Tag: Asia Cup 2022

  • ಅರ್ಶ್‌ದೀಪ್‌ ಟೀಕಿಸುವ ಬದಲು ಧೈರ್ಯ ತುಂಬಿ – ಮುಂದಿನ ಭಾನುವಾರಕ್ಕೆ ಸಜ್ಜಾಗಿ: ಮಾಜಿ ಆಟಗಾರರ ಸಲಹೆ

    ಅರ್ಶ್‌ದೀಪ್‌ ಟೀಕಿಸುವ ಬದಲು ಧೈರ್ಯ ತುಂಬಿ – ಮುಂದಿನ ಭಾನುವಾರಕ್ಕೆ ಸಜ್ಜಾಗಿ: ಮಾಜಿ ಆಟಗಾರರ ಸಲಹೆ

    ದುಬೈ: ಏಷ್ಯಾಕಪ್‍ನ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೆಜ್ ಪಂದ್ಯ ನಿನ್ನೆ ನಡೆಯಿತು. ಈ ಪಂದ್ಯದಲ್ಲಿ ಭಾರತೀಯ ಆಟಗಾರ ಅರ್ಶ್‌ದೀಪ್‌ ಸಿಂಗ್‌ ಒತ್ತಡದ ಸಮಯದಲ್ಲಿ ಬಿಟ್ಟ ಕ್ಯಾಚ್ ಒಂದಕ್ಕೆ ಟೀಕೆಗಳು ಕೇಳಿ ಬರುತ್ತಿದೆ. ಟೀಕೆಗಳ ನಡುವೆ ಮಾಜಿ ಆಟಗಾರರು ಅರ್ಶ್‌ದೀಪ್‌ ಸಿಂಗ್‌ ಬೆಂಬಲಕ್ಕೆ ನಿಂತಿದ್ದಾರೆ.

    ಭಾರತ ನೀಡಿದ 182 ರನ್ ಚೇಸ್ ಮಾಡುತ್ತಿದ್ದಾಗ ಪಾಕಿಸ್ತಾನ 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗೆ ಸುಲಭವಾಗಿ ನೀಡಿದ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್‌ ಸಿಂಗ್‌ ಕೈಚೆಲ್ಲಿದರು. ಇದು ಪಾಕ್ ಗೆಲುವಿಗೆ ತಿರುವು ನೀಡಿತು. ಕೊನೆಯ ಓವರ್‌ನಲ್ಲಿ ಬೌಲಿಂಗ್‍ಗಿಳಿದ ಅರ್ಶ್‌ದೀಪ್‌ ಸಿಂಗ್‌ ಅವರ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ 2ನೇ ಎಸೆತದಲ್ಲಿ ಫುಲ್‍ಟಾಸ್ ಬೌಲ್ ಮಾಡಿ 4 ರನ್ ಚಚ್ಚಿಸಿಕೊಂಡರು. ಅದರ ಮರು ಎಸೆತದಲ್ಲೇ ಅಸಿಫ್ ಅಲಿ ಅವರ ವಿಕೆಟ್ ಉರುಳಿಸಿದರೂ ಜಯ ಪಾಕಿಸ್ತಾನದ ಪಾಲಾಯಿತು. ಅಂತಿಮವಾಗಿ ಪಾಕಿಸ್ತಾನ 5 ವಿಕೆಟ್‍ಗಳ ಜಯ ಸಾಧಿಸಿತು. ಇದನ್ನೂ ಓದಿ: ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ಆ ಬಳಿಕ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್‌ ಸಿಂಗ್‌ ಕೈಚೆಲ್ಲಿದ ಬಗ್ಗೆ ತೀವ್ರ ಟೀಕೆಗಳು ಕೇಳಿ ಬರುತ್ತಿದೆ. ಆದರೆ ಮಾಜಿ ಆಟಗಾರರಾದ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರರು ಹರ್ಷದೀಪ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ. ಟೀಂ ಇಂಡಿಯಾದ ಸಹಆಟಗಾರರು ಅರ್ಶ್‌ದೀಪ್‌ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅರ್ಶ್‌ದೀಪ್‌ ಪೇಜ್‌ ಎಡಿಟ್‌ – ವಿಕಿಪೀಡಿಯಾಗೆ ಸಮನ್ಸ್‌ ಜಾರಿ ಮಾಡಿದ ಕೇಂದ್ರ

    ಅರ್ಶ್‌ದೀಪ್‌ ಕುರಿತಾಗಿ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಭಾರತ ಹಾಗೂ ಪಾಕ್ ಪಂದ್ಯದ ಸಮಯದಲ್ಲಿ ನೀವು ನಿಮ್ಮ ಸೀಟಿನ ತುದಿಯಲ್ಲಿದ್ದರೆ, ಮೈದಾನದಲ್ಲಿ ಆಟಗಾರರ ಮೇಲಿನ ಒತ್ತಡವನ್ನು ಊಹಿಸಿ! ಒಂದು ಕೈಬಿಟ್ಟ ಕ್ಯಾಚ್ ಸಾಮರ್ಥ್ಯವನ್ನು ವ್ಯಾಖ್ಯಾನಿಸುವುದಿಲ್ಲ. ನಾವು ಕ್ರಿಕೆಟ್ ಪ್ರೀತಿಸುವ ರಾಷ್ಟ್ರದವರಾಗಿ ಒಂದಾಗಬೇಕು ಮತ್ತು ಯುವಕರನ್ನು ಟೀಕಿಸುವ ಬದಲು ಬೆಂಬಲಿಸಬೇಕು. ಹರ್ಷದೀಪ್ ಸಿಂಗ್ ನೀವು ಮತ್ತಷ್ಟು ಬಲಿಷ್ಠರಾಗಿ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಪಠಾಣ್ ಟ್ವೀಟ್ ಮಾಡಿ ಅರ್ಶ್‌ದೀಪ್‌ ಸಿಂಗ್‌ ದೃಢ ವ್ಯಕ್ತಿತ್ವದ ಯುವಕ ಅವರಿಗೆ ಬೆಂಬಲ ನೀಡಿ ಮುಂದಿನ ಭಾನುವಾರಕ್ಕೆ ಸಜ್ಜಾಗಿ ಎಂದಿದ್ದಾರೆ.

    ಈಗಾಗಲೇ ಲೀಗ್‍ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ, ಸೂಪರ್ ಫೋರ್ ಹಂತದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದಿದೆ. ಏಷ್ಯಾಕಪ್‍ನಲ್ಲಿ ಅಂದುಕೊಂಡಂತೆ ನಡೆದರೆ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಟ್ಟರೆ ಸೆಪ್ಟೆಂಬರ್ 11 ಭಾನುವಾರದಂದು ಮತ್ತೆ ಕಾದಾಟ ನಡೆಸಲಿದೆ. ಹೌದು ಸೂಪರ್ ಫೋರ್ ಹಂತದಲ್ಲಿ 4 ತಂಡಗಳು ಪರಸ್ಪರ ಕಾದಾಟ ನಡೆಸುತ್ತಿವೆ. ಇದರಲ್ಲಿ ಹೆಚ್ಚು ಪಂದ್ಯ ಗೆದ್ದ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಡಲಿದೆ. ಭಾರತ ಇನ್ನುಳಿದ ಎರಡು ಪಂದ್ಯ ಗೆದ್ದರೆ ಫೈನಲ್‍ಗೆ ಲಗ್ಗೆ ಇಡಲಿದೆ. ಇತ್ತ ಪಾಕಿಸ್ತಾನ ತಂಡದ ಫೈನಲ್ ಹಾದಿ ನಿನ್ನೆಯ ಗೆಲುವಿನ ಬಳಿಕ ಸುಗಮವಾಗಿದ್ದು, ಫೈನಲ್‍ನಲ್ಲಿ ಮತ್ತೊಮ್ಮೆ ಭಾರತವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ.

    Live Tv
    [brid partner=56869869 player=32851 video=960834 autoplay=true]

  • ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

    ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

    ದುಬೈ: ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಶಿಸ್ತಿನ ಸಿಪಾಯಿ, ಅವರು ಆಟಗಾರರಾಗಿದ್ದಾಗ ಇದ್ದಂತಹ ಬದ್ಧತೆ, ಶಿಸ್ತು ಪ್ರಸ್ತುತ ಕೋಚ್ ಆಗಿ ಕಾರ್ಯನಿರ್ವಹಿಸುವಾಗಲು ಮುಂದುವರಿಸುತ್ತಿದ್ದಾರೆ. ಜೊತೆಗೆ ಆಟಗಾರರಿಗೂ ಈ ಪಾಠ ಮುಂದುವರಿಸಿದ್ದಾರೆ. ಈ ಎಲ್ಲದರ ನಡುವೆ ದ್ರಾವಿಡ್ ಇಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಸ್ಯ ಚಟಾಕಿಯೊಂದನ್ನು ಹಾರಿಸಿ ಆ ಒಂದು ಪದವನ್ನು ನಾನು ಬಳಕೆ ಮಾಡುವುದಿಲ್ಲವೆಂದು ಪತ್ರಕರ್ತರಿಗೆ ಕುತೂಹಲ ಮೂಡಿಸಿದ್ದಾರೆ.

    ಹೌದು ಸದಾ ಗಂಭೀರ ವ್ಯಕ್ತಿತ್ವದ ದ್ರಾವಿಡ್ ಜೊತೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ಬೌಲಿಂಗ್ ಕುರಿತಾಗಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ದ್ರಾವಿಡ್ ಪಾಕಿಸ್ತಾನ ತಂಡದ ಬೌಲಿಂಗ್ ಉತ್ತಮವಾಗಿದೆ. ಭಾರತ ತಂಡ ಕೂಡ ಕಮ್ಮಿ ಏನಿಲ್ಲ. ಎರಡು ತಂಡಗಳು ಕೂಡ ಬಲಿಷ್ಠ ಬೌಲಿಂಗ್ ಶಕ್ತಿಯನ್ನು ಹೊಂದಿದೆ. ಇದನ್ನು ಗಮನಿಸಿದಾಗ ನನಗೆ ಒಂದು ಪದ ನೆನಪಿಗೆ ಬರುತ್ತದೆ ಎಂದು ಆ ಪದ ಬಳಕೆ ಮಾಡಲಾಗದೆ ನಗಲಾರಂಭಿಸಿದರು. ಇದನ್ನೂ ಓದಿ: ಜಡೇಜಾ ಅನುಪಸ್ಥಿತಿಯಲ್ಲಿ ಪಂತ್, ಹೂಡಾ, ಅಕ್ಷರ್ ಪಟೇಲ್ ನಡುವೆ ಪ್ಲೇಯಿಂಗ್ 11 ಪೈಪೋಟಿ

    ಇದನ್ನು ಗಮನಿಸಿದ ಪತ್ರಕರ್ತರು ಯಾವ ಪದ ಎಂದು ಮರು ಪ್ರಶ್ನೆ ಹಾಕಿದರು. ಈ ವೇಳೆ ದ್ರಾವಿಡ್ ಆ ಪದ ನನ್ನ ಬಾಯಲ್ಲಿ ಬರುತ್ತಿದೆ. ಆದರೆ ಇಲ್ಲಿ ಅದನ್ನು ಉಚ್ಚರಿಸಲು ನಾನು ಬಯಸುತ್ತಿಲ್ಲವೆಂದರು. ಆದರೂ ಬಿಡದ ಪರ್ತಕರ್ತರು ಏನದು ಎಂದರು ಈ ವೇಳೆ ಆ ಪದ ಎಸ್ (ಸೆಕ್ಸಿ) ಪದದಿಂದ ಆರಂಭವಾಗುತ್ತದೆ ಎಂದರು. ಇದನ್ನು ಅರ್ಥಮಾಡಿಕೊಂಡ ಪರ್ತಕರ್ತರು ಒಂದು ಕ್ಷಣ ನಗಲಾರಂಭಿಸಿದರು. ಬಳಿಕ ಸೆಕ್ಸಿ ಪದ ಬಳಕೆ ಮಾಡದೇ ಹೇಳಬೇಕೆಂದಿದ್ದ ಮಾತನ್ನು ದ್ರಾವಿಡ್ ಮುಂದುವರಿಸಿದರು. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

    T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

    ಮುಂಬೈ: ಗಾಯದ ಸಮಸ್ಯೆಯಿಂದ ಏಷ್ಯಾಕಪ್‍ನಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಇದೀಗ 2022ರ ಟಿ20 ವಿಶ್ವಕಪ್‍ನಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

    TEAM INDIA

    ಮೊಣಕಾಲಿನ ಗಾಯದಿಂದಾಗಿ ಏಷ್ಯಾಕಪ್‍ನಿಂದ ಹೊರನಡೆದಿರುವ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 3 ತಿಂಗಳಕಾಲ ವಿಶ್ರಾಂತಿಯಲ್ಲಿರಬೇಕಾದ ಅನಿವಾರ್ಯತೆ ಇದೆ ಅಲ್ಲದೇ ಕೆಲ ಕೇಸ್‍ಗಳಲ್ಲಿ 6 ತಿಂಗಳು ಇರಬೇಕಾಗುತ್ತದೆ ಎಂದು ಎನ್‍ಸಿಎ ವೈದ್ಯರ ತಂಡ ಹೇಳಿದೆ. ಹಾಗಾಗಿ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ

    ಎನ್‍ಸಿಎ ವೈದ್ಯಕೀಯ ತಂಡದ ಪ್ರಕಾರ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯಬೇಕು. ಈ ಗಾಯ ವಾಸಿಯಾಗಲು 3 ತಿಂಗಳು ವಿಶ್ರಾಂತಿ ಅತ್ಯಗತ್ಯ. ಕೆಲವೊಮ್ಮೆ 6 ತಿಂಗಳು ವಿಶ್ರಾಂತಿ ಪಡೆಯುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಜಡೇಜಾ ಕುರಿತು ಈಗಲೇ ಯಾವುದೇ ಮಾಹಿತಿ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಜಡೇಜಾ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರಗಳಲ್ಲಿ ಒಬ್ಬರು. ತನ್ನ ಬಿಗ್‍ಹಿಟ್ ಮತ್ತು ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುವ ತಾಕತ್ ಜಡೇಜಾಗಿದೆ. ಅಲ್ಲದೇ ಕೆಲ ವರ್ಷಗಳಿಂದ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಮೂರು ಮಾದರಿ ಕ್ರಿಕೆಟ್‍ನಲ್ಲೂ ಜಡೇಜಾ ತಂಡಕ್ಕೆ ನೆರವಾಗುತ್ತಿದ್ದಾರೆ. ಇದೆಲ್ಲದರ ಜೊತೆ ಜಡೇಜಾ ಟೀಂ ಇಂಡಿಯಾದ ಗನ್ ಫೀಲ್ಡರ್. ಪ್ರಸ್ತುತ ತಂಡದಲ್ಲಿರುವ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಜಡೇಜಾ ನಂಬರ್ 1 ಸ್ಥಾನದಲ್ಲಿ ನಿಲ್ಲುತ್ತಾರೆ. ಹಾಗಾಗಿ ಜಡೇಜಾ ತಂಡದಿಂದ ಹೊರಗುಳಿದರೆ ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಇದನ್ನೂ ಓದಿ: 8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್

    2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಕೆಲ ದೇಶಗಳು ಟಿ20 ವಿಶ್ವಕಪ್‍ಗಾಗಿ ತಂಡವನ್ನು ಆಯ್ಕೆ ಮಾಡಿದೆ. ಭಾರತ ತಂಡ ಆಯ್ಕೆ ಇನ್ನಷ್ಟೇ ಮಾಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • 6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕೊಹ್ಲಿ – 1 ಓವರ್ 6 ರನ್

    6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕೊಹ್ಲಿ – 1 ಓವರ್ 6 ರನ್

    ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‍ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‍ನಲ್ಲಿ ಅಬ್ಬರಿಸುತ್ತಿದ್ದಾರೆ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಬೊಂಬಾಟ್ ಬ್ಯಾಟಿಂಗ್‍ನಿಂದಾಗಿ ಭಾರತ ಭರ್ಜರಿ ಜಯ ಸಾಧಿಸಿತ್ತು. ಇದೆಲ್ಲದರ ನಡುವೆ ಕೊಹ್ಲಿ 6 ವರ್ಷಗಳ ಬಳಿಕ ಬೌಲಿಂಗ್ ಮಾಡಿ ಗಮನಸೆಳೆದರು.

