ನವದೆಹಲಿ: ಮಗ ಮಾಡಿದ ನೀಚ ಕೃತ್ಯದಿಂದ ಎಎಸ್‍ಐ ಕೆಲಸದಿಂದ ತಂದೆಯನ್ನು ದೆಹಲಿ ಪೊಲಿಸರು ವಜಾ ಮಾಡಿದ್ದಾರೆ. ಅಶೋಕ್ ಕುಮಾರ್ ಅಮಾನತ್ತಾದ ಎಎಸ್‍ಐ ಆಗಿದ್ದು, ಇವರು ಜಿಲ್ಲೆಯಲ್ಲಿ ಎಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಅಮಾನತು ಮಾಡಿದ್ದು ಯಾಕೆ?:
ಅಶೋಕ್ ಮಗ ತೋಮರ್ ಯುವತಿಯೊಬ್ಬಳಿಗೆ ಹಿಗ್ಗಾಮುಗ್ಗಾ ಥಳಿಸಿ, ಮೊಣ ಕೈ ಹಾಗೂ ಮೊಣಕಾಲಿನಿಂದ ಬೆನ್ನು ಮತ್ತು ಮುಖಕ್ಕೆ ಪಂಚ್ ಕೊಟ್ಟಿದ್ದನು. ಅಲ್ಲದೇ ಮಗನ ಜೊತೆ ಸೇರಿ ತಂದೆ ಅಶೋಕ್ ಕೂಡ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ಈ ಕಾರಣಕ್ಕೆ ಅಶೋಕ್ ಅವರನ್ನು ಎಎಸ್‍ಪಿ ಉದ್ದೆಯಿಂದ ದೆಹಲಿ ಪೊಲೀಸರು ವಜಾ ಮಾಡಿದ್ದಾರೆ.

ಘಟನೆ ವಿವರ:
ಸೆಪ್ಟೆಂಬರ್ 2ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿರುವ ಬಿಪಿಓ ಕಚೇರಿಯಲ್ಲಿ ಆರೋಪಿ ರೋಹಿತ್ ತೋಮರ್ ಯುವತಿಯೊಬ್ಬಳಿಗೆ ಥಳಿಸಿದ್ದಾನೆ. ತನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲವೆಂದು ಯುವತಿಗೆ ಚೆನ್ನಾಗಿ ಥಳಿಸಿ, ಮೊಣಕೈ ಹಾಗೂ ಮೊಣಕಾಲಿನಿಂದ ಬೆನ್ನು ಮತ್ತು ಮುಖಕ್ಕೆ ಪಂಚ್ ಕೊಟ್ಟಿದ್ದನು. ಈ ಎಲ್ಲಾ ಘಟನೆಯನ್ನು ಗೆಳೆಯ ಕಚೇರಿ ಮಾಲೀಕ ರೋಹಿತ್ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದನು. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಈ ವಿಡಿಯೋವನ್ನು ಗಮನಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಾಟ್ನಾಯಕ್ ಅವರಿಕೆ ಕರೆ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಪೊಲೀಸ್ ಅಧಿಕಾರಿ ಮಗನಿಂದ ಹುಡ್ಗಿಗೆ ಹಿಗ್ಗಾಮುಗ್ಗಾ ಥಳಿತ, ಮೊಣಕಾಲಿನಿಂದ ಮುಖಕ್ಕೆ ಪಂಚ್!
ಈ ಹಿನ್ನೆಲೆಯಲ್ಲಿ ಯುವತಿಯ ದೂರನ್ನು ಸ್ವೀಕರಿಸಿದ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಬಲೆ ಬೀಸಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದಾಗ ಆಕೆ ತನ್ನನ್ನು ಮದುವೆಯಾಗುತ್ತಿಲ್ಲವೆಂದು ಸಿಟ್ಟಿನಿಂದ ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು.
ಯುವತಿ ನೀಡಿದ್ದ ದೂರುನಲ್ಲೇನಿತ್ತು?:
ತೋಮರ್ ಹಾಗೂ ನಾನು ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಆದ್ರೆ ಕಳೆದ ತಿಂಗಳು ನಮ್ಮಿಬ್ಬರ ಮಧ್ಯೆ ಬ್ರೇಕಪ್ ಆಗಿದೆ. ಯಾಕಂದ್ರೆ ನನ್ನ ಮನೆಯವರು ನಮ್ಮಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಬಳಿಕದಿಂದ ತೋಮರ್ ನನಗೆ ಬೆದರಿಕೆ ಹಾಕುತ್ತಿದ್ದಾನೆ ಅಂತ ದೂರಿನಲ್ಲಿ ಯುವತಿ ತಿಳಿಸಿದ್ದಾಳೆ. ಇದನ್ನೂ ಓದಿ: ಮದ್ವೆಯಾಗಲು ಒಪ್ಪದಿದ್ದಕ್ಕೆ ಪ್ರಿಯತಮೆಗೆ ಥಳಿಸಿ, ಮೊಣಕಾಲಿಂದ ಪಂಚ್ ಕೊಟ್ಟ!
ಇಷ್ಟು ಮಾತ್ರವಲ್ಲದೇ ನಾನು ನೆಲೆಸಿದ್ದ ಕಾಲೋನಿಗೆ ಆಗಾಗ ಬಂದು ನಮ್ಮ ಮನೆಗೆ ಕಲ್ಲು ತೂರಾಟ ಮಾಡುತ್ತಾನೆ. ನನ್ನ ತಾಯಿ ಮೇಲೆಯೂ ಹಲ್ಲೆ ಮಾಡಿದ್ದಾನೆ. 4 ದಿನದ ಹಿಂದೆ ಆತ ವಾಟ್ಸಪ್ ಗೆ ಒಂದು ವಿಡಿಯೋ ಕಳುಹಿಸಿದ್ದಾನೆ. ಅದರಲ್ಲಿ, ಒಂದು ವೇಳೆ ನಾನು ಆತನನ್ನು ಮದುವೆಯಾಗದಿದ್ದರೆ ನನಗೆ ಚೆನ್ನಾಗಿ ಥಳಿಸಿ, ಅದನ್ನು ವಿಡಿಯೋ ಮಾಡಿ ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವ ಮೂಲಕ ನನ್ನ ಹೆಸರಿಗೆ ಧಕ್ಕೆ ತರುವುದಾಗಿ ಬೆದರಿಕೆ ಹಾಕಿದ್ದಾನೆ ಅಂತ ಯುವತಿ ಪೊಲೀಸರಲ್ಲಿ ದುಃಖ ತೋಡಿಕೊಂಡಿದ್ದಾಳೆ.
ಯುವತಿಯ ದೂರಿನಂತೆ ಪೊಲೀಸರು ತೋಮರ್ ನನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಕೆಲ ಗಂಟೆಗಳ ಬಳಿಕ ಯುವತಿ, ಆರೋಪಿ ತೋಮರ್ ತಂದೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ವಿರುದ್ಧವೂ ದೂರು ದಾಖಲಿಸಿದ್ದಾಳೆ. ಅದರಲ್ಲಿ ಆರೋಪಿ ತಂದೆಯೂ ಬೆದರಿಕೆ ಹಾಕಿರುವುದಾಗಿ ದೂರಿದ್ದಾಳೆ. ಬಳಿಕ ಶುಕ್ರವಾರ ಉತ್ತಮ್ ನಗರ್ ಪೊಲೀಸ್ ಠಾಣೆಗೆ ತೆರಳಿ ಆರೋಪಿ ತೋಮರ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv