Tag: Asia Book of Records

  • ಚನ್ನಪಟ್ಟಣದ ಚಾಮುಂಡೇಶ್ವರಿ ವಿಗ್ರಹಕ್ಕೆ ಏಷ್ಯಾ & ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

    ಚನ್ನಪಟ್ಟಣದ ಚಾಮುಂಡೇಶ್ವರಿ ವಿಗ್ರಹಕ್ಕೆ ಏಷ್ಯಾ & ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

    ರಾಮನಗರ: ಚನ್ನಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ವಿಗ್ರಹಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ (India Book Of Records) ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ (Asia Book of Records) ರಾಷ್ಟ್ರೀಯ ಮಾನ್ಯತೆ ದೊರೆತಿದೆ.

    ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಗೌಡಗೆರೆಯ 60 ಅಡಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಲಭಿಸಿದೆ.ಇದನ್ನೂ ಓದಿ: ಬಿಜೆಪಿಯಲ್ಲಿನ ಭಿನ್ನಮತಗಳು 10-15 ದಿನಗಳಲ್ಲಿ ಪರಿಹಾರ: ಅಶೋಕ್

    ದೇವಾಲಯದ ಆವರಣದಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಅವರಿಗೆ ಸಂಸ್ಥೆಯ ಅಧಿಕಾರಿಗಳು ಎರಡೂ ಪ್ರಶಸ್ತಿಗಳನ್ನ ಪ್ರದಾನ ಮಾಡಿದ್ದಾರೆ. ಕ್ಷೇತ್ರದಲ್ಲಿರುವ ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ಬೇರೆಲ್ಲೂ ಇಲ್ಲ ಎಂಬ ಮಾತುಗಳಿದ್ದವು. ಈಗ ಅಧಿಕೃತವಾಗಿ ದಾಖಲಾಗಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.

    ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ನಾಡಿನ ಗಡಿ ದಾಟಿ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ನೆಲಮಟ್ಟದಿಂದ 60 ಅಡಿ ಎತ್ತರವಿರುವ ತಾಯಿ ವಿಗ್ರಹ ಭಕ್ತರಿಂದ ಸಂಗ್ರಹಿಸಿದ ಪಂಚಲೋಹಗಳಿಂದ ನಿರ್ಮಿಸಿರುವುದು ವಿಶೇಷ. 35 ಸಾವಿರ ಕೆ.ಜಿ ತೂಕದ ಈ ಪಂಚಲೋಹ ವಿಗ್ರಹ 2021ರ ಆಗಸ್ಟ್ 8ರಂದು ಲೋಕಾರ್ಪಣೆಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರ ಭಕ್ತರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.ಇದನ್ನೂ ಓದಿ: Union Budget 2025| ಯಾವಾಗ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡುತ್ತಾರೆ?

  • ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ 2ರ ಬಾಲಕ ದಾಖಲೆ

    ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ 2ರ ಬಾಲಕ ದಾಖಲೆ

    ಬಾಗಲಕೋಟೆ: ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಬಾಗಲಕೋಟೆಯ 2ರ ಬಾಲಕ ದಾಖಲೆ ನಿರ್ಮಿಸಿದ್ದಾನೆ.

    ಡಾ. ಗಾಯತ್ರಿ, ಡಾ. ಜೈಪ್ರಕಾಶ್ ದಂಪತಿ ಪುತ್ರನಾದ ಮೌರ್ಯವರ್ಧನ್ ಚದುರಂಗಕ್ಕೆ ಸಂಬಂಧಿಸಿದ ವಿಷಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದ್ದಾನೆ.

    ಮೌರ್ಯವರ್ಧನ್ ತನ್ನ 2 ವರ್ಷ 26 ದಿನಗಳ ವಯಸ್ಸಿಗೆ ಚೆಸ್ ಬೋರ್ಡ್‍ನ ಮೇಲೆ ಎಲ್ಲಾ 32 ಚೆಸ್ ಕಾಯಿನ್‍ಗಳನ್ನು 1 ನಿಮಿಷ 47 ಸೆಕೆಂಡ್‍ಗಳಲ್ಲಿ ಸಮರ್ಪಕವಾಗಿ ಜೋಡಿಸಿದ್ದಾನೆ. ಇದರಿಂದಾಗಿ ಇವನು ಚೆಸ್ ಬೋರ್ಡ್‍ನ ಮೇಲೆ ಚೆಸ್ ಕಾಯಿನ್‍ಗಳನ್ನು ಸಮರ್ಪಕ ಹಾಗೂ ವೇಗವಾಗಿ ಜೋಡಿಸಿದ ಅತ್ಯಂತ ಕಿರಿಯ ವ್ಯಕ್ತಿ (Youngest to arrange chess pieces on a chess board) ಎಂಬುದಾಗಿ ದಿನಾಂಕ 8ಜೂನ್2021ಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್  ನಲ್ಲಿ ಹಾಗೂ ದಿನಾಂಕ 19ಜೂನ್2021ಕ್ಕೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದ್ದಾನೆ. ಇದನ್ನೂ ಓದಿ:  ಬಿಕಿನಿಯಲ್ಲಿ ಸಾರಾ ಅಲಿ ಖಾನ್ ಸಖತ್ ಹಾಟ್

    ಈ ಮೂಲಕವಾಗಿ ತಮಿಳುನಾಡಿನ 2.6 ವ. ವಯಸ್ಸಿನ ಬಾಲಕನ ಹೆಸರಿನಲ್ಲಿದ್ದ ದಾಖಲೆ ಮುರಿದು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ. ಈ ಸಾಧನೆಯನ್ನು ಪರಿಗಣಿಸಿ ಇಂಡಿಯಾ ಹಾಗೂ ಏಷ್ಯಾ ಬುಕ್ ಆಫ್  ರೆಕಾರ್ಡ್ಸ್​ವತಿಯಿಂದ ಪದಕ, ಸರ್ಟಿಫಿಕೇಟ್, ಗುರುತಿನ ಕಾರ್ಡ್, ರೆಕಾರ್ಡ್ಸ್​ ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನು ನೀಡಿ ಗೌರವಿಸಿದೆ. ಈ ಹಿಂದೆ ತನ್ನ 1 ವರ್ಷ 9 ತಿಂಗಳ ವಯಸ್ಸಿಗೆ 20 ವಿವಿಧ ಪ್ರಕಾರಗಳಲ್ಲಿ 594 ಚಿತ್ರಗಳನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ Kids Appreciation ವಿಭಾಗದಲ್ಲಿ ಸೇರ್ಪಡೆಗೊಂಡು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಧನೆ ಮಾಡಿ ಖ್ಯಾತಿ ಹೊಂದಿದ್ದನು. ಇದನ್ನೂ ಓದಿ:  ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

    ಹೀಗೆ ತನ್ನ 2 ವರ್ಷ ವಯಸ್ಸಿಗೆ ಎರಡು ರಾಷ್ಟ್ರೀಯ ಮಟ್ಟದ ಹಾಗೂ ಒಂದು ಏಷ್ಯಾ ಮಟ್ಟದ ದಾಖಲೆ ನಿರ್ಮಿಸಿ ಬಾಲಕ ದೇಶಕ್ಕೆ ಕೀರ್ತಿಯನ್ನು ತಂದಿದ್ದಾನೆ. ಮೂಲತಃ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು, ಆಲೂರು ಗ್ರಾಮದವರಾದ ಇವನ ಕುಟುಂಬ ಉದ್ಯೋಗದ ನಿಮಿತ್ತ ಪ್ರಸ್ತುತ ಜಮಖಂಡಿಯ ಮೈಗೂರು ಕಾಲೋನಿಯ ತಾತ್ಕಾಲಿಕ ನಿವಾಸಿಗಳಾಗಿದ್ದಾರೆ.

  • ಕರಾಟೆಯಲ್ಲಿ 56 ಪದಕ ಗೆದ್ದ ರಿಷಬ್ ಶೆಟ್ಟಿ – ಏಷ್ಯನ್ ಬುಕ್ ಆಫ್ ರೆಕಾರ್ಡ್

    ಕರಾಟೆಯಲ್ಲಿ 56 ಪದಕ ಗೆದ್ದ ರಿಷಬ್ ಶೆಟ್ಟಿ – ಏಷ್ಯನ್ ಬುಕ್ ಆಫ್ ರೆಕಾರ್ಡ್

    ಉಡುಪಿ: ಜಿಲ್ಲೆಯ ದೊಂಡೇರಂಗಡಿ ಮೂಲದ ರಿಷಬ್ ಶೆಟ್ಟಿ ಮಾರ್ಷಲ್ ಆರ್ಟ್ಸ್ ನಲ್ಲಿ ವಿಶಿಷ್ಟ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ರಿಷಬ್ ತನ್ನ ಹದಿಮೂರನೇ ವಯಸ್ಸಿಗೆ ದೇಶ ಮೆಚ್ಚುವ ಕೆಲಸ ಮಾಡಿದ್ದಾನೆ. ರಿಷಬ್ ಕರಾಟೆಯಲ್ಲಿ 56 ಪದಕಗಳನ್ನು ಗೆದ್ದಿದ್ದಾನೆ.

    ರಿಷಬ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ದೊಂಡೇರಂಗಡಿಯ ವಿಮಲಾ ಮತ್ತು ಅರುಣ್ ಶೆಟ್ಟಿ ದಂಪತಿಯ ಪುತ್ರನಾಗಿದ್ದಾನೆ. ದೇಶಕ್ಕೆ ಹಾಗೂ ಊರಿಗೆ ಹೆಮ್ಮೆ ತಂದಿದ್ದಾನೆ. ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ 2021 ಸಾಧನೆಯನ್ನು ಮಾಡಿದ್ದಾನೆ. ಎದುರಾಳಿಗಳನ್ನು ಕೆಲವೇ ಕ್ಷಣಗಳಲ್ಲಿ ಸೋಲಿಸುವ ಚಾಕಚಕ್ಯತೆ ರಿಷಬ್‍ಗಿದೆ. ಚಿಕ್ಕಂದಿನಿಂದ ಮುಂಬೈನಲ್ಲಿ ಬೆಳೆದಿರುವ ಕಾರಣ ಕನ್ನಡ ಆತನಿಗೆ ಗೊತ್ತಿಲ್ಲ.

    ನನಗೆ ಚಿಕ್ಕಂದಿನಿಂದಲೇ ಕರಾಟೆ ಮೇಲೆ ಆಸಕ್ತಿ. ತಂದೆ ತಾಯಿ ಬಹಳ ಸಪೋರ್ಟ್ ಮಾಡಿದ್ದಾರೆ. ನನ್ನ ಗುರುಗಳು ಕೂಡಾ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಮುಂದೆ ಇಂಟರ್ ನ್ಯಾಶನಲ್ ಲೆವೆಲ್ ಕಾಂಪಿಟೇಶನ್ ಹೋಗಬೇಕು ಎಂಬ ಆಸೆಯಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾನೆ.

    ಲಾಕ್‍ಡೌನ್ ಸಂದರ್ಭವನ್ನು ರಿಷಬ್ ಸದುಪಯೋಗಪಡಿಸಿಕೊಂಡಿದ್ದಾನೆ. ದಿನಪೂರ್ತಿ ಕರಾಟೆ ಅಭ್ಯಾಸವನ್ನು ಮಾಡುತ್ತಿದ್ದನು. ಮಾರ್ಷಲ್ ಆರ್ಟ್ಸ್ ವೀಡಿಯೋಗಳನ್ನು ನೋಡೋದು. ತಮ್ಮ ಶಿಕ್ಷಕರ ಜೊತೆ ಅದನ್ನು ಪ್ರ್ಯಾಕ್ಟೀಸ್ ಮಾಡುವುದು. ಆನ್ ಲೈನ್ ಕ್ಲಾಸ್ ಮುಗಿಸಿ ಮನೆಯಲ್ಲೂ ನಿರಂತರ ಶ್ರಮವಹಿಸಿದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಕುಟುಂಬಸ್ಥರು, ಊರಿನ ಗ್ರಾಮಸ್ಥರು ರಿಷಬ್ ಸಾಧನೆಗೆ ಶುಭ ಹಾರೈಸಿದ್ದಾರೆ.

