Tag: Asia Cup 2023

  • Asia Cup – ಎರಡು ಪಂದ್ಯಗಳಿಂದ ಕೆಎಲ್ ರಾಹುಲ್ ಔಟ್ – ದ್ರಾವಿಡ್ ಸ್ಪಷ್ಟನೆ

    Asia Cup – ಎರಡು ಪಂದ್ಯಗಳಿಂದ ಕೆಎಲ್ ರಾಹುಲ್ ಔಟ್ – ದ್ರಾವಿಡ್ ಸ್ಪಷ್ಟನೆ

    ನವದೆಹಲಿ: ಮುಲ್ತಾನ್‍ನಲ್ಲಿ ಬುಧವಾರದಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್‍ನ (Asia Cup 2023) ಮೊದಲ ಎರಡು ಪಂದ್ಯಗಳಿಂದ ಭಾರತದ (Team India) ವಿಕೆಟ್‍ಕೀಪರ್ ಹಾಗೂ ಬ್ಯಾಟರ್ ಕೆ.ಎಲ್ ರಾಹುಲ್ ಹೊರಗುಳಿಯಲಿದ್ದಾರೆ.

    ಗಾಯದಿಂದ ಚೇತರಿಸಿಕೊಂಡ ನಂತರ ಹೆಸರಿಸಲಾಗಿದ್ದ ಬ್ಯಾಟರ್ ಪಾಕಿಸ್ತಾನ (Pakistan )ಮತ್ತು ನೇಪಾಳ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಅವರು ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಮೊದಲ ಎರಡು ಪಂದ್ಯಕ್ಕೆ ಅವರು ಲಭ್ಯವಾಗುವುದಿಲ್ಲ ಎಂದು ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಇದನ್ನೂ ಓದಿ: 3.3 ಓವರ್‌ಗಳಲ್ಲಿ 43 ರನ್‌ – IBSA ವರ್ಲ್ಡ್ ಗೇಮ್ಸ್​ನಲ್ಲಿ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ ಚಾಂಪಿಯನ್‌

    ಇದಕ್ಕೂ ಮುನ್ನ ಆಟಗಾರರ ಹೆಸರು ಪ್ರಕಟಿಸುವ ಸಂದರ್ಭದಲ್ಲಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಕೆಎಲ್ ರಾಹುಲ್ ಸ್ವಲ್ಪ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.

    ಬ್ಯಾಟರ್ ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರೆ ಮತ್ತು ಅಭ್ಯಾಸದ ಅವಧಿಯಲ್ಲಿ ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡಿದ್ದಾರೆ. ಅವರು ಏಷ್ಯಾ ಕಪ್‍ನಲ್ಲಿ ಆಡಲಿದ್ದಾರೆ ಎಂದು ದ್ರಾವಿಡ್ ತಿಳಿಸಿದ್ದಾರೆ.

    ಏಷ್ಯಾಕಪ್‍ನ ಮೊದಲ ಪಂದ್ಯ ಬುಧವಾರ ಮುಲ್ತಾನ್‍ನಲ್ಲಿ ಸಹ-ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಟೀಂ ಇಂಡಿಯಾ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಹೋರಾಟವನ್ನು ಪ್ರಾರಂಭಿಸಲಿದೆ. ಇದನ್ನೂ ಓದಿ: ಏಷ್ಯಾ ಕಪ್ ಉದ್ಘಾಟನೆಗೆ ಕ್ಷಣಗಣನೆ – ನೀವೆಲ್ಲಿ ನೋಡಬಹುದು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಷ್ಯಾ ಕಪ್ ಉದ್ಘಾಟನೆಗೆ ಕ್ಷಣಗಣನೆ – ನೀವೆಲ್ಲಿ ನೋಡಬಹುದು?

    ಏಷ್ಯಾ ಕಪ್ ಉದ್ಘಾಟನೆಗೆ ಕ್ಷಣಗಣನೆ – ನೀವೆಲ್ಲಿ ನೋಡಬಹುದು?

    ನವದೆಹಲಿ: ಬಹು ನಿರೀಕ್ಷಿತ ಏಷ್ಯಾ ಕಪ್ 2023 (Asia Cup 2023) ಬುಧವಾರದಿಂದ ಆರಂಭವಾಗಲಿದೆ. ಸಹ ಆತಿಥೇಯ ದೇಶವಾದ ಪಾಕಿಸ್ತಾನವು (Pakistan) ಮುಲ್ತಾನ್‍ನಲ್ಲಿ ನೇಪಾಳ ವಿರುದ್ಧ ಸೆಣಸಲಿದೆ. ಪಂದ್ಯದ ಮೊದಲು ಮುಲ್ತಾನ್‍ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

    ಒಂದು ವರ್ಷದ ಹಿಂದೆ ಟಿ20 ಮಾದರಿಯಲ್ಲಿ ಶ್ರೀಲಂಕಾ ಗೆದ್ದಿತ್ತು. ಈ ವರ್ಷ ಏಷ್ಯಾಕಪ್ 50 ಓವರ್‌ಗಳಿಗೆ ನಿಗದಿಪಡಿಸಲಾಗಿದೆ. ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‍ಗೆ‌ (World Cup) ಮೊದಲು ಏಷ್ಯಾದ ಕ್ರಿಕೆಟ್ ಆಟಗಾರರ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ. ಇದನ್ನೂ ಓದಿ: Asia Cup – ಉದ್ಘಾಟನಾ ಸಮಾರಂಭಕ್ಕೆ ಪಾಕ್‍ಗೆ ತೆರಳಲಿರುವ ಬಿಸಿಸಿಐ ಅಧ್ಯಕ್ಷ

    ಏಷ್ಯಾ ಕಪ್ 2023 ರ ಉದ್ಘಾಟನಾ ಸಮಾರಂಭ ಆಗಸ್ಟ್ 30 ರಂದು ಮಧ್ಯಾಹ್ನ 3 ಗಂಟೆಗೆ ಪಾಕಿಸ್ತಾನದ ಮುಲ್ತಾನ್ ಸ್ಟೇಡಿಯಂ ನಡೆಯಲಿದೆ. ಇದರ ಉದ್ಘಾಟನಾ ಸಮಾರಂಭವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‍ವರ್ಕ್‍ನಲ್ಲಿ ಪ್ರಸಾರ ಮಾಡಲಾಗುತ್ತದೆ.

    ಅಲ್ಲದೇ ಏಷ್ಯಾ ಕಪ್ 2023ರ ಉದ್ಘಾಟನಾ ಸಮಾರಂಭ ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್‍ನಲ್ಲಿ ಲೈವ್ ಪ್ರಸಾರ ಮಾಡಲಾಗುತ್ತದೆ. ಇದನ್ನೂ ಓದಿ: AsiaCup 2023, ವಿಶ್ವಕಪ್‌ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್‌ ಲುಕ್‌ನಲ್ಲಿ ಪಾಕ್‌ ತಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup – ಉದ್ಘಾಟನಾ ಸಮಾರಂಭಕ್ಕೆ ಪಾಕ್‍ಗೆ ತೆರಳಲಿರುವ ಬಿಸಿಸಿಐ ಅಧ್ಯಕ್ಷ

    Asia Cup – ಉದ್ಘಾಟನಾ ಸಮಾರಂಭಕ್ಕೆ ಪಾಕ್‍ಗೆ ತೆರಳಲಿರುವ ಬಿಸಿಸಿಐ ಅಧ್ಯಕ್ಷ

    ಇಸ್ಲಾಮಾಬಾದ್: ಆಗಸ್ಟ್ 30 ರಂದು ಆರಂಭವಾಗಲಿರುವ ಏಷ್ಯಾ ಕಪ್ (Asia Cup 2023) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಿಸಿಸಿಐ (BCCI) ಅಧ್ಯಕ್ಷ ರೋಜರ್ ಬಿನ್ನಿ ಪಾಕ್‍ಗೆ (Pakistan) ತೆರಳಲು ಸಿದ್ಧರಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಝಕಾ ಅಶ್ರಫ್ ಖಚಿತಪಡಿಸಿದ್ದಾರೆ.

    ಪಾಕಿಸ್ಥಾನ ಹಾಗೂ ಶ್ರೀಲಂಕಾ ಉಸ್ತುವಾರಿ ಹೊತ್ತಿರುವ ಏಷ್ಯಾಕಪ್‍ನ ಹೆಚ್ಚಿನ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭದ್ರತಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹಿಂದೇಟು ಹಾಕಿತ್ತು. ಬಳಿಕ ಪಂದ್ಯಗಳ ಉದ್ಘಾಟನೆಗೆ ಪಿಸಿಬಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಆಹ್ವಾನ ನೀಡಿತ್ತು. ಈ ಪ್ರಸ್ತಾಪವನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಪಿಸಿಬಿ ತಿಳಿಸಿದೆ. ಅಲ್ಲದೇ ಪಾಕಿಸ್ತಾನಕ್ಕೆ ಏಷ್ಯಾ ಕಪ್ ಸಮಯದಲ್ಲಿ ಬರುವ ಪ್ರತಿಯೊಬ್ಬರನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: AsiaCup 2023, ವಿಶ್ವಕಪ್‌ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್‌ ಲುಕ್‌ನಲ್ಲಿ ಪಾಕ್‌ ತಂಡ

    ಏಷ್ಯಾಕಪ್ ಮತ್ತು ಮುಂಬರುವ ವಿಶ್ವಕಪ್ ಎರಡರಲ್ಲೂ ನಮ್ಮ ತಂಡ ಯಶಸ್ವಿಯಾಗಿ ಹೊರಹೊಮ್ಮಲಿದೆ. ನಮ್ಮ ತಂಡವು ಪ್ರಸ್ತುತ ಒಗ್ಗಟ್ಟಾಗಿದೆ. ಅಲ್ಲದೆ ಉತ್ತಮ ಪ್ರದರ್ಶನ ನೀಡುತ್ತಿದೆ. ಇದರ ಪರಿಣಾಮವಾಗಿ ಏಕದಿನ ಪಂದ್ಯದಲ್ಲಿ ತಂಡದ ಶ್ರೇಯಾಂಕ ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ.

    ತಂಡದ ಇತ್ತೀಚಿನ ಪ್ರದರ್ಶನಗಳನ್ನು ನೋಡಿದರೆ, ನಮ್ಮ ತಂಡವು ವಿಶ್ವಕಪ್‍ನಲ್ಲಿ ಯಶಸ್ವಿಯಾಗುತ್ತದೆ ಎಂಬ ಭರವಸೆ ಇದೆ. ಆದರೆ ಈ ಸಮಯದಲ್ಲಿ ಎಲ್ಲಾ ಗಮನವು ಏಷ್ಯಾ ಕಪ್ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದ್ದಾರೆ.

    ನಮ್ಮ ಕ್ರಿಕೆಟಿಗರು ಮತ್ತು ಪ್ರತಿ ಪಂದ್ಯದ ಮೂಲಕ ಅವರ ಬೆಂಬಲಕ್ಕೆ ನಿಲ್ಲುವ ಅಭಿಮಾನಿಗಳ ನಡುವಿನ ನಿರಂತರ ಬಾಂಧವ್ಯಕ್ಕೆ ಸ್ಟಾರ್ ನೇಷನ್ ಜೆರ್ಸಿ ಸಾಕ್ಷಿಯಾಗಿದೆ. ಈ ಜೆರ್ಸಿಯು ನಮ್ಮ ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಮತ್ತು ಭವಿಷ್ಯವನ್ನು ಒಳಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: Asia Cup 2023 ಹೊಸ್ತಿಲಲ್ಲಿ ತರಬೇತಿ ಚುರುಕುಗೊಳಿಸಿದ ಟೀಂ ಇಂಡಿಯಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • AsiaCup 2023, ವಿಶ್ವಕಪ್‌ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್‌ ಲುಕ್‌ನಲ್ಲಿ ಪಾಕ್‌ ತಂಡ

    AsiaCup 2023, ವಿಶ್ವಕಪ್‌ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್‌ ಲುಕ್‌ನಲ್ಲಿ ಪಾಕ್‌ ತಂಡ

    ಇಸ್ಲಾಮಾಬಾದ್‌: 2023ರ ಏಕದಿನ ಏಷ್ಯಾಕಪ್‌ (Asia Cup 2023) ಹಾಗೂ ವಿಶ್ವಕಪ್‌ (WorldCup) ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ತನ್ನ ತಂಡಕ್ಕೆ ಹೊಸ ಜೆರ್ಸಿಯನ್ನ ಅನಾವರಣಗೊಳಿಸಿದೆ.

     

    View this post on Instagram

     

    A post shared by Pakistan Cricket (@therealpcb)

    ಈ ಕುರಿತ ವಿಶೇಷ ವೀಡಿಯೋ ತುಣುಕನ್ನು ಪಿಸಿಬಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೋ ಕೊನೆಯಲ್ಲಿ ಪಾಕ್‌ ತಂಡದ ನಾಯಕ ಬಾಬರ್‌ ಆಜಮ್‌, ಶಾದಾಬ್‌ ಖಾನ್‌ ಹಾಗೂ ಜಸೀಮ್‌ ಶಾ, ಮಹಿಳಾ ಕ್ರಿಕೆಟ್‌ ತಂಡದ ನಿದಾ ಧಾರ್‌, ಅಲಿಯಾ ರಿಯಾಜ್‌ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಹಸಿರು ಸ್ಟಾರ್‌ಗಳನ್ನು ಹೊಂದಿರುವ ಈ ಉಡುಪು ಆಟಗಾರರಿಗೆ ಮಾಸ್‌ ಲುಕ್‌ ನೀಡುತ್ತಿದೆ. ಇದನ್ನೂ ಓದಿ: India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ

    ಏಷ್ಯಾಕಪ್‌ ಹಾಗೂ ವಿಶ್ವಕಪ್‌ ಟೂರ್ನಿಗೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್‌ ತಂಡವು ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ 118 ಶ್ರೇಯಾಂಕ (2,725 ಅಂಕ) ಗಳಿಸುವ ಮೂಲಕ ನಂ.1 ಸ್ಥಾನಕ್ಕೇರಿದೆ. 118 ಶ್ರೇಯಾಂಕ (2,714 ಅಂಕ) ಗಳಿಸಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, 113 ಶ್ರೇಯಾಂಕ (4,081 ಅಂಕ) ಹೊಂದಿರುವ ಟೀಂ ಇಂಡಿಯಾ 3ನೇ ಸ್ಥಾನದಲ್ಲಿದೆ.

    ಇತ್ತೀಚೆಗೆ ಅಫ್ಘಾನಿಸ್ತಾನದ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ನಾಯಕ ಬಾಬರ್‌ ಆಜಂ ಅವರ ಉತ್ತಮ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಪಾಕಿಸ್ತಾನ ತಂಡ ಸರಣಿಯನ್ನ ಕ್ಲೀನ್‌ ಸ್ವೀಪ್‌ ಮಾಡಿತ್ತು. ಈ ಮೂಲಕ ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾವನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.  ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಆಗಸ್ಟ್‌ 30 ರಿಂದ ಸೆಪ್ಟೆಂಬರ್‌ 17ರ ವರೆಗೆ ಏಕದಿನ ಏಷ್ಯಾಕಪ್‌ ಟೂರ್ನಿ ನಡೆಯಲಿದ್ದು, ಪಾಕಿಸ್ತಾನದ ಮುಲ್ತಾನ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಸೆಪ್ಟೆಂಬರ್‌ 2 ರಂದು ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023 ಹೊಸ್ತಿಲಲ್ಲಿ ತರಬೇತಿ ಚುರುಕುಗೊಳಿಸಿದ ಟೀಂ ಇಂಡಿಯಾ

    Asia Cup 2023 ಹೊಸ್ತಿಲಲ್ಲಿ ತರಬೇತಿ ಚುರುಕುಗೊಳಿಸಿದ ಟೀಂ ಇಂಡಿಯಾ

    ನವದೆಹಲಿ: ಏಷ್ಯಾ ಕಪ್ 2023ರ (Asia Cup 2023) ಹೊಸ್ತಿಲಲ್ಲಿ ಟೀಂ ಇಂಡಿಯಾ (Team India) ತರಬೇತಿ ಜೋರಾಗಿದೆ. ಬೆಂಗಳೂರಿನ ಆಲೂರಿನ ಅಭ್ಯಾಸ ಶಿಬಿರದಲ್ಲಿ ಆಟಗಾರರನ್ನು ಜೋಡಿಯಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತಿದೆ.

    ತರಬೇತಿಯ ಭಾಗವಾಗಿ ಬ್ಯಾಟರ್‌ಗಳನ್ನು ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್, ವಿರಾಟ್ ಕೊಹ್ಲಿ (Virat Kohli) ಮತ್ತು ಶ್ರೇಯಸ್ ಅಯ್ಯರ್ ಜೋಡಿಯಾಗಿ ವಿಂಗಡಿಸಲಾಗಿದೆ. ಈ ಆಟಗಾರರು ಬ್ಯಾಟಿಂಗ್‍ನಲ್ಲಿ ತೊಡಗಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೋದಲ್ಲಿ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದು, ಇಬ್ಬರೂ ಆಟಗಾರರು ಸ್ಪಿನ್ ಬೌಲರ್‌ಗಳನ್ನು ಎದುರಿಸಿದ್ದಾರೆ. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಇದಕ್ಕೂ ಮೊದಲು ಪಂದ್ಯದ ತರಬೇತಿಯ ಕ್ರಮವಾಗಿ ನಂ. 5 ಮತ್ತು ನಂ. 6 ಸ್ಥಾನಗಳಲ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಜೋಡಿಯಾಗಿ ಬ್ಯಾಟಿಂಗ್ ಅಭ್ಯಾಸವನ್ನು ಮಾಡಿಸಲಾಯಿತು. ಅಭ್ಯಾಸದಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಜೊತೆಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ನಂ.4 ರಲ್ಲಿ ಅಭ್ಯಾಸ ನಡೆಸಿದರು.

    ಸೆ.2 ರಂದು 2023ರ ಏಷ್ಯಾ ಕಪ್‍ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಇದನ್ನೂ ಓದಿ: India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಷ್ಯಾ ಕಪ್ 2023ರ ಹೊಸ್ತಿಲಲ್ಲಿ ಶ್ರೀಲಂಕಾಗೆ ಆಘಾತ

    ಏಷ್ಯಾ ಕಪ್ 2023ರ ಹೊಸ್ತಿಲಲ್ಲಿ ಶ್ರೀಲಂಕಾಗೆ ಆಘಾತ

    ಕೊಲಂಬೋ: ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾ (Sri Lanka) ಸಹಯೋಗದಲ್ಲಿ ನಡೆಯಲಿರುವ ಏಷ್ಯಾ ಕಪ್ 2023ರ (Asia Cup 2023) ಮೊದಲು ಶ್ರೀಲಂಕಾದ ಇಬ್ಬರು ಕ್ರಿಕೆಟಿಗರು ಕೋವಿಡ್ -19ಗೆ ಗುರಿಯಾಗಿದ್ದಾರೆ. ಅವಿಷ್ಕಾ ಫರ್ನಾಂಡೋ ಮತ್ತು ಆರಂಭಿಕ ಬ್ಯಾಟರ್ ಕುಸಲ್ ಪೆರೆರಾ ಅವರಿಗೆ ಕೋವಿಡ್ -19 ಕಾಣಿಸಿಕೊಂಡಿದೆ.

