Tag: Asian Champions Trophy Hockey

  • Asian Champions Trophy Hockey 2023: 4-0 ಗೋಲುಗಳ ಅಂತರದಲ್ಲಿ ಪಾಕ್‌ ಮಣಿಸಿದ ಭಾರತ

    Asian Champions Trophy Hockey 2023: 4-0 ಗೋಲುಗಳ ಅಂತರದಲ್ಲಿ ಪಾಕ್‌ ಮಣಿಸಿದ ಭಾರತ

    ಚೆನ್ನೈ: ಚೆನ್ನೈನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ (Asian Champions Trophy Hockey 2023) ಭಾರತ 4-0 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿತು.

    ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ವಿರುದ್ಧ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ (India) 4-0 ಮುನ್ನಡೆಯೊಂದಿಗೆ ಹಿಡಿತ ಸಾಧಿಸಿದೆ. ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಎರಡು ಗೋಲು ಗಳಿಸಿದರೆ, ಜುಗರಾಜ್ ಸಿಂಗ್ ಮತ್ತು ಅಮನ್‌ದೀಪ್ ಸಿಂಗ್ ತಲಾ ಒಂದು ಗೋಲು ಗಳಿಸಿ ಮಿಂಚಿದರು. ಇದನ್ನೂ ಓದಿ: ICC WorldCup 2023: ಭಾರತ-ಪಾಕ್‌ ಸೇರಿದಂತೆ ಪ್ರಮುಖ ಪಂದ್ಯಗಳ ವೇಳಾಪಟ್ಟಿ ಬದಲು

    ಟೂರ್ನಿಯ ಸೆಮಿಫೈನಲ್‌ಗೆ ಈಗಾಗಲೇ ಅರ್ಹತೆ ಪಡೆದಿರುವ ಭಾರತ, ಲೀಗ್ ಹಂತದ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಪಾಕಿಸ್ತಾನವು ದೊಡ್ಡ ಸೋಲಿನೊಂದಿಗೆ ಪಂದ್ಯಾವಳಿಯಿಂದ ಹೊರಗುಳಿಯಿತು. ಇದನ್ನೂ ಓದಿ: ಕ್ರಿಕೆಟ್ ನಿವೃತ್ತಿ ವಾಪಸ್ ಪಡೆದ ಮನೋಜ್ ತಿವಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನ ವಿರುದ್ಧ ಗೆಲುವು – ಕಂಚಿನ ಪದಕ ಪಡೆದ ಭಾರತ

    ಪಾಕಿಸ್ತಾನ ವಿರುದ್ಧ ಗೆಲುವು – ಕಂಚಿನ ಪದಕ ಪಡೆದ ಭಾರತ

    ಢಾಕಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ 4-3 ಗೋಲ್‍ಗಳ ರೋಚಕ ಜಯದೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.

    ಪಂದ್ಯ ಆರಂಭವಾಗಿ ಮೊದಲ ಕ್ವಾರ್ಟರ್‌ನ 5ನೇ ನಿಮಿಷದಲ್ಲಿ ಅಮ್ಜದ್ ಅಲಿ ಸಿಡಿಸಿದ ಗೋಲ್‍ನಿಂದ ಭಾರತ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿತು. 11ನೇ ನಿಮಿಷದಲ್ಲಿ ಅಫ್ರ್ರಾಜ್ ಗೋಲ್ ಸಿಡಿಸಲು ಸಫಲರಾದರು ಈ ಮೂಲಕ ಪಾಕಿಸ್ತಾನ 1-1 ಸಮಬಲ ಸಾಧಿಸಿತು. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್

    ಜಿದ್ದಾ ಜಿದ್ದಿನಿಂದ ನಡೆದ ಎರಡನೇ ಕ್ವಾರ್ಟರ್‌ನಲ್ಲಿ ಎರಡು ತಂಡಗಳಿಂದ ಯಾವುದೇ ಗೋಲ್ ಸಿಡಿಯಲಿಲ್ಲ. 3ನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನದ ಯುವ ಆಟಗಾರ ಅಬ್ದುಲ್ ರಾಣಾ ಸಿಡಿಸಿದ ಭರ್ಜರಿ ಗೋಲ್‍ನಿಂದ ಪಾಕಿಸ್ತಾನ ತಂಡ 2-1 ಗೋಲ್‍ಗಳ ಮುನ್ನಡೆ ಪಡೆದುಕೊಂಡಿತು. ಇದಾದ ಕೆಲಹೊತ್ತಿನಲ್ಲೇ ಭಾರತ ಪರ ಸುಮಿತ್ ಸಿಡಿಸಿದ ಗೋಲ್‍ನಿಂದ 2-2 ಸಮಬಲ ಸಾಧಿಸಿತು. ಇದೇ ಲಯ ಮುಂದುವರಿಸಿದ ಭಾರತ ತಂಡ 4ನೇ ಕ್ವಾರ್ಟರ್‌ನಲ್ಲಿ ವರುಣ್ ಕುಮಾರ್ ಸಿಡಿಸಿದ ಗೋಲ್‍ನಿಂದ 3-2 ಗೋಲ್‍ಗಳ ಮುನ್ನಡೆ ಕಾಯ್ದುಕೊಂಡಿತು.

    ಭಾರತಕ್ಕೆ ಪ್ರಬಲ ಪೈಪೋಟಿ ನೀಡಿದ ಪಾಕಿಸ್ತಾನ ಉತ್ತಮ ಹೋರಾಟ ನಡೆಸಿತು. ಈ ನಡುವೆ ಆಕಾಶ್‍ದೀಪ್ ಸಿಂಗ್ ಸಿಡಿಸಿದ ಗೋಲ್ ಭಾರತಕ್ಕೆ ಮುನ್ನಡೆಯನ್ನು 4-2 ಹಿಗ್ಗಿಸಿತು. ಇನ್ನೇನು ಪಂದ್ಯ ಮುಗಿಯಲು ಕೆಲಕಾಲ ಇರುವಂತೆ ಪಾಕಿಸ್ತಾನ ಪರ ನದೀಮ್ ಗೋಲ್ ಸಿಡಿಸಿದರು ಅದು ಪಾಕಿಸ್ತಾನದ ಕಂಚಿನ ಆಸೆಗೆ ಬಲ ತುಂಬಿದರೂ ಕೂಡ ಭಾರತದ ಅತ್ಯುತ್ತಮ ಆಟದ ಮುಂದೆ 1 ಗೋಲ್ ಅಂತರದ ಸೋಲು ಅನುಭವಿಸಿತು. ಈ ಮೂಲಕ ಭಾರತ ತಂಡ 4-3 ಗೋಲ್‍ಗಳಿಂದ ಗೆದ್ದು ಕಂಚಿನ ಪದಕ ಪಡೆಯಿತು. ಇದನ್ನೂ ಓದಿ: ಮತ್ತೆ ಪ್ರೋ ಕಬಡ್ಡಿ ಹಬ್ಬ – ಇಂದಿನಿಂದ ಬೆಂಗಳೂರು ಬುಲ್ಸ್ ಅಭಿಯಾನ ಶುರು

    ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ ತಂಡ 3-5 ಗೋಲ್‍ಗಳ ಅಂತರದಿಂದ ಸೋತು ಸೆಮಿಫೈನಲ್‍ನಿಂದ ಹೊರಬಿದ್ದು, ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ಜೊತೆ ಇಂದು ಆಡಿತ್ತು.

  • ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ – ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ – ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    -ಸೆಮಿಫೈನಲ್ ಹಾದಿ ಸುಗಮ

    ಢಾಕಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯನ್ನು ಪಾಕಿಸ್ತಾನದ ವಿರುದ್ಧ ಭಾರತ 2-1 ಗೋಲುಗಳ ಭರ್ಜರಿ ಜಯವನ್ನು ಸಾಧಿಸಿದೆ. ಈ ಮೂಲಕ ಭಾರತದ ಸೆಮಿಫೈನಲ್ ಹಾದಿ ಸುಗಮಗೊಂಡಿದೆ.

    ಹರ್ಮನ್ಪ್ರೀತ್ ಸಿಂಗ್ 2 ಮತ್ತು ಆಕಾಶ್‍ದೀಪ್ ಸಿಂಗ್ ಸಿಡಿಸಿದ ಒಂದು ಗೋಲ್ ನೆರವಿನಿಂದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ರೌಂಡ್ ರಾಬಿನ್ ಮೂರನೇ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

    ಪಂದ್ಯ ಆರಂಭವಾಗಿ ಮೊದಲ ಕ್ವಾರ್ಟರ್‌ನ 8ನೇ ನಿಮಿಷದಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಗೋಲ್ ಸಿಡಿಸಿದರು. ಈ ಮೂಲಕ ಭಾರತ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿತು. ನಂತರ ಆಕಾಶ್‍ದೀಪ್ ಸಿಂಗ್ ಮೂರನೇ ಕ್ವಾರ್ಟರ್‌ನ 48ನೇ ನಿಮಿಷದಲ್ಲಿ ಸಿಡಿಸಿದ ಮತ್ತೊಂದು ಗೋಲ್‍ನಿಂದ 2-0 ಮುನ್ನಡೆ ಪಡೆದುಕೊಂಡಿತು.

    ಮೂರನೇ ಕ್ವಾರ್ಟರ್ ಕಡೆಯ ಕ್ಷಣದಲ್ಲಿ ಪಾಕಿಸ್ತಾನದ ಜುನೈದ್ ಮಂಜೂರ್ ಸಿಡಿಸಿದ ಗೋಲ್‍ನಿಂದ ಪಾಕಿಸ್ತಾನ 2-1 ಅಂತರ ಕಾಯ್ದುಕೊಂಡಿತು. 4ನೇ ಕ್ವಾರ್ಟರ್‌ನಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಸಿಡಿಸಿದ ಗೋಲ್‍ನಿಂದ ಭಾರತ ತಂಡ 3-1 ಅಂತರದಿಂದ ಪಾಕಿಸ್ತಾನವನ್ನು ಬಗ್ಗುಬಡಿಯಿತು. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

    ಈ ಮೊದಲು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-2ರಲ್ಲಿ ಡ್ರಾ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಅಂತರದಿಂದ ಮಣಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿದೆ.