರ್ಪಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಸ್ವರ್ಣದ ಪದಕ ಗೆದ್ದಿದ್ದರು. ಈ ಮೂಲಕ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕದ ತಂದಿದ್ದರು. ಜಪಾನ್ ದೇಶದ ಟಕಟಾನಿ ಡೈಚಿ ವಿರುದ್ಧ ನಡೆದ ಅಂತಿಮ ಸುತ್ತಿನಲ್ಲಿ 11-8 ಅಂಕಗಳ ಅಂತರದಿಂದ ಗೆಲ್ಲುವ ಪಡೆದಿದ್ದರು. ಇದಕ್ಕೂ ಮೊದಲು ಖಸನೋವಾ ಸಿರೋಜಿದ್ದಿನ್ (ಉಝಬೇಕಿಸ್ತಾನ), ಫಯಾಝೀವ್ ಅಬ್ದುಲ್‍ಖಾಸೀಮ್ (ತಜಕೀಸ್ತಾನ್) ಮತ್ತಿ ಬಚ್ಚೂಲೂನ್ ಬತಮಗನೈ(ಮಂಗೋಲಿಯಾ) ವಿರುದ್ಧ ಗೆಲುವು ಸಾಧಿಸಿ ಪೂನಿಯಾ ಫೈನಲ್ ಗೆ ಪ್ರವೇಶ ಪಡೆದಿದ್ದರು.

    2014ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್ ಏಷ್ಯನ್ ಕ್ರೀಡಾ ಕೂಟದಲ್ಲಿ ಯೋಗೇಶ್ವರ್ ದತ್ ಪುರಷರ ಫ್ರೀ ಸ್ಟೈಲ್ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. ಯೋಗೇಶ್ವರ್ ಗರಡಿಯಲ್ಲಿ ಪಳಗಿರುವ ಪೂನಿಯಾ ಗುರುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿಯೂ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. 2014ರಸ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಸಂಭ್ರಮ-ಕುಸ್ತಿಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ಬಜರಂಗ ಪೂನಿಯಾ

    ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಸಂಭ್ರಮ-ಕುಸ್ತಿಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ಬಜರಂಗ ಪೂನಿಯಾ

    ಜಕಾರ್ತ: ಇಂಡೋನೇಷ್ಯಾದಲ್ಲಿನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಚಿನ್ನದ ಖಾತೆಯನ್ನು ತೆರೆದಿದ್ದು, ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ ಪೂನಿಯಾ ಸ್ವರ್ಣದ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ಜಪಾನ್ ದೇಶದ ಟಕಟಾನಿ ಡೈಚಿ ವಿರುದ್ಧ ನಡೆದ ಅಂತಿಮ ಸುತ್ತಿನಲ್ಲಿ 11-8 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಖಸನೋವಾ ಸಿರೋಜಿದ್ದಿನ್ (ಉಝಬೇಕಿಸ್ತಾನ), ಫಯಾಝೀವ್ ಅಬ್ದುಲ್‍ಖಾಸೀಮ್ (ತಜಕೀಸ್ತಾನ್) ಮತ್ತಿ ಬಚ್ಚೂಲೂನ್ ಬತಮಗನೈ(ಮಂಗೋಲಿಯಾ) ವಿರುದ್ಧ ಗೆಲುವು ಸಾಧಿಸಿ ಪೂನಿಯಾ ಫೈನಲ್ ಗೆ ಪ್ರವೇಶ ಪಡೆದಿದ್ದರು.

    2014ರಲ್ಲಿ ಇಂಚೇನ್ ಏಷ್ಯನ್ ಕ್ರೀಡಾ ಕೂಟದಲ್ಲಿ ಉಸ್ತಾದ ಯೋಗೇಶ್ವರ್ ದತ್ ಪುರಷರ ಫ್ರೀ ಸ್ಟೈಲ್ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. ಯೋಗೇಶ್ವರ್ ಗರಡಿಯಲ್ಲಿ ಪಳಗಿರುವ ಪೂನಿಯಾ ಗುರುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಸ್ಟೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿಯೂ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. 2014 ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

    ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಜಯಿಸುವ ಮೂಲಕ ಭಾರತದ ಖಾತೆಯನ್ನು ತೆರೆದಿದ್ದರು. ಇಬ್ಬರ ಜೋಡಿ 429.9 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲವಾದರು.