Tag: Ashwini Puneet Rajkumar

  • ಅಶ್ವಿನಿ ನಿಂದನೆ ಪೋಸ್ಟ್ ವಿಚಾರ: ಮೂರು ಠಾಣೆಗಳಲ್ಲಿ ದೂರು ದಾಖಲು

    ಅಶ್ವಿನಿ ನಿಂದನೆ ಪೋಸ್ಟ್ ವಿಚಾರ: ಮೂರು ಠಾಣೆಗಳಲ್ಲಿ ದೂರು ದಾಖಲು

    ಜಪಡೆ (Gajapade) ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ನಿರ್ಮಾಪಕಿ, ಪುನೀತ್ ರಾಜ್ ಕುಮಾರ್ ಬಗ್ಗೆ ನಿಂದನೆ ಪೋಸ್ಟ್ ಮಾಡಿರುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವರು ಈ ನಡೆಯನ್ನು ಖಂಡಿಸಿದ್ದಾರೆ. ಜೊತೆಗೆ ಅಪ್ಪು ಫ್ಯಾನ್ಸ್ ಕಾನೂನಾತ್ಮಕ ಹೋರಾಟಕ್ಕೂ ಮುಂದಾಗಿದ್ದಾರೆ. ಸದ್ಯ ಬಿಟಿಎಂ‌ ಲೇ ಔಟ್, ಜೆ ಪಿ ನಗರ ಹಾಗೂ ತಲಘಟ್ಟಪುರದ ಪೊಲೀಸ್ ಠಾಣೆಯಲ್ಲಿ ಗಜಪಡೆ ಖಾತೆಯ ವಿರುದ್ಧ ದೂರು (Complaint) ನೀಡಲಾಗಿದೆ.

    ಅಶ್ವಿನಿ (Ashwini Puneeth Rajkumar)  ಬಗ್ಗೆ ಅವಹೇಳನಕಾರಿ ಪೋಸ್ಟ್ (Post) ಮಾಡಿದವರ ವಿರುದ್ಧ ಕ್ರಮಕ್ಕೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ವಿರೋಧಿ ಪೋಸ್ಟ್ ಗಳು ಹರಿದಾಡುತ್ತಿವೆ. ಜೊತೆಗೆ ಸಿನಿಮಾ ರಂಗದ ಅನೇಕರು ಪೋಸ್ಟ್ ವಿರುದ್ಧ ಧ್ವನಿ ಎತ್ತಿದ್ದಾರೆ. ಈಗ ಅಪ್ಪು ಫ್ಯಾನ್ಸ್ ಗೃಹ ಸಚಿವರನ್ನು ಭೇಟಿ ಮಾಡಿ, ಕ್ರಮಕ್ಕಾಗಿ ಒತ್ತಾಯ ಮಾಡಿದ್ದಾರೆ. ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಕೂಡ ಕಠಿಣ ಕ್ರಮದ ಮಾತುಗಳನ್ನು ಆಡಿದ್ದಾರೆ.

    ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರ್‌ಸಿಬಿ ಸೋಲಿಗೆ ಅಶ್ವಿನಿ ಅವರೇ ಕಾರಣ ಎಂದು ನಿಂದಿಸಿದವರಿಗೆ ನವರಸನಾಯಕ ಜಗ್ಗೇಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಣ್ಣುಕುಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆಗ್ತಾರಾ ಎಂದು ಜಗ್ಗೇಶ್ (Jaggesh) ಹಿಡಿಶಾಪ ಹಾಕಿದ್ದಾರೆ.

    ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು. ತಾಯಿ ಬೆಲೆ ಗೊತ್ತಿರಬೇಕು. ಒಂದು ವೇಳೆ, ತಾಯಿ ಮತ್ತು ಹೆಣ್ಣಿಗೆ ಗೌರವ ಕೊಡಲ್ಲ ಎಂದರೆ ಖಂಡಿತಾ ಅಂಥವರು ಮನುಕುಲಕ್ಕೆ ಅನರ್ಹ. ಪುನೀತನ ಮಡದಿ ಅನಾಥಳಲ್ಲ ತನ್ನ ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ ಎಂದು ಜಗ್ಗೇಶ್ ಅಪ್ಪು ಅಭಿಮಾನಿಗಳ ಕಡೆ ತೋರಿಸಿದ್ದಾರೆ. ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ಧಾರ ಆದ ಇತಿಹಾಸವಿಲ್ಲ ಎಂದು ಜಗ್ಗೇಶ್ ಅಶ್ವಿನಿ ಪರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ಪ್ರತಿಕ್ರಿಯೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

    ಕಳೆದ ಮಾರ್ಚ್ ತಿಂಗಳು 19ನೇ ತಾರೀಕಿನಂದು ಬೆಂಗಳೂರಿನ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್‌ಸಿಬಿ ತಂಡ ಕೆಲ ಪಂದ್ಯಗಳಲ್ಲಿ ಸೋತಿದೆ. ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ಗಜಪಡೆ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಆರ್‌ಸಿಬಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತಂಡ ಸೋತಿದೆ ಎಂದು ನಿಂದಿಸಲಾಗಿದೆ. ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ‘ಸುದೀಪ್ ಅಭಿಮಾನಿ’ ಎಂದು ಖಾತೆಯ ಹೆಸರು ಬದಲಿಸಿದ್ದಾರೆ. ಇದರ ವಿರುದ್ಧ ಅಪ್ಪು ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಕಾನೂನು ಸಮರ ಸಾರಿದ್ದಾರೆ.

  • RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

    RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

    ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರುವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಅತ್ಯಂತ ಕೀಳುಮಟ್ಟಕ್ಕೆ ಹೋಗಿ ಅಭಿಮಾನದ ಪರಕಾಷ್ಟೇ ಮೆರೆಯುವಂತೆ ಕೆಲಸ ಆಗಿದೆ. ಆರ್.ಸಿ.ಬಿ ಸೋಲಿಗೆ ದೊಡ್ಮನೆ ಸೊಸೆಯನ್ನು ಟಾರ್ಗೆಟ್ ಮಾಡಿರುವ ಕೆಲವರು, ಪುನೀತ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneet Rajkumar) ಅವರನ್ನ ನಿಂದಿಸಿದ್ದಾರೆ ಕೆಲ ಕಿಡಿಗೇಡಿಗಳು.

    ಗಜಪಡೆ (Gajapade) ಹೆಸರಿನ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕೆಟ್ಟದಾಗಿ ನಿಂದನೆ ಮಾಡಲಾಗಿದ್ದು, ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದೆ ಈ ‘ಗಜಪಡೆ’ ಖಾತೆ. ಅಭಿಮಾನದ ನೆಪದಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದರಂತೆ ಅನೇಕರು ಈ ಗಜಪಡೆ ಖಾತೆಯನ್ನು ನಿರ್ವಹಿಸುತ್ತಿರುವವರ ಬಗ್ಗೆ ಗರಂ ಆಗಿದ್ದಾರೆ.

    ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸ್ ಕಮಿಷ್ನರ್ (Commissioner) ಭೇಟಿ ಮಾಡಿ ಈಗಾಗಲೇ ದೂರು (Complaints) ಕೂಡ ನೀಡಲಾಗಿದೆ.

    ಸಾಕಷ್ಟು ಬಾರಿ ಈ ಫ್ಯಾನ್ಸ್ ವಾರ್ ಕನ್ನಡದಲ್ಲಿ ನಡೆದಿದೆ. ಅದಕ್ಕೆ ಫುಲ್ ಸ್ಟಾಪ್ ಹಾಕುವಂತೆ ಸ್ವತಃ ದರ್ಶನ್ ಅವರೇ ಈ ಹಿಂದೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ತಮ್ಮ ಅಭಿಮಾನಿಗಳು ಯಾವುದೇ ಕಾರಣಕ್ಕೂ ಬೇರೆಯ ನಟರ ಅಥವಾ ಅಭಿಮಾನಿಗಳನ್ನು ನಿಂದಿಸಬಾರದು ಎಂದು ಮನವಿ ಮಾಡಿದ್ದರು. ಆದರೂ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇವೆ.

  • ದೊಡ್ಮನೆ ಸೊಸೆ ಭೇಟಿ ಮಾಡಿ ಸಹಕಾರ ಕೇಳಿದ ಸಂಸದೆ ಶೋಭಾ ಕರಂದ್ಲಾಜೆ

    ದೊಡ್ಮನೆ ಸೊಸೆ ಭೇಟಿ ಮಾಡಿ ಸಹಕಾರ ಕೇಳಿದ ಸಂಸದೆ ಶೋಭಾ ಕರಂದ್ಲಾಜೆ

    ಲೋಕಸಭೆ ಚುನಾವಣೆ (Lok Sabha Elections) ಘೋಷಿತ ಅಭ್ಯರ್ಥಿಗಳ ಮತಬೇಟೆ ಚಟುವಟಿಕೆಗಳು ಜೋರಾಗಿಯ ನಡೆಯುತ್ತಿವೆ. ತಮ್ಮ ಕ್ಷೇತ್ರದ ಪ್ರಭಾವಿತರ ಮನೆ ಮನೆಗೆ ತೆರಳುತ್ತಿರುವ ಅಭ್ಯರ್ಥಿಗಳು ಚುನಾವಣೆಗೆ ಅವರ ಸಹಕಾರವನ್ನು ಕೇಳುತ್ತಿದ್ದಾರೆ. ಹಾಗೆಯೇ ಸಂಸದೆ ಶೋಭಾ ಕರಂದ್ಲಾಜೆ ಕೂಡ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ  (Ashwini Puneet Rajkumar) ಅವರನ್ನು ಭೇಟಿ ಮಾಡಿದ್ದಾರೆ.

    ದೊಡ್ಮನೆ ಸೊಸೆಯನ್ನು ಭೇಟಿ ಮಾಡಿದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶೋಭಾ (Shobha Karandlaje), ನಮ್ಮ ಪಕ್ಷಕ್ಕೆ ಅವರ ಸಹಕಾರ ಕೇಳಿದ್ದೇವೆ. ಅಶ್ವಿನಿ ಅವರಿಗೆ ರಾಜಕೀಯ ಪಾರ್ಟಿ ಇಲ್ಲ. ಹಾಗಾಗಿ ನಿಮ್ಮ ಸಹಕಾರ, ಬೆಂಬಲ ಬೇಕು ಅಂತ ಕೇಳಿದ್ದೇವೆ. ಅವ್ರು ನಮ್ಮದೇ ಕ್ಷೇತ್ರದಲ್ಲಿದ್ದಾರೆ. ಪ್ರಚಾರದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ.

    ರಾಜಕಾರಣದ ವಿಚಾರದಲ್ಲಿ ಪುನೀತ್ ಯಾವತ್ತಿಗೂ ಹಿಂದೇಟು ಹಾಕುತ್ತಲೇ ಇದ್ದರು. ಸ್ವತಃ ಶಿವರಾಜ್ ಕುಮಾರ್ ಪತ್ನಿ ಚುನಾವಣೆಗೆ ನಿಂತಾಗಲೂ ಅವರು ಸಪೋರ್ಟ್ ಮಾಡಲಿಲ್ಲ. ರಾಜಕಾರಣದಿಂದ ಅಂತರ ಕಾಪಾಡಿಕೊಂಡೇ ಬಂದರು. ಅಶ್ವಿನಿ ಅವರು ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮನೆಗೆ ಬಂದವರನ್ನು ಸೌಜನ್ಯವಾಗಿ ಮಾತನಾಡಿಸಿದ್ದಾರೆ.

     

    ಈ ಕಡೆ ಶಿವರಾಜ್ ಕುಮಾರ್ ಪತ್ನಿ ಗೀತಾ ಕೂಡ ಈ ಬಾರಿ ಲೋಕಸಭೆಯ ಕಣದಲ್ಲಿ ಇದ್ದಾರೆ. ಶಿವಮೊಗ್ಗದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ದೊಡ್ಮನೆಯಲ್ಲೇ ರಾಜಕಾರಣದ ಬಗ್ಗೆ ಭಿನ್ನ ನಿಲುವುಗಳಿವೆ.

  • ಕೆರೆಬೇಟೆಯ ಹಾಡು ಬಿಡುಗಡೆಗೊಳಿಸಿದರು ಅಶ್ವಿನಿ ಪುನೀತ್ ರಾಜ್‌ಕುಮಾರ್!

    ಕೆರೆಬೇಟೆಯ ಹಾಡು ಬಿಡುಗಡೆಗೊಳಿಸಿದರು ಅಶ್ವಿನಿ ಪುನೀತ್ ರಾಜ್‌ಕುಮಾರ್!

    ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete) ಚಿತ್ರ ಬಿಡುಗಡೆಗೊಳ್ಳಲು ದಿನಗಣನೆ ಶುರುವಾಗಿದೆ. ಮಲೆನಾಡು ಸೀಮೆಯ ಭಾಷಾ ಸೊಗಡು, ಅಲ್ಲಿನದ್ದೇ ವಿಶಿಷ್ಟ ಕಥೆಯನ್ನೊಳಗೊಂಡಿರುವ ‘ಕೆರೆಬೇಟೆ’ ಈ ವಾರದ ಬಹುನಿರೀಕ್ಷಿತ ಚಿತ್ರವಾಗಿ ಈಗಾಗಲೇ ದಾಖಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಅಂಥಾದ್ದೊಂದು ಭರವಸೆಯನ್ನು ಪಸರಿಸುವಲ್ಲಿ ಗೆಲುವು ಕಂಡಿದೆ. ರಾಜಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡೊಂದು ಇದೀಗ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಒಂದು ಅಚ್ಚುಕಟ್ಟಾದ ಇವೆಂಟ್ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಈ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಚಿತ್ರತಂಡವೆಲ್ಲ ಭಾಗಿಯಾಗಿದ್ದ ಈ ಇವೆಂಟ್‌ಗೆ ಪ್ರೀತಿಯಿಂದ ಆಗಮಿಸಿದ ಅಶ್ವಿನಿ ಅವರು ‘ಕಣ್ಣುಗಳೇ ಕಳೆದು ಹೋದಾಗ’ ಎಂಬ ಹಾಡನ್ನು ಲೋಕಾರ್ಪಣೆಗೊಳಿಸಿದ್ದಾರೆ. ನಂತರ ಚಿತ್ರತಂಡದೊಂದಿಗೆ ಕಲೆತು ಸಂಭ್ರಮಿಸಿದ್ದಾರೆ. ಅಶ್ವಿನಿ ಬೆಂಬಲದಿಂದಾಗಿ ಬಿಡುಗಡೆಯ ಅಂಚಿನಲ್ಲಿ ‘ಕೆರೆಬೇಟೆ’ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಹಾಡುಗಳ ಮೂಲಕವೂ ಕೆರೆಬೇಟೆ ಕುತೂಹಲ ಮೂಡಿಸಿತ್ತು. ಈಗ ಲಾಂಚ್ ಆಗಹಿರುವ ಈ ಹಾಡಂತೂ ವಿರಹದ ಉರಿಯನ್ನು ಎದೆತುಂಬಾ ಹರವಿ ಕೂತಿರುವ ಯುವ ಮನಸುಗಳನ್ನು ಒಂದೇ ಸಲಕ್ಕೆ ಸೆಳೆಯುವಂತಿದೆ.

    ಇತ್ತೀಚಿನ ದಿನಗಳಲ್ಲಿ ‘ಕಾಂತಾರ’ (Kantara) ಖ್ಯಾತಿಯ ಪ್ರಮೋದ್ ಮರವಂತೆ (Pramod Maravante) ಚಿತ್ರ ಸಾಹಿತಿಯಾಗಿ ಮಿಂಚುತ್ತಿದ್ದಾರೆ. ಈ ಹಾಡಿಗೂ ಅವರೇ ಸಾಹಿತ್ಯ ಒದಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದ ಹಾಡುಗಳ ಸಾಲಿನಲ್ಲಿ ಈ ಗೀತೆ ಬೇರೆಯದ್ದೇ ಸ್ಥಾನ ಗಿಟ್ಟಿಸಿಕೊಳ್ಳುವಷ್ಟು ಶಕ್ತವಾಗಿ ಮೂಡಿ ಬಂದಿದೆ. ಮತ್ತೆ ಮತ್ತೆ ಗುನುಗಿಸಿಕೊಳ್ಳುವ ಛಾತಿ ಇರುವ ಈ ಹಾಡಿನ ಬಗ್ಗೆ ಮೆಚ್ಚುಗೆಯೂ ಮೂಡಿಕೊಳ್ಳಲಾರಂಭಿಸಿದೆ. ಒಟ್ಟಾರೆಯಾಗಿ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವ ಈ ಹೊತ್ತಿನಲ್ಲಿ, ಈ ಹಾಡಿನೊಂದಿಗೆ ಕೆರೆಬೇಟೆಯೆಡೆಗಿನ ಕೌತುಕ ಮತ್ತಷ್ಟು ತೀವ್ರಗೊಂಡಿದೆ.

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, `ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ಬೆಂಗಳೂರು ಕಂಬಳ : ಮೊದಲ ಕೆರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್

    ಬೆಂಗಳೂರು ಕಂಬಳ : ಮೊದಲ ಕೆರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್

    ದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳದ ಮೊದಲ ಕೆರೆ ಉದ್ಘಾಟನೆ ನಡೆದಿದೆ. ವಿಶೇಷ ದೀಪ ಬೆಳಗಿಸುವ ಮೂಲಕ ಕೆರೆಯನ್ನು ಉದ್ಘಾಟಿಸಿದ್ದಾರೆ ಪುನೀತ್ ಪತ್ನಿ ಅಶ್ವಿನಿ (Ashwini Puneet Rajkumar). ದೀಪಾ ಬೆಳಗಿಸಿ, ಗಂಗಾರಾತಿ ಮಾಡಿ ಕರೆಯನ್ನು ಉದ್ಘಾಟನೆ (Inauguration) ಮಾಡಲಾಗಿದೆ. ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ ಹಾಗೂ ಬೆಂಗಳೂರು ಕಂಬಳ ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

    ಕಂಬಳಕ್ಕೆ ತಾರೆಯರ ಸಾಥ್

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ (Bengaluru Kambala) ನಡೆಯುತ್ತಿದೆ. ಕಂಬಳಕ್ಕಾಗಿ ಅರಮನೆ ಮೈದಾನ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಇಂದು ಮತ್ತು ನಾಳೆ ನಡೆಯಲಿರುವ ಕಂಬಳಕ್ಕೆ ಅನುಷ್ಕಾ ಶೆಟ್ಟಿ (Anushka Shetty), ರಿಷಬ್ ಶೆಟ್ಟಿ, ಪೂಜಾ ಹೆಗ್ಡೆ, ವಿವೇಕ್ ಒಬೆರಾಯ್, ಸೇರಿದಂತೆ ಹಲವು ತಾರೆಯರು ಮೆರಗು ನೀಡಲಿದ್ದಾರೆ.

    ಕರಾವಳಿ ಕಂಬಳ ಉತ್ಸವಕ್ಕೆ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ನಟ ದರ್ಶನ್ ಕಾಂತಾರ ಹೀರೋ ರಿಷಬ್(Rishab Shetty), ರಕ್ಷಿತ್ ಶೆಟ್ಟಿ, ಉಪೇಂದ್ರ, ಶಿವಣ್ಣ, ಆಶಿಶ್ ಬಲ್ಲಾಳ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗುತ್ತಿದ್ದಾರೆ.

    ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಬೃಹತ್ ವೇದಿಕೆ ಇದಾಗಲಿದೆ ಎಂದರು. ಇಂದಿನ ಸಮಾಲೋಚನಾ ಸಭೆಯಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು, ಅವರೊಂದಿಗೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲಾಗಿದೆ.

     

    ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಕಂಬಳ ತಂಡ ತಿಳಿಸಿದೆ.

  • ‘ಚಿಕ್ಕಿಯ ಮೂಗುತಿ’ಗೆ ಬೆನ್ನು ತಟ್ಟಿದ ಅಶ್ವಿನಿ ಪುನೀತ್ ರಾಜಕುಮಾರ್

    ‘ಚಿಕ್ಕಿಯ ಮೂಗುತಿ’ಗೆ ಬೆನ್ನು ತಟ್ಟಿದ ಅಶ್ವಿನಿ ಪುನೀತ್ ರಾಜಕುಮಾರ್

    ವ್  ಸ್ಟೋರಿ, ಕ್ರೈಮ್, ಹಾರರ್ ಸಿನಿಮಾಗಳ ನಡುವೆ ಆಗಾಗ ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ, ವಿನೂತನ ಕಾನ್ಸೆಪ್ಟ್‌ನ ಚಿತ್ರಗಳು ಸಹ ಸದ್ದು ಮಾಡುತ್ತವೆ. ಇದೀಗ ಮತ್ತೊಂದು ಹೊಸ ಬಗೆಯ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಅದೇ ‘ಚಿಕ್ಕಿಯ ಮೂಗುತಿ’ (Chikkiya Mooguti). ದೇವಿಕಾ ಜನಿತ್ರಿ (Deviki) ನಿರ್ದೇಶನದ ಚಿಕ್ಕಿಯ ಮೂಗುತಿ ಸಿನಿಮಾ ಸದ್ಯ ಟೀಸರ್ (Teaser) ಮೂಲಕ ಅಭಿಮಾನಿಗಳ ಮುಂದೆ  ಬಂದಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ನವ ನಿರ್ದೇಶಕಿಗೆ ಸಾಥ್ ಕೊಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar). ಅಪ್ಪು ಹಾಗೂ ಅಶ್ವಿನಿಯವರ ಆತ್ಮೀಯರು ಆಗಿರೋ ದೇವಿಕಾ ನಿರ್ದೇಶದ ಮೊದಲ ಸಿನಿಮಾ ಇದಾಗಿದೆ. ಚಿಕ್ಕಿಯ ಮೂಗುತಿ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ವಿಶೇಷ ಎಂದರೆ  ದೇವಕಿ ಜನಿತ್ರಿ ಅವರೇ ಬರೆದಿದ್ದ ಕಾದಂಬರಿಯೇ ಈಗ ಚಿತ್ರವಾಗಿ ಮೂಡಿ ಬರುತ್ತಿದೆ. ಇನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

    ಅಂದಹಾಗೆ ‘ಚಿಕ್ಕಿಯ ಮೂಗುತಿ’ ಹೆಸರೇ ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣು ಮಕ್ಕಳ ಹೋರಾಟ, ಶೋಷಣೆ ಬಗ್ಗೆ ಇರುವ ಚಿತ್ರ ಇದಾಗಿದೆ. ಹಿರಿಯ ನಟಿ ತಾರಾ ಅನುರಾಧಾ, ಶ್ವೇತಾ ಶ್ವೀವಾತ್ಸವ್, ಭವಾನಿ ಪ್ರಕಾಶ್,  ಅವಿನಾಶ್, ತಬಲ ನಾಣಿ, ರಂಗಾಯಣ  ರಘು, ಭರತ್ ಬೋಪಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ವಿಶೇಷ ಎಂದರೆ ಈ ಸಿನಿಮಾಗೆ ಹೆಣ್ಣು ಮಕ್ಕಳೇ ಶಕ್ತಿ ಎಂದರೆ ತಪ್ಪಾಗಲ್ಲ. ಯಾಕೆಂದರೆ ನಿರ್ದೇಶಕಿ ಸೇರಿದಂತೆ ಬಹುತೇಕರು ಹೆಣ್ಣು ಮಕ್ಕಳೇ ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ.

    ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಾರಾ, ಪ್ರಧಾನಿ ನರೇಂದ್ರ ಮೋದಿ ಅವರು  ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆ ಈ ಸಿನಿಮಾದಲ್ಲೂ ಮಹಿಳೆಯರಿಗೂ ಮೀಸಲಾತಿ ಇದೆ. ಎಲ್ಲರೂ ಹೆಣ್ಣು ಮಕ್ಕಳೆ  ಸೇರಿಕೊಂಡು ಮಾಡಿರುವ ಸಿನಿಮಾ, ಅದ್ಭತವಾಗಿ ಸಿನಿಮಾ ಮೂಡಿಬಂದಿದೆ. ದೇವಿಕಾ ಅವರ ಮೊದಲು ಸಿನಿಮಾ ಅಂತ ಅನಿಸುವುದೇ ಇಲ್ಲ, ಉತ್ತಮವಾಗಿ ಮೂಡಿಬಂದಿದೆ’ ಎಂದು ಹೇಳಿದರು. ಇನ್ನು ನಟಿ ಶ್ವೇತಾ ಮಾತನಾಡಿ ಮಗುವಿಗೆ ಜನ್ಮ ನೀಡಿದ ಬಳಿಕ ನಟನೆ ಮಾಡಿದ ಮೊದಲ ಸಿನಿಮಾ ಎಂದು ಹೇಳಿದರು. ಭವಾನಿ ಪ್ರಕಾಶ್ ಕೂಡ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

    ನಿರ್ದೇಶಕಿ ದೇವಿಕಿ ಅವರು ಈ ಮೊದಲು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. 40ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿದ್ದಾರೆ. ಇದೀಗ ಅವರ ಒಂದು ಕಾದಂಬರಿ ಚಿಕ್ಕಿಯ ಮೂಗುತಿ ಸಿನಿಮಾವಾಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿಕ್ಕಿಯ ಮೂಗುತಿ ಈ ವರ್ಷದ  ಕೊನೆಯಲ್ಲಿ ಅಥವಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾದ ಟೀಸರ್ ಇದೇ ತಿಂಗಳು 20ಕ್ಕೆ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

    ಚಿಕ್ಕಿಯ ಮೂಗುತಿ ಚಿತ್ರ  ಜನಿತ್ರಿ ಪ್ರೋಡಕ್ಷನ್ ನಿರ್ಮಾಣವಾಗಿದೆ, ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದು ವೆಂಕಟೇಶ್ ಆರ್ ಕ್ಯಾಮೆರಾ ವರ್ಕ್ ಜೊತೆಗೆ ಎಡಿಟಿಂಗ್ ಕೂಡ ಮಾಡಿದ್ದಾರೆ. ಸದ್ಯ ಟೀಸರ್ ರಿಲೀಸ್ ಮಾಡಿರೋ ತಂಡ ಆದಷ್ಟು ಬೇಗ ಸಿನಿಮಾವನ್ನ ಪ್ರೇಕ್ಷಕರನ್ನ ಮುಂದೆ ತರಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡದಲ್ಲೂ ಫೈಲ್ಸ್ ಮೇನಿಯಾ: ‘ದಿ ಭವಾನಿ ಫೈಲ್ಸ್’ ಗೆ ದೊಡ್ಮನೆ ಸೊಸೆ ಸಾಥ್

    ಕನ್ನಡದಲ್ಲೂ ಫೈಲ್ಸ್ ಮೇನಿಯಾ: ‘ದಿ ಭವಾನಿ ಫೈಲ್ಸ್’ ಗೆ ದೊಡ್ಮನೆ ಸೊಸೆ ಸಾಥ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸಿನ ನಂತರ ಇಂಥದ್ದೇ ಮಾದರಿಯ ಚಿತ್ರಗಳು ಭಾರತೀಯ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲೂ ‘ಫೈಲ್ಸ್’ ಹೆಸರಿನಲ್ಲಿ ನಾನಾ ಭಾಷೆಗಳಲ್ಲಿ ಚಿತ್ರಗಳು ತಯಾರಾಗುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ‘ದಿ ಭವಾನಿ ಫೈಲ್ಸ್’ (The Bhavani Files) ಕನ್ನಡದಲ್ಲೂ ಫೈಲ್ಸ್ ಮಾದರಿಯ ಚಿತ್ರವೊಂದು ತಯಾರಾಗುತ್ತಿದ್ದು, ಈ ಚಿತ್ರಕ್ಕೆ ಈಗಾಗಲೇ ಚಾಲನೆ ಕೂಡ ಸಿಕ್ಕಿದೆ.

    ನೂರು ಜನ್ಮಕ್ಕೂ, ಡಿಯರ್ ಸತ್ಯ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಾಯಕ ಆರ್ಯನ್ (Aryan). ಇದೀಗ ಆರ್ಯನ್ ದಿ ಭವಾನಿ ಫೈಲ್ಸ್ ಎಂಬ ಹೊಸ ಸಿನಿಮಾ ಘೋಷಿಸಿದ್ದು, ಈ ಚಿತ್ರದಲ್ಲಿ ನಟನೆ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.  ಈ ಚಿತ್ರಕ್ಕೆ ದೊಡ್ಮನೆ ಸೊಸೆ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದ ನಟಿ- ಐಕಾನ್ ಸ್ಟಾರ್‌ಗೆ ಶ್ರೀಲೀಲಾ ನಾಯಕಿ

    ದಿ ಭವಾನಿ ಫೈಲ್ಸ್ ಸಿನಿಮಾದ ಟೈಟಲ್  (Title)ಲಾಂಚ್ ಮಾಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ಶುಭ ಹಾರೈಸಿದ್ದಾರೆ. ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಫಸ್ಟ್ ಲುಕ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 14ನೇ ಶತಮಾನದ ಕಥೆಯನ್ನು ಆರ್ಯನ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ದೇಶಿಸುತ್ತಿದ್ದಾರೆ.

