Tag: Asia Cup2022

  • ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ಮುಂಬೈ: ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ಭಾರತ, ಪಾಕಿಸ್ತಾನದ ಎದುರು ಸೋಲನ್ನು ಅನುಭವಿಸಿತು.

    ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ 10 ಓವರ್‌ಗಳವರೆಗೂ ಉತ್ತಮ ರನ್‌ಗಳನ್ನೇ ಕಲೆಹಾಕಿತ್ತು. 9.4 ಓವರ್‌ಗಳಿದ್ದಾಗ ತಂಡದ ಮೊತ್ತ 3 ವಿಕೆಟ್‌ಗೆ 91 ರನ್‌ಗಳಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಷಭ್ ಪಂತ್ 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ ಕೇವಲ 14 ರನ್ ಗಳಿಸಿದರು. ರಿವರ್ಸ್ ಸ್ವೀಪ್ ಶಾಟ್ ಮೂಲಕ ಮತ್ತೊಂದು ಬೌಂಡರಿ ಎತ್ತುವ ಪ್ರಯತ್ನ ಮಾಡಿದ ಪಂತ್ ಎದುರಾಳಿ ತಂಡದ ಆಸಿಫ್ ಅಲಿ ಕೈಗೆ ಸುಲಭ ಕ್ಯಾಚ್ ನೀಡಿದರು. ಇದನ್ನೂ ಓದಿ: ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ

    ನಂತರದಲ್ಲಿ ಬಂದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಟೀಂ ಇಂಡಿಯಾ 7 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.5 ಓವರ್‌ಗಳಲ್ಲಿ 182 ರನ್ ಗಳಿಸಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿತು.

    ಸೂಪರ್ ಲೀಗ್‌ನಲ್ಲಿ ರಿಷಭ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಕೂಡ ಗಂಭೀರ್ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    `ಸೂಪರ್ ಫೋರ್ ಲೀಗ್‌ನ ಆ ಹಂತದಲ್ಲಿ ಪಂತ್ ಅಂತಹ ಶಾಟ್ ಆಡುವ ಅಗತ್ಯವಿರಲಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವೀಪ್ ಆಡುತ್ತಾರೆ ಎಂಬುದು ನನಗೆ ತಿಳಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಗ್ರ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಎಂಬುದೂ ಗೊತ್ತಿದೆ. ಆದರೆ ಈ ಹಂತದಲ್ಲಿ ಆ ಹೊಡೆತ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

    ರಿವರ್ಸ್ ಸ್ವೀಪ್ ಹೊಡೆಯುವುದು ಪಂತ್ ಅವರ ಶಾಟ್ ಅಲ್ಲ. ಲಾಂಗ್ ಆನ್ ಅಥವಾ ಡೀಪ್ ಮಿಡ್‌ವಿಕೆಟ್ ಅವರ ಪಕ್ಕಾ ಶಾಟ್. ಅದೇ ಅವರ ಶಕ್ತಿ. ಆ ಸಂದರ್ಭದಲ್ಲಿ ರಿವರ್ಸ್ ಸ್ವೀಪ್ ಅಗತ್ಯವಿರಲಿಲ್ಲ. ಅದು ಅವರ ಶಕ್ತಿಯೂ ಅಲ್ಲ ಎಂದು ಗಂಭೀರ್ ಅಸಮಾಧಾನ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ನಿನ್ನೆ ಭಾರತ ಮತ್ತು ಪಾಕಿಸ್ತಾನ ಸೆಣಸಾಡಿದವು. ರಣರೋಚಕ ಪಂದ್ಯದಲ್ಲಿ ಕೊನೆಯವರೆಗೂ ತೀವ್ರ ಪೈಪೋಟಿ ನೀಡಿದ ಭಾರತ ಕೊನೆಗೂ ಪಾಕಿಸ್ತಾನದ ವಿರುದ್ಧ ಸೋಲನ್ನು ಒಪ್ಪಿಕೊಂಡಿತು.

    ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಶ್‌ದೀಪ್‌ ಬೆಂಬಲಕ್ಕೆ ನಿಂತಿದ್ದಾರೆ. ಒತ್ತಡದಲ್ಲಿದ್ದಾಗ ತಪ್ಪುಗಳು ಸಂಭವಿಸುತ್ತವೆ. ಆದರೆ ಅದರಿಂದ ಕಲಿಯುವುದು ಮತ್ತು ಕಲಿತು ಮುಂದುವರಿಯುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು

    ಪರಿಸ್ಥಿತಿ ಬಿಗಿಯಾಗಿದ್ದಾಗ, ಹೆಚ್ಚಿನ ಒತ್ತಡಗಳು ಇದ್ದಾಗ ತಪ್ಪು ಯಾರೂಬೇಕಾದರೂ ಮಾಡಬಹುದು. ನಿನ್ನೆಯೂ ಪರಿಸ್ಥಿತಿ ಬಿಗಿಯಾಗಿತ್ತು. ನಾನು ನನ್ನ ಮೊದಲ ಚಾಂಪಿಯನ್ ಟ್ರೋಫಿ ಆಡುತ್ತಿದ್ದಾಗ, ಶಾಹಿದ್ ಅಫ್ರಿದಿ ಅವರ ಬೌಲಿಂಗ್‌ಗೆ ಕೆಟ್ಟಹೊಡೆತ ಎದುರಿಸಿದ್ದೆ. ಈಗಲೂ ಅದು ನನಗೆ ನೆನಪಿದೆ. ಅಂದು ನನಗೆ ನಿದ್ರೆ ಮಾಡಲು ಸಾಧ್ಯವಾಗಲೇ ಇಲ್ಲ, ಬೆಳಿಗ್ಗೆ 5 ಗಂಟೆವರೆಗೂ ಅದೇ ಸೀಲಿಂಗ್ ಅನ್ನು ನೋಡುತ್ತಿದೆ. ನನ್ನ ವೃತ್ತಿ ಜೀವ ಮುಗಿದೇಹೋಯ್ತು ಎಂದು ಭಾವಿಸಿದ್ದೆ ಎಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

    ಟೀಂ ಇಂಡಿಯಾದಲ್ಲಿ ಇದೀಗ ಉತ್ತಮ ವಾತಾವರಣವಿದ್ದು, ಹಿರಿಯ ಆಟಗಾರರು ನಿಮ್ಮ ಸುತ್ತಲೂ ಇದ್ದಾರೆ. ಇದರ ಕ್ರಿಡಿಟ್ ಅನ್ನು ನಾಯಕ ಮತ್ತು ಕೋಚ್‌ಗೆ ನೀಡುತ್ತೇನೆ. ಆಟಗಾರರು ತಮ್ಮ ತಪ್ಪುಗಳಿಂದ ಇನ್ನಷ್ಟು ಕಲಿಯುತ್ತಾರೆ. ಒಬ್ಬರು ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಸಿಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ನಿನ್ನೆ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭಾರತ 181 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.5 ಓವರ್‌ಗಳಲ್ಲೇ 182 ರನ್ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಪಾಕ್ ಕೈ ಹಿಡಿದ ರಿಜ್ವಾನ್ – ರೋಚಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಜಯ

    ಡೆತ್ ಓವರ್‌ನಲ್ಲಿ ಉತ್ತಮಪ್ರದರ್ಶನ ನೀಡುತ್ತಿದ್ದ ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗೆ ಸುಲಭವಾಗಿ ನೀಡಿದ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್‌ ಸಿಂಗ್ ಕೈಚೆಲ್ಲಿದರು. ಇದು ಪಾಕ್ ಗೆಲುವಿಗೆ ತಿರುವು ನೀಡಿತು. ಕೊನೆಯ ಓವರ್‌ನಲ್ಲಿ ಬೌಲಿಂಗ್‌ಗಿಳಿದ ಅರ್ಶ್‌ದೀಪ್‌ ಅವರ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ 2ನೇ ಎಸೆತದಲ್ಲಿ ಫುಲ್‌ಟಾಸ್ ಬೌಲ್ ಮಾಡಿ 4 ರನ್ ಚಚ್ಚಿಸಿಕೊಂಡರು. ಅದರ ಮರು ಎಸೆತದಲ್ಲೇ ಅಸಿಫ್ ಅಲಿ ಅವರ ವಿಕೆಟ್ ಉರುಳಿಸಿದರೂ ಜಯ ಪಾಕಿಸ್ತಾನದ ಪಾಲಾಯಿತು. ಅಂತಿಮವಾಗಿ ಪಾಕಿಸ್ತಾನ 5 ವಿಕೆಟ್‌ಗಳ ಜಯ ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಅಂದು ಗಾಯಾಳು, ಇಂದು ಮ್ಯಾಚ್ ವಿನ್ನರ್ – ಹಳೆಯ ಘಟನೆ ಬಿಚ್ಚಿಟ್ಟ ಪಾಂಡ್ಯ

    ಅಂದು ಗಾಯಾಳು, ಇಂದು ಮ್ಯಾಚ್ ವಿನ್ನರ್ – ಹಳೆಯ ಘಟನೆ ಬಿಚ್ಚಿಟ್ಟ ಪಾಂಡ್ಯ

    ದುಬೈ: ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಾನು ಉತ್ತಮ ಆಲ್‌ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದಾರೆ.

    ನಿನ್ನೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಬ್ಬರಿಸುವ ಮೂಲಕ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾಕ್ಕೆ 5 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು. ಇದನ್ನೂ ಓದಿ: AsiaCup: ಜಡೇಜಾ ಜಾದು, ಪಾಂಡ್ಯ ಪರಾಕ್ರಮ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಕೊನೆಯ ಓವರ್‌ನಲ್ಲಿ ಟೀಂಡಿಯಾಕ್ಕೆ 7 ರನ್‌ಗಳ ಅಗತ್ಯವಿತ್ತು. ಈ ವೇಳೆ ಪಾಕ್ ಪರ ಬೌಲಿಂಗ್ ಮಾಡಿದ ಸ್ಪಿನ್ನರ್ ಮೊಹಮ್ಮದ್ ನವಾಝ್ ಮೊದಲ ಎಸೆತದಲ್ಲೇ ಆಲ್‌ರೌಂಡರ್ ರವೀಂದ್ರ ಜಡೇಜಾರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ರೀಸ್‌ಗಿಳಿದ ದಿನೇಶ್ ಕಾರ್ತಿಕ್ ಒಂದು ರನ್ ಕದಿಯುವ ಮೂಲಕ ಪಾಂಡ್ಯಗೆ ಕ್ರೀಸ್ ಬಿಟ್ಟುಕೊಟ್ಟರು.

    ಕೊನೆಯ ಓವರ್ 3ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಪ್ರಯತ್ನ ಮಾಡಿದ ಹಾರ್ದಿಕ್ ಪಾಂಡ್ಯ ಡಾಟ್‌ಬಾಲ್ ಮಾಡಿಕೊಂಡರು. ಉಳಿದ ಮೂರು ಎಸೆತಗಳಲ್ಲಿ 6 ರನ್ ಬೇಕಿದ್ದ ಟೀಂ ಇಂಡಿಯಾ ಮತ್ತಷ್ಟು ಒತ್ತಡಕ್ಕೆ ಸಿಲುಕಿತ್ತು. ಅದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಪಾಂಡ್ಯ ಬ್ಯಾಟಿಂಗ್ ಮುಂದುವರಿಸಿ, ನಾಲ್ಕನೇ ಎಸೆತವನ್ನು ಲಾಂಗ್ ಆನ್‌ಕಡೆಗೆ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾ ಅವಿಸ್ಮರಣೀಯ ಗೆಲುವಿಗೆ ಕಾರಣರಾದ್ರು. ಇದನ್ನೂ ಓದಿ: ಇಂಡಿಯಾ, ಪಾಕ್ ಹೈವೋಲ್ಟೇಜ್ ಕ್ರಿಕೆಟ್- ಭಾರತ ಗೆಲುವಿಗೆ ಮುಸ್ಲಿಮರಿಂದ ವಿಶೇಷ ಪೂಜೆ

    ಬಳಿಕ ಗೆಲುವಿನ ಸಂಭ್ರಮ ಹಂಚಿಕೊಂಡ ಪಾಂಡ್ಯ, ಬೌಲಿಂಗ್ ವೇಳೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮೂಲಕ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲ್ ಮಾಡಬೇಕಾಗುತ್ತದೆ. ಹಾಗೆಯೇ ಶಾರ್ಟ್ ಪಿಚ್ ಮತ್ತು ಹಾರ್ಡ್ ಲೆನ್ತ್ ಬೌಲಿಂಗ್ ನನ್ನ ಸಾಮರ್ಥ್ಯ. ಇದನ್ನು ಸರಿಯಾದ ರೀತಿಯಲ್ಲಿ ಸೂಕ್ತ ಬ್ಯಾಟರ್‌ಗಳ ಎದುರು ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಅಲ್ಲದೇ ಪಾಕಿಸ್ತಾನ ವಿರುದ್ಧದ ಗೆಲುವನ್ನು ಸಂಭ್ರಮಿಸುತ್ತಿರುವ ವೇಳೆಯಲ್ಲೇ ಹಾರ್ದಿಕ್ ಪಾಂಡ್ಯ ತಮ್ಮ ಫೇಸ್‌ಬುಕ್ ಪುಟದಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದಿನ ಪಂದ್ಯವೊಂದರಲ್ಲಿ ತಾವು ಕೈಗೆ ಪೆಟ್ಟುಮಾಡಿಕೊಂಡು ಅರ್ಧಕ್ಕೆ ನಿರ್ಗಮಿಸುತ್ತಿರುವುದು ಹಾಗೂ ಪಾಕ್ ಗೆಲುವನ್ನು ಸಂಭ್ರಮಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪಾಕ್ ವಿರುದ್ಧ ಕಹಿ ಘಟನೆ ನೆನಪಿಸಿಕೊಂಡ ಪಾಂಡ್ಯ: 2018ರ ಏಷ್ಯಾಕಪ್ ನಲ್ಲಿ ಪಾಕ್ ವಿರುದ್ಧ ಸೆಣಸಾಡುತ್ತಿದ್ದ ವೇಳೆ ತಮ್ಮ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ ಕೈಗೆ ಪೆಟ್ಟುಮಾಡಿಕೊಂಡು ಅರ್ಧಕ್ಕೆ ಪಂದ್ಯದಿಂದ ನಿರ್ಗಮಿಸಿದ್ದರು. ನಿನ್ನೆ ಪಾಕ್ ವಿರುದ್ಧ ಅಬ್ಬರಿಸಿ ಗೆಲುವು ಸಾಧಿಸಿದ್ದ ಬೆನ್ನಲ್ಲೇ ಮತ್ತೊಮ್ಮೆ ಪಾಂಡ್ಯ ತಮಗಾದ ಕಹಿ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.

    ಇದರೊಂದಿಗೆ `ಹಿನ್ನಡೆಗಿಂತ ಪುನರ್ ಆಗಮನವೇ ಹೆಚ್ಚು’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: AsiaCup 2022: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಲಂಕಾ – ಆಫ್ಘನ್‌ಗೆ 8 ವಿಕೆಟ್‌ಗಳ ಸುಲಭ ಜಯ

    ಈ ರೀತಿಯ ರನ್ ಚೇಸ್ ಮಾಡುವಾಗ ಪ್ರತಿ ಓವರ್‌ಗೆ ಪ್ರತ್ಯೇಕ ಯೋಜನೆ ಹೊಂದಿರಬೇಕಾಗುತ್ತದೆ. ಹಾಗೆಯೇ ಎದುರಾಳಿ ತಂಡದಿಂದ ಎಡಗೈ ಸ್ಪಿನ್ನರ್ ಇರುವುದು ನನಗೆ ಗೊತ್ತಿತ್ತು. ಕೊನೇ ಓವರ್‌ನಲ್ಲಿ 7 ರನ್ ಮಾತ್ರ ಗಳಿಸಬೇಕಿತ್ತು. ಒಂದು ವೇಳೆ 15 ರನ್‌ಗಳು ಬೇಕಿದ್ದರೂ ಪಂದ್ಯ ಗೆದ್ದುಕೊಡುವ ವಿಶ್ವಾಸ ನನ್ನಲ್ಲಿ ಇತ್ತು. ಏಕೆಂದರೆ ನನ್ನೆದುರು ಬೌಲಿಂಗ್ ಮಾಡುವ ಬೌಲರ್ ಸಹ ಒತ್ತಡದಲ್ಲಿ ಇರುತಾನೆ ಎಂಬುದು ನಗೆ ಗೊತ್ತಿತ್ತು ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

    147 ರನ್‌ಗಳ ಗುರಿಯನ್ನು ಪಡೆದ ಭಾರತ 49.4 ಓವರ್‌ಗಳಲ್ಲಿ 148 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು. ಬೌಲಿಂಗ್‌ನಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ 35 ರನ್(17 ಎಸೆತ, 4 ಬೌಂಡರಿ, 1 ಸಿಕ್ಸ್) ಹೊಡೆಯುವ ಮೂಲಕ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    Live Tv
    [brid partner=56869869 player=32851 video=960834 autoplay=true]