ಗದಗ: ಪೊಲೀಸ್ ಜೀಪ್‌ಗೆ ಅಡ್ಡಲಾಗಿ ಬಂದ ಕತ್ತೆಕಿರುಬಕ್ಕೆ (Hyena) ಡಿಕ್ಕಿ ಹೊಡೆದು, ಜೀಪ್ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಪೊಲೀಸ್ ಅಧಿಕಾರಿಗಳಿಗೆ ಗಾಯಗೊಂಡಿದ್ದರು. ಇದೀಗ ಗಂಭೀರ ಗಾಯಗೊಂಡಿದ್ದ ಎಎಸ್‌ಐ (ASI) ಮೃತಪಟ್ಟಿದ್ದಾರೆ.
ಬೆಟಗೇರಿ ಪೊಲೀಸ್ (Betageri Police) ಠಾಣೆಯ ಎಎಸ್‌ಐ ಕಾಶಿಮ್ ಸಾಬ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೆ.23 ರಂದು ಬೆಳಗ್ಗಿನ ಜಾವ ಪೊಲೀಸ್ ಅಧಿಕಾರಿಗಳು ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ಸಾಮ್ರಾಟ್ ಗಣೇಶ ವಿಸರ್ಜನೆ ಬಂದೋಬಸ್ತ್ ಮುಗಿಸಿ ವಾಪಾಸಾಗುತ್ತಿದ್ದರು. ಇದನ್ನೂ ಓದಿ: ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್
ಈ ವೇಳೆ ಸೊರಟೂರ ಗ್ರಾಮದ ಬಳಿ ವಾಹನಕ್ಕೆ ಅಡ್ಡ ಬಂದ ಕತ್ತೆಕಿರುಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಘಟನೆ ವೇಳೆ ಜೀಪ್‌ನಲ್ಲಿದ್ದ ಇನ್ಸೆಪೆಕ್ಟರ್ ಉಮೇಶ್‌ಗೌಡ ಪಾಟೀಲ್, ಬೆಟಗೇರಿ ಎಎಸ್‌ಐ ಕಾಶಿಮ್ ಸಾಬ್ ಹಾಗೂ ಚಾಲಕ ಓಂನಾಥ್ ಅವರಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಗಂಭೀರ ಗಾಯಗೊಂಡಿದ್ದ ಎಎಸ್‌ಐ ಕಾಶಿಮ್ ಸಾಬ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾಶಿಮ್ ಸಾಬ್ ಅವರ ನಿವೃತ್ತಿಗೆ ಕೇವಲ 5 ತಿಂಗಳು ಬಾಕಿಯಿದ್ದವು ಎನ್ನಲಾಗಿದೆ.
ನವದೆಹಲಿ: ಗುಜರಾತ್‌ನ (Gujarat) ಭಾವನಗರದಲ್ಲಿ ಪೊಲೀಸ್ ಅಧಿಕಾರಿಯ ಮಗ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಹರ್ಷರಾಜ್ ಸಿಂಗ್ ಗೋಹಿಲ್ (20) ಸಂಜೆ 4 ಗಂಟೆ ಸುಮಾರಿಗೆ ಕಲಿಯಬೀದ್ ಪ್ರದೇಶದ ಸಾಕಷ್ಟು ಜನದಟ್ಟಣೆಯ ಬೀದಿಯಲ್ಲಿ ತನ್ನ ಸ್ನೇಹಿತನೊಂದಿಗೆ ರೇಸಿಂಗ್ ಮಾಡುತ್ತಿದ್ದ. ಕ್ರೆಟಾ ಚಾಲನೆ ಮಾಡುತ್ತಿದ್ದಾಗ, ಅವನ ಸ್ನೇಹಿತ ಕೆಂಪು ಬ್ರೆಝಾ ಕಾರನ್ನು ಚಲಾಯಿಸುತ್ತಿದ್ದ. ಇದನ್ನೂ ಓದಿ: ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೇಗವಾಗಿ ಬಂದ ಬಿಳಿ ಬಣ್ಣದ ಕ್ರೆಟಾ ಕಾರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಂತರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ.
ಸ್ಥಳೀಯ ಅಪರಾಧ ವಿಭಾಗದ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಅನಿರುದ್ಧ ಸಿಂಗ್ ವಜುಭಾ ಗೋಹಿಲ್ ಅವರ ಪುತ್ರ ಹರ್ಷರಾಜ್ ಗಂಟೆಗೆ 120 ರಿಂದ 150 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ, ಕಾರು ನಿಯಂತ್ರಣ ಕಳೆದುಕೊಂಡು, ಇಬ್ಬರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆಯಲ್ಲಿ ಸ್ಕಿಡ್ ಆಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಸ್ಕೂಟರ್‌ನ ಟೈರ್‌ಗಳು ಕೂಡ ಸಿಡಿದಿವೆ. ಸ್ಕೂಟರ್‌ನಲ್ಲಿ ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಭಾರತೀಯ ವಿಮಾನಗಳಿಗೆ ವಾಯು ಮಾರ್ಗ ಬಂದ್ – ಆ.24ರವರೆಗೆ ವಿಸ್ತರಿಸಿದ ಪಾಕ್
ಘಟನೆಯಲ್ಲಿ ಇತರ ಹಲವು ವಾಹನಗಳು ಕೂಡ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾದಚಾರಿಗಳಾದ ಭಾರ್ಗವ್ ಭಟ್ (30) ಮತ್ತು ಚಂಪಾಬೆನ್ ವಚಾನಿ (65) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹತ್ತಿರದ ಸರ್ ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಭಾರ್ಗವ್ ಭಟ್ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಕೆಲಸಕ್ಕೆ ತೆರಳುತ್ತಿದ್ದಾಗ ಅಪಘಾತಕ್ಕೆ ಬಲಿಯಾಗಿದ್ದಾರೆ.
ಹರ್ಷರಾಜ್‌ಗೆ ರೇಸ್ ಮೇಲೆ ಕ್ರೇಜ್ ಹೆಚ್ಚು. ಸ್ನೇಹಿತನ ಜೊತೆ ಸೇರಿಕೊಂಡು ಕಾರು ರೇಸ್ ಮಾಡಿದ್ದ. ಅಪಘಾತದ ಬಳಿಕ ಆರೋಪಿ ಹರ್ಷರಾಜ್‌ನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಅಧಿಕಾರಿಯಾಗಿದ್ದ ಆತನ ತಂದೆ ತಕ್ಷಣ ಸ್ಥಳಕ್ಕೆ ಧಾವಿಸಿ, ಮಗನನ್ನು ಥಳಿಸಿ ನೀಲಂಬಾಗ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.
ಮಂಡ್ಯ: ವಿಚಾರಣೆಗೆ ಕರೆದ ಎಎಸ್‌ಐ (ASI) ಮೇಲೆ ನಡುರಸ್ತೆಯಲ್ಲೇ ಹಲ್ಲೆಗೆ ಯತ್ನಿಸಿ ರಂಪಾಟ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲದಲ್ಲಿ (Nagamangala) ನಡೆದಿದೆ.
ನಾಗಮಂಗಲ ಗ್ರಾಮಾಂತರ ಎಎಸ್‌ಐ ರಾಜು ಮೇಲೆ ಮಜ್ಜನಕೊಪ್ಪಲು ಪೂಜಾರಿ ಕೃಷ್ಣ ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದಾನೆ. ಆರೋಪಿ ಕೃಷ್ಣನ ವಿರುದ್ಧ ಆತನ ತಾಯಿ ಠಾಣೆಗೆ ದೂರು ನೀಡಿದ್ದರು. ಹಣಕ್ಕೆ ಬೇಡಿಕೆ ಇಟ್ಟು ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ಸಲ್ಲಿಸಲಾಗಿತ್ತು. ದೂರಿನ ಹಿನ್ನೆಲೆ ಕೃಷ್ಣನನ್ನು ಠಾಣೆಗೆ ಕರೆತರಲು ಎಎಸ್‌ಐ ರಾಜು ತೆರಳಿದ್ದರು. ನಾಗಮಂಗಲದ ಕೋರ್ಟ್ ಬಳಿ ನಿಂತಿದ್ದ ಕೃಷ್ಣನನ್ನು ಎಎಸ್‌ಐ ರಾಜು ಠಾಣೆಗೆ ಕರೆದಿದ್ದರು. ಇದನ್ನೂ ಓದಿ: ಆನೇಕಲ್| ತಾಯಿ ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ
ಠಾಣೆಗೆ ಬರಲು ಒಪ್ಪದಿದ್ದಾಗ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಎಎಸ್‌ಐ ಯತ್ನಿಸಿದ್ದಾರೆ. ಈ ವೇಳೆ ಎಎಸ್‌ಐ ರಾಜುವನ್ನು ಕೃಷ್ಣ ತಳ್ಳಿದ್ದಾನೆ. ತಳ್ಳಾಡಿದಾಗ ರಾಜು ಕೆಳಗೆ ಬಿದ್ದಿದ್ದಾರೆ. ಬಳಿಕ ಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಎಲ್ಲಾ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಕೋಲಾರ | ಮದುವೆ ಮಾಡ್ಕೊಡಿ ಎಂದಿದ್ದಕ್ಕೆ ವಿವಾಹಿತನನ್ನು ಅಟ್ಟಾಡಿಸಿ ಕೊಂದ ಪ್ರೇಯಸಿ ಮನೆಯವ್ರು!
ಲಕ್ನೋ: ಜ್ಞಾನವಾಪಿ ಸಂಕೀರ್ಣದಲ್ಲಿ (Gyanvapi Mosque) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹೆಚ್ಚುವರಿ ಸಮೀಕ್ಷೆಗೆ ಹಿಂದೂ ಪರವಾಗಿ ಸಲ್ಲಿಸಿದ್ದ ಮನವಿಯನ್ನು ವಾರಣಾಸಿ ನ್ಯಾಯಾಲಯ (Varanasi Court) ಶುಕ್ರವಾರ ವಜಾಗೊಳಿಸಿದೆ.
ವಾರಣಾಸಿಯ ಸಿವಿಲ್ ನ್ಯಾಯಾಲಯದ ನ್ಯಾ.ಯುಗುಲ್ ಶಂಭು ಅವರ ನೇತೃತ್ವದ ಪೀಠವು ಅರ್ಜಿಯನ್ನು ವಜಾ ಮಾಡಿದೆ.
ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲ ವಿಜಯ್ ಶಂಕರ್ ರಸ್ತೋಗಿ ಅವರು, ಆದೇಶವನ್ನು ಪರಿಶೀಲಿಸಿ ನಂತರ ಅಲಹಾಬಾದ್ ಹೈಕೋರ್ಟ್ ಅಥವಾ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ, ರಸ್ತೋಗಿ ಅವರು ವಾರಣಾಸಿಯ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಡೀ ಜ್ಞಾನವಾಪಿ ಸಂಕೀರ್ಣದ ಸಮಗ್ರ ಸಮೀಕ್ಷೆಯನ್ನು ನಡೆಸಲು ಎಎಸ್‌ಐಗೆ ಆದೇಶ ನೀಡುವಂತೆ ಕೋರಿದ್ದರು.
ರಸ್ತೋಗಿ, ‘ಪ್ರಾಚೀನ ವಿಗ್ರಹ ಸ್ವಯಂಭು ಲಾರ್ಡ್ ವಿಶ್ವೇಶ್ವರ್ ಮತ್ತು ಇತರರು ವಿ. ಅಂಜುಮನ್ ಇಂತೇಜಾಮಿಯಾ ಮಸ್ಜೀದ್ ಸಮಿತಿಯ ಪ್ರಕರಣದಲ್ಲಿ, ನಾವು ಸಂಪೂರ್ಣ ಜ್ಞಾನವಾಪಿ ಸಂಕೀರ್ಣದ ವ್ಯಾಪಕ ಸಮೀಕ್ಷೆಯನ್ನು ನಡೆಸಲು ಎಎಸ್‌ಐಗೆ ಆದೇಶ ನೀಡುವಂತೆ ನಾವು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದರು.
ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಕಾಮಾಕ್ಷಿಪಾಳ್ಯ (Kamakshipalya) ಠಾಣೆಯ ಎಎಸ್‌ಐ ಶಿವಶಂಕರ್ ಚಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು (ಗುರುವಾರ) ಬೆಳಗ್ಗೆ ಎಂದಿನಂತೆ ಶಿವಶಂಕರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ರೌಂಡ್ಸ್‌ಗೆಂದು ತೆರಳುವ ಸಂದರ್ಭ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ತುಮಕೂರು ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ: ಪರಮೇಶ್ವರ್ ಭರವಸೆ
ತಕ್ಷಣವೇ ಶಿವಶಂಕರ್ ಚಾರಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೃದಯಾಘಾತದಿಂದ ಶಿವಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿವಶಂಕರ್ ಚಾರಿ 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಕಳೆದ ಒಂದೂವರೆ ವರ್ಷದಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಶ್ಯೂರಿಟಿ ನೀಡಲು ಸಿಂಧನೂರು ಡಿವೈಎಸ್‌ಪಿ ಕಚೇರಿಗೆ ಸೂಲಿಬೆಲೆ ಹಾಜರು
– 13-14ನೇ ಶತಮಾನದ ನಾಣ್ಯಗಳು, 94 ಪುರಾತನ ಶಿಲ್ಪಗಳು ಪತ್ತೆ
ಭೋಪಾಲ್: ಮಧ್ಯಪ್ರದೇಶದ ಧಾರ್‌ನಲ್ಲಿರುವ ವಿವಾದಿತ ಭೋಜ್‌ಶಾಲಾ-ಕಮಲ್‌ಮೌಲಾ ಮಸೀದಿ ಸಂಕೀರ್ಣದಲ್ಲಿ (Bhojshala complex) ವೈಜ್ಞಾನಿಕ ಸಮೀಕ್ಷೆ ನಡೆಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಧ್ಯಪ್ರದೇಶ ಹೈಕೋರ್ಟ್‌ಗೆ 2,000 ಪುಟಗಳ ವರದಿ ಸಲ್ಲಿಸಿದೆ. ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆಯಲ್ಲಿ, ಈ ಸ್ಥಳದಲ್ಲಿ ಹಿಂದೂ ದೇವಾಲಯ ಇತ್ತೆಂಬ ಬಗ್ಗೆ ಅಪಾರ ಪ್ರಮಾಣದ ಕುರುಹುಗಳು ಪತ್ತೆಯಾದ ಬಗ್ಗೆ ಉಲ್ಲೇಖಿಸಿದೆ.
31 ಪುರಾತನ ನಾಣ್ಯಗಳು ಪತ್ತೆ:
ಮಾರ್ಚ್ 22ರಂದು ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ವೇಳೆ ಬೆಳ್ಳಿ, ತಾಮ್ರ, ಅಲ್ಯೂಮಿನಿಯಂ, ಉಕ್ಕಿನಿಂದ ತಯಾರಿಸಿದ ಒಟ್ಟು 31 ನಾಣ್ಯಗಳು (Coins) ಪತ್ತೆಯಾಗಿವೆ. ಇವು ಪುರಾತನ ಕಾಲದ ನಾಣ್ಯಗಳಾಗಿವೆ ಎಂದು ವರದಿ ಹೇಳಿದೆ. ಈ ನಾಣ್ಯಗಳು ಇಂಡೋ-ಸಸ್ಸಾನಿಯನ್ (10ನೇ-11ನೇ ಶತಮಾನ), ದೆಹಲಿ ಸುಲ್ತಾನೇಟ್ (13ನೇ-14ನೇ ಶತಮಾನ), ಮಾಲ್ವಾ ಸುಲ್ತಾನೇಟ್ (15ನೇ-16ನೇ ಶತಮಾನ), ಮೊಘಲ್ (16ನೇ-18ನೇ ಶತಮಾನ), ಧಾರ್ ರಾಜ್ಯ (19ನೇ ಶತಮಾನ), ಮತ್ತು ಬ್ರಿಟಿಷ್ (19-20 ನೇ ಶತಮಾನ) ಕಾಲದ ನಾಣ್ಯಗಳು ಎಂಬುದನ್ನು ವರದಿ ತಿಳಿಸಿದೆ.
ಅಲ್ಲದೇ ಸಮೀಕ್ಷೆಯು ಒಟ್ಟು 94 ಶಿಲ್ಪಗಳು, ಶಿಲ್ಪಗಳ ತುಣುಕುಗಳು ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಬಹಿರಂಗಪಡಿಸಿದೆ. ಈ ಶಿಲ್ಪಗಳು ಬಸಾಲ್ಟ್, ಅಮೃತಶಿಲೆ, ಸ್ಕಿಸ್ಟ್, ಮೃದು ಕಲ್ಲು, ಮರಳುಗಲ್ಲು ಮತ್ತು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಅವರು ಗಣೇಶ, ಬ್ರಹ್ಮ, ನರಸಿಂಹ, ಭೈರವ, ಇತರ ದೇವರುಗಳು ಮತ್ತು ದೇವತೆಗಳು, ಮನುಷ್ಯರು ಮತ್ತು ಪ್ರಾಣಿಗಳಂತಹ ದೇವತೆಗಳ ಆಕೃತಿಗಳು ಕಂಡುಬಂದಿವೆ.
ಇನ್ನೂ ಪ್ರಾಣಿಗಳ ಆಕೃತಿಗಳಲ್ಲಿ ಸಿಂಹ, ಆನೆ, ಕುದುರೆಗಳು, ನಾಯಿ, ಕೋತಿ, ಹಾವು, ಆಮೆ, ಹಂಸ ಮತ್ತು ಪಕ್ಷಿಗಳನ್ನೊಳಗೊಂಡ ಆಕೃತಿಗಳು ಕಂಡುಬಂದಿವೆ. ಅಲ್ಲದೇ ಭಗ್ನಗೊಂಡ ಸ್ಥಿತಿಯಲ್ಲಿ ವಿಷ್ಣುವಿನ ವಿಗ್ರಹ, ದೇವಾಲಯದ ಕುರುಹುಗಳು, ತ್ರಿಶೂಲದ ಗೋಡೆ ಬರಹ, ಸಂಸ್ಕೃತ, ಪ್ರಾಕೃತ ಭಾಷೆಯ ಶಾಸನಗಳು, ಶಾಸನದಲ್ಲಿ ಓಂ ನಮಃ ಶಿವಾಯ ಬರಹ, ಶಾಸನದಲ್ಲಿ ಓಂ ಸರಸ್ವತಿಯೇ ನಮಃ ಬರಹ, ಪರಂಪರಾ ಅವಧಿಯ ನಿರ್ಮಾಣ ಶೈಲಿಯ ದೇಗುಲ ಕುರುಹು ಪತ್ತೆಯಾಗಿವೆ. ಅಲ್ಲದೇ ಭೋಜಶಾಲೆಯು ಶತಮಾನಗಳ ಹಿಂದೆ ಮಹತ್ವದ ಶೈಕ್ಷಣಿಕ ಕೇಂದ್ರವಾಗಿತ್ತು ಎಂದು ಹೇಳಲಾಗಿದೆ.
ಹಿಂದೂ-ಮುಸ್ಲಿಮರಿಂದ ಪೂಜೆ:
ಇನ್ನೂ ಭೋಜಶಾಲಾ ಸಂಕೀರ್ಣವು 11ನೇ ಶತಮಾನದಲ್ಲಿ ಸರಸ್ವತಿ ದೇವಿಯ ದೇವಾಲಯವಾಗಿತ್ತು, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆದರು. ಕಳೆದ 21 ವರ್ಷಗಳಿಂದ ಭೋಜಶಾಲೆಯಲ್ಲಿ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಸಲ್ಲಿಸಿದರೆ, ಶುಕ್ರವಾರದಂದು ಮುಸ್ಲಿಮರು ನಮಾಜ್ ಆಚರಿಸುತ್ತಾರೆ ಎಂದು ವಿದ್ವಾಂಸರು ತಿಳಿಸಿದ್ದಾರೆ.
ಈ ಸಂಬಂಧ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಸಂಘಟನೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಿತ್ತು. ಅದರಂತೆ ಹೈಕೋರ್ಟ್ ಎಎಸ್‌ಐಗೆ ಮಾರ್ಚ್ 11ರಂದು ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ಸಮೀಕ್ಷೆ ಪೂರ್ಣಗೊಳಿಸಲು ಎಎಸ್‌ಐಗೆ 6 ವಾರಗಳ ಕಾಲಾವಕಾಶ ನೀಡಲಾಗಿತ್ತು. ಎಎಸ್‌ಐ ಮಾರ್ಚ್ 22 ರಂದು ವಿವಾದಿತ ಸಂಕೀರ್ಣದ ಸಮೀಕ್ಷೆಯನ್ನು ಪ್ರಾರಂಭಿಸಿ, ಇತ್ತೀಚೆಗಷ್ಟೇ ಸಮೀಕ್ಷೆ ಮುಕ್ತಾಯಗೊಂಡಿತ್ತು.
ಇದಾದ ಬಳಿಕ ಸಮೀಕ್ಷೆಯ ಪೂರ್ಣ ವರದಿಯನ್ನು ಜುಲೈ 15ರ ಒಳಗೆ ಹಾಜರುಪಡಿಸಲು ಎಎಸ್‌ಐಗೆ ಹೈಕೋರ್ಟ್ ಜುಲೈ 4 ರಂದು ಆದೇಶಿಸಿತ್ತು. ಅದರಂತೆ ಪುರಾತ್ವ ಇಲಾಖೆ 2000 ಪುಟಗಳ ವರದಿ ಸಲ್ಲಿಸಿದದು, ಜುಲೈ 22 ರಂದು ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ.
ಜಾಗದ ವಿಚಾರಕ್ಕೆ ನ್ಯಾಯ ಸಿಗದ್ದಕ್ಕೆ ಠಾಣೆಗೆ ಒಳಗಡೆ ಹೋಗಿ ಮಹಿಳೆ ಬಾಟಲ್‌ನಿಂದ ಚುಚ್ಚಿದ್ದಾಳೆ. ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ನಿಮ್ಹಾನ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಭೀಕರ ರಸ್ತೆ ಅಪಘಾತದಲ್ಲಿ (Road Accident) ಎಎಸ್‌ಐ (ASI) ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ (PSI) ಸಸ್ಪೆಂಡ್ ಮಾಡಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಯರಗಟ್ಟಿ ಪಟ್ಟಣದ ನಿವಾಸಿ ವಿಜಯಕಾಂತ ಮಿಕಲಿ (51) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕಾಂತ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದಕ್ಕೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕರ್ತವ್ಯ ಮುಗಿಸಿ ಯರಗಟ್ಟಿಯಲ್ಲಿರುವ ಮನೆಗೆ ಬರುವಾಗ ರಸ್ತೆ ಅಪಘಾತವಾಗಿತ್ತು. ಇದನ್ನೂ ಓದಿ: ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ
ಅತಿವೇಗದಿಂದ ಬೈಕ್ ಚಲಾಯಿಸುವಾಗ ಹಂಪ್ ಜಿಗಿಸಿ ರಸ್ತೆ ಅಪಘಾತವಾಗಿದೆ. ಯರಗಟ್ಟಿಯ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ಘಟನೆ ನಡೆದಿತ್ತು. ಆದರೆ ಕಳೆದೊಂದು ತಿಂಗಳ ಹಿಂದಷ್ಟೇ ಎಲ್ಲಾ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಬೆಳಗಾವಿ ಎಸ್ಪಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು. ಮೇಲಾಧಿಕಾರಿಗಳ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ಆರೋಪದ ಮೇರೆಗೆ ದೊಡವಾಡ ಠಾಣೆ ಪಿಎಸ್‌ಐ ನಂದೀಶ ಎಂಬವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ನೇಣಿಗೆ ಶರಣು – ಕಳ್ಳತನ ಆರೋಪ ಹೊರಿಸಿ ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ್ದಕ್ಕೆ ಆತ್ಮಹತ್ಯೆ?