    ಹೌದು ನಿನ್ನೆ ಹಾಂಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 40 ರನ್‍ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಮೂಲಕ ಏಷ್ಯಾಕಪ್‍ನ ಸೂಪರ್ ಫೋರ್ ಹಂತಕ್ಕೆ ಭಾರತ ಪ್ರವೇಶ ಪಡೆದಿದೆ. ಈ ಪಂದ್ಯದಲ್ಲಿ ಒಂದು ಕಡೆ ಬ್ಯಾಟಿಂಗ್‍ನಲ್ಲಿ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಮಿಂಚಿ ಭಾರತದ ಜಯದ ನಾಗಾಲೋಟವನ್ನು ಮುಂದುವರಿಸಲು ಸಹಕಾರಿಯಾದರು. ಆ ಬಳಿಕ ಹಾಂಕಾಂಗ್, ಭಾರತ ನೀಡಿದ ಬೃಹತ್ ಗುರಿ ಬೆನ್ನಟ್ಟುತ್ತಿದ್ದಂತೆ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿ ಗಮನಸೆಳೆದರು. ಭಾರತ ಪರ 17ನೇ ಓವರ್ ಎಸೆಯಲು ಬಂದ ಕೊಹ್ಲಿ 6 ರನ್ ನೀಡಿ ಓವರ್ ಮುಗಿಸಿದರು. ಇದನ್ನೂ ಓದಿ: ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ಈ ಪಂದ್ಯದಲ್ಲಿ ಭಾರತದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಬೌಂಡರಿ, ಸಿಕ್ಸರ್‌ಗಳ ಅಬ್ಬರೊಂದಿಗೆ ಇಬ್ಬರು ತಲಾ ಅರ್ಧಶತಕ ಸಿಡಿಸಿ ಮೂರನೇ ವಿಕೆಟ್‍ಗೆ ಅಜೇಯ 98 ರನ್ (42 ಎಸೆತ) ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ಕಾರಣರಾದರು. ವಿರಾಟ್ ಕೊಹ್ಲಿ ಅಜೇಯ 59 ರನ್ (44 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 68 ರನ್ (26 ಎಸೆತ, 6 ಬೌಂಡರಿ, 6 ಸಿಕ್ಸ್) ಚಚ್ಚಿ ಅಬ್ಬರಿಸಿ ಬೊಬ್ಬಿರಿದರು. ಇದರ ಪರಿಣಾಮವಾಗಿ ನಿಗದಿತ ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 192 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು. ಇದನ್ನೂ ಓದಿ: ಕೊಹ್ಲಿ, ಸೂರ್ಯ ಬ್ಯಾಟಿಂಗ್ ಬಿರುಗಾಳಿಗೆ ಕ್ರಿಕೆಟ್ ಶಿಶುಗಳು ಕಂಗಾಲು – ಸೂಪರ್ ಫೋರ್‌ಗೆ ಎಂಟ್ರಿ

    https://twitter.com/_C_S___/status/1565025558605352965

    ಆ ಬಳಿಕ ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವ ಹುಮ್ಮಸ್ಸಿನಲ್ಲಿ ಕಣಕ್ಕಿಳಿದ ಹಾಂಕಾಂಗ್ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 152 ರನ್ ಪೇರಿಸಿ ಸೋಲುಕಂಡಿತು.

    Live Tv
    [brid partner=56869869 player=32851 video=960834 autoplay=true]

  • ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ದುಬೈ: ಭಾರತದ ವಿರುದ್ಧ ಹಾಂಗ್ ಕಾಂಗ್ ಸೋಲು ಕಂಡರೂ ರೋಮ್ಯಾಂಟಿಕ್‌ ಮೂಡಿನಲ್ಲಿದ್ದ ಹಾಂಗ್‍ಕಾಂಗ್ ಆಟಗಾರರೊಬ್ಬರು ತನ್ನ ಗೆಳತಿಗೆ ಪ್ರೇಮನಿವೇದನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಬುಧವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾಕಪ್ 2022 ಪಂದ್ಯ ನಡೆದಿತ್ತು. ಇದರಲ್ಲಿ ಭಾರತವು ಹಾಂಗ್ ಕಾಂಗ್ ಮುಂದೆ 40ರನ್ ಗಳ ಗೆಲುವು ಕಂಡಿತ್ತು. ಈ ಪಂದ್ಯದ ಬಳಿಕ ಕ್ರೀಡಾಂಗಣ ಒಂದು ಬಾರಿ ರೋಮ್ಯಾಂಟಿಕ್ ಮೂಡ್‍ಗೆ ಜಾರಿತ್ತು.

    ಹಾಂಗ್ ಹಾಂಗ್ ತಂಡದ ಬ್ಯಾಟ್ಸ್ ಮನ್ ಕಿಂಚಿತ್ ಶಾ ತಮ್ಮ ಗೆಳತಿಗೆ ರಿಂಗ್ ತೊಡಿಸುವ ಮೂಲಕ ಪ್ರೇಮನಿವೇದನೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸಾಕಷ್ಟು ಪರ-ವಿರೋಧ ಕಾಮೆಂಟ್‍ಗಳು ಬರುತ್ತಿವೆ. ಇದನ್ನೂ ಓದಿ: ಕೊಹ್ಲಿ, ಸೂರ್ಯ ಬ್ಯಾಟಿಂಗ್ ಬಿರುಗಾಳಿಗೆ ಕ್ರಿಕೆಟ್ ಶಿಶುಗಳು ಕಂಗಾಲು – ಸೂಪರ್ ಫೋರ್‌ಗೆ ಎಂಟ್ರಿ

    ವೀಡಿಯೋದಲ್ಲೇನಿದೆ..?: ಪಂದ್ಯ ಮುಗಿದ ಬಳಿಕ ಸೋಲುಕಂಡ ಹಾಂಗ್ ಕಾಂಗ್ ಆಟಗಾರ ಕಿಂಚಿತ್ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರಳುತ್ತಾರೆ.  ಇತ್ತ ಬೇಸರದಿಂದ ನಿಂತಿದ್ದ ಗೆಳತಿಯನ್ನು ಕಿಂಚಿತ್ ಅಪ್ಪಿಕೊಳ್ಳಲು ಮುಂದಾಗುತ್ತಾರೆ. ಅಲ್ಲದೆ ಗೆಳತಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಆಗ ಗೆಳತಿ ಅಚ್ಚರಿಯ ಜೊತೆಗೆ ಖುಷಿಯಾಗುತ್ತಾಳೆ. ಅಲ್ಲದೆ ಈ ಖುಷಿಯಲ್ಲೇ ಆನಂದಭಾಷ್ಪ ಸುರಿಸುತ್ತಾಳೆ. ನಂತರ ಕಿಂಚಿತ್ ತಾನು ತಂದ ಉಂಗುರವನ್ನು ಕೈಯಲ್ಲಿಡಿದುಕೊಂಡು, ನೀನು ನನ್ನ ಮದುವೆಯಾಗುತ್ತಿಯಾ..? ಎಂದು ಕೇಳಿದ್ದಾರೆ.

    ಈ ವೇಳೆ ಆಕೆ ನಾಚಿಕೆಯಿಂದಲೇ ಒಪ್ಪಿಕೊಳ್ಳುತ್ತಾಳೆ. ಕೂಡಲೇ ಸಾವಿರಾರು ಜನರ ನಡುವೆಯೇ ಗೆಳತಿಗೆ ಉಂಗುರ ತೊಡಿಸುವ ಮೂಲಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೆ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಮುದ್ದಾಡಿದ್ದಾರೆ. ಇತ್ತ ಇವೆಲ್ಲವನ್ನೂ ನೋಡುತ್ತಿದ್ದ ಜನ ಚಪ್ಪಾಳೆ ತಟ್ಟುವ ಮೂಲಕ ಇಬ್ಬರಿಗೂ ಶುಭಹಾರೈಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಕೊಹ್ಲಿ, ಸೂರ್ಯ ಬ್ಯಾಟಿಂಗ್ ಬಿರುಗಾಳಿಗೆ ಕ್ರಿಕೆಟ್ ಶಿಶುಗಳು ಕಂಗಾಲು – ಸೂಪರ್ ಫೋರ್‌ಗೆ ಎಂಟ್ರಿ

    ಕೊಹ್ಲಿ, ಸೂರ್ಯ ಬ್ಯಾಟಿಂಗ್ ಬಿರುಗಾಳಿಗೆ ಕ್ರಿಕೆಟ್ ಶಿಶುಗಳು ಕಂಗಾಲು – ಸೂಪರ್ ಫೋರ್‌ಗೆ ಎಂಟ್ರಿ

    ದುಬೈ: ಬ್ಯಾಟಿಂಗ್‍ನಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಇನ್ನಿಂಗ್ಸ್ ಮತ್ತು ಬೌಲರ್‌ಗಳ ಸಂಘಟಿತ ದಾಳಿಯ ಪರಿಣಾಮ ಹಾಂಕಾಂಗ್ ವಿರುದ್ಧ  ಭಾರತ 40 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಏಷ್ಯಾಕಪ್‍ನ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ.

    ಭಾರತ ನೀಡಿದ 193 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಹಾಂಕಾಂಗ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿ ಸೋಲೋಪ್ಪಿಕೊಂಡಿತು. 40 ರನ್‌ಗಳ ದೊಡ್ಡ ಮೊತ್ತದ ಗೆಲುವಿನೊಂದಿಗೆ ಭಾರತ ಕೂಟದಲ್ಲಿ ಸತತ ಎರಡನೇ ಜಯ ದಾಖಲಿಸಿತು.

    ಬೃಹತ್ ಗುರಿ ಬೆನ್ನಟ್ಟಲು ಹೊರಟ ಹಾಂಕಾಂಗ್‍ಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ಆ ಬಳಿಕ ಬಂದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಬಾಬರ್ ಹಯಾತ್ ಕೆಲಕಾಲ ಭಾರತದ ಬಲಿಷ್ಠ ಬೌಲಿಂಗ್‍ಗೆ ಸವಾಲೆಸೆದರು. ಆದರೆ ಅವರ ಆಟ 41 ರನ್ (35 ಎಸೆತ, 3 ಬೌಂಡರಿ, 2 ಸಿಕ್ಸ್) ಅಂತ್ಯಕಂಡಿತು. ಆ ಬಳಿಕ ಕಿಂಚಿಂತ್ ಶಾ ಹಾಂಕಾಂಗ್ ಗೆಲುವಿಗಾಗಿ ಹೋರಾಡಲು ಮುಂದಾದರು. ಆದರೆ ಇವರಿಗೆ ಇತರ ಬ್ಯಾಟ್ಸ್‌ಮ್ಯಾನ್‌ಗಳು ಸಾಥ್ ನೀಡಲು ವಿಫಲರಾದರು. ಪರಿಣಾಮ ಕಿಂಚಿಂತ್ ಶಾ 30 ರನ್ (28 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆಗುವುದರೊಂದಿಗೆ ಹಾಂಕಾಂಗ್ ಗೆಲುವಿನ ಆಸೆ ಕಮರಿತು.

    ಅಂತಿಮವಾಗಿ ಹಾಂಕಾಂಗ್ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 152 ರನ್ ಪೇರಿಸಿ ಸೋಲುಕಂಡಿತು. ಭಾರತ ಪರ ಹರ್ಷದೀಪ್ ಸಿಂಗ್, ಜಡೇಜಾ, ಆವೇಶ್ ಖಾನ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

    ಈ ಮೊದಲು ಟಾಸ್ ಗೆದ್ದ ಹಾಂಕಾಂಗ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿ ಕೈ ಸುಟ್ಟುಕೊಂಡಿತು. ಭಾರತದ ಬ್ಯಾಟ್ಸ್‌ಮ್ಯಾನ್‌ಗಳು ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಆರಂಭಿಕರಾದ ರೋಹಿತ್ ಶರ್ಮಾ 21 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಕೆಎಲ್ ರಾಹುಲ್ 36 ರನ್ (39 ಎಸೆತ, 2 ಸಿಕ್ಸ್) ಸಿಡಿಸಿ ದೊಡ್ಡ ಮೊತ್ತ ಕಲೆಹಾಕುವ ಭರವಸೆ ಮೂಡಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು.

    ಕೊಹ್ಲಿ, ಸೂರ್ಯಕುಮಾರ್ ಬ್ಯಾಟಿಂಗ್ ಬಿರುಗಾಳಿ
    ಆರಂಭಿಕರು ಔಟ್ ಆದ ಬಳಿಕ ಅಗ್ರಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಆರಂಭದಲ್ಲಿ ನಿಧಾನವಾಗಿ ರನ್ ಕಲೆಹಾಕಿದ ಈ ಜೋಡಿ ಬಳಿಕ ಹಾಂಕಾಂಗ್ ಬೌಲರ್‌ಗಳ ಮೈ ಚಳಿ ಬಿಡಿಸಿದರು.

    ಬೌಂಡರಿ, ಸಿಕ್ಸರ್‌ಗಳ ಅಬ್ಬರೊಂದಿಗೆ ಇಬ್ಬರು ತಲಾ ಅರ್ಧಶತಕ ಸಿಡಿಸಿ ಮೂರನೇ ವಿಕೆಟ್‍ಗೆ ಅಜೇಯ 98 ರನ್ (42 ಎಸೆತ) ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ಕಾರಣರಾದರು. ವಿರಾಟ್ ಕೊಹ್ಲಿ ಅಜೇಯ 59 ರನ್ (44 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 68 ರನ್ (26 ಎಸೆತ, 6 ಬೌಂಡರಿ, 6 ಸಿಕ್ಸ್) ಚಚ್ಚಿ ಅಬ್ಬರಿಸಿ ಬೊಬ್ಬಿರಿದರು. ಇದರ ಪರಿಣಾಮವಾಗಿ ನಿಗದಿತ ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 192 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು.

    Live Tv
    [brid partner=56869869 player=32851 video=960834 autoplay=true]

  • ಇಂಡಿಯಾ- ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್‌- ಭಾರತದ ಗೆಲುವಿಗೆ ದರ್ಗಾದಲ್ಲಿ ಪ್ರಾರ್ಥನೆ

    ಇಂಡಿಯಾ- ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್‌- ಭಾರತದ ಗೆಲುವಿಗೆ ದರ್ಗಾದಲ್ಲಿ ಪ್ರಾರ್ಥನೆ

    ಬೆಳಗಾವಿ: ಇಂದು ನಡೆಯುತ್ತಿರುವ ಭಾರತ ಮತ್ತು ಪಾಕ್ ಹೈವೋಲ್ಟೇಜ್ ಕ್ರಿಕೆಟ್ ಮ್ಯಾಚ್ ಹಿನ್ನೆಲೆಯಲ್ಲಿ ಭಾರತದ ತಂಡದ ಗೆಲುವಿಗಾಗಿ ಬೆಳಗಾವಿಯ ದರ್ಗಾವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

    ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ಬಾಬಾ ಬದರುದಿನಶಾ ವಲಿ ದರ್ಗಾದಲ್ಲಿ ಮುಸ್ಲಿಂ ಸಮುದಾಯದ ಯುವಕರು, ಕಾಂಗ್ರೆಸ್ ಸೇವಾದಳದ ಯಂಗ್ ಬ್ರಿಗೇಡ್ ಕಾರ್ಯಕರ್ತರು ಭಾರತದ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪಂದ್ಯದಲ್ಲಿ ಭಾರತ ಅತಿಹೆಚ್ಚು ರನ್‍ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ ಜಯಶಾಲಿಯಾಗಬೇಕು ಎಂದು ಪ್ರಾರ್ಥಿಸಿದರು. ಇದನ್ನೂ ಓದಿ: ಚಿರತೆ ಸೆರೆಗೆ ಕೈಯಲ್ಲಿ ಕೋಲು ಹಿಡಿದು ಬಂದ ಮಹಿಳಾಮಣಿಗಳು

    ದರ್ಗಾದ ಪೂಜಾರಿ ರಫೀಕ್ ಮುಜಾವರ, ಯಂಗ್ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ಇರ್ಫಾನ್ ಅತ್ತಾರ, ತಾಜಮುಲ್ಲಾ ಬಾಕ್ಸಿ, ವಾಸೀಂ ನದಾಪ್ ಸೇರಿದಂತೆ ಭಾರತ ತಂಡದ ಅಭಿಮಾನಿಗಳು ಇದ್ದರು. ಇದನ್ನೂ ಓದಿ: ಇಂಡಿಯಾ, ಪಾಕ್ ಹೈವೋಲ್ಟೇಜ್ ಕ್ರಿಕೆಟ್- ಭಾರತ ಗೆಲುವಿಗೆ ಮುಸ್ಲಿಮರಿಂದ ವಿಶೇಷ ಪೂಜೆ

    Live Tv
    [brid partner=56869869 player=32851 video=960834 autoplay=true]

  • 7+18 ಜೊತೆಯಾಗಿ ಆಡಿದ್ದು ನನ್ನ ವೃತ್ತಿ ಜೀವನದ ಆನಂದದಾಯಕ ಕ್ಷಣ: ಧೋನಿ ನೆನೆದ ಕೊಹ್ಲಿ

    7+18 ಜೊತೆಯಾಗಿ ಆಡಿದ್ದು ನನ್ನ ವೃತ್ತಿ ಜೀವನದ ಆನಂದದಾಯಕ ಕ್ಷಣ: ಧೋನಿ ನೆನೆದ ಕೊಹ್ಲಿ

    ದುಬೈ: ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಾಗಿ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಏಷ್ಯಾಕಪ್‌ಗೂ ಮುನ್ನ ನೆನಪಿಸಿಕೊಂಡಿದ್ದಾರೆ.

     

    ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಈ ವ್ಯಕ್ತಿಯೊಂದಿಗೆ ವಿಶ್ವಾಸಾರ್ಹ ಉಪನಾಯಕನಾಗಿ ಆಡಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ. ನಾವಿಬ್ಬರು ಜೊತೆಯಾಗಿ ಆಡಿದ ಜೊತೆಯಾಟ ಯಾವತ್ತು ನನಗೆ ವಿಶೇಷ. ಜೀವನ ಪೂರ್ತಿ ಮರೆಯುವುದಿಲ್ಲ. 7+18 ಎಂದು ಬರೆದುಕೊಂಡು ಹಾರ್ಟ್ ಸಿಂಬಲ್ ಹಾಕಿಕೊಂಡು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ

    ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಧೋನಿಯನ್ನು ನೆನಪಿಸಿಕೊಂಡ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಭಾರತ ಪರ ಆಡುವಾಗ ಧೋನಿ ಮತ್ತು ಕೊಹ್ಲಿ ಅದೇಷ್ಟೋ ಪಂದ್ಯಗಳನ್ನು ಜೊತೆಯಾಗಿ ಆಡಿ ಗೆಲ್ಲಿಸಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ ಧೋನಿ ಗರಡಿಯಲ್ಲಿ ಪಳಗಿದ ಆಟಗಾರ. ಧೋನಿ ಟೀಂ ಇಂಡಿಯಾದಲ್ಲಿದ್ದಾಗಲೇ ನಾಯಕತ್ವ ತ್ಯಜಿಸಿ ಕೊಹ್ಲಿಗೆ ಪಟ್ಟ ಕಟ್ಟಿದ್ದರು. ಇದನ್ನೂ ಓದಿ: ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!

    ಇದಲ್ಲದೇ ಧೋನಿ ಮತ್ತು ಕೊಹ್ಲಿ ಇಬ್ಬರು ಕೂಡ ವಿಕೆಟ್ ಮಧ್ಯೆ ವೇಗವಾಗಿ ಓಡಿ ರನ್ ಕದಿಯುದರಲ್ಲಿ ಹೆಸರವಾಸಿಯಾಗಿದ್ದರು. ಇವರಿಬ್ಬರೂ ಕೂಡ ವಿಶ್ವಕ್ರಿಕೆಟ್ ಅಭಿಮಾನಿಗಳನ್ನು ತಮ್ಮ ಜೊತೆಯಾಟದ ಮೂಲಕ ರಂಜಿಸಿದ್ದಾರೆ. 2020ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರೆ, ಕೊಹ್ಲಿ ಸದ್ಯ ಟೀಂ ಇಂಡಿಯಾದಲ್ಲಿದ್ದರೂ, ಈ ಹಿಂದಿನ ಬ್ಯಾಟಿಂಗ್ ಲಯದಲ್ಲಿಲ್ಲ.

    ಇದೀಗ ಕೆಲ ಸರಣಿಗಳಿಂದ ವಿಶ್ರಾಂತಿ ಪಡೆದು ಮತ್ತೆ ಏಷ್ಯಾಕಪ್‍ಗಾಗಿ ಟೀಂ ಇಂಡಿಯಾ ಸೇರಿಕೊಂಡಿರುವ ಕೊಹ್ಲಿ ಆಟದ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊಹ್ಲಿ ಮೂರಂಕಿ ರನ್ ಹೊಡೆಯದೆ ಎರಡು ವರ್ಷ ಕಳೆದಿದೆ. ಹಾಗಾಗಿ ಏಷ್ಯಾಕಪ್‍ನಲ್ಲಿ ಕೊಹ್ಲಿಯ ಹಳೆಯ ಖದರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ

    ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ

    ದುಬೈ: 15ನೇ ಆವೃತ್ತಿ ಏಷ್ಯಾಕಪ್‍ಗೆ ದಿನಗಣನೆ ಆರಂಭವಾಗಿದ್ದು, ಏಷ್ಯಾದ 6 ತಂಡಗಳು ಏಷ್ಯಾಕಪ್ ಗೆಲ್ಲಲು ಹೋರಾಟಕ್ಕೆ ಸಿದ್ಧತೆ ಆರಂಭಿಸಿವೆ. ಈ ನಡುವೆ ಏಷ್ಯಾಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟಕ್ಕೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

    ಟೂರ್ನಿಯಲ್ಲಿ ಭಾಗವಹಿಸುತ್ತಿರುವ 6 ತಂಡಗಳ ಪೈಕಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟ ಈಗಾಗಲೇ ಕ್ರೇಜ್ ಹುಟ್ಟಿಸಿದ್ದು, ಬದ್ಧವೈರಿಗಳ ರಣರೋಚಕ ಕಾದಾಟಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಐಸಿಸಿ ಟ್ರೋಫಿಗಳಲ್ಲಿ ಮಾತ್ರ ಈ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತದೆ ಹಾಗಾಗಿ ಅಭಿಮಾನಿಗಳಲ್ಲಿ ಈ ಎರಡು ತಂಡಗಳ ಹೋರಾಟ ನೋಡುವುದು ಹಬ್ಬದಂತಿರುತ್ತದೆ. ಎರಡು ದೇಶಗಳು ಕೂಡ ಬಲಿಷ್ಠವಾಗಿದ್ದು, ಬಲಾಢ್ಯ ಆಟಗಾರರ ದಂಡೇ ಇದೆ. ಎರಡು ತಂಡ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಪಂಟರ್‌ಗಳನ್ನು ಹೊಂದಿರುವುದರಿಂದ ಗೆಲುವಿಗಾಗಿ ಕ್ಷಣ, ಕ್ಷಣವು ಹೋರಾಡಬೇಕಾಗಿದೆ. ಇದನ್ನೂ ಓದಿ: ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!