     

    ಮೋಹನ್ ಮೆನನ್,  ಜೇಕಬ್ ವರ್ಗೀಸ್ ಹಾಗೂ ಆರ್ಯನ್ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಚೇತನ್ ಡಿಕ್ರೋಸ್ ಸ್ಟಂಟ್, ಜೋ ಕೋಸ್ಟ್ ಟ್ಯೂನ್ ಹಾಕಿದ್ದಾರೆ. ವೈಟ್ ಹಾರ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ದಿ ಭವಾನಿ ಫೈಲ್ಸ್ ಸಿನಿಮಾವನ್ನು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಸಾಥ್ ಕೊಡಲಿದೆ. ಕಲ್ಟ್ ಜಾನರ್ ಈ ಸಿನಿಮಾದ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.

  • ದುಬೈನಲ್ಲಿ ನಡೆಯಲಿದೆ ಡಾ. ರಾಜ್ ಕಪ್ ಸೀಸನ್-6

    ದುಬೈನಲ್ಲಿ ನಡೆಯಲಿದೆ ಡಾ. ರಾಜ್ ಕಪ್ ಸೀಸನ್-6

    ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ ಶುರುವಾಗ್ತಿದೆ. ಸಿಸಿಎಲ್ ಕ್ರಿಕೆಟ್ ಲೀಗ್ ಬೆನ್ನಲ್ಲೇ ಈಗ ಡಾ.ರಾಜ್ ಕಪ್ (Raj Cup) ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಇದೇ ಜೂನ್ 17 ರಂದು ದುಬೈನಲ್ಲಿ (Dubai) ಹರಾಜು ಪ್ರಕ್ರಿಯೆ ನಡೆಯಲಿದೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ದ, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯ ಜಾತಿ ಬಗ್ಗೆ ತಲೆಕೆಡಿಸಿಕೊಂಡ ಫ್ಯಾನ್ಸ್

    ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ (Rajesh Brahmavar) ಮಾತನಾಡಿ, ಇದೇ 17ಕ್ಕೆ ದುಬೈನಲ್ಲಿ ರಾಜ್ ಕಪ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ.  1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್ ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ. ದುಬೈನಲ್ಲಿ ನಡೆಯುವ ಆಟಗಾರರ ಹರಾಜಿನಲ್ಲಿ ಮುಖ್ಯ ಅತಿಥಿಯಾಗಿ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

    ನಟ ಅನಿರುದ್ದ (Aniruddha) ಮಾತನಾಡಿ, ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವ್ರ ಹೆಸರಲ್ಲಿ ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದು, ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗದ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು.

    ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್ ಗಳು ನಡೆಯಲಿದೆ.  ಡಾಲಿ ಧನಂಜಯ್, ಅನಿರುದ್ದ, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಪ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರ, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ.

  • ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

    ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

    ಪುನೀತ್ ರಾಜ್ ಕುಮಾರ್ (Puneet Rajkumar) ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ (Gandhada Gudi) ಡಾಕ್ಯುಮೆಂಟರಿ ಇದೀಗ ಓಟಿಟಿಯಲ್ಲೂ (OTT) ಬರಲು ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 17ರ ಅಪ್ಪು ಹುಟ್ಟು ಹಬ್ಬದ ದಿನದಂದು ಅಮೆಜಾನ್ ಪ್ರೈಂನಲ್ಲಿ ಗಂಧದ ಗುಡಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾವನ್ನು ಜಗತ್ತಿಗೆ ತೋರಿಸಬೇಕು ಎನ್ನುವ ಮಾತುಗಳನ್ನು ಈ ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ಆಡಿದ್ದರು. ಇದೀಗ ಅದನ್ನು ಸಾಧ್ಯವಾಗಿಸುತ್ತಿದ್ದಾರೆ.

    ಕಳೆದ ವರ್ಷ ಗಂಧದ ಗುಡಿ ಡಾಕ್ಯುಮೆಂಟರಿ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಪ್ಪು ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಕಣ್ತುಂಬಿಕೊಂಡಿದ್ದರು. ಅಲ್ಲಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನಗಳನ್ನೂ ಆಯೋಜನೆ ಮಾಡಲಾಗಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಈ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನಗಳನ್ನೂ ಕಂಡಿತ್ತು. ಇದನ್ನೂ ಓದಿ: ಪ್ರಭುತ್ವದ ಮೂಲಕ ಹೊಸ ಕಥೆ ಹೇಳಲಿದ್ದಾರೆ ಚೇತನ್ ಚಂದ್ರ

    ಕೋವಿಡ್ ಸಮಯದಲ್ಲಿ ಕಾಡು ಮೇಡು ಸುತ್ತುವ ಆಸೆಯನ್ನು ಹೊತ್ತುಕೊಂಡು ಅಪ್ಪು ಕಾಡಿಗೆ ನುಗ್ಗಿದ್ದರು. ಸಣ್ಣ ತಂಡದೊಂದಿಗೆ ನಾಡಿನ ವನ್ಯ ಸಂಪತ್ತನ್ನು ಪರಿಚಯಿಸಿದ್ದರು. ಕರ್ನಾಟಕದ ಕೆಲ ಪ್ರಸಿದ್ಧ ತಾಣಗಳಿಗೂ ಭೇಟಿ ಮಾಡಿ, ಅದರ ಅಂದವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಅದಕ್ಕೆ ಗಂಧದ ಗುಡಿ ಎಂದು ಹೆಸರಿಟ್ಟು ಜನರಿಗೆ ತೋರಿಸುವ ಉತ್ಸಾಹದಲ್ಲಿ ಇರುವಾಗಲೇ ನಿಧನರಾದರು. ಅವರ ಕನಸನ್ನು ಅಪ್ಪು ಪತ್ನಿ ಅಶ್ವಿನಿ ಅವರು ನೆರವೇರಿಸಿದರು.

  • ಪುನೀತ್ ರಾಜ್ ಕುಮಾರ್ ಗಂಧದ ಗುಡಿ ರಿಲೀಸ್ ಡೇಟ್ ಘೋಷಣೆ : ಅಕ್ಟೋಬರ್ 28ಕ್ಕೆ ತೆರೆಗೆ

    ಪುನೀತ್ ರಾಜ್ ಕುಮಾರ್ ಗಂಧದ ಗುಡಿ ರಿಲೀಸ್ ಡೇಟ್ ಘೋಷಣೆ : ಅಕ್ಟೋಬರ್ 28ಕ್ಕೆ ತೆರೆಗೆ

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಕೂಸಾಗಿದ್ದ ‘ಗಂಧದ ಗುಡಿ’ ಸಾಕ್ಷ್ಯಚಿತ್ರವು ಅಕ್ಟೋಬರ್ 28ರಂದು ಬಿಡುಗಡೆ ಮಾಡುವುದಾಗಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರು ಪ್ರೀತಿಯ ಕಾಣಿಕೆ ಎಂದು ಅಶ್ವಿನಿ ಬರೆದಿದ್ದಾರೆ.

    ಈ ಸಾಕ್ಷ್ಯ ಚಿತ್ರದ ಬಗ್ಗೆ ಪುನೀತ್ ರಾಜ್ ಕುಮಾರ್ ಅಪಾರ ಕನಸು ಕಟ್ಟಿಕೊಂಡಿದ್ದರು. ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಸುಮ್ಮನೆ ಮನೆಯಲ್ಲಿ ಕೂರದೇ ಪುನೀತ್ ಅವರು ಕಾಡು ಮೇಡು ಸುತ್ತಿ ಶೂಟಿಂಗ್ ಮಾಡಿರುವ ಸಿನಿಮಾವಿದು. ನಮ್ಮ ನಾಡಿನ ಕಾಡಿನ ಸಂಪತ್ತನ್ನು ಈ ಸಾಕ್ಷ್ಯ ಚಿತ್ರದಲ್ಲಿ ಪರಿಚಯಿಸುವ ಕೆಲಸ ಮಾಡಿದ್ದಾರಂತೆ ಪುನೀತ್ ರಾಜ್ ಕುಮಾರ್. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ಅಂದುಕೊಂಡಂತೆ ಆಗಿದ್ದರೆ, ಅಪ್ಪು ಬದುಕಿದ್ದಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಬೇಕಿತ್ತು. ಅದಕ್ಕೆ ಸಮಯವನ್ನೂ ನಿಗಧಿ ಮಾಡಿದ್ದರು. ಆದರೆ, ಅವರು ಅಷ್ಟರಲ್ಲಿ ನಿಧನರಾದರು. ಹಾಗಾಗಿ ಅವರ ಕನಸಿನ ಕೂಸನ್ನು ಅದ್ಧೂರಿಯಾಗಿಯೇ ರಿಲೀಸ್ ಮಾಡಬೇಕು ಎನ್ನುವುದು ಅಶ್ವಿನಿ ಅವರ ಕನಸಾಗಿತ್ತು. ಹೀಗಾಗಿ ಥಿಯೇಟರ್ ನಲ್ಲೇ ಈ ಸಾಕ್ಷ್ಯ ಚಿತ್ರ ರಿಲೀಸ್ ಆಗುತ್ತಿದೆ.


    Live Tv

    [brid partner=56869869 player=32851 video=960834 autoplay=true]