Tag: Asia Cup 2023

  • ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ

    ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ

    ಬೆಂಗಳೂರು/ಕೊಲಂಬೊ: ಟೀಂ ಇಂಡಿಯಾದ (Team India) ಸ್ಟಾರ್‌ ವೇಗಿ ಮೊಹಮ್ಮದ್ ಸಿರಾಜ್‌‌ (Mohammed Siraj) 2023ರ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಪ್ರಚಂಡ ಬೌಲಿಂಗ್‌ ಪ್ರದರ್ಶನ ತೋರಿದ್ದಾರೆ. ಶ್ರೀಲಂಕಾ ವಿರುದ್ಧ 7 ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆಯುವ ಮೂಲಕ ಹಲವು ದಾಖಲೆಗಳನ್ನ ನಿರ್ಮಿಸಿದರು. ಈ ಮೂಲಕ ಭಾರತ 10 ವಿಕೆಟ್‌ಗಳ ಜಯ ಸಾಧಿಸಲು ನೆರವಾದರು.

    ಈ ಕುರಿತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, ಮೊಹಮ್ಮದ್‌ ಸಿರಾಜ್‌ ಹಾಗೂ ಟೀಂ ಇಂಡಿಯಾವನ್ನ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಸಿರಾಜ್‌ ಬೆಂಕಿ ಬೌಲಿಂಗ್‌, 50 ರನ್‌ಗಳಿಗೆ ಆಲೌಟ್‌ – 39 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಲಂಕಾ

    ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು… ಏಷ್ಯಾಕಪ್ ಫೈನಲ್ಸ್‌ನಲ್ಲಿ (Asia Cup Finals) ಶ್ರೀಲಂಕಾ ಪಡೆ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿದ ಟೀಂ ಇಂಡಿಯಾಗೆ ಹೃದಯಪೂರ್ವಕ ಶುಭಾಶಯಗಳು. 6 ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ದಾಳಿ ಕಂಡು ಬೆರಗಾದೆ. ಟೀಂ ಇಂಡಿಯಾ ಕಲಿಗಳ‌ ಗೆಲುವಿನ ನಾಗಾಲೋಟ ಹೀಗೇ ಮುಂದುವರಿಯಲಿ. ಜೈಹೋ ಟೀಂ ಇಂಡಿಯಾ ಎಂದು ಶುಭಕೋರಿದ್ದಾರೆ.

    ನಿನ್ನೆ ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 8ನೇ ಬಾರಿಗೆ ಏಷ್ಯಾಕಪ್ ಕಿರೀಟವನ್ನ ಮುಡಿಗೇರಿಸಿಕೊಂಡಿತು. 1984, 1988, 1991, 1995, 2010, 2016, 2018ರಲ್ಲಿ ಏಷ್ಯಾಕಪ್ ಚಾಂಪಿಯನ್ ಆಗಿದ್ದ ಭಾರತ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದನ್ನೂ ಓದಿ: Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

    ಜೊತೆಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆದ್ದ 2ನೇ ಏಕದಿನ ಏಷ್ಯಾಕಪ್ ಚಾಂಪಿಯನ್ ಪಟ್ಟವೂ ಇದಾಗಿದೆ. ಇನ್ನೂ 6 ಬಾರಿ ಚಾಂಪಿಯನ್ ಹಾಗೂ 6 ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದ ಶ್ರೀಲಂಕಾ 7ನೇ ಬಾರಿಗೆ ರನ್ನರ್ ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 15.2 ಓವರ್‌ಗಳಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್ ಆಯಿತು. 51 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಕೇವಲ 6.1 ಓವರ್‌ಗಳಲ್ಲೇ 51 ರನ್ ಚಚ್ಚಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ಸಿರಾಜ್‌ ಬೆಂಕಿ ಬೌಲಿಂಗ್‌, 50 ರನ್‌ಗಳಿಗೆ ಆಲೌಟ್‌ – 39 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಲಂಕಾ

    ಲಂಕಾ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್, 7 ಓವರ್‌ಗಳಲ್ಲಿ 21 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 2.2 ಓವರ್‌ಗಳಲ್ಲಿ 3 ರನ್ ನೀಡಿ 3 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023: ಮಳೆಯಲ್ಲೂ ಶ್ರಮಿಸಿದ ಕ್ರೀಡಾಂಗಣ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

    Asia Cup 2023: ಮಳೆಯಲ್ಲೂ ಶ್ರಮಿಸಿದ ಕ್ರೀಡಾಂಗಣ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

    – ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ

    ಕೊಲಂಬೊ: 2023ರ ಏಷ್ಯಾ ಕಪ್‌ (Asia Cup 2023) ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ (Team India) 8ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ. ಈ ನಡುವೆ ಮಾನವೀಯತೆ ಮೆರೆದಿರುವ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಜಯ್‌ ಶಾ (Jay Shah) ಟೂರ್ನಿಯ ಯಶಸ್ಸಿಗೆ ಕಾರಣಾದ ಕ್ರೀಡಾಂಗಣ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

    ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿದ್ದು ಭಾರತವೇ ಆದರೂ ಹೃದಯ ಗೆದ್ದದ್ದು ಮಾತ್ರ ಕೊಲೊಂಬೊ ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿ. ಅನಿರೀಕ್ಷಿತ ಮಳೆ, ಗುಡುಗು-ಸಿಡಿಲಿನ ಆರ್ಭಟದ ನಡುವೆಯೂ ಮೈದಾನ ಮತ್ತು ಪಿಚ್‌ ಅನ್ನು ನೆನೆಯದಂತೆ ನೋಡಿಕೊಂಡು, ಮೈದಾನಕ್ಕೆ ನೀರು ಬಂದರೂ ಅದನ್ನು ಹರಸಾಹಸದಿಂದ ಒಣಗಿಸಿ, ಆಟಕ್ಕೆ ಅಣಿಗೊಳಿಸಿದ ಅವರು, ಟೂರ್ನಿ ಯಶಸ್ವಿಯಾಗಲು ಪ್ರಮುಖ ಕಾರಣರಾಗಿದ್ದಾರೆ. ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಮಳೆಯ (Rain) ಹನಿ ನೆಲಕ್ಕೆ ಬೀಳುತ್ತಿದ್ದಂತೆಯೇ ಚುರುಕುತನದಿಂದ ಕೆಲಸ ಮಾಡುತ್ತಾ ಇಡೀ ಮೈದಾನವನ್ನ ಟಾರ್ಪಾಲ್‌ಗಳಿಂದ ಮುಚ್ಚುತ್ತಿದ್ದರು. ಇದೀಗ ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಏಷ್ಯಾಕಪ್​ ಟೂರ್ನಿಯ ಪಂದ್ಯಗಳು ನಡೆದ ಮೈದಾನದ ಪಿಚ್​ ಕ್ಯುರೇಟರ್​ ಮತ್ತು ಸಿಬ್ಬಂದಿಗೆ 50 ಸಾವಿರ ಡಾಲರ್​​ (42 ಲಕ್ಷ ರೂ.) ಬಹುಮಾನವನ್ನು ಘೋಷಿಸಲಾಗಿದೆ. ಇದನ್ನೂ ಓದಿ: Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

    ಈ ಬಾರಿ ಏಷ್ಯಾಕಪ್ ಟೂರ್ನಿಯಲ್ಲಿ ನಡೆದ ಬಹುತೇಕ ಎಲ್ಲಾ ಪಂದ್ಯಗಳಿಗೂ ಮಳೆ ಅಡಚಣೆ ಉಂಟು ಮಾಡಿತ್ತು. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಗ್ರೂಪ್‌ ಹಂತದ ಪಂದ್ಯ ಹಾಗೂ ಸೂಪರ್‌ ಫೋರ್‌ ಪಂದ್ಯದ ವೇಳೆ ಮೈದಾನ ಒಣಗಿಸಲು ಹರಸಾಹಸ ಪಟ್ಟಿದ್ದರು. ಈ ಕಾರ್ಯವನ್ನ ಮೆಚ್ಚಿಕೊಂಡಿರುವ ಬಿಸಿಸಿಐ ಹಾಗೂ ಎಸಿಸಿ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದೆ. ಇದನ್ನೂ ಓದಿ:  Asia Cup 2023: ಒಂದೇ ಒಂದು ಕ್ಯಾಚ್‌ ಹಿಡಿದ ಜಡೇಜಾ, 6 ವಿಕೆಟ್‌ ಕಿತ್ತ ಸಿರಾಜ್‌ಗೆ ಲಕ್ಷ ಲಕ್ಷ ಬಹುಮಾನ

    ಈ ಕುರಿತು ಎಕ್ಸ್‌ (ಟ್ವಿಟ್ಟರ್‌) ಖಾತೆಯಲ್ಲಿ ಟ್ವೀಟ್‌ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಕ್ರಿಕೆಟ್​​ನ ಎಲೆ ಮರೆಯ ತಾರೆಗಳಿಗೆ ಅಭಿನಂದನೆಗಳು. ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿಸಲು ಸಾಧ್ಯವಾಗಿಸಿದ ಅವರಿಗೆ 42 ಲಕ್ಷ ರೂಪಾಯಿ ಬಹುಮಾನ ಘೋಷಿಸಲು ಹರ್ಷವಾಗುತ್ತಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆ ಈ ಕಾರ್ಯ ಮಾಡುತ್ತಿದ್ದೇವೆ ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023: ಒಂದೇ ಒಂದು ಕ್ಯಾಚ್‌ ಹಿಡಿದ ಜಡೇಜಾ, 6 ವಿಕೆಟ್‌ ಕಿತ್ತ ಸಿರಾಜ್‌ಗೆ ಲಕ್ಷ ಲಕ್ಷ ಬಹುಮಾನ

    Asia Cup 2023: ಒಂದೇ ಒಂದು ಕ್ಯಾಚ್‌ ಹಿಡಿದ ಜಡೇಜಾ, 6 ವಿಕೆಟ್‌ ಕಿತ್ತ ಸಿರಾಜ್‌ಗೆ ಲಕ್ಷ ಲಕ್ಷ ಬಹುಮಾನ

    – ಚಾಂಪಿಯನ್‌ ಟೀಂ ಇಂಡಿಯಾಕ್ಕೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ?

    ಕೊಲಂಬೊ: 2023ರ ಏಷ್ಯಾಕಪ್‌ (Asia Cup 2023) ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ (Team India) 8ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಆವೃತ್ತಿಯಲ್ಲಿ ಟೀಂ ಇಂಡಿಯಾ ಸೇರಿದಂತೆ ಇತರೇ ಆಟಗಾರರು ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ಇದರೊಂದಿಗೆ ಉತ್ತಮ ಪ್ರದರ್ಶನ ತೋರಿದ ತಂಡಗಳು ಹಾಗೂ ಆಟಗಾರರು ಲಕ್ಷ ಲಕ್ಷ ಹಣವನ್ನೂ ಬಾಚಿಕೊಂಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ. ಇದನ್ನೂ ಓದಿ: Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

    ಏಷ್ಯಾ ಕಪ್ 2023 ರಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ:
    ವಿಜೇತರು – ಭಾರತ (ಬಹುಮಾನ – 1.24 ಕೋಟಿ ರೂ.)
    ರನ್ನರ್ ಅಪ್ – ಶ್ರೀಲಂಕಾ (SriLanka) (ಬಹುಮಾನ – 62.31 ಲಕ್ಷ ರೂ.)
    ಪ್ಲೇಯರ್‌ ಆಫ್‌ ದಿ ಟೂರ್ನಮೆಂಟ್‌ – ಕುಲದೀಪ್ ಯಾದವ್ (9 ವಿಕೆಟ್) (ಬಹುಮಾನ – 12.46 ಲಕ್ಷ ರೂ.)
    ಪಂದ್ಯ ಶ್ರೇಷ್ಠ – ಮೊಹಮ್ಮದ್ ಸಿರಾಜ್ (6 ವಿಕೆಟ್) (ಬಹುಮಾನ – 4.15 ಲಕ್ಷ ರೂ.)
    ಅತಿಹೆಚ್ಚು ರನ್‌ ಗಳಿಸಿದ ಆಟಗಾರ – ಶುಭಮನ್ ಗಿಲ್, ಟೀಂ ಇಂಡಿಯಾ (302 ರನ್)
    ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಆಟಗಾರ – ಮಥೀಶ ಪತಿರಣ, ಶ್ರೀಲಂಕಾ (11 ವಿಕೆಟ್‌ಗಳು)
    ಫೈನಲ್‌ ಪಂದ್ಯದ ಕ್ಯಾಚ್‌ ಆಫ್‌ ದಿ ಮ್ಯಾಚ್‌ – ರವೀಂದ್ರ ಜಡೇಜಾ (ಬಹುಮಾನ – 4.15 ಲಕ್ಷ ರೂ.)

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023 Final: 6 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದ ಮೊಹಮ್ಮದ್ ಸಿರಾಜ್‌‌

    Asia Cup 2023 Final: 6 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದ ಮೊಹಮ್ಮದ್ ಸಿರಾಜ್‌‌

    ಕೊಲಂಬೊ: ಟೀಂ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್ ಸಿರಾಜ್‌‌ (Mohammed Siraj) 2023ರ ಏಷ್ಯಾಕಪ್‌ ಫೈನಲ್‌ (Asia Cup 2023 Final) ಪಂದ್ಯದಲ್ಲಿ ಪ್ರಚಂಡ ಬೌಲಿಂಗ್‌ ಪ್ರದರ್ಶನ ತೋರಿದ್ದಾರೆ. ಶ್ರೀಲಂಕಾ ವಿರುದ್ಧ 7 ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟು ಒಟ್ಟು 6 ವಿಕೆಟ್‌ ಪಡೆಯುವ ಮೂಲಕ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ.