    ಅವಿಷ್ಕಾ ಫರ್ನಾಂಡೋ ಮತ್ತು ಕುಸಾಲ್ ಪೆರೆರಾ ಇಬ್ಬರನ್ನೂ ಏಷ್ಯಾ ಕಪ್‍ಗಾಗಿ ತಂಡಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಪಂದ್ಯದ ವೇಳೆಗೆ ಅವರು ಚೇತರಿಸಿಕೊಂಡರೆ ಆಯ್ಕೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ (Cricket) ತಂಡ ತಿಳಿಸಿದೆ. ಇಬ್ಬರೂ ಆಟಗಾರರಿಗೆ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಈ ವಿಚಾರ ತಿಳಿದು ಬಂದಿದೆ. ಆಗಸ್ಟ್ 20 ರಂದು ಕೊನೆಗೊಂಡ ಎಲ್‍ಪಿಎಲ್‍ನ ಅಂತಿಮ ಹಂತಗಳಲ್ಲಿ ಫರ್ನಾಂಡೋ ಮತ್ತು ಪೆರೇರಾ ವೈರಸ್ ದಾಳಿಗೆ ತುತ್ತಾಗಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಏಷ್ಯಾ ಕಪ್ 2023 – ಯೋ ಯೋ ಟೆಸ್ಟ್‌ನಲ್ಲಿ 17.2 ಸ್ಕೋರ್ ಗಳಿಸಿದ ಕೊಹ್ಲಿ

    ವರ್ಷದ ಆರಂಭದಿಂದಲೂ ಏಕದಿನ ಪಂದ್ಯಗಳನ್ನು ಆಡದ ಅವಿಷ್ಕಾ ಫರ್ನಾಂಡೋ ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಕಾಣಿಸಿಕೊಂಡಿದ್ದರು. ಅವರು 10 ಪಂದ್ಯಗಳಲ್ಲಿ 244 ರನ್ ಗಳಿಸಿದ್ದಾರೆ.

    ಕುಸಾಲ್ ಪೆರೆರಾ ಅವರು ಗಾಯಗಳಿಂದ ಜನವರಿ 2021 ರಿಂದ ಕ್ರಿಕೆಟ್‍ನಿಂದ ಹೊರಗುಳಿದಿದ್ದರು. ಬಳಿಕ ಅವರು ಎಲ್‍ಪಿಎಲ್ 2023 ಋತುವಿನಲ್ಲಿ ಆಡಿದ್ದರು. ಅವರು 8 ಪಂದ್ಯಗಳಲ್ಲಿ 210 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕಾಗಿ ಮತ್ತೆ ಬ್ಯಾಟಿಂಗ್ ಮುಂದುವರೆಸುತ್ತೇನೆ: ಸಚಿನ್ ತೆಂಡೂಲ್ಕರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಷ್ಯಾ ಕಪ್ 2023 – ಯೋ ಯೋ ಟೆಸ್ಟ್‌ನಲ್ಲಿ 17.2 ಸ್ಕೋರ್ ಗಳಿಸಿದ ಕೊಹ್ಲಿ

    ಏಷ್ಯಾ ಕಪ್ 2023 – ಯೋ ಯೋ ಟೆಸ್ಟ್‌ನಲ್ಲಿ 17.2 ಸ್ಕೋರ್ ಗಳಿಸಿದ ಕೊಹ್ಲಿ

    ಬೆಂಗಳೂರು: ಫಿಟ್‍ನೆಸ್ ವಿಷಯದಲ್ಲಿ ಭಾರತ ತಂಡದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಂದಿಗೂ ಒಂದು ಹೆಜ್ಜೆ ಮುಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ತರಬೇತಿ ಶಿಬಿರದ ಯೋ ಯೋ ಟೆಸ್ಟ್‌ನಲ್ಲಿ ಅವರು 17.2 ಅಂಕ ಗಳಿಸಿದ್ದಾರೆ.

    ಈಗ ಏಷ್ಯಾ ಕಪ್ 2023ಕ್ಕೆ (Asia Cup 2023) ಸಜ್ಜಾಗುತ್ತಿರುವ ವಿರಾಟ್ ಇಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಮಾಹಿತಿಯ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ನಲ್ಲಿ  ಯೋ ಯೋ ಟೆಸ್ಟ್ ಸ್ಕೋರ್ ಅನ್ನು ಬಹಿರಂಗಪಡಿಸಿದ್ದಾರೆ. ಇದೀಗ ಅವರ ಶಿಸ್ತುಬದ್ಧ ಮತ್ತು ಕಠಿಣ ಫಿಟ್‍ನೆಸ್ ಲೈಫ್‍ಸ್ಟೈಲ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಗೆಲ್ಲುವ ಉತ್ಸಾಹ – ಟೀಂ ಇಂಡಿಯಾಕ್ಕೆ ಬೆಂಗಳೂರಿನಲ್ಲಿ ಫಿಟ್‍ನೆಸ್ ಟ್ರೈನಿಂಗ್

    ಏಷ್ಯಾ ಕಪ್ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಆಟಗಾರರು ವಿವಿಧ ತರಬೇತಿಯಲ್ಲಿ ತೊಡಗಿದ್ದಾರೆ. ಅಲ್ಲದೇ ಗಾಯಗೊಂಡ ಆಟಗಾರರಿಂದ ಹತಾಶೆ ಅನುಭವಿಸಿದ ಮೇಲೆ ತಂಡವನ್ನು ಸದೃಢಗೊಳಿಸಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಇಂದಿನಿಂದ 13 ದಿನಗಳ ತರಬೇತಿ ನೀಡಲು ಮುಂದಾಗಿದೆ. ಏಷ್ಯಾ ಕಪ್‍ಗೆ ಶ್ರೀಲಂಕಾಕ್ಕೆ ಹಾರಲಿರುವ ರೋಹಿತ್ ಶರ್ಮಾ ನೇತೃತ್ವದ ತಂಡ ತರಬೇತಿ ಪಡೆಯುತ್ತಿದೆ.

    ಸೆಪ್ಟೆಂಬರ್ 2ರಂದು ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇದನ್ನೂ ಓದಿ: ಭಾರತಕ್ಕಾಗಿ ಮತ್ತೆ ಬ್ಯಾಟಿಂಗ್ ಮುಂದುವರೆಸುತ್ತೇನೆ: ಸಚಿನ್ ತೆಂಡೂಲ್ಕರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023: ಭಾರತ ತಂಡ ಪ್ರಕಟ – ಕೆ.ಎಲ್‌.ರಾಹುಲ್‌, ಅಯ್ಯರ್‌ ವಾಪಸ್‌

    Asia Cup 2023: ಭಾರತ ತಂಡ ಪ್ರಕಟ – ಕೆ.ಎಲ್‌.ರಾಹುಲ್‌, ಅಯ್ಯರ್‌ ವಾಪಸ್‌

    ನವದೆಹಲಿ: ಏಷ್ಯಾ ಕಪ್‌ 2023ಕ್ಕೆ ಭಾರತ ಕೊನೆಗೂ ತಂಡವನ್ನು ಪ್ರಕಟಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಏಷ್ಯಾ ಕಪ್‌ಗಾಗಿ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಸೋಮವಾರ ಪ್ರಕಟಿಸಿತು.

    ವೇಗಿ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

    ವೆಸ್ಟ್ ಇಂಡೀಸ್ ವಿರುದ್ಧದ T20I ನಲ್ಲಿ ವೀರೋಚಿತ ಪ್ರದರ್ಶನ ನೀಡಿದ ನಂತರ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದು, ಯುಜುವೇಂದ್ರ ಚಹಾಲ್ ಅವರನ್ನು ಕೈಬಿಡಲಾಗಿದೆ. ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಸೇರಿಸಲಾಗಿದೆ.

    ತಂಡದಲ್ಲಿ ಯಾರಿದ್ದಾರೆ?
    ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಸಂಜು ಸ್ಯಾಮ್ಸನ್ ತಂಡದಲ್ಲಿದ್ದಾರೆ.

    ಏಷ್ಯಾ ಕಪ್ 2023 ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ‌ ಹೈಬ್ರಿಡ್‌ ಮಾದರಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸುತ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉರಿವ ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ

    ಉರಿವ ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ

    ಢಾಕಾ: ಏಷ್ಯಾ ಕಪ್ 2023 (Asia Cup 2023) ಹಾಗೂ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಟಗಾರರ ನೂತನ ಮಾದರಿಯ ತರಬೇತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಬಾಂಗ್ಲಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ನಯಿಮ್ ಶೇಖ್ (Mohammad Naim) ಬೆಂಕಿಯ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಹುತೇಕ ತಂಡಗಳು ಏಷ್ಯಾ ಕಪ್ 2023ರ ಪಂದ್ಯಗಳಿಗಾಗಿ ಅಂತಿಮ ಹಂತದ ಸಿದ್ಧತೆಯಲ್ಲಿವೆ. ಈ ಹೊತ್ತಿನಲ್ಲಿ ನಯಿಮ್ ಶೇಖ್ ಅವರ ಉರಿಯುವ ಕೆಂಡದ ಮೇಲಿನ ನಡಿಗೆಯ ವೀಡಿಯೋ ಬಾರೀ ಸದ್ದು ಮಾಡಿದೆ. ಇದನ್ನೂ ಓದಿ: ನಾನು ಸುಸ್ತಾಗಿದ್ದೇನೆ, ಗಾಯಗೊಂಡಿಲ್ಲ: ನಸೀಮ್ ಶಾ

    ಆಗಸ್ಟ್ 30 ರಂದು ಪಾಕಿಸ್ತಾನದ ಮುಲ್ತಾನ್‍ನಲ್ಲಿ ಪಾಕ್ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಘರ್ಷಣೆ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ನಂತರದ ಹಂತದಲ್ಲಿ ಸೆ.4 ರಂದು ಭಾರತವು ನೇಪಾಳವನ್ನು ಎದುರಿಸಲಿದೆ. ಪಾಕಿಸ್ತಾನವು ಮೂರು ಗ್ರೂಪ್ ಹಂತದ ಪಂದ್ಯಗಳು ಮತ್ತು ಸೂಪರ್ ಫೋರ್ ಹಂತದ ಪಂದ್ಯವನ್ನು ಆಯೋಜಿಸುತ್ತದೆ. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.

    ಸೂಪರ್ ಫೋರ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಒಮ್ಮೆ ಆಡುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‍ನಲ್ಲಿ ಮುಖಾಮುಖಿಯಾಗಲಿವೆ. ಇದನ್ನೂ ಓದಿ: ಮೊದಲ ಓವರ್‌ನಲ್ಲೇ 2 ವಿಕೆಟ್‌ ಉಡೀಸ್‌ – 11 ತಿಂಗಳ ಬಳಿಕ ಎಂಟ್ರಿ ಕೊಟ್ಟು ​ಭಾರತಕ್ಕೆ ಜಯ ತಂದ ಬುಮ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • AsiaCup 2023: ಟೀಂ ಇಂಡಿಯಾದಿಂದ ಸಂಜು ಸ್ಯಾಮ್ಸನ್‌ ಔಟ್‌?

    AsiaCup 2023: ಟೀಂ ಇಂಡಿಯಾದಿಂದ ಸಂಜು ಸ್ಯಾಮ್ಸನ್‌ ಔಟ್‌?

    ಮುಂಬೈ: ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡವಿದ ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್‌ (Sanju Samson) ಅವರನ್ನ ಏಕದಿನ ಏಷ್ಯಾಕಪ್‌ ಟೂರ್ನಿಗೆ (Asia Cup 2023) ತಂಡದಿಂದ ಕೈಬಿಡಲು ಮುಂದಾಗಿದೆ.

    ಇದೇ ಆಗಸ್ಟ್‌ 30 ರಿಂದ ಸೆಪ್ಟೆಂಬರ್‌ 17ರ ವರೆಗೆ ಏಕದಿನ ಏಷ್ಯಾಕಪ್‌ ಟೂರ್ನಿ ನಡೆಯಲಿದ್ದು, ಈ ಸಲುವಾಗಿ ಬಿಸಿಸಿಐ (BCCI) ಟೀಂ ಇಂಡಿಯಾಕ್ಕೆ ಆಯ್ಕೆ ಕಸರತ್ತು ನಡೆಸಿದೆ. ಈ ಬಾರಿ ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ (Pakistan) ಬಳಿಯೇ ಇದ್ದರೂ ಬಿಸಿಸಿಐ ಪಾಕಿಸ್ತಾನಕ್ಕೆ ಭಾರತ ತಂಡವನ್ನ ಕಳುಹಿಸಲು ನಿರಾಕರಿಸಿದ ನಂತರ ಹೈಬ್ರಿಡ್‌ ಮಾದರಿಯಲ್ಲಿ ನಡೆಸಲು ಏಷ್ಯನ್‌ ಕ್ರಿಕೆಟ್‌ ಸಮಿತಿ ನಿರ್ಧರಿಸಿದೆ. ಆದ್ದರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ (SriLanka) ಎರಡೂ ದೇಶಗಳಲ್ಲಿ ಪಂದ್ಯ ನಡೆಯುತ್ತಿದೆ.