    ದೀಕ್ಷಿತ್ ದೊಂಡೇರಂಗಡಿ ಮಾತಮಾಡಿ, ರಿಷಬ್ ನಮ್ಮ ಊರಿನ ಹೆಮ್ಮೆ. ಏಷ್ಯಾ ಬುಕ್ ರೆಕಾರ್ಡ್ ಮಾಡಿರುವುದು ಸಣ್ಣ ಸಾಧನೆ ಅಲ್ಲ. ನಮ್ಮ ಊರಿನ ಹುಡುಗ ಎಂದು ಹೇಳಲು ಹೆಮ್ಮೆ ಎಂದರು. ಈಗ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್‍ಗಳಿಗೆ ಪೂರ್ವ ತಯಾರಿಗಳನ್ನು ಮಾಡುತ್ತಿದ್ದಾನೆ. ರಿಷಬ್ ಶೆಟ್ಟಿ ಮತ್ತಷ್ಟು ಪದಕ ಬಾಚಿಕೊಳ್ಳಲಿ ಅನ್ನೋದು ನಮ್ಮ ಆಶಯ.

  • ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ದಾವಣಗೆರೆಯ 3ರ ಪೋರ

    ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ದಾವಣಗೆರೆಯ 3ರ ಪೋರ

    ದಾವಣಗೆರೆ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಇದೆ. ದಾವಣಗೆರೆಯ 3 ವರ್ಷದ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

    ನಿನಾದ್ ಗುಪ್ತಾ ಏಷ್ಯಾ ಬುಕ್ ಆಪ್ ರೆಕಾರ್ಡ್ ಪಡೆದುಕೊಂಡಿದ್ದಾನೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ನಿವಾಸಿಯಾಗಿದ್ದಾನೆ. ನಿನಾದ್ ಗುಪ್ತಾ ಮೂರು ವರ್ಷ ಹತ್ತು ತಿಂಗಳವನಾಗಿದ್ದಾನೆ. ಈ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಹೆಚ್ಚಿನ ಬುದ್ದಿ ಶಕ್ತಿಯನ್ನು ಹೊಂದಿರುವುದರುವ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾನೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

    ದಂತ ವೈದ್ಯರಾದ ಡಾ.ಅಮರ್ ಹಾಗೂ ಡಾ.ಚಂದನ ಅವರ ಪುತ್ರ ನಿನಾದ್ ಗುಪ್ತಾಗೆ ಚಿಕ್ಕ ವಯಸ್ಸಿನಲ್ಲೇ ಅಗಾದವಾದ ಜ್ಞಾಪಕ ಶಕ್ತಿ ಇದ್ದು, ಏನನ್ನಾದರೂ ಒಮ್ಮೆ ಹೇಳಿಕೊಟ್ಟರೆ ಸಾಕು ಅದನ್ನು ನಿದ್ದೆಗಣ್ಣಿನಲ್ಲಿ ಕೂಡ ಪಟಪಟನೆ ಹೇಳುತ್ತಾನೆ. ಈ ಬಾಲಕನ ಅದ್ಭುತ ಸ್ಮರಣಾ ಶಕ್ತಿ ಹೊಂದಿದ್ದು, ಬಾಲಕ ಇಂಡಿಯಾ ಬುಕ್ ಅಫ್ ರೆಕಾಡ್ರ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾಡ್ಸ್ ಬ್ರೇಕ್ ಮಾಡಿದ್ದಾನೆ.

    ಬೃಹಸ್ಪತಿ ಹಿಂದೂ ಸಂವತ್ಸರ ಚಕ್ರದ 60 ಸಂವತ್ಸರಗಳನ್ನು ಕೇವಲ 62 ಸೆಕೆಂಡ್‍ಗಳಲ್ಲಿ ಅರಳು ಹುರಿದಂತೆ ಹೇಳುತ್ತಾನೆ. ಇದನ್ನು ಬಾಲಕ ನಿನಾದ್ ತಂದೆ ವೈದ್ಯ ಅಮರ್ ವೀಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಕಳುಹಿಸಿದ್ದು, 2021ರ ಏಪ್ರಿಲ್ 2ರಂದು ಹರಿಯಾಣ ರಾಜ್ಯದ ಫರಿದಾಬಾದ್‍ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ನಡೆಸಿದ ಆನ್‍ಲೈನ್ ಕಾರ್ಯಕ್ರಮದಲ್ಲಿ ಆತನ ಸಾಧನೆ ಕಂಡು ಪ್ರಶಸ್ತಿ ನೀಡಲಾಗಿದೆ. ಇದರಿಂದ ಪೋಷಕರು ಮಗನ ಬುದ್ಧಿಶಕ್ತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ನಿನಾದ್ ಚಿಕ್ಕ ಮಗು ಇದ್ದಾಗಲೇ ಸಾಕಷ್ಟು ಆ್ಯಕ್ಟಿವ್ ಇದ್ದನಂತೆ. ಮನೆಯಲ್ಲಿ ನಿನಾದ್ ಅಜ್ಜಿ ಸಂವತ್ಸರಗಳನ್ನು, ಗಾಯತ್ರಿ ಮಂತ್ರ ಸೇರಿದಂತೆ ಹಲವು ಸ್ತೋತ್ರಗಳನ್ನು ಹೇಳಿಕೊಡುತ್ತಿದ್ದರಂತೆ. ಒಮ್ಮೆ ಹೇಳಿಕೊಟ್ಟಿದ್ದನ್ನು ನೆನಪಿನಲ್ಲಿ ಇಟ್ಟುಕೊಂಡು ನಿರರ್ಗಳವಾಗಿ ನಿನಾದ್ ಹೇಳುತ್ತಿದ್ದನಂತೆ. ಇದನ್ನು ನೋಡಿದ ಬಾಲಕನ ಪೋಷಕರು ಮಗನಿಗೆ ಮನೆಯಲ್ಲಿಯೇ ಅಭ್ಯಾಸ ಮಾಡಿಸತೊಡಗಿದರು. ಬಾಲಕ ನಿನಾದ್ ಗುಪ್ತಾ ಪ್ರಪಂಚದ 196 ರಾಜಧಾನಿ, ಒಂದರಿಂದ 25 ರವರೆಗೆ ಗಣಿತ ಮಗ್ಗಿಗಳನ್ನು ನಿರರ್ಗಳವಾಗಿ ಹೇಳುತ್ತಾನೆ. ಸೌರ ಮಂಡಲದ 30ಕ್ಕೂ ಹೆಚ್ಚು ಕಾಯಗಳ ಹೆಸರು ಹಾಗೂ ಈತನಿಗೆ ಸಂಖ್ಯೆಗಳು ಮತ್ತು ಗಣಿತವೆಂದರೆ ತುಂಬಾ ಇಷ್ಟ. ಈಗಲೇ ನಾಲ್ಕನೇ ತರಗತಿ ಪಠ್ಯದ ಸಾಮಾನ್ಯ ಗಣಿತದ ಲೆಕ್ಕಗಳನ್ನು ಬಿಡಿಸುತ್ತಾನೆ. ಟ್ರಿಲಿಯನ್ , ಬಿಲಿಯನ್‍ಗಳ ಸಂಖ್ಯೆಗಳನ್ನು ಗುರುತಿಸುತ್ತಾನೆ. 3000ವರೆಗಿನ ಸಂಖ್ಯೆಗಳನ್ನು ರೋಮನ್ ಸಂಖ್ಯೆಗಳಾಗಿ ಪರಿವರ್ತಿಸಿ ಹೇಳುತ್ತಾನೆ. ಮಗುವಿನ ಸಾಧನೆಯನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್‍ಗೆ ಕೂಡ ಕಳುಹಿಸಿದ್ದು, ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಪೋಷಕರು ತಿಳಿಸಿದ್ದಾರೆ.

    ಒಟ್ಟಾರೆಯಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಇಂತಹ ಮಕ್ಕಳನ್ನು ನೋಡಿ ಹೇಳಿರುತ್ತಾರೆ. ನಿಜಕ್ಕೂ ನಿನಾದ್ ನ ಅದ್ಭುತ ಜ್ಞಾಪಕ ಶಕ್ತಿ, ಆತನ ಬುದ್ದಿ ಶಕ್ತಿಯನ್ನು ನೋಡಿ ಎಂಥವರು ಕೂಡ ನಿಬ್ಬೇರಗಾಗುವಂತದ್ದಾಗಿದೆ.