Tag: ashwini vaishnav

  • ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಘೋಷಣೆ, 30 ವರ್ಷದ ಬೇಡಿಕೆ ಈಡೇರಿಕೆ: ತೇಜಸ್ವಿ ಸೂರ್ಯ

    ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಘೋಷಣೆ, 30 ವರ್ಷದ ಬೇಡಿಕೆ ಈಡೇರಿಕೆ: ತೇಜಸ್ವಿ ಸೂರ್ಯ

    ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ (Bengaluru-Mumbai Superfast Train) ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಮಾಹಿತಿ ನೀಡಿದ್ದಾರೆ. ಈ ಅನುಮೋದನೆಯಿಂದ ಎರಡೂ ನಗರಗಳ ನಾಗರಿಕರ 30 ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಸಂಭ್ರಮಿಸಿದ್ದಾರೆ.

    ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಅವರು ‘ಬೆಂಗಳೂರು ಮತ್ತು ಮುಂಬೈ ನಡುವೆ ನಾವು ಶೀಘ್ರದಲ್ಲೇ ಸೂಪರ್‌ಫಾಸ್ಟ್ ರೈಲನ್ನು ಪ್ರಾರಂಭಿಸಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು, ಅವುಗಳ ನಿಲ್ದಾಣಗಳಲ್ಲಿನ ಸಾಮರ್ಥ್ಯದ ವಿಸ್ತರಣೆಯಿಂದಾಗಿ ಇದು ಈಗ ಸಾಧ್ಯವಾಗಿದೆ’ ಎಂದಿದ್ದಾರೆ ಎಂದು ತೇಜಸ್ವಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗಡಿ ಜಿಲ್ಲೆ ಬೀದರ್‌ನಲ್ಲಿ ಧಾರಾಕಾರ ಮಳೆಗೆ ಭಾರೀ ಅವಾಂತರ – ರಸ್ತೆ ಸಂಚಾರ ಬಂದ್‌

    ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದರೂ, ಈ ಎರಡೂ ನಗರಗಳು ಕೇವಲ ಒಂದೇ ಒಂದು ರೈಲಿನಿಂದ ಸಂಪರ್ಕ ಹೊಂದಿದ್ದವು. ಆ ರೈಲು ಉದ್ಯಾನ ಎಕ್ಸ್‌ಪ್ರೆಸ್ ಆಗಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿದೆ. ಕಳೆದ ಮೂರು ದಶಕಗಳಲ್ಲಿ ಎರಡೂ ನಗರಗಳ ಬೆಳವಣಿಗೆಯ ಹೊರತಾಗಿಯೂ, ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದು ಸೂಪರ್‌ಫಾಸ್ಟ್ ರೈಲು ಮಾತ್ರ ಇತ್ತು. ಕಳೆದ ವರ್ಷವೊಂದರಲ್ಲೇ 26 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಹೊಸ ಸೇವೆಯು ಲಕ್ಷಾಂತರ ನಾಗರಿಕರಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಅನುಕೂಲಕರವಾಗಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

    ಈ ವಿಷಯದ ಕುರಿತಾಗಿ ಕಳೆದ ನಾಲ್ಕು ವರ್ಷಗಳಿಂದ ಸಂಸತ್ತಿನಲ್ಲಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗಳಲ್ಲಿ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನದ ಫಲವಾಗಿದೆ. ಈ ಹೊಸ ರೈಲು ಪ್ರಯಾಣದ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ವಿಮಾನ ಹಾಗೂ ಬಸ್‌ಗಳಿಗೆ ಆರಾಮದಾಯಕವಾದ ಪರ್ಯಾಯವನ್ನು ಒದಗಿಸುತ್ತದೆ. ಅಲ್ಲದೆ, ಇದು ಎರಡು ಮಹಾನಗರಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಕರ್ನಾಟಕದ ಜನತೆ ಮತ್ತು ಕನ್ನಡಿಗರ ಪರವಾಗಿ, ಈ ಬಹುಕಾಲದ ಕನಸನ್ನು ನನಸಾಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತೇಜಸ್ವಿ ಸೂರ್ಯ ಕೃತಜ್ಞತೆಯನ್ನು ಸಲ್ಲಿಸಿದ್ದು, ಈ ಕಾರ್ಯಕ್ಕೆ ಬೆಂಬಲ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಧನ್ಯವಾದ ತಿಳಿಸಿದ್ದಾರೆ.‌ ಇದನ್ನೂ ಓದಿ: ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌

  • ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್ ರೈಲು -‌ ವಿಶೇಷತೆಗಳೇನು? ಟಿಕೆಟ್‌ ದರ ಎಷ್ಟು?

    ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್ ರೈಲು -‌ ವಿಶೇಷತೆಗಳೇನು? ಟಿಕೆಟ್‌ ದರ ಎಷ್ಟು?

    ಲವು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಓಡಾಟವನ್ನ ಕಣ್ತುಂಬಿಕೊಳ್ಳುವ ಸಮಯ ಹತ್ತಿರದಲ್ಲಿದೆ. ವಂದೇ ಭಾರತ್ ಸ್ಲೀಪರ್ ರೈಲು ಯಾವಾಗ ಪ್ರಾರಂಭವಾಗುತ್ತದೆ? ಯಾವ ಮಾರ್ಗದಲ್ಲಿ ಚಲಿಸಲಿದೆ ಎಂಬ ಅನೇಕ ಪ್ರಶ್ನೆಗೆ ಬ್ರೇಕ್‌ ಬಿದ್ದಿದೆ. ದೀಪಾವಳಿ ಮತ್ತು ಛತ್ ಪೂಜೆಗೂ ಮುನ್ನವೇ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಓಡಿಸಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ‌ಹಾಗಿದ್ರೆ ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿಶೇಷತೆಗಳೇನು? ಯಾವಾಗ ಮತ್ತು ಎಲ್ಲಿ ಚಲಿಸುತ್ತದೆ? ಟಿಕೆಟ್‌ ದರ ಎಷ್ಟು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಎಲ್ಲಿಂದ ಎಲ್ಲಿಗೆ ಪ್ರಯಾಣ?
    ದೆಹಲಿಯಿಂದ ಪ್ರಯಾಗ್‌ರಾಜ್ ಮೂಲಕ ಪಾಟ್ನಾಗೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ದೀಪಾವಳಿಗೆ ಮೊದಲು ಆರಂಭವಾಗಲಿದೆ. ಇದು ವೇಗ, ಸೌಕರ್ಯ ಮತ್ತು ಸುರಕ್ಷತೆಯ ವಿಷಯದಲ್ಲಿ ಹೊಸ ಪ್ರಯಾಣದ ಅನುಭವವನ್ನು ನೀಡುತ್ತದೆ.ಈ ಸ್ಲೀಪರ್ ರೈಲು ತನ್ನ ಸುಧಾರಿತ ಸೌಲಭ್ಯಗಳು ಮತ್ತು ವೇಗದಿಂದಾಗಿ ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

    ಬಹುನಿರೀಕ್ಷಿತ ಸೇವೆಯು ದೆಹಲಿಯಿಂದ ಪಾಟ್ನಾಗೆ ಪ್ರಯಾಗ್‌ರಾಜ್ ಮೂಲಕ ಚಲಿಸಲಿದ್ದು, ಸುಮಾರು 1,000 ಕಿಲೋಮೀಟರ್ ದೂರವನ್ನು ಕೇವಲ 11.5 ಗಂಟೆಗಳಲ್ಲಿ ಕ್ರಮಿಸಲಿದೆ. ಸದ್ಯ ಅದೇ ಮಾರ್ಗದಲ್ಲಿ ಸಂಚಾರ ಮಾಡುವ ರಾಜಧಾನಿ ಎಕ್ಸ್‌ಪ್ರೆಸ್ ಈ ಪ್ರಯಾಣಕ್ಕೆ 23 ಗಂಟೆ ತೆಗೆದುಕೊಳ್ಳುತ್ತಿದೆ. ರಾಜಧಾನಿ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಇದು ಬಹಳ ಕಡಿಮೆ ಸಮಯದಲ್ಲಿ ದೆಹಲಿಯನ್ನು ತಲುಪಬಹುದು. ವಂದೇ ಭಾರತ್‌ ರೈಲುಗಳ ಹೊಸ ಆವೃತ್ತಿ ರೈಲ್ವೇ ದರದಲ್ಲಿ ವಿಮಾನ ಪ್ರಯಾಣದಂಥ ಅನುಭವ ನೀಡುತ್ತದೆ. ರಾತ್ರಿಯ ವೇಳೆ ಪ್ರಯಾಣಿಕರಿಗೆ ವೇಗ, ಅನುಕೂಲತೆ ಮತ್ತು ಆಧುನಿಕ ಸೌಲಭ್ಯಗಳನ್ನು ನೀಡುತ್ತದೆ.

    ವಿಶೇಷತೆಗಳೇನು?
    ಈಗ ಇರುವ ವಂದೇ ಭಾರತ್ ಚೇರ್ ಕಾರ್ ರೈಲುಗಳಿಗಿಂತ ಭಿನ್ನವಾಗಿ, ಸ್ಲೀಪರ್ ಆವೃತ್ತಿಯನ್ನು ನಿರ್ದಿಷ್ಟವಾಗಿ ದೀರ್ಘ-ರಾತ್ರಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಗಂಟೆಗೆ 180 ಕಿ.ಮೀ ಗರಿಷ್ಠ ವೇಗದೊಂದಿಗೆ, ಇದು ಪ್ರಮುಖ ಮಾರ್ಗಗಳಲ್ಲಿ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

    ಈ ರೈಲು 16 ಬೋಗಿಗಳನ್ನು ಹೊಂದಿದ್ದು, ಒಟ್ಟು 1,128 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಮೂರು ವರ್ಗಗಳಲ್ಲಿ ಹರಡಿಕೊಂಡಿದೆ – ಎಸಿ ಪ್ರಥಮ ದರ್ಜೆ, ಎಸಿ 2 ಟೈರ್ ಮತ್ತು ಎಸಿ 3 ಟೈರ್. ಪ್ರತಿಯೊಂದು ವರ್ಗವನ್ನು ವಿವಿಧ ರೀತಿಯ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಕೈಗೆಟುಕುವ ದರಗಳಲ್ಲಿ ವಿವಿಧ ಮಟ್ಟದ ಸೌಕರ್ಯವನ್ನು ನೀಡುತ್ತದೆ.

    ಪ್ರಯಾಣಿಕರು ರಿಯಲ್‌ಟೈಮ್‌ ಆಡಿಯೋ ಮತ್ತು ವಿಡಿಯೋ ಪ್ರಕಟಣೆಗಳು, ಎಲ್‌ಇಡಿ ಮಾಹಿತಿ ಪರದೆಗಳು ಮತ್ತು ಸಿಸಿಟಿವಿ ಕಣ್ಗಾವಲುಗಳನ್ನು ಎದುರುನೋಡಬಹುದು, ಇದು ಪ್ರಯಾಣವನ್ನು ಮಾಹಿತಿಯುಕ್ತ ಮತ್ತು ಸುರಕ್ಷಿತವಾಗಿಸುತ್ತದೆ. ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು, ಸ್ಪರ್ಶ-ಮುಕ್ತ ಬಯೋ-ವ್ಯಾಕ್ಯೂಮ್ ಶೌಚಾಲಯಗಳು ಮತ್ತು ಅಂಗವಿಕಲ ಸ್ನೇಹಿ ಬರ್ತ್‌ಗಳು ಮತ್ತು ವಿಶ್ರಾಂತಿ ಕೊಠಡಿಗಳ ಸೇರ್ಪಡೆಯು ಹೆಚ್ಚಿನ ಪ್ರವೇಶ ಮತ್ತು ನೈರ್ಮಲ್ಯವನ್ನು ಖಚಿತಪಡಿಸುತ್ತದೆ.

    ಇನ್ನು ಇಷ್ಟು ಮಾತ್ರವಲ್ಲದೇ ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫಸ್ಟ್ ಎಸಿ ಕೋಚ್‌ಗಳಲ್ಲಿ ಬಿಸಿನೀರಿನ ಸ್ನಾನದ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ, ಇದು ಪ್ರಯಾಣಿಕರಿಗೆ ರೈಲಿನಲ್ಲಿ ಹೋಟೆಲ್‌ನಂತಹ ಅನುಭವವನ್ನು ನೀಡುತ್ತದೆ. ಸುರಕ್ಷತಾ ದೃಷ್ಟಿಯಿಂದ, ರೈಲು ಪ್ರಯಾಣದ ಸಮಯದಲ್ಲಿ ಗರಿಷ್ಠ ರಕ್ಷಣೆ ಒದಗಿಸಲು ತುರ್ತು ಬ್ರೇಕಿಂಗ್ ಕಾರ್ಯವಿಧಾನಗಳು, ಆಂಟಿ-ಕ್ಲೈಂಬಿಂಗ್ ತಂತ್ರಜ್ಞಾನ ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಅಳವಡಿಸಲ್ಪಟ್ಟಿದೆ.

    ಇದಲ್ಲದೆ, ವಂದೇ ಭಾರತ್ ಎಕ್ಸ್‌ಪ್ರೆಸ್ ನಿಯಮಿತ ರೈಲುಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗುವುದು. ಪ್ರಸ್ತುತ, ವಂದೇ ಭಾರತ್ ರೈಲುಗಳು 7 ಮಾರ್ಗಗಳಲ್ಲಿ ಓಡುತ್ತಿವೆ. ಇವುಗಳಲ್ಲಿ, 4 ರೈಲುಗಳು 8 ಬೋಗಿಗಳನ್ನು ಹೊಂದಿದ್ದರೆ, 3 ರೈಲುಗಳು 16 ಬೋಗಿಗಳನ್ನು ಹೊಂದಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ, ಹೆಚ್ಚಿನ ಬೋಗಿಗಳನ್ನು ಸೇರಿಸುವ ಯೋಜನೆಗಳಿವೆ.

    ದರ ಎಷ್ಟು?
    ಈ ರೈಲು ರಾತ್ರಿ 8 ಗಂಟೆಗೆ ಪಾಟ್ನಾದಿಂದ ಹೊರಡುತ್ತದೆ. ನಂತರ ಮರುದಿನ ಬೆಳಿಗ್ಗೆ 7:30ಕ್ಕೆ ದೆಹಲಿಗೆ ತಲುಪುತ್ತದೆ. ಅನೇಕ ಸೌಲಭ್ಯಗಳನ್ನು ಹೊಂದಿರುವ ಈ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಪ್ರಯಾಣಿಕರು ರಾಜಧಾನಿ ಎಕ್ಸ್‌ಪ್ರೆಸ್ ದರಗಳಿಗಿಂತ ಸುಮಾರು 10–15% ಹೆಚ್ಚು ಪಾವತಿಸಬೇಕಾಗುತ್ತದೆ. ಅದಕ್ಕೆ ಪ್ರತಿಯಾಗಿ, ಉತ್ತಮ ಸೌಕರ್ಯ, ಆಧುನಿಕ ಸೀಟ್‌ಗಳು ಮತ್ತು ವೇಗದ ಪ್ರಯಾಣವನ್ನು ಆನಂದಿಸಬಹುದಾಗಿದೆ. ಒಟ್ಟಾರೆಯಾಗಿ ಈ ಹೊಸ ರೈಲು ದೇಶದಲ್ಲಿ ರೈಲು ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

    ಯಾವಾಗ ಆರಂಭ?
    ಗುಜರಾತ್‌ನ ಭಾವನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ಸ್ಲೀಪರ್ ಸೆಪ್ಟೆಂಬರ್‌ನಲ್ಲಿ ಪರಿಚಯವಾಗಲಿದೆ ಎಂದು ಘೋಷಿಸಿದ್ದರು. ಆದರೆ ನಿಖರ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ರೈಲ್ವೆ ಸಂಸ್ಥೆಗಳು ಸದ್ಯದಲ್ಲೇ ಈ ಮಾಹಿತಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

    ಬೆಂಗಳೂರಿನ ಬಳಿ ವಂದೇ ಭಾರತ್ ಸ್ಲೀಪರ್ ಡಿಪೋ ಮತ್ತು ವರ್ಕ್‌ಶಾಪ್‌ ಸ್ಥಾಪಿಸಲಾಗುತ್ತಿದೆ. ಇದು 2026 ರ ಆರಂಭದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಪ್ರಸ್ತುತ, ಬೆಂಗಳೂರಿನ ಬಿಇಎಂಎಲ್‌ನಲ್ಲಿ ಐಸಿಎಫ್ ಸಹಯೋಗದೊಂದಿಗೆ 10 ಸ್ಲೀಪರ್ ರೈಲುಗಳನ್ನು ನಿರ್ಮಿಸಲಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಭಾರತದಾದ್ಯಂತ ಇಂತಹ ಹೆಚ್ಚಿನ ಸೇವೆಗಳನ್ನು ಖಚಿತಪಡಿಸುತ್ತದೆ.

    ಎರಡನೇ ವಂದೇ ಭಾರತ್‌ ಸ್ಲೀಪರ್‌ ರೈಲು:
    ಕೇರಳ ರಾಜ್ಯವು ಭಾರತದ ಎರಡನೇ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ಹೊಂದಿರಲಿದೆ. ಇದು ಕರ್ನಾಟಕ ರಾಜ್ಯದ ಕರಾವಳಿ ಪಟ್ಟಣವಾದ ಮಂಗಳೂರು ಹಾಗೂ ಕೇರಳ ರಾಜಧಾನಿ ತಿರುವನಂತಪುರಂ ನಡುವೆ ಚಲಿಸಲಿದೆ. ಇದು ಮುಂದಿನ ವರ್ಷ ಹಳಿಗಳ ಮೇಲೆ ಓಡಲಿದೆ. ಇದಕ್ಕಾಗಿ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದ್ದು, ಈ ಮಂಗಳೂರು- ತಿರುವನಂತಪುರಂ ಮಾರ್ಗದಲ್ಲಿ 3 ಸ್ಲೀಪರ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಮಂಜೂರು ಮಾಡಲು ಸಂಸದ ರಾಘವನ್‌ ಮತ್ತು ಸಚಿವೆ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಮಂಗಳೂರು ಹಾಗೂ ತಿರುವನಂತಪುರಂ ನಡುವೆ ಈ ಆಧುನಿಕ ರೈಲು ಓಡಲಿದೆ. ಈ ಮಾರ್ಗದ ನಡುವೆ ವಂದೇ ಭಾರತ್‌ ಸ್ಲೀಪರ್ ರೈಲು ಸಂಚರಿಸಿದರೆ ಕೇರಳ ರಾಜ್ಯದ ಪ್ರವಾಸ ಮಾಡುವವರಿಗೆ ಮತ್ತಷ್ಟು ಸುಲಭವಾಗಲಿದೆ.

  • ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌ – ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!

    ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌ – ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!

    – ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಅಶ್ವಿನಿ ವೈಷ್ಣವ್‌
    – ಭಾರತದ ಯುವಕರನ್ನು ರಕ್ಷಿಸಲು ಮಸೂದೆ

    ನವದೆಹಲಿ: ಲೋಕಸಭೆಯಲ್ಲಿ ಆನ್‌ಲೈನ್‌ ಗೇಮಿಂಗ್‌ ಮಸೂದೆ (Online Gaming Bill, 2025) ಅಂಗೀಕಾರವಾಗಿದೆ. ವಿಪಕ್ಷಗಳ ಗದ್ದಲದ ನಡುವೆಯೂ ಈ ಮಸೂದೆಯನ್ನು ಸರ್ಕಾರ ಧ್ವನಿ ಮತದಿಂದ ಪಾಸ್‌ ಮಾಡಿಸುವಲ್ಲಿ ಯಶಸ್ವಿಯಾಗಿದೆ.

    ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡಿಸಿದರು. ಈ ಆಟಗಳಲ್ಲಿ ಹೆಚ್ಚುತ್ತಿರುವ ವ್ಯಸನ, ಹಣ ವರ್ಗಾವಣೆ ಮತ್ತು ಆರ್ಥಿಕ ವಂಚನೆಯ ಘಟನೆಗಳನ್ನು ತಡೆಯಲು ಮಸೂದೆ ಮಂಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.

    ಈ ಮಸೂದೆಯು ಇ-ಸ್ಪೋರ್ಟ್ಸ್ ಮತ್ತು ಆನ್‌ ಲೈನ್ ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುತ್ತದೆ. ಆದರೆ ಹಾನಿಕಾರಕ ಆನ್‌ಲೈನ್ ಹಣದ ಗೇಮಿಂಗ್ ಸೇವೆಗಳು, ಅವುಗಳ ಜಾಹೀರಾತುಗಳು ಮತ್ತು ಹಣಕಾಸು ವ್ಯವಹಾರಗಳನ್ನು ನಿಷೇಧಿಸುತ್ತದೆ. ಆನ್‌ ಲೈನ್ ಫ್ಯಾಂಟಸಿ ಸ್ಪೋರ್ಟ್ಸ್‌ನಿಂದ ಹಿಡಿದು ಆನ್‌ ಲೈನ್ ಜೂಜು (ಪೋಕರ್, ರಮ್ಮಿ ಮತ್ತು ಇತರ ಕಾರ್ಡ್ ಆಟಗಳು) ಹಾಗೂ ಆನ್‌ ಲೈನ್ ಲಾಟರಿಗಳವರೆಗೆ ಎಲ್ಲಾ ಆನ್‌ ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಚಟುವಟಿಕೆಗಳನ್ನು ಈ ಮಸೂದೆ ಕಾನೂನುಬಾಹಿರಗೊಳಿಸುತ್ತದೆ.

    ಹಣವನ್ನು ಮರುಪಾವತಿ ಮಾಡುತ್ತೇವೆ ಎಂದು ಭರವಸೆ ನೀಡಿ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುವ ಈ ಗೇಮಿಂಗ್‌ ಆಟಗಳಿಂದ ಭಾರತದ ಯುವಕರನ್ನು ರಕ್ಷಿಸಲು ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಕ್ರಿಮಿನಲ್ ಕೇಸಲ್ಲಿ ಜನಪ್ರತಿನಿಧಿಗಳ ಬಂಧನವಾದ್ರೆ ಹುದ್ದೆಯಿಂದ ವಜಾ ಮಸೂದೆ ಮಂಡನೆ, ಲೋಕಸಭೆಯಲ್ಲಿ ಕೋಲಾಹಲ


    ವರ್ಗೀಕರಣ, ನೋಂದಣಿ, ದೂರುಗಳ ಮೇಲ್ವಿಚಾರಣೆ ಮತ್ತು ಆಟವು ಹಣದ ಆಟವಾಗಿ ಅರ್ಹತೆ ಪಡೆಯುತ್ತದೆಯೇ ಎಂಬುದನ್ನು ನಿರ್ಧರಿಸುವುದು ಸೇರಿದಂತೆ ಆನ್‌ಲೈನ್ ಆಟಗಳನ್ನು ನಿಯಂತ್ರಿಸಲು ರಾಷ್ಟ್ರೀಯ ಪ್ರಾಧಿಕಾರವನ್ನು ಸ್ಥಾಪಿಸಲಾಗುತ್ತದೆ.

    ಪ್ರಸ್ತಾವಿತ ಮಸೂದೆಯಲ್ಲಿ ಮೂರು ಪ್ರಮುಖ ಅಂಶಗಳಿದೆ. ಒಂದನೇಯದ್ದು ಬೆಟ್ಟಿಂಗ್‌ನಂತ ಚಟುವಟಿಕೆಗಳನ್ನು ತಡೆಯುವುದು. ಎರಡನೇಯದ್ದು ಅಂತಹ ವೇದಿಕೆಗಳಿಗೆ ಜಾಹೀರಾತು ಮಾಡುವುದು ಅಥವಾ ಪ್ರಚಾರ ಮಾಡುವುದಕ್ಕೆ ನಿರ್ಬಂಧ. ಮೂರನೇಯದ್ದು ಬ್ಯಾಂಕುಗಳು ಮತ್ತು ಪಾವತಿ ವ್ಯವಸ್ಥೆಗಳು ಆನ್‌ಲೈನ್‌ ಗೇಮ್‌ಗಳಿಗೆ ಸಂಬಂಧಿಸಿದಂತೆ ಹಣವನ್ನು ವರ್ಗಾವಣೆಗೆ ನಿಷೇಧ ಹೇರುತ್ತದೆ.

    ಶಿಕ್ಷೆ ಏನು?
    ಅಕ್ರಮ ಹಣದ ಗೇಮಿಂಗ್ ಮಾಡಿದ್ದು ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು / ಅಥವಾ 1 ಕೋಟಿ ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ಆನ್‌ಲೈನ್‌ ಗೇಮ್‌ಗಳಿಗೆ ಜಾಹೀರಾತು ಮಾಡಿದವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು / ಅಥವಾ 50 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಬಹುದು. ಸಂಬಂಧಿತ ವಹಿವಾಟುಗಳಲ್ಲಿ ಭಾಗಿಯಾಗಿರುವ ಹಣಕಾಸು ಸಂಸ್ಥೆಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ ಅಥವಾ 1 ಕೋಟಿ ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.

    ಒಂದು ವೇಳೆ ಮತ್ತೊಮ್ಮೆ ಈ ಅಪರಾಧ ಎಸಗಿದ್ದಲ್ಲಿ ದೀರ್ಘಾವಧಿಯ ಜೈಲು ಶಿಕ್ಷೆ ಮತ್ತು ಹೆಚ್ಚಿನ ದಂಡ ಸೇರಿದಂತೆ ಕಠಿಣ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ.

    ಈ ಅಪರಾಧ ಎಸಗಿದ್ದಲ್ಲಿ ಜಾಮೀನು ಸಿಗುವುದಿಲ್ಲ. ಶಂಕಿತ ಪ್ರಕರಣಗಳಲ್ಲಿ ತನಿಖೆ ಮಾಡಲು, ಶೋಧಿಸಲು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ವಾರಂಟ್ ಇಲ್ಲದೆ ಬಂಧಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗುತ್ತದೆ.

    ಆನ್‌ಲೈನ್‌ ಗೇಮ್‌ ಆಡಿದವರನ್ನು ಅಪರಾಧಿಗಳೆಂದು ಪರಿಗಣಿಸುವುದಿಲ್ಲ. ಬದಲಾಗಿ ಇವರನ್ನು ಬಲಿಪಶುಗಳು ಎಂದು ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿದೆ.

    ನಾವು ‘ಸೂಕ್ತ ಜಾಗರೂಕತೆ’ ವಹಿಸಿದ್ದೇವೆ ಎಂದು ಸಾಬೀತುಪಡಿಸದ ಹೊರತು, ಈ ಕಾಯ್ದೆಯ ಅಡಿಯಲ್ಲಿ ಬರುವ ಅಪರಾಧಗಳಿಗೆ ಕಂಪನಿಗಳು ಮತ್ತು ಅವುಗಳ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರದ ಸ್ವತಂತ್ರ ನಿರ್ದೇಶಕರು ಅಥವಾ ಕಾರ್ಯನಿರ್ವಾಹಕೇತರ ನಿರ್ದೇಶಕರಿಗೆ ರಕ್ಷಣೆ ನೀಡಲಾಗಿದೆ.

     

    ಇ-ಸ್ಪೋರ್ಟ್ಸ್ ಕಾರ್ಯಕ್ರಮಗಳನ್ನು ಆಯೋಜಿಸಲು ಬೇಕಾದ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಕ್ರೀಡಾ ಸಚಿವಾಲಯದಿಂದ ರೂಪಿಸಲಾಗುತ್ತದೆ. ಇ-ಸ್ಪೋರ್ಟ್ಸ್‌ನ ಪ್ರಗತಿಗಾಗಿ ತರಬೇತಿ ಅಕಾಡೆಮಿಗಳು, ಸಂಶೋಧನಾ ಕೇಂದ್ರಗಳು ಮತ್ತು ತಂತ್ರಜ್ಞಾನ ವೇದಿಕೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.

  • ವಿಮಾನಕ್ಕಿಂತ ಎರಡು ಪಟ್ಟು ವೇಗ – ಏನಿದು ಹೈಪರ್‌ಲೂಪ್?

    ವಿಮಾನಕ್ಕಿಂತ ಎರಡು ಪಟ್ಟು ವೇಗ – ಏನಿದು ಹೈಪರ್‌ಲೂಪ್?

    ದಿನದಿಂದ ದಿನಕ್ಕೆ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಲೇ ಇದೆ. ದಿನಕ್ಕೊಂದು ಆವಿಷ್ಕಾರಗಳ ಮೂಲಕ ತಂತ್ರಜ್ಞಾನ ಕ್ಷೇತ್ರ ಸದಾ ಸುದ್ದಿಯಲ್ಲಿರುತ್ತದೆ. ಇಷ್ಟು ದಿನ ನಾವೆಲ್ಲಾ ರಸ್ತೆ ಸಾರಿಗೆ, ಹಡಗು, ರೈಲು ಹಾಗೂ ವಿಮಾನದಲ್ಲಿ ಸಂಚರಿಸುತ್ತಿದ್ದೆವು. ಆದರೆ ಈಗ ಅದಕ್ಕೂ ಮೀರಿದ ವೇಗದಲ್ಲಿ ಹೋಗಬಹುದಾದ ಐದನೇ ಮಾದರಿಯ ಸಂಚಾರ ಸಾಧನವನ್ನು ಕಂಡುಹಿಡಿದಿದ್ದು, ಪಾಯೋಗಿಕ ಪರೀಕ್ಷೆ ಕೂಡ ಯಶಸ್ವಿಯಾಗಿದೆ.

    ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್‌ನಲ್ಲಿ ನಿರ್ಮಿಸಲಾದ ತನ್ನ ಮೊದಲ ಹೈಪರ್‌ಲೂಪ್ ಪರೀಕ್ಷಾ ಟ್ರ್ಯಾಕ್, ಆವಿಷ್ಕಾರ್ ಹೈಪರ್‌ಲೂಪ್ ಅನ್ನು ಅನಾವರಣಗೊಳಿಸುವ ಮೂಲಕ ಭಾರತ ಸಾರಿಗೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ ಐಐಟಿ ಮದ್ರಾಸ್, ಭಾರತದ ಮೊದಲ ಹೈಪರ್‌ಲೂಪ್ ಪರೀಕ್ಷಾ ಹಳಿಯನ್ನು ಅಭಿವೃದ್ಧಿಪಡಿಸಿದೆ.

    ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಈ ಅಭಿವೃದ್ಧಿಯ ಬಗ್ಗೆ  ಹರ್ಷ ವ್ಯಕ್ತಪಡಿಸಿದರು. ಈ ಆರಂಭಿಕ ಪರೀಕ್ಷಾ ಹಳಿ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕವಾಗಿದೆ ಎಂದು ಹೇಳಿದರು. ಈ ವಿಚಾರವಾಗಿ ಅಶ್ವಿನಿ ವೈಷ್ಣವ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಸರ್ಕಾರ-ಶೈಕ್ಷಣಿಕ ಸಹಯೋಗವು ಭವಿಷ್ಯದ ಸಾರಿಗೆಯಲ್ಲಿ ನಾವೀನ್ಯತೆಗೆ ಚಾಲನೆ ನೀಡುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ.

    422 ಮೀಟರ್ ಉದ್ದದ ಈ ಸೌಲಭ್ಯವನ್ನು ರೈಲ್ವೆ ಸಚಿವಾಲಯದ ಬೆಂಬಲ ಮತ್ತು ಎಲ್& ಟಿ ಕನ್ಸ್ಟ್ರಕ್ಷನ್ಸ್ ಸೇರಿದಂತೆ ಹಲವಾರು ಪಾಲುದಾರರ ಪ್ರಯತ್ನಗಳಿಂದ ಅಭಿವೃದ್ಧಿಪಡಿಸಲಾಗಿದೆ. 

    ಈ ಯೋಜನೆಯನ್ನು ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ರೈಲ್ವೆ ಸಚಿವಾಲಯದ ಫಂಡ್​ನೊಂದಿಗೆ ಹಮ್ಮಿಕೊಳ್ಳಲಾಗಿದೆ. 422 ಮೀಟರ್‌ಗಳ ಮೊದಲ ಪಾಡ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇನ್ನಷ್ಟು ಸಮಯ ಬೇಕಾಗಲಿದೆ. ಮೊದಲ ಎರಡು ಹಂತದ ಫಂಡ್ ಈಗಾಲೇ ಬಿಡುಗಡೆ ಮಾಡಲಾಗಿತ್ತು. ಇದೀಗ ಹೈಪರ್‌ಲೂಪ್ ಯೋಜನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಕ್ಕಾಗಿ ಒಂದು ಮಿಲಿಯನ್ ಡಾಲರ್‌ಗಳ ಅನುದಾನದ ಮೂರನೇ ಕಂತನ್ನು ಐಐಟಿ ಮದ್ರಾಸ್‌ಗೆ ನೀಡುವ ಸಮಯ ಬಂದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

    ತಂತ್ರಜ್ಞಾನವನ್ನು ಸಂಪೂರ್ಣವಾಗಿ ಪರೀಕ್ಷಿಸಿ ಸಿದ್ಧವಾದ ನಂತರ ಭಾರತೀಯ ರೈಲ್ವೆ ಮೊದಲ ವಾಣಿಜ್ಯ ಯೋಜನೆಯನ್ನು ಪ್ರಾರಂಭಿಸಲಿದೆ. ಹೈಪರ್‌ಲೂಪ್ ತಂತ್ರಜ್ಞಾನದಲ್ಲಿ ವಿಮಾನಕ್ಕಿಂತ ಎರಡು ಪಟ್ಟು ವೇಗದಲ್ಲಿ ಸಂಚರಿಸಬಹುದಾಗಿದೆ. ಕಡಿಮೆ ವಿದ್ಯುತ್ ಬಳಕೆ ಮತ್ತು 24 ಗಂಟೆಗಳ ಕಾರ್ಯಾಚರಣೆಗೆ ಶಕ್ತಿ ಸಂಗ್ರಹಣೆಯೊಂದಿಗೆ ಇದು ಕಾರ್ಯಾಚರಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹೈಪರ್‌ಲೂಪ್ ಎಂದರೇನು?
    ʼಐದನೇ ಸಾರಿಗೆ ವಿಧಾನʼ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಹೈಪರ್‌ಲೂಪ್, ದೂರದ ಪ್ರಯಾಣದಲ್ಲಿ ಕ್ರಾಂತಿಯನ್ನುಂಟುಮಾಡುವ ಒಂದು ಹೈ-ಸ್ಪೀಡ್ ಸಾರಿಗೆ ವ್ಯವಸ್ಥೆಯಾಗಿದೆ. ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಕ್ಯಾಪ್ಸುಲ್‌ಗಳು ಅಥವಾ ಪಾಡ್‌ಗಳನ್ನು ಕಡಿಮೆ ಗಾಳಿಯ ಪ್ರತಿರೋಧದೊಂದಿಗೆ ಮುಂದೂಡಲು ನಿರ್ವಾತ ಟ್ಯೂಬ್‌ಗಳನ್ನು ಬಳಸುತ್ತದೆ.ಈ  ಕ್ಯಾಪ್ಸುಲ್‌ಗಳು ಗಂಟೆಗೆ 1,000 ಕಿಮೀಗಿಂತ ಹೆಚ್ಚಿನ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ.

    ಸರಳವಾಗಿ ಹೇಳುವುದಾದರೆ, ಹೈಪರ್‌ಲೂಪ್ ನಿರ್ವಾತ ಕೊಳವೆಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಗಾಳಿಯ ಒತ್ತಡವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.  ಈ ಕೊಳವೆಗಳೊಳಗೆ ಅಮಾನತುಗೊಂಡಿರುವ ಕ್ಯಾಪ್ಸುಲ್‌ಗಳು ಪ್ರಯಾಣಿಸಲು ಮ್ಯಾಗ್ನೆಟಿಕ್ ಲೆವಿಟೇಶನ್ ಅಥವಾ ವಿದ್ಯುತ್ಕಾಂತೀಯ ಪ್ರೊಪಲ್ಷನ್ ಅನ್ನು ಬಳಸುತ್ತವೆ. ಈ ವ್ಯವಸ್ಥೆಯು ಸಾಮಾನ್ಯವಾಗಿ ವಾಹನಗಳನ್ನು ನಿಧಾನಗೊಳಿಸುವ ಘರ್ಷಣೆ ಮತ್ತು ಎಳೆತವನ್ನು ನಿವಾರಿಸುತ್ತದೆ, ಇದು ಅಭೂತಪೂರ್ವ ವೇಗವನ್ನು ಸಕ್ರಿಯಗೊಳಿಸುತ್ತದೆ.