    ಹೈದರಾಬಾದ್ ಮೂಲದ 29 ವರ್ಷದ ಬಲಗೈ ವೇಗಿ ಸಿರಾಜ್‌, ಏಷ್ಯಾ ಕಪ್ 2023 ಟೂರ್ನಿಯಲ್ಲಿ ತಮ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ. 7 ಓವರ್‌ಗಳಲ್ಲಿ ಒಂದು ಮೇಡಿನ್‌ ಒಳಗೊಂಡಂತೆ 21 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದು ಅಬ್ಬರಿಸಿದ್ದಾರೆ. ಪರಿಣಾಮ ಶ್ರೀಲಂಕಾ (Sri Lanka) ತಂಡ 50 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಇದನ್ನೂ ಓದಿ: Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

    ಇದೇ ಟೂರ್ನಿಯಲ್ಲಿ ಸಿರಾಜ್‌ ಭಾರತದ ಪರ ಅತಿ ವೇಗವಾಗಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಇದು ಸಿರಾಜ್ ಏಕದಿನ ಕ್ರಿಕೆಟ್‌ ವೃತ್ತಿಬದುಕಿನ ಮೊದಲ ಸಾಧನೆಯೂ ಆಗಿದೆ. 1993ರ ಸಿಎಬಿ ಜುಬ್ಲೀ ಟೂರ್ನಿಯ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ ಎದುರು ಅನಿಲ್ ಕುಂಬ್ಳೆ (Anil Kumble) ವೇಗವಾಗಿ 6 ವಿಕೆಟ್‌ ಪಡೆದಿದ್ದು, ಈ ಹಿಂದಿನ ಸಾಧನೆ ಆಗಿತ್ತು. ಇದರೊಂದಿಗೆ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಭಾರತದ ಪರ 50 ವಿಕೆಟ್‌ ಪಡೆದ 4ನೇ ಬೌಲರ್‌ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

    ಅಷ್ಟೇ ಅಲ್ಲದೇ ಭಾರತದ ಪರ ಮೊದಲ 10 ಓವರ್‌ಗಳಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ವಿಶೇಷ ಸಾಧನೆ ಮಾಡಿದ್ದಾರೆ. ಜೊತೆಗೆ 2003ರ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ 16 ಎಸೆತಗಳಲ್ಲಿ 5 ವಿಕೆಟ್‌ ಕಿತ್ತು ವಿಶ್ವದಾಖಲೆ ನಿರ್ಮಿಸಿದ್ದ ಶ್ರೀಲಂಕಾದ ಮಾಜಿ ವೇಗಿ ಚಮಿಂದಾ ವಾಸ್‌ ಅವರ ದಾಖಲೆಯನ್ನೂ ಸಿರಾಜ್‌ ಸರಿಗಟ್ಟಿದ್ದಾರೆ. ಇದನ್ನೂ ಓದಿ: ಸಿರಾಜ್‌ ಬೆಂಕಿ ಬೌಲಿಂಗ್‌, 50 ರನ್‌ಗಳಿಗೆ ಆಲೌಟ್‌ – 39 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಲಂಕಾ

    ಸಿರಾಜ್‌ ಬೌಲಿಂಗ್‌ ಮಾಡಿದ 2ನೇ ಓವರ್‌ನಲ್ಲೇ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಅವಕಾಶ ಕೈತಪ್ಪಿದರು ಸಹ ಆ ಓವರ್‌ನಲ್ಲಿ 4 ವಿಕೆಟ್‌ ಕಿತ್ತು ಮಿಂಚಿದರು. ಪಂದ್ಯದ ಮೊದಲ ಓವರ್‌ನಲ್ಲೇ ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ದಾಳಿಗೆ ಓಪನರ್‌ ಕುಶಲ್‌ ಪೆರೆರಾ ಶೂನ್ಯಕ್ಕೆ ಔಟಾದರು. ಈ ಬೆನ್ನಲ್ಲೇ ಶ್ರೀಲಂಕಾ ತಂಡದ ಪೆವಿಲಿಯನ್ ಪರೇಡ್‌ ಶುರುವಾಗಿತ್ತು. ಬುಮ್ರಾ ಮತ್ತು ಸಿರಾಜ್‌ ಬಳಿಕ ದಾಳಿಗಿಳಿದ ಹಾರ್ದಿಕ್‌ ಪಾಂಡ್ಯ ಕೂಡ ಕೇವಲ 3 ರನ್‌ಗಳಿಗೆ 3 ವಿಕೆಟ್‌ ಪಡೆದು ಶ್ರೀಲಂಕಾ ತಂಡವನ್ನು 50 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಯಶಸ್ವಿಯಾದರು. ಇದು 39 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಶ್ರೀಲಂಕಾ ತಂಡ ಭಾರತದ ಎದುರು ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

    Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

    – ಮೊಹಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿಗೆ 6 ವಿಕೆಟ್‌ ಉಡೀಸ್‌

    ಕೊಲಂಬೊ: ಲಂಕಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ (Team India) 8ನೇ ಬಾರಿಗೆ ಏಷ್ಯಾಕಪ್‌ (Asia Cup 2023) ಕಿರೀಟವನ್ನ ಮುಡಿಗೇರಿಸಿಕೊಂಡಿದೆ. 1984, 1988, 1991, 1995, 2010, 2016, 2018ರಲ್ಲಿ ಏಷ್ಯಾಕಪ್‌ ಚಾಂಪಿಯನ್‌ ಆಗಿದ್ದ ಭಾರತ 8ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

    ಜೊತೆಗೆ ರೋಹಿತ್‌ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಗೆದ್ದ 2ನೇ ಏಕದಿನ ಏಷ್ಯಾಕಪ್‌ ಚಾಂಪಿಯನ್‌ ಪಟ್ಟವೂ ಇದಾಗಿದೆ. ಇನ್ನೂ 6 ಬಾರಿ ಚಾಂಪಿಯನ್‌ ಹಾಗೂ 6 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಗೆದ್ದುಕೊಂಡಿದ್ದ ಶ್ರೀಲಂಕಾ 7ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

    ಭಾನುವಾರ ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ (Sri Lanka) ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 15.2 ಓವರ್‌ಗಳಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್‌ ಆಯಿತು. 51 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಕೇವಲ 6.1 ಓವರ್‌ಗಳಲ್ಲೇ 51 ರನ್‌ ಚಚ್ಚಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಕಡಿಮೆ ರನ್‌ ಗುರಿ ಪಡೆದ ಹಿನ್ನೆಲೆಯಲ್ಲಿ ಬ್ಯಾಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಂಡಿತು. ನಾಯಕ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ (Shubman Gill) ಜೊತೆಯಾಗಿ ಇಶಾನ್‌ ಕಿಶನ್‌ (Ishan Kishan) ಅವರನ್ನ ಆರಂಭಿಕರಾಗಿ ಕಣಕ್ಕಿಳಿಸಿದರು. ಆರಂಭದಿಂದಲೇ ಲಂಕಾ ಬೌಲರ್‌ಗಳ ಬೆಂಡೆತ್ತಿದ್ದ ಕಿಶನ್‌ ಹಾಗೂ ಗಿಲ್‌ ಜೋಡಿ ಕೇವಲ 6.1 ಓವರ್‌ನಲ್ಲೇ 51 ರನ್‌ ಸಿಡಿಸಿ ಮ್ಯಾಚ್‌ ಮುಗಿಸಿತು. ಇಶಾನ್‌ ಕಿಶನ್‌ 18 ಎಸೆತಗಳಲ್ಲಿ 23 ರನ್‌, ಶುಭಮನ್‌ ಗಿಲ್‌ 19 ಎಸೆತಗಳಲ್ಲಿ 27 ರನ್‌ ಗಳಿಸಿ ಮಿಂಚಿದರು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಟೀಂ ಇಂಡಿಯಾಕ್ಕೆ ಪ್ರಬಲ ಪೈಪೋಟಿ ನೀಡಲು‌ ಕಣಕ್ಕಿಳಿದಿದ್ದ ಶ್ರೀಲಂಕಾ ತಂಡ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿತು. 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 39 ವರ್ಷಗಳ ನಂತರ ಏಷ್ಯಾಕಪ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಕಡಿಮೆ ರನ್‌ ದಾಖಲಿಸಿದ ಕೆಟ್ಟ ದಾಖಲೆಯನ್ನೂ ಹೆಗಲಿಗೇರಿಸಿಕೊಂಡಿತು. 1984ರ ಏಷ್ಯಾಕಪ್‌ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ವಿರುದ್ಧ 41 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಆಲೌಟ್‌ ಆಗಿತ್ತು. ಆದರೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆ ನಂತರ 1986 ರಲ್ಲಿ ಪಾಕಿಸ್ತಾನದ ವಿರುದ್ಧ 33.5 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಗಿತ್ತು.

    ಆರಂಭಿಕರಾಗಿ ಕಣಕ್ಕಿಳಿದ ಕುಶಲ್‌ ಪೆರೇರ ಮೊದಲ ಓವರ್‌ನಲ್ಲೇ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಮಾರಕ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌ 4ನೇ ಓವರ್‌ನಲ್ಲಿ ಕೇವಲ ನಾಲ್ಕು ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಉರುಳಿಸಿದರು. ಆ ನಂತರವೂ ದಾಳಿ ಮುಂದುವರಿಸಿದ ಸಿರಾಜ್‌ 6ನೇ ಮತ್ತು 12ನೇ ಓವರ್‌ನಲ್ಲಿ ಒಂದೊಂದು ವಿಕೆಟ್‌ ಪಡೆದರು. ಇದರಿಂದ ಲಂಕಾ ಮಕಾಡೆ ಮಲಗಿತು.

    ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಲಂಕಾ ಕೇವಲ 6 ಓವರ್‌ಗಳಲ್ಲಿ 13 ರನ್‌ಗಳಿಗೆ ಪ್ರಮುಖ 6 ವಿಕೆಟ್‌ ಗಳನ್ನ ಕಳೆದುಕೊಂಡಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಪತುಮ್ ನಿಸ್ಸಂಕ (2 ರನ್‌), ಕುಶಲ್‌ ಮೆಂಡಿಸ್‌ (17 ರನ್), ಧನಂಜಯ ಡಿ ಸಿಲ್ವಾ (4 ರನ್‌), ದುನಿತ್ ವೆಲ್ಲಾಳ (8 ರನ್‌) ಗಳಿಸಿದ್ರೆ ಕುಶಲ್ ಪೆರೇರ, ಸಾದೀರ ಸಮರವಿಕ್ರಮ, ಚರಿತ್ ಅಸಲಂಕ, ನಾಯಕ ದಸುನ್‌ ಶನಾಕ (Dasun Shanaka) ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಕೊನೆಯಲ್ಲಿ ಪ್ರಮೋದ್‌ ಮಧೂಶನ್‌ 1 ರನ್‌ ಗಳಿಸಿದ್ರೆ, ಮತೀಶ ಪಥಿರಣ ಶೂನ್ಯಕ್ಕೆ ಔಟಾದರು. ದುಶನ್ ಹೇಮಂತ 13 ರನ್‌ಗಳಿಸಿ ಕ್ರೀ‌ಸ್‌ನಲ್ಲಿ ಉಳಿದರು.

    ಲಂಕಾ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌, 7 ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಕಿತ್ತರೆ, ಹಾರ್ದಿಕ್‌ ಪಾಂಡ್ಯ 2.2 ಓವರ್‌ಗಳಲ್ಲಿ 3 ರನ್‌ ನೀಡಿ 3 ವಿಕೆಟ್‌ ಕಿತ್ತರು. ಜಸ್ಪ್ರೀತ್‌ ಬುಮ್ರಾ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿರಾಜ್‌ ಬೆಂಕಿ ಬೌಲಿಂಗ್‌, 50 ರನ್‌ಗಳಿಗೆ ಆಲೌಟ್‌ – 39 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಲಂಕಾ

    ಸಿರಾಜ್‌ ಬೆಂಕಿ ಬೌಲಿಂಗ್‌, 50 ರನ್‌ಗಳಿಗೆ ಆಲೌಟ್‌ – 39 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದ ಲಂಕಾ

    ಕೊಲಂಬೊ: ಸೂಪರ್‌-4ನಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನ ಬಗ್ಗುಬಡಿದಿದ್ದ ಶ್ರೀಲಂಕಾ (Sri Lanka) ತಂಡ ಮಹತ್ವದ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದೆ. ಕೇವಲ 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತಕ್ಕೆ 51 ರನ್‌ಗಳ ಗುರಿ ನೀಡಿದೆ.

    ಈ ಮೂಲಕ 39 ವರ್ಷಗಳ ನಂತರ ಅತೀ ಕಡಿಮೆ ಮೊತ್ತಕ್ಕೆ ಲಂಕಾ ಆಲೌಟ್‌ ಆದ ಅಪಖ್ಯಾತಿ ಪಡೆದಿದೆ. 1984ರ ಏಷ್ಯಾಕಪ್‌ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ವಿರುದ್ಧ 41 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಆಲೌಟ್‌ ಆಗಿತ್ತು. ಆ ನಂತರ 1986 ರಲ್ಲಿ ಪಾಕಿಸ್ತಾನದ ವಿರುದ್ಧ 33.5 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದೀಗ ಭಾರತದ ವಿರುದ್ಧ 50 ರನ್‌ಗಳಿಗೆ ಆಲೌಟ್‌ ಆಗಿದ್ದು, ಏಷ್ಯಾಕಪ್‌ ಇತಿಹಾಸದಲ್ಲೇ (Asia Cup History) ಅತಿ ಕಡಿಮೆ ರನ್‌ ದಾಖಲಿಸಿ ಬೇಡದ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದೆ.

    ಟಾಸ್‌ ಗೆದ್ದು ಟೀಂ ಇಂಡಿಯಾಕ್ಕೆ ಪ್ರಬಲ ಪೈಪೋಟಿ ನೀಡಲು‌ ಕಣಕ್ಕಿಳಿದಿದ್ದ ಲಂಕಾ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಕುಶಲ್‌ ಪೆರೇರ ಮೊದಲ ಓವರ್‌ನಲ್ಲೇ ಜಸ್ಪ್ರೀತ್‌ ಬುಮ್ರಾಗೆ (Jasprit Bumrah) ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಮಾರಕ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌ (Mohammed Siraj) 4ನೇ ಓವರ್‌ನಲ್ಲಿ ಕೇವಲ ನಾಲ್ಕು ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಉರುಳಿಸಿದರು. ಆ ನಂತರವೂ ದಾಳಿ ಮುಂದುವರಿಸಿದ ಸಿರಾಜ್‌ 6ನೇ ಮತ್ತು 12ನೇ ಓವರ್‌ನಲ್ಲಿ ಒಂದೊಂದು ವಿಕೆಟ್‌ ಪಡೆದರು. ಇದರಿಂದ ಲಂಕಾ ಮಕಾಡೆ ಮಲಗಿತು.

    ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಲಂಕಾ ಕೇವಲ 6 ಓವರ್‌ಗಳಲ್ಲಿ 13 ರನ್‌ಗಳಿಗೆ ಪ್ರಮುಖ 6 ವಿಕೆಟ್‌ ಗಳನ್ನ ಕಳೆದುಕೊಂಡಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಪತುಮ್ ನಿಸ್ಸಂಕ (2 ರನ್‌), ಕುಶಲ್‌ ಮೆಂಡಿಸ್‌ (17 ರನ್), ಧನಂಜಯ ಡಿ ಸಿಲ್ವಾ (4 ರನ್‌), ದುನಿತ್ ವೆಲ್ಲಾಳ (8 ರನ್‌) ಗಳಿಸಿದ್ರೆ ಕುಶಲ್ ಪೆರೇರ, ಸಾದೀರ ಸಮರವಿಕ್ರಮ, ಚರಿತ್ ಅಸಲಂಕ, ನಾಯಕ ದಸುನ್‌ ಶನಾಕ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಕೊನೆಯಲ್ಲಿ ಪ್ರಮೋದ್‌ ಮಧೂಶನ್‌ 1 ರನ್‌ ಗಳಿಸಿದ್ರೆ, ಮತೀಶ ಪಥಿರಣ ಶೂನ್ಯಕ್ಕೆ ಔಟಾದರು. ದುಶನ್ ಹೇಮಂತ 13 ರನ್‌ಗಳಿಸಿ ಕ್ರೀ‌ಸ್‌ನಲ್ಲಿ ಉಳಿದರು.

    ಲಂಕಾ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌, 7 ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಕಿತ್ತರೆ, ಹಾರ್ದಿಕ್‌ ಪಾಂಡ್ಯ (Hardik Pandya) 2.2 ಓವರ್‌ಗಳಲ್ಲಿ 3 ರನ್‌ ನೀಡಿ 3 ವಿಕೆಟ್‌ ಕಿತ್ತರು. ಜಸ್ಪ್ರೀತ್‌ ಬುಮ್ರಾ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023: ಫೈನಲ್‌ ಪಂದ್ಯಕ್ಕೂ ತಪ್ಪದ ಮಳೆ ಕಾಟ – ಪಂದ್ಯ ರದ್ದಾದ್ರೆ ಯಾರಾಗ್ತಾರೆ ವಿನ್ನರ್‌?

    Asia Cup 2023: ಫೈನಲ್‌ ಪಂದ್ಯಕ್ಕೂ ತಪ್ಪದ ಮಳೆ ಕಾಟ – ಪಂದ್ಯ ರದ್ದಾದ್ರೆ ಯಾರಾಗ್ತಾರೆ ವಿನ್ನರ್‌?

    ಕೊಲಂಬೊ: ಟೂರ್ನಿಯುದ್ದಕ್ಕೂ ವರುಣನ ಕಾಟವಿದ್ದರೂ ಲೀಗ್‌ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ (Ind vs Pak) ನಡುವಣ ಒಂದೇ ಒಂದು ಪಂದ್ಯ ಮಾತ್ರ ಮಳೆಯಿಂದ (Rain) ರದ್ದಾಗಿತ್ತು. ಇದೀಗ ಫೈನಲ್‌ ಪಂದ್ಯಕ್ಕೂ ಆರಂಭದಲ್ಲೇ ಮಳೆಯ ಕಾಟ ಶುರುವಾಗಿದೆ.

    ಏಷ್ಯಾ ಕಪ್‌-2023 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ (Team India), ಶ್ರೀಲಂಕಾ ವಿರುದ್ಧ ಸೆಣಸಲು ಕಣಕ್ಕಿಳಿದಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ದಾಖಲೆಯ 8ನೇ ಟ್ರೋಫಿ ಗೆಲುವಿನತ್ತ ಕಣ್ಣಿಟ್ಟಿದ್ದು, ಶ್ರೀಲಂಕಾ (Sri Lanka) ತಂಡ 7ನೇ ಬಾರಿ ಟ್ರೋಫಿ ಗೆಲ್ಲುವ ಲೆಕ್ಕಾಚಾರ ಮಾಡಿದೆ. ಅಂದಹಾಗೆ ಏಷ್ಯಾ ಕಪ್‌ ಇತಿಹಾಸದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಹೆಚ್ಚು ಬಾರಿ ಟ್ರೋಫಿ ಗೆದ್ದ ದಾಖಲೆ ಹೊಂದಿದೆ. ಇದೀಗ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿದೆ.

    ಫೈನಲ್‌ ಕನದಕ್ಕೆ ಆರಂಭದಲ್ಲೇ ಮಳೆ ಅಡ್ಡಿಯುಂಟುಮಾಡಿದೆ. ಸುಮಾರು 20 ನಿಮಿಷಗಳ ಕಾಲ ಮಳೆ ಸುರಿದು ಬಿಡುವು ನೀಡಿದೆ, ಭಾರತ ಹಾಗೂ ಶ್ರೀಲಂಕಾ ನಡುವಣ ಫೈನಲ್‌ ಪಂದ್ಯಕ್ಕೆ ಈಗಾಗಲೇ ಮೀಸಲು ದಿನವನ್ನ ನಿಗದಿಪಡಿಸಲಾಗಿದೆ. ಇದಕ್ಕೂ ಮುನ್ನ ಭಾರತ ಹಾಗೂ ಪಾಕಿಸ್ತಾನ ಸೂಪರ್-4ರ ಏಕೈಕ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಪಡಿಸಲಾಗಿತ್ತು. ಸೆ.17 ರಂದು ಭಾನುವಾರ ಫೈನಲ್‌ ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗದಿದ್ದರೆ, ಮೀಸಲು ದಿನವಾದ ಸೋಮವಾರ (ಸೆಪ್ಟೆಂಬರ್‌ 18) ಪಂದ್ಯವನ್ನು ಮುಂದುವರಿಸಲಾಗುತ್ತದೆ. ಒಂದು ವೇಳೆ ಮೀಸಲು ದಿನವೂ ಮಳೆ ಅಡಿಯುಂಟುಮಾಡಿದಲ್ಲಿ, ಇತ್ತಂಡಗಳನ್ನೂ ಚಾಂಪಿಯನ್‌ ಎಂದು ಘೋಷಿಸುವುದಾಗಿ ಏಷ್ಯನ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

    ವಾಷಿಂಗ್ಟನ್‌ ಸುಂದರ್‌ ಕಣಕ್ಕೆ:
    ಟೀಂ ಇಂಡಿಯಾ ತನ್ನ ಆಡುವ 11ರ ಬಳಗದಲ್ಲಿ ಮಹತ್ವದ ಬದಲಾವಣೆ ತಂದುಕೊಂಡಿದೆ. ಗಾಯಾಳು ಅಕ್ಷರ್‌ ಪಟೇಲ್‌ಗೆ ಬ್ಯಾಕಪ್‌ ಆಗಿ ತಂಡ ಸೇರಿದ್ದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಫೈನಲ್ ಪಂದ್ಯಕ್ಕೆ ತಂಡದ ಆಡುವ 11ರ ಬಳಗ ಸೇರಿದ್ದಾರೆ. ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಟಿ20 ಸರಣಿಯಲ್ಲೂ ವಾಷಿಂಗ್ಟನ್‌ ಸುಂದರ್‌ ಉತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಇದನ್ನೂ ಓದಿ: Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    ಟೀಂ ಇಂಡಿಯಾ ಪ್ಲೇಯಿಂಗ್-11
    ರೋಹಿತ್ ಶರ್ಮಾ (ನಾಯಕ್), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್‌ಕೀಪರ್‌), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್‌ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್. ಇದನ್ನೂ ಓದಿ: Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್‌ಗೆ ಶಾಕ್‌

    ಶ್ರೀಲಂಕಾ ತಂಡದ ಪ್ಲೇಯಿಂಗ್‌-11
    ಪತುಮ್ ನಿಸ್ಸಂಕ, ಕುಶಲ್ ಪೆರೇರ, ಕುಶಲ್ ಮೆಂಡಿಸ್ (ವಿಕೆಟ್‌ಕೀಪರ್‌), ಸಾದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಾಳಗೆ, ದುಶನ್ ಹೇಮಂತ, ಪ್ರಮೋದ್ ಮಧೂಶನ್, ಮತೀಶ ಪತಿರಣ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಂಗ್ಲಾದೇಶದ ವಿರುದ್ಧ ಭಾರತ ಸೋತಿದ್ದು ಪಾಕ್‌ ತಂಡಕ್ಕೆ, ನನಗೆ ಸಮಾಧಾನ: ಶೋಯೆಬ್‌ ಅಖ್ತರ್‌

    ಬಾಂಗ್ಲಾದೇಶದ ವಿರುದ್ಧ ಭಾರತ ಸೋತಿದ್ದು ಪಾಕ್‌ ತಂಡಕ್ಕೆ, ನನಗೆ ಸಮಾಧಾನ: ಶೋಯೆಬ್‌ ಅಖ್ತರ್‌

    ಕೊಲಂಬೊ: ನಾಕೌಟ್‌ ಪಂದ್ಯದಲ್ಲಿ ಪಾಕಿಸ್ತಾನ (Pakistan), ಶ್ರೀಲಂಕಾ ವಿರುದ್ಧ ಸೋತಿದ್ದರಿಂದ ಎಲ್ಲರೂ ಪಾಕ್‌ ತಂಡವನ್ನ ಟೀಕಿಸುತ್ತಿದ್ದರು. ಆದ್ರೆ ಭಾರತ ಬಾಂಗ್ಲಾದೇಶದ ವಿರುದ್ಧ ಸೋತಿದ್ದು ನನಗೆ ಮತ್ತು ಪಾಕಿಸ್ತಾನ ತಂಡಕ್ಕೆ ಸಮಾಧಾನ ತರಿಸಿದೆ ಎಂದು ಪಾಕ್‌ ಮಾಜಿ ಕ್ರಿಕೆಟಿಗ ಶೋಯೆಬ್‌ ಅಖ್ತರ್‌ (Shoaib Akhtar) ಹೇಳಿದ್ದಾರೆ.

    ಶುಕ್ರವಾರ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ (Team Bangladesh) 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 265 ರನ್‌ ಗಳಿಸಿತ್ತು. 266 ರನ್‌ಗಳ ಗುರಿ ಬೆನ್ನ‌ತ್ತಿದ ಭಾರತ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 6 ರನ್‌ಗಳ ವಿರೋಚಿತ ಸೋಲನುಭವಿಸಿತು. ಟೂರ್ನಿಯಲ್ಲಿ ಈಗಾಗಲೇ ಭಾರತ ಫೈನಲ್‌ ತಲುಪಿಯಾಗಿದೆ. ಹೀಗಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಂತಿಮ ಸೂಪರ್‌-4 ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಎದುರು 6 ರನ್‌ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

    ಈ ಕುರಿತು ಪಾಕಿಸ್ತಾನ‌ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಮಾತನಾಡಿದ ಅಖ್ತರ್‌, ನಾಕೌಟ್‌ ಪಂದ್ಯದಲ್ಲಿ ಶ್ರೀಲಂಕಾ ಪಾಕಿಸ್ತಾನ ತಂಡವನ್ನ ಸೋಲಿಸುವ ಮೂಲಕ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತಕ್ಕೆ ಎಚ್ಚರಿಕೆಯ ಗಂಟೆ ನೀಡಿದೆ. ಕೆಲವು ಪಂದ್ಯಗಳನ್ನು ಗೆದ್ದ ಮಾತ್ರಕ್ಕೆ ಉಳಿದ ತಂಡಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನ ಬಾಂಗ್ಲಾದೇಶ ಸಾಬೀತು ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: World Cup 2023: ಇಂದಿನಿಂದ ಸೆಮಿಫೈನಲ್‌, ಫೈನಲ್‌ ಪಂದ್ಯ ಆನ್‌ಲೈನ್‌ ಟಿಕೆಟ್‌ ಮಾರಾಟ – ಬುಕ್‌ ಮಾಡೋದು ಹೇಗೆ?

    ಇದೇ ವೇಳೆ ವಿಶ್ವಕಪ್‌ ಕುರಿತು ಮಾತನಾಡಿದ ಅವರು, ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಸೆಮಿಸ್‌ ತಲುಪುವ ಫೇವರೆಡ್‌ ಎಂದು ಹೇಳುತ್ತಿದ್ದೇವೆ. ಇದರೊಂದಿಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಕೂಡ ಸೆಮಿಸ್‌ ತಲುಪಲಿವೆ. ಆದ್ರೆ ಭಾರತದಂತಹ ಬಲಿಷ್ಠ ತಂಡವನ್ನೇ ಬಾಂಗ್ಲಾದೇಶ ಸೋಲಿಸಿದೆ. ಶುಭಮನ್‌ ಗಿಲ್‌ ಅವರ ಶತಕ ಕೂಡ ಪ್ರಯೋಜನವಾಗಿಲ್ಲ. ಹೀಗೆ ನೋಡಿದ್ರೆ ವಿಶ್ವಕಪ್‌ ಯಾರ ಆಟ ಎಂದು ಹೇಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    ಗಿಲ್‌ ವಿಶೇಷ ಸಾಧನೆ: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಗೆಲುವಿಗಾಗಿ ಅದ್ಭುತ ಹೋರಾಟ ನಡೆಸಿದ ಶುಭಮನ್ ಗಿಲ್‌, ತಮ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ವೃತ್ತಿಬದುಕಿನ 5ನೇ ಶತಕ ಬಾರಿಸಿದರು. ಆದರೆ, ತಂಡವನ್ನು ಜಯದ ದಡ ಮುಟ್ಟಿಸುವಲ್ಲಿ ವಿಫಲರಾದರು. ಈಗಾಗಲೇ ನ್ಯೂಜಿಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ದಾಖಲೆ ಹೊಂದಿರುವ ಶುಭಮನ್ ಗಿಲ್‌, ಇದೀಗ ತಮ್ಮ 5ನೇ ಒಡಿಐ ಶತಕದ ಮೂಲಕ 2023ರ ಸಾಲಿನಲ್ಲಿ ಏಕದಿನ ಕ್ರಿಕೆಟ್‌ ಒಂದರಲ್ಲೇ 1000ಕ್ಕೂ ಹೆಚ್ಚು ರನ್‌ ಗಳಿಸಿದ ವಿಶೇಷ ಸಾಧನೆಯನ್ನೂ ಮಾಡಿದ್ದಾರೆ.

    ಬಾಂಗ್ಲಾದೇಶ ತಂಡದ ಸ್ಪಿನ್ನರ್‌ಗಳ ಎದುರು ಭಾರತೀಯ ಬ್ಯಾಟರ್‌ಗಳು ರನ್‌ ಗಳಿಸಲು ಕಷ್ಟ ಪಟ್ಟರೆ, ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಗಿಲ್‌, 8 ಬೌಂಡರಿ ಮತ್ತು 5 ಸಿಕ್ಸರ್‌ಗಳ ಬಲದಿಂದ 133 ಎಸೆತಗಳಲ್ಲಿ 121 ರನ್‌ ಸಿಡಿಸಿದರು. ತಂಡಕ್ಕೆ ಜಯ ತಂದುಕೊಡಲೇ ಬೇಕೆಂಬ ದಿಟ್ಟತನದಲ್ಲಿ ಬ್ಯಾಟ್‌ ಮಾಡಿದ್ದ ಗಿಲ್‌, ಮೆಹ್ದಿ ಹಸನ್‌ ಬೌಲಿಂಗ್‌ನಲ್ಲಿ ಲಾಂಗ್‌ ಆಫ್‌ ಕಡೆಗೆ ಸಿಕ್ಸರ್‌ ಬಾರಿಸುವ ಪ್ರಯತ್ನದಲ್ಲಿ ಕ್ಯಾಚ್‌ ನೀಡಿ ಔಟಾದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್‌ಗೆ ಶಾಕ್‌

    Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್‌ಗೆ ಶಾಕ್‌

    ಕೊಲಂಬೊ: 2023ರ ಏಕದಿನ ಏಷ್ಯಾಕಪ್‌ (Asia Cup 2023) ಟೂರ್ನಿ ನಿರ್ಣಾಯಕ ಹಂತಕ್ಕೆ ತಲುಪಿದೆ. ಇಂದಿನ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಬಿಡುವು ನೀಡಿದ್ದು ತಡವಾಗಿದ್ದರಿಂದ ಓವರ್‌ ಕಡಿತಗೊಳಿಸಲಾಗಿದೆ.

    ಮಳೆಯಿಂದ (Rain) ಮೈದಾನವನ್ನು ಒಣಗಿಸುವ ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಪಂದ್ಯವನ್ನು 45 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇತ್ತಂಡಗಳಿಗೂ ತಲಾ 45 ಓವರ್‌ ನಿಗದಿಪಡಿಸಲಾಗಿದ್ದು, 9 ಓವರ್‌ಗೆ ಪವರ್‌ ಪ್ಲೇ ಮುಕ್ತಾಯವಾಗಲಿದೆ. ಮಳೆಯ ಕಾಟ ಮುಂದುವರಿದರೆ, ಮತ್ತಷ್ಟು ಓವರ್‌ ಕಡಿತಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತದೆ. ಒಂದು ವೇಳೆ ಪಂದ್ಯ ರದ್ದಾದರೆ ರನ್‌ರೇಟ್‌ ಮೇಲೆ ಫೈನಲ್‌ಗೆ ತಂಡವನ್ನ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

    ಸದ್ಯ ಪಾಕಿಸ್ತಾನ (Pakistan) ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಭಾರತದ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?

    ಪಂದ್ಯ ರದ್ದಾದರೆ ಮುಂದೇನು?
    ಒಂದು ವೇಳೆ ಮಳೆ ಕಾಟ ಮುಂದುವರಿದು ಪಂದ್ಯ ರದ್ದಾದ್ರೆ ಶ್ರೀಲಂಕಾ (SriLanka) ಫೈನಲ್‌ ಪ್ರವೇಶಿಸಲಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ಸೂಪರ್‌-4 ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿತ್ತು. ಹೀಗಾಗಿ 2ನೇ ದಿನ ಆಟ ಮುಂದುವರಿದ ಪರಿಣಾಮ ಭಾರತ ಪಾಕ್‌ ವಿರುದ್ಧ 228 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ. ಸೂಪರ್‌-4ನಲ್ಲಿ ಆಡಿದ ಎರಡು ಪಂದ್ಯಗಳನ್ನೂ ಗೆದ್ದಿರುವ ಭಾರತ 4 ಅಂಕದೊಂದಿಗೆ 2.690 ನೆಟ್‌ ರನ್‌ ರೇಟ್‌ನೊಂದಿಗೆ ಈಗಾಗಲೇ ಫೈನಲ್‌ ಪ್ರವೇಶ ಮಾಡಿದೆ. ಇದನ್ನೂ ಓದಿ: Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    ಶ್ರೀಲಂಕಾ ಎರಡು ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ -0.200 ನೆಟ್‌ ರನ್‌ ರೇಟ್‌ ಹೊಂದಿದ್ದರೆ ಪಾಕಿಸ್ತಾನ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿ -1.892 ನೆಟ್‌ ರನ್‌ ರೇಟ್‌ನೊಂದಿಗೆ 3ನೇ ಸ್ಥಾನ ಪಡೆದಿದೆ. ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಮಳೆಯಿಂದಾಗಿ ಪಂದ್ಯ ರದ್ದಾದರೆ, ಶ್ರೀಲಂಕಾ ತಂಡ ಸುಲಭವಾಗಿ ಫೈನಲ್‌ ಪ್ರವೇಶ ಮಾಡಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇವಲ 10 ರನ್‌ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್‌

    ಕೇವಲ 10 ರನ್‌ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್‌

    ಕೊಲಂಬೊ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ (Virat Kohli) ಜೋಡಿಯು ಶ್ರೀಲಂಕಾ (SriLanka) ವಿರುದ್ಧ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಕೇವಲ 10 ರನ್‌ ಗಳಿಸಿದ್ರೂ ಹೊಸ ದಾಖಲೆಯೊಂದನ್ನ ನಿರ್ಮಿಸಿದ್ದಾರೆ.

    ಹೌದು. ಕಿಂಗ್‌ ಕೊಹ್ಲಿ ಹಾಗೂ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಜೋಡಿ ಲಂಕಾ ವಿರುದ್ಧ 16 ಎಸೆತಗಳಲ್ಲಿ 10 ರನ್‌ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಜೊತೆಯಾಟ ಪೂರೈಸಿದ ದಾಖಲೆ ಮಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿ, ರಾಹುಲ್‌ ಬೆಂಕಿ ಬ್ಯಾಟಿಂಗ್‌, ಕುಲ್ದೀಪ್‌ ಮಿಂಚಿನ ಬೌಲಿಂಗ್‌ – ಭಾರತಕ್ಕೆ 228 ರನ್‌ಗಳ ಜಯ, ಪಾಕ್‌ಗೆ ಹೀನಾಯ ಸೋಲು

    ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ (ಸೆ.12) ಅತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 2 ರನ್ ಗಳಿಸುತ್ತಿದ್ದಂತೆ 5 ಸಾವಿರ ರನ್ ಜೊತೆಯಾಟ ಪೂರೈಸಿದ ರೋಹಿತ್- ಕೊಹ್ಲಿ ಜೋಡಿ ವೆಸ್ಟ್ ಇಂಡೀಸ್‌ ದಿಗ್ಗಜರಾದ ಗಾರ್ಡನ್ ಗ್ರೀನಿಡ್ಜ್ ಹಾಗೂ ಡಿಸ್ಮೆಂಡ್ ಹೇನ್ಸ್ ಅವರ ಹೆಸರಿನಲ್ಲಿದ್ದ ಸುದೀರ್ಘ ಕಾಲದ ಜೊತೆಯಾಟದ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಹೈವೋಲ್ಟೇಜ್‌ ಕದನಕ್ಕೆ ಮತ್ತೆ ಮಳೆ ಕಾಟ – ಪಾಕ್‌ ತಂಡದ ಹಾದಿ ಇನ್ನಷ್ಟು ಕಠಿಣವಾಗುತ್ತಾ?

    ವೇಗದ 5 ಸಾವಿರ ರನ್ ಪೂರೈಸಿದ ಜೋಡಿ: ಇದರೊಂದಿಗೆ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಜೋಡಿ ಅತಿ ವೇಗವಾಗಿ 5 ಸಾವಿರ ರನ್‌ ಜೊತೆಯಾಟ ನೀಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಗಾರ್ಡನ್ ಗ್ರೀನಿಡ್ಜ್- ಡೇಸ್ಮಂಡ್‌ ಹೇನೆಸ್‌ 97 ಇನ್ನಿಂಗ್ಸ್‌ನಲ್ಲಿ, ಆಡಂ ಗಿಲ್ ಕ್ರಿಸ್ಟ್-ಮ್ಯಾಥ್ಯೂ ಹೇಡನ್ ಮತ್ತು ತಿಲಕರತ್ನೆ ದಿಲ್ಷಾನ್-ಕುಮಾರ ಸಂಗಾಕ್ಕರ ಜೋಡಿ ತಲಾ 104 ಇನ್ನಿಂಗ್ಸ್‌ಗಳಲ್ಲಿ, ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ 112 ಇನ್ನಿಂಗ್ಸ್‌ಗಳಲ್ಲಿ, ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿ ಜೋಡಿ 116 ಇನ್ನಿಂಗ್ಸ್‌ಗಳಲ್ಲಿ, ಮಹೇಲಾ ಜಯವರ್ಧನೆ-ಕುಮಾರ ಸಂಗಾಕ್ಕರ ಜೋಡಿ 123 ಇನ್ನಿಂಗ್ಸ್‌ಗಳಲ್ಲಿ ಹಾಗೂ ಮಾರ್ವನ್ ಅಟ್ಟಪಟ್ಟು-ಸನತ್ ಜಯಸೂರ್ಯ 124 ಇನ್ನಿಂಗ್ಸ್‌ಗಳಲ್ಲಿ 5 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರೆ, ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಜೋಡಿ ಕೇವಲ 86 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: Asia Cup 2023ː ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿಂಗ್‌ ಕೊಹ್ಲಿ ಮತ್ತೊಂದು ಮೈಲುಗಲ್ಲು

    ಒಡಿಐನಲ್ಲಿ ಅತಿ ಹೆಚ್ಚು ರನ್ ಗಳ ಜೊತೆಯಾಟ: ಇನ್ನೂ ಅತಿಹೆಚ್ಚು ರನ್‌ಗಳ ಜೊತೆಯಾಟ ನೀಡಿದವರ ಪೈಕಿ 8227 ರನ್ ಜೊತೆಯಾಟ ನೀಡಿದ ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿ ಮೊದಲ ಸ್ಥಾನದಲ್ಲಿದ್ದರೆ, ಮಹೇಲಾ ಜಯವರ್ಧನೆ-ಕುಮಾರ ಸಂಗಾಕ್ಕರ ಜೋಡಿ (5992 ರನ್ ), ತಿಲಕರತ್ನೆ ದಿಲ್ಷಾನ್-ಕುಮಾರ ಸಂಗಾಕ್ಕರ (5475 ರನ್), ಮಾರ್ವನ್ ಅಟ್ಟಪಟ್ಟು-ಸನತ್ ಜಯಸೂರ್ಯ (5462 ರನ್), ಆಡಂ ಗಿಲ್ ಕ್ರಿಸ್ಟ್-ಮ್ಯಾಥ್ಯೂ ಹೇಡನ್ (5409 ರನ್), ರೋಹಿತ್ ಶರ್ಮಾ-ಶಿಖರ್ ಧವನ್ (5193 ರನ್ ), ಗಾರ್ಡನ್ ಗ್ರೀನಿಡ್ಜ್-ಡೇಸ್ಮಂಡ್ ಹೇನೆಸ್‌ (5150 ರನ್), ಇದೀಗ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ (5008 ರನ್‌) ನಂತರದ ಸ್ಥಾನಗಳಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]