Tag: Asia Cup Final

  • ಏಷ್ಯಾ ಕಪ್‌ಗಾಗಿ ಇಂದು ಭಾರತ-ಪಾಕ್‌ ಸಮರ – 41 ವರ್ಷಗಳ ಇತಿಹಾಸಲ್ಲೇ ಫೈನಲ್‌ನಲ್ಲಿ ಮೊದಲ ಮುಖಾಮುಖಿ

    ಏಷ್ಯಾ ಕಪ್‌ಗಾಗಿ ಇಂದು ಭಾರತ-ಪಾಕ್‌ ಸಮರ – 41 ವರ್ಷಗಳ ಇತಿಹಾಸಲ್ಲೇ ಫೈನಲ್‌ನಲ್ಲಿ ಮೊದಲ ಮುಖಾಮುಖಿ

    ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ 41 ವರ್ಷಗಳ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳು (Ind vs Pak Team) ಮೊದಲ ಸಲ ಫೈನಲ್‌ನಲ್ಲಿ ಎದುರಾಗುವ ಕಾಲ ಸನ್ನಿಹಿತವಾಗಿದೆ.

    ಸೂಪರ್‌ ಸಂಡೇ ಯಾದ ಇಂದು ಕ್ರಿಕೆಟ್‌ ಅಭಿಮಾನಿಗಳಿಗೆ (Cricket Fans) ನಿಜಕ್ಕೂ ಹಬ್ಬವಾಗಿದೆ. ರಾತ್ರಿ 8 ಗಂಟೆಗೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಶುರುವಾಗಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಪಾಕ್‌ ಭಾರತದ (Team India) ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಇತ್ತ ಭಾರತ ಕೂಡ ಮೂರನೇ ಪಂದ್ಯದಲ್ಲೂ ಮಣ್ಣು ಮುಕ್ಕಿಸಿ ಪಾಕ್‌ ಬಗ್ಗು ಬಡಿಯಲು ಸಜ್ಜಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್‌ ಕ್ರ್ಯಾಶ್‌ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ

    ಹ್ಯಾಂಡ್‌ ಶೇಕ್‌ ಇಲ್ಲದೇ, ಮೈದಾನದಲ್ಲಿ ಕಿರಿಕಿರಿಗಳಿಂದ ಕೂಡಿದ್ದ ಹಿಂದಿನ ಎರಡೂ ಪಂದ್ಯಗಳು ಅನೇಕ ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದವು. ಈ ನಡುವೆ ಐಸಿಸಿ ಕೆಲವು ಆಟಗಾರರಿಗೆ ದಂಡವನ್ನೂ ವಿಧಿಸಿ ಎಚ್ಚರಿಸಿತು. ಹೀಗಾಗಿ ಹೀಗಾಗಿ ಮೂರನೇ ಪಂದ್ಯದ ತೀವ್ರತೆ ಜೋರಾಗಿಯೇ ಇದೆ. ಮತ್ತೆ ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆಗಳೂ ಇವೆ.

    ಭಾರತದ ವಿರುದ್ಧ ಸದಾ ಒತ್ತಡದಲ್ಲೇ ಆಡುವ, ಈ ಟೂರ್ನಿಯಲ್ಲೇ ಈವರೆಗೆ ಎರಡು ಸಲ ಸೋತ ಪಾಕಿಸ್ಥಾನಕ್ಕೆ ಇದು ಪ್ರತಿಷ್ಠೆಯ ಫೈನಲ್. ಮತ್ತೂಂದು ಸೋಲನುಭವಿಸಿ ತವರಿಗೆ ತೆರಳಿದ್ರೆ ಅಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುವುದು ನಿಶ್ಚಿತ. ಒಂದೇ ಸರಣಿಯಲ್ಲಿ ಭಾರತದಿಂದ ಮೂರು ಮುಖಭಂಗ ಕಲ್ಪಿಸಿಕೊಳ್ಳಲು ಪಾಕಿಗಳಿಂದ ಖಂಡಿತ ಸಾಧ್ಯವಿಲ್ಲ. ಇದನ್ನೂ ಓದಿ: ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್‌ – ಸೂಪರ್‌ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

    ಈ ಕೂಟದಲ್ಲಿ ಭಾರತದೆದುರು ಪಾಕಿಸ್ತಾನಿಗಳ ಯಾವ ಆಟವೂ ನಡೆಯಲಿಲ್ಲ. ಮೈದಾನದಲ್ಲೂ ಅಷ್ಟೇ, ಮೈದಾನದಾಚೆಯೂ ಅಷ್ಟೇ, ಬಹುಶಃ ಫೈನಲ್‌ನಲ್ಲೂ ಇದಕ್ಕಿಂತ ಭಿನ್ನ ಫಲಿತಾಂಶ ದಾಖಲಾಗಲಿಕ್ಕಿಲ್ಲ ಎಂಬ ದೃಢ ನಂಬಿಕೆ ಭಾರತದ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

  • ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    ದುಬೈ: ಏಷ್ಯಾಕಪ್ ಫೈನಲ್ (Asia Cup Final) ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ಮುಖಭಂಗ ಅನುಭವಿಸಿದ ಪಾಕಿಸ್ತಾನ (Pakistan) ತಂಡದ ನಾಯಕ ಬಾಬರ್ ಅಜಮ್ (Babar Azam) ಇದೀಗ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಹಿಂದೆ ರನ್ ಬರ ಅನುಭವಿಸುತ್ತಿದ್ದ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿಗೆ (Virat Kohli) ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದ ಬಾಬರ್ ಅಜಮ್‍ಗೆ ಕೊಹ್ಲಿ ಅಭಿಮಾನಿಗಳು ಇದೀಗ ಟಾಂಗ್ ನೀಡಿದ್ದಾರೆ.

    ಈ ಹಿಂದೆ ರನ್ ಬರ ಅನುಭವಿಸುತ್ತಿದ್ದ ವಿರಾಟ್ ಕೊಹ್ಲಿಗೆ ವಿಶೇಷ ಸಂದೇಶದ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೆಂಬಲಕ್ಕೆ ನಿಂತಿದ್ದರು. ಟ್ವಿಟ್ಟರ್‌ನಲ್ಲಿ ಕೊಹ್ಲಿ ಜೊತೆಗಿರುವ ಫೋಟೋ ಹಂಚಿಕೊಂಡು ಬಾಬರ್ ಅಜಮ್, ಈ ಸಮಯ ಕಳೆದು ಹೋಗುತ್ತದೆ. ದೃಢವಾಗಿರಿ ಎಂದು ಟ್ವೀಟ್ ಮಾಡಿ ಕೊಹ್ಲಿಗೆ ಬೆಂಬಲ ನೀಡಿದ್ದರು. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    https://twitter.com/ashrohitian2/status/1569004353402601475

    ಇದೀಗ ಬಾಬರ್ ಅಜಮ್ ಕೂಡ ರನ್ ಬರ ಅನುಭವಿಸುತ್ತಿದ್ದಾರೆ. ಏಷ್ಯಾಕಪ್‍ನಲ್ಲಿ ಆಡಿದ ಒಟ್ಟು 6 ಪಂದ್ಯಗಳಿಂದ 68 ರನ್ ಬಾರಿಸಿದ್ದಾರೆ. ಏಷ್ಯಾಕಪ್‍ನಲ್ಲಿ 30 ರನ್ (29 ಎಸೆತ) ಹೆಚ್ಚಿನ ಗಳಿಕೆಯಾಗಿದೆ. ಹಾಗಾಗಿ ಇದೀಗ ಟ್ರೋಲ್‌ಗೆ ಗುರಿಯಾಗಿದ್ದು, ಕೊಹ್ಲಿ ಅಭಿಮಾನಿಗಳು ಈ ಸಮಯ ಕಳೆದು ಹೋಗಲ್ಲ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

    https://twitter.com/im_ShivP45/status/1568999539885088768

    ಏಷ್ಯಾಕಪ್‍ನ ಸೂಪರ್ ಫೋರ್ ಮತ್ತು ಫೈನಲ್ ಪಂದ್ಯದಲ್ಲಿ ಸತತವಾಗಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಾಣಲು ಬಾಬರ್ ಅಜಮ್ ಬ್ಯಾಟಿಂಗ್ ಕೂಡ ಪ್ರಮುಖ ಕಾರಣ. ಹಲವು ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದ ಬಾಬರ್ ಏಷ್ಯಾಕಪ್‍ನಲ್ಲಿ ರನ್ ಗಳಿಸಲು ಪರದಾಡಿದರು. ಇದು ಪಾಕಿಸ್ತಾನ ದಿಢೀರ್ ಕುಸಿತಕ್ಕೆ ಕಾರಣವಾಗಿದೆ. ಹಾಗಾಗಿ ಮುಂದಿನ ಟಿ20 ವಿಶ್ವಕಪ್‍ಗೂ ಮುನ್ನ ಬಾಬರ್ ಫಾರ್ಮ್ ಕಂಡುಕೊಳ್ಳಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಯ ಎಸೆತದಲ್ಲಿ ಭಾರತಕ್ಕೆ ಏಷ್ಯಾಕಪ್ – ಥ್ರಿಲ್ಲಿಂಗ್ 4 ಓವರ್ ಹೀಗಿತ್ತು

    ಕೊನೆಯ ಎಸೆತದಲ್ಲಿ ಭಾರತಕ್ಕೆ ಏಷ್ಯಾಕಪ್ – ಥ್ರಿಲ್ಲಿಂಗ್ 4 ಓವರ್ ಹೀಗಿತ್ತು

    ದುಬೈ: ಥ್ರಿಲ್ಲಿಂಗ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 3 ವಿಕೆಟ್ ಗಳ ಜಯವನ್ನು ಗಳಿಸಿ ಟೀಂ ಇಂಡಿಯಾ 7ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ.

    223 ರನ್ ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಕೊನೆಯ 28 ಎಸೆತದಲ್ಲಿ 26 ರನ್ ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ಭುವನೇಶ್ವರ್ ಕುಮಾರ್ ಸಿಕ್ಸರ್ ಅಟ್ಟಿ ರನ್ ಅಂತರವನ್ನು ಸ್ವಲ್ಪ ಕಡಿಮೆ ಮಾಡಿದರು. 47ನೇ ಓವರ್ ನಲ್ಲಿ 5 ರನ್ ಬಂದಿದ್ದರೆ, 48ನೇ ಓವರ್ ನ ಎರಡನೇ ಎಸೆತದಲ್ಲಿ ಜಡೇಜಾ ಔಟಾದರು. ಈ ವೇಳೆ ಮತ್ತೆ ಕ್ರೀಸಿಗೆ ಗಾಯಗೊಂಡು ಹೊರ ನಡೆದಿದ್ದ ಕೇದಾರ್ ಜಾದವ್ ಆಗಮಿಸಿದರು. ಈ ಓವರ್ ನಲ್ಲಿ ಕೇವಲ 4 ರನ್ ಬಂತು.

    ಕೊನೆಯ 12 ಎಸೆತದಲ್ಲಿ 9 ರನ್ ಗಳಿಸಬೇಕಾದ ಅನಿವಾರ್ಯತೆ. ಮುಸ್ತಫೀಜುರ್ ಎಸೆದ ಮೊದಲ ಎಸೆತದಲ್ಲಿ ಭುವನೇಶ್ವರ್ ಔಟ್ ಆದರು. ಈ ಓವರ್ ನ ಮೂರು ಎಸೆತದಲ್ಲಿ ರನ್ ಗಳಿಸುವ ಅವಕಾಶವಿದ್ದರೂ ಕೇದಾರ್ ಜಾದವ್ ಯಾವುದೇ ರನ್ ಗಳಿಸಲಿಲ್ಲ. ಕೊನೆಯ ಬಾಲಿನಲ್ಲಿ 2 ರನ್ ಓಡಿದ ಪರಿಣಾಮ ಕೊನೆಯ ಓವರ್ ನಲ್ಲಿ 6 ರನ್ ಬೇಕಿತ್ತು.

    ಕೊನೆಯ ಓವರ್ ಎಸೆಯಲು ಬಂದವರು ಮಹಮದುಲ್ಲಾ. ಮೊದಲ ಎಸೆತದಲ್ಲಿ 1 ರನ್ ಬಂದರೆ, ಎರಡನೇ ಎಸೆತದಲ್ಲಿ ಕೇದಾರ್ ಜಾದವ್ 1 ರನ್ ಹೊಡೆದರು. ಮೂರನೇ ಎಸೆತದಲ್ಲಿ ಕುಲದೀಪ್ ಯಾದವ್ 2 ರನ್ ಹೊಡೆದರು. ಕೊನೆಗೆ ಮೂರು ಎಸೆತದಲ್ಲಿ 2 ರನ್ ಗಳಿಸಬೇಕಾದ ಒತ್ತಡ. ನಾಲ್ಕನೇಯ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದ ವೇಳೆ ಕುಲದೀಪ್ ಯಾದವ್  ಒಂದು ರನ್ ಓಡಿದರು. ಈ ವೇಳೆ ರನ್ ಔಟ್ ಆಗುವ ಅವಕಾಶ ಇತ್ತು. ಕೊನೆಯ ಒಂದು ಎಸೆತದಲ್ಲಿ 1 ರನ್ ಗಳಿಸಬೇಕಿತ್ತು. ಈ ವೇಳೆ ಕೇದಾರ್ ಜಾದವ್ ಕೊನೆಯ ಎಸೆತವನ್ನು ಫೈನ್ ಲೆಗ್ ಕಡೆಗೆ ತಿರುಗಿಸಿ ಒಂದು ರನ್ ಗಳಿಸುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟರು.

    36.5 ಓವರ್ ವೇಳೆ 160 ರನ್ ಗಳಿಸಿದ್ದಾಗ ಧೋನಿ ಓಟಾದಾಗ ಭಾರತ ಸೋಲುತ್ತಾ ಎನ್ನುವ ಪ್ರಶ್ನೆ ಮೂಡಿತ್ತು. ಆದರೆ ರವಿಂದ್ರ ಜಡೇಜಾ ಮತ್ತು ಭುವನೇಶ್ವರ್ ಕುಮಾರ್ 6ನೇ ವಿಕೆಟ್ ಗೆ 45  ರನ್ ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ಸಮೀಪ ತಂದಿಟ್ಟಿದ್ದರು.

    ಯಾರು ಎಷ್ಟು ರನ್?
    ರೋಹಿತ್ ಶರ್ಮಾ 48, ಶಿಖರ್ ಧವನ್ 15, ದಿನೇಶ್ ಕಾರ್ತಿಕ್ 37, ಧೋನಿ 36, ಕೇದಾರ್ ಜಾಧವ್ ಔಟಾಗದೇ 23, ರವೀಂದ್ರ ಜಡೇಜಾ 23, ಭುವನೇಶ್ವರ್ ಕುಮಾರ್ 21 ರನ್ ಗಳಿಸಿದರು.

    ಸಾಧಾರಣ ಮೊತ್ತ:
    ಆರಂಭದಲ್ಲಿ ಉತ್ತಮ ಆರಂಭ ಪಡೆದರೂ ನಂತರ ಭಾರತೀಯ ಬೌಲರ್ ಗಳ ಉತ್ತಮ ಪ್ರದರ್ಶನದಿಂದ ಬಾಂಗ್ಲಾದೇಶ 48.3 ಓವರ್ ಗಳಲ್ಲಿ 222 ರನ್ ಗಳಿಗೆ ಆಲೌಟ್ ಆಗಿತ್ತು. ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 120 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ 31 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಪರಿಣಾಮ ಸಾಧಾರಣ ಮೊತ್ತ ಪೇರಿಸಿತ್ತು. ಧೋನಿ ಈ ಪಂದ್ಯದಲ್ಲಿ 2 ಸ್ಟಂಪ್ ಮಾಡಿ ಬಾಂಗ್ಲಾ ರನ್ ಗೆ ಕಡಿವಾಣ ಹಾಕಿದ್ದರು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ವಿಕೆಟ್ ಗೆ ಲಿಟನ್ ದಾಸ್ ಮತ್ತು ಮೆಹಿದಿ ಹಸನ್ ಮಿರಜ್ 20.5 ಓವರ್ ಗಳಲ್ಲಿ 120 ರನ್ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು. ಮೆಹಿದಿ 32 ರನ್(59 ಎಸೆತ, 3 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾಗಿದ್ದೆ ತಡ ಬಾಂಗ್ಲಾದ ಕುಸಿತ ಆರಂಭವಾಯಿತು. ನಂತರ ಬಂದ ಇಮ್ರಾಲ್ 2 ರನ್, ಮುಷ್ಫಿಕರ್ ರಹೀಂ 5 ರನ್, ಮೊಹಮ್ಮದ್ ಮಿಥುನ್ 2 ರನ್, ಮೊಹಮ್ಮದುಲ್ಲ 4 ರನ್ ಗಳಿಸಿ ಔಟಾದರು.

    ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ 107 ಎಸೆತದಲ್ಲಿ ಮೊದಲ ಶತಕ ಸಿಡಿಸಿದ ಲಿಟನ್ ದಾಸ್ ಅಂತಿಮವಾಗಿ 121 ರನ್(117 ಎಸೆತ, 12 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ಧೋನಿ ಸ್ಟಂಪ್ ಮಾಡಿ ಲಿಟನ್ ದಾಸ್ ಅವರನ್ನು ಔಟ್ ಮಾಡಿದರು.

    ಮಧ್ಯಮ ಕ್ರಮಾಂಕದಲ್ಲಿ ಸೌಮ್ಯಾ ಸರ್ಕಾರ್ ಸ್ವಲ್ಪ ಪ್ರತಿರೋಧ ತೋರಿದ ಕಾರಣ ಬಾಂಗ್ಲಾ ಮೊತ್ತ 200ರ ಗಡಿ ದಾಟಿತು. ಸೌಮ್ಯಾ ಸರ್ಕಾರ್ 33 ರನ್(45 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ 3 ಪಡೆದು ಮಿಂಚಿದರೆ ಕೇದಾರ್ ಜಾದವ್ 2, ಜಸ್ ಪ್ರೀತ್ ಬುಮ್ರಾ ಮತ್ತು ಚಹಲ್ 1 ವಿಕೆಟ್ ಕಿತ್ತರು.

    ಶತಕ ಹೊಡೆದ ಲಿಟನ್ ದಾಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದರೆ, ಶಿಖರ್ ಧವನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.