Tag: Asia Cup 2023

  • ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಇಸ್ಲಾಮಾಬಾದ್‌: ಪ್ರತಿಷ್ಠಿತ ಏಕದಿನ ಏಷ್ಯಾಕಪ್‌ (AsiaCup 2023) ಟೂರ್ನಿಗೆ ಇನ್ನೂ ಮೂರು ವಾರಗಳಷ್ಟೇ ಬಾಕಿಯಿದ್ದು, ಸೆ.2ರಂದು ನಡೆಯಲಿರುವ ಇಂಡೋಪಾಕ್‌ ರೋಚಕ ಕದನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಪಾಕ್‌ ತಂಡದ ಮಾಜಿ ವೇಗಿ ಸರ್ಫರಾಜ್‌ ನವಾಜ್‌, ಟೀಂ ಇಂಡಿಯಾ (Team India) ವಿನಾಶದತ್ತ ಸಾಗುತ್ತಿದೆ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್‌ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದಾರೆ.

    ಪಾಕಿಸ್ತಾನ (Pakistan) ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸರ್ಫರಾಜ್‌ ನವಾಜ್‌, ಟೀಂ ಇಂಡಿಯಾ ಇತ್ತೀಚೆಗೆ ವಿಂಡೀಸ್‌ (West Indies) ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ನಡೆಸಿದ ಪ್ರಯೋಗಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತ ತಂಡಕ್ಕೆ ಹೋಲಿಸಿದ್ರೆ ಪಾಕಿಸ್ತಾನ ತಂಡ 100% ಸ್ಥಿರವಾಗಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​ ಟೂರ್ನಿಗಳಿಗೆ ಅತ್ಯಂತ ಸ್ಥಿರವಾದ ತಂಡವನ್ನ ಹೊಂದಿದೆ. ಆದ್ರೆ ಭಾರತ ಇನ್ನೂ ಅಂತಿಮ ತಂಡವನ್ನ ಸಂಯೋಜನೆ ಮಾಡೋದಕ್ಕೆ ಹೆಣಗಾಡುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಿಂದ ಅತಿ ಹೆಚ್ಚು ಹಣ – ಜಸ್ಟ್ 1 ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತೆ ಕೋಟಿ ಕೋಟಿ

    ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಭಾರತ ತಂಡದ ಪರಿಸ್ಥಿತಿ ಅರ್ಥವಾಗುತ್ತಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​ಗೆ ತಮ್ಮ ತಂಡವನ್ನು ಸಂಯೋಜಿಸಲು ಪರದಾಡುತ್ತಿದೆ. ಯಾರನ್ನ ಯಾವ ಜಾಗದಲ್ಲಿ ಆಡಿಸಿದ್ರೆ ಉತ್ತಮ ಅನ್ನೋದೇ ಗೊಂದಲವಾಗಿ ಕಾಡುತ್ತಿದೆ. ಪದೆ ಪದೇ ನಾಯಕರು ಬದಲಾಗುತ್ತಿದ್ದಾರೆ. ಹೊಸ ಆಟಗಾರರನ್ನ ಕರೆ ತರುತ್ತಿದ್ದಾರೆ. ಮತ್ತೊಂದೆಡೆ ಆಟಗಾರರಿಗೆ ಗಾಯದ ಸಮಸ್ಯೆಗಳು. ಇದೆಲ್ಲಾ ನೋಡುತ್ತಿದ್ದರೆ, ಸರಿಯಾದ ಸಂಯೋಜನೆಗೆ ಸಿದ್ಧವಾಗಲು ಕಷ್ಟವಾಗುತ್ತಿದೆ ಎಂದೆನಿಸುತ್ತದೆ ಎಂದಿದ್ದಾರೆ.

    ಇದೇ ವೇಳೆ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಕಂಬ್ಯಾಕ್‌ ಕುರಿತು ಕಳವಳ ವ್ಯಕ್ತಪಡಿಸಿದ ನವಾಜ್‌, ಟೀಂ ಇಂಡಿಯಾ ತನ್ನ ಅಭಿವೃದ್ಧಿಗೆ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಬೆಂಚ್​ ಬಲವನ್ನ ಹೆಚ್ಚಿಸುವಲ್ಲಿ ವಿಫಲವಾಗುತ್ತಿದ್ದು, ವಿನಾಶದತ್ತ ಸಾಗುತ್ತಿದೆ. ಪ್ರಮುಖ ಟೂರ್ನಿಗಳು ಹತ್ತಿರದಲ್ಲಿರುವಾಗ ಯಾವ ರೀತಿ ಸಂಯೋಜನೆ ಮಾಡಬೇಕು ಎಂಬುದೇ ತಿಳಿದಿಲ್ಲ. ಈ ಅವಧಿಯಲ್ಲೂ ಪ್ರಯೋಗಗಳು ಅಗತ್ಯವೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ICC WorldCup 2023: ಭಾರತ-ಪಾಕ್‌ ಸೇರಿದಂತೆ ಪ್ರಮುಖ ಪಂದ್ಯಗಳ ವೇಳಾಪಟ್ಟಿ ಬದಲು

    ಐಸಿಸಿ ಟ್ರೋಫಿ ಗೆಲ್ಲುವ ಒತ್ತಡಕ್ಕೂ ಭಾರತ ಸಿಲುಕಿದೆ. ಏಕೆಂದರೆ ಕಳೆದ 10 ವರ್ಷಗಳಲ್ಲಿ ಟೀಂ ಇಂಡಿಯಾ ಐಸಿಸಿಯ ಯಾವುದೇ ಟ್ರೋಫಿ ಗೆದ್ದಿಲ್ಲ ಎಂದು ನವಾಜ್ ವಿವರಿಸಿದ್ದಾರೆ.