    ಈ ಬಾರಿ ಏಷ್ಯಾಕಪ್‍ನಲ್ಲಿ ಲೆಕ್ಕಾಚಾರವೆಲ್ಲ ಸರಿಯಾಗಿ ನಡೆದರೆ ಮುಂದಿನ ಮೂರು ಭಾನುವಾರ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮೈದಾನದಲ್ಲಿ ಮದಗಜಗಳಂತೆ ಹೋರಾಟ ನಡೆಸುವ ಸಾಧ್ಯತೆ ಇದೆ. ಮೊದಲ ಹೋರಾಟವಂತು ಫಿಕ್ಸ್ ಆಗಸ್ಟ್ 28 ಭಾನುವಾರದಂದು ಲೀಗ್‍ನ ಮೊದಲ ಪಂದ್ಯ ನಡೆಯಲಿದೆ. ಆ ಬಳಿಕ ಎರಡು ತಂಡಗಳ ಗೆಲುವಿನ ಲೆಕ್ಕಾಚಾರದ ಮೇಲೆ ಸೂಪರ್-4 ಹಂತಕ್ಕೆ ಈ ಎರಡು ತಂಡಗಳು ಪ್ರವೇಶ ಪಡೆದರೆ, ಸೆಪ್ಟೆಂಬರ್ 4 ಭಾನುವಾರದಂದು ಈ ಎರಡು ತಂಡಗಳು ಮತ್ತೆ ಎದುರು ಬದುರಾಗುತ್ತದೆ. ಅದಾದ ಬಳಿಕ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಟ್ಟರೆ ಸೆಪ್ಟೆಂಬರ್ 11 ಭಾನುವಾರದಂದು ಮತ್ತೆ ಕಾದಾಟ ನಡೆಸಲಿದೆ. ಈ ಮೂರು ಪಂದ್ಯಗಳು ಉಭಯ ತಂಡಗಳ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ. ಇದನ್ನೂ ಓದಿ: ಏಷ್ಯಾಕಪ್‍ನಲ್ಲಿ ಬದ್ಧ ವೈರಿಗಳ ಕಾದಾಟ – 14 ಬಾರಿ ಮುಖಾಮುಖಿ, ಯಾರಿಗೆ ಮೇಲುಗೈ?

    ಹಾಗಾಗಿ ಮುಂದಿನ ಮೂರು ಭಾನುವಾರ ಕ್ರಿಕೆಟ್ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಸಲಿದ್ದು, ಎಲ್ಲವೂ ಅಂದುಕೊಂಡಂತೆ ಲೆಕ್ಕಾಚಾರದ ಪ್ರಕಾರ ನಡೆದರೆ ಈ ಬಾರಿಯ ಏಷ್ಯಾಕಪ್‌ನಲ್ಲಿ ಅದ್ಭುತ ಕ್ಷಣಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಈವರೆಗೆ ಉಭಯ ತಂಡಗಳು ಏಷ್ಯಾಕಪ್‍ನಲ್ಲಿ ಒಟ್ಟು 14 ಮುಖಾಮುಖಿಯಾಗಿದೆ. ಇದರಲ್ಲಿ 1 ಪಂದ್ಯ ಫಲಿತಾಂಶ ಕಾಣದೆ ರದ್ದಾದರೆ, ಇನ್ನುಳಿದ 13 ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 5 ಪಂದ್ಯಗಳನ್ನು ಗೆದ್ದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು – ಯುಎಇನಲ್ಲಿ ಏಷ್ಯಾಕಪ್?

    ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು – ಯುಎಇನಲ್ಲಿ ಏಷ್ಯಾಕಪ್?

    ದುಬೈ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಲಂಕಾದಲ್ಲಿ ನಿಗದಿಯಾಗಿದ್ದ ಏಷ್ಯಾಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಶಿಪ್ಟ್‌ ಆಗುವ ಸಾಧ್ಯತೆ ಹೆಚ್ಚಿದೆ.

    ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಜನಸಾಮಾನ್ಯರು ಮಾತ್ರವಲ್ಲದೇ ಕ್ರಿಕೆಟಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಭ್ಯಾಸಕ್ಕೆ ತೆರಳಲು ಪೆಟ್ರೋಲ್ ಇಲ್ಲದೆ ಅಭ್ಯಾಸ ಮಾಡಲು ಆಗುತ್ತಿಲ್ಲ ಎಂದು ಇತ್ತೀಚೆಗೆ ಕೆಲ ಕ್ರಿಕೆಟಿಗರು ಅಳಲು ತೋಡಿಕೊಂಡಿದ್ದರು. ಇದನ್ನೂ ಓದಿ: ಸಿಂಧು ಮಡಿಲಿಗೆ ಸಿಂಗಾಪುರ ಓಪನ್ ಕಪ್‌

    ಈ ಎಲ್ಲ ಸ್ಥಿತಿಗತಿಗಳನ್ನು ಕಂಡು ಶ್ರೀಲಂಕಾ ಕ್ರಿಕೆಟ್ ಬೋರ್ಡ್‍ನ ಕಾರ್ಯದರ್ಶಿ ಮೋಹನ್ ಡಿಸಿಲ್ವ ಏಷ್ಯಾಕಪ್-2022 ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ಕುರಿತಾಗಿ ಈಗಾಗಲೇ ಏಷ್ಯಾಕಪ್‍ನಲ್ಲಿ ಭಾಗವಹಿಸುತ್ತಿರುವ ದೇಶಗಳ ಕ್ರಿಕೆಟ್ ಬೋರ್ಡ್‍ಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾ ಬೋರ್ಡ್ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಯುಎಇಯಲ್ಲಿ ಏಷ್ಯಾಕಪ್ ಪಂದ್ಯಗಳು ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದನ್ನೂ ಓದಿ: ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಏಷ್ಯಾಕಪ್‍ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಈಗಾಗಲೇ ನೇರ ಅವಕಾಶ ಪಡೆದಿದೆ. ಹಾಂಕಾಂಗ್, ಸಿಂಗಾಪುರ್, ಕುವೈತ್ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿನಲ್ಲಿ ತೇರ್ಗಡೆಗೊಂಡು 6ನೇ ತಂಡವಾಗಿ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಬೇಕಾಗಿದೆ. ಟೂರ್ನಿ ಆಗಸ್ಟ್ 26 ರಿಂದ ಸೆಪ್ಟೆಂಬರ್ 11ರ ವರೆಗೆ ನಡೆಸಲು ತೀರ್ಮಾನಿಸಲಾಗಿದೆ.

    ಟೂರ್ನಿ ಯುಎಇಯಲ್ಲಿ ನಡೆಯುವ ಕುರಿತಾಗಿ ಅಧಿಕೃತವಾಗಿ ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸುವ ತಯಾರಿಯಲ್ಲಿದೆ ಎಂದು ಮೂಲಗಳಿಂದ ಈಗಾಗಲೇ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]