Tag: ashwini ponnappa

  • ಕಾಮನ್‍ವೆಲ್ತ್ ಗೇಮ್ಸ್ ಪದಕ ವಿಜೇತೆ ಅಶ್ವಿನಿ ಪೊನ್ನಪ್ಪಗೆ ಡಿಸಿಎಂ ಪರಮೇಶ್ವರ್ ಸನ್ಮಾನ

    ಕಾಮನ್‍ವೆಲ್ತ್ ಗೇಮ್ಸ್ ಪದಕ ವಿಜೇತೆ ಅಶ್ವಿನಿ ಪೊನ್ನಪ್ಪಗೆ ಡಿಸಿಎಂ ಪರಮೇಶ್ವರ್ ಸನ್ಮಾನ

    ಬೆಂಗಳೂರು: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಬ್ಯಾಡ್ಮಿಟನ್ ತಾರೆ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ಡಿಸಿಎಂ ಪರಮೇಶ್ವರ್ ಸನ್ಮಾನ ಮಾಡಿ ಗೌರವಿಸಿದ್ದಾರೆ.

    ವಿಧಾನಸೌಧದ ಕಚೇರಿಯಲ್ಲಿ ಅಶ್ವಿನಿ ಪೊನ್ನಪ್ಪಗೆ ಶಾಲು ಪೇಟ ತೊಡಿಸಿ ಸನ್ಮಾನಿಸಿದ್ದಾರೆ. ಅಶ್ವಿನಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದಕ್ಕೆ ಸರ್ಕಾರ 25 ಲಕ್ಷ ರೂ. ಹಾಗೂ 8 ಲಕ್ಷ ರೂ. ನೀಡಿ ಗೌರವಿಸಿದೆ. ಪರಮೇಶ್ವರ್ ಜೊತೆ ಕರ್ನಾಟಕ ಒಲಿಂಪಿಕ್ ಅಧ್ಯಕ್ಷ ಗೋವಿಂದ್ ರಾಜ್ ಕೂಡ ಭಾಗಿಯಾಗಿದ್ದರು.

    ಅಶ್ವಿನಿ ಪೊನ್ನಪ್ಪ ಕಾಮನ್‍ವೆಲ್ತ್ ಗೇಮ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಸರ್ಕಾರ ಅವರಿಗೆ ಒಟ್ಟು 33 ಲಕ್ಷ ರೂ. ಪುರಸ್ಕಾರ ನೀಡಿದೆ. ಅವರ ಸಾಧನೆ ಇನ್ನಷ್ಟು ಬೆಳೆಯಲಿ. ರಾಜ್ಯಕ್ಕೆ ತಂದಿರುವ ಗೌರವಕ್ಕೆ ಅವರಿಗೆ ಈ ಪುರಸ್ಕಾರ ನೀಡಲಾಗಿದೆ. ಮುಂದಿನ ಪಂದ್ಯಗಳಲ್ಲಿ ಚಿನ್ನದ ಪದಕ ಪಡೆಯಲಿ ಎಂದು ಪರಮೇಶ್ವರ್ ಹೇಳಿದರು.

    ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವರಿಗೆ ಗೆದ್ದವರಿಗೆ 5 ಕೋಟಿ ರೂ. ಪುರಸ್ಕಾರ ಘೋಷಣೆ ಮಾಡಲಾಗಿದೆ. ಬೆಳ್ಳಿಗೆ 3 ಕೋಟಿ ರೂ. ಹಾಗೂ ಕಂಚಿಗೆ 2 ಕೋಟಿ ರೂ. ನೀಡಲು ಸರ್ಕಾರ ನಿರ್ಧಾರ ಮಾಡಲಾಗಿದೆ. ಅಶ್ವಿನಿ ಪೊನ್ನಪ್ಪ ಒಲಂಪಿಕ್ಸ್ ನಲ್ಲಿ ಪದಕ ಪಡೆಯಲಿ ಎಂದು ಡಿಸಿಎಂ ಪರಮೇಶ್ವರ್ ಹಾರೈಸಿದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ

    ಮಡಿಕೇರಿ: ಖ್ಯಾತ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕೊಡಗಿನ ಅಶ್ವಿನಿ ಪೊನ್ನಪ್ಪ ಮಾಡೆಲ್ ಪೊನ್ನಚೇಟಿರ ಕರನ್ ಮೇದಪ್ಪ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಈ ಅದ್ಧೂರಿ ವಿವಾಹ ಸಮಾರಂಭ ಕೊಡವರ ಸಂಪ್ರದಾಯದಂತೆ ನಡೆಯುತ್ತಿದೆ. ಕೊಡವ ಉಡುಗೆ ತೊಟ್ಟು ವಿವಾಹ ಸಾಂಪ್ರದಾಯಕವಾಗಿ ನಡೆಯುತ್ತಿದೆ.

    ವಿವಾಹ ನಂತರ ಸಂಪ್ರಾದಾಯದಂತೆ ವಧು ಮತ್ತು ವರ ಇಬ್ಬರು ಗಂಗೆಪೂಜೆ ಕಾರ್ಯವನ್ನು ಮಾಡಲಿದ್ದಾರೆ. ಅಮ್ಮತ್ತಿಯ ಕೊಡವ ಸಮಾಜದ ಹಾಲ್ ನಲ್ಲಿ ಮಂಟಪವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ.

    ಇನ್ನು ಕೊಡವ ಸಂಪ್ರದಾಯದಂತೆ ಕೊಡಗಿನ ಖಾದ್ಯಗಳಾದ ಪಂದಿಕರಿ, ಕಡಂಬಟ್ಟು ಪೋರ್ಕ್ ಡ್ರೈ, ಚಿಕ್ಕನ್, ಮಟ್ಟನ್ ಸೇರಿದಂತೆ ಇನ್ನಿತರ ಬಗೆ ಬಗೆಯ ಖಾದ್ಯಗಳು ಮತ್ತು ಸಸ್ಯಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

    ವಿವಾಹ ಮಹೋತ್ಸವಕ್ಕೆ ಕುಟುಂಬಸ್ಥರು ಮತ್ತು ಆಪ್ತರನ್ನು ಆಹ್ವಾನ ಮಾಡಲಾಗಿದ್ದು ಗಣ್ಯಾತಿಗಣ್ಯರು ಆಗಮಿಸಿದ್ದಾರೆ.