    ಇದೇ ಆಗಸ್ಟ್‌ 30 ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಕದಿನ ಏಷ್ಯಾಕಪ್‌ ಟೂರ್ನಿ ಆಯೋಜನೆಗೊಂಡಿದೆ. ಆ ನಂತರ ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ಭಾರತದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ಇಸ್ಲಾಮಾಬಾದ್: ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡವು (Pakistan Cricket Team) 2023ರ ವಿಶ್ವಕಪ್ ಟೂರ್ನಿಗೆ ಭಾರತಕ್ಕೆ ಪ್ರಯಾಣಿಸಲಿದೆ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಖಚಿತಪಡಿಸಿದೆ.

    2023ರ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗಾಗಿ ಪಾಕಿಸ್ತಾನ ತಂಡವು ಭಾರತಕ್ಕೆ ಪ್ರಯಾಣಿಸಲಿದೆ. ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಕ್ರೀಡೆಗೆ ಅಡ್ಡಿಯಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ಪಾಕ್ ತಂಡ ಭಾರತದ ವಿರುದ್ಧ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಆದ್ರೆ ಅಕ್ಟೋಬರ್ 15 ರಂದು ನವರಾತ್ರಿ ಉತ್ಸವದ ಆರಂಭದ ದಿನ ಆಗಿರುವುದರಿಂದ ದಿನಾಂಕ ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾರು ಅಪಘಾತ – ಇಬ್ಬರು ಮಕ್ಕಳು ಸೇರಿ 6 ಮಂದಿ ನೇಪಾಳಿ ಪ್ರಜೆಗಳು ದುರ್ಮರಣ

    ಕ್ರೀಡೆಯನ್ನು (Sports) ರಾಜಕೀಯದಿಂದೊಗೆ ಬೆರಸಬಾರದು ಎಂಬುದನ್ನ ಪಾಕಿಸ್ತಾನ ನಿರಂತರವಾಗಿ ಸಮರ್ಥಿಸಿಕೊಂಡಿದೆ. ಆದ್ದರಿಂದ ಮುಂಬರುವ ಐಸಿಸಿ ಟೂರ್ನಿಯಲ್ಲಿ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ಹೇಳಿದೆ.

    ಏಕದಿನ ಏಷ್ಯಾಕಪ್ (ODI AsiaCup) ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದ್ರೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತು. ಆದ್ದರಿಂದ ಶ್ರೀಲಂಕಾದಲ್ಲಿ ನಿಗದಿಯಾಗಿದೆ. ಭಾರತ ಕಠಿಣ ನಿರ್ಧಾರ ತೋರಿದ ಹೊರತಾಗಿಯೂ ಪಾಕಿಸ್ತಾನದ ಈ ನಿರ್ಧಾರ ತನ್ನ ಜವಾಬ್ದಾರಿಯನ್ನ ತೋರಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಕಳೆದ ಕೆಲವು ದಿನಗಳಲ್ಲಿ ಪಾಕಿಸ್ತಾನದ ಅಧಿಕಾರಿಗಳ ಸಮಿತಿ ಭಾರತಕ್ಕೆ ಭೇಟಿ ನೀಡಿತ್ತು. ಇಲ್ಲಿ ಪಾಕ್ ತಂಡಕ್ಕೆ ನೀಯೋಜಿಸಲಾದ ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ವಿವಿಧ ಸ್ಥಳಗಳಿಗೆ ಅಧಿಕಾರಿಗಳ ತಂಡ ಪ್ರಯಾಣಿಸಿತ್ತು. 2016ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಸೆಣಸಾಟ ನಡೆಸಿತ್ತು. ಆ ನಂತರ ಇದೇ ಮೊದಲಿಗೆ ಭಾರತಕ್ಕೆ ಪಾಕ್ ತಂಡ ಪ್ರಯಾಣಿಸುತ್ತಿದೆ.


    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾ ರೋಹಿತ್‌, ಕೊಹ್ಲಿಯನ್ನ ನೆಚ್ಚಿಕೊಂಡಿಲ್ಲ – ಶ್ರೀಲಂಕಾ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?

    ಟೀಂ ಇಂಡಿಯಾ ರೋಹಿತ್‌, ಕೊಹ್ಲಿಯನ್ನ ನೆಚ್ಚಿಕೊಂಡಿಲ್ಲ – ಶ್ರೀಲಂಕಾ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?

    ಕೊಲಂಬೊ: ಏಕದಿನ ಏಷ್ಯಾಕಪ್‌ (Asia Cup 2023) ಮತ್ತು ವಿಶ್ವಕಪ್‌ನಂತಹ (WorldCup 2023) ಪ್ರತಿಷ್ಠಿತ ಟೂರ್ನಿಗಳಲ್ಲಿ ʻಟ್ರಂಪ್‌ ಕಾರ್ಡ್‌ʼ (ಮುಖ್ಯ ಪ್ಲೇಯರ್ಸ್‌) ಎಂದು ಪರಿಗಣಿಸಲಾದ ಅನೇಕ ಯುವ ಆಟಗಾರರು ಇರೋದ್ರಿಂದ ಭಾರತ ತಂಡವು ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ಅವರ ಮೇಲೆ ಅವಲಂಬಿತವಾಗಿಲ್ಲ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಚಮಿಂದಾ ವಾಸ್‌ ಅಭಿಪ್ರಾಯಪಟ್ಟಿದ್ದಾರೆ.

    ಆಗಸ್ಟ್‌ 30 ರಿಂದ ಸೆಪ್ಟೆಂಬರ್‌ 17ರ ವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದ (SriLanka) ವಿವಿಧ ಕ್ರೀಡಾಂಗಣಗಳಲ್ಲಿ ಏಕದಿನ ಏಷ್ಯಾಕಪ್‌ ಟೂರ್ನಿ ನಡೆಯಲಿದೆ. ಈ ಬಾರಿ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿರುವುದರಿಂದ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿದ ಚಮಿಂದಾ ವಾಸ್‌ ಹೀಗೆ ಹೇಳಿದ್ದಾರೆ.

    ಟೀಂ ಇಂಡಿಯಾಕ್ಕೆ (Team India) ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮಾತ್ರ ಮುಖ್ಯ ಪ್ಲೇಯರ್‌ಗಳಲ್ಲ, ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌ ಅವರಂತಹ ಅನೇಕ ಕ್ರಿಕೆಟಿಗರು ಟ್ರಂಪ್‌ ಕಾರ್ಡ್‌ ಆಗಿದ್ದಾರೆ. ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಹೀಗೆ ಇನ್ನೂ ಅನೇಕ ಪ್ರತಿಭೆಗಳಿವೆ. ಆದ್ದರಿಂದ ಟೀಂ ಇಂಡಿಯಾ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರಿಬ್ಬರ ಮೇಲೆಯೇ ಸಾರ್ವಕಾಲಿಕವಾಗಿ ಅವಲಂಭಿತವಾಗಿಲ್ಲ. ಒಂದು ವೇಳೆ ಅವರು ಉತ್ತಮ ಪ್ರದರ್ಶನ ನೀಡಿದರೆ ಭಾರತ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

    ಬುಮ್ರಾ ಬಂದ್ರೆ ಲಾಭ:
    ಇದೇ ವೇಳೆ ಜಸ್ಪ್ರೀತ್‌ ಬುಮ್ರಾ (Jasprit Bumrah) ಕಂಬ್ಯಾಕ್‌ ಕುರಿತು ಮಾತನಾಡಿದ ಚಮಿಂದಾ ವಾಸ್‌, ಬುಮ್ರಾ ಟೀಂ ಇಂಡಿಯಾಕ್ಕೆ ಮರಳಿದರೆ ಇನ್ನಷ್ಟು ಲಾಭವಾಗಲಿದೆ. ಏಕೆಂದರೆ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಟೀಂ ಇಂಡಿಯಾ ನಿಜಕ್ಕೂ ಅವರ ಸೇವೆಯನ್ನ ಎದುರುನೋಡುತ್ತಿದೆ. ಈಗಾಗಲೇ ಅವರು ಫಿಟ್‌ ಆಗಿದ್ದಾರೆ ಅಂತಾ ಹೇಳಲಾಗುತ್ತಿದೆ. ವಿಶ್ವಕಪ್‌ ವೇಳೆಗೆ ಮರಳಿದರೆ ಟೀಂ ಇಂಡಿಯಾಕ್ಕೆ ಅದಕ್ಕಿಂತ ದೊಡ್ಡ ಲಾಭ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮುಂದುವರಿದು.. ಕಳೆದ ಬಾರಿ ಟಿ20 ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಂತೆ, ಏಕದಿನ ಏಷ್ಯಾಕಪ್‌ ಟೂರ್ನಿಯಲ್ಲೂ ಚಾಂಪಿಯನ್‌ಪಟ್ಟ ಗಿಟ್ಟಿಸಿಕೊಳ್ಳಲು ತಂಡ ಎದುರು ನೋಡುತ್ತಿದೆ. ಆದ್ರೆ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳೆಲ್ಲವೂ ಉತ್ತಮವಾಗಿರೋದ್ರಿಂದ ಮುಂದೆ ಕಾದು ನೋಡಬೇಕು ಅಂತಾ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ ಆಟಗಾರರು ಹುಲಿಗಳಂತೆ ಆಡ್ತಾರೆ, ಭಾರತವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ – ಪಾಕ್‌ ಮಾಜಿ ಕ್ರಿಕೆಟಿಗ

    ಪಾಕ್‌ ಆಟಗಾರರು ಹುಲಿಗಳಂತೆ ಆಡ್ತಾರೆ, ಭಾರತವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ – ಪಾಕ್‌ ಮಾಜಿ ಕ್ರಿಕೆಟಿಗ

    ಇಸ್ಲಾಮಾಬಾದ್‌: ಪಾಕಿಸ್ತಾನ (Pakistan) ತಂಡದ ಆಟಗಾರರು ಹುಲಿಗಳಂತೆ ಆಟವಾಡಿ ಭಾರತ ತಂಡವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ ಎಂದು ಪಾಕ್‌ ಮಾಜಿ ಕ್ರಿಕೆಟಿಗ ವಕಾರ್‌ ಯೂನಿಸ್‌ (Waqar Younis) ಹೇಳಿದ್ದಾರೆ.

    ಏಕದಿನ ಏಷ್ಯಾಕಪ್‌ ಟೂರ್ನಿಯ (AsiaCup 2023) ವೇಳಾಪಟ್ಟಿ ಬುಧವಾರ ಬಿಡುಗಡೆಗೊಂಡಿದೆ. `ಎ’ ಗುಂಪಿನಲ್ಲಿ ಭಾರತ (eam India), ಪಾಕಿಸ್ತಾನ, ನೇಪಾಳ ತಂಡಗಳಿದ್ದು, `ಬಿ’ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ. ಪಾಕಿಸ್ತಾನದ ಲಾಹೋರ್ ಮತ್ತು ಮುಲ್ತಾನ್ ಕ್ರೀಡಾಂಗಣಗಳಲ್ಲಿ 4 ಪಂದ್ಯಗಳು ಮಾತ್ರ ನಡೆಯಲಿದ್ದು, ಉಳಿದ 9 ಪಂದ್ಯಗಳು ಲಂಕಾದ ಕ್ಯಾಂಡಿ ಮತ್ತು ಕೊಲಂಬೋದಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಕೊಲಂಬೋ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

    ಗುರುವಾರ ಏಷ್ಯಾಕಪ್ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಪಾಕ್‌ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್, 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ದಾಖಲಿಸಿದ ಗೆಲುವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಇದನ್ನೂ ಓದಿ: AsiaCup 2023: ಅಂದುಕೊಂಡಂತೆ ನಡೆದ್ರೆ 15 ದಿನಗಳಲ್ಲಿ 3 ಬಾರಿ ಇಂಡೋ-ಪಾಕ್ ಕದನ ಫಿಕ್ಸ್

    ನಮ್ಮ ಕಾಲದಲ್ಲಿ ಭಾರತದ ವಿರುದ್ಧ ಅನೇಕ ಟೂರ್ನಿಗಳಲ್ಲಿ ಗೆದ್ದಿರಲಿಲ್ಲ. ಆದ್ರೆ ಹುಡುಗರು ಇತ್ತೀಚೆಗೆ ದೊಡ್ಡ ಪಂದ್ಯಗಳಲ್ಲಿ ಭಾರತದ ವಿರುದ್ಧ ಗೆಲ್ಲಲ್ಲು ಪ್ರಾರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ತಂಡದಲ್ಲಿ ಪ್ರತಿಭೆ ಇರೋದು ಇದರಿಂದ ಗೊತ್ತಾಗಿದೆ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ರೆ ಭಾರತದ ವಿರುದ್ಧ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ತಂಡದ ಆಟಗಾರರು ಹುಲಿಗಳಂತೆ ಆಟವಾಡಿ ಭಾರತ ತಂಡವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ ಎಂದು ಹೇಳಿದ್ದಾರೆ.

    ಕಳೆದ ವರ್ಷ ಟಿ20 ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿದ್ದ ಪಾಕಿಸ್ತಾನ, ಸೂಪರ್‌ ಫೋರ್‌ ಹಂತದಲ್ಲಿ ಗೆದ್ದು ಸೇಡು ತೀರಿಸಿಕೊಂಡಿತ್ತು. ಈ ಬೆನ್ನಲ್ಲೇ ನಡೆದ ಟಿ20 ವಿಶ್ವಕಪ್‌ ಟೀಂ ಇಂಡಿಯಾ ಆರಂಭಿಕ ಪಂದ್ಯದಲ್ಲಿ ಮತ್ತೆ ಪಾಕ್‌ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • AsiaCup 2023: ಅಂದುಕೊಂಡಂತೆ ನಡೆದ್ರೆ 15 ದಿನಗಳಲ್ಲಿ 3 ಬಾರಿ ಇಂಡೋ-ಪಾಕ್ ಕದನ ಫಿಕ್ಸ್

    AsiaCup 2023: ಅಂದುಕೊಂಡಂತೆ ನಡೆದ್ರೆ 15 ದಿನಗಳಲ್ಲಿ 3 ಬಾರಿ ಇಂಡೋ-ಪಾಕ್ ಕದನ ಫಿಕ್ಸ್

    ಮುಂಬೈ: ಬಹು ನಿರೀಕ್ಷಿತ 2023 ಏಷ್ಯಾಕಪ್ (AsiaCup 2023) ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತ ಮತ್ತು ಪಾಕಿಸ್ತಾನ (Ind vs Pak) ತಂಡಗಳು 15 ದಿನಗಳ ಅಂತರದಲ್ಲಿ ಮೂರು ಬಾರಿ ಮುಖಾಮುಖಿಯಾಗಲಿವೆ.

    ಕಳೆದ ವರ್ಷ ಟಿ20 ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿ ಬಳಿಕ ಮತ್ತೆ ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿಯಲು ದಿನಾಂಕ ಫಿಕ್ಸ್ ಆಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಲಂಕಾ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ.

    ಉಭಯ ತಂಡಗಳ ಕ್ರಿಕೆಟ್ ಪ್ರಿಯರು ಇಂಡೋ-ಪಾಕ್ ರೋಚಕ ಕದನಕ್ಕಾಗಿ ಕಾದು ಕುಳಿತಿದ್ದಾರೆ. ಗೆಲುವಿಗಾಗಿ ಇತ್ತಂಡಗಳು ಭಾರೀ ಕಸರತ್ತನ್ನೇ ನಡೆಸಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿವೆ. ಇದನ್ನೂ ಓದಿ: PublicTV Explainer: ಇಂಡೋ-ಪಾಕ್‌ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..