    ಸೆಪ್ಟೆಂಬರ್‌ 2ರಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಪೈಪೋಟಿ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಟೂರ್ನಿಯು ಸೆಪ್ಟೆಂಬರ್‌ 17ರಂದು ಕೊಲಂಬೊದಲ್ಲಿ ಅಂತ್ಯಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪಾಕಿಸ್ತಾನ ಮತ್ತು ಭಾರತ ತಂಡಗಳು ಮೂರು ಬಾರಿ ಏಷ್ಯಾಕಪ್‌ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಇದನ್ನೂ ಓದಿ: 7 ವರ್ಷಗಳ ಬಳಿಕ ಭಾರತದ ವಿರುದ್ಧ T20 ಸರಣಿ ಜಯ – ಹೊಸ ದಾಖಲೆ ಬರೆದ ವಿಂಡೀಸ್‌

    ಕೊಟ್ಟ ಅವಕಾಶ ಕೈಚೆಲ್ಲಿದ ಸಂಜು:
    2021ರಲ್ಲಿ ಟೀಂ ಇಂಡಿಯಾಕ್ಕೆ (Team India) ಎಂಟ್ರಿ ಕೊಟ್ಟಿದ್ದ ಸಂಜು ಸ್ಯಾಮ್ಸನ್‌ ಕೇವಲ 12 ಇನ್ನಿಂಗ್ಸ್‌ಗಳಲ್ಲಿ ಮಾತ್ರವೇ ಅವಕಾಶ ಪಡೆದುಕೊಂಡಿದ್ದರು. 2022ರಿಂದ ದೀರ್ಘಕಾಲದ ವರೆಗೆ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. 2023ರ ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತಾದರೂ ಮಂಡಿ ನೋವಿನಿಂದ ಮೊದಲ ಪಂದ್ಯದ ನಂತರ ಹೊರಗುಳಿಯಬೇಕಾಯಿತು. ಆದ್ರೆ 2023ರ ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರಿಂದಾಗಿ ಸೂರ್ಯಕುಮಾರ್‌ ಯಾದವ್‌ ಬದಲಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು.

    ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ 3 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದ ಸಂಜು ಸ್ಯಾಮ್ಸನ್‌ ಕ್ರಮವಾಗಿ 12, 7 ಮತ್ತು 13 ರನ್‌ಗಳನ್ನ ಮಾತ್ರವೇ ಗಳಿಸಿದರು. ಏಕದಿನ ಕ್ರಿಕೆಟ್‌ ಸರಣಿಯ 2 ಪಂದ್ಯಗಳಲ್ಲಿ ಅವಕಾಶ ಪಡೆದು 9 ಮತ್ತು 51 ರನ್‌ ಕೊಡುಗೆ ಕೊಟ್ಟರು. ಅಂತಿಮ ಒಡಿಐನಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಅವರ ಬ್ಯಾಟಿಂಗ್‌ ಬಹಳ ನಿರಾಸೆ ಮೂಡಿಸಿತು. ಅಲ್ಲದೇ ವಿಂಡೀಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲೂ ರನ್‌ ಗಳಿಸುವಲ್ಲಿ ವಿಫಲರಾದರು. ಹೀಗಾಗಿ ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆ ಮಾಡಲಾಗುವ 15 ಆಟಗಾರರ ತಂಡದಲ್ಲಿ ಸ್ಥಾನ ಪಡೆಯಲು ಸಂಜು ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.

    ಸದ್ಯ ಏಷ್ಯಾ ಕಪ್‌ ಟೂರ್ನಿಯನ್ನು ಗಮನಿಸಿ ಮಾತ್ರ ಆಯ್ಕೆ ಸಮಿತಿ ತಂಡವನ್ನು ರಚನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಮಯ ತೆಗೆದುಕೊಂಡು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ತಂಡ ರಚಣೆ ಮಾಡಲಾಗುವುದು ಎಂದು ಬೆಳವಣಿಗೆಗೆ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೋಲುವುದು ಕೂಡ ಒಳ್ಳೆಯದೇ, ಒಂದು ಸರಣಿ ಮ್ಯಾಟರ್‌ ಅಲ್ವೇ ಅಲ್ಲ – ಪಾಂಡ್ಯ ಸಮರ್ಥನೆ

    ಕಿಶನ್‌ ಪೈಪೋಟಿಯೇ ಮುಳುವಾಯ್ತಾ?

    ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ದ್ವಿಶತಕ ಬಾರಿಸಿ ದಿಗ್ಗಜರೊಂದಿಗೆ ವಿಶ್ವ ದಾಖಲೆಯ ಪಟ್ಟಿ ಸೇರಿರುವ ಇಶಾನ್‌ ಕಿಶನ್‌, ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ ಸರಣಿಯ ಮೂರೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಹೀಗಾಗಿ ಏಷ್ಯಾ ಕಪ್‌ಗೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಇಶಾನ್‌ ಕಿಶನ್‌ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಸಂಜು ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ಆಡಿರುವ 13 ಪಂದ್ಯಗಳಲ್ಲಿ 55.71ರ ಗಮನಾರ್ಹ ಸರಾಸರಿ ಹೊಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]