    ಪ್ರತಿಯೊಂದು ಪಾಡ್ 24-28 ಪ್ರಯಾಣಿಕರನ್ನು ಹೊತ್ತೊಯ್ಯಬಹುದು ಮತ್ತು ಯಾವುದೇ ನಿಲ್ದಾಣಗಳಿಲ್ಲದೆ ನೇರವಾಗಿ ಗಮ್ಯಸ್ಥಾನಗಳ ನಡುವೆ ಪ್ರಯಾಣಿಸಬಹುದು. ಇದು ಹೈಪರ್‌ಲೂಪ್ ಅನ್ನು ಹೆಚ್ಚು ಪರಿಣಾಮಕಾರಿ ಸಾರಿಗೆ ಆಯ್ಕೆಯನ್ನಾಗಿ ಮಾಡುತ್ತದೆ, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

    ಹೈಪರ್‌ಲೂಪ್ ಎಷ್ಟು ವೇಗವಾಗಿ ಹೋಗಬಹುದು?
    ಹೈಪರ್‌ಲೂಪ್‌ನ ಅತ್ಯಂತ ರೋಮಾಂಚಕಾರಿ ವೈಶಿಷ್ಟ್ಯವೆಂದರೆ ಅದರ ವೇಗ. ಈ ವ್ಯವಸ್ಥೆಯು ಗಂಟೆಗೆ 1,200 ಕಿ.ಮೀ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ, ಇದು ಸಾಂಪ್ರದಾಯಿಕ ರೈಲುಗಳು ಅಥವಾ ವಾಣಿಜ್ಯ ವಿಮಾನಗಳಿಗಿಂತ ಹೆಚ್ಚು ವೇಗವಾಗಿರುತ್ತದೆ.

    ಉದಾಹರಣೆಗೆ, ದೆಹಲಿಯಿಂದ ಮುಂಬೈಗೆ (ಸುಮಾರು 1,500 ಕಿ.ಮೀ) ಪ್ರಯಾಣವನ್ನು ಕೇವಲ 90 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು, ಆದರೆ ದೆಹಲಿಯಿಂದ ಜೈಪುರಕ್ಕೆ (ಸುಮಾರು 300 ಕಿ.ಮೀ) ಪ್ರಯಾಣವು ಕೇವಲ 30 ನಿಮಿಷಗಳಷ್ಟನ್ನು ತೆಗೆದುಕೊಳ್ಳಬಹುದು.

    ಭಾರತದಲ್ಲಿ ಹೈಪರ್‌ಲೂಪ್ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಅದರ ಸಾಮರ್ಥ್ಯ ಅಗಾಧವಾಗಿದೆ. ಪರೀಕ್ಷಾ ಟ್ರ್ಯಾಕ್‌ನ ಅಭಿವೃದ್ಧಿ ಮತ್ತು ಆವಿಷ್ಕಾರ್ ತಂಡದ ನಡೆಯುತ್ತಿರುವ ಕೆಲಸಗಳು ಭಾರತದಲ್ಲಿ ಅತಿ ವೇಗದ ಪ್ರಯಾಣದ ಕನಸನ್ನು ನನಸಾಗಿಸುವತ್ತ ನಿರ್ಣಾಯಕ ಹೆಜ್ಜೆಗಳಾಗಿವೆ.

    ಜಾಗತಿಕವಾಗಿ, ಹೈಪರ್‌ಲೂಪ್ ಪರಿಕಲ್ಪನೆಯನ್ನು ಮೊದಲು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು 2013 ರಲ್ಲಿ ‘ಹೈಪರ್‌ಲೂಪ್ ಆಲ್ಫಾ’ ಎಂದು ಪರಿಚಯಿಸಿದರು. ಭಾರತದಲ್ಲಿ ಈಗಾಗಲೇ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಯೋಜನೆ ಜಾರಿಯಾಗಬಹುದು. ಮೊದಲ ಯೋಜನೆ ಮುಂಬೈ ಹಾಗೂ ಪುಣೆ ನಡುವೆ ಜಾರಿಯಾಗಲಿದೆ. ಅದಾದ ಮೇಲೆ ಅನೇಕ ನಗರಗಳಿಗೆ ಅದನ್ನು ವಿಸ್ತರಿಸಲಾಗುತ್ತದೆ. ಭಾರತದಲ್ಲಿ ವರ್ಜಿನ್ ಕಂಪನಿಯು ಹೈಪರ್ ಲೂಪ್ ತಂತ್ರಜ್ಞಾನವನ್ನು ತರಲಿದೆ.

    1992ರಲ್ಲಿ ಸ್ವಿಜರ್ಲೆಂಡ್ ನಲ್ಲಿ ಮೊದಲು ಹೈಪರ್ ಲೂಪ್ ತಂತ್ರಜ್ಞಾನ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಲಾಗಿತ್ತು. ಆದರೆ, ಆಗ ಇತರ ದೇಶಗಳಿಗೆ ಅದರ ಪ್ರಾಮುಖ್ಯತೆ ಗೊತ್ತಾಗಲಿಲ್ಲ. ಆದರೆ, ಜನಸಂಖ್ಯೆ ಹೆಚ್ಚಾಗಿ, ನಗರಗಳು ಅಭಿವೃದ್ಧಿಯಾಗಿ, ವ್ಯಾಪಾರ ವ್ಯವಹಾರಗಳು ದೊಡ್ಡ ಮಟ್ಟದಲ್ಲಿ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ವೇಗವಾಗಿ ಸಾಗುವ ಸಾರಿಗೆ ವ್ಯವಸ್ಥೆಗಳು ಇಂದಿನ ಜಗತ್ತಿಗೆ ಅನಿವಾರ್ಯವಾಗಲಿವೆ. ಈಗಾಗಲೇ ಸ್ವಿಟ್ಜರ್ಲೆಂಡ್, ಅಮೆರಿಕ, ಇಟಲಿ, ನೆದರ್‌ಲೆಂಡ್‌ ಸೇರಿ ಜಗತ್ತಿನ ಏಳು ರಾಷ್ಟ್ರಗಳು ಹೈಪರ್ ಲೂಪ್ ರೈಲು ವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡಿವೆ. ಭಾರತ ಆ ವ್ಯವಸ್ಥೆ ಅಳವಡಿಸಿಕೊಂಡ ಎಂಟನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.

  • ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

    ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಕೇಂದ್ರ ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಹೇಳಿದ್ದಾರೆ.

    ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋ ಸಂಬಂಧಿತ ಎಲ್ಲಾ ಜವಾಬ್ದಾರಿಗಳೂ ರಾಜ್ಯ ಸರ್ಕಾರಕ್ಕೆ ಬರಲಿದೆ. ಮೆಟ್ರೋ ದರ ಏರಿಕೆ ಸಮಿತಿ ದೆಹಲ್ಲಿ ಇಲ್ಲ. ಕರ್ನಾಟಕದಲ್ಲಿ (Karnataka) ಇದೆ. ನಾವು ದರ ಏರಿಕೆ ಮಾಡಿದ್ದೇವೆ ಅನ್ನೋದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: 100% ದರ ಏರಿಕೆಯಾದ ಕಡೆ ಕೇವಲ 10 ರೂ. ಇಳಿಕೆ – 50% ಹೇಳಿ 70% ಏರಿಸಿದ BMRCL | ಹಿಂದೆ ಎಷ್ಟಿತ್ತು? ಈಗ ಎಷ್ಟು ಇಳಿಕೆ?

    ಇದು ಕರ್ನಾಟಕ ಮಾತ್ರ ಅಲ್ಲ. , ಚೆನ್ನೈ, ದೆಹಲಿ, ಹೈದರಾಬಾದ್‌, ಮುಂಬೈಗಳಲ್ಲೂ ಇದೇ ರೀತಿಯಾಗಿದೆ. ಮೆಟ್ರೋ ಯೋಜನೆಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತವೆ. ರಾಜ್ಯ ಸರ್ಕಾರಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ ಎಂದು ಹೇಳಿದರು.

    ಮೆಟ್ರೋ‌ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ. ದರ ಏರಿಕೆ ಪ್ರಸ್ತಾವನೆ ನೀಡಿದ್ದೇ ರಾಜ್ಯ ಸರ್ಕಾರ. ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ದರ ಏರಿಕೆಗೆ ಸೂಚನೆ ನೀಡಿಲ್ಲ. ಇದು ತಪ್ಪು ಆರೋಪ ಎಂದು ದೂರಿದರು.

  • ಲೋಕಸಭೆಯಲ್ಲಿ ರೈಲ್ವೇ ತಿದ್ದುಪಡಿ ಮಸೂದೆ 2024 ಅಂಗೀಕಾರ

    ಲೋಕಸಭೆಯಲ್ಲಿ ರೈಲ್ವೇ ತಿದ್ದುಪಡಿ ಮಸೂದೆ 2024 ಅಂಗೀಕಾರ

    ನವದೆಹಲಿ: ಲೋಕಸಭೆಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರೈಲ್ವೆ (ತಿದ್ದುಪಡಿ) ಮಸೂದೆ-2024 ಬುಧವಾರ ಅಂಗೀಕರಿಸಿತು.

    ತಿದ್ದುಪಡಿಯು ಪ್ರಾಥಮಿಕವಾಗಿ ರೈಲ್ವೇ ಮಂಡಳಿಗೆ ಶಾಸನಬದ್ಧ ಅಧಿಕಾರವನ್ನು ನೀಡುತ್ತದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಆ.9 ಇದನ್ನು ಪರಿಚಯಿಸಿದ್ದರು. ಇದನ್ನೂ ಓದಿ: ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ಸದಸ್ಯರ ಸಂಖ್ಯೆ, ಅವರ ವಿದ್ಯಾರ್ಹತೆ, ಅನುಭವ ಮತ್ತು ಸೇವಾ ನಿಯಮಗಳು ಸೇರಿದಂತೆ ರೈಲ್ವೆ ಮಂಡಳಿಯ ಸಂಯೋಜನೆಯನ್ನು ನಿರ್ಧರಿಸಲು ಕೇಂದ್ರ ಸರ್ಕಾರದ ಅಧಿಕಾರಕ್ಕೆ ನೀಡುವ ನಿಬಂಧನೆಗಳನ್ನು ಸೇರಿಸಲು ಮಸೂದೆಯನ್ನು ತಿದ್ದುಪಡಿ ಮಾಡಲಾಗಿದೆ. ರೈಲ್ವೆ ಮಂಡಳಿಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

    ಇದು ಈಗ ಬಿಹಾರದ ಥಾವೆ ಜಂಕ್ಷನ್ ಮೂಲಕ ಸೂಪರ್‌ಫಾಸ್ಟ್ ರೈಲುಗಳ ಕಾರ್ಯಾಚರಣೆ, ವಿಸ್ತರಣೆ ಅಥವಾ ಮರುಮಾರ್ಗವನ್ನು ಅನುಮೋದಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಅಲ್ಲದೇ, ಅರುಣಾಚಲ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 22411/22412) ಅನ್ನು ಸಿವಾನ್, ಥಾವೆ, ಕಪ್ತಂಗಂಜ್ ಮತ್ತು ಗೋರಖ್‌ಪುರ ಮೂಲಕ ಮರುಹೊಂದಿಸುವುದನ್ನು ಒಳಗೊಂಡಿದೆ. ಇದನ್ನೂ ಓದಿ: ಶರಾವತಿ ಜಲವಿದ್ಯುತ್‌ ಯೋಜನೆ – ಸಂಸತ್‌ನಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ

    ವಲಸೆ ಕಾರ್ಮಿಕರು ಮತ್ತು ಯಾತ್ರಾರ್ಥಿಗಳು ಸೇರಿದಂತೆ ಸ್ಥಳೀಯ ಜನರಿಗೆ ನಿರ್ಣಾಯಕವಾಗಿರುವ ಥಾವೆ ಜಂಕ್ಷನ್ ಮತ್ತು ದೆಹಲಿಯಂತಹ ಪ್ರಮುಖ ನಗರಗಳ ನಡುವೆ ನೇರ ರೈಲು ಸಂಪರ್ಕದ ಕೊರತೆಯನ್ನು ಪರಿಹರಿಸುವ ಗುರಿಯನ್ನು ಈ ತಿದ್ದುಪಡಿ ಹೊಂದಿದೆ. ಈ ತಿದ್ದುಪಡಿಯು ಈ ರೈಲು ಸೇವೆಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

  • ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ – 45 ದಿನಗಳಲ್ಲಿ 13,000 ರೈಲುಗಳ ಸಂಚಾರ

    ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ – 45 ದಿನಗಳಲ್ಲಿ 13,000 ರೈಲುಗಳ ಸಂಚಾರ

    – ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

    ಲಕ್ನೋ: ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗ್‌ರಾಜ್‌ನಲ್ಲಿ (Prayagraj) ಮಹಾ ಕುಂಭಮೇಳ (Maha Kumbh Mela) ನಡೆಯಲಿದೆ. ಈ ಹಿನ್ನೆಲೆ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು 3,000 ವಿಶೇಷ ರೈಲುಗಳನ್ನು ಒಳಗೊಂಡಂತೆ 45 ದಿನಗಳಲ್ಲಿ ಒಟ್ಟು 13,000 ರೈಲುಗಳು (Train) ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    ಮಹಾಕುಂಭ ಮೇಳದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮಹಾ ಕುಂಭಕ್ಕಾಗಿ ನಾಲ್ಕು ರಿಂಗ್ ರೈಲ್ ಸರ್ಕಲ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಾರಣಾಸಿ-ಪ್ರಯಾಗ್‌ರಾಜ್, ಪ್ರಯಾಗ್‌ರಾಜ್-ಅಯೋಧ್ಯೆ, ಅಯೋಧ್ಯೆ-ಕಾಶಿ ಮತ್ತು ಪ್ರಯಾಗ್‌ರಾಜ್ ಸರ್ಕಲ್ ಸೇರಿವೆ. ದೇಶದ ವಿವಿಧ ರಾಜ್ಯಗಳ 50 ನಗರಗಳಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿದೆ ಎಂದರು. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾದ 10ರ ಬಾಲಕ

     

    ಮಹಾ ಕುಂಭಮೇಳದ ಅವಧಿಯಲ್ಲಿ 18,000 ಆರ್‌ಪಿಎಫ್ ಮತ್ತು ಜಿಆರ್‌ಪಿ ಯೋಧರನ್ನು ನಿಯೋಜಿಸಲಾಗಿದೆ. ಇದರಲ್ಲಿ ಆರ್‌ಪಿಎಫ್ ಯೋಧರ ಸಂಖ್ಯೆ 8,000 ಮತ್ತು ಜಿಆರ್‌ಪಿ ಸೈನಿಕರ ಸಂಖ್ಯೆ 10,000 ಇರಲಿದೆ. ಇದಲ್ಲದೇ ದೇಶಾದ್ಯಂತ 13,000 ರೈಲ್ವೆ ಅಧಿಕಾರಿಗಳು ಮತ್ತು ನೌಕರರನ್ನು ಇಲ್ಲಿಗೆ ನಿಯೋಜಿಸಲಾಗುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮರಾಠಿ, ಗುಜರಾತಿ ಇತ್ಯಾದಿ ಮಾತನಾಡಬಲ್ಲ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೊನೆಗೂ ಪಂಚಮಸಾಲಿ ಹೋರಾಟಕ್ಕೆ ಬೆಳಗಾವಿ ಜಿಲ್ಲಾಡಳಿತ ಅನುಮತಿ

    ಇನ್ನು ಪ್ರಯಾಗ್‌ರಾಜ್‌ನಲ್ಲಿ ಮೊದಲ ಬಾರಿಗೆ ಮೊಬೈಲ್ ಅನ್ ರಿಸರ್ವ್ಡ್ ಟಿಕೆಟ್ ಸಿಸ್ಟಂ (UTS) ಅನ್ನು ಪರಿಚಯಿಸಲಾಗಿದೆ. ಇದಕ್ಕೂ ಮೊದಲು ಪುರಿಯಲ್ಲಿ ರಥಯಾತ್ರೆಯ ಸಮಯದಲ್ಲಿ ಈ ಸಿಸ್ಟಂ ಅನ್ನು ಬಳಸಲಾಗಿತ್ತು. ಮಹಾ ಕುಂಭದ ಸಿದ್ಧತೆಗಾಗಿ ಕಳೆದ 2 ವರ್ಷಗಳಿಂದ 5,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಳಸಲಾಗಿದೆ ಎಂದು ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ಮಿಕರ ಮೇಲೆ ಕಾಡಾನೆ ದಾಳಿ – ನಾಲ್ವರಿಗೆ ಗಾಯ

  • ಮಾಹಿತಿ , ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕಾರ

    ಮಾಹಿತಿ , ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕಾರ

    ನವದೆಹಲಿ: ರೈಲ್ವೇ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ (Ashwini Vaishnav) ಅಧಿಕಾರ ಸ್ವೀಕರಿಸಿದ್ದಾರೆ.

    ಎರಡನೇ ಬಾರಿ ರೈಲ್ವೇ ಸಚಿವರಾಗಿ ರೈಲು ಭವನದಲ್ಲಿ (Railway Bhawan) ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಈ ಅವಕಾಶವನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸೇವೆ ಸಲ್ಲಿಸಲು ಜನರು ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ಅಧಿಕಾರಾವಧಿಯ ಮೊದಲ ದಿನವೇ ಪ್ರಧಾನಿ ಬಡವರಿಗೆ ಮತ್ತು ರೈತರಿಗೆ ಸಮರ್ಪಿತವಾದ ನಿರ್ಧಾರಗಳು ಪ್ರಕಟಿಸಿದ್ದಾರೆ ಎಂದರು. ಇದನ್ನೂ ಓದಿ: ದರ್ಶನ್‌ ಟೀಂ ರೌದ್ರವತಾರಕ್ಕೆ ನರಳಿ ನರಳಿ ಪ್ರಾಣಬಿಟ್ಟ ರೇಣುಕಾಸ್ವಾಮಿ!

  • ‘ತಿರುವನಂತಪುರಂ-ಕಾಸರಗೋಡು’ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೂ ವಿಸ್ತರಣೆ

    ‘ತಿರುವನಂತಪುರಂ-ಕಾಸರಗೋಡು’ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೂ ವಿಸ್ತರಣೆ

    ಮಂಗಳೂರು: ತಿರುವನಂತಪುರಂ-ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಮನವಿಯ ಮೇರೆಗೆ ಮಂಗಳೂರಿನವರೆಗೆ (Mangaluru) ವಿಸ್ತರಣೆ ಮಾಡಲಾಗಿದೆ.

    ಇಂದು (ಫೆ.21) ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದ ಪ್ರಕಾರ, ವಂದೇ ಭಾರತ್ ರೈಲು ಇನ್ನು ಮುಂದೆ ತಿರುವನಂತಪುರ-ಮಂಗಳೂರು ನಡುವೆ ಸಂಚರಿಸಲಿದೆ. ಹೊಸ ರೈಲ್ವೆ ವೇಳಾ ಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06:15ಕ್ಕೆ ಹೊರಟು ಅಪರಾಹ್ನ 3:05ಕ್ಕೆ ತಿರುವನಂತಪುರಂ ಅನ್ನು ತಲುಪಲಿದೆ. ಹಾಗೆಯೇ ತಿರುವನಂತಪುರಂನಿಂದ ಸಂಜೆ 4:05ಕ್ಕೆ ಹೊರಟು ಮಂಗಳೂರನ್ನು ರಾತ್ರಿ 12:40ಕ್ಕೆ ತಲುಪಲಿದೆ.

    ಬುಧವಾರ ಹೊರತು ಪಡಿಸಿ ವಾರದ 6 ದಿನಗಳೂ ವಂದೇ ಭಾರತ್ ರೈಲು ಸಂಚರಿಸಲಿದೆ. ಸಂಸದರ ಮನವಿ ಪುರಸ್ಕರಿಸಿ ವಂದೇ ಭಾರತ್ ರೈಲನ್ನು ಮಂಗಳೂರುವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnav) ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

  • ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ನವದೆಹಲಿ : ವಿರೋಧ ಪಕ್ಷಗಳ ನಾಯಕರ ಐಫೋನ್‌ಗೆ ಹ್ಯಾಕಿಂಗ್ (iPhone Hack) ಸಂದೇಶ ಬಂದಿರುವ ತಾಂತ್ರಿಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಕೆಲವು ಏಜೆನ್ಸಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದಾರೆ.

    ವಿಪಕ್ಷಗಳ ಆರೋಪದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಸಂಸದರು ಆಪಲ್‌ನಿಂದ ಎಚ್ಚರಿಕೆ ಸಂದೇಶ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಆ್ಯಪಲ್‌ (Apple) ಭಾರತದಲ್ಲಿ ಮಾತ್ರ ಇಂತಹ ಸಂದೇಶ ಕಳುಹಿಸಿಲ್ಲ ಬದಲಿಗೆ ಸುಮಾರು 150 ದೇಶಗಳ ಜನರಿಗೆ ಎಚ್ಚರಿಕೆ ಸೂಚನೆಗಳನ್ನು ಕಳುಹಿಸಿದೆ. ಈ ನಡುವೆ ಐಫೋನ್ ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆ್ಯಪಲ್ ಸ್ಪಷ್ಟೀಕರಣವನ್ನು ನೀಡಿದೆ ಎಂದರು.  ಇದನ್ನೂ ಓದಿ: ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

     

    ಸರ್ಕಾರದ ವಿರುದ್ಧ ಆರೋಪ ಮಾಡಿದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ವೈಷ್ಣವ್, ದೇಶದ ಪ್ರಗತಿಯನ್ನು ನೋಡಲು ಬಯಸದ ಜನರು ಇಂತಹ ರಾಜಕೀಯದಲ್ಲಿ ತೊಡಗಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡುವ ಕೆಲವರು ಅವರ ಕುಟುಂಬ ಅಧಿಕಾರದಲ್ಲಿದ್ದಾಗ ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರು ಆದರೆ ನಮ್ಮ ಸರ್ಕಾರವು ಈ ವಿಷಯದ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ತಿರುಗೇಟು ನೀಡಿದರು.  ಇದನ್ನೂ ಓದಿ: ಕೇಂದ್ರದಿಂದ ಸಂಸದರ ಐಫೋನ್‌ ಕದ್ದಾಲಿಕೆ – ಆಪಲ್‌ ಕಂಪನಿಯಿಂದ ಹೇಳಿಕೆ ಬಿಡುಗಡೆ

    ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ-ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]