    ಭಾರತ, ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯ `ಎ’ ಗುಂಪಿನಲ್ಲಿ ನೇಪಾಳ ತಂಡದೊಂದಿಗೆ ಸ್ಥಾನ ಪಡೆದಿದ್ದು, ಲೀಗ್ ಹಂತದಲ್ಲಿ ಮೊದಲ ಬಾರಿ ಮುಖಾಮುಖಿಯಾಗಲಿವೆ. ಇದಾದ ಬಳಿಕ ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಎದುರಾಗಲಿದೆ. ಸತತ ಹೋರಾಟಗಳಿಂದ ಭಾರತ ಮತ್ತು ಪಾಕಿಸ್ತಾನ ಫೈನಲ್ ಪ್ರವೇಶಿಸಿದರೆ ಮತ್ತೊಮ್ಮೆ ತೀವ್ರ ಹಣಾಹಣಿ ನಡೆಸಲಿದ್ದು, ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಇದನ್ನೂ ಓದಿ: ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

    ಈ ಬಾರಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಏಷ್ಯಾಕಪ್ ಟೂರ್ನಿ ನಡೆಯುತ್ತಿದ್ದು, ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ಒಟ್ಟು 13 ಪಂದ್ಯಗಳು ನಡೆಯಲಿವೆ. `ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ತಂಡಗಳಿದ್ದು, ‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ. ಪಾಕಿಸ್ತಾನದ ಲಾಹೋರ್ ಮತ್ತು ಮುಲ್ತಾನ್ ಕ್ರೀಡಾಂಗಣಗಳಲ್ಲಿ 4 ಪಂದ್ಯಗಳು ಮಾತ್ರ ನಡೆಯಲಿದ್ದು, ಉಳಿದ 9 ಪಂದ್ಯಗಳು ಲಂಕಾದ ಕ್ಯಾಂಡಿ ಮತ್ತು ಕೊಲಂಬೋದಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಕೊಲಂಬೋ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

    ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

    ನವದೆಹಲಿ: ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ACC) ಮುಂಬರುವ ಏಷ್ಯಾ ಕಪ್‌ 2023 ಟೂರ್ನಿಯ (Asia Cup 2023) ಅಧಿಕೃತ ವೇಳಾಪಟ್ಟಿ ಹೊರಬಿದ್ದಿದೆ. ಪಂದ್ಯಾವಳಿಯು ಆಗಸ್ಟ್ 30 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ.

    ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದ್ದು, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ರಾಷ್ಟ್ರಗಳು ಭಾಗವಹಿಸಲಿವೆ. ಇದನ್ನೂ ಓದಿ: RCB ಏಕೆ ಐಪಿಎಲ್‌ ಟ್ರೋಫಿ ಗೆದ್ದಿಲ್ಲ – ತಂಡದಿಂದ ಕೈಬಿಟ್ಟ ಮೇಲೆ ಪ್ರಾಮಾಣಿಕ ಉತ್ತರ ಕೊಟ್ಟ ಚಾಹಲ್‌

    ಈ ಕುರಿತು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಜಯ್‌ ಶಾ ಟ್ವೀಟ್‌ ಮಾಡಿ, ಬಹು ನಿರೀಕ್ಷಿತ ಪುರುಷರ ODI Asia Cup 2023 ವೇಳಾಪಟ್ಟಿಯನ್ನು ಪ್ರಕಟಿಸಲು ನನಗೆ ಸಂತೋಷವಾಗಿದೆ. ಇದು ವೈವಿಧ್ಯಮಯ ರಾಷ್ಟ್ರಗಳನ್ನು ಒಟ್ಟಿಗೆ ಬೆಸೆಯುವ ಏಕತೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಕ್ರಿಕೆಟ್ ಶ್ರೇಷ್ಠತೆಯ ಸಂಭ್ರಮದಲ್ಲಿ ಕೈಜೋಡಿಸೋಣ ಎಂದು ಬರೆದುಕೊಂಡಿದ್ದಾರೆ.

    ಪಾಕ್‌-ಭಾರತ ಹೈವೋಲ್ಟೇಜ್‌ ಪಂದ್ಯ
    ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India – Pakistan Match) ನಡುವಣ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: Test Cricketː ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!

    ಏಷ್ಯಾ ಕಪ್‌ 2023 ಟೂರ್ನಿಯು ಸಂಪೂರ್ಣವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ಆಯೋಜನೆ ಆಗಬೇಕಿತ್ತು. ಪಾಕಿಸ್ತಾನದಲ್ಲಿ ನಡೆದರೆ ಟೀಮ್‌ ಇಂಡಿಯಾ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು. ಹೀಗಾಗಿ ಎಸಿಸಿ ಕೂಡ ತನ್ನ ನಿಲುವು ಬದಲಾಯಿಸಿತ್ತು. ಹೈಬ್ರಿಡ್‌ ನಿಯಮದೊಂದಿಗೆ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ನಡೆಸಲು ಮುಂದಾಗಿದೆ.

    ಭಾರತ, ಪಾಕಿಸ್ತಾನ, ನೇಪಾಳ ತಂಡಗಳು ‘ಎ’ ಗುಂಪಿನಲ್ಲಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ‘ಬಿ’ ಗುಂಪಿನಲ್ಲಿ ಪೈಪೋಟಿ ನಡೆಸಲಿವೆ. ಗ್ರೂಪ್‌ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೂಪರ್‌ 4 ಹಂತಕ್ಕೆ ತೇರ್ಗಡೆ ಆಗಲಿವೆ. ಸೂಪರ್‌ 4 ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳ ನಡುವೆ ಫೈನಲ್‌ ನಡೆಯಲಿದೆ. ಇದನ್ನೂ ಓದಿ: ಅಂದು ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಹೀರೋ, ಈಗ ನೆರೆ ಸಂತ್ರಸ್ತರ ಪಾಲಿನ ಆಪದ್ಬಾಂಧವ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ಮುಂಬೈ: ಭಾರೀ ಕುತೂಹಲ ಕೆರಳಿಸಿದ್ದ 2023ರ ಆವೃತ್ತಿಯ ಏಷ್ಯಾಕಪ್ (Asia Cup 2023) ಟೂರ್ನಿಯ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ವರೆಗೆ ಏಷ್ಯಾಕಪ್ ಟೂರ್ನಿ ನಡೆಯಲಿದ್ದು, ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾ (SriLanka) ದೇಶಗಳು ಜಂಟಿ ಆತಿಥ್ಯ ವಹಿಸಲಿವೆ.

    ಈ ಟೂರ್ನಿಯು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಏಷ್ಯಾಕಪ್ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯೇ ಇದ್ದರೂ, ಭಾರತ-ಪಾಕಿಸ್ತಾನದಲ್ಲಿ (Ind vs Pak) ಆಡಲು ಒಪ್ಪಿಗೆ ಸೂಚಿಸದ ಕಾರಣ ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾಕಪ್ ಕ್ರಿಕೆಟ್ ಸಮಿತಿ (ACC) ನಿರ್ಧರಿಸಿದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳಲಿದ್ದು, 3 ತಂಡಗಳ 2 ಗುಂಪು ರಚಿಸಲಾಗಿದೆ. ಭಾರತ, ಪಾಕಿಸ್ತಾನ ಮತ್ತು ನೇಪಾಳ `A’ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು `B’ ಗುಂಪಿನಲ್ಲಿ ಇರಲಿವೆ. ಎರಡು ಗುಂಪಿನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಲು ಸೂಪರ್ ಫೋರ್ ಪ್ರವೇಶಿಸಲಿವೆ. ರಾಬಿನ್ ರೌಂಡ್ಸ್ ಮಾದರಿಯಲ್ಲಿ ನಡೆಯಲಿರುವ ಸೂಪರ್ ಫೋರ್ ಹಂತದಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಲಿವೆ.

    ಏಷ್ಯಾಕಪ್‌ನ 4 ಪಂದ್ಯಗಳು ಮಾತ್ರ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆಯಲಿದ್ದು, 9 ಪಂದ್ಯಗಳು ಶ್ರೀಲಂಕಾದ ಪಲ್ಲೆಕೆಲೆ ಹಾಗೂ ಕ್ಯಾಂಡಿನಗರಗಳಲ್ಲಿ ನಡೆಯಲಿದೆ. ಆದ್ರೆ ಪಂದ್ಯಗಳು ನಡೆಯವ ದಿನಾಂಕಗಳನ್ನ ಏಷ್ಯಾಕಪ್ ಕ್ರಿಕೆಟ್ ಸಮಿತಿ ಇನ್ನಷ್ಟೇ ಪ್ರಕಟಿಸಬೇಕಿದೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

    ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ:
    ಗಾಯದ ಸಮಸ್ಯೆಯಿಂದಾಗಿ T20 ವಿಶ್ವಕಪ್ (T20 Worldcup), 2023ರ ಐಪಿಎಲ್ ಟೂರ್ನಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟೂರ್ನಿಗಳಲ್ಲಿ ಅವಕಾಶ ಕಳೆದುಕೊಂಡ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಏಕದಿನ ಏಷ್ಯಾಕಪ್ ವೇಳೆಗೆ ಟೀಂ ಇಂಡಿಯಾಕ್ಕೆ ಮರಳುವ ಸಾಧ್ಯತೆಯಿದೆ. ಜೊತೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಹೊರಗುಳಿದ ಶ್ರೇಯಸ್ ಅಯ್ಯರ್ ಸಹ ಟೀಂ ಇಂಡಿಯಾಕ್ಕೆ ಉತ್ತಮ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

  • ಮಹಿಳೆಯರ ಜೂನಿಯರ್ ಏಷ್ಯಾ ಕಪ್ – ಚೊಚ್ಚಲ ಟ್ರೋಫಿ ಗೆದ್ದ ಭಾರತ

    ಮಹಿಳೆಯರ ಜೂನಿಯರ್ ಏಷ್ಯಾ ಕಪ್ – ಚೊಚ್ಚಲ ಟ್ರೋಫಿ ಗೆದ್ದ ಭಾರತ

    ಟೋಕಿಯೊ: ಜಪಾನಿನ ಕಾಕಾಮಿಗಾರಾದಲ್ಲಿ ನಡೆದ ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಹಾಕಿ (Womens Junior Asia Cup 2023 Hockey) ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನ 2-1 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಭಾರತ ತಂಡ (Indian Hockey Team) ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

    ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ಅನು (21) ಮತ್ತು ನೀಲಂ (40) ಅವರು ಭಾರತ ತಂಡದ ಪರ ಗೋಲುಗಳನ್ನು ದಾಖಲಿಸಿದರೆ, 4 ಬಾರಿಯ ಚಾಂಪಿಯನ್ ಆಗಿದ್ದ ದಕ್ಷಿಣ ಕೊರಿಯಾ (South Korea) ಪರ ಏಕೈಕ ಗೋಲನ್ನು ಸಿಯೊಯಾನ್ ಪಾರ್ಕ್ (24) ದಾಖಲಿಸಿದರು. ಇದಕ್ಕೂ ಮುನ್ನ ಶನಿವಾರ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು 1-0 ಯಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ವರ್ಷಾಂತ್ಯಕ್ಕೆ ನಡೆಯುವ ಜೂನಿಯರ್ ಮಹಿಳಾ ವಿಶ್ವಕಪ್‌ಗೂ (Womens Hockey World Cup 2023) ಅರ್ಹತೆ ಪಡೆದುಕೊಂಡಿತು.

    2012ರಲ್ಲಿ ಫೈನಲ್‌ಗೆ ತಲುಪಿದ್ದೇ ಭಾರತ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಅಂದು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಟೂರ್ನಿಯ ಫೈನಲ್ ಮ್ಯಾಚ್‌ನಲ್ಲಿ ಚೀನಾ ತಂಡದ ವಿರುದ್ಧ 2-5 ಗೋಲುಗಳಿಂದ ಸೋಲನುಭವಿಸಿತ್ತು. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ

    ಏಷ್ಯಾಕಪ್ ಫೈನಲ್ ಮ್ಯಾಚ್‌ನ 22ನೇ ನಿಮಿಷದಲ್ಲಿ ಅನು ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ಪರ ಮೊದಲ ಗೋಲು ದಾಖಲಿಸುವ ಮೂಲಕ ಆರಂಭಿಕ ಮುನ್ನಡೆ ತಂದುಕೊಟ್ಟರು. ಅದಾದ ಮೂರೇ ನಿಮಿಷದಕ್ಕೆ ಎದುರಾಳಿ ತಂಡದ ಸಿಯೊಯಾನ್ ಪಾರ್ಕ್ ಸಹ ಮೊದಲ ಗೋಲು ಸಿಡಿಸಿ ಸಮಬಲ ಸಾಧಿಸಿದ್ದರು. ವಿರಾಮದ ನಂತರ 41ನೇ ನಿಮಿಷಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಿರುಸಿನ ಹೊಡೆತ ಬಾರಿಸಿದ ನೀಲಂ ಮತ್ತೊಂದು ಗೋಲ್ ಬಾರಿಸುವ ಮೂಲಕ ಭಾರತಕ್ಕೆ ಮತ್ತೊಮ್ಮೆ ಮುನ್ನಡೆ ತಂದುಕೊಟ್ಟರು. ಎದುರಾಳಿ ತಂಡದ ಆಟಗಾರರು ಮತ್ತೊಮ್ಮೆ ಗೋಲ್ ಬಾರಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಅವರನ್ನು ನಿಯಂತ್ರಿಸುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಇದರಿಂದ ಭಾರತ 2-1 ಅಂತರದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಜಯ ಸಾಧಿಸಿತು. ಇದನ್ನೂ ಓದಿ: WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

    ಭಾರತದ ಕೀರ್ತಿಪತಾಕೆ ಹಾರಿಸಿದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 2023ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದ ನಮ್ಮ ಯುವ ಚಾಂಪಿಯನ್‌ಗಳಿಗೆ ಅಭಿನಂದನೆಗಳು. ಭಾರತ ತಂಡವು ಅಪಾರ ಪರಿಶ್ರಮ, ಪ್ರತಿಭೆ ಹಾಗೂ ಸಾಂಘಿಕತೆಯನ್ನು ಪ್ರದರ್ಶಿಸಿದೆ. ಯುವ ಚಾಂಪಿಯನ್‌ಗಳು ನಮ್ಮ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.

  • ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    ಮುಂಬೈ: ಮೊಬೈಲಿನಲ್ಲಿ ಕ್ರಿಕೆಟ್ ವೀಕ್ಷಿಸುವ ಬಳಕೆದಾರರಿಗೆ ಡಿಸ್ನಿ ಹಾಟ್‌ಸ್ಟಾರ್ (Disney Hotstar) ಸಿಹಿ ಸುದ್ದಿ ಕೊಟ್ಟಿದೆ. ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಏಕದಿನ ಏಷ್ಯಾಕಪ್ (Asia Cup 2023) ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ (ICC Cricket World Cup) ಮೊಬೈಲ್ ಆ್ಯಪ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

    2023ರಲ್ಲಿ ನಡೆದ 16ನೇ ಐಪಿಎಲ್ ಆವೃತ್ತಿಯಲ್ಲಿ ಜಿಯೋಸಿನಿಮಾ (JioCinema) ಆ್ಯಪ್ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಸಕ್ಸಸ್ ಕಂಡಿತು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವನ್ನ 3.2 ಕೋಟಿ ಜನ ಏಕಕಾಲಕ್ಕೆ ವೀಕ್ಷಣೆ ಮಾಡಿದ್ದರು. ಇದು ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿತು. ಹಾಗಾಗಿ ಪ್ರತಿಸ್ಪರ್ಧಿ ಡಿಸ್ನಿ ಹಾಟ್‌ಸ್ಟಾರ್ 2023ರಲ್ಲಿ ನಡೆಯಲಿರುವ ಏಕದಿನ ಏಷ್ಯಾಕಪ್ ಹಾಗೂ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದೆ.

    ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ಸೆಪ್ಟಂಬರ್ 2 ರಿಂದ ಸೆಪ್ಟಂಬರ್ 17ರ ವರೆಗೆ ಏಕದಿನ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಏಕದಿನ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಟೂರ್ನಿಗಳನ್ನ ಹಾಟ್‌ಸ್ಟಾರ್ ಮೊಬೈಲ್ ಆ್ಯಪ್ ಬಳಕೆದಾರರು ಚಂದಾದಾರರಾಗದೆಯೂ ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದನ್ನೂ ಓದಿ:  Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

    2023ರ ಐಪಿಎಲ್ ಟೂರ್ನಿ ವೇಳೆ ಜಿಯೋಸಿನಿಮಾ ಮೊದಲ 5 ವಾರಗಳಲ್ಲೇ ದಾಖಲೆಯ 13 ಕೋಟಿ ಡಿಜಿಟಲ್ ವೀಕ್ಷಣೆ ಕಂಡಿತ್ತು. ಪ್ರತಿ ವೀಕ್ಷಕರು ಪ್ರತಿ ಪಂದ್ಯವನ್ನು ಕನಿಷ್ಠ 1 ಗಂಟೆ ವೀಕ್ಷಣೆ ಮಾಡಿದ್ದರು. 2023ರ ಐಪಿಎಲ್ ಹಕ್ಕು ಕಳೆದುಕೊಂಡ ನಂತರ ಹಾಟ್‌ಸ್ಟಾರ್ ಆ್ಯಪ್ ತನ್ನ 50 ಲಕ್ಷ ಮೂಲ ಬಳಕೆದಾರರನ್ನ ಕಳೆದುಕೊಂಡಿದೆ ಎಂದು ಸಿಎಲ್‌ಎಸ್‌ಎ ಸಂಶೋಧನಾ ಸಂಸ್ಥೆ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಸಹ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ ಮೊಬೈಲ್ ಆ್ಯಪ್ ಬಳಕೆದಾರಿಗೆ ಉಚಿತ ಸ್ಟ್ರೀಮಿಂಗ್ ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ಲೇಷಕ ಕರಣ್ ತೌರಾನಿ, ಉಚಿತ ಕೊಡುಗೆಗಳು ದೀರ್ಘಾವಧಿಯಾಗಿ ಮುಂದುವರಿದರೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ಗಳಿಗೆ ನಷ್ಟ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

  • ಏಕದಿನ ಮಾದರಿಯಲ್ಲಿ ಏಷ್ಯಾಕಪ್ 2023 – ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕ್

    ಏಕದಿನ ಮಾದರಿಯಲ್ಲಿ ಏಷ್ಯಾಕಪ್ 2023 – ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕ್

    ಮುಂಬೈ: 2023ರ ಏಷ್ಯಾಕಪ್ ಟೂರ್ನಿಯಲ್ಲಿ (Asia Cup 2023) ಭಾರತ (India) ಹಾಗೂ ಪಾಕಿಸ್ತಾನ (Pakistan)  ತಂಡಗಳು ಮತ್ತೊಮ್ಮೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

    2023ರ ಏಷ್ಯಾಕಪ್ ಟೂರ್ನಿಯನ್ನು ಒಟ್ಟು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳು ಗ್ರೂಪ್ Aನಲ್ಲಿ ಸ್ಥಾನ ಪಡೆದುಕೊಂಡಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್ (Asian Cricket Council) ಅಧ್ಯಕ್ಷ ಜಯ್ ಶಾ (Jay Shah) ಗುರುವಾರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗ್ರೂಪ್‍ನಲ್ಲಿ ಸ್ಥಾನ ಪಡೆದಿರುವ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಟಿ20 ಸರಣಿಯಿಂದ ಹೊರನಡೆದ ಸಂಜು ಸ್ಯಾಮ್ಸನ್ – ಸರಣಿ ಗೆಲುವಿನತ್ತ ಭಾರತದ ಚಿತ್ತ

    ಗ್ರೂಪ್ Aನಲ್ಲಿ ಭಾರತ, ಪಾಕಿಸ್ತಾನ ಮತ್ತು ಅರ್ಹತಾ ಸುತ್ತಿನಲ್ಲಿ ವಿಜೇತವಾದ ತಂಡವು ಸ್ಥಾನ ಪಡೆಯಲಿದೆ. ಗ್ರೂಪ್ Bನಲ್ಲಿ ಶ್ರೀಲಂಕಾ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಕಾಣಿಸಿಕೊಂಡಿದೆ. ಮುಂಬರುವ ಐಸಿಸಿ ಏಕದಿನ ವಿಶ್ವಕಪ್ (ODI World Cup) ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಏಷ್ಯಾಕಪ್ ಟೂರ್ನಿಯು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಜರುಗಲಿದೆ. 2022ರ ಏಷ್ಯಾಕಪ್ ಟೂರ್ನಿ ಟಿ20 ಮಾದರಿಯಲ್ಲಿ ನಡೆದಿತ್ತು. ಇದನ್ನೂ ಓದಿ: ಪಂತ್ ಮುಂಬೈಗೆ ಏರ್‌ಲಿಫ್ಟ್‌

    2023ರ ಏಷ್ಯಾಕಪ್ ಟೂರ್ನಿಯು ಎಲ್ಲಿ ಮತ್ತು ಯಾವಾಗ ನಡೆಯಲಿದೆ ಎನ್ನುವ ಕುರಿತಂತೆ ಯಾವುದೇ ಮಾಹಿತಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿಲ್ಲ. ಈಗಾಗಲೇ 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಒಂದು ವೇಳೆ ಪಾಕಿಸ್ತಾನದಲ್ಲೇ ಏಷ್ಯಾಕಪ್ ಟೂರ್ನಿ ನಡೆದರೆ, ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡುವುದು ಅನುಮಾನ ಎನಿಸಿದೆ. ಎರಡು ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿಯುತ್ತಿರುವ ಕಾರಣ ಭಾರತ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ. 2023ರ ಏಷ್ಯಾಕಪ್ ಟೂರ್ನಿಯು ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k