Tag: Asia Cup Cricket

  • ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು

    ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು

    ಭಾರತೀಯ ಆಟಗಾರರು ಹ್ಯಾಂಡ್ ಶೇಕ್ ಮಾಡದ ವಿವಾದದಿಂದ ಪಾಕ್ (Pakistan) ಇದ್ದ ಅಲ್ಪಸ್ವಲ್ಪ ಮಾನವನ್ನೂ ಈಗ ಕಳೆದುಕೊಂಡಿದೆ. ಇಂದು ಏಷ್ಯಾಕಪ್ (Asia Cup 2025) ಟೂರ್ನಿಯ ಗುಂಪು ಹಂತದಲ್ಲಿ ಯುಎಇ (UAE) ವಿರುದ್ಧ ನಿಗದಿಯಾಗಿದ್ದ ಕೊನೆಯ ಪಂದ್ಯ ಆಡುವುದಿಲ್ಲ ಎಂದು ಮೊಂಡುತನ ಮಾಡಿತ್ತು. ಜೊತೆಗೆ ಪಾಕ್ ಆಟಗಾರರನ್ನು ಕ್ರೀಡಾಂಗಣಕ್ಕೆ ಬಿಡದೇ ಹೋಟೆಲ್‌ನಲ್ಲೇ ಇರಿಸಿತ್ತು. ಆದರೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪಿಸಿಬಿ ಏಷ್ಯಾಕಪ್ ಕೊನೆಯ ಪಂದ್ಯವನ್ನ ಆಡಲು ನಿರ್ಧರಿಸಿದೆ.

    ಸೂಪರ್ ಫೋರ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ಏಷ್ಯಾ ಕಪ್ 2025 ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಲೇ ಇತ್ತು. ಪಿಸಿಬಿ ಪಾಕಿಸ್ತಾನ ತಂಡವನ್ನು ತಮ್ಮ ಹೋಟೆಲ್‌ನಲ್ಲಿಯೇ ಇರಲು ಆದೇಶಿಸಿ ಟಾಸ್ ವಿಳಂಬ ಮಾಡಿತು. ಭಾರೀ ಹೈಡ್ರಾಮಾ ಬಳಿಕ ಈ ಬಗ್ಗೆ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನೆಲೆ 7 ಗಂಟೆಯ ವೇಳೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರ ಬದಲಾಯಿಸಿತು. ಟಾಸ್ ಅನಗತ್ಯವಾಗಿ ಅರ್ಧ ಗಂಟೆ ವಿಳಂಬಗೊಂಡಿತು.

    ಪೈಕ್ರಾಫ್ಟ್ ಕ್ಷಮೆಯಾಚನೆಗೆ ಬೇಡಿಕೆ
    ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಕ್ಕೂ ಮುನ್ನ ಪೈಕ್ರಾಫ್ಟ್ ಅವರನ್ನು ಸಮಿತಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಬಳಿಕ ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿತ್ತು. ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಪಿಸಿಬಿ ಸಭೆ ನಡೆಸಿ, ಉದ್ದೇಶಪೂರ್ವಕವಾಗಿ ಪಂದ್ಯವನ್ನು ವಿಳಂಬಗೊಳಿಸಿತು. ಇದರ ನಂತರ, ಅಂತಿಮವಾಗಿ ಆಡಲು ನಿರ್ಧರಿಸಿತು.

    ಒಂದು ಗಂಟೆ ಪಂದ್ಯ ವಿಳಂಬ:
    ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯದ ಟಾಸ್ ಸಂಜೆ 7:30ಕ್ಕೆ ನಡೆಯಬೇಕಿತ್ತು, ಪಂದ್ಯವು ರಾತ್ರಿ 8 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ, ಪಂದ್ಯವು ಒಂದು ಗಂಟೆ ವಿಳಂಬವಾಗಿದೆ. ಈ ಪಂದ್ಯವು ಪಾಕಿಸ್ತಾನಕ್ಕೆ ಮಾಡು-ಇಲ್ಲ-ಮಡಿ ಪರಿಸ್ಥಿತಿಯಾಗಿದ್ದು, ಪಾಕಿಸ್ತಾನ ಸೋತರೆ, ಸೂಪರ್ ಫೋರ್‌ನಿಂದ ಹೊರಗುಳಿಯುತ್ತಾರೆ.

  • Asia Cup 2023 – ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್‌ಗಳ ಜಯ

    Asia Cup 2023 – ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್‌ಗಳ ಜಯ

    ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಸೂಪರ್‌ 4 ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ಪಾಕಿಸ್ತಾನ (Pakistan) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 193 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಪಡೆದ ಪಾಕಿಸ್ತಾನ 39.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 194 ರನ್‌ ಹೊಡೆಯಿತು.

    ಪಾಕ್‌ ಪರ ಇಮಾಮ್‌-ಉಲ್‌-ಹಕ್‌ 78 ರನ್‌‌ (84 ಎಸೆತ, 5 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರೆ ಮೊಹಮ್ಮದ್‌ ರಿಜ್ವಾನ್‌ ಔಟಾಗದೇ 63 ರನ್‌ (79 ಎಸೆತ, 7 ಬೌಂಡರಿ, 1 ಸಿಕ್ಸರ್) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಆರಂಭದಿಂದಲೇ ಕುಸಿತ:
    ಆರಂಭದಿಂದಲೇ ಕುಸಿತ ಕಂಡ ಬಾಂಗ್ಲಾದೇಶ 47 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಶಕಿಬ್‌ ಉಲ್‌ ಹಸನ್‌ 53 ರನ್‌(57 ಎಸೆತ,7 ಬೌಂಡರಿ), ಮುಷ್ಫಿಕರ್‌ ರೆಹಮನ್‌ 64 ರನ್(‌ 114 ಎಸೆತ, 5 ಬೌಂಡರಿ) ನಿಂತು ಸ್ವಲ್ಪ ಪ್ರತಿರೋಧ ತೋರಿದ ಪರಿಣಾಮ ಬಾಂಗ್ಲಾ ಸ್ಕೋರ್‌ 190ರ ಗಡಿ ದಾಟಿತ್ತು.

    ಹ್ಯಾರಿಸ್‌ ರೌಫ್‌ 4 ವಿಕೆಟ್‌ ಕಿತ್ತರೆ ನಸೀಮ್‌ ಶಾ 3 ವಿಕೆಟ್‌ ಪಡೆದರು. ಶಾಹಿನ್‌ ಶಾ ಅಫ್ರಿದಿ , ಅಶ್ರಫ್‌, ಆಗ ಸಲ್ಮಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು. 4 ವಿಕೆಟ್‌ ಪಡೆದ ಹಾರಿಸ್ ರೌಫ್ ಅವರಿಗೆ ಪಂದ್ಯ ಶ್ರೇಷ್ಠ ಗೌರವ ನೀಡಲಾಯಿತು.  ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ

    ಈ ಶನಿವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಮಧ್ಯೆ, ಭಾನುವಾರ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಕ್ರಿಕೆಟ್‌ ಪಂದ್ಯ ನಡೆಯಲಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

    ಮೆಹ್ದಿ, ನಜ್ಮಲ್‌ ಶತಕದ ಆಟ- ಬಾಂಗ್ಲಾಗೆ 89 ರನ್‌ಗಳ ಭರ್ಜರಿ ಜಯ

    ಲಾಹೋರ್‌: ಮೆಹ್ದಿ, ನಜ್ಮಲ್‌ ಶತಕದ ಆಟದಿಂದ ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ (Asia Cup Cricket) ಅಫ್ಘಾನಿಸ್ತಾನದ (Afghanistan) ವಿರುದ್ಧ ಬಾಂಗ್ಲಾದೇಶ (Bangladesh) 89 ರನ್‌ಗಳ ಭರ್ಜರಿ ಜಯಗಳಿಸಿದೆ.

    ಗೆಲ್ಲಲು 335 ರನ್‌ಗಳ ಕಠಿಣ ಗುರಿಯನ್ನು ಪಡೆದ ಅಫ್ಘಾನಿಸ್ತಾನ 44.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್‌ ಆಯ್ತು. ಇದನ್ನೂ ಓದಿ: Asia Cup ಭಾರತ Vs ನೇಪಾಳ ಪಂದ್ಯಕ್ಕೂ ಮಳೆ ಕಾಟ – ರದ್ದಾದ್ರೆ ಏನು?

    ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ 75 ರನ್‌ (74 ಎಸೆತ, 10 ಬೌಂಡರಿ, 1 ಸಿಕ್ಸರ್)‌, ಹಶ್ಮತುಲ್ಲಾ ಶಾಹಿದಿ 51 ರನ್‌ (60 ಎಸೆತ, 6 ಬೌಂಡರಿ), ರಹ್ಮತ್‌ ಶಾ 33 ರನ್‌ (‌ 51 ರನ್‌, 60 ಎಸೆತ, 6 ಬೌಂಡರಿ) ಕೊನೆಯಲ್ಲಿ ರಶೀದ್‌ ಖಾನ್‌ 24 ರನ್‌ (15 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಪ್ರತಿರೋಧ ತೋರಿದರು. ಬಾಂಗ್ಲಾ ಪರ ತಸ್ಕಿನ್‌ ಅಹ್ಮದ್‌ 4 ವಿಕೆಟ್‌, ಶರಿಫುಲ್ ಇಸ್ಲಾಂ 3 ವಿಕೆಟ್‌ ಕಿತ್ತರು.

    ಮೆಹ್ದಿ, ನಜ್ಮಲ್‌ ಶತಕದ ಆಟ:
    63 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದಾಗ ಜೊತೆಯಾದ ಮೆಹ್ದಿ ಹಸನ್‌ (Mehidy Hasan Miraz ) ಮತ್ತು ನಜ್ಮಲ್‌ ಹಸನ್‌ (Najmul Hossain Shanto) ಮೂರನೇ ವಿಕೆಟಿಗೆ 190 ಎಸೆತಗಳಲ್ಲಿ 194 ರನ್‌ ಜೊತೆಯಾಟವಾಡಿದರು.

    ಮೆಹ್ದಿ ಹಸನ್‌ 112 ರನ್‌(119 ಎಸೆತ, 7 ಬೌಂಡರಿ, 3 ಸಿಕ್ಸರ್)‌ ಸಿಡಿಸಿದರೆ ನಜ್ಮಲ್‌ 104 ರನ್‌ (105 ಎಸೆತ, 9 ಬೌಂಡರಿ, 2 ಸಿಕ್ಸರ್‌) ಸಿಡಿಸಿ ರನೌಟ್‌ ಆದರು.  ಇದನ್ನೂ ಓದಿ: ನೇಪಾಳ ಪಂದ್ಯಕ್ಕೆ ಗೈರು – ಭಾರತಕ್ಕೆ ಮರಳಿದ ಬುಮ್ರಾ

    ಕೊನೆಯಲ್ಲಿ ಮುಶ್ಫಿಕರ್ ರಹೀಮ್ 25 ರನ್‌ (15 ಎಸೆತ, 1 ಬೌಂಡರಿ, 1 ಸಿಕ್ಸರ್)‌ , ನಾಯಕ ಶಕಿಬ್‌ ಉಲ್‌ ಹಸನ್‌ 32 ರನ್‌( 18 ಎಸೆತ, 4 ಬೌಂಡರಿ, 1 ಸಿಕ್ಸರ್)‌ ಚಚ್ಚಿದ ಪರಿಣಾಮ ತಂಡದ ಮೊತ್ತ 330 ರನ್‌ಗಳ ಗಡಿದಾಟಿತು.

     

    ಗುಂಪು ಬಿಯಲ್ಲಿ ಬಾಂಗ್ಲಾ ಎರಡು ಪಂದ್ಯವಾಡಿ ಲಂಕಾ ವಿರುದ್ಧ ಸೋತಿರುವ ಹಿನ್ನೆಲೆಯಲ್ಲಿ 2 ಅಂಕ ಗಳಿಸಿದೆ. ಶ್ರೀಲಂಕಾ ಬಾಂಗ್ಲಾವನ್ನು ಸೋಲಿಸಿದ ಪರಿಣಾಮ 2 ಅಂಕ ಪಡೆದುಕೊಂಡಿದೆ. ಅಫ್ಘಾನಿಸ್ತಾನದ ನೆಟ್‌ ರನ್‌ ರೇಟ್‌ -1.780 ಇದ್ದು ಲಂಕಾ ವಿರುದ್ಧ ಭಾರೀ ಅಂತರದಿಂದ ಜಯಗಳಿಸಿದರೆ ಮಾತ್ರ ಸೂಪರ್‌ 4 ಪ್ರವೇಶಿಸಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಭೀರ್ ನಾನು ಉತ್ತಮ ಸ್ನೇಹಿತರು, ಒಟ್ಟಿಗೆ ಊಟ ಮಾಡುತ್ತಿದ್ದೆವು- ಪಾಕ್ ಕ್ರಿಕೆಟಿಗ

    ಗಂಭೀರ್ ನಾನು ಉತ್ತಮ ಸ್ನೇಹಿತರು, ಒಟ್ಟಿಗೆ ಊಟ ಮಾಡುತ್ತಿದ್ದೆವು- ಪಾಕ್ ಕ್ರಿಕೆಟಿಗ

    ಇಸ್ಲಾಮಾಬಾದ್: ಭಾರತ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು ಎಂದು ಪಾಕಿಸ್ತಾನ ಅನುಭವಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

    ಶ್ರೀಲಂಕಾದಲ್ಲಿ 2010ರಲ್ಲಿ ನಡೆದಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಪರಸ್ಪರ ಮುಖಾಮಖಿಯಾಗಿ ಅಕ್ಮಲ್, ಗಂಭೀರ್ ಜಗಳವಾಡಿದ್ದ ಘಟನೆ ಸಾಕಷ್ಟು ಮಂದಿಗೆ ನೆನಪಿರುತ್ತದೆ. ಅಂದು ಗಂಭೀರ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿದ್ದ ಅಕ್ಮಲ್ ಅನಗತ್ಯವಾಗಿ ಅಂಪೈರ್ ಗೆ ಮನವಿ ಮಾಡುತ್ತಿದ್ದರು. ಪರಿಣಾಮ ತಾಳ್ಮೆ ಕಳೆದುಕೊಂಡ ಗಂಭೀರ್ ಅಕ್ಮಲ್‍ಗೆ ಎಚ್ಚರಿಕೆ ನೀಡಿದ್ದರು. ಇದೇ ವೇಳೆ ಅಕ್ಮಲ್ ಕೂಡ ಕೋಪಗೊಂಡ ಹಿನ್ನೆಲೆಯಲ್ಲಿ ಆನ್‍ಫೀಲ್ಡ್ ನಲ್ಲೇ ಜಗಳ ವಾಡಿದ್ದರು. ಇದೇ ಪಂದ್ಯದಲ್ಲಿ ಡ್ರಿಂಕ್ಸ್ ವೇಳೆ ಮತ್ತೊಮ್ಮೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇತ್ತ ಮತ್ತೊಂದು ಬದಿಯಲ್ಲಿದ್ದ ನಾಯಕ ಧೋನಿ, ಗಂಭೀರ್ ಅವರಿಗೆ ಸಮಾಧಾನ ಹೇಳಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಗಮನರ್ಹವಾಗಿ ಎಲ್ಲರ ನೆನಪಿನಲ್ಲಿದೆ.

    ಬಳಿಕ 2012-13ರ ಭಾರತ, ಪಾಕ್ ನಡುವೆ ಬೆಂಗಳೂರಿನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಇಶಾಂತ್ ಶರ್ಮಾ, ಕಮ್ರಾನ್ ಅಕ್ಮಲ್ ವಾಗ್ವಾದ ನಡೆಸಿದ್ದರು. ಈ ಎರಡು ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮ್ರಾನ್ ಅಕ್ಮಲ್, ಈ ಘಟನೆಗಳನ್ನು ಕ್ರೀಡಾಂಗಣದಲ್ಲೇ ಮರೆತು ಹೋಗಿದ್ದೇನೆ. ನನ್ನ ಹಾಗೂ ಗಂಭೀರ್, ಇಶಾಂತ್ ನಡುವೆ ಉತ್ತಮ ಸ್ನೇಹವಿದೆ. ಪಂದ್ಯದ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಕಾರಣದಿಂದ ಜಗಳ ನಡೆದಿತ್ತು. ಗಂಭೀರ್ ನನಗೆ ಕ್ರೀಡಾಂಗಣದಲ್ಲಿ ಏನು ಹೇಳಿದರು ಎಂಬುವುದು ಅರ್ಥವಾಗದ ಕಾರಣ ಜಗಳ ನಡೆದಿತ್ತು. ಗಂಭೀರ್ ನಾನು ಉತ್ತಮ ಸ್ನೇಹಿತರಾದ ಕಾರಣ ಕ್ರಿಕೆಟ್ ಟೂರ್ನಿಗಳ ವೇಳೆ ಭೇಟಿ ಮಾಡಿ ಒಟ್ಟಿಗೆ ಊಟ ಮಾಡುತ್ತಿದ್ದೆವು. ಇಶಾಂತ್ ಜೊತೆಗಿನ ಘಟನೆಯೂ ಕೂಡ ಇಂತಹದ್ದೆ. ಇಂದಿಗೂ ನಾವು ಪರಸ್ಪರ ಗೌರವದಿಂದ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

    ಕಮ್ರಾನ್ ಅಕ್ಮಲ್ ಪಾಕಿಸ್ತಾನದ ಪರ 53 ಟೆಸ್ಟ್, 157 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನು ಆಡಿದ್ದು, ಇತ್ತೀಚೆಗೆ ಕಮ್ರಾನ್ ಅಕ್ಮಲ್ ಸಹೋದರ ಉಮರ್ ಅಕ್ಮಲ್ ವಿರುದ್ಧ ಪಿಸಿಬಿ ಮೂರು ವರ್ಷ ನಿಷೇಧ ವಿಧಿಸಿತ್ತು. ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಸಂಪರ್ಕ ನಡೆಸಿದ ವಿಚಾರವನ್ನು ಕ್ರಿಕೆಟ್ ಬೋರ್ಡಿಗೆ ತಿಳಿಸದ ಕಾರಣ ಪಿಸಿಬಿ ನಿಷೇಧ ವಿಧಿಸಿತ್